ಲೇಖಕ: admin

ಮಡಿಕೇರಿ ಜು.21 :  ಕೊಡಗು ಜಿಲ್ಲೆಯಲ್ಲಿ ಮುಂದಿನ 5 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಗಳಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜು.23 ರಂದು ಮಡಿಕೇರಿ, ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲೂಕಿನ ಘಟ್ಟ ಪ್ರದೇಶಗಳಲ್ಲಿ 24 ಗಂಟೆಗಳ ಕಾಲ ಸಾಕಷ್ಟು ವ್ಯಾಪಕವಾಗಿ ಭಾರೀ ಮಳೆಯಾಗುವ ಸಾಧ್ಯತೆಯಿರುವುದಾಗಿ ತಿಳಿಸಲಾಗಿದೆ.

Read More

ಮಡಿಕೇರಿ ಜು.21 : ಶಿಕ್ಷಕರು ಹಾಗೂ ಮೂಲಭೂತ ಸೌಲಭ್ಯಗಳ ಕೊರತೆಯ ನಡುವೆ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುವ ಹಂತಕ್ಕೆ ಬಂದು ತಲುಪಿವೆ. ಬಡ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಗಳೇ ವರದಾನವಾಗಿದ್ದು, ಕನ್ನಡ ಭಾಷೆಯ ಉಳಿವಿಗೂ ಸಹಕಾರಿಯಾಗಿದೆ. ಆದರೆ ಕೊಡಗು ಮತ್ತು ಕೇರಳದ ಗಡಿ ಭಾಗದಲ್ಲಿರುವ ಕರಿಕೆ ಗ್ರಾಮದ ಸರ್ಕಾರಿ ಕನ್ನಡ ಶಾಲೆಗೆ ಶಿಕ್ಷಕರ ಕೊರತೆ ಎದುರಾಗಿರುವುದರಿಂದ ಇಲ್ಲಿನ ಬಡ ಮಕ್ಕಳು ಪಕ್ಕದ ಮಲೆಯಾಳ ಶಾಲೆಗೆ ಸೇರುವ ಅನಿವಾರ್ಯತೆ ಎದುರಾಗಿದೆ. ಕರಿಕೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸುಮಾರು 70 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇವರಲ್ಲಿ ಶೇ.75 ರಷ್ಟು ಮಂದಿ ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದವರಾಗಿದ್ದಾರೆ. ಶಾಲೆಯಲ್ಲಿ ಮುಖ್ಯೋಪಾದ್ಯಾಯರು, ಹಿಂದಿ, ಕನ್ನಡ, ಗಣಿತ, ದೈಹಿಕ ಶಿಕ್ಷಣ ಹುದ್ದೆಗಳು ಖಾಲಿ ಇವೆ. ಇದರಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿರಾಗುತ್ತಿದ್ದಾರೆ, ಅಲ್ಲದೆ ಅನಿವಾರ್ಯವಾಗಿ ಪಕ್ಕದಲ್ಲಿರುವ ಕೇರಳ ರಾಜ್ಯದ ಮಲೆಯಾಳ ಶಾಲೆಯಲ್ಲಿ ದಾಖಲಾಗುವ ಆತಂಕವೂ ಎದುರಾಗಿದೆ. ಈ ಬಗ್ಗೆ ಮಡಿಕೇರಿಯಲ್ಲಿ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿ ಗಮನ ಸೆಳೆದಿರುವ ಕರಿಕೆ…

Read More

ಮಡಿಕೇರಿ ಜು.21 :  ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NATIONAL DISASTER RESPONSE FORCE) ವತಿಯಿಂದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ವನಮಹೋತ್ಸವ  ಆಚರಿಸಲಾಯಿತು. ವಿವಿಧ ಬಗೆಯ ಹಣ್ಣುಗಳ ಗಿಡ ಮತ್ತು ಔಷದಿ ಸಸ್ಯಗಳನ್ನು ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಪ್ರಾಕೃತಿಕ ವಿಕೋಪ ತಡೆಯಲು ಮರ-ಗಿಡಗಳನ್ನು ಬೆಳಸುವ ಉದ್ದೇಶದಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು ವನಮಹೋತ್ಸವ ಯೋಜನೆಯನ್ನು ಅಭಿಯಾನದ ರೀತಿಯಲ್ಲಿ ಕೈಗೊಂಡಿದೆ. ವನಮಹೋತ್ಸವ ಅಭಿಯಾನದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಇನ್ಸ್ಪೆಕ್ಟರ್ ಶಾಂತಿಲಾಲ್, ಹೆಡ್ ಕಾನ್ಟೇಬಲ್ ಅರ್ಜನ್, ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಪ್ರೊ. ರಾಘವ ಬಿ, ಗಣವಿಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕ ರವಿಶಂಕರ್, ಹಿಂದಿ ವಿಭಾಗದ ಡಾ.ಶ್ರೀಧರ್ ಹೆಗಡೆ, ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕ  ಪೂಣಚ್ಚ ಇತರರು ಇದ್ದರು.

Read More

ಮಡಿಕೇರಿ ಜು.21 : ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಹಾಗೂ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಕಾರ್ಯಪ್ರವೃತ್ತವಾಗಬೇಕು. ಆ ಮೂಲಕ ಫಲಾನುಭವಿಗಳಿಗೆ ವಿಮಾ ಯೋಜನೆಯನ್ನು ತಲುಪಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ನಿರ್ದೇಶನ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಮತ್ತು ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಅನುಷ್ಠಾನ ಸಂಬಂಧಿಸಿದಂತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೃಷಿ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಇರುವ ಸರ್ಕಾರದ ಯೋಜನೆಗಳನ್ನು ರೈತರಿಗೆ ತಲುಪಿಸಬೇಕು. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಮತ್ತು ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಸಂಬಂಧಿಸಿದಂತೆ ಕೃಷಿಕರಿಗೆ ಹೆಚ್ಚಿನ ಮಾಹಿತಿ ನೀಡುವಂತಾಗಬೇಕು. ಅರ್ಹ ಕೃಷಿಕರೆಲ್ಲರಿಗೂ ಸರ್ಕಾರದ ಸೌಲಭ್ಯ ತಲುಪುವಂತಾಗಬೇಕು ಎಂದು ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬಾನಾ ಎಂ.ಶೇಕ್ ಅವರು…

Read More

ಮಡಿಕೇರಿ ಜು.21   : ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ನಿರ್ದೇಶನಾಲಯದಲ್ಲಿ ‘ಕಲ್ಯಾಣ ಸಂಘಟಕರು ‘ಸಿ’ ವೃಂದದ ಒಟ್ಟು 14 ಹುದ್ದೆಗಳಿಗೆ ಅರ್ಹ ಮಾಜಿ ಸೈನಿಕರಿಂದ (ಜೆಸಿಒ ಹಾಗೂ ತತ್ಸಮಾನ ರ‍್ಯಾಂಕ್) ಅರ್ಜಿ ಆಹ್ವಾನಿಸಲಾಗಿದೆ. ಸರ್ಕಾರಿ ಮುದ್ರಣಾಲಯಗಳಲ್ಲಿ ಲಭ್ಯವಿರುವ ಸರ್ಕಾರದಿಂದ ನಿಗಧಿಪಡಿಸಿದ ಅರ್ಜಿ ನಮೂನೆ 1 ನ್ನು ಭರ್ತಿ ಮಾಡಿ, ದ್ವಿಪ್ರತಿಯಲ್ಲಿ ಆ.5 ರೊಳಗೆ ಅಧ್ಯಕ್ಷರು, ಇಲಾಖಾ ನೇಮಕಾತಿ ಸಮಿತಿ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ನಂ.58, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಭವನ, ಬೆಂಗಳೂರು-560025 ಇವರಿಗೆ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರಾದ ಬಾಲಸುಬ್ರಮಣ್ಯಂ ತಿಳಿಸಿದ್ದಾರೆ.

Read More

ಮಡಿಕೇರಿ ಜು.21 : ಮಡಿಕೇರಿ ತಾಲೂಕಿನಲ್ಲಿರುವ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ನೋಂದಣಿ ಮಾಡುವುದು ಕಡ್ಡಾಯವಾಗಿದೆ ಎಂದು ತಾಲ್ಲೂಕು ಕಾರ್ಮಿಕ ಅಧಿಕಾರಿ ಎಂ.ಎಂ.ಯತ್ನಟ್ಟಿ ಅವರು ತಿಳಿಸಿದ್ದಾರೆ. ಈಗಾಗಲೇ ತಮ್ಮ ಅಂಗಡಿ ಅಥವಾ ವಾಣಿಜ್ಯ ಸಂಸ್ಥೆಯನ್ನು ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿ ಮಡಿಕೇರಿಯಲ್ಲಿ ನೋಂದಣಿ ಮಾಡಿಸಿಕೊಂಡ ಸಂಸ್ಥೆಗಳನ್ನು ಹೊರತುಪಡಿಸಿ ನೋಂದಣಿಯಾಗದಿರುವ ಸಂಸ್ಥೆಗಳು 15 ದಿನಗಳೊಳಗೆ ಕರ್ನಾಟಕ ಸರ್ಕಾರದ ಇ-ಕಾರ್ಮಿಕ ತಂತ್ರಾಂಶದಲ್ಲಿ http://www.ekarmika.Karnataka.gov.in/ekarmika/static/home.aspx  ನಿಗಧಿತ ಆನ್‍ಲೈನ್ ಮೂಲಕ ಶುಲ್ಕ ಮತ್ತು ಅವಶ್ಯಕ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿ ಸಂಸ್ಥೆಗಳ ನೋಂದಣಿ ಪತ್ರ ಪಡೆಯುವಂತೆ ಮಾಡಿಸಿಕೊಳ್ಳಬೇಕೆಂದು ಮಡಿಕೇರಿ ತಾಲೂಕಿನ ಉದ್ದಿಮೆದಾರರಿಗೆ ತಿಳುವಳಿಕೆ ನೀಡಲಾಗಿದೆ ಎಂದು ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಂ.ಎಂ.ಯತ್ನಟ್ಟಿ ತಿಳಿಸಿದ್ದಾರೆ.

Read More

ಮಡಿಕೇರಿ ಜು.21 : ನೌಕರರ ಹಿತಕಾಯುತ್ತಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ, ಜಿಲ್ಲಾ, ತಾಲೂಕು ಘಟಕಗಳ ವಿರುದ್ಧ ಆಧಾರ ರಹಿತವಾಗಿ ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕೊಡಗು ಜಿಲ್ಲಾ ಘಟಕ ಒತ್ತಾಯಿಸಿದೆ. ಸಂಘದ ಜಿಲ್ಲಾಧ್ಯಕ್ಷ  ಪೊನ್ನಚನ ಶ್ರೀನಿವಾಸ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ವೆಂಕಟ್‍ರಾಜಾ ಅವರಿಗೆ ಮನವಿ ಸಲ್ಲಿಸಿದ ಸಂಘಟನೆಯ ಪ್ರಮುಖರು, ಸಂಘಟನೆಯ ವಿರುದ್ಧ ಸುಳ್ಳು ಆರೋಪ ಮಾಡಿರುವ ಅಧಿಕಾರಿಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು 1920ರಲ್ಲಿ ಸ್ಥಾಪನೆಯಾಗಿದ್ದು, ಸರ್ಕಾರಿ ಮಾನ್ಯತೆಯನ್ನು ಹೊಂದಿ ಸುಮಾರು 5.25 ಲಕ್ಷ ಸರ್ಕಾರಿ ನೌಕರರನ್ನು ಪ್ರತಿನಿಧಿಸುವ ರಾಷ್ಟ್ರದಲ್ಲಿಯೇ ಮಾದರಿ ಸಂಘಟನೆಯಾಗಿದೆ. ಸಂಘವು ರಾಜ್ಯಾದ್ಯಂತ ಎಲ್ಲಾ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಶಾಖೆಗಳನ್ನು ಹೊಂದಿದ್ದು, ರಾಜ್ಯಾದ್ಯಂತ 2000ಕ್ಕೂ ಹೆಚ್ಚಿನ ವಿವಿಧ ವೃಂದ ಸಂಘಗಳ ಸಂಯೋಜನೆಯನ್ನು ಹೊಂದಿದೆ. ಹಿಂದಿನ ಹಲವಾರು ಅಧ್ಯಕ್ಷರುಗಳ ಶ್ರಮದಿಂದ ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ…

Read More

ಮಡಿಕೇರಿ ಜು.21 :  ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ವತಿಯಿಂದ  ಜಿಲ್ಲೆಯ ದೇವರಕಾಡು ಪ್ರದೇಶದಲ್ಲಿ ಸ್ಥಳೀಯ ಸಸಿಗಳನ್ನು ನೆಡುವ ಅಭಿಯಾನವನ್ನು ಆಯೋಜಿಸುತ್ತಿದೆ. ಕೊಡಗಿನ ದೇವರಕಾಡುಗಳಲ್ಲಿ ಅಪರೂಪದ ಹಾಗೂ ಅಳಿವಿನಂಚಿನಲ್ಲಿರುವ ಕರಿಮರ, ಕರಡಿ ಮರ, ಬಿಳಿ ದೂಪ, ಕರಿ ದೂಪ, ಕಚಂಪುಳ್ಳಿ, ಅಂಟುವಾಳ, ನೇರಳೆ, ಹೊನ್ನೆ, ಬಳಂಜಿ, ಮುಂತಾದ ಸಸಿಗಳನ್ನು ನೆಡಲಾಗುವುದು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿಯುಳ್ಳ ದೇವರಕಾಡು/ದೇವಸ್ಥಾನ ಸಮಿತಿಗಳು ತಮ್ಮ ದೇವರಕಾಡುಗಳಲ್ಲಿ ಯೋಜನೆಯನ್ನು  ಕಾರ್ಯಗತಗೊಳಿಸಲು ನಾಣಯ್ಯ ಕೋಣೇರಿರ, (8105919596) ಸಹಾಯಕ ಪ್ರಾಧ್ಯಾಪಕರು, ಅರಣ್ಯ ಮಹಾವಿದ್ಯಾಲಯ, (Forestry College) ಪೊನ್ನಂಪೇಟೆ ಅವರನ್ನು ಸಂಪರ್ಕಿಸಬಹುದು. ಈ ಯೋಜನೆಯನ್ನು ಕುಶಾಲನಗರದ ಸಕ್ಡೆನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (SUCDEN India Pvt. LTD)ಪ್ರಾಯೋಜಿಸುತ್ತಿದೆ.

Read More

ಹಾಗಲಕಾಯಿ ಬರಿ ಆಹಾರವಾಗಿ ಮಾತ್ರವಲ್ಲ ಕೂದಲ ಕಾಂತಿ ಹಾಗೂ ಆರೋಗ್ಯಕರ ಕೇಶಕ್ಕಾಗಿ ಕೂಡ ಬಳಸಬಹುದು. ಇದಕ್ಕೆ ಹಾಗಲಕಾಯಿ ಜ್ಯೂಸ್ ಉತ್ತಮ ಪರಿಣಾಮ ಬೀರಬಲ್ಲದು. ಹಾಗಲಕಾಯಿಯನ್ನು ಜಜ್ಜಿ ಅದರಿಂದ ದಪ್ಪ ರಸವನ್ನು ತೆಗೆದು ಬಾಲ ನೆರೆ ಉಂಟಾಗಿದ್ದರೆ ಅದಕ್ಕೆ ಈ ರಸವನ್ನು ಲೇಪಿಸಿ. ಒಂದೆರಡು ತಾಸು ಕಳೆದ ಬಳಿಕ ಸ್ನಾನ ಮಾಡಿ. ಪ್ರತಿ ಹತ್ತು ದಿನಕ್ಕೊಮ್ಮೆ ಈ ರೀತಿ ಮಾಡುತ್ತಿದ್ದರೆ ಬಾಲ ನೆರೆಯ ಸಮಸ್ಯೆ ಕಡಿಮೆಯಾಗುತ್ತದೆ. ಸೀಳು ಕೂದಲಿನ ಸಮಸ್ಯೆಯಿದ್ದವರು ಹಾಗಲಕಾಯಿಯನ್ನು ಕತ್ತರಿಸಿ ನೆತ್ತಿಯ ಮೇಲೆ ಚೆನ್ನಾಗಿ ಉಜ್ಜಬೇಕು. ಜತೆಗೆ ಇದರ ರಸವನ್ನು ಕೂದಲಿಗೆ ಹಚ್ಚಬೇಕು. ಗಮನಾರ್ಹವಾದ ಫಲಿತಾಂಶಕ್ಕಾಗಿ ಈ ರೀತಿ ವಾರಕ್ಕೆರಡು ಬಾರಿ ಮಾಡಿದರೆ ಸೀಳು ಕೂದಲಿನಿಂದ ಮುಕ್ತಿ ಪಡೆಯಬಹುದು. ಸಾಮಾನ್ಯವಾಗಿ ಕೂದಲು ಹೊಳಪು ಕಳೆದುಕೊಳ್ಳುವುದು ಸಹಜ. ಇದಕ್ಕೂ ಹಾಗಲಕಾಯಿಂದ ಪರಿಹಾರ ಇದೆ. ಹಾಗಲಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವವರೆಗೆ ಕರೆಯಿರಿ. ಅದು ತಣ್ಣಗಾದ ಬಳಿಕ ಹಾಗಲಕಾಯಿಯನ್ನು ತೆಗದು ಚೆನ್ನಾಗಿ ಹಿಂಡಿ. ಆ ಎಣ್ಣೆಯನ್ನು ಕೂದಲಿಗೆ…

Read More

ಮಡಿಕೇರಿ ಜು.20 :  ಭಾರೀ ಗಾಳಿ ಮಳೆಯಿಂದಾಗಿ ಕೆದಕಲ್ ಗ್ರಾಮದ ವಿಕ್ರಂ ಬಡಾವಣೆಯ ವಸಂತಿ ಎಂಬವರ ಮನೆಮೇಲೆ ಬೃಹತ್ ಗಾತ್ರದ ಮರ ಬಿದ್ದು, ಸಂಪೂರ್ಣ ಹಾನಿಯಾಗಿದೆ.

Read More