ಮಡಿಕೇರಿ ಜು.14 : ಲೇಖಕಿ ಕೆ.ಜಯಲಕ್ಷ್ಮಿ ಬರೆದಿರುವ “ಚಪ್ಪಾಳೆಗೂ ಬೆಲೆ ಇದೆ” ಎಂಬ ನೂತನ ಪುಸ್ತಕದ ಲೋಕಾಪ೯ಣೆಯು ಜೂ.18 ರಂದು ನಡೆಯಲಿದೆ. ಮಡಿಕೇರಿಯ ಲಯನ್ಸ್ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ “ಚಪ್ಪಾಳೆಗೂ ಬೆಲೆ ಇದೆ” ಕೃತಿಯನ್ನು ಶಕ್ತಿಪತ್ರಿಕೆಯ ಸಂಪಾದಕ ಜಿ.ಚಿದ್ವಿಲಾಸ್ ಲೋಕಾಪ೯ಣೆಗೊಳಿಸಲಿದ್ದಾರೆ. ಕೊಡಗು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ.ಕೇಶವಕಾಮತ್, ಚಿತ್ರದುಗ೯ದ ಸಿರಿಗನ್ನಡ ಬಳಗದ ಸಂಚಾಲಕ ಚಳ್ಳಕೆರೆ ಯರ್ರಿ ಸ್ವಾಮಿ, ಹಿರಿಯ ಸಾಹಿತಿ ಮೊಣ್ಣಂಡ ಶೋಭಾಸುಬ್ಬಯ್ಯ, ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ., ಲಯನ್ಸ್ ಟ್ರಸ್ಟ್ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ ಕಾಯ೯ಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜಯಲಕ್ಷ್ಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲೇಖಕ: admin
ವಿರಾಜಪೇಟೆ ಜೂ.14 : ವಿರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಶಾಲೆಯ ವತಿಯಿಂದ ಸಾಂಸ್ಕೃತಿಕ ಸಮಾರಂಭ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕರುನಾಡ ನಿಧಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಜೂ.17 ರಂದು ನಡೆಯಲಿದೆ ಎಂದು ನಾಟ್ಯ ಮಯೂರಿ ನೃತ್ಯ ಶಾಲೆಯ ಸಂಸ್ಥಾಪಕಿ ಪ್ರೇಮಾಂಜಲಿ ಆಚಾರ್ಯ ತಿಳಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಂದು ಮದ್ಯಾಹ್ನ 2.30 ಗಂಟೆಗೆ ನಗರದ ಕಾವೇರಿ ಕಲ್ಯಾಣ ಮಂಟಪದಲ್ಲಿ ನಡೆಯುವ ಕಾರ್ಯಕ್ರಮವನ್ನು ಖ್ಯಾತ ಗಾಯಕ, ಚಲನಚಿತ್ರ ನಟ ಶಶಿಧರ್ ಕೋಟೆ ಉದ್ಘಾಟಿಸಲಿದ್ದಾರೆ. ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ, ರಂಗಭೂಮಿ ಕಲಾವಿದರು, ಕಾಂತಾರ ಚಲನಚಿತ್ರ ನಟರಾದ ಬಾಸುಮ ಕೊಡಗು ಹಾಗೂ ಸತೀಶ್ ಆಚಾರಿ ಭಾಗವಹಿಸಲಿದ್ದಾರೆ. ರಂಗಭೂಮಿ ಕಲಾವಿದ, ಪತ್ರಕರ್ತ, ನಟ ಕೆಂಚನೂರು ಶಂಕರ್ ಸಭೆಯ ಅಧ್ಯಕ್ಷತೆ, ಧರ್ಮದರ್ಶಿಗಳಾದ ಡಾ. ಅಶೋಕ್ ಶೆಟ್ಟಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಇದೇ ಸಂದರ್ಭ ಗಾಯಕ ಶಶಿಧರ್ ಕೋಟೆ ಸೇರಿದಂತೆ ಬಾಸುಮ ಕೊಡಗು, ಸತೀಶ್ ಆಚಾರಿ, ಡಾ. ಅಶೋಕ್ ಶೆಟ್ಟಿ, ಮಹೋನಿ ಶೋಭಾ, ಡಾ. ಜ್ಯೋತಿ…
ನಾಪೋಕ್ಲು ಜೂ.14 : ಮಂಗಳೂರು ವಿಶ್ವವಿದ್ಯಾನಿಲಯದ ವತಿಯಿಂದ ಪೊನ್ನಂಪೇಟೆಯಲ್ಲಿ ನಡೆದ ಅಂತರ ಕಾಲೇಜು ಪುರುಷರ ಹಾಕಿ ಪಂದ್ಯಾವಳಿಯಲ್ಲಿ ಮೂರ್ನಾಡು ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಕ ಕಂಬೀರಂಡ ಬೋಪಣ್ಣ ತರಬೇತಿಯಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದರು. ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿ ವಿ.ಟಿ.ಸೋಮಣ್ಣ ಪಂದ್ಯಾವಳಿಯ ಅತ್ಯುನ್ನತ ಗೋಲ್ ಕೀಪರ್ ಪ್ರಶಸ್ತಿಯನ್ನು ಪಡೆದುಕೊಂಡರು. ವರದಿ : ದುಗ್ಗಳ ಸದಾನಂದ
ಸೋಮವಾರಪೇಟೆ ಜೂ.14 : ತುಮಕೂರು ಟಿಆರ್‍ಎಸ್ ಅಬಾಕಸ್ ಅಕಾಡೆಮಿ ವತಿಯಿಂದ ಅಂತರಾಷ್ಟ್ರೀಯ ಮಟ್ಟದ ಆನ್ ಲೈನ್ ಅಬಾಕಸ್ ಸ್ಪರ್ಧೆಯಲ್ಲಿ ಸಾಂದೀಪನಿ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಸ್ಪರ್ಧೆಯಲ್ಲಿ 35 ವಿದ್ಯಾರ್ಥಿಗಳು ಭಾಗವಹಿಸಿದ್ದು, ಪ್ರಣಮ್ಯಾ, ಅದ್ವಿತ್ ಪೂಜಾರಿ, ಪ್ರಧಾನ್ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಿತೈಷಿ ಟೋಪರ್ ಹಾಗೂ ಎನ್. ಖುಷಿ, ಬಿ.ಎಸ್. ಹಿತೇಶ್ ವಿನ್ನರ್ ಹಾಗೂ ರಚನಾ, ವೇದಾಂತ್, ಡಿಂಪಲ್ ರನ್ನರ್ ಸ್ಥಾನ ಪಡೆದುಕೊಂಡಿದ್ದು, ಉಳಿದವರು ಸಮಾಧಾನಕರ ಬಹುಮಾನ ಪಡೆಯಲು ಯಶಸ್ವಿಯಾದರು. ಸಾಂದೀಪನಿ ಶಾಲೆಯ ಮುಖ್ಯೋಪಾಧ್ಯಾಯ ರಜಿತ್ ಹಾಗೂ ಅಬಾಕಸ್ ಶಿಕ್ಷಕಿ ಸುಕನ್ಯಾ ಹಾಜರಿದ್ದರು.
ಸೋಮವಾರಪೇಟೆ ಜೂ.14 : ಸೋಮವಾರಪೇಟೆ ವಕೀಲರ ಸಂಘಕ್ಕೆ ಜಿಲ್ಲಾ ನ್ಯಾಯಾಧೀಶ ಡಿ.ಟಿ.ಪುಟ್ಟರಂಗ ಸ್ವಾಮಿ ಭೇಟಿ ನೀಡಿದರು. ಈ ಸಂದರ್ಭ ಸೋಮವಾರಪೇಟೆ ನ್ಯಾಯಾಲಯ ಹಾಗೂ ಸಂಘದ ಕಚೇರಿಗೆ ಬೇಕಾದ ಮೂಲಭೂತ ಅವಶ್ಯಕತೆಗಳ ಕುರಿತು ಸಂಘದ ಪದಾಧಿಕಾರಿಗಳು ಗಮನ ಸೆಳೆಸದರು. ಈ ಸಂದರ್ಭ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಬಿ.ಪ್ರಸಾದ್, ವಕೀಲರ ಸಂಘದ ಅಧ್ಯಕ್ಷ ಕಾಟ್ನಮನೆ ವಿಠಲ್ ಗೌಡ ಮತ್ತಿತರರು ಇದ್ದರು.
ಸೋಮವಾರಪೇಟೆ ಜೂ.14 : ಕಳೆದ 9 ವರ್ಷಗಳ ಹಿಂದೆ ಭೂಮಿಪೂಜೆ ನೆರವೇರಿ ಇಂದಿಗೂ ಮುಕ್ತಾಯಗೊಳ್ಳದ ಸೋಮವಾರಪೇಟೆ ಟರ್ಫ್ ಹಾಕಿ ಮೈದಾನವನ್ನು ಶಾಸಕ ಮಂತರ್ ಗೌಡ ಅವರು ಪರಿಶೀಲಿಸಿ, ತಕ್ಷಣ ಬಾಕಿ ಇರುವ ಕಾಮಗಾರಿಯನ್ನು ಪೂರ್ಣಗೊಳಿಸಿ ಕ್ರೀಡಾಪಟುಗಳ ಉಪಯೋಗಕ್ಕೆ ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗೆ ನಿರ್ದೇಶನ ನೀಡಿದರು. ಟರ್ಫ್ ಕಾಮಗಾರಿಯನ್ನು ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಕೇಂದ್ರ ಕಚೇರಿಯೇ ನಿರ್ವಹಿಸುತ್ತಿದ್ದು, ಗುತ್ತಿಗೆ ಪಡೆದ ಕಂಪೆನಿಯವರು ಈವರೆಗೆ ಮೈದಾನವನ್ನು ಇಲಾಖೆಗೆ ಹಸ್ತಾಂತರಿಸಿಲ್ಲ. ಇದರೊಂದಿಗೆ ಕಾಮಗಾರಿಯನ್ನೂ ಪೂರ್ಣಗೊಳಿಸಿಲ್ಲ ಎಂದು ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕಿ ವಿಸ್ಮಯ ಅವರು ಶಾಸಕರ ಗಮನಕ್ಕೆ ತಂದರು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೈದಾನದ ಪ್ರಗತಿ ಕುಂಠಿತವಾಗಿದೆ. ಟೆಂಡರ್ ಪಡೆದ ಗುತ್ತಿಗೆದಾರ ಕಂಪೆನಿಯವರು ಬಿಲ್ ಮಾಡಿಕೊಂಡಿದ್ದು, ಕಾಮಗಾರಿಯನ್ನು ಮುಕ್ತಾಯಗೊಳಿಸಿಲ್ಲ. ಈ ಬಗ್ಗೆ ಲೋಕಾಯುಕ್ತಕ್ಕೂ ದೂರು ನೀಡಲಾಗಿದೆ ಎಂದು ಮೈದಾನ ಮೇಲುಸ್ತುವಾರಿ ಸಮಿತಿಯ ಪದಾಧಿಕಾರಿಗಳು ಶಾಸಕರಿಗೆ ಮಾಹಿತಿ ನೀಡಿದರು. ಈ ಸಂದರ್ಭ ಮಾತನಾಡಿದ ಡಾ. ಮಂತರ್ ಗೌಡ, ಕೂಡಲೇ ಮೈದಾನಕ್ಕೆ ಅಗತ್ಯವಿರುವ ವಿದ್ಯುತ್ ಹಾಗೂ…
ಸುಂಟಿಕೊಪ್ಪ,ಜೂ.14 : ಮಾದಾಪುರ ರಾಜ್ಯ ಹೆದ್ದಾರಿಯ ಪೆಟ್ರೋಲ್ ಬಂಕ್ ಬಳಿ ಖಾಸಗಿ ಬಸ್ಸು ಹಾಗೂ ಟ್ರ್ಯಾಕ್ಟರ್ ಮುಖಾಮುಖಿ ಡಿಕ್ಕಿಯಾಗಿದ್ದು, ಟ್ರ್ಯಾಕ್ಟರ್ ಚಾಲಕ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾನೆ. ಮಾದಾಪುರದಿಂದ ಶನಿವಾರಸಂತೆಗೆ ತೆರಳುತ್ತಿದ್ದ ವೆಂಕಟೇಶ್ವರ ಬಸ್ಸಿಗೆ ಸುಂಟಿಕೊಪ್ಪದಿಂದ ಮಾದಾಪುರ ಕಡೆ ತೆರಳುತ್ತಿದ್ದ ಟ್ರ್ಯಾಕ್ಟರ್ ಡಿಕ್ಕಿಯಾಗಿದ್ದು, ಬಸ್ಸಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಅರ್ಧ ಗಂಟೆಗಳ ಕಾಲ ಮಡಿಕೇರಿ ಸೋಮವಾರಪೇಟೆ ಭಾಗದಲ್ಲಿ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು.
ಮಡಿಕೇರಿ ಜೂ.14 : ಮಫ್ರೀಡಂ ಬಾಯ್ಸ್ ಹುಂಡಿ ಎಸ್. ಬಿ. ಸಿ ಸಿದ್ದಾಪುರದಲ್ಲಿ ಆಯೋಜಿಸಲಾದ ಪ್ರಥಮ ವರ್ಷದ ಕೊಡಗು ಮುಸ್ಲಿಂ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕುಶಾಲನಗರ ತಂಡ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. 36 ತಂಡಗಳು ಭಾಗವಹಿಸಿದ ಪಂದ್ಯಾವಳಿಯಲ್ಲಿ ಕುಶಾಲನಗರದ ರಫೀಕ್ – ಅಬು, ವಿರಾಜಪೇಟೆಯ ನವಾಫ್ – ಇರ್ಷಾದ್, ಹುಂಡಿಯ ರಿಯಾಸ್ – ಮುಸ್ತಫಾ, ಗೋಣಿಕೊಪ್ಪ ಸಜೀರ್ – ಸಿಬಿಲ್ ಜೋಡಿಗಳು ಸೆಮಿಫೈನಲ್ ಪ್ರವೇಶಿಸಿತ್ತು. ಕುಶಾಲನಗರ ಹಾಗೂ ವಿರಾಜಪೇಟೆ ನಡುವಿನ ಪ್ರಥಮ ಸೆಮಿಫೈನಲ್ ಪಂದ್ಯಾಟದಲ್ಲಿ ವಿರಾಜಪೇಟೆ ತಂಡವನ್ನು ಮಣಿಸಿ ಕುಶಾಲನಗರ ತಂಡ ಫೈನಲ್ ಪ್ರವೇಶಿಸಿತು. ಹುಂಡಿ ಹಾಗೂ ಗೋಣಿಕೊಪ್ಪ ತಂಡಗಳ ನಡುವಿನ ದ್ವಿತೀಯ ಸೆಮಿಫೈನಲ್ ಪಂದ್ಯಾವಳಿಯಲ್ಲಿ ಗೋಣಿಕೊಪ್ಪ ತಂಡವನ್ನು ಮಣಿಸಿ ಹುಂಡಿ ಜೋಡಿಗಳು ಫೈನಲ್ ಪ್ರವೇಶಿಸಿದರು. ರೋಚಕ ಫೈನಲ್ ಪಂದ್ಯಾವಳಿಯಲ್ಲಿ ಹುಂಡಿ ಹಾಗೂ ಕುಶಾಲನಗರ ಮೊದಲ ಸುತ್ತು ಸಹೋದರ ಜೋಡಿಗಳಾದ ರಿಯಾಸ್ ಹಾಗೂ ಮುಸ್ತಫಾ ರವರ ಹುಂಡಿ ತಂಡ ತಮ್ಮದಾಗಿಸಿಕೊಂಡಾಗ, ಎರಡನೇ ಹಾಗೂ ಮೂರನೇ ಸುತ್ತು ರಫೀಕ್ – ಅಬು ಜೋಡಿಗಳಾದ ಕುಶಾಲನಗರ…
ಮಡಿಕೇರಿ ಜೂ.13 : ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಸ್ನಾತಕೋತ್ತರ ಕೇಂದ್ರ, ಕೊಡಗು ವಿಶ್ವವಿದ್ಯಾನಿಲಯ ಚಿಕ್ಕಅಳುವಾರ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ರಕ್ತ ನಿಧಿ ಕೇಂದ್ರ, ಜಿಲ್ಲಾ ಆಸ್ಪತ್ರೆ, ಮಡಿಕೇರಿ, ಸೋಮವಾರಪೇಟೆ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಕೊಡಗು ಶಾಖೆ, ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಕೊಡಗು ಶಾಖೆ, ಕುಶಾಲನಗರ ರೋಟರಿ ಸಂಸ್ಥೆ, ಲಯನ್ಸ್ ಸಂಸ್ಥೆ ಹಾಗೂ ವಾಣಿಜ್ಯೋದ್ಯಮಿಗಳ ನಿಗಮದ ಸಂಯುಕ್ತ ಆಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆಯು ಜೂ.14 ರಂದು ಬೆಳಗ್ಗೆ 11 ಗಂಟೆಗೆ ಚಿಕ್ಕ ಅಳುವಾರದ ಕೊಡಗು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರದಲ್ಲಿ ನಡೆಯಲಿದೆ. ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು, ಶಾಸಕ ಡಾ.ಮಂಥರ್ ಗೌಡ, ಮುಖ್ಯಮಂತ್ರಿ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ, ಸಂಸದರಾದ ಪ್ರತಾಪ್ ಸಿಂಹ,…
ಮಡಿಕೇರಿ ಜೂ.13 : ಕೇಂದ್ರೀಯ ವಿದ್ಯಾಲಯದಲ್ಲಿ “ಸಂಯೋಜಿತ ಕಲಿಕೆಯ ಸಂದರ್ಭದಲ್ಲಿ ಫೌಂಡೇಶನ್ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರವನ್ನು ಖಚಿತಪಡಿಸಿಕೊಳ್ಳುವುದು” ಎಂಬ ವಿಷಯದ ಕುರಿತು ಕೊಡಗು ಜಿಲ್ಲೆಯ ಎಲ್ಲಾ ಶಾಲಾ ಶಿಕ್ಷಕರಿಗೆ, ಶಾಲಾ ಮಕ್ಕಳಿಗೆ ಹಾಗೂ ಪೋಷಕರಿಗೆ ವರ್ಚುವಲ್ ನಲ್ಲಿ ಒಂದು ದಿನದ ಕಾರ್ಯಾಗಾರ ನಡೆಯಿತು. ಮುಖ್ಯ ಶಿಕ್ಷಕಿ ನಿರ್ಮಲ ಪತಾರೆ “ಸಂಯೋಜಿತ ಕಲಿಕೆಯ ಸಂದರ್ಭದಲ್ಲಿ ಫೌಂಡೇಶನ್ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರವನ್ನು ಖಚಿತಪಡಿಸಿಕೊಳ್ಳುವುದು” ಎಂಬ ವಿಷಯದ ಕುರಿತು ಪ್ರಸ್ತುತಪಡಿಸಿದರು. ಇದರ ಪ್ರಯುಕ್ತ ಶಾಲಾಮಕ್ಕಳಿಗೆ ಆಯೋಜಿಸಿದ ವಿವಿಧ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು. ಪ್ರತ್ಯೇಕವಾಗಿ ಕಥೆ ಹೇಳುವುದು, ಪದ್ಯ ವಾಚನ, ಪೋಸ್ಟರ್ ತಯಾರಿಕೆ ಮತ್ತಿತರ ಬಗ್ಗೆ ಚರ್ಚೆ ನಡೆಯಿತು. ಮುಂದಿನ ದಿನಗಳಲ್ಲಿ ಡಿಜಿಟಲ್ ಎಜುಕೇಶನ್, ಸ್ಟೋರಿ ಮೇಕಿಂಗ್, ಪೋಸ್ಟರ್ ಮೇಕಿಂಗ್, ಜಾಗೃತಿ ಸೆಷನ್, ಎನ್‍ಇಪಿ ಹಾಗೂ ಜಿ-20 ಯ ಕುರಿತು ಭಾಷಣ ಉತ್ತೇಜಿಸುವ ಬಗ್ಗೆ ಚರ್ಚಿಸಲಾಯಿತು. ಈಗಾಗಲೇ ಕೇಂದ್ರೀಯ ವಿದ್ಯಾಲಯ ಶಾಲೆಯಲ್ಲಿ ಪ್ರಾಥಮಿಕ ಹಂತದಲ್ಲಿ ಎನ್‍ಇಪಿ ಯನ್ನು ಅಳವಡಿಸಿರುವ ಬಗ್ಗೆಯೂ ಹಾಗೂ ಮಕ್ಕಳಲ್ಲಿ ಯಾವ ರೀತಿಯ ಸಕಾರಾತ್ಮಕ…






