ಮಡಿಕೇರಿ ಮೇ 3 : ನಗರದ ಮಲ್ಲಿಕಾರ್ಜುನ ಬಡಾವಣೆಯ ನವೀಕೃತಗೊಂಡಿರುವ ಶ್ರೀ ಕೋದಂಡ ರಾಮ ದೇವಾಲಯದ ಪುನರ್ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಆರಂಭಗೊಂಡಿದ್ದು, ಇಂದು ನಗರದಲ್ಲಿ ವೈಭವದ ಧಾರ್ಮಿಕ ಮೆರವಣಿಗೆ ನಡೆಯಿತು. ವೇದಬ್ರಹ್ಮ ಶ್ರೀಕೃಷ್ಣ ಉಪಾಧ್ಯ ಹಾಗೂ ವಿದ್ವಾನ್ ಕೆ.ಶ್ರೀನಿವಾಸ ಉಪಾಧ್ಯ ಅವರ ನೇತೃತ್ವದಲ್ಲಿ ಮೂರು ದಿನಗಳ ಕಾಲ ವಿವಿಧ ಪೂಜಾ ವಿಧಿವಿಧಾನಗಳು ಜರುಗುತ್ತಿದ್ದು, ಮೇ2 ರ ಸಂಜೆಯಿAದಲೇ ವಿವಿಧ ಧಾರ್ಮಿಕ ಕಾರ್ಯಕ್ರಮ ಪ್ರಾರಂಭಗೊಂಡವು. ಇಂದು ಬೆಳಿಗ್ಗೆ 9 ಗಂಟೆಗೆ ಪ್ರಧಾನ ಕಲಶ ಸಹಿತ ಉತ್ಸವ ಮೂರ್ತಿ ಹೊತ್ತ ಮಂಟಪದೊಂದಿಗೆ ಧಾರ್ಮಿಕ ಮೆರವಣಿಗೆ ನಗರದ ಮುಖ್ಯ ರಸ್ತೆಯಲ್ಲಿ ನಡೆಯಿತು. ದೇವಾಲಯದ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಜಿ.ರಾಜೇಂದ್ರ ಹಾಗೂ ಶ್ರೀ ಕೋದಂಡ ರಾಮ ದೇವಾಲಯ ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ಹೆಚ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಂಪತ್ ಕುಮಾರ್ ಎಸ್.ಎಸ್., ಪ್ರಧಾನ ಕಾರ್ಯದರ್ಶಿ ಗೋಪಿನಾಥ್ ಸುಬ್ಬರಾವ್, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸುಧಾಕರ್ ಹೆಚ್.ವಿ., ಖಜಾಂಚಿ ತಿಮ್ಮಯ್ಯ ಹೆಚ್.ಎನ್., ಜೀರ್ಣೋದ್ಧಾರ ಸಮಿತಿ…
ಲೇಖಕ: admin
ಮಡಿಕೇರಿ ಮೇ 3 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ವಿಧಾನ ಪರಿಷತ್ ನ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಅವರನ್ನು ಭೇಟಿಯಾದರು. ಹಿರಿಯರಾದ ಬೊಟ್ಟೋಳಂಡ ಮಿಟ್ಟು ಚೆಂಗಪ್ಪ ಅವರ ನಿವಾಸದಲ್ಲಿ ಭೇಟಿಯಾದ ನಾಚಪ್ಪ ಹಾಗೂ ಹರಿಪ್ರಸಾದ್ ಕೊಡವಲ್ಯಾಂಡ್ ಜಿಯೋ-ರಾಜಕೀಯದ ಬಹುಕಾಲದ ಬೇಡಿಕೆಯ ಕುರಿತು ಚರ್ಚಿಸಿದರು.
ಮಡಿಕೇರಿ ಮೇ 3 : ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ 6 ನೇ ವರ್ಷದ ಗೌಡ ಕುಟುಂಬಗಳ ನಡುವಣ “ಗೌಡ ಫುಟ್ಬಾಲ್ ಟ್ರೋಫಿ 2023” ಪಂದ್ಯಾವಳಿ ಮರಗೋಡು ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಇದೇ ಮೇ 4 ರಿಂದ 14 ರವರೆಗೆ ನಡೆಯಲಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಅಕಾಡೆಮಿಯ ಅಧ್ಯಕ್ಷ ದುಷ್ಯಂತ್ ಬಡುವಂಡ್ರ ತಮ್ಮ ಅಧ್ಯಕ್ಷತೆಯಲ್ಲಿ ಗುರುವಾರ ಪಂದ್ಯಾವಳಿಯ ಉದ್ಘಾಟನೆ ನಡೆಯಲಿದೆ. ಒಟ್ಟು 64 ತಂಡಗಳು ಹೆಸರು ನೋಂದಾಯಿಸಿಕೊಂಡಿದ್ದು, ಸುಮಾರು 4 ಸಾವಿರ ಪ್ರೇಕ್ಷಕರಿಗೆ ಗ್ಯಾಲರಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. ಕಳೆದ ವರ್ಷ ಮುಕ್ಕಾಟಿ ತಂಡ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಪಡಿಕಲ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು. ::: ಮೇ 4 ರ ಪಂದ್ಯಗಳು ::: ಮುಕ್ಕಾಟಿ ‘ಎ’ ಮತ್ತು ಕಾಯರ್ತೋಡಿ ಕೊಂಬಂಡ ಮತ್ತು ಕಾನಡ್ಕ ಮಗೇರನಾ ಮತ್ತು ಪಾರೇರ ಯಾಲದಾಳು ಮತ್ತು ಬಾರಿಕೆ ಪಟ್ಟೆಮನೆ ಮತ್ತು ಬಡುವಂಡ್ರ ಉಡುದೊಳಿರ ಮತ್ತು ಪರಿಚನ ಬೈಲೆ ಮತ್ತು ಉಳುವಾರನ
ಮಡಿಕೇರಿ ಮೇ 3 : ವಾಂಡರರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿ.ಸಿ.ವಿ.ಶಂಕರ್ ಸ್ವಾಮಿ ಸ್ಮರಣಾರ್ಥ ನಗರದ ಜಿಲ್ಲಾ ಕ್ರೀಡಂಗಣದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ಮಕ್ಕಳ ಉಚಿತ ಬೇಸಿಗೆ ಶಿಬಿರ ಮುಕ್ತಾಯಗೊಂಡಿತು. ಅತಿಥಿ ಗಣ್ಯರೊಂದಿಗೆ ಶಿಬಿರದ ಮಕ್ಕಳು, ಪೋಷಕರು, ವಾಂಡರರ್ಸ್ ಪದಾಧಿಕಾರಿಗಳು ಸಂಭ್ರಮದಿಂದ ಪಾಲ್ಗೊಂಡು ೨೯ನೇ ವರ್ಷದ ಶಿಬಿರಕ್ಕೆ ತೆರೆ ಎಳೆದರು. ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಶಿಬಿರದಲ್ಲಿ ಭಾಗವಹಿಸಿದ್ದ ನೂರಕ್ಕೂ ಅಧಿಕ ಮಕ್ಕಳು ತಾವು ಶಿಬಿರದಲ್ಲಿ ಕಲಿತ ಪ್ರಾಣಾಯಾಮವನ್ನು ಅತಿಥಿಗಳೆದುರು ಪ್ರದರ್ಶಿಸಿ ಮೆಚ್ಚುಗೆಗಳಿಸಿದರು. ಶಿಬಿರದ ಮಕ್ಕಳಿಗಾಗಿ ಏರ್ಪಡಿಸಲಾಗಿದ್ದ ಹಾಕಿ ಹಾಗೂ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಅತಿಥಿಗಳು ಬಹುಮಾನ ವಿತರಣೆ ಮಾಡಿದರು. ಇದೇ ಸಂದರ್ಭ ಶಿಬಿರದ ಬಗ್ಗೆ ಶಿಬಿರಾರ್ಥಿಗಳು ಹಾಗೂ ಪೋಷಕರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶಿಬಿರಾರ್ಥಿಗಳ ಪರವಾಗಿ ಸೃಷ್ಟಿ, ಆದ್ಯ ಹಾಗೂ ದಾರಿಕಾ, ಪೋಷಕರ ಪರವಾಗಿ ಬೊಟ್ಟೋಳಂಡ ನಿವ್ಯ ದೇವಯ್ಯ ಅನಿಸಿಕೆ ವ್ಯಕ್ತಪಡಿಸಿದರೆ, ತರಬೇತುದಾರರ ಪರವಾಗಿ ವಾಂಡರರ್ಸ್ ಆಡಳಿತಾಧಿಕಾರಿ ಬೊಪ್ಪಂಡ ಶಾಂ ಪೂಣಚ್ಚ ಮಾತನಾಡಿದರು. ಡೆಕಾಥ್ಲಾನ್…
ಮಡಿಕೇರಿ ಮೇ 3 : ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಬಿ.ಎಸ್.ಅನಂತಕುಮಾರ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬಿಜೆಪಿ ಪರ ಒಲವು ತೋರಿರುವ ಅವರು ಸಧ್ಯದಲ್ಲೇ ಶನಿವಾರಸಂತೆಯಲ್ಲಿ ಶಕ್ತಿ ಪ್ರದರ್ಶನ ಮಾಡುವುದಾಗಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅನಂತಕುಮಾರ್ ಕಾಂಗ್ರೆಸ್ ಪಕ್ಷ ನನಗೆ ಅನ್ಯಾಯ ಮಾಡಿಲ್ಲ, ಆದರೆ ಪಕ್ಷದ ಜಿಲ್ಲಾಧ್ಯಕ್ಷರು, ನಾಯಕರು ಹಾಗೂ ಅಭ್ಯರ್ಥಿ ನನ್ನನ್ನು ಕಡೆಗಣಿಸಿದ್ದಾರೆ. ನನ್ನ ಸ್ವಾಭಿಮಾನಕ್ಕೆ ದಕ್ಕೆ ಬಂದಿರುವುದರಿಂದ ಪಕ್ಷದಿಂದ ಹೊರ ಹೋಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುತ್ತೇನೆ ಎಂದು ಹೇಳಿದರು. ನಾನು ಜಿಲ್ಲಾ ಉಪಾಧ್ಯಕ್ಷನಾಗಿದ್ದರೂ ಕಳೆದ 6 ತಿಂಗಳುಗಳಿಂದ ಜಿಲ್ಲಾಧ್ಯಕ್ಷರು ನನಗೆ ಕರೆ ಮಾಡಿ ಪಕ್ಷ ಸಂಘಟನೆಯ ಬಗ್ಗೆ ಚರ್ಚಿಸಿಲ್ಲ. ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪಕ್ಷದ ಸಭೆ, ಸಮಾರಂಭಗಳಿಗೆ ನನ್ನನ್ನು ಆಹ್ವಾನಿಸುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಪಕ್ಷ ಸಂಘಟನೆ ಅತಿ ಮುಖ್ಯವಾಗಿದ್ದು, ಯಾರೂ ಕೂಡ ನಮ್ಮನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಶನಿವಾರಸಂತೆ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೃಹತ್ ಮಟ್ಟದಲ್ಲಿ ಬೆಳೆಸಿದ್ದೇನೆ. ಆದರೆ ನನ್ನ ಗಮನಕ್ಕೆ ತಾರದೆ…
ಸೋಮವಾರಪೇಟೆ ಮೇ 3 : ಮಕ್ಕಳ ಮನಸ್ಸು ವಿಕಾಸನಗೊಳ್ಳಲು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗೂ ಪೋಷಕರು ಆದ್ಯತೆ ನೀಡಬೇಕೆಂದು ಬೆಂಗಳೂರು ವಿಶ್ವವಿದ್ಯಾನಿಲಯದ ಕಲಾಪ್ರಾಚಾರ್ಯರು ಹಾಗೂ ಸಿನಿಮಾ ನಟಿ ಡಾ.ಪವಿತ್ರ ಹೇಳಿದರು. ಸೋಮವಾರಪೇಟೆಯ ಯಶೋದೆ ರಂಗ ಟ್ರಸ್ಟ್ ಆಶ್ರಯದಲ್ಲಿ ಸಾಂದೀಪನಿ ಪ್ರೌಢ ಶಾಲೆ ಸಹಯೋಗದಲ್ಲಿ ಶಾಲೆಯ ಆವರಣದಲ್ಲಿ ಕಳೆದ ಇಪ್ಪತ್ತು ದಿನಗಳು ನಡೆದ ಮಕ್ಕಳ ಕಲಿಕಾ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಇಂದು ಪೋಷಕರು ತಮ್ಮ ಮಕ್ಕಳು ಹೆಚ್ಚಿನ ಅಂಕಗಳಿಸಬೇಕು, ರ‍್ಯಾಂಕ್ ಬರಬೇಕು ಎಂದು ಆಶಿಸುತ್ತಾರೆ. ಆದರೆ ಅವರ ಮಾನಸಿಕ ಬೆಳವಣಿಗೆ ಹಾಗೂ ವ್ಯಕ್ತಿತ್ವ ವಿಕಸನದ ಬಗ್ಗೆ ಗಮನವೇ ಹರಿಸುವುದಿಲ್ಲ ಎಂದು ವಿಷಾದಿಸಿದರು. ನಿಮ್ಮ ಮಕ್ಕಳ ಅಂಕಗಳು ಅಂಕಪಟ್ಟಿಯಲ್ಲಿ ಕಂಡರೆ ಅವರ ಪಠ್ಯೇತರ ಚಟುವಟಿಕೆ ಅವರ ಮುಂದಿನ ಜೀವನದಲ್ಲಿ ಕಾಣಬಹುದು ಎಂದರು. ಅವರ ಚಟುವಟಿಕೆಗಳು ಕೇವಲ ಬೇಸಿಗೆ ಶಿಬಿರಕ್ಕೆ ಮೀಸಲಾಗದೆ ಅವರಿಗೆ ನಿತ್ಯವೂ ಪ್ರೋತ್ಸಾಹಿಸಿ ಎಂದರು. ನಾವು ದ್ರಾವಿಡ ಕನ್ನಡಿಗರು ಸಂಸ್ಥೆಯ ಮುಖ್ಯಸ್ಥ ಅಭಿಗೌಡ ಮಾತನಾಡಿ, ಇಂದಿನ ಒತ್ತಡದ ಶಿಕ್ಷಣದ ನಡುವೆ ಮಕ್ಕಳ…
ಮಡಿಕೇರಿ ಮೇ 4 : ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂಥರ್ ಗೌಡ ಪರ ನಗರದ ವಿವಿಧೆಡೆ ಬಿರುಸಿನ ಚುನಾವಣಾ ಪ್ರಚಾರ ನಡೆಯಿತು. ನಗರದ ಬೂತ್ ನಂಬರ್ 210 ರಲ್ಲಿ ಬೂತ್ ಅಧ್ಯಕ್ಷ ಶಾ ಹಾಗೂ ಮಡಿಕೇರಿ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಎಂ.ಎನ್.ರೌವೂಫ್ ನೇತೃತ್ವದಲ್ಲಿ ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ಕಾಂಗ್ರೆಸ್ ಯೋಜನೆಗಳ ಕುರಿತು ಜನರಿಗೆ ಮಾಹಿತಿ ನೀಡಿ ಮಂತರ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ಈ ಸಂದರ್ಭ ಮಾತನಾಡಿದ ಎಂ.ಎನ್.ರೌವೂಫ್ ಮಡಿಕೇರಿ ಕ್ಷೇತ್ರದ ಜನತೆ ಮಂತರ್ ಗೌಡ ಅವರ ಒಲವು ತೋರುತ್ತಿದ್ದು, ಭರ್ಜರಿ ಜಯ ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಎಐಸಿಸಿ ಕೊಡಗು ವೀಕ್ಷಕರಾದ ಹಸೀನ ಬಾನು, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ಬೂತ್ ಬಿ ಎಲ್ ಎ ಹಾಗೂ ಸೇವಾದಳದ ಪ್ರಮುಖರಾದ ಹಬೀಬ್, ಮಡಿಕೇರಿ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಯಶ್ ದೋಳ್‌ಪಾಡಿ, ಮಾಜಿ ಉಪಾಧ್ಯಕ್ಷ ಮೋಹನ್, ಬ್ಲಾಕಿನ ಪ್ರಮುಖರಾದ ಸುಹೇಲ್, ಯೂನುಸ್, ರಿಯಾಜ್, ಅಲ್ಪಸಂಖ್ಯಾತ ಘಟಕದ…
ಸೋಮವಾರಪೇಟೆ ಮೇ 2 : ಯಾವುದೇ ದೇಶದ್ರೋಹ ಪ್ರಕರಣದಲ್ಲಿ ಭಾಗಿಯಾಗದೇ, ಹಿಂದೂಗಳ ರಕ್ಷಣೆ ಹಾಗೂ ಏಳಿಗೆಗೆ ಶ್ರಮಿಸುತ್ತಿರುವ ಭಜರಂಗದಳವನ್ನು ನಿಷೇಧ ಮಾಡುತ್ತೇವೆಂದು ಪ್ರಣಾಳಿಕೆಯಲ್ಲಿ ಪ್ರಕಟಿಸಿರುವ ಕಾಂಗ್ರೆಸ್ ಪಕ್ಷದ ಕ್ರಮ ಖಂಡನೀಯವೆoದು ಭಜರಂಗದಳದ ಸೋಮವಾರಪೇಟೆ ತಾಲ್ಲೂಕು ಸಂಚಾಲಕ ಜೀವನ್ ನೇಗಳ್ಳೆ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಮಮಂದಿರ ನಿರ್ಮಾಣದ ಸಂದರ್ಭ ಮುಂಚೂಣಿಯಲ್ಲಿದ್ದ ಭಜರಂಗದಳ ರಾಷ್ಟ್ರದ 60ಸಾವಿರ ಹಳ್ಳಿಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಗೋಹತ್ಯೆ ನಿಷೇಧ, ಮತಾಂತರ, ಲವ್‌ಜಿಹಾದ್ ವಿರುದ್ಧ ಹೋರಾಟ ಮಾಡಲಾಗುತ್ತಿದೆ. ದೇಶಭಕ್ತ ಸಂಘಟನೆಯನ್ನು ನಿಷೇಧಿಸುವುದಾಗಿ ಹೇಳಿರುವ ಕಾಂಗ್ರೆಸ್ ನ್ನು ಸೋಲಿಸಿ ಹಿಂದೂಗಳ ಪರವಾಗಿರುವ ಪಕ್ಷವನ್ನು ಗೆಲ್ಲಿಸಬೇಕೆಂದು ಕರೆ ನೀಡಿದರು. ಕೊಡಗಿನಲ್ಲಿ ಪ್ರಕೃತಿವಿಕೋಪ ಸಂಭವಿಸಿದ ಸಂದರ್ಭ ಭಜರಂಗದಳ ಕಾರ್ಯಕರ್ತರು ಜೀವದ ಹಂಗುತೊರೆದು ಸಂಕಷ್ಟದಲ್ಲಿದ್ದ ಸಂತ್ರಸ್ತರನ್ನು ರಕ್ಷಣೆ ಮಾಡಿದ್ದಾರೆ. ಕೋವಿಡ್ ಸಂದರ್ಭ ಮೃತರೋಗಿಗಳ ಶವಸಂಸ್ಕಾರ ಮಾಡಿದ್ದಾರೆ. ನಿರಂತರ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಂಘಟನೆಯನ್ನು ನಿಷೇಧ ಮಾಡಲು ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದ ಚುಕ್ಕಾಣಿ ಹಿಡಿಯಲು ಸಾಧ್ಯವಿಲ್ಲವೆಂದರು. ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಪ್ರಧಾನ ಕಾರ್ಯದರ್ಶಿ ಕೆ.ಜಿ.ಸುರೇಶ್, ಭಜರಂಗದಳ…
ಸೋಮವಾರಪೇಟೆ ಮೇ 2: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ಬದಲಾಯಿಸಲು ಸಂಚು ರೂಪಿಸುವ ಕೋಮುವಾದಿ ಪಕ್ಷಗಳನ್ನು ತಿರಸ್ಕರಿಸುವಂತೆ ದಲಿತ ಸಂಘರ್ಷ ಸಮಿತಿಗಳ ಐಕ್ಯಹೋರಾಟ ಚಾಲನಾ ಸಮಿತಿಯ ಜಿಲ್ಲಾ ಘಟಕ ಮನವಿ ಮಾಡಿದೆ. ರಾಜ್ಯದಲ್ಲಿ ಜಾತ್ಯಾತೀತ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಬೇಕೆಂಬ ಸದುದ್ದೇಶದಿಂದ ಕೊಡಗು ಜಿಲ್ಲೆಯ ಮಡಿಕೇರಿ ಕ್ಷೇತದ ಅಭ್ಯರ್ಥಿ ಡಾ.ಮಂಥರ್‌ಗೌಡ ಹಾಗೂ ವಿರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಎ.ಎಸ್.ಪೊನ್ನಣ್ಣ ಅವರಿಗೆ ಸಂಪೂರ್ಣ ಬೆಂಬಲ ನೀಡಲಾಗಿದೆ ಎಂದು ಸಮಿತಿಯ ಜಿಲ್ಲಾಧ್ಯಕ್ಷ ಜೆ.ಆರ್.ಪಾಲಾಕ್ಷ ಸೋಮವಾರಪೇಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಸಂವಿಧಾನದ ಆಶಯ, ಪ್ರಜಾಪ್ರಭುತ್ವದ ಮೌಲ್ಯವನ್ನು ಕಾಪಾಡಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕಿದೆ. ಆದರೆ ಬಿಜೆಪಿ ನೇತೃತ್ವದ ಸರ್ಕಾರ ಇಡೀ ದೇಶದ ಸರ್ಕಾರಿ ಸಾಮ್ಯದ ಸಂಸ್ಥೆಗಳನ್ನು ಮಾರಾಟ ಮಾಡಲು ಮುಂದಾಗಿದೆ. ದಲಿತ, ಹಿಂದುಳಿದ ವರ್ಗ, ಕಡು ಬಡವರು ಹಾಗೂ ಅಲ್ಪಸಂಖ್ಯಾತರಿಗಿದ್ದ ಮೀಸಲಾತಿಯನ್ನು ನಾಶ ಮಾಡುವ ಪ್ರಯತ್ನ ಮಾಡಿದೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಎಲ್ಲಾ ದಲಿತ ಸಂಘಟನೆಗಳನ್ನು ಒಟ್ಟಿಗೆ ಸೇರಿಸಿ ಕಟ್ಟಿರುವ ಐಕ್ಯ ಹೋರಾಟ ಸಮಿತಿ ಕೊಡಗು ಜಿಲ್ಲೆಯಲ್ಲಿ…
ಮಡಿಕೇರಿ ಮೇ 2 : ವಿಧಾನಸಭಾ ಚುನಾವಣೆಯ ಹಿನ್ನೆಲೆ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ನಿಷೇಧಿಸುವ ಕುರಿತು ಉಲ್ಲೇಖಿಸಿರುವುದು ಹಿಂದೂಗಳಿಗೆ ಮಾಡಿದ ಅವಮಾನ ಮತ್ತು ಈ ಪ್ರಸ್ತಾಪ ಖಂಡನೀಯವೆoದು ವಿಶ್ವ ಹಿಂದೂ ಪರಿಷತ್, ಭಜರಂಗದಳ ಮತ್ತು ಮಾತೃಶಕ್ತಿ ದುರ್ಗವಾಹಿನಿಯ ಕೊಡಗು ಜಿಲ್ಲಾ ಘಟಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ವಿಶ್ವ ಹಿಂದೂ ಪರಿಷತ್ ನ ಜಿಲ್ಲಾ ಕಾರ್ಯಾಧ್ಯಕ್ಷ ಸುರೇಶ್ ಮುತ್ತಪ್ಪ ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು ದೇಶಭಕ್ತ ಸಂಘಟನೆಯಾಗಿರುವ ಭಜರಂಗದಳ ದೇಶದ 60 ಸಾವಿರ ಗ್ರಾಮಗಳಲ್ಲಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದೆ. ದೇಶಭಕ್ತ ಸಂಘಟನೆಯೊoದನ್ನು ದೇಶವಿರೋಧಿ ಸಂಘಟನೆಯ ಜೊತೆ ತುಲನೆ ಮಾಡಿರುವುದು ಅತ್ಯಂತ ಖಂಡನೀಯ ಎಂದು ತಿಳಿಸಿದ್ದಾರೆ. ಶ್ರೀರಾಮ ಮಂದಿರ ಹೋರಾಟದಿಂದ ಹಿಡಿದು ಹಿಂದೂ ಶ್ರದ್ಧಾಕೇಂದ್ರಗಳ ರಕ್ಷಣೆ, ಗೋರಕ್ಷಣೆ, ಲವ್ ಜಿಹಾದ್ ಗೆ ಬಲಿಯಾದ ಹೆಣ್ಣುಮಕ್ಕಳ ರಕ್ಷಣೆ ಮತ್ತು ಆರೈಕೆಯನ್ನು ಭಜರಂಗದಳ ಮಾಡಿದೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ದೇಶಕ್ಕೆ ದೇಶವೇ ತತ್ತರಿಸಿ ತನ್ನವರ ಅಂತ್ಯ ಸಂಸ್ಕಾರಕ್ಕೆ ಸಂಬoಧಿಕರೇ ಭಯಪಡುವಂತಹ…






