ಮಡಿಕೇರಿ ಜು.13 : ಪುತ್ತೂರಿನ ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ನಡೆದ ರಾಜ್ಯ ಮಟ್ಟದ ಕಾವ್ಯ ಮತ್ತು ಸಾಂಸ್ಕೃತಿಕ ಸಂಭ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೊಡಗು ಜಿಲ್ಲೆಯ ಸಾಹಿತಿ ಹಾಗೂ ಚಲನಚಿತ್ರ ನಿರ್ಮಾಪಕಿ ಈರಮಂಡ ಹರಿಣಿ ವಿಜಯ್ ಅವರು ಪಾಲ್ಗೊಂಡು ಕವನ ವಾಚಿಸಿ ಗಮನ ಸೆಳೆದರು. ಬೆಂಗಳೂರಿನ ಚಾಮರಾಜಪೇಟೆ ರಸ್ತೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಎಂಪವರ್ಡ್ ಮೈಂಡ್ಸ್ ಎಡು ಸೆಲ್ಯೂಷನ್ಸ್ ಸಂಸ್ಥಾಪಕ ಅಧ್ಯಕ್ಷರಾದ ಡಾ.ಲತಾ ಮೂರ್ತಿ ಉದ್ಘಾಟಿಸಿದರು. ಕವಿಗಳು ಮತ್ತು ಚಿಂತಕರಾದ ಹೆಚ್.ಬಿ. ಯೂಸಫ್ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದರೆ, ತುಮಕೂರು ಮಾತೃಭೂಮಿ ಸೇವಾ ಟ್ರಸ್ಟ್ ಸಂಸ್ಥಾಪಕ ಜ್ಯೋತಿ ಶ್ರೀನಿವಾಸ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮೈಸೂರು ಸಮಾಜ ವಿಜ್ಞಾನ ವಿಭಾಗದ ಮುಖ್ಯಸ್ಥ ಎನ್. ಮೊಹಮ್ಮದ್ ಹುಮಾಯೂನ್ ವಹಿಸಿದ್ದರು. ವಿಮರ್ಶಕರು ಹಾಗೂ ಉಪನ್ಯಾಸಕರಾದ ವೈ.ಜೆ.ಮೈಜೂಬಸಾಹೇಬ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಡಾ.ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್‍ನ ರಾಜ್ಯಾಧ್ಯಕ್ಷ ಡಾ.ಎಂ.ಎಂ.ಭಾಷ ನಂದಿ, ದಾಸನಪುರ…
ಲೇಖಕ: admin
ಮಡಿಕೇರಿ ಜು.13 : ತೆಕ್ಕಿಲ್ ಮಾದರಿ ಶಾಲೆಯಲ್ಲಿ ತರಕಾರಿಗಳ ದಿನವನ್ನು ಆಚರಣೆ ಆಚರಿಸಲಾಯಿತು. ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹ ದಿಂದ ಪಾಲ್ಗೊಂಡು ತಂದ ತರಕಾರಿಗಳ ಮಹತ್ವವನ್ನು ವಿವರಿಸಿದರು. ಶಾಲೆಯ ಸಹ ಶಿಕ್ಷಕಿ ಸೌಮ್ಯ ಮಕ್ಕಳಿಗೆ ಹಲವು ತರಕಾರಿಗಳ ಮಹತ್ವವನ್ನು ತಿಳಿಸಿದರು. ಈ ಸಂದರ್ಭ ಶಾಲೆಯ ಮುಖ್ಯೋಪಾಧ್ಯಾಯ ಜೆ.ಡಿ.ಸಂಪತ್ ಮತ್ತು ಎಲ್ಲಾ ಶಿಕ್ಷಕ ವೃಂದದವರು ಮತ್ತು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಉನೈಸ್ ಪೆರಾಜೆ ಉಪಸ್ಥಿತರಿದ್ದರು.
ಮಡಿಕೇರಿ ಜು.13 : ಸೋಮವಾರಪೇಟೆ ಹಾಗೂ ಕುಶಾಲನಗರ ತಾಲ್ಲೂಕಿನ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಳಿಗೆ ಕ್ಷಯ ರೋಗದ ಬಗ್ಗೆ ಅರಿವು ಮೂಡಿಸಲಾಯಿತು. ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲ್ಲೂಕು ಅಧಿಕಾರಿ ಶ್ರೀನಿವಾಸ್ ಕ್ಷಯ ರೋಗದ ಬಗ್ಗೆ ಮಾಹಿತಿ ನೀಡಿದರು. ತಾಲ್ಲೂಕು ಆರೋಗ್ಯ ಅಧಿಕಾರಿ ಕ್ಷಯ ಮುಕ್ತ ಗ್ರಾ.ಪಂ ಅಭಿಯಾನದ ಬಗ್ಗೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ NTEP ಸಿಬ್ಬಂದಿಗಳಾದ ಉಮೇಶ್ ಶ್ರೀಧರ್, ಅರಳಪ್ಪ ಹಾಜರಿದ್ದರು. ಇ.ಒ.ಶಾಂತಿ ಸ್ವಾಗತಿಸಿದರು. ಹಿರಿಯ ಚಿಕಿತ್ಸ ಮೇಲ್ವಿಚಾರಕ ಉಮೇಶ್ ಸರ್ವರನ್ನು ವಂದಿಸಿದರು.
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಫ್ರಾನ್ಸ್ ಪ್ರವಾಸ ಆರಂಭಿಸಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ಆಹ್ವಾನದ ಮೇರೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಫ್ರಾನ್ಸ್‌ಗೆ ತೆರಳಿದ್ದಾರೆ. ಇಂದು ಮತ್ತು ನಾಳೆ ಅವರು ಫ್ರಾನ್ಸ್ ನಲ್ಲಿಯೇ ಇದ್ದು ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ನಾಳೆ ಮೋದಿಯವರು ಫ್ರಾನ್ಸ್ ನ ವಾರ್ಷಿಕ ಬಾಸ್ಟಿಲ್ ಡೇ ಪರೇಡ್‌ನಲ್ಲಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇದರಲ್ಲಿ 269 ಸದಸ್ಯರನ್ನೊಳಗೊಂಡ ಭಾರತೀಯ ಸೇನೆಯ ಮೂರೂ ಸೇವೆಗಳ ತುಕಡಿ ಭಾಗವಹಿಸಲಿವೆ.
ಮಡಿಕೇರಿ ಜು.13 : ಇಂದಿನ ಜಾಗತೀಕರಣದ ಅಬ್ಬರದ ದಿನಗಳಲ್ಲಿ ಎಲ್ಲೆಲ್ಲೂ ಕಾಂಕ್ರೀಟ್ ಕಾಡುಗಳೇ ಕಂಡು ಬರುತ್ತಿರುವಾಗ ವನ ಸಂಪತ್ತನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಸಿಗಳ ನೆಡುವಿಕೆ ಹೆಚ್ಚಾಗಬೇಕಾದ ಅತ್ಯಗತ್ಯವಾಗಿದೆ ಎಂದು ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಸುಂದರರಾಜ್ ಅಭಿಪ್ರಾಯಪಟ್ಟಿದ್ದಾರೆ. ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ನಗರದ ಪೀಲ್ಡ್ ಮಾಷ೯ಲ್ ಕೆ.ಎಂ.ಕಾಯ೯ಪ್ಪ ವೖತ್ತದಲ್ಲಿನ ಮಿಸ್ಟಿ ಹಿಲ್ಸ್ ನಿವ೯ಹಣೆಯ ಉದ್ಯಾನವನದಲ್ಲಿ ಆಯೋಜಿಸಲಾಗಿದ್ದ ವನ ಮಹೋತ್ಸವವನ್ನು ಸಸಿ ನೆಡುವ ಮೂಲಕ ಸುಂದರ ರಾಜ್ ಉದ್ಘಾಟಿಸಿದರು. ಈ ಸಂದಭ೯ ಮಾತನಾಡಿದ ಸುಂದರರಾಜ್, ನಗರ ಪ್ರದೇಶಗಳು ಮಾತ್ರವಲ್ಲ ಗ್ರಾಮೀಣ ಪ್ರದೇಶಗಳಲ್ಲಿಯೂ ಇತ್ತೀಚಿನ ವಷ೯ಗಳಲ್ಲಿ ಕಾಂಕ್ರೀಟಿಕರಣವಾಗುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ಹೀಗಾಗಿ ವನ ಸಂಪತ್ತನ್ನು ಸಂರಕ್ಷಿಸಬೇಕಾದ ಅಗತ್ಯತೆ ಮನಗಂಡು ಸಸ್ಯ ಸಂಕುಲ ವೖದ್ದಿಸುವ ದೖಷ್ಟಿಯಲ್ಲಿ ವನಮಹೋತ್ಸವದಂಥ ಕಾಯ೯ಕ್ರಮಗಳು ಹೆಚ್ಚಾಗಬೇಕಾಗಿದೆ ಎಂದರು. ರೋಟರಿಯಂಥ ಸಂಸ್ಥೆಗಳು ವನಮಹೋತ್ಸವ ಮೂಲಕ ವಾಷಿ೯ಕ ಸಾವಿರಾರು ಗಿಡಗಳನ್ನು ಬೆಳೆಸುವ ಮೂಲಕ ಸಮಾಜಕ್ಕೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದೂ ಸುಂದರರಾಜ್ ಶ್ಲಾಘಿಸಿದರು. ಯುವಪೀಳಿಗೆಗೂ ಸಸ್ಯಸಂಕುಲದ ಅಗತ್ಯತೆಯನ್ನು ಮನವರಿಕೆ ಮಾಡಿಕೊಡುವ…
ಹೊಸದಿಲ್ಲಿ : ರಾಷ್ಟ್ರ ರಾಜಧಾನಿ ಹೊಸದಿಲ್ಲಿ ಸೇರಿದಂತೆ ದೇಶದ ವಿವಿಧೆಡೆ ಟೊಮೆಟೊ ಧಾರಣೆ ಪ್ರತೀ ಕೆ.ಜಿ ಗೆ ರೂ.200 ದಾಟಿದ್ದು, ಬೆಲೆಏರಿಕೆಗೆ ಕಡಿವಾಣ ಹಾಕಲು ಆಂಧ್ರಪ್ರದೇಶ, ಕರ್ನಾಟಕ ಹಾಗೂ ಮಹಾರಾಷ್ಟ್ರದಿಂದ ಟೊಮೆಟೊಗಳನ್ನು ಖರೀದಿಸುವಂತೆ ಕೇಂದ್ರ ಸರಕಾರವು ಸಹಕಾರಿ ಮಾರುಕಟ್ಟೆ ಸಂಘಟನೆಗಳಾದ ನಾಫೆಡ್ ಹಾಗೂ ಎನ್‍ಸಿಸಿಎಫ್‍ಗೆ ಸೂಚನೆ ನೀಡಿದೆ. ನಾಫೆಡ್ ಹಾಗೂ ಎನ್‍ಪಿಸಿಎಫ್ ಮೂಲಕ ಖರೀದಿಸಲಾದ ಟೊಮೆಟೊ ದಾಸ್ತಾನನ್ನು ದಿಲ್ಲಿ-ಎನ್‍ಸಿಆರ್ ಪ್ರಾರಂಭದಲ್ಲಿ ಜು.14 ರಿಂದ ದರಕಡಿತದೊಂದಿಗೆ ರಿಟೇಲ್ ಮಳೆಗೆಗಳಲ್ಲಿ ಮಾರಾಟ ಮಾಡಲಾಗುವುದು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಮಡಿಕೇರಿ ಜು.13 : ಮೂನಾ೯ಡು ಪ.ಪೂ.ಕಾಲೇಜಿನ ರೋಟರ್ಯಾಕ್ಟ್ ನ ನಿಕಟಪೂವ೯ ಅಧ್ಯಕ್ಷೆ ಶ್ರೀರಕ್ಷಾ ಪ್ರಭಾಕರ್ ಅವರಿಗೆ ರೋಟರ್ಯಾಕ್ಟ್ ನವರತ್ನ -2023 ಎಂಬ ಪ್ರಶಸ್ತಿ ದೊರಕಿದೆ. ಪುತ್ತೂರಿನಲ್ಲಿ ನಡೆದ ಜಿಲ್ಲಾ ರೋಟರಾಕ್ಟ್ ಕ್ಲಬ್ ನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮೂರ್ನಾಡು ಪದವಿ ಕಾಲೇಜಿನ ರೋಟರಾಕ್ಟ್ ಕ್ಲಬ್ ನ ನಿಕಟಪೂವ೯ ಅಧ್ಯಕ್ಷೆ ಶ್ರೀ ರಕ್ಷಾ ಪ್ರಭಾಕರ್ ಅವರಿಗೆ ರೋಟರಾಕ್ಟ್ ನ ನವರತ್ನ -2023 ಪ್ರಶಸ್ತಿಯನ್ನು ರೋಟರ್ಯಾಕ್ಟ್ ಜಿಲ್ಲಾ ಸಮಿತಿಯ ನಿಕಟಪೂವ೯ ಅಧ್ಯಕ್ಷ ನಿಖಿಲ್ ಆರ್.ಕೆ., ನೂತನ ಸಾಲಿನ ಸಂಚಾಲಕ ಮಹಮ್ಮದ್ ಅಸ್ಲಂ ಪ್ರಧಾನ ಮಾಡಿದರು. ಶ್ರೀರಕ್ಷಾ ರೋಟರ್ಯಾಕ್ಟ್ ಅಧ್ಯಕ್ಷೆಯಾಗಿ ಕೈಗೊಂಡ ಅನೇಕ ಸಮಾಜಮುಖಿ ಕಾಯ೯ಗಳಿಗಾಗಿ ಈ ಪ್ರಶಸ್ತಿ ಲಭಿಸಿದೆ. ಈ ಹಿನ್ನಲೆಯಲ್ಲಿಯೇ ಶ್ರೀರಕ್ಷಾರನ್ನು 2023-24 ಸಾಲಿನ ಜಿಲ್ಲಾ ರೋಟರ್ಯಾಕ್ಟ್ ನ ಸಾಂಸ್ಕೃತಿಕ ತಂಡದ ಅಧ್ಯಕ್ಷರಾಗಿ ನೇಮಕಮಾಡಲಾಗಿದೆ. ಮೂರ್ನಾಡು ಪದವಿ ಕಾಲೇಜಿನ ರೋಟರಾಕ್ಟ್ ಕ್ಲಬ್ ನ ಸಲಹೆಗಾರರಾಗಿ ರೋಟರಿ ಮಡಿಕೇರಿ ವುಡ್ಸ್ ಸಂಸ್ಥೆಯ ಸಂಪತ್ ಕುಮಾರ್, ವಸಂತ್ ಕುಮಾರ್, ಹರೀಶ್ ಕಿಗ್ಗಾಲು, ಎನ್.ಸಿ.ನವೀನ್, ಬೋಪಣ್ಣ ಕಾರ್ಯ…
ಮಡಿಕೇರಿ ಜು.13 : ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 13.56 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 49.28 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 844.86 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1470.37 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 27.93 ಮಿ.ಮೀ. ಕಳೆದ ವರ್ಷ ಇದೇ ದಿನ 44.40 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1330.92 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 2090.56 ಮಿ.ಮೀ. ಮಳೆಯಾಗಿತ್ತು. ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 3.08 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 43.83 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 603.83 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1150.15 ಮಿ.ಮೀ. ಮಳೆಯಾಗಿತ್ತು. ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 9.67 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 59.60 ಮಿ.ಮೀ.…
ನಾಪೋಕ್ಲು ಜು.13 : ಪಾರಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಕಂಡಬಾಣೆಯ ಅಂಗನವಾಡಿ ಸಮೀಪ ಇದ್ದ ನಾಗರಹಾವನ್ನು ಸ್ಥಳೀಯರು ರಕ್ಷಿಸಿದ್ದಾರೆ. ಏಕಾಏಕಿ ಕಾಣಿಸಿಕೊಂಡ ನಾಗರಹಾವನ್ನುಕಂಡು ಪುಟಾಣಿ ಮಕ್ಕಳು ಹಾಗೂ ಸ್ಥಳೀಯರು ಭಯಭೀತರಾದರು. ಸ್ಥಳೀಯರೇ ಚಾಣಾಕ್ಷತನದಿಂದ ಡ್ರಮ್‍ನಲ್ಲಿ ತುಂಬಿಸಿ ಕಾಡಿಗೆ ಬಿಟ್ಟ ರೋಚಕ ಘಟನೆ ನಡೆದಿದೆ. ವರದಿ : ದುಗ್ಗಳ ಸದಾನಂದ
ನಾಪೋಕ್ಲು ಜು.13 : ಮರಂದೋಡು ಗ್ರಾಮದಲ್ಲಿ ಬೀಡುಬಿಟ್ಟಿರುವ ಆನೆಗಳು ಅನ್ನಾಡಿಯಂಡ ದಿಲೀಪ್ ಅವರ ತೋಟಕ್ಕೆ ಲಗ್ಗೆ ಇಟ್ಟು ಅಪಾರ ಪ್ರಮಾಣದ ನಷ್ಟ ಉಂಟುಮಾಡಿವೆ. ಮರಂದೋಡು ಗ್ರಾಮದಲ್ಲಿ ಕಾಡಾನೆಗಳ ಉಪಟಳ ದಿಂದ ಗ್ರಾಮಸ್ಥರು ನಲುಗುವಂತಾಗಿದ್ದು, ಕಾಡಾನೆಗಳು ತೋಟಗಳಿಗೆ ನುಗ್ಗಿ ಕಾಫಿ, ಅಡಿಕೆ, ಬಾಳೆ ಗಿಡಗಳನ್ನು ಧ್ವಂಸ ಪಡಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಇದೀಗ ಮತ್ತೆ ತೋಟಗಳಿಗೆ ನುಗ್ಗಿರುವ ಕಾಡಾನೆಗಳು ಬಾಳೆ ಗಿಡಗಳನ್ನು ದ್ವಂಸಪಡಿಸಿ ರಸ್ತೆಗಳಲ್ಲಿ ಎಳೆದೊಯ್ದಿರುವ ದೃಶ್ಯಗಳು ಕಂಡುಬಂದಿವೆ. ಹಲಸು, ಕಾಫಿ, ಬಾಳೆ ಮತ್ತಿತರ ಕೃಷಿ ವಸ್ತುಗಳನ್ನು ಕಾಡಾನೆಗಳು ಧ್ವಂಸ ಮಾಡಿದ್ದು ಮಂಗಳವಾರ ರಾತ್ರಿ ಮನೆಯಂಗಳಕ್ಕೆ ಬಂದಿರುವುದರಿಂದ ಜೀವ ಭಯವಾಗುತ್ತಿದೆ ಎಂದು ಕೃಷಿಕ ಅನ್ನಾಡಿಯಂಡ ದಿಲೀಪ್ ಕುಮಾರ್ ತಮ್ಮ ಬೇಸರವನ್ನು ವ್ಯಕ್ತಪಡಿಸಿದರು. ಶಾಶ್ವತವಾಗಿ ಆನೆಗಳನ್ನು ಸ್ಥಳಾಂತರಿಸಲು ಸಂಬಂಧಿಸಿದವರು, ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಕಾಡಾನೆ ಉಪಟಳದಿಂದ ಕಂಗೆಟ್ಟ ಕೋಕೇರಿ, ಮರಂದೋಡ, ನರಿಯಂದಡ ಹಾಗೂ ಚೇಲಾವರ ಗ್ರಾಮಸ್ಥರು ಕಳೆದ ಸೋಮವಾರ ಚೆಯ್ಯಂಡಾಣೆಯಲ್ಲಿ ರಸ್ತೆತಡೆ ಮಾಡಿ ಪ್ರತಿಭಟನೆ ನಡೆಸಿದ್ದರು. ವರದಿ : ದುಗ್ಗಳ…






