ಲೇಖಕ: admin

ಮಡಿಕೇರಿ ಜು.12 : ತಾಲ್ಲೂಕಿನ ಗಾಳಿಬೀಡು ಬಳಿ ಇರುವ ಜವಾಹರ್ ನವೋದಯ ವಿದ್ಯಾಲಯಕ್ಕೆ 2024-25 ನೇ ಸಾಲಿಗೆ 6 ನೇ ತರಗತಿಗೆ ಪ್ರವೇಶ ಪಡೆಯಲು ಜಿಲ್ಲೆಯ ಸರ್ಕಾರಿ ಹಾಗೂ ಮಾನ್ಯತೆ ಪಡೆದ ಶಾಲೆಗಳಲ್ಲಿ 5 ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್, 10 ಕೊನೆಯ ದಿನವಾಗಿದೆ. ಅರ್ಜಿಯನ್ನು https://navodaya.gov.in ಮತ್ತು https://cbseitms.rcil.gov.in/nvs ವೆಬ್‍ಸೈಟ್‍ನಲ್ಲಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಜವಾಹರ್ ನವೋದಯ ವಿದ್ಯಾಲಯ ಇರುವ ಜಿಲ್ಲೆಯ ನಿವಾಸಿಯಾಗಿರಬೇಕು. 2023-24 ರ ಶೈಕ್ಷಣಿಕ ಅವಧಿಯಲ್ಲಿ 5 ನೇ ತರಗತಿಯಲ್ಲಿ ಓದುತ್ತಿರಬೇಕು. ಅಭ್ಯರ್ಥಿಯು 01-05-2012 ರಿಂದ 31-07-2014 ರ ನಡುವೆ ಜನಿಸಿರಬೇಕು. ಹೆಚ್ಚಿನ ಮಾಹಿತಿಗೆ ಪ್ರಾಂಶುಪಾಲರು, ಜವಾಹರ್ ನವೋದಯ ವಿದ್ಯಾಲಯ, ಗಾಳಿಬೀಡು ಇಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಪ್ರಾಂಶುಪಾಲರಾದ ಪಂಕಜಾಕ್ಷನ್ ಅವರು ತಿಳಿಸಿದ್ದಾರೆ.

Read More

ಮಡಿಕೇರಿ ಜು.12 : 2023-24ನೇ ಸಾಲಿನ 31ನೇ ರಾಜ್ಯಮಟ್ಟದ ಮುಕ್ತ ಕೆಸರು ಗದ್ದೆ ಕ್ರೀಡಾಕೂಟ ಮತ್ತು ಆಟೋಟ ಸ್ಪರ್ಧೆಗಳು ಆ.12 ರಂದು ಕಗ್ಗೋಡ್ಲು ಗ್ರಾಮದ ದಿ.ಸಿ.ಡಿ.ಬೋಪಯ್ಯ ಅವರ ಗದ್ದೆಯಲ್ಲಿ ನಡೆಯಲಿದೆ ಎಂದು ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್ ಹಾಗೂ ಮಡಿಕೇರಿ ತಾಲೂಕು ಅಧ್ಯಕ್ಷ ಬಾಳಾಡಿ ದಿಲೀಪ್ ಕುಮಾರ್ ತಿಳಿಸಿದ್ದಾರೆ. ಕೊಡಗು ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯೂತ್ ಹಾಸ್ಟೇಲ್ ಅಸೋಸಿಯೇಶನ್ ಆಫ್ ಇಂಡಿಯಾ (ಮಡಿಕೇರಿ ಘಟಕ), ಕೊಡಗು ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ, ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲ್ಲೂಕು ಯುವ ಒಕ್ಕೂಟ ಹಾಗೂ ಕಗ್ಗೊಡ್ಲು ಕಾವೇರಿ ಯುವಕ ಸಂಘ ಸಂಯುಕ್ತಾಶ್ರಯದಲ್ಲಿ ಬೆಳಗ್ಗೆ 9.30 ರಿಂದ ಸ್ಪರ್ಧೆಗಳು ನಡೆಯಲಿವೆ. ಸಾರ್ವಜನಿಕ ಪುರುಷ ಮತ್ತು ಮಹಿಳೆಯರ ಹಗ್ಗ ಜಗ್ಗಾಟ (9 ಜನರ ತಂಡ), ಸಾರ್ವಜನಿಕ ಪುರುಷರ ವಾಲಿಬಾಲ್ (4 ಜನರ ತಂಡ), ಸಾರ್ವಜನಿಕ ಮಹಿಳೆಯರಿಗೆ ಥ್ರೋಬಾಲ್ (6 ಜನರ ತಂಡ), ಪ್ರೌಢ ಶಾಲಾ ಬಾಲಕಿಯರಿಗೆ…

Read More

ಮಡಿಕೇರಿ ಜು.12 : ಬಿಳಿಗೇರಿ ಪ್ಲಾಂಟರ್ಸ್ ಕ್ಲಬ್ ವತಿಯಿಂದ ಜು.16 ರಂದು 3ನೇ ವರ್ಷದ “ಹಿಂದೂ ಕೆಸರುಗದ್ದೆ ಕ್ರೀಡಾಕೂಟ” ನಡೆಯಲಿದೆ ಎಂದು ಪ್ಲಾಂಟರ್ಸ್ ಕ್ಲಬ್ ಅಧ್ಯಕ್ಷ ಅರವಿಂದ್ ಸೋಮಣ್ಣ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬಿಳಿಗೇರಿಯ ತುಂತಜೆ ಕುಟುಂಬಸ್ಥರ ಗದ್ದೆಯಲ್ಲಿ ಕೆಸರುಗದ್ದೆ ಕ್ರಿಕೆಟ್, ವಾಲಿಬಾಲ್, ಓಟದ ಸ್ಪರ್ಧೆ, ಹಗ್ಗಜಗ್ಗಾಟ, ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಲಿದೆ ಎಂದು ಹೇಳಿದ್ದಾರೆ. ಬೆಳಗ್ಗೆ 9 ಗಂಟೆಗೆ ಆರಂಭಗೊಳ್ಳಲಿರುವ ಕ್ರೀಡಾಕೂಟವನ್ನು ಕೃಷಿಕರಾದ ತುಂತಜೆ ಚಂದ್ರಶೇಖರ್, ತುಂತಜೆ ಜನಾರ್ಧನ, ಮಾಜಿ ಕ್ಯಾಪ್ಟನ್ ತುಂತಜೆ ದಯಾನಂದ, ಅರ್ವತ್ತೋಕ್ಲು ಪೆರಾತ ಕ್ಲಬ್ ಅಧ್ಯಕ್ಷ ಬಾಲಾಡಿ ಪ್ರತಾಪ್, ತಾ.ಪಂ ಮಾಜಿ ಸದಸ್ಯೆ ತುಂತಜೆ ಕುಮುದ, ಪ್ಲಾಂಟರ್ಸ್ ಕ್ಲಬ್ ಅಧ್ಯಕ್ಷ ಅರವಿಂದ್ ಉದ್ಘಾಟಿಸಲಿದ್ದಾರೆ. ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಕೊಡಗು-ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ, ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ, ಡಾ.ಮಂಥರ್ ಗೌಡ, ಮಾಜಿ ಶಾಸಕ ಕೆ.ಜಿ.ಬೋಪಯ್ಯ, ಬೆಂಗಳೂರು ಅಲ್ಟ್ರ ಗ್ರೂಪ್ಸ್‍ನ ರಾಜೇಶ್ ತೇನನ, ಮಕ್ಕಳ ತಜ್ಞ…

Read More

ಮಡಿಕೇರಿ ಜು.12  : ಮಡಿಕೇರಿಯ ಸಮರ್ಥ ಕನ್ನಡಿಗರು ಸಂಸ್ಥೆಯ ವತಿಯಿಂದ   ಆನ್ ಲೈನ್ ಗಾಯನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನವೆಂಬರ್ ತಿಂಗಳಲ್ಲಿ ಸಂಸ್ಥೆ ಹಮ್ಮಿಕೊಳ್ಳುವ ಪ್ರತಿಭೋತ್ಸವದಲ್ಲಿ ಬಹುಮಾನ ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಗಾಯನ ಸ್ಪರ್ಧೆಯ ನಿಯಮಗಳು :  ಭಕ್ತಿಗೀತೆಗಳನ್ನೇ ಹಾಡಬೇಕು. ಕಾಲಾವಕಾಶ 3 ನಿಮಿಷ. ಕರೋಕೆ ಬಳಸಿ ಹಾಡುವಂತಿಲ್ಲ, . ವೈಯಕ್ತಿಕ ಸ್ಪರ್ಧೆ, ಸ್ಪರ್ಧೆಗೆ ಯಾವುದೇ ಶುಲ್ಕವಿಲ್ಲ, ಹಾಡಿನ ವೀಡಿಯೋ ಕಳುಹಿಸಲು ಕೊನೆಯ ದಿನಾಂಕ ಜು.30. ವೀಡಿಯೋ ಕಳುಹಿಸಬೇಕಾದ ಮೊಬೈಲ್ ಸಂಖ್ಯೆ :  9740875383 (5 ರಿಂದ 10 ವರ್ಷದ ಮಕ್ಕಳಿಗೆ), 9632870102 (11 ರಿಂದ 18 ವರ್ಷ), 8150007006 (18 ವರ್ಷ ಮೇಲ್ಪಟ್ಟವರು),   ಹೆಚ್ಚಿನ ಮಾಹಿತಿಗೆ  ಸಮಥ೯ ಕನ್ನಡಿಗರು ಜಿಲ್ಲಾ ಸಂಚಾಲಕಿ ಕೆ.ಜಯಲಕ್ಷಿ 9663119670  ಸಂಪರ್ಕಿಸಬಹುದಾಗಿದೆ.

Read More

ಮಡಿಕೇರಿ ಜು.12 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಬಜೆಟ್ ಮಂಡನೆ ಸಂದರ್ಭ ಕೊಡಗು ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಿದೆ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಬಿಜೆಪಿ ರೈತ ಮೋರ್ಚಾ, ಈ ಹಿಂದಿನ ಬಿಜೆಪಿ ಸರ್ಕಾರದ ರೈತಪರ ಯೋಜನೆಗಳನ್ನು ಮುಂದುವರೆಸುವಂತೆ ಒತ್ತಾಯಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ರೈತ ಮೋರ್ಚಾದ ಕಾರ್ಯದರ್ಶಿ ಡಾ.ಬಿ.ಸಿ.ನವೀನ್ ಕುಮಾರ್, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಚುನಾವಣೆ ಸಂದರ್ಭ ಘೋಷಿಸಿದ ಹಲವು ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದರು. ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಎಪಿಎಂಸಿ ಕಾಯ್ದೆಯನ್ನು ರದ್ದು ಪಡಿಸಿರುವುದು ಸರಿಯಲ್ಲ. ಏಕಾಏಕಿ ವಿದ್ಯುತ್ ದರ ಏರಿಕೆ ಮಾಡುವ ಮೂಲಕ ಗ್ರಾಹಕರು ಹಾಗೂ ಸಣ್ಣ ಉದ್ದಿಮೆದಾರರಿಗೆ ಆರ್ಥಿಕ ಹೊರೆ ಉಂಟು ಮಡಲಾಗಿದೆ. ರೈತ ವಿದ್ಯಾನಿಧಿ ಯೋಜನೆ, ಜಿಲ್ಲೆಗೊಂದು ಗೋಶಾಲೆ ಯೋಜನೆ, ಭೂ ಸಿರಿ ಯೋಜನೆ, ಕಿಸಾನ್ ಸಮ್ಮಾನ್ ನಿಧಿ ಯೋಜನೆ, ರೈತ ಶಕ್ತಿ ಯೋಜನೆಗಳನ್ನು ರದ್ದುಗೊಳಿಸುವ ಮೂಲಕ ಬಡ ರೈತರ ಮಕ್ಕಳಿಗೆ ಹಾಗೂ ಕೃಷಿಕರಿಗೆ…

Read More

ಮಡಿಕೇರಿ ಜು.12 : ಮಡಿಕೇರಿ ನಗರಸಭಾ ಸದಸ್ಯ ಹಾಗೂ ಮಡಿಕೇರಿ ಕೊಡವ ಸಮಾಜದ ನಿರ್ದೇಶಕ ಕಾಳಚಂಡ ಅಪ್ಪಣ್ಣ ಅವರ ಮೇಲಿನ ಹಲ್ಲೆಯನ್ನು ಖಂಡಿಸಿ ಜು.14 ರಂದು ಮಡಿಕೇರಿ ಕೊಡವ ಸಮಾಜದ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಮುತ್ತಪ್ಪ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನ ಮೂಲ ನಿವಾಸಿಗಳಾದ ಕೊಡವರು, ಕೊಡವ ಭಾಷಿಕರು, ಕೊಡವಾಭಿಮಾನಿಗಳ ಮೇಲೆ ದೌರ್ಜನ್ಯ ನಡೆಯದಂತೆ ಜಾಗೃತಿ ಮೂಡಿಸುವ ಸಲುವಾಗಿ ಶುಕ್ರವಾರ ಬೆಳಗ್ಗೆ 10.30 ಗಂಟೆಗೆ ಮಡಿಕೇರಿ ನಗರಸಭೆ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸುವುದಾಗಿ ಹೇಳಿದರು. ಇಂತಹ ಘಟನೆಗಳಿಂದ ಸಾಮಾಜದ ಸ್ವಾಸ್ಥ್ಯ ಹದಗೆಡಲಿದೆ, ಜನಾಂಗೀಯ ತಾರತಮ್ಯ ಹೆಚ್ಚಾಗಿ ಅಶಾಂತಿ ಮೂಡುವ ಸಾಧ್ಯತೆ ಇದೆ. ಒಬ್ಬ ಜನಪ್ರತಿನಿಧಿಯಾದವರಿಗೆ ಈ ಪರಿಸ್ಥಿತಿಯಾದರೆ ಜನಸಾಮಾನ್ಯರಿಗೆ ಏನು ರಕ್ಷಣೆ ಇದೆ ಎಂದು ಪ್ರಶ್ನಿಸಿದರು. ಹಲ್ಲೆ ನಡೆಸಿದ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಮುಂದೆ ಜಿಲ್ಲೆಯ ಯಾವುದೇ…

Read More

ಮಡಿಕೇರಿ ಜು.12 : ಇಂದಿರಾನಗರದ ಕುಂದುರುಮೊಟ್ಟೆ ಶ್ರೀ ಮಾರಿಯಮ್ಮ ದೇವಾಲಯದ ಜೀರ್ಣೋದ್ಧಾರದ ಅಂಗವಾಗಿ ಮೃತ್ಯುಂಜಯ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ನಡೆಯಿತು. ದೇವಾಲಯದ ಆವರಣದಲ್ಲಿ ತಂತ್ರಿಗಳಾದ ಕೇರಳದ ಮನೋಹರ್ ಪಣಿಕರ್, ಸುನಿಲ್, ಪ್ರಜಿಶ್ ಅವರ ನೇತೃತ್ವದಲ್ಲಿ ಮುಂಜಾನೆಯಿಂದಲೇ ಗಣಪತಿ ಹೋಮ, ಮೃತ್ಯುಂಜಯ ಹೋಮ, ಭಗವತಿ ಪೂಜೆ ಮತ್ತು ದೇವಿಗೆ ವಿಶೇಷ ಪೂಜೆ ನೆರವೇರಿತು. ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಇಂದಿರಾನಗರ, ತಾಳತ್ತಮನೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು. 

Read More

ಮಡಿಕೇರಿ ಜು.12 : ಇನ್ನರ್ ವೀಲ್ ಜಿಲ್ಲೆ 318 ನ ಅಧ್ಯಕ್ಷೆಯಾಗಿ ಮಡಿಕೇರಿಯ ಪೂಣಿ೯ಮಾ ರವಿ ಅಧಿಕಾರ ಸ್ವೀಕರಿಸಿದ್ದಾರೆ. ಮೈಸೂರಿನಲ್ಲಿ ಆಯೋಜಿತ ಕಾಯ೯ಕ್ರಮದಲ್ಲಿ ಮಡಿಕೇರಿಯ ಹೆಸರಾಂತ ವೈದ್ಯ ಡಾ.ರವಿ ಅಪ್ಪಾಜಿ ಅವರ ಪತ್ನಿ ಪೂಣಿ೯ಮಾ ರವಿ ಅವರು ಇನ್ನರ್ ವೀಲ್ ಜಿಲ್ಲೆ 318 ನ ಅಧ್ಯಕ್ಷೆಯಾಗಿ ಭಾರತೀಯ ಇನ್ನರ್ ವೀಲ್ ಸಂಸ್ಥೆಯ ಅಸೋಸಿಯೇಷನ್ ಅಧ್ಯಕ್ಷೆ ಪ್ರೀತಿ ಗುಗ್ನಾನಿ ಅವರಿಂದ ಅಧಿಕಾರ ಪಡೆದರು. ಈ ಸಂದಭ೯ ಮಾತನಾಡಿದ ಪ್ರೀತಿ ಗುಗ್ನಾನಿ, ಇನ್ನರ್ ವೀಲ್ ಸಂಸ್ಥೆಯು ಈ ವಷ೯ ಭಾರತದಾದ್ಯಂತ ರೂಪಿಸಿರುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಇನ್ನರ್ ವೀಲ್ ಸದಸ್ಯೆಯರು ಕಾಯ೯ನಿವ೯ಹಿಸುವಂತೆಯೂ ಪ್ರೀತಿ ಗುಗ್ನಾನಿ ಕರೆ ನೀಡಿದರು. ಅದಿಕಾರ ಸ್ವೀಕರಿಸಿ ಮಾತನಾಡಿದ ಪೂಣಿ೯ಮಾ ರವಿ , ಹಲವಷ್ಟು ಮಾಜಿ ಅಧ್ಯಕ್ಷೆಯರು ಇನ್ನರ್ ವೀಲ್ ಸಂಸ್ಥೆಯ ಸವ೯ತೋಮುಖ ಬೆಳವಣಿಗೆಗೆ ಸಹಕಾರ ನೀಡಿದ್ದಾರೆ. ಈ ವಷ೯ ಶಿಕ್ಷಣ, ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವಷ್ಟು ಯೋಜನೆಗಳನ್ನು ಜಿಲ್ಲೆಯಾದ್ಯಂತ ಜಾರಿಗೊಳಿಸಲಾಗುತ್ತದೆ. ಹಾಗೇ…

Read More

ಮಡಿಕೇರಿ ಜು.12  : ಇನ್ನು ಎರಡು ವಷ೯ಗಳಲ್ಲಿ ಚೀನಾವನ್ನೂ ಮೀರಿಸಿ ಭಾರತದೇಶವು ಜಗತ್ತಿನಲ್ಲಿಯೇ ಅತ್ಯಧಿಕ ಜನಸಂಖ್ಯೆ ಇರುವ ದೇಶವಾಗಲಿದ್ದು, ಕೆಲವೊಂದು ಪ್ರತಿಕೂಲ ಪರಿಣಾಮಗಳನ್ನು ಎದುರಿಸುವ ಸವಾಲು ಎದುರಾಗಲಿದೆ ಎಂದು ಮಡಿಕೇರಿಯ ಸಕಾ೯ರಿ ಆಸ್ಪತ್ರೆಯ ತಜ್ಞ ವೈದ್ಯಾಧಿಕಾರಿ ಡಾ.ಎನ್.ಎಸ್. ನವೀನ್ ಕಳವಳ ವ್ಯಕ್ತಪಡಿಸಿದ್ದಾರೆ. ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಜನಸಂಖ್ಯಾ ದಿನಾಚರಣೆಯ ಸಂದಭ೯ ಈವರೆಗೆ 15 ಸಾವಿರದಷ್ಟು ಉದರದಶ೯ಕ ಕುಟುಂಬ ಕಲ್ಯಾಣ ಮತ್ತು ವಾಸೆಕ್ಟಮಿ ಶಸ್ತ್ರಚಿಕಿತ್ಸೆ ನಡೆಸಿದ ಕೀತಿ೯ಗೆ ಡಾ.ಎನ್.ಎಸ್. ನವೀನ್ ಅವರನ್ನು ಸನ್ಮಾನಿಸಲಾಯಿತು. ಈ ಸಂದಭ೯ ಮಾತನಾಡಿದ ಡಾ.ನವೀನ್, ಭಾರತ ದೇಶವು ವಷ೯ದಿಂದ ವಷ೯ಕ್ಕೆ ಜನಸಂಖ್ಯಾ ಸ್ಪೋಟವನ್ನು ಕಾಣುತ್ತಿದೆ. ಇದರಿಂದ ಆಹಾರ, ಉದ್ಯೋಗ ಕ್ಷೇತ್ರ ಸೇರಿದಂತೆ ವಿವಿಧ ರಂಗಗಳಲ್ಲಿ ಸಮಸ್ಯೆ ಎದುರಿಸುವಂತಾಗಿದೆ. ಬಡತನ ನಿಮೂ೯ಲನೆಯ ಉದ್ದೇಶ ಕೂಡ ಜನಸಂಖ್ಯಾ ನಿಯಂತ್ರಣದಲ್ಲಿದೆ ಎಂದರು. ಲಿಂಗಸಮಾನತೆಯ ಶಕ್ತಿಯ ಮಾಹಿತಿ ನೀಡುವುದೇ ಈ ವಷ೯ದ ಘೋಷ ವಾಕ್ಯವಾಗಿದೆ. ಜಗತ್ತಿನಲ್ಲಿ ಪ್ರಸ್ತುತ 800 ಕೋಟಿ ಜನರಿದ್ದು ಈ ಪೈಕಿ 140 ಕೋಟಿ, ಜನ ಭಾರತದಲ್ಲಿದ್ದರೆ, 142…

Read More

ಮಡಿಕೇರಿ ಜು.12 : ನಗರಸಭಾ ಸದಸ್ಯ ಕಾಳಚಂಡ ಅಪ್ಪಣ್ಣ ಅವರ ಮೇಲಿನ ಹಲ್ಲೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್, ಮಡಿಕೇರಿ ಕೊಡವ ಸಮಾಜ ಹಾಗೂ ಮಡಿಕೇರಿ ಗೌಡ ಸಮಾಜ ಹಲ್ಲೆ ಮಾಡಿದವರನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿವೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೇಂಬರ್ ಆಫ್ ಕಾಮರ್ಸ್ ನಗರಾಧ್ಯಕ್ಷ ಎಂ.ಧನಂಜಯ, ಜನಪ್ರತಿನಿಧಿಯೊಬ್ಬರ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿರುವ ಈ ಘಟನೆ ನಗರದ ಎಲ್ಲಾ ವರ್ತಕರು ಮುಜುಗರಕ್ಕೊಳಗಾಗುವಂತೆ ಮಾಡಿದೆ. ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹಲ್ಲೆ ಮಾಡಿದವರನ್ನು ರೌಡಿ ಶೀಟರ್ ಪಟ್ಟಿಗೆ ಸೇರಿಸಬೇಕು ಮತ್ತು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು. ಘಟನೆ ನಡೆದ ಐಟಿಐ ಜಂಕ್ಷನ್ ವ್ಯಾಪ್ತಿಯಲ್ಲಿ ಪ್ರತಿಷ್ಠಿತ ಕಾಲೇಜು ಮತ್ತು ಸರ್ಕಾರಿ ಕಚೇರಿಗಳಿದ್ದು, ವಿದ್ಯಾರ್ಥಿಗಳು ಹಾಗೂ ನೌಕರರು ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಾಜದ ಸ್ವಾಸ್ಥ್ಯ ಕೆಡಿಸುವ ಗುಂಪುಗಳು ನಗರದಲ್ಲಿ ಕಾರ್ಯಾಚರಿಸುತ್ತಿದ್ದು, ಹೆಚ್ಚಿನ ಅನಾಹುತಗಳು ಸಂಭವಿಸುವ ಮೊದಲು ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಅಗತ್ಯ ಮುಂಜಾಗೃತಾ ಕ್ರಮಗಳನ್ನು…

Read More