ನಾಪೋಕ್ಲು ಜು.3 : ಪಡಿಯಾಣಿ ಗ್ರಾಮದಲ್ಲಿರುವ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ ಎಸ್ ಎಫ್ ಶಾಖೆಯ ಅದೀನದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ನೂರುಲ್ ಉಲಮಾ ಸುನ್ನೀ ಸೆಂಟರ್ ಕಟ್ಟಡದ ಶೀಲಾನ್ಯಾಸ ಕಾರ್ಯಕ್ರಮವನ್ನು ಕುರ್ರತು ಸಾದಾತ್ ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ನೆರವೇರಿಸಿದರು. ಬಳಿಕ ಮಾತನಾಡಿದ ಫಝಲ್ ಕೊಯಮ್ಮ ತಂಙಳ್ ನಾಡಿನಲ್ಲಿ ಎಲ್ಲರೂ ಸಹನೆ,ಸಹಬಾಳ್ವೆ, ಐಕ್ಯತೆಯಿಂದ ಜೀವನ ಸಾಗಿಸುವಂತ್ತಾಗಬೇಕು. ನಾಡಿನಲ್ಲಿ ಉತ್ತಮ ಮಳೆ ಬೆಳೆಯಾಗಲು ದೇವರು ಕರುಣಿಸಲಿ, ಇಂತಹ ಕಾರ್ಯಕ್ರಮಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ನೆರವೇರಿಸಿದರು. ಈ ಸಂದರ್ಭ ಕೊಡಗು ಜಿಲ್ಲಾ ನಾಹಿಬ್ ಖಾಝಿ ಶಾದುಲಿ ಫೈಝಿ, ಎಸ್ ವೈ ಎಸ್ ಕರ್ನಾಟಕ ರಾಜ್ಯ ಘಟಕದ ಸದಸ್ಯರಾದ ಸಯ್ಯದ್ ಇಲ್ಯಾಸ್ ಅಲ್ ಹೈದರೂಸಿ ತಂಙಳ್ ಎಮ್ಮೆಮಾಡು,ಅಝೀ ಝ್ ತಂಙಳ್, ಷರಫುದ್ದಿನ್ ತಂಙಳ್, ಇಶಾಕ್ ತಂಙಳ್, ಹಬೀಬ್ ತಂಙಳ್, ಎಸ್ ವೈ ಎಸ್ ಜಿಲ್ಲಾಧ್ಯಕ್ಷ ಹಮೀದ್ ಮುಸ್ಲಿಯಾರ್, ಎಸ್ ವೈ ಎಸ್ ಮಡಿಕೇರಿ ಜೋನ್ ಅಧ್ಯಕ್ಷರಾದ…
ಲೇಖಕ: admin
ಕುಶಾಲನಗರ ಜು.3 : ಕುಶಾಲನಗರ ಶ್ರೀ ಶಿರಡಿ ಸಾಯಿ ದೇವಾಲಯದಲ್ಲಿ ಗುರು ಪೂರ್ಣಿಮೆ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಮುಂಜಾನೆಯಿಂದಲೇ ಕಾಕಡ ಆರತಿ, ನಂತರ ಗಣಪತಿ ಹೋಮ, ಸಾಯಿ ಹೋಮ, ದೇವರಿಗೆ ಪಂಚಾಮೃತ ಅಭಿಷೇಕ ನಂತರ ಭಕ್ತಾದಿಗಳಿಂದ ಹಾಲಿನ ಅಭಿಷೇಕ ನಡೆಯಿತು. ನಂತರ ಸಾಮೂಹಿಕ ಸತ್ಯನಾರಾಯಣ ಪೂಜೆ ಮಹಾಮಂಗಳಾರತಿ ಹಾಗೂ ಅನ್ನ ಪ್ರಸಾದ ವಿನಿಯೋಗ ನಡೆಯಿತು. ರಾಘವೇಂದ್ರ ಭಟ್, ನವೀನ್ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆದವು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಶ್ರೀ ಶಿರಡಿ ಸಾಯಿ ಟ್ರಸ್ಟ್ ಅಧ್ಯಕ್ಷರಾದ ಧರೇಶ್ ಬಾಬು ಮತ್ತು ನಿರ್ದೇಶಕರುಗಳು ಇದ್ದರು.
ಮಡಿಕೇರಿ ಜು.3 : ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಇಂದು ನಡೆಯಿತು. ಚುನಾವಣಾ ಕಣದಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾಗೇಶ್ ಕುಂದಲಪಾಡಿ ಬಿ ಅವರು ನಾಮಪತ್ರ ಸಲ್ಲಿಸಿದರು. ಸೂಚಕರಾಗಿ ಕಿರಣ ಬಂಗಾರಕೋಡಿ, ಅನುಮೋದಕರಾಗಿ ಜಯರಾಮ ನಿಡ್ಯಮಲೆ ಬಿ ಇವರು ಅನುಮೋದಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಅಶೋಕ ಪೆರುಮುಂಡ ಎಂ ನಾಮಪತ್ರ ಸಲ್ಲಿಸಿದರು., ಸೂಚಕರಾಗಿ ಶೇಷಪ್ಪ ನಾಯ್ಕ ನಿಡ್ಯಮಲೆ ಹಾಗೂ ಅನುಮೋದಕರಾಗಿ ಹೊನ್ನಪ್ಪ ಅಮಚೂರು ಅನುಮೋದಿಸಿದರು. ಇನ್ನುಳಿದಂತೆ ಯಾವುದೇ ನಾಮಪತ್ರಗಳು ಬಾರದ ಹಿನ್ನೆಲೆಯಲ್ಲಿ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ನಾಗೇಶ್ ಕುಂದಲ್ಪಾಡಿ ಬಿ ಹಾಗೂ ಉಪಾಧ್ಯಕ್ಷರಾಗಿ ಅಶೋಕ ಪೆರುಮುಂಡ ಎಂ ಆಯ್ಕೆಯಾದರು. ಚುನಾವಣೆ ಅಧಿಕಾರಿ ಬಿ.ಜಿ.ಸಂದೀಪ್ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
ಮಡಿಕೇರಿ ಜು.3 : ಪರಿಸರ ಜಾಗೃತಿ ಮತ್ತು ಜಿಲ್ಲೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಆಗಬೇಕಾದ ಕಾರ್ಯಗಳ ಬಗ್ಗೆ ಗ್ರೀನ್ ಸಿಟಿ ಫೋರಂ ವತಿಯಿಂದ ನೂತನ ಜಿಲ್ಲಾಧಿಕಾರಿ ವೆಂಕಟ್‍ರಾಜಾ ಅವರ ಗಮನ ಸೆಳೆಯಲಾಯಿತು. ಜಿಲ್ಲಾಧಿಕಾರಿ ಕಚೇರಿಯಲ್ಲಿ ವೆಂಕಟ್‍ರಾಜಾ ಅವರನ್ನು ಭೇಟಿಯಾದ ಫೋರಂ ಅಧ್ಯಕ್ಷ ಚೆಯ್ಯಂಡ ಸತ್ಯ ಗಣಪತಿ ಹಾಗೂ ನಿರ್ದೇಶಕ ಕುಕ್ಕೇರ ಜಯ ಚಿಣ್ಣಪ್ಪ, ಗ್ರೀನ್ ಸಿಟಿ ಫೋರಂ ವತಿಯಿಂದ ಹಮ್ಮಿಕೊಳ್ಳಲಾಗುತ್ತಿರುವ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಜತೆಗೆ ಜಿಲ್ಲಾಡಳಿತ ವತಿಯಿಂದ ಕಾರ್ಯರೂಪಕ್ಕೆ ಬರಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಮಡಿಕೇರಿ ನಗರದಲ್ಲಿನ ಸ್ಟೋನ್‍ಹಿಲ್‍ನಲ್ಲಿರುವ ಕಸದ ರಾಶಿ ನಗರಕ್ಕೆಕಪ್ಪು ಚುಕ್ಕೆಯಾಗಿದೆ. ಅದಕ್ಕೆ ವೈಜ್ಞಾನಿಕವಾಗಿ ಪರಿಹಾರ ಕ್ರಮವನ್ನು ತುರ್ತಾಗಿ ಕಾರ್ಯರೂಪಕ್ಕೆ ತಂದು ನಗರದ ಸೌಂದರ್ಯ ಹಾಳಾಗದಂತೆ ಕ್ರಮ ವಹಿಸುವಂತೆ ಮನವಿ ಮಾಡಿದರು. ಪರಿಸರ ಸ್ನೇಹಿ ಪ್ರವಾಸೋದ್ಯಮ ಬೆಳೆಯಬೇಕು. ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಶೌಚಾಲಯ, ನೀರಿನ ವ್ಯವಸ್ಥೆ, ವಾಹನ ಪಾರ್ಕಿಂಗ್ ಸೇರಿ ಇತರೆ ಅಗತ್ಯ ಮೂಲ ಸೌಕರ್ಯ ವ್ಯವಸ್ಥೆಯನ್ನು ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಆಸಕ್ತಿ ವಹಿಸಬೇಕೆಂದು…
ಮಡಿಕೇರಿ ಜು.3 : ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಜು.8 ರಂದು ಕೊಡಗು ಜಿಲ್ಲೆಯ ವಿವಿಧ ಹಂತದ ಎಲ್ಲಾ ನ್ಯಾಯಾಲಯಗಳಲ್ಲಿ `ರಾಷ್ಟ್ರೀಯ ಲೋಕ್ ಅದಾಲತ್’ ನಡೆಯಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಡಿ.ಟಿ.ಪುಟ್ಟರಂಗಸ್ವಾಮಿ ತಿಳಿಸಿದ್ದಾರೆ. ನ್ಯಾಯಾಲಯಗಳಲ್ಲಿ ಹಲವು ಪ್ರಕರಣಗಳಿದ್ದು, ಇವುಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದೆ. ವಕೀಲರ ಸಹಕಾರದಿಂದ ಲೋಕ್ ಅದಾಲತ್ ಕಾರ್ಯಕ್ರಮ ಯಶಸ್ವಿಗೊಳಿಸಲಾಗುತ್ತದೆ ಎಂದು ಡಿ.ಟಿ.ಪುಟ್ಟರಂಗಸ್ವಾಮಿ ಹೇಳಿದ್ದಾರೆ. ಸಾರ್ವಜನಿಕರು ತಮ್ಮ ವ್ಯಾಜ್ಯ ಪೂರ್ವ ಮತ್ತು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಿಗೆ ತಕ್ಷಣ ಪರಿಹಾರ ಪಡೆದುಕೊಳ್ಳಲು ರಾಷ್ಟ್ರೀಯ ಲೋಕ ಅದಾಲತ್ ಸುವರ್ಣ ಅವಕಾಶವಾಗಿದೆ ಎಂದರು. ಲೋಕ ಅದಾಲತ್‍ನಲ್ಲಿ ರಾಜಿಯಾಗಬಲ್ಲ ಅಪರಾಧಿತ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣಗಳು, ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು, ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿನ ಪ್ರಕರಣಗಳು, ಕರ್ನಾಟಕ ರಿಯಲ್ ಎಸ್ಟೇಟ್…
ಮಡಿಕೇರಿ ಜು.3 : ಕಾಳುಮೆಣಸು ಕೊಡಗು ಜಿಲ್ಲೆಯ ಬಹು ವಾರ್ಷಿಕ ಸಾಂಬಾರು ಬೆಳೆ. ಇದನ್ನು ಕಾಫಿ, ಅಡಿಕೆ, ಏಲಕ್ಕಿ ತೋಟದಲ್ಲಿ ಅಂತರ ಬೆಳೆಯಾಗಿ ಜಿಲ್ಲೆಯಾದ್ಯಂತಹ ಬೆಳೆಯಲಾಗುತ್ತಿದೆ. ಇತ್ತೀಚೆಗೆ ಕಾಳು ಮೆಣಸು ಬೆಳೆಗೆ ಅನೇಕ ರೋಗಗಳು ತೀವ್ರಗತಿಯಲ್ಲಿ ಕಂಡು ಬರುತ್ತಿದ್ದು, ಕೃಷಿಕನಿಗೆ ಹೆಚ್ಚು ಆರ್ಥಿಕ ಹಾನಿಯನ್ನುಂಟು ಮಾಡುತ್ತೀವೆ. ಅದರಲ್ಲಿಯೂ ಮುಖ್ಯವಾಗಿ ಇತ್ತೀಚೆಗೆ ಕೊಡಗು ಜಿಲ್ಲೆಯಾದ್ಯಂತಹ ಕಾಫಿ ತೋಟದಲ್ಲಿ ಬೆಳೆಸಲಾಗುತ್ತಿರುವ ಕಾಳುಮೆಣಸಿನ ಬಳ್ಳಿಗಳಲ್ಲಿ ಎಲೆಗಳು ಚಿಕ್ಕದಾಗಿ, ಬಳ್ಳಿಗಳು ಸಾಯುವುದು ಇಲ್ಲ ಅಥವಾ ಬೆಳವಣಿಗೆಯೂ ಇಲ್ಲದೆ, ಕಾಳುಮೆಣಸು ಬಿಡದೆ ಇರುವ ಬಳ್ಳಿಗಳು ದಿನೇ ದಿನೇ ಹೆಚ್ಚಾಗುತ್ತಿರುತ್ತವೆ. ಇದಕ್ಕೆ ಮೂಲ ಕಾರಣ ನಂಜಾಣುವಿನ ಭಾದೆಗೆ ತುತ್ತಾಗುತ್ತಿರುವುದು. ಈ ನಿಟ್ಟಿನಲ್ಲಿ ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ನಂಜಾಣುವಿನ ಭಾದೆಗೆ ತುತ್ತಾಗಿರುವ ಬಳ್ಳಿಗಳನ್ನು ಪುನಶ್ಚೇತನಗೂಳಿಸಲು ಕೇರಳ ರಾಜ್ಯದ ಕ್ಯಾಲಿಕಟ್ ಭಾರತೀಯ ಸಾಂಬಾರು ಬೆಳೆಗಳ ಸಂಶೋಧನ ಸಂಸ್ಥೆ ಅವರು ಶಿಫಾರಸ್ಸು ಮಾಡಿರುವ ಸಮಗ್ರ ತಂತ್ರಜ್ಞಾನಗಳ ಪರಿಚಯವನ್ನು ರೈತರಿಗೆ ತಿಳಿಸಲು ಜಿಲ್ಲೆಯ 10 ತೋಟಗಳಲ್ಲಿ ಮೂಂಚೂಣಿ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿದೆ. ಕೃಷಿ ವಿಜ್ಞಾನ…
ಮಡಿಕೇರಿ ಜು.3 : ಸಿಕ್ಕಿಂ ರಾಜ್ಯದ ಬೌದ್ಧ ಸನ್ಯಾಸಿ ಸಮುದಾಯದ ಸಂಘ ಕ್ಷೇತ್ರದ ಮಾದರಿಯಲ್ಲಿ ಹೊಸ ಸಂಸತ್ ನಲ್ಲಿ ಪ್ರತ್ಯೇಕ ಕೊಡವ ಪ್ರಾತಿನಿಧ್ಯ ನೀಡಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿತು. ವಿವಿಧ ಬೇಡಿಕೆಗಳ ಪರ ಘೋಷಣೆಗಳನ್ನು ಕೂಗಿದ ಧರಣಿ ನಿರತರು ಸಂಸತ್ ನಲ್ಲಿ ಕೊಡವ ಪ್ರಾತಿನಿಧ್ಯದ ಕುರಿತು ಗಮನ ಸೆಳೆದರು. ಸೆಂಟ್ರಲ್ ವಿಸ್ಟಾ ಇದಕ್ಕಾಗಿ ಪ್ರತ್ಯೇಕ ವಿಶೇಷ ವರ್ಚುವಲ್ ಮತ್ತು ಅಮೂರ್ತ ಲೋಕಸಭೆ ಸ್ಥಾನಗಳನ್ನು ಅತ್ಯಂತ ಸೂಕ್ಷ್ಮ ಬುಡಕಟ್ಟು ಜನಾಂಗ ಕೊಡವರಿಗೆ ನೀಡಬೇಕು. ಹೊಸ ಸಂಸತ್ತಿನಲ್ಲಿ ಪ್ರತಿನಿಧಿಸಲು ವಿಶೇಷವಾದ ಕೊಡವ ಸಂಸದೀಯ ಮತ್ತು ಕೊಡವ ಅಸೆಂಬ್ಲಿ ಕ್ಷೇತ್ರಗಳನ್ನು ರಚಿಸಬೇಕು ಎಂದು ಒತ್ತಾಯಿಸಿದರು. ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಮಾತನಾಡಿ ವಿಶೇಷವಾದ ಕೊಡವ ಅದೃಶ್ಯ-ವರ್ಚುವಲ್ ಕ್ಷೇತ್ರಗಳನ್ನು ರಚಿಸಿ ಕೇಂದ್ರೀಯ ವಿಸ್ಟಾ ಅಂದರೆ ಹೊಸ ಸಂಸತ್ತಿನಲ್ಲಿ ನಮಗೆ ಪ್ರಾತಿನಿಧ್ಯವನ್ನು ಒದಗಿಸುವುದರ ಮೂಲಕ ಕೊಡವರು ನೈಸರ್ಗಿಕ ನ್ಯಾಯ ಮತ್ತು ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಶಾಶ್ವತವಾಗಿ ಸಾಂವಿಧಾನಿಕ ಕಾರ್ಯವಿಧಾನದಲ್ಲಿ ಭಾಗವಹಿಸಲು…
ಮಡಿಕೇರಿ ಜು.3 : ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ವಾರ್ಷಿಕ ಮಹಾಸಭೆ ಜು.9 ರಂದು ಬೆಳಗ್ಗೆ 10.30 ಗಂಟೆಗೆ ಸುಂಟಿಕೊಪ್ಪದ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸಮಾಜದ ಜಿಲ್ಲಾಧ್ಯಕ್ಷ ಗೌತಮ್ ಶಿವಪ್ಪ ತಿಳಿಸಿದ್ದಾರೆ. ಮಹಾಸಭೆಯ ನಂತರ ಜಿಲ್ಲಾ ಸಮಿತಿಯ ಪುನರ್ ರಚನಾ ಪ್ರಕ್ರಿಯೆ ನಡೆಯಲಿದ್ದು, ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗೆ 95917 93301 ನ್ನು ಸಂಪರ್ಕಿಸಬಹುದಾಗಿ.
ನಾಪೋಕ್ಲು ಜು.3 : ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯ ನಿಸರ್ಗ ಇಕೋ ಕ್ಲಬ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ರೋಟ್ರಿ ಇಂಟ್ರಾಕ್ಟ್ ಕ್ಲಬ್, ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಮಡಿಕೇರಿ ವಲಯ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ವಿಶ್ವ ಪರಿಸರದಿನ ಹಾಗೂ ವನಮಹೋತ್ಸವವನ್ನು ವಿವಿಧ ತಳಿಯ ಗಿಡಗಳನ್ನು ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಲೆಯ ಆವರಣದಲ್ಲಿ ಗಿಡನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ವಲಯ ಆರ್‍ಎಫ್‍ಒ ರವೀಂದ್ರ, ನಮ್ಮ ಒಟ್ಟಾರೆ ಭೂಮಿಯಲ್ಲಿ ಕನಿಷ್ಠ ಪಕ್ಷ ಶೇ33ರಷ್ಟು ಅರಣ್ಯ ಇದ್ದರೆ ಮಾತ್ರ ನಮ್ಮ ನಾಗರೀಕತೆ,ಹಸಿರು ಹೊದಿಕೆ ಇರುತ್ತದೆ. ಇಲ್ಲವಾದರೆ ಯಾವುದು ಉತ್ತುಂಗಕ್ಕೆ ಹೆರಲು ಸಾಧ್ಯವಿಲ್ಲ, ಇವಾಗ ಗೂಗಲ್ ನಲ್ಲಿ ಸರ್ಚ್ ಮಾಡಿದರೆ ಶೇ.21ರಷ್ಟು ಮಾತ್ರ ಅರಣ್ಯ ಕಾಣಲು ಸಾಧ್ಯ ಎಂದರು. ಶಾಲಾ ಕಾಲೇಜುಗಳಲ್ಲಿ ಮತ್ತು ನಮ್ಮ ಮನೆ, ಕಚೇರಿಗಳ ಸುತ್ತಮುತ್ತಲಿನ ಪರಿಸರದಲ್ಲಿ ಎಲ್ಲರೂ ಗಿಡ ನೆಟ್ಟು ಪರಿಸರವನ್ನು ಸಂರಕ್ಷಿಸಬೇಕಿದೆ ಎಂದರು. ಶಾಲೆಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಹಾರಿಸ್ ಮಾತನಾಡಿ, ವನಮಹೋತ್ಸವ ಕಾರ್ಯಕ್ರಮ ಒಂದು…
ಮಡಿಕೇರಿ ಜು.3 : ಭಾರತೀಯ ಸೇನೆಯ ಅವಿಭಾಜ್ಯ ಭಾಗವಾಗಿರುವ ಭಾರತೀಯ ವಾಯು ಸೇನೆಯು (ಐಎಎಫ್) ಪ್ರಪಂಚದ ಅತಿ ದೊಡ್ಡ ವಾಯು ಸೇನೆಗಳಲ್ಲಿ ಒಂದು. ವಾಯು ಸೇನೆಯ ಪ್ರಥಮ ಕರ್ತವ್ಯ ದೇಶದ ಮೈಮಾನಿಕ ವಲಯದ ರಕ್ಷಣೆಯಾಗಿದ್ದು, ಯುದ್ಧದಂತಹ ತುರ್ತು ಕಾಲಪರಿಸ್ಥಿತಿಯಲ್ಲಿ ಕಾರ್ಯಾಚರಣೆ ನಡೆಸಲಿದೆ. ಇನ್ನು ನೈಸರ್ಗಿಕ ವಿಕೋಪವುಂಟಾದಲೂ ರಕ್ಷಣಾ ಕಾರ್ಯಾಚರಣೆಗೆ ನೇತೃತ್ವ ವಹಿಸಲಿದೆ ಎಂದು ಭಾರತೀಯ ವಾಯುಸೇನೆಯ ಫ್ಲೈಟ್ ಲೆಫ್ಟಿನೆಂಟ್ ಗೌರವ ಶರ್ಮ ತಿಳಿಸಿದರು. ಭಾರತೀಯ ವಾಯುಸೇನೆಯ ವತಿಯಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕೊಡಗು ಜಿಲ್ಲೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ( ಎನ್.ಎಸ್.ಎಸ್.) ಸಂಯುಕ್ತಾಶ್ರಯದಲ್ಲಿ ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಶಾಲೆಯ ಎನ್.ಎಸ್.ಎಸ್.ಘಟಕದ ಸಹಯೋಗದೊಂದಿಗೆ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಭಾರತೀಯ ವಾಯು ಸೇನೆಯ ವತಿಯಿಂದ ವಾಯುಸೇನೆಯ ಬಸ್‍ನಲ್ಲಿ ಅಳವಡಿಸಿರುವ ಸೇನೆಯ ಕುರಿತು ಏರ್ಪಡಿಸಿದ್ದ ವಿಡಿಯೋ- ಚಿತ್ರಗಳೊಂದಿಗೆ ಮಾಹಿತಿ ನೀಡಿದ ಅವರು ವಿದ್ಯಾರ್ಥಿಗಳು ಭಾರತೀಯ ಸೇನೆ ಬಗ್ಗೆ ಹೆಚ್ಚಿನ ಜ್ಞಾನ ಗಳಿಸಿಕೊಂಡು ಭವಿಷ್ಯದಲ್ಲಿ ಭಾರತೀಯ ಸೇನೆಗೆ ಸೇರ್ಪಡೆಗೊಳ್ಳಲು…






