ಸೋಮವಾರಪೇಟೆ ಜು.2 : ಅವಿರತ ಸಂಸ್ಥೆ ವತಿಯಿಂದ ಕಿರಗಂದೂರು ಸರ್ಕಾರಿ ಮಾದರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಿಸಿದರು. ಸಂಸ್ಥೆಯ ಸದಸ್ಯರಾದ ಸಾಹಿತಿ ಹಾಗು ವೈದ್ಯ ಶಾಲಿನಿ ಹಾಗು ನಿವೃತ್ತ ಶಿಕ್ಷಕ ಲಕ್ಷö್ಮಪ್ಪ ಅವರುಗಳು ನೋಟ್‌ಬುಕ್ ವಿತರಿಸಿದರು. ನಂತರ ನಿವೃತ್ತ ಶಿಕ್ಷಕ ಲಕ್ಷ್ಮಪ್ಪ ಮಾತನಾಡಿ, ಪಠ್ಯ ಪುಸ್ತಕಗಳನ್ನು ಸರ್ಕಾರ ವಿತರಿಸುತ್ತದೆ. ಬರೆಯುವ ಪುಸ್ತಕಗಳನ್ನು ನೀಡುತ್ತಿಲ್ಲ. ಇಂದಿಗೂ ಸಾಕಷ್ಟು ಬಡ ಮಕ್ಕಳಿಗೆ ಮಸ್ತಕಗಳನ್ನು ತೆಗೆದುಕೊಳ್ಳುವುದಕ್ಕೆ ಕಷ್ಟದ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಕಳೆದ ಹಲವು ವರ್ಷಗಂದ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕಗಳನ್ನು ನೀಡುತ್ತಿದ್ದೇವೆ ಎಂದರು. ಇತ್ತಿಚಿನ ದಿನಗಳಲ್ಲಿ ಬಹುತೇಕ ಸರ್ಕಾರಿ ಶಾಲೆಗಳು ಮುಚ್ಚುವಂತಹ ಸ್ಥಿತಿಯಲ್ಲಿವೆ. ಸರ್ಕಾರಿ ಶಾಲೆಯಲ್ಲಿ ಓದಿದಂತಹ ಸಾಕಷ್ಟು ವಿದ್ಯಾರ್ಥಿಗಳು ಒಳ್ಳೆಯ ಹುದ್ದೆಗಳನ್ನು ಆಲಂಕರಿಸಿದ್ದಾರೆ. ವಿದ್ಯಾವಂತರಾದ ನಾವುಗಳು ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಸೇರಿಸಲು ಮತ್ತು ಆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ. ಅವಿರತ ಸಂಸ್ಥೆ ಕಳೆದ ಹದಿನೈದು ವರ್ಷಗಳಿಂದ ನಿರಂತರವಾಗಿ ಸೇವೆಯನ್ನು ಮಾಡುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರೌಢಶಾಲೆಯ…
ಲೇಖಕ: admin
ಸೋಮವಾರಪೇಟೆ ಜು.2 : ಸೋಮವಾರಪೇಟೆ ತಾಲ್ಲೂಕು ಕಾನೂನು ಸೇವೆಗಳ ಸಮಿತಿ. ವಕೀಲರ ಸಂಘ, ತಾಲೂಕು ಆಡಳಿತ ವತಿಯಿಂದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಾಗಾರ ಈಚೆಗೆ ತಾಲ್ಲೂಕು ಆಡಳಿತ ಸೌಧ ಸಭಾಂಗಣದಲ್ಲಿ ನಡೆಯಿತು. ಸೋಮವಾರಪೇಟೆ ಜೆಎಂಎಫ್‌ಸಿಯ ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೋಕುಲ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಾಲಕಾರ್ಮಿಕ ಪದ್ಧತಿ ಸಂಪೂರ್ಣ ನಿಲ್ಲಬೇಕು. ಇದರ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ. ಬಾಲಕಾರ್ಮಿಕರು ಕಂಡುಬಂದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದರು. ವಕೀಲರ ಸಂಘದ ಅಧ್ಯಕ್ಷರಾದ ಕಾಟ್ನಮನೆ ವಿಠ್ಠಲ್‌ಗೌಡ ಮಾತನಾಡಿ, ಪಾಲಕಾರ್ಮಿಕ ಪದ್ಧತಿ ಒಂದು ಸಾಮಾಜಿಕ ಪಿಡುಗಾಗಿದೆ. ಪದ್ಧತಿಯನ್ನು ಸಂಪೂರ್ಣವಾಗಿ ನಿಷೇಧಿಸುವ ನಿಟ್ಟಿನಲ್ಲಿ 1986 ರಲ್ಲಿ ಬಾಲ ಕಾರ್ಮಿಕ ನಿಷೇಧ ಕಾಯ್ದೆಯನ್ನು ತರಲಾಗಿದೆ ಎಂದರು. ಕಾನೂನು ಮೀರಿದವರಿಗೆ ತಕ್ಕ ಶಿಕ್ಷೆಯಾಗಲಿದೆ ಎಂದರು. ತಹಸೀಲ್ದಾರ್ ಎಸ್.ಎನ್.ನರಗುಂದ, ಹಿರಿಯ ಕಾರ್ಮಿಕ ಅಧಿಕಾರಿ ಕೆ.ಎನ್.ಲೀನಾ, ತಾಲೂಕು ಕಚೇರಿ, ಕಾರ್ಮಿಕ ಇಲಾಖೆ, ಖಜಾನೆಯ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಇದ್ದರು.
ಮಡಿಕೇರಿ ಜು.2 : ಕಾರು ಮತ್ತು ಈಚರ್ ವಾಹನದ ನಡುವೆ ಡಿಕ್ಕಿ ಸಂಭವಿಸಿ ಅಗ್ನಿ ಕಾಣಿಸಿಕೊಂಡ ಪರಿಣಾಮ ಕಾರು ಚಾಲಕ ಸಜೀವ ದಹನವಾದ ಘಟನೆ ಗುಂಡ್ಲುಪೇಟೆಯ ಹಿರೀಕಾಟಿ ಗೇಟ್ ಬಳಿ ನಡೆದಿದೆ. ಮೈಸೂರಿನ ಮುಜಾಮಿಲ್ ಅಹಮದ್(35) ಮೃತಪಟ್ಟ ಚಾಲಕನಾಗಿದ್ದು, ಈಚರ್ ವಾಹನ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಈಚರ್ ವಾಹನದಲ್ಲಿದ್ದವರು ಹೊರಗೆ ಹಾರಿ ಅಪಾಯದಿಂದ ಪಾರಾಗಿದ್ದಾರೆ. ಆದರೆ ಕಾರು ಚಾಲಕ ಹೊರಬರಲಾಗದೆ ಸಜೀವವಾಗಿ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಚಾಮರಾಜನಗರ ಪೊಲೀಸ್ ವರಿಷ್ಟಾಧಿಕಾರಿ ಪದ್ಮಿನಿ ಸಾಹೋ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋಣಿಕೊಪ್ಪ ಜು.2 : ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಥಮ ವರ್ಷದ ಮಹಾಸಭೆ ಮತ್ತು ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಕಾರ್ಯಕ್ರಮ ಗೋಣಿಕೊಪ್ಪ ಕಕೂನ್ ಸಭಾಂಗಣದಲ್ಲಿ ನಡೆಯಿತು. 2022 ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂಘದ ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರು ತಮ್ಮ ಸೋದರ ಮಾವಂದಿರಾದ ದೇಯಂಡ ಪೂಣಚ್ಚ ಹಾಗೂ ಉಮೇಶ್ ಜ್ಞಾಪಕಾರ್ಥದ ಅತ್ಯುತ್ತಮ ಗ್ರಾಮೀಣ ವರದಿ ಪ್ರಶಸ್ತಿ, ವಿರಾಜಪೇಟೆ ತಾಲೂಕು ಸಂಘದ ಅಧ್ಯಕ್ಷರಾಗಿದ್ದ ಸಣ್ಣುವಂಡ ಶ್ರೀನಿವಾಸ್ ಚಂಗಪ್ಪ ಅವರು ತಮ್ಮ ತಂದೆ ಸಣ್ಣುವಂಡ ಮಾದಪ್ಪ ಹಾಗೂ ತಾಯಿ ಜಾನಕಿ ಮಾದಪ್ಪ ಜ್ಞಾಪಕಾರ್ಥದ ಪರಿಸರ ಕುರಿತ ವರದಿ ಪ್ರಶಸ್ತಿಯನ್ನು ವಿಜಯ ಕರ್ನಾಟಕ ಪತ್ರಿಕೆ ವರದಿಗಾರ ಕೆ. ಬಿ. ಜಗದೀಶ್ ಜೋಡುಬೀಟಿ, ರಾಷ್ಟ್ರೀಯ ಸಮಿತಿ ಸದಸ್ಯರಾಗಿದ್ದ ಎಸ್. ಎ. ಮುರುಳಿಧರ್ ಅವರು ಸಹೋದರ ಗಣೇಶ್ ಜ್ಞಾಪಕಾರ್ಥದ ಅತ್ಯುತ್ತಮ ಕ್ರೀಡಾ ವರದಿ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆ ವರದಿಗಾರ ಅಣ್ಣೀರ ಹರೀಶ್ ಮಾದಪ್ಪ ಸ್ವೀಕರಿಸಿದರು. ರಾಜ್ಯ ಪ್ರಶಸ್ತಿ ಪಡೆದ…
ಮಡಿಕೇರಿ ಜು.2 : ಕೊಡವ ಕುಟುಂಬ ತಂಡಗಳ ನಡುವೆ ನಡೆಯಲಿರುವ 24ನೇ ವರ್ಷದ ಹಾಕಿ ಪಂದ್ಯಾವಳಿ ‘ಕುಂಡ್ಯೋಳಂಡ ಹಾಕಿ ನಮ್ಮೆ-2024’ರ ಕೈಪಿಡಿ ಬಿಡುಗಡೆ ಮಾಡಲಾಯಿತು. ವೆಸ್ಟ್ ಕೊಳಕೇರಿಯಲ್ಲಿರುವ ಕುಂಡ್ಯೋಳಂಡ ಐನ್ ಮನೆ ಆವರಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣಕೈಪಿಡಿಅನಾವರಣ ಮಾಡಿದರು. ಬಳಿಕ ಮಾತನಾಡಿದ ಪಾಂಡಂಡ ಬೋಪಣ್ಣ, ಪಂದ್ಯಾವಳಿ ಆಯೋಜನೆ ಕೇವಲ ಒಂದು ಕುಟುಂಬದ ಜವಾಬ್ದಾರಿಯಲ್ಲ. ಎಲ್ಲರೂ ಕೈಜೋಡಿಸಿದಾಗ ಮಾತ್ರ ಯಶಸ್ವಿಯಾಗಿ ನಡೆಸಲು ಸಾಧ್ಯ. ಕೊಡವ ಹಾಕಿ ಅಕಾಡೆಮಿ ವತಿಯಿಂದ ಎಲ್ಲಾ ರೀತಿಯ ನೆರವನ್ನು ಕುಂಡ್ಯೋಳಂಡ ಕುಟುಂಬಕ್ಕೆ ನೀಡಲಾಗುವುದುಎಂದು ಭರವಸೆ ನೀಡಿದರು. ಪಂದ್ಯಾವಳಿಗೆ ಒಂದು ವರ್ಷ ಮುಂಚಿತವಾಗಿಯೇ ಬೇಕಾದಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಆರ್ಥಿಕ ಕ್ರೋಢೀಕರಣ ವಿಚಾರದಲ್ಲಿಯೂ ಕುಟುಂಬದ ಪ್ರತಿಯೊಬ್ಬರು ಮುತುವರ್ಜಿ ವಹಿಸಬೇಕು. ಕೈಪಿಡಿಯನ್ನು ಅಚ್ಚುಕಟ್ಟಾಗಿ, ಆಕರ್ಷಕ ರೀತಿಯಲ್ಲಿ ಸಿದ್ಧಪಡಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಹಾಕಿ ಹಬ್ಬ ಸಮಿತಿ ಅಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಮಾತನಾಡಿ, ನಮ್ಮದು ಸಣ್ಣ ಕುಟುಂಬ. ಜನಸಂಖ್ಯೆಯಲ್ಲಿಯೂ ಕಡಿಮೆ ಪ್ರಮಾಣದಲ್ಲಿದ್ದೇವೆ. ಪಂದ್ಯಾವಳಿ ಆಯೋಜನೆಯ…
ಮಡಿಕೇರಿ ಜು.2 : ಗೋಣಿಕೊಪ್ಪಲು ರೋಟರಿ ಸಂಸ್ಥೆಗೆ ವಿವಿಧ ಕಾಯ೯ಯೋಜನೆಗಳಿಗಾಗಿ ರೋಟರಿ ಜಿಲ್ಲೆಯಲ್ಲಿ ಪ್ಲಾಟಿನಂ ಪ್ಲಸ್ ಪ್ರಶಸ್ತಿ ದೊರಕಿದೆ. ಮಂಗಳೂರಿನಲ್ಲಿ ಆಯೋಜಿತ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಗೋಣಿಕೊಪ್ಪಲು ರೋಟರಿ ಕ್ಲಬ್ ಅಧ್ಯಕ್ಷೆ ಜೆ.ಕೆ.ಸುಭಾಷಿಣಿ, ಕಾಯ೯ದಶಿ೯ ಅರುಣ್ ತಮ್ಮಯ್ಯ ಮತ್ತು ಸದಸ್ಯರು ಜಿಲ್ಲಾ ರೋಟರಿ ಗವನ೯ರ್ ಆಗಿದ್ದ ಪ್ರಕಾಶ್ ಕಾರಂತ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಗೋಣಿಕೊಪ್ಪಲು ರೋಟರಿ ಸಂಸ್ಥೆಯು 2022-23 ನೇ ರೋಟರಿ ವಷ೯ದಲ್ಲಿ 78 ಯೋಜನೆಗಳನ್ನು ಯಶಸ್ವಿಯಾಗಿ ಕಾಯ೯ಗತಗೊಳಿಸಿತ್ತು. ಪಿರಿಯಾಪಟ್ಟಣದಲ್ಲಿ ಐಕಾನ್ ರೋಟರಿ ಕ್ಲಬ್ ಎಂಬ ಹೊಸ ರೋಟರಿ ಸಂಸ್ಥೆಯನ್ನೂ 54 ಸದಸ್ಯರಿಂದ ಪ್ರಾರಂಭಿಸಲಾಗಿತ್ತು. ಗೋಣಿಕೊಪ್ಪಲು ಸಕಾ೯ರಿ ಪ್ರಾಥಮಿಕ ಶಾಲೆಯ 435 ವಿದ್ಯಾಥಿ೯ಗಳಿಗೆ ಸಮವಸ್ತ್ರ ನೀಡಿಕೆ. ಕಳತ್ತಮಾಡು , ಹೊಸೂರು, ಪಾಲಿಬೆಟ್ಟ ಸಕಾ೯ರಿ ಶಾಲೆಗಳಿಗೆ ಟೇಬಲ್, ಚೇರ್, ಲ್ಯಾಪ್ ಟಾಪ್ ಸೇರಿದಂತೆ 3 ಲಕ್ಷ ಮೌಲ್ಯದ ಪೀಠೋಪಕರಣಗಳನ್ನು ನೀಡಲಾಗಿತ್ತು. ಅಂತೆಯೇ ಗೋಣಿಕೊಪ್ಪ ರೋಟರಿ ಕ್ಲಬ್ ಆಯೋಜಿಸಿದ್ದ ಆರೋಗ್ಯ ಸಿರಿ ಯೋಜನೆಯಡಿಯಲ್ಲಿ ರಕ್ತದಾನ ಶಿಬಿರ, ನೇತ್ರ ಚಿಕಿತ್ಸಾ ಶಿಬಿರಗಳೂ ಸಾವ೯ಜನಿಕರಿಗೆ ಪ್ರಯೋಜನಕಾರಿಯಾಗಿದ್ದವು.…
ನಾಪೋಕ್ಲು ಜು.2 : ಲಯನ್ಸ್ ಕ್ಲಬ್ ನಿಂದ ನಮಗೆ ಏನು ಲಾಭ ಎನ್ನುವ ಬದಲು ನಾವು ಲಯನ್ಸ್ ಕ್ಲಬ್ ಮೂಲಕ ಸಮಾಜಕ್ಕೆ ಏನು ಕೊಡಬಲ್ಲೆವು ಎನ್ನುವುದು ಮುಖ್ಯವಾಗಿರಬೇಕೆಂದು ಲಯನ್ಸ್ ಉಪರಾಜ್ಯಪಾಲೆ ಭಾರತೀ ಬಿ.ಎಂ ಹೇಳಿದರು. ಅವರು ನಾಪೋಕ್ಲು ಕೊಡವ ಸಮಾಜದಲ್ಲಿ ಲಯನ್ಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಸ್ನೇಹ ವಾತ್ಸಲ್ಯದೊಂದಿಗೆ ಸೇವಾ ಮನೋಭಾವವನ್ನು ವೃದ್ಧಿಸಿಕೊಂಡು ಸಮಾಜಮುಖಿ ಕೆಲಸ ಮಾಡಲು ಲಯನ್ಸ್ ಕ್ಲಬ್ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಸಮಾಜದ ಒಳಿತಿಗೆ ಪ್ರತಿಯೊಬ್ಬರು ಲಯನ್ಸ್ ಸಂಸ್ಥೆಯ ಜೊತೆ ಕೈಜೋಡಿ ಸಹಕರಿಸುವಂತೆ ಮನವಿ ಮಾಡಿದರು. ನಂತರ ನೂತನವಾಗಿ ಆಯ್ಕೆಯಾಗಿರುವ ಕ್ಲಬ್ ನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ, ಮಾರ್ಗದರ್ಶನ ನೀಡಿ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭ ಲಯನ್ಸ್ ಕ್ಲಬ್ ನ ಬ್ಯಾನರ್ ಹಾಗೂ 5. ಸಾವಿರ ರೂ ದೇಣಿಗೆಯನ್ನು ನಾಪೋಕ್ಲು ಕ್ಲಬ್ಬಿನ ಪದಾಧಿಕಾರಿಗಳಿಗೆ ನೀಡಿ ಶುಭ ಹಾರೈಸಿದರು. ನಿರ್ಗಮಿತ ಅಧ್ಯಕ್ಷ ಕುಂಡಿಯೊಳಂದ ಗಣೇಶ್ ಮುತ್ತಪ್ಪನವರ ಅಧ್ಯಕ್ಷತೆಯಲ್ಲಿ ಜರುಗಿದ…
ಮಡಿಕೇರಿ ಜು.2 : ಸಿಕ್ಕಿಂ ರಾಜ್ಯದ ಬೌದ್ಧ ಸನ್ಯಾಸಿ ಸಮುದಾಯದ ಸಂಘ ಕ್ಷೇತ್ರದ ಮಾದರಿಯಲ್ಲಿ ಹೊಸ ಸಂಸತ್ ನಲ್ಲಿ ಪ್ರತ್ಯೇಕ ಕೊಡವ ಪ್ರಾತಿನಿಧ್ಯಕ್ಕಾಗಿ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಜು.3 ರಂದು ಬೆಳಗ್ಗೆ 10.30 ಗಂಟೆಗೆ ಮಡಿಕೇರಿಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸೆಂಟ್ರಲ್ ವಿಸ್ಟಾ ಇದಕ್ಕಾಗಿ ಪ್ರತ್ಯೇಕ ವಿಶೇಷ ವರ್ಚುವಲ್ ಮತ್ತು ಅಮೂರ್ತ ಲೋಕಸಭೆ ಸ್ಥಾನಗಳನ್ನು ಅತ್ಯಂತ ಸೂಕ್ಷ್ಮ ಬುಡಕಟ್ಟು ಜನಾಂಗ ಕೊಡವರಿಗೆ ನೀಡಬೇಕೆಂದು ಒತ್ತಾಯಿಸಿ ರಾಷ್ಟçಪತಿಗಳು ಹಾಗೂ ಕೇಂದ್ರ ಸರ್ಕಾರದ ಪ್ರತಿನಿಧಿಗಳಿಗೆ ಜಿಲ್ಲಾಡಳಿತದ ಮೂಲಕ ಮನವಿ ಪತ್ರ ಸಲ್ಲಿಸುವುದಾಗಿ ಹೇಳಿದ್ದಾರೆ. ಸಿಕ್ಕಿಂ ರಾಜ್ಯದ ಬೌದ್ಧ ಸನ್ಯಾಸಿ ಸಮುದಾಯದ ಸಂಘ ಕ್ಷೇತ್ರದ ಮಾದರಿಯಲ್ಲಿ ಕೊಡವರಿಗೂ ಸಂಸತ್ ನಲ್ಲಿ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಮಡಿಕೇರಿ ಜು.1 : ಜಲ ಮೂಲವನ್ನು ಉಳಿಸಲು ಅರಣ್ಯ ಸಂರಕ್ಷಿಸುವುದು ಅತ್ಯಗತ್ಯ ಎಂದು ಕೊಡಗು ಜಿಲ್ಲೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ಎನ್.ಮೂರ್ತಿ ಪ್ರತಿಪಾದಿಸಿದ್ದಾರೆ. ಅರಣ್ಯ ಇಲಾಖೆಯ ಪ್ರಾದೇಶಿಕ ವಲಯ, ಸಾಮಾಜಿಕ ಅರಣ್ಯ ವಲಯ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಇವರ ಜಂಟಿ ಆಶ್ರಯದಲ್ಲಿ ನಗರದ ಎಫ್‍ಎಂಸಿ ಕಾಲೇಜಿನಲ್ಲಿ ‘ವನಮಹೋತ್ಸವ ಸಪ್ತಾಹ’ಕ್ಕೆ ಶನಿವಾರ ಗಿಡ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ನದಿ ಮೂಲ ಇರುವುದೇ ಅರಣ್ಯ ಪ್ರದೇಶದಲ್ಲಿ ಎಂಬುದನ್ನು ಯಾರೂ ಸಹ ಮರೆಯಬಾರದು. ಆದ್ದರಿಂದ ಅರಣ್ಯವನ್ನು ರಕ್ಷಿಸಿದಲ್ಲಿ ಪ್ರತಿಯೊಬ್ಬರೂ ಸಮೃದ್ಧಿಯ ಬದುಕು ಕಾಣಬಹುದು ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರು ಹೇಳಿದರು. ಕಾಡು ಉಳಿದರೆ ನಾಡು ಉಳಿದಂತೆ. ಆದ್ದರಿಂದ ಗಿಡ ಮರಗಳನ್ನು ಬೆಳೆಸುವುದರಿಂದ ಅಂತರ್ಜಲ ಮಟ್ಟವನ್ನು ಹೆಚ್ಚಿಸಬಹುದು. ಇದರಿಂದ ಮಳೆಯಾಗುತ್ತದೆ ಎಂದು ಮೂರ್ತಿ ಅವರು ಒತ್ತಿ ಹೇಳಿದರು. ಭೂಮಿಯಲ್ಲಿ ಶೇ.33 ರಷ್ಟು ಅರಣ್ಯ ಇರಬೇಕು. ಆದರೆ ಶೇ.23 ರಷ್ಟು ಮಾತ್ರ ಅರಣ್ಯ ಇದೆ. ಇನ್ನೂ 10 ರಷ್ಟು ಅರಣ್ಯ/…
ಮಡಿಕೇರಿ ಜು.1 : ಪ್ರಾಕೃತಿಕ ವಿಕೋಪ ಸಂಭವಿಸಿದಲ್ಲಿ ಹೇಗೆ ರಕ್ಷಣಾ ಕಾರ್ಯ ಕೈಗೊಳ್ಳಬೇಕು ಎಂಬ ಬಗ್ಗೆ ‘ಅಣಕು ಪ್ರದರ್ಶನ’ ಪ್ರಾತ್ಯಕ್ಷಿಕೆಯು ತಾಲ್ಲೂಕಿನ ಹೆಬ್ಬೆಟ್ಟಗೇರಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ನೇತೃತ್ವದಲ್ಲಿ ನಡೆಯಿತು. ಜಿಲ್ಲಾಡಳಿತ, ಎನ್‍ಡಿಆರ್‍ಎಫ್, ಪೊಲೀಸ್ ಮತ್ತು ಅಗ್ನಿಶಾಮಕ, ಗೃಹ ರಕ್ಷಕ ದಳ ಹೀಗೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ‘ಅಣಕು ಪ್ರದರ್ಶನ’ ಪ್ರಾತ್ಯಕ್ಷಿಕೆ ನಡೆಯಿತು. ಭೂಕುಸಿತ, ಪ್ರವಾಹ ಮತ್ತಿತರ ವಿಪತ್ತುಗಳು ಸಂಭವಿಸಿದ ಸಂದರ್ಭದಲ್ಲಿ ರಕ್ಷಣಾ ಕಾರ್ಯಗಳನ್ನು ಹೇಗೆ ಕೈಗೊಳ್ಳಬೇಕು ಎಂಬ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. ಪ್ರಾಕೃತಿಕ ವಿಕೋಪ ಸಂಭವಿಸಿದಲ್ಲಿ ಅಂತಹ ಸ್ಥಳದಲ್ಲಿ ವಿದ್ಯುತ್ ಕಡಿತಗೊಳಿಸುವುದು, ಘಟನಾ ಸ್ಥಳವನ್ನು ಸೀಲು ಮಾಡುವುದು, ಬಳಿಕ ರಕ್ಷಣಾ ಕಾರ್ಯ ಕೈಗೊಂಡು ಪ್ರಥಮ ಚಿಕಿತ್ಸೆ ನೀಡುವುದು, ಗಂಭೀರ ಗಾಯವಾಗಿದ್ದಲ್ಲಿ ಆಸ್ಪತ್ರೆಗೆ ಕರೆದೊಯ್ಯುವುದು… ಹೀಗೆ 9 ಕ್ಕೂ ಹೆಚ್ಚು ರೀತಿಯ ಅಣಕು ಪ್ರದರ್ಶನ ಜರುಗಿತು. ಅಣಕು ಪ್ರದರ್ಶನದಲ್ಲಿ ಎನ್‍ಡಿಆರ್‍ಎಫ್, ಪೊಲೀಸ್, ಅಗ್ನಿಶಾಮಕ, ಗೃಹರಕ್ಷಕ ದಳ ಜೊತೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿಯವರು ಕೈಜೋಡಿಸಿದರು.…






