ಲೇಖಕ: admin

ಮಡಿಕೇರಿ ಜೂ.30 : ಕೊಡಗು ಜಿಲ್ಲಾ ಯುವ ಒಕ್ಕೂಟ ಹಾಗೂ ಮಡಿಕೇರಿ ತಾಲೂಕು ಒಕ್ಕೂಟದಿಂದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರನ್ನು ಅಭಿನಂದಿಸಲಾಯಿತು. ಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ಪಿ.ಸುಕುಮಾರ್, ತಾಲೂಕು ಯುವ ಒಕ್ಕೂಟ ಅಧ್ಯಕ್ಷ ಬಾಳಾಡಿ ದಿಲೀಪ್ ಕುಮಾರ್ ಸೇರಿದಂತೆ ಪ್ರಮುಖರು ಶಾಸಕರಿಗೆ ಹೂವುಗುಚ್ಛ ನೀಡಿ ಅಭಿನಂದಿಸಿ, ಜಿಲ್ಲಾ ಯುವ ಚಟುವಟಿಕೆಗಳಿಗೆ ಸಹಕರಿಸುವಂತೆ ಮನವಿ ಮಾಡಿದರು. ಯುವ ಒಕ್ಕೂಟದ ಎಲ್ಲ ಚಟುವಟಿಕೆಗಳಿಗೆ ಸಂಪೂರ್ಣ ಸಹಕಾರ ನೀಡುವದಾಗಿ ಶಾಸಕ ಮಂಥರ್ ಗೌಡ ನಿಯೋಗಕ್ಕೆ ಭರವಸೆ ನೀಡಿದರು. ಈ ಸಂದರ್ಭ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಕೆ.ಪ್ರಮೋದ್ ಗಣಪತಿ, ಮಡಿಕೇರಿ ತಾಲೂಕು ಯುವ ಒಕ್ಕೂಟ ಕಾರ್ಯಕಾರಿ ಸದಸ್ಯರಾದ ಜಯಕುಮಾರ್, ನಿಖಿಲ್ ಬೆಳಿಯ್ಯಪ್ಪ, ಇಂದುಮತಿ, ಮದನ್ ಹಾಗೂ ಸದಸ್ಯರು ಹಾಜರಿದ್ದರು.

Read More

ವಿರಾಜಪೇಟೆ ಜೂ.30 : ವಿರಾಜಪೇಟೆಯ ಕಾವೇರಿ ಶಾಲೆಯಲ್ಲಿ(ಕೃತಕ ವಿಜ್ಞಾನ) ಎಂಬ ಹೊಸ ಆವಿಷ್ಕಾರದ ಬಗ್ಗೆ 6ನೇ ತರಗತಿಯಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಪೊನ್ನಂಪೇಟೆಯ “ಓಜಸ್ವಿ” ಫೌಂಡೇಶನ್ ಟ್ರಸ್ಟಿ ಡಾ. ಪಿ.ಸಿ.ಕವಿತಾ ಹಾಗೂ ಸಿಇಓ ಕೋ ಫೌಂಡರ್ ಜಸ್ಟ್ ರೋಬೋಟಿಕ್ಸ್ ವಿಭಾಗದ ಸಿ.ಡಿ.ಬ್ರಿಜೇಶ್ ಅವರು ಮುಂದಿನ ಕಾಲಘಟ್ಟದಲ್ಲಿ ಈ ಹೊಸ ಆವಿಷ್ಕಾರ ನಮ್ಮ ಜೀವನದ ಒಂದು ಭಾಗವಾಗುವುದಾಗಿಯೂ ಹಾಗೂ ಅದು ಯಾವ ರೀತಿಯಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಮಕ್ಕಳಿಗೆ ಮನಮುಟ್ಟುವಂತೆ ಉಪನ್ಯಾಸದಲ್ಲಿ ತಿಳಿಸಿದರು. ಅಲ್ಲದೆ ಮುಂಬರುವ ದಿನಗಳಲ್ಲಿ ತಮ್ಮ ಪಠ್ಯ ವಿಷಯಗಳ ಬೋಧನೆ ಅವಧಿಯ ಜೊತೆಗೆ “ರೋಬೋಟಿಕ್ಸ್ ಸೈನ್ಸ್” ಎಂಬ ವಿಷಯವನ್ನು ಅಳವಡಿಸುವುದಾಗಿ ಹಾಗೂ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಹೇಳಿದರು. ಕಾರ್ಯಕ್ರಮದಲ್ಲಿ ಶಾಲೆ ಆಡಳಿತ ಮಂಡಳಿ ಅಧ್ಯಕ್ಷರಾದ ಬಿ.ಎಸ್ ಸುದೇಶ್, ಕಾರ್ಯದರ್ಶಿ ವಿನೋದ್ ಪಿ.ಎನ್ ಹಾಗೂ ಪೋಷಕರು ಹಾಜರಿದ್ದರು.

Read More

ಸೋಮವಾರಪೇಟೆ ಜೂ.30 :  ಬಿಟಿಸಿಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ಅಂತರ ಕಾಲೇಜು ಪ್ರಾಕೃತಿಕ ವಿಕೋಪ ನಿರ್ವಹಣೆ ಸಮ್ಮೇಳನದ ವಿವಿಧ ಸ್ಪರ್ಧೆಗಳಲ್ಲಿ ರಾಜ್ಯದ ವಿವಿಧೆಡೆಗಳಿಂದ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿ ಕೆಲವರು ಬಹುಮಾನ ಪಡೆದುಕೊಂಡರು. ಕಾಲೇಜು ಆವರಣದಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಕೃತಿ ವಿಕೋಪದ ಸಂದರ್ಭ ಜೀವ ರಕ್ಷಣೆಯಲ್ಲಿ ತಾವು ಏನು ಮಾಡಬಹುದೆಂದು ಛಾಯಾಚಿತ್ರ ಹಾಗೂ ಭಿತ್ತಿಪತ್ರದ ಮೂಲಕ ಅನಾವರಣಗೊಳಿಸಿದರು. ಪ್ರಬಂಧ ಮಂಡನೆಯಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಶಾನ್ಯ ಹಾಗೂ ರಜತ್ ಕುಮಾರ್ ಪ್ರಥಮ, ಇದೇ ಕಾಲೇಜಿನ ಅಕ್ಷತಾ ಹಾಗೂ ಅನಗ ದ್ವಿತೀಯ, ವಿರಾಜಪೇಟೆ ಸೆಂಟ್ಆನ್ಸ್ ಕಾಲೇಜಿನ ಕಾವೇರಮ್ಮ ಮತ್ತು ಶರ್ಲಿತ್  ತೃತೀಯ ಬಹುಮಾನವನ್ನು ಪಡೆದುಕೊಂಡರು. ಭಿತ್ತಿಪತ್ರ  ಪ್ರದರ್ಶನ ಸ್ಪರ್ಧೆಯಲ್ಲಿ ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ ಅಂಕಿತ ಹಾಗೂ ರಕ್ಷಾ ಪ್ರಥಮ,  ಪ್ರೇಕ್ಷ ಹಾಗೂ ಬಾಬು ದ್ವಿತೀಯ, ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಪಿತಾ ತೃತೀಯ ಬಹುಮಾನ ಗಳಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕಾಲೇಜು ಪ್ರಾಂಪಾಲರಾದ ಧನಲಕ್ಷ್ಮಿ, ನೆಹರು…

Read More

ಕುಶಾಲನಗರ, ಜೂ.30 : ಕುಶಾಲನಗರ ತಾಲ್ಲೂಕಿನ ಕೂಡಿಗೆ ಸದ್ಗುರು ಅಪ್ಪಯ್ಯಸ್ವಾಮಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತಗೊಂಡ ಸಿ.ದುರ್ಗೇಶ್ ಅವರನ್ನು ತಾಲ್ಲೂಕು ಶಿಕ್ಷಣ ಇಲಾಖೆ, ತಾಲ್ಲೂಕು ಪ್ರೌಢಶಾಲಾ ಮುಖ್ಯೋಪಾಧ್ಯಾರ ಸಂಘ, ತಾಲ್ಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘ, ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ಶಾಲೆಯ ಆಡಳಿತ ಮಂಡಳಿ ಮತ್ತು ಶಾಲೆಯ ವತಿಯಿಂದ ಆತ್ಮೀಯವಾಗಿ ಬೀಳ್ಕೊಡುಗೆ ನೀಡಲಾಯಿತು. ನಿವೃತ್ತಗೊಂಡ ಮುಖ್ಯ ಶಿಕ್ಷಕ ದುರ್ಗೇಶ್ ಅವರಿಗೆ ಶಾಲು ಹೊದಿಸಿ ಫಲ ತಾಂಬುಲ ನೀಡಿ ಗೌರವಿಸಿ ಸನ್ಮಾನಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್ ಮಾತನಾಡಿ, ಈ ಶಾಲೆಯಲ್ಲಿ ಆಡಳಿತ ಮಂಡಳಿ, ಹಿರಿಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಜತೆಗೂಡಿ ನಿವೃತ್ತಗೊಂಡ ಮುಖ್ಯ ಶಿಕ್ಷಕರನ್ನು ಗೌರವಿಸಿ ಬೀಳ್ಕೊಡುತ್ತಿರುವುದು ಗುರುಗಳಿಗೆ ಸಮಾಜ ನೀಡುತ್ತಿರುವ ದ್ಯೋತಕವಾಗಿದೆ ಎಂದು ಪ್ರಶಂಸಿದರು. ಗ್ರಾಮೀಣ ಶಾಲೆಯ ಪ್ರಗತಿಗೆ ಹಳೆ ವಿದ್ಯಾರ್ಥಿಗಳು ಹಾಗೂ ದಾನಿಗಳು ನೀಡುತ್ತಿರುವ ಸಹಕಾರ ಮತ್ತು ಪ್ರೋತ್ಸಾಹವು ಶಾಲೆಯ ಹಿರಿಮೆ ಮತ್ತು ಗರಿಮೆಯನ್ನು ಎತ್ತಿ ಹಿಡಿದಿದೆ ಎಂದರು. ಶಾಲಾ ಆಡಳಿತ ಮಂಡಳಿ ಹಾಗೂ…

Read More

ಮಡಿಕೇರಿ ಜೂ.30 : ಭಿನ್ನಮತಗಳನ್ನು ಬದಿಗೊತ್ತಿ ಎಲ್ಲರೂ ಒಗ್ಗಟ್ಟಿನಿಂದ ಜನಪರವಾಗಿ ನಗರದ ಅಭಿವೃದ್ಧಿಗೆ ಶ್ರಮಿಸೋಣವೆಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಕರೆ ನೀಡಿದ್ದಾರೆ. ಮಡಿಕೇರಿ ನಗರಸಭೆಯಿಂದ ನೀಡಲಾದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಯಾವುದೇ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದೆ ಜನರ ನಿರೀಕ್ಷೆಯಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳೋಣವೆಂದರು. ಸಭೆಯಲ್ಲಿ ವಾಗ್ವಾದ ಮಾಡುವುದರಿಂದ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ, ಬದಲಿಗೆ ನೈಜಾಂಶವನ್ನು ಅರಿತು ಸಮಸ್ಯೆಯನ್ನು ಬಗೆ ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಹೇಳಿದರು. ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯ ಸಹಕಾರ ನೀಡವುದಾಗಿ ಭರವಸೆ ನೀಡಿದರು. ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಪೌರಾಯುಕ್ತ ವಿಜಯ, ಆಡಳಿತಾರೂಢ ಬಿಜೆಪಿ, ವಿರೋಧ ಪಕ್ಷ ಎಸ್‌ಡಿಪಿಐ ಹಾಗೂ ಕಾಂಗ್ರೆಸ್ ಪಕ್ಷದ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

Read More

ಮಡಿಕೇರಿ ಜೂ.30 : ಮಡಿಕೇರಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಮೊದಲ ಬಾರಿಗೆ ಪಾಲ್ಗೊಂಡ ಕ್ಷೇತ್ರದ ನೂತನ ಶಾಸಕ ಡಾ.ಮಂತರ್ ಗೌಡ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಪೇಟ ತೊಡಿಸಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್ ಹಾಗೂ ಪೌರಾಯುಕ್ತ ವಿಜಯ ಅವರುಗಳು ನಗರದ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡುವಂತೆ ಮನವಿ ಮಾಡಿದರು. ಸಭೆಯಲ್ಲಿದ್ದ ಸದಸ್ಯರುಗಳು ಕೂಡ ಹೂಗುಚ್ಚ ನೀಡಿ ಅಭಿನಂದಿಸಿದರು.

Read More

ಮಡಿಕೇರಿ ಜೂ.30: ಕೊಡವ ಕುಟುಂಬಗಳ ನಡುವಿನ “ಕುಂಡ್ಯೋಳಂಡ ಹಾಕಿ ನಮ್ಮೆ-2024” ರ ಕೈಪಿಡಿ ಬಿಡುಗಡೆ ಕಾರ್ಯಕ್ರಮ ಕೊಡವ ಹಾಕಿ ಅಕಾಡೆಮಿಯ ಸಹಯೋಗದೊಂದಿಗೆ ನಾಪೋಕ್ಲುವಿನ ಕುಂಡ್ಯೋಳಂಡ ಐನ್ ಮನೆಯಲ್ಲಿ 2023 ಜುಲೈ 1 ರಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ.

Read More

ಮಡಿಕೇರಿ ಜೂ.30 : ಸ್ಯಾಂಡಲ್​ವುಡ್​ನ ಖ್ಯಾತ ಕಲಾವಿದರಾದ ಕೊಡಗಿನ ಉಳ್ಳಿಯಡ ಭುವನ್ ಪೊನ್ನಣ್ಣ ಹಾಗೂ ಉದ್ದಪಂಡ ಹರ್ಷಿಕಾ ಪೂಣಚ್ಚ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ. ಈಗಾಗಲೇ ಭುವನ್ ಹಾಗೂ ಹರ್ಷಿಕಾರ ಲಗ್ನಪತ್ರಿಕೆ ಕಾರ್ಯ ಕೊಡವ ಸಂಪ್ರದಾಯದಂತೆ ಸರಳವಾಗಿ ನಡೆದಿದ್ದು, ಎರಡೂ ಕುಟುಂಬದ ಕೆಲವರು ಮಾತ್ರ ಇಗ್ಗುತ್ತಪ್ಪ ದೇವಾಲಯದಲ್ಲಿ ನಡೆದ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ವಿವಾಹ ಆ.24 ರಂದು ಅಮ್ಮತ್ತಿ ಕೊಡವ ಸಮಾಜದಲ್ಲಿ ನಿಗದಿಯಾಗಿದೆ. ರಿಯಾಲಿಟಿ ಶೋ ಸೇರಿದಂತೆ ಹಲವು ಕನ್ನಡ ಚಿತ್ರಗಳಲ್ಲಿ ಭುವನ್ ಪೊನ್ನಣ್ಣ ನಟಿಸಿದ್ದು, ಹರ್ಷಿಕಾ ಪೂಣಚ್ಚ ಕನ್ನಡ, ಕೊಡವ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿ, ಬಹುಭಾಷಾ ತಾರೆಯಾಗಿ ಗುರುತಿಸಲ್ಪಟ್ಟಿದ್ದಾರೆ. ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಭುವನ್ ಹಾಗೂ ಹರ್ಷಿಕಾ ಭುವನಂ ಫೌಂಡೇಶನ್ ಮೂಲಕ ರಾಜ್ಯಾದ್ಯಂತ ಸಂತ್ರಸ್ತರಿಗೆ ಸಹಾಯಹಸ್ತ ನೀಡುವ ಮೂಲಕ ಚೈತನ್ಯ ಮೂಡಿಸುವಲ್ಲಿ ಯಶಸ್ವಿಯಾಗಿ ಜನಮನ ಗೆದ್ದಿದ್ದರು.

Read More

ಮಡಿಕೇರಿ ಜೂ.30 : ಬೆಂಗಳೂರಿನ ಸುವರ್ಣ ಆರೋಗ್ಯ ಟ್ರಸ್ಟ್‍ನ ಹೆಚ್ಚುವರಿ ಕಾರ್ಯದರ್ಶಿಯಾಗಿ ಕೊಡಗಿನಿಂದ ವರ್ಗಾವಣೆಗೊಂಡಿದ್ದ ಈ ಹಿಂದಿನ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಅವರನ್ನು ಇದೀಗ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕರಾಗಿ (ಆಡಳಿತ) ಸರ್ಕಾರ ನೇಮಕ ಮಾಡಿದೆ.

Read More

ಮಡಿಕೇರಿ ಜೂ.30 : ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ ಮಳೆ 6.69 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 24.54 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 301.83 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 690.35 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 11 ಮಿ.ಮೀ. ಕಳೆದ ವರ್ಷ ಇದೇ ದಿನ 49.60 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 458.98 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 962.16 ಮಿ.ಮೀ. ಮಳೆಯಾಗಿತ್ತು. ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 4.71 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 15.90 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 224.22 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 606.01 ಮಿ.ಮೀ. ಮಳೆಯಾಗಿತ್ತು. ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 4.37 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 8.13…

Read More