ಲೇಖಕ: admin

ಮಡಿಕೇರಿ ಜು.1 : ರಾಜ್ಯಾ ಶಾಲಾ ಶಿಕ್ಷಣ ಇಲಾಖಾ ಆಯುಕ್ತರಾಗಿ ಕೊಡಗು ಮೂಲಕ ಐಎಎಸ್ ಅಧಿಕಾರಿ ಬೊಳಂದಂಡ ಬಿ.ಕಾವೇರಿ (ತಾಮನೆ-ಬಲ್ಟಿಕಾಳಂಡ) ಆಯ್ಕೆಯಾಗಿದ್ದಾರೆ. ಈತನಕ ಸಮಗ್ರ ಶಿಕ್ಷಣ ಇಲಾಖೆಯ ಯೋಜನಾ ನಿರ್ದೇಶಕರಾಗಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಪ್ರಾಥಮಿಕ ಶಿಕ್ಷಣ ಇಲಾಖೆ ಆಯುಕ್ತರನ್ನಾಗಿ ನಿಯೋಜಿಸಲಾಗಿದೆ. ಈ ಹಿಂದೆ ಕಾವೇರಿ ಅವರು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಾಗಿ, ಚಾಮರಾಜನಗರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಬಲ್ಟಿಕಾಳಂಡ ಬೆಳ್ಯಪ್ಪ ಅವರ ಪುತ್ರಿಯಾಗಿರುವ ಕಾವೇರಿ ಮೂಲತಃ ಕಾರುಗುಂದದವರಾದ ಬೊಳಂದಂಡ ಮುತ್ತಣ್ಣ ಅವರ ಪತ್ನಿಯಾಗಿದ್ದಾರೆ.

Read More

ಮಡಿಕೇರಿ ಜು.1 : ಕೊಡಗು ಜಿಲ್ಲಾ ಪೊಲೀಸ್ ಘಟಕದ ವಿವಿಧ ಠಾಣೆ, ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸಿ ಜೂ.30  ರಂದು ನಿವೃತ್ತಿ ಹೊಂದಿದ ಪಿಎಸ್‌ಐ ಎಂ.ಕೆ ಸದಾಶಿವ, ಪಿಎಸ್‌ಐ  ಕೆ.ನಾಗಾರಾಜು, ಪಿಎಸ್‌ಐ ಹೆಚ್.ಸಿ ಶಿವಣ್ಣ, ಪಿಎಸ್‌ಐ  ಪಾಪೇಗೌಡ, ಎಎಸ್‌ಐ ಎಂ.ಸಿ.ಬೆಳ್ಳಿಯಪ್ಪ, ಎಆರ್‌ಎಸ್‌ಐ ಡಿ.ಎಂ. ರಮೇಶ್‌, ಎಆರ್‌ಎಸ್‌ಐ ಪಿ.ಡಿ ತಿಮ್ಮಯ್ಯ ಅವರನ್ನು ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ನಿವೃತ್ತರನ್ನು ಸನ್ಮಾನಿಸಿ ನಿವೃತ್ತ ಜೀವನ ಶುಭಪ್ರದವಾಗಿರಲೆಂದು ಹಾರೈಸಿದರು.

Read More

ಮಡಿಕೇರಿ ಜು.1 : ಸೋಮವಾರಪೇಟೆ ಹೋಂಸ್ಟೇ ಅಸೋಸಿಯೇಷನ್ ಸಭೆಯು ಅಧ್ಯಕ್ಷ ಸಿ.ಕೆ.ರೋಹಿತ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸಂಘದ ಅಧ್ಯಕ್ಷ ರೋಹಿತ್ ಮಾತನಾಡಿ, ನಮ್ಮ ಅಸೋಸಿಯೇಷನ್ ವತಿಯಿಂದ ಆಗಿಂದಾಗೆ ಪ್ರವಾಸಿ ತಾಣಗಳ ಸ್ವಚ್ಛತಾ ಕಾರ್ಯ ಮಾಡುವುದರೊಂದಿಗೆ, ತಾಣಗಳ ಮಾಹಿತಿ ಫಲಕಗಳನ್ನು ಅಳವಡಿಸಬೇಕಿದೆ. ಇದರಿಂದ ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪ್ರವಾಸಿ ತಾಣಗಳನ್ನು ಗುರುತಿಸುವುದರೊಂದಿಗೆ, ತಾಣಗಳಲ್ಲಿ ಸಂತೋಷಪಡಲು ಅನುಕೂಲವಾಗುವುದು. ಅಲ್ಲದೆ, ಪ್ರವಾಸಿತಾಣಗಳಲ್ಲಿ ಮೂಲ ಸೌಕರ್ಯ ಸೇರಿದಂತೆ ಎಲ್ಲ ವ್ಯವಸ್ಥೆ ಕಲ್ಪಿಸಲು ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು. ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಕೌನ್ಸಿಲರ್ ಗಳಾದ ಜತಿನ್ ಬೋಪಣ್ಣ,  ಹೋಂಸ್ಟೇ ಮಾಲೀಕರು ಯಾವ ರೀತಿಯಲ್ಲಿ ಪರವಾನಗಿ ಪಡೆಯಬೇಕು ಮತ್ತು ಪ್ರಾವಾಸೋದ್ಯಮ ಇಲಾಖೆಯ ಮಾನದಂಡಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಕೌನ್ಸಿಲರ್ ಗಳಾದ ಅಶ್ವಥ್, ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷ ಯೋಗೇಶ್, ಕಾರ್ಯದರ್ಶಿ ಅಭಿನಂದ್, ಖಜಾಂಚಿ ಪ್ರೀತಂ, ಕೊಡಗು, ಸಕಲೇಶಪುರ ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷ ಕೆ.ಎಸ್. ಕುಮಾರಸ್ವಾಮಿ, ಕಾರ್ಯದರ್ಶಿ ಜಯಪ್ರಕಾಶ್, ಖಜಾಂಚಿ ನವೀನ್ ಇದ್ದರು.

Read More

ಮಡಿಕೇರಿ ಜು.1 : ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2859 ಅಡಿಗಳು, ಇಂದಿನ ನೀರಿನ ಮಟ್ಟ 2820.69 ಅಡಿಗಳು. ಕಳೆದ ವರ್ಷ ಇದೇ ದಿನ 2855.48 ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ 5.80 ಮಿ.ಮೀ., ಕಳೆದ ವರ್ಷ ಇದೇ ದಿನ 18.20 ಮಿ.ಮೀ. ಇಂದಿನ ನೀರಿನ ಒಳಹರಿವು 357 ಕ್ಯುಸೆಕ್, ಕಳೆದ ವರ್ಷ ಇದೇ ದಿನ 5785 ಕ್ಯುಸೆಕ್, ಇಂದಿನ ನೀರಿನ ಹೊರ ಹರಿವು ನದಿಗೆ 30 ಕ್ಯುಸೆಕ್. ನಾಲೆಗೆ 20 ಕ್ಯುಸೆಕ್. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 651 ಕ್ಯುಸೆಕ್. ನಾಲೆಗೆ 20 ಕ್ಯುಸೆಕ್.

Read More

ಮಡಿಕೇರಿ ಜು.1 : ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 13.51 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 36.36 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 315.33 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 726.72 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 23.03 ಮಿ.ಮೀ. ಕಳೆದ ವರ್ಷ ಇದೇ ದಿನ 56.48 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 482.01 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1018.64 ಮಿ.ಮೀ. ಮಳೆಯಾಗಿತ್ತು. ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 8.26 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 29.83 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 232.48 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 635.84 ಮಿ.ಮೀ. ಮಳೆಯಾಗಿತ್ತು. ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 9.23 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 22.78 ಮಿ.ಮೀ.…

Read More

ಮಡಿಕೇರಿ  ಜು.1 : ಕರಿಕೆ ಗ್ರಾ.ಪಂ ವ್ಯಾಪ್ತಿಯಲ್ಲಿ  ಗಾಳಿ ಸಹಿತ ಮಳೆಯಾಗಿದ್ದು,  13ನೇ ಮೈಲಿನ ಕೆ.ಸುರೇಶ ಬಾಬು ಎಂಬವರ ಮನೆಗೆ ಹಾನಿಯಾಗಿದೆ. ಮನೆಯ ಮೇಲ್ಚಾವಣಿ ಒಂದು ಭಾಗ ಕುಸಿದ್ದು,  ಅಪಾರ ನಷ್ಟ ಸಂಭವಿಸಿದೆ.ಇದರಿಂದ ಮನೆಯ ಒಳಗೆ ಮಳೆ ನೀರು ತುಂಬಿ ಮನೆಯ ವಸ್ತುಗಳಿಗೆ ಹಾನಿಯಾಗಿದ್ದು ಬಡ ಕುಟುಂಬ ಸಂಕಷ್ಟ ಅನುಭವಿಸುವಂತ್ತಾಗಿದೆ. ಸರ್ಕಾರದ ಸಂಬಂಧಪಟ್ಟ ಇಲಾಖೆಯವರು ಇವರಿಗೆ ಆದಂತಹ ನಷ್ಟವನ್ನು ಭರಿಸಿ ಕೊಡಬೇಕೆಂದು ಮನವಿ ಮಾಡಿದ್ದಾರೆ. ಸ್ಥಳಕ್ಕೆ ಗ್ರಾಮಲೆಕ್ಕಾಧಿಕಾರಿ ಜನಾರ್ಧನ  ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ವಿರಾಜಪೇಟೆ ಜು.1 :  ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆ, ಮಕ್ಕಳ ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಜು.2 ರಂದು ವಿರಾಜಪೇಟೆಯಲ್ಲಿ ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎ.ಎಸ್ ಮುಸ್ತಫ ತಿಳಿಸಿದ್ದಾರೆ. ಜು.2 ರಂದು ಬೆಳಗ್ಗೆ 10.30 ಗಂಟೆಗೆ ವಿರಾಜಪೇಟೆಯ ಎ-ಟು-ಜೆಡ್ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ  ರೆಜಿತ್ ಕುಮಾರ್ ಗುಹ್ಯ ಅವರ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಲಿದೆ. ಜಿಲ್ಲಾ ವೀಕ್ಷಕರಾಗಿ ಆನಂದ್ ಕೊಡಗು ಪಾಲ್ಗೊಳ್ಳಲಿದ್ದು, ಜಿಲ್ಲಾಧ್ಯಕ್ಷರಾದ ಬಿ.ಆರ್ ಸವಿತಾರೈ, ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನು ಕಾರ್ಯಪ್ಪ, ರಾಷ್ಟ್ರೀಯ ಸಮಿತಿ ಸದಸ್ಯರಾದ ಸುನಿಲ್ ಪೊನ್ನೇಟಿ, ರಾಜ್ಯ ಸಮಿತಿ ಸದಸ್ಯರಾದ ಟಿ.ಎನ್ ಮಂಜುನಾಥ್, ತಾಲ್ಲೂಕು ಸಂಘದ ಉಪಾಧ್ಯಕ್ಷ ಪುತ್ತಂ ಪ್ರದೀಪ್ ಭಾಗವಹಿಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಮಕ್ಕಳ ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದ್ದು, ದತ್ತಿ ಪ್ರಶಸ್ತಿ ಸ್ಥಾಪಿಸಿರುವ ವಿರಾಜಪೇಟೆಯ ಪ್ರಗತಿ ಶಾಲೆಯ ವ್ಯವಸ್ಥಾಪಕ ಮಾದಂಡ ತಿಮ್ಮಯ್ಯ, ಸಿದ್ದಾಪುರದ ಸಮಾಜ ಸೇವಕ  ಕೆ.ಯು.ಅಬ್ದುಲ್…

Read More

ಮಡಿಕೇರಿ ಜು 1 : ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಕಳೆದ ಆರು ವರ್ಷಗಳಿಂದ ನಮ್ಮ ಜನಾಂಗದ ಸಂಘಟನೆ ಹಾಗೂ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವುದರೊಂದಿಗೆ ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳ ಉಳಿಸುವ ಸಂಕಲ್ಪದೊಂದಿಗೆ ಹಲವು ಹೋರಾಟ ನಡೆಸುತ್ತಿದೆ. ಇದರ ಭಾಗವಾಗಿ ಜು.5 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನೂತನ ಶಾಸಕರು, ಸಚಿವರಿಗೆ ಗೌರವ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ  ಹೆಚ್.ಎಂ. ದಿವಾಕರ್ ತಿಳಿಸಿದರು. ನಗರದಲ್ಲಿ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಾರತೀಯ ಸಂಸ್ಕೃತಿ,ನಾಡು ನುಡಿ ರಕ್ಷಣೆಯೊಂದಿಗೆ ನಮ್ಮ ಜನಾಂಗದ ಉನ್ನತಿಯೂ ಮುಖ್ಯವಾಗಿದೆ. ರಾಜಕೀಯ ಕ್ಷೇತ್ರದಲ್ಲಿ ಈ ಹಿಂದಿನಿಂದಲೂ ನಮ್ಮ ಸಮುದಾಯದ ಕೊಡುಗೆ ಅಪಾರ ಹಾಗೂ ಗಮನಾರ್ಹವಾದದು ಎಂದರು. ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲೂ ವಿವಿಧ ಪಕ್ಷಗಳಿಂದ ನಮ್ಮ ಸಮುದಾಯದವರು ಜಯಗಳಿಸಿದ್ದಾರೆ. ಪ್ರಸ್ತುತ ಇರುವ ಲೋಕಸಭೆಯಲ್ಲಿ ಹಲವು ಮಂದಿ ಸಂಸದರಾಗಿದ್ದಾರೆ, ಕೇಂದ್ರ ಸಚಿವರಾಗಿರುವ ಹೆಮ್ಮೆಯ ಸಂಗತಿ ಹಾಗೂ ಇವರುಗಳನ್ನು ಅಭಿನಂದಿಸುವ ಗೌರವಿಸುವ ಜವಾಬ್ದಾರಿ ನಮ್ಮದು.…

Read More

ವಿರಾಜಪೇಟೆ ಜು 1 : ದೇವಣಗೇರಿ ಸಹಕಾರ ದವಸ ಭಂಡಾರ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾಕೇಂದ್ರದ ಸುತ್ತಮತ್ತ ಬಿಟ್ಟಂಗಾಲ ವಿಪತ್ತು ನಿರ್ವಹಣೆ ಘಟಕದ ವತಿಯಿಂದ ಶ್ರಮದಾನ ನಡೆಸಲಾಯಿತು. ಆವರಣವನ್ನು ಕಳೆ ಹೊಡೆಯುವ ಯಂತ್ರದಿಂದ ಸ್ವಚ್ಛತೆ ಮಾಡಲಾಯಿತು. ಶ್ರಮದಾನದಲ್ಲಿ ವಿಪತ್ತು ತಂಡದ ಸಂಯೊಜಕಿ ರೇಖಾ ಗಣೇಶ್ ಸ್ವಯಂ ಸೇವಕರಾದ ಜೀವನ್ ನವಜೀವನ ಸಮಿತಿ ಸದಸ್ಯರಾದ ರಮೇಶ್, ಜ್ಞಾನವಿಕಾಸ ಕೇಂದ್ರದ ಸದಸ್ಯರು ಭಾಗವಹಿಸಿದ್ದರು.

Read More

ಕಡಂಗ ಜೂ.30 :  ಮೀತಲ್ತಂಡ ಅಕ್ಬರ್ ಅವರು ದುಬಾಯಿಯಲ್ಲಿರುವ ಕೊಡಗಿನ ಕ್ರೀಡಾಪಟುಗಳಿಗಾಗಿ ಆಯೋಜಿಸಿರುವ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಫೋರ್ ಸ್ಟಾಲ್ ಎಡಪಲ ತಂಡವು ಬಲಿಷ್ಠ ಆರ್ ವೈ ಸಿ ಎಮ್ಮೆಮಾಡು ತಂಡವನ್ನು ಮಣಿಸುವುದರ ಮೂಲಕ ದುಬಾಯಿ ವಾಲಿಬಾಲ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಇದಕ್ಕೂ ಮುನ್ನ ನಡೆದ ಪ್ರಥಮ ಸೆಮಿಫೈನಲ್ ಪಂದ್ಯದಲ್ಲಿ ಫೋರ್ ಎಡಪಲ ತಂಡವು ಬಲಿಷ್ಠ ಗುಂಡಿಕೆರೆ ತಂಡವನ್ನು ಮಣಿಸಿ ಪೈನಲ್ ಹಂತ ಪ್ರವೇಶಿಸಿದರೆ ಆರ್ ವೈ ಸಿ ಎಮ್ಮೆಮಾಡು. ತಂಡವು ಹೊದವಾಡ ತಂಡವನ್ನು ಮಣಿಸಿ ಫೈನಲ್ ಗೆ ಪ್ರವೇಶಿಸಿದವು. ಉತ್ತಮ ಹೊಡೆತಗಾರ ಪ್ರಶಸ್ತಿಯನ್ನು ಎಡಪಲ ತಂಡದ ಯಹ್ಯಾ ಅವರು ಪಡೆದರೆ ಆಲ್ ರೌಂಡರಾಗಿ ಎಮ್ಮೆಮಾಡುವಿನ ಆಶಿಕ್  ಆಯ್ಕೆಯಾದರು. ಪಂದ್ಯಾವಳಿಯಲ್ಲಿ ಕೊಡಗು ಸುನ್ನಿ ವೆಲ್ಪೇರ್ ಅಸೋಶಿಯೇಷನ್ ಸಾರಥಿಗಳಾದ ರಿಯಾಝ್ ಕೊಂಡಂಗೇರಿ, ಹಂಝ ಪೊನ್ನಂಪೇಟೆ, ಸಲೀಂ ಗುಂಡಿಕೆರೆ, ಹಮೀದ್ ಚಾಮಿಯಾಲ, ಹಸನ್ ಹಾಜಿ ಚಾಮಿಯಾಲ, ಹಾಗೂ ಟ್ರೋಪಿ ಧಾನಿಗಳಾದ ಮಾರ್ಷಲ್ ಪಿಟ್ನೆಸ್ ನೌಶಾದ್ ಕೊಂಡಂಗೇರಿ ,ಜೀಮೇಕ್ ಗಪೂರ್ ಎಮ್ಮೆಮಾಡು,ಮಿಡೆಕ್ಸ್ ಹಮೀದ್ ಚಾಮಿಯಾಲ, ಮುತಾದವರು…

Read More