ಲೇಖಕ: admin

ಮಡಿಕೇರಿ  ಜೂ.29 :  ಚೆಟ್ಟಳ್ಳಿ  ಸಮೀಪದ ಕಂಡಕರೆಯಲ್ಲಿ ಮುಸ್ಲಿಂ ಸಮುದಾಯದ ಬಾಂಧವರ ಪವಿತ್ರ ಹಬ್ಬ ಬಕ್ರೀದ್ ಸಂಭ್ರಮದಿಂದ ಆಚರಿಸಲಾಯಿತು. ಬಕ್ರೀದ್ ನಮಾಜ್ ನೇತೃತ್ವ ವಹಿಸಿ ಮಾತನಾಡಿದ ಮಹಲ್ ಖತೀಬರಾದ ಮುಸ್ತಫಾ ಸಖಾಫಿ, ಬಕ್ರೀದ್ ಹಬ್ಬವು ಇಡೀ ಪ್ರಪಂಚಕ್ಕೆ ತ್ಯಾಗ ಮತ್ತು ಬಲಿದಾನ ಸಂಕೇತವನ್ನು ಸಾರುತ್ತದೆ. ಬಕ್ರೀದ್  ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಆಚರಿಸಬೇಕು. ಹಬ್ಬದ ಸಂಭ್ರಮದಲ್ಲಿ ಬಡವರಿಗೆ ಸಹಾಯ ಹಸ್ತ ಚಾಚುವ ಮೂಲಕ ಬಕ್ರೀದ್ ಸಂದೇಶವನ್ನು ಎಲ್ಲರೂ ಎತ್ತಿ ಹಿಡಿಯಬೇಕಾಗಿದೆ ಎಂದರು. ಇಂದಿನ ದಿನಗಳಲ್ಲಿ ಯುವ ಸಮೂಹ ಆಡಂಬರದ ಜೀವನದಿಂದ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಖೇದಕರ ಸಂಗತಿಯಾಗಿದೆ. ಹಬ್ಬದ ಸಂಭ್ರಮದ ನೆಪದಲ್ಲಿ  ಯುವ ಸಮೂಹ ಮದ್ಯಪಾನಕ್ಕೆ ದಾಸರಾಗಬಾರದು. ದುಶ್ಚಟಗಳಿಂದ ಎಲ್ಲರೂ  ದೂರವಿರಬೇಕೆಂದು ಕರೆ ನೀಡಿದರು.  ಮದ್ಯಮುಕ್ತ ಸಮಾಜವನ್ನು ನಿರ್ಮಿಸಲು ಪಣತೊಡಬೇಕಾಗಿದೆ ಎಂದು ಕಂಡಕರೆ ಮಹಲ್ ಖತೀಬರಾದ ಮುಸ್ತಫಾ ಸಖಾಫಿ‌ ಕರೆ ನೀಡಿದರು. ಇದೇ ಸಂದರ್ಭದಲ್ಲಿ ಕಂಡಕರೆ ಎಸ್.ಎಸ್.ಎಫ್ ಹಾಗೂ ಎಸ್.ವೈ.ಎಸ್ ವತಿಯಿಂದ ಕುರ್ ಆನ್ ಕಂಠಪಾಠ ಮಾಡಿದ ಕಂಡಕರೆ ಲುಕ್ ಮಾನುಲ್ ಹಕೀಂ…

Read More

ಈದ್ ಅಲ್-ಅಧಾ (“ತ್ಯಾಗದ ಹಬ್ಬ”) ಅಥವಾ ತ್ಯಾಗದ ಹಬ್ಬವು ಇಸ್ಲಾಂನಲ್ಲಿ ಎರಡನೆಯದು ಮತ್ತು ದೊಡ್ಡದಾದ ಪ್ರಮುಖ ಹಬ್ಬ. (ಇನ್ನೊಂದು ಈದ್ ಅಲ್-ಫಿತರ್ ). ಬಕ್ರೀದ್ ತ್ಯಾಗ ಬಲಿದಾನದ ಸಂಕೇತ. ಭಾರತವೂ ಸೇರಿದಂತೆ ವಿಶ್ವದ್ಯಾಂತ ಮುಸ್ಲಿಮರು ಈ ಹಬ್ಬವನ್ನು ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ. ಪ್ರವಾದಿಗಳಲ್ಲೊಬ್ಬರಾದ ಪ್ರವಾದಿ ಇಬ್ರಾಹಿಮರು ತಮ್ಮ ಮಗನಾದ ಇಸ್ಮಾಯಿಲ್‌ರನ್ನು ಸೃಷ್ಟಿಕರ್ತ ಅಲ್ಲಾಹನಿಗೆ ಬಲಿ ಕೊಡಲು ಮುಂದಾದ ದಿನವನ್ನು ಈದ್-ಉಲ್-ಅದಾ ಅರ್ಥಾತ್ ಬಕ್ರೀದ್ ಎನ್ನಲಾಗುತ್ತದೆ. :: ಹಬ್ಬದ ಹಿನ್ನೆಲೆ, ಮಹತ್ವ ಹೀಗಿದೆ :: ರಮಝಾನ್ ಮತ್ತು ಬಕ್ರೀದ್ ವಿಶ್ವದ್ಯಾಂತ ಮುಸ್ಲಿಮರು ಆಚರಿಸುವ ಎರಡು ಅತಿದೊಡ್ಡ ಹಬ್ಬಗಳು. ರಮಝಾನ್ ಸಂದರ್ಭದಲ್ಲಿ ಮುಸ್ಲಿಮರು ಇಡಿ ಒಂದು ಮಾಸ ಉಪವಾಸಾಚರಣೆ ಆಚರಿಸಿ ಕೊನೆ ದಿನ ಈದ್-ಉಲ್-ಫಿತರ್ ಹಬ್ಬದ ಮೂಲಕ ಭಾವೈಕ್ಯ ಮೆರೆಯುತ್ತಾರೆ. ಆದರೆ, ಬಕ್ರೀದ್ ಸಂದರ್ಭದಲ್ಲಿ ಶಕ್ತ ಮುಸ್ಲಿಮರು, ಇಸ್ಲಾಂ ಧರ್ಮದ ಐದು ಪ್ರಮುಖ ಕರ್ತವ್ಯಗಳಲ್ಲೊಂದಾದ ಪವಿತ್ರ ಹಜ್ಜ್ ಯಾತ್ರೆಗೆ ತೆರಳುತ್ತಾರೆ. ಪ್ರವಾದಿ ಮಹಮ್ಮದರ ಕರ್ಮಭೂಮಿಯಾಗಿದ್ದ ಸೌದಿ ಅರೆಬಿಯಾದ ಮೆಕ್ಕಾ ಮತ್ತು ಮದೀನ ಪಟ್ಟಣಗಳಲ್ಲಿರುವ ಪವಿತ್ರ…

Read More

ಮಡಿಕೇರಿ ಜೂ.28 : ಮೂರು ವಾಹನಗಳ ನಡುವೆ ಅಪಘಾತ ಸಂಭವಿಸಿದ ಘಟನೆ ಕುಶಾಲನಗರ ಸಮೀಪ ತಾವರೆಕೆರೆ ರಸ್ತೆಯಲ್ಲಿ ನಡೆದಿದೆ. ಮಡಿಕೇರಿ ಕಡೆಯಿಂದ ಕುಶಾಲನಗರ ಕಡೆಗೆ ಬರುತ್ತಿದ್ದ ಕಾರೊಂದಕ್ಕೆ ಲಾರಿಯೊಂದು ಹಿಂದಿನಿoದ ಅಪ್ಪಳಿಸಿದ ಪರಿಣಾಮ ಎದುರುಗಡೆ ಹೋಗುತ್ತಿದ್ದ ಮತ್ತೊಂದು ಕಾರು ಕೂಡ ಜಖಂ ಗೊಂಡಿತು. ಎರಡು ಕಾರುಗಳಿಗೆ ಹಾನಿಯಾಗಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಕುಶಾಲನಗರ ಸಂಚಾರಿ ಠಾಣೆ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿದರು.

Read More

ಮಡಿಕೇರಿ ಜೂ.28 : ಕುಶಾಲನಗರದ ನಿವಾಸಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಲೆಕ್ಕ ವಿಭಾಗದ ಪ್ರಥಮ ದರ್ಜೆ ಸಹಾಯಕ ಅಬ್ದುಲ್ ಬಷೀರ್ ನಿವಾಸದ ಮೇಲೆ ಬುಧವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು. ಆದಾಯ ಮೀರಿದ ಆಸ್ತಿ ಸಂಗ್ರಹ ಆರೋಪದ ಹಿನ್ನೆಲೆಯಲ್ಲಿ ಮಡಿಕೇರಿ ಲೋಕಾಯುಕ್ತ ಡಿವೈಎಸ್ಪಿ ಪವನ್ ಕುಮಾರ್ ನೇತೃತ್ವದ ತಂಡ ಕುಶಾಲನಗರದ ಗೊಂದಿಬಸವನಹಳ್ಳಿಯಲ್ಲಿರುವ ಅಬ್ದುಲ್ ಬಷೀರ್ ನಿವಾಸದ ಮೇಲೆ ಮುಂಜಾನೆ ವೇಳೆ ದಾಳಿ ಮಾಡಿ ದಾಖಲೆ ಹಾಗೂ ಆಸ್ತಿಯನ್ನು ಪರಿಶೀಲಿಸಿತು. ಈ ಸಂದರ್ಭ ಮನೆಯಲ್ಲಿ ನಗದು, ಚಿನ್ನ, ವಾಹನಗಳು, ಬ್ಯಾಂಕಿನಲ್ಲಿ ಠೇವಣಿ, ಮತ್ತೊಂದು ಮನೆ ಇರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಲಭಿಸಿದೆ ಎಂದು ಹೇಳಲಾಗಿದೆ. ಮೈಸೂರು ವಿಭಾಗದ ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ಅವರ ಮಾರ್ಗದರ್ಶನದಲ್ಲಿ ತನಿಖೆ ಮುಂದುವರೆದಿದೆ.

Read More

ಮಡಿಕೇರಿ ಜೂ.28 :  ಕೂರ್ಗ್ ಬ್ಲಡ್ ಫೌಂಡೇಶನ್ ಕರ್ನಾಟಕ (ರಿ) ಸಂಸ್ಥೆಯ ಎರಡನೇ  ವಾರ್ಷಿಕೋತ್ಸವದ ಪ್ರಯುಕ್ತ ಕೊಡಗು ವೈದ್ಯಕೀಯ ವಿಜ್ಞಾನಗಳ  ಸಂಸ್ಥೆ , ಕೊಡಗು ರಕ್ತ ನಿಧಿ ಘಟಕ ಹಾಗೂ ನೇತ್ರ ಆಪ್ಟಿಕಲ್ಸ್ ಮಡಿಕೇರಿ ಇವರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ  ಮತ್ತು ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು. ಮಡಿಕೇರಿಯ ರಾಜ್ ದರ್ಶನ್ ಸಭಾಂಗಣದಲ್ಲಿ  ನಡೆದ ಶಿಬಿರವನ್ನು ದೀಪ ಬೆಳಗಿಸುವುದರ ಮೂಲಕ ಗಣ್ಯರು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಉದ್ಯಮಿ ಮೋಹನ್ ದಾಸ್, ಕೊ.ಬ್ಲ.ಫೌ ಸಂಸ್ಥೆಯ ಕಾರ್ಯವೈಖರಿ  ಪ್ರೋತ್ಸಾಹದಾಯಕ ವಿಚಾರ. ತುರ್ತು ಪರಿಸ್ಥಿತಿಗಳಲ್ಲಿ ರಕ್ತವನ್ನು ಒದಗಿಸುವ ಈ ತಂಡದ ಕಾರ್ಯ ಶ್ರೇಷ್ಠವಾದುದು. ಜೊತೆಗೆ ಉಚಿತ ಕಣ್ಣಿನ ತಪಾಸಣೆ ಹಮ್ಮಿಕೊಂಡಿರುವುದು ಸಾರ್ವಜನಿಕರಿಗೆ ಬಹಳಷ್ಟು ಸಹಕಾರಿಯಾಗಿದೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಕ್ರಮಗಳು ಮೂಡಿ ಬರಲಿ ಎಂದು ಆಶಿಸಿದರು. ನಮ್ಮ ಕೊಡಗು ತಂಡದ ಸಂಸ್ಥಾಪಕ ನೌಶಾದ್ ಜನ್ನತ್ ಮಾತನಾಡಿ,  ಕೊ.ಬ್ಲ.ಫೌ ತಂಡದ ಕೆಲಸವನ್ನು ಕುರಿತು ಹೆಮ್ಮೆ ವ್ಯಕ್ತಪಡಿಸಿದರು. ಕೋವಿಡ್ ಸಂದರ್ಭದಲ್ಲಿ ವಿನು ಹಾಗು ಸಮೀರ್…

Read More

ಮಡಿಕೇರಿ ಜೂ.28 : ಇದೇ ಜು.1 ರಿಂದ 7 ರವರೆಗೆ ವನ ಮಹೋತ್ಸವ ಸಪ್ತಾಹ ಕಾರ್ಯಕ್ರಮ ಜರುಗಲಿದ್ದು, ಎಲ್ಲಾ ಇಲಾಖೆಗಳ ಅಧಿಕಾರಿಗಳು ಕೈಜೋಡಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವನ ಮಹೋತ್ಸವ ಸಪ್ತಾಹ ಕಾರ್ಯಕ್ರಮ ಅನುಷ್ಠಾನ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೃಹತ್ ಸಸಿ ನೆಡುವ ಕಾರ್ಯಕ್ರಮವನ್ನು ಅರಣ್ಯ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದು, ಆ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು, ಸ್ಥಳೀಯ ಸಂಸ್ಥೆಗಳು ಹೀಗೆ ಎಲ್ಲೆಡೆ ವನ ಮಹೋತ್ಸವ ಸಪ್ತಾಹ ಪ್ರಯುಕ್ತ ಗಿಡಗಳನ್ನು ನೆಡುವಂತಾಗಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು. ವನ ಮಹೋತ್ಸವ ಕಾರ್ಯಕ್ರಮ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ನೆಟ್ಟ ಗಿಡಗಳನ್ನು ಸಂರಕ್ಷಿಸಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ.ಪೂವಯ್ಯ ಅವರು ಮಾಹಿತಿ ನೀಡಿ ವನಮಹೋತ್ಸವ ಸಪ್ತಾಹ ಪ್ರಯುಕ್ತ ಅರಣ್ಯ ಇಲಾಖೆ ವತಿಯಿಂದ 33 ಕಾರ್ಯಕ್ರಮಗಳು, ಸಾಮಾಜಿಕ ಅರಣ್ಯ ವ್ಯಾಪ್ತಿಯಲ್ಲಿ 20 ಕಾರ್ಯಕ್ರಮಗಳನ್ನು ಆಯೋಜಿಸಿ ವಿವಿಧೆಡೆ ಗಿಡಗಳನ್ನು ನೆಡಲಾಗುತ್ತದೆ…

Read More

ಮಡಿಕೇರಿ ಜೂ.28 : ನಿರ್ದೇಶಕ ಜನಾರ್ಧನ್ ನಿರ್ದೇಶನದ `ದೇವರ ಆಟ ಬಲ್ಲವರಾರು’ ಕನ್ನಡ ಸಿನಿಮಾವನ್ನು 30 ದಿನಗಳಲ್ಲಿ ಚಿತ್ರೀಕರಿಸಿ ಬಿಡುಗಡೆ ಮಾಡುವ ಮೂಲಕ ಗಿನ್ನಿಸ್ ದಾಖಲೆಯ ಗುರಿ ಹೊಂದಿದೆ ಎಂದು ಚಿತ್ರತಂಡ ತಿಳಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಜನಾರ್ಧನ್, ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಮಡಿಕೇರಿ ಸುತ್ತಮುತ್ತ ಸಿನಿಮಾದ ಚಿತ್ರೀಕರಣ ನಡೆಯಲಿದೆ. 30 ದಿನಗಳಲ್ಲಿ ಚಿತ್ರೀಕರಣದ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ. ಆ ಮೂಲಕ ಹೊಸ ಪ್ರಯತ್ನಕ್ಕೆ ಮುಂದಾಗಿದ್ದು, ಇಂದಿನಿಂದಲೇ ಶೂಟಿಂಗ್ ಆರಂಭವಾಗಲಿದೆ ಎಂದು ತಿಳಿಸಿದರು. ಚಿತ್ರದ ನಾಯಕ ಅರ್ಜುನ್ ರಮೇಶ್ ಮಾತನಾಡಿ, 36 ಗಂಟೆಗಳ ಟೈಮ್‍ಲೈನ್ ಇಟ್ಟುಕೊಂಡು ಸಿನಿಮಾ ಸೆಟ್ ವರ್ಕ್ ಆರಂಭವಿಸಿದ ಚಿತ್ರ ತಂಡ, ಕೇವಲ 22 ಗಂಟೆಗಳಲ್ಲಿ ನಿಗದಿತ ಸಮಯಕ್ಕಿಂತ ಮೊದಲೇ ಮುಗಿಸಿ ಗಿನ್ನಿಸ್ ಮೊದಲ ಹಂತ ಪೂರ್ಣಗೊಳಿಸಿದೆ ಎಂದು ಮಾಹಿತಿ ನೀಡಿದರು. 200 ಮಂದಿಯನ್ನೊಳಗೊಂಡ ತಂಡವು ಸುಂಟಿಕೊಪ್ಪ ಬಳಿಯ ವಿಶಾಲವಾದ ಜಾಗದಲ್ಲಿ ಹಗಲು ರಾತ್ರಿ ಶ್ರಮ ವಹಿಸಿ 150 ಅಡಿ ಉದ್ದ, 80 ಅಡಿ ಅಗಲ, 19…

Read More

ಮಡಿಕೇರಿ ಜೂ.28 : ಸಹಕಾರ ಕ್ಷೇತ್ರದಲ್ಲಿ ಹಾಗೂ ಚೆಟ್ಟಳ್ಳಿ ಸಹಕಾರ ಸಂಘದ ಅಧ್ಯಕ್ಷರಾಗಿ ಮುಂದುವರಿಯುತ್ತಿರುವ ಬಲ್ಲಾರಂಡ ಮಣಿಉತ್ತಪ್ಪ ಅವರ ಸೇವೆಯನ್ನು ಪರಿಗಣಿಸಿ ಜು.2 ರಂದು ಚೆಟ್ಟಳ್ಳಿ ನಾಗರಿಕರಿಂದ ಸನ್ಮಾನ ನಡೆಯಲಿದೆ ಎಂದು ಚೆಟ್ಟಳ್ಳಿ ಕೃಷಿಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಕಣಜಾಲು ಪೂವಯ್ಯ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಲ್ಲಾರಂಡ ಮಣಿ ಉತ್ತಪ್ಪ ಅವರು ಸಹಕಾರ ಕ್ಷೇತ್ರದಲ್ಲಿ 25 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿ ‘ರಜತ ಮಹೋತ್ಸವ’ ಆಚರಿಸಿಕೊಳ್ಳುತ್ತಿರುವ ಹಾಗೂ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 15 ವರ್ಷಗಳಿಂದ ಅಧ್ಯಕ್ಷರಾಗಿ ನಿಷ್ಕಂಳಕ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಸಮಾಜ ಸೇವೆಯಲ್ಲಿ ತೊಡಗಿಕೊಂಡು ಅವಿರತ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸೇರಿದಂತೆ ರಾಜಕೀಯ ಕ್ಷೇತ್ರದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಜನರ ಸೇವೆ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಕೃಷಿ ಕ್ಷೇತ್ರದಲ್ಲಿ ವಿನೂತನ ಬೆಳವಣಿಗೆಯ ಕೃಷಿಕನಾಗಿದ್ದು, ದೈವಭಕ್ತರಾಗಿ ಚೆಟ್ಟಳ್ಳಿಯನ್ನು ದೇವರ ನಾಡಾಗಿ ಪರಿವರ್ತಿಸಿದ್ದಾರೆ. ಪ್ರಾಕೃತಿಕ ವಿಕೋಪ, ಕೋವಿಡ್ ಸಂದರ್ಭದಲ್ಲಿ ಮಾನವೀಯ…

Read More

ಚೆಯ್ಯಂಡಾಣೆ ಜೂ.28 : ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಮಿತಿ ಮೀರಿದ್ದು, ಕೃಷಿ ಫಸಲು ಮತ್ತು ಮನೆ, ತೋಟದ ಗೇಟ್ ಗೆ ಹಾನಿ ಮಾಡಿರುವ ಘಟನೆ ನಡೆದಿದೆ. ಕಳೆದ ಕೆಲವು ದಿನಗಳಿಂದ ಗ್ರಾಮದ ಸುತ್ತಮುತ್ತ ನೆಲೆ ನಿಂತಿರುವ ಕಾಡಾನೆಗಳ ಹಿಂಡು ರಾತ್ರಿ, ಹಗಲೆನ್ನದೆ ತೋಟಗಳಿಗೆ ಲಗ್ಗೆ ಇಡುತ್ತಿವೆ. ಬಾಳೆ, ಅಡಿಕೆ, ಕಾಫಿ, ತೆಂಗು, ಕಾಳುಮೆಣಸು ಗಿಡಗಳನ್ನು ನಾಶ ಪಡಿಸಿವೆ. ಕಳೆದವಾರ ಚೇಲಾವರ ಗ್ರಾಮದಲ್ಲಿ ಮಹಿಳೆಯೊಬ್ಬರ ಮೇಲೆ ಕಾಡಾನೆ ದಾಳಿ ಮಾಡಿದ್ದು, ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದರು. ಇದೇ ಗ್ರಾಮದ ನಿವಾಸಿ ಪಿ.ಪಿ.ಮಾಚಯ್ಯ ಎಂಬುವವರ ಮನೆಯಂಗಳಕ್ಕೆ ಕಾಡಾನೆ ನುಗ್ಗಿ ಇಂಟರ್ ಲಾಕ್ ಗಳನ್ನು ಹಾನಿಪಡಿಸಿದೆ. ಸಮೀಪದಲ್ಲೇ ಇರುವ ಸುಧೀರ್ ರೆಡ್ಡಿ ಎಂಬುವವರ ತೋಟಕ್ಕೆ ತೆರಳುವ ಗೇಟ್ ನ್ನು ಬೀಳಿಸಿದೆ. ಕೋಕೇರಿಯಲ್ಲ್ಲಿ ಮಚ್ಚಂಡ ಸುಮತಿ ಎಂಬುವವರ ತೋಟಕ್ಕೆ ಲಗ್ಗೆ ಇಟ್ಟಿರುವ ಕಾಡಾನೆಗಳು ಅಪಾರ ನಷ್ಟ ಉಂಟು ಮಾಡಿವೆ. ರಾತ್ರಿ ವೇಳೆ 9 ಕಾಡಾನೆಗಳ ಹಿಂಡು ಮುಖ್ಯ ರಸ್ತೆಯಲ್ಲಿ ಸಂಚರಿಸುತ್ತಿರುವ ದೃಶ್ಯ ಇದೀಗ ಸಾಮಾಜಿಕ…

Read More

ಚೆಯ್ಯಂಡಾಣೆ ಜೂ.28 :  ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಜೀವನಕ್ಕೆ ಕಾಲಿಟ್ಟ ಮುಖ್ಯ ಶಿಕ್ಷಕಿ ಮೀನಾ ಅವರನ್ನು ಶಾಲಾ ಆಡಳಿತ ಮಂಡಳಿ ಹಾಗೂ ಸ್ಥಳೀಯ ಗ್ರಾಮಸ್ಥರು ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಸಮ್ಮುಖದಲ್ಲಿ ಸನ್ಮಾನಿಸಿ ಕಿರು ಕಾಣಿಕೆ ನೀಡಿ ಬೀಳ್ಕೊಟ್ಟರು. ಕ್ಷೇತ್ರ ಸಮನ್ವಯ ಅಧಿಕಾರಿ ನಳಿನಿ ಮಾತನಾಡಿ, ತಮ್ಮ ಸೇವಾಕಾರ್ಯದಲ್ಲಿ ಶಿಕ್ಷಕರು ಹಾಗೂ ಮಕ್ಕಳ ನಡುವೆ ಅವಿನಾಭವ ಸಂಬಂಧ ಹೊಂದಿದ್ದು,  ಶಾಲೆಯನ್ನ ಅವರ ಭವಿಷ್ಯವನ್ನ ರೂಪಿಸುವಲ್ಲಿ ಮುಖ್ಯಪಾತ್ರವಾಹಿಸಿರುತ್ತಾರೆ. ನಿವೃತ್ತಿ ಸಂದರ್ಭ ಶಾಲೆ ಹಾಗೂ ವಿದ್ಯಾರ್ಥಿಗಳನ್ನು ಬಿಟ್ಟುಹೋಗುವುದು ಸವಾಲಿನ ಕೆಲಸ ಎಂದರು. ತಾ.ಪಂ ಮಾಜಿ ಸದಸ್ಯೆ ಉಮಾ ಪ್ರಭು ಮಾತನಾಡಿ,  ತಾಲೂಕು ಪಂಚಾಯಿತಿ ಸದಸ್ಯೆ ಯಾಗಿ ಆಯ್ಕೆ ಆದ ಅಂದಿನಿಂದ ಇಂದಿನ ವರೆಗೆ ಶಿಕ್ಷಕಿ ಮೀನಾ ಅವರೊಂದಿಗಿನ ಒಡನಾಟವನ್ನು ನೆನೆದರು. ಉತ್ತಮ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಇವರ ನಿವೃತ್ತಿ ಜೀವನ ಸುಖಕರವಾಗಲೆಂದು ಶುಭ ಹಾರೈಸಿದರು. ಸಿ ಆರ್ ಪಿ ಉಷಾ ಮಾತನಾಡಿ, ನನ್ನ…

Read More