ಮಡಿಕೇರಿ ಏ.6 : ರಾಷ್ಟ್ರದ ಗಡಿಗಳನ್ನು ಕಾಯ್ದು ನಿವೃತ್ತರಾಗಿರುವ ಮಾಜಿ ಸೈನಿಕರು ಒನ್ ರ‍್ಯಾಂಕ್ ಒನ್ ಪೆನ್ಶನ್(ಒಆರ್‍ಒಪಿ) ಯೋಜನೆಯ ನ್ಯೂನ್ಯತೆಗಳಿಂದ ಅನ್ಯಾಯಕ್ಕೆ ಒಳಗಾಗಿದ್ದು, ಯೋಜನೆಯ ಲೋಪಗಳನ್ನು ಸರಿಪಡಿಸುವಂತೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಘಟಕದ ಅಧ್ಯಕ್ಷ ಕೊಟ್ಟುಕತ್ತೀರ ಸೋಮಣ್ಣ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ, ಪ್ರಧಾನ ಮಂತ್ರಿ ಮತ್ತು ರಕ್ಷಣಾ ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿದೆ. ಒಆರ್‍ಒಪಿ ಯೋಜನೆಯಡಿ ಸೈನ್ಯದಲ್ಲಿ ಕರ್ತವ್ಯ ನಿರ್ವಹಿಸುವ ಯೋಧ ಮತ್ತು ಉನ್ನತ ಹುದ್ದೆಗಳನ್ನು ಅಲಂಕರಿಸಿರುವವರ ಪಿಂಚಣಿಯಲ್ಲಿ ಸಾಕಷ್ಟು ವ್ಯತ್ಯಾಸಗಳಿದೆ. ಅದನ್ನು ಸರಿಪಡಿಸುವ ಮೂಲಕ ತಾರತಮ್ಯವನ್ನು ನೀಗಬೇಕೆಂದು ಮನವಿ ಮಾಡಿದರು. ರಕ್ಷಣಾ ಪಡೆಗಳ ಮಾಜಿ ಸೈನಿಕರುಗಳಿಗೆ ಒಆರ್‍ಒಪಿ 2 ನ್ನು ಕೇಂದ್ರ ಸರ್ಕಾರ 2019 ರ ಜುಲೈ1 ರಿಂದ ಜಾರಿಗೆ ತಂದಿದೆ. ಇದರಲ್ಲಿ ರಕ್ಷಣಾ ಪಡೆಗಳಲ್ಲಿ ಕೆಳಸ್ತರದಲ್ಲಿ ಕಾರ್ಯನಿರ್ವಹಿಸಿದ ಸೈನಿಕರ ಪಿಂಚಣಿಯಲ್ಲಿ ಯಾವುದೇ ಏರಿಕೆಯಾಗಿಲ್ಲ. ಸೈನ್ಯದಲ್ಲಿ 15 ರಿಂದ 20 ವರ್ಷ ಸೈನಿಕನಾಗಿ ಸೇವೆ ಸಲ್ಲಿಸಿದಾತ ನಿವೃತ್ತವಾಗಿ ಪಡೆಯುತ್ತಿರುವ…
ಲೇಖಕ: admin
ಕುಶಾಲನಗರ ಏ.6 : ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿದ್ದ ಶೋಷಣೆ ಹಾಗೂ ಅಟ್ಟಹಾಸದ ವಿರುದ್ಧ ಸಮರ ಸಾರಿದ ಮೊದಲ ಮಹಿಳಾ ಧ್ವನಿ ಅಕ್ಕಮಹಾದೇವಿ ಎಂದು ಕಸಾಪ ಜಿಲ್ಲಾ ನಿರ್ದೇಶಕ ಮೆ.ನಾ.ವೆಂಕಟನಾಯಕ್ ಹೇಳಿದರು. ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕುಶಾಲನಗರದ ಬಸವೇಶ್ವರ ದೇವಾಲಯದಲ್ಲಿ ನಡೆದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹನ್ನೆರಡನೆಯ ಶತಮಾತನದ ಶಿವಶರಣರು ಹಾಗೂ ಶರಣೆಯರು ಲೋಕಕ್ಕೆ ನೀಡಿದ ವಚನಾಮೃತವನ್ನು ಮಕ್ಕಳಿಗೆ ಕಲಿಸುವ ಮೂಲಕ ಸುಸಂಸ್ಕೃತ ಸಮಾಜವನ್ನು ಕಟ್ಟಬಹುದಾಗಿದೆ. ಆದ್ದರಿಂದ ಮಹಿಳೆಯರು ಹಾಗೂ ಮಕ್ಕಳು ಪ್ರತಿ ನಿತ್ಯವು ವಚನಗಳ ಸಾಲುಗಳನ್ನು ಹೇಳುವ ಮೂಲಕ ಅದರ ಸಾರದಂತೆ ಬದುಕಬಹುದು ಎಂದರು. ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಮಾತನಾಡಿ, ಕನ್ನಡದ ನೆಲದಲ್ಲಿ ಒಂದು ಸಾವಿರ ವರ್ಷಗಳ ಹಿಂದೆ 430 ವಚನಗಳನ್ನು ಬರೆಯುವ ಮೂಲಕ ಮೊದಲ ಕವಯತ್ರಿಯಾದ ಅಕ್ಕಮಹಾದೇವಿಯವರ ವಚನಗಳಲ್ಲಿ ಇಹಪರವಾದ ಮತ್ತು ಸಾಮಾಜಿಕವಾದ ಚಿಂತನೆಗಳು ಅಡಕವಾಗಿವೆ. ಆದ್ದರಿಂದ ವಚನಗಳ ಪಠಣ ಪ್ರತಿ ಮನೆ ಮನಗಳಲ್ಲಿ…
ವಿರಾಜಪೇಟೆ ಏ.6 : ಬಿಟ್ಟಂಗಾಲ ಗ್ರಾಮದಲ್ಲಿ ನೆಲೆ ಕಂಡಿರುವ ಪ್ರಾರ್ಥನಾ ಮಡಪುರ ಶ್ರೀ ಮುತ್ತಪ್ಪ ದೇವಸ್ಥಾನದ 31ನೇ ವಾರ್ಷಿಕ ತೆರೆ ಮಹೋತ್ಸವವು ಶ್ರದ್ಧಾಭಕತಿಯಿಂದ ನೆರೆವೇರಿತು. ಏ.4 ರಂದು ಬೆಳಿಗ್ಗೆ ಗಣಪತಿ ಹೋಮದೊಂದಿಗೆ ಆರಂಭವಾದ ತೆರೆ ಮಹೋತ್ಸವಕ್ಕೆ ಧ್ವಜಾರೋಹಣದ ಮೂಲಕ ಚಾಲನೆ ದೊರೆಯಿತು. ಸಂಜೆ ಶ್ರೀ ಮುತ್ತಪ್ಪನ್ ವೆಳ್ಳಾಟಂ, ಗುಳಿಗ ವಸೂರಿಮಾಲ ತೆರೆಗಳು ನಡೆದವು. ದೇವಾಲಯದ ಸನೀಹದ ಕಿರುಹೊಳೆಯಲ್ಲಿ ವಸೂರಿಮಾಲ ತೆರೆಯ ಜಳಕದೊಂದಿಗೆ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಯಿತು. ಮೆರವಣಿಗೆಗೆ ಮಹಿಳೆಯರ ದೀಪಾರಾಧನೆಯು ಮೆರೆಗು ನೀಡಿತು. ವಾಸೂರಿ ಮಾಲ ತೆರೆ ದೇಗುಲ ಪ್ರವೇಶವಾಗಿ ದೈವ ನರ್ತನ ನಡೆಯಿತು. ದೇಗುಲದ ಆಡಳಿಯ ಮಂಡಳಿಯ ವತಿಯಿಂದ ಸಿಡಿಮದ್ದು ಪ್ರದರ್ಶನವಾಯಿತು. ಇಂದು ಪ್ರಾಥ:ಕಾಲ ಗುಳಿಗನ್ ವೆಳ್ಳಾಟಂ, ಮುತ್ತಪ್ಪನ್ ವೆಳ್ಳಾಟಂ, ತಿರುವಪ್ಪನ್ ತೆರೆಗಳು ನಡೆಯಿತು. ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿಯ ಸದಸ್ಯರು, ಗ್ರಾಮ, ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ನಗರದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು. ವರದಿ : ಕಿಶೋರ್ ಕುಮಾರ್ ಶೆಟ್ಟಿ
ವಿರಾಜಪೇಟೆ ಏ.6 : ಸಮೂದಾಯದ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಹಾಗೂ ಬದ್ಧತೆ ನೀಡುವ ನಿಟ್ಟಿನಲ್ಲಿ ಬಂಟರ ಸಂಘ ಮುಂದಾಗಬೇಕು ಎಂದು ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ, ವಕೀಲ ಬಿ.ರತ್ನಾಕರ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು. ವಿರಾಜಪೇಟೆ ಹೊರ ವಲಯದ ಖಾಸಾಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ಕೊಡಗು ಜಿಲ್ಲಾ ಬಂಟರ ಸಂಘದ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಮುದಾಯದ ಕಟ್ಟ ಕಡೆಯ ವ್ಯಕ್ತಿಯನ್ನು ಗುರುತಿಸಿ ಅವರ ಕಷ್ಟಗಳನ್ನು ಅರಿತು ಸಂಘವು ಸಹಾಯ ಮಾಡಬೇಕಾಗಿರುವ ಅನಿವಾರ್ಯತೆಯಿದೆ. ಕೆಲವು ಪಟ್ಟಬದ್ಧ ಹಿತಾಶಕ್ತಿಗಳ ವ್ಯಕ್ತಿಗಳು ತಾನು, ತನ್ನದೇ ತನ್ನಿಂದಲೇ ಎನ್ನುವ ಹುನ್ನಾರದಿಂದ ಸಂಘಟನೆಯನ್ನು ಹುಟ್ಟಾಕಿ ಇಂದು ಜನಾಂಗ ಬಾಂಧವರನ್ನು ದಿಕ್ಕು ತಪ್ಪಿಸುವ ಕೆಲಸ ನಿರಂತವಾಗಿ ನಡೆಯುತ್ತಿದೆ ಎಂದು ಆರೋಪಿಸಿದರು. ಸಂಘಟನೆಯು ಎಂದಿಗೂ ಜನಾಂಗದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವಂತಾಗಬೇಕು. ಕೇವಲ ಭರವಸೆಯ ಗೂಡಗಬಾರದು. ಜಿಲ್ಲಾ ಬಂಟರ ಸಂಘವು ಸಾರ್ವತ್ರಿಕ ಚುನಾವಣೆಯ ನಂತರ ಜನಾಂಗ ಬಾಂಧವರಿಗಾಗಿ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಮುಂಬರುವ ದಿನಗಳಲ್ಲಿ ಯೋಜನೆಗಳು ಕಾರ್ಯಗತವಾಗುತ್ತದೆ ಎಂದು ಹೇಳಿದರು.…
ಚೆಯ್ಯಂಡಾಣೆ ಏ.6 : ಚೆಯ್ಯಂಡಾಣೆ ವ್ಯಾಪ್ತಿಯಲ್ಲಿ ಗುರುವಾರ ಮಧ್ಯಾಹ್ನ ಗುಡುಗು ಸಹಿತ ಮಳೆಯಾಗಿದೆ. ಗ್ರಾಮದ ನರಿಯಂದಡ, ಚೇಲಾವರ,ಕರಡ ಗ್ರಾಮದಲ್ಲಿ ಸಾದಾರಣ ಮಳೆಯಾಗಿದ್ದು ಬಿಸಿಲಿನಿಂದ ಒಣಗುತ್ತಿದ್ದ ಗಿಡಗಳಿಗೆ ತಂಪೆರಗಿದಂತಿದೆ. ವರ್ಷದ ಮೊದಲ ಮಳೆ ಸುರಿದಿದ್ದು, ಕೊಡಗು ಜಿಲ್ಲೆಯ ಹಲವೆಡೆ ಮೋಡ ಮುಸುಕಿದ ವಾತಾವರಣ ಕಂಡು ಬಂದಿದೆ. ವರದಿ : ಅಶ್ರಫ್
ವಿರಾಜಪೇಟೆ ಏ.6 : ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಇದ್ದ ಮೀಸಲಾತಿಯನ್ನು ಸರ್ಕಾರ ರದ್ದು ಮಾಡಿದ ನಿರ್ಧಾರ ಸಂವಿಧಾನ ವಿರೋಧಿಯಾಗಿದೆ ಎಂದು ನಾಲ್ಕುನಾಡು ಮುಸ್ಲಿಂ ಒಕ್ಕೂಟದ ಪ್ರಮುಖ, ಅಲ್ಪಸಂಖ್ಯಾತ ಮುಖಂಡ ಕುಂಜಿಲದ ನಾಸರ್ ಮಕ್ಕಿ ಆರೋಪಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯ ಸರ್ಕಾರ ಪರಿಷ್ಕೃತ ಮೀಸಲಾತಿ ನೀತಿಯಲ್ಲಿ ಮುಸ್ಲಿಮರಿಗಿದ್ದ ಶೇ.4 ಮೀಸಲಾತಿಯನ್ನು ರದ್ದು ಮಾಡಿರುವುದು ಜನದ್ರೋಹದ ಕ್ರಮವಾಗಿದೆ. ಮುಸ್ಲಿಮರಿಗೆ 2(ಬಿ) ಪ್ರವರ್ಗದಡಿ ಇದ್ದ ಮೀಸಲಾತಿಯನ್ನು ರದ್ದು ಮಾಡಿ ಒಕ್ಕಲಿಗರಿಗೆ ಮತ್ತು ಪಂಚಮಸಾಲಿ ಸಮುದಾಯಕ್ಕೆ ಹಂಚಿರುವುದು ಅತ್ಯಂತ ಅವೈಜ್ಞಾನಿಕ. ಇದು ಸಮಾಜದಲ್ಲಿ ಕೆಟ್ಟ ಸಂದೇಶ ರವಾನೆಯಾದಂತಾಗಿದೆ ಎಂದರು. ಮುಂಬರುವ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ರಾಜಕೀಯ ಪ್ರೇರಿತವಾಗಿ ಕೈಗೊಂಡ ನಿರ್ಧಾರ ಇದಾಗಿದೆ ಎಂದು ಆರೋಪಿಸಿದ ಅವರು, ಮುಸ್ಲಿಂ ಸಮುದಾಯಕ್ಕೆ ಇದ್ದ ಮೀಸಲಾತಿ ತೆಗೆದಿರುವುದು ಎಂದಿಗೂ ಒಪ್ಪಲು ಸಾಧ್ಯವಿಲ್ಲ. ಮುಸ್ಲಿಂ ಸಮುದಾಯದಲ್ಲೂ ಕಡು ಬಡವರು ಮತ್ತು ಬಡವರು ಇದ್ದಾರೆ. ಮುಸ್ಲಿಮರ ಮೀಸಲಾತಿಯನ್ನು ರದ್ದುಗೊಳಿಸಿರುವುದರಿಂದ ಸಮುದಾಯದ ಪ್ರತಿಭಾವಂತರು ಶಿಕ್ಷಣ ಮತ್ತು ಉದ್ಯೋಗದಿಂದ ವಂಚಿತರಾಗಲಿದ್ದಾರೆ ಎಂದು…
ಮಡಿಕೇರಿ ಏ.6 : 2023 ವಿಧಾನ ಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಆಟೋರಿಕ್ಷಾ, ಟ್ಯಾಕ್ಸಿ, ಬಸ್ ಹಾಗೂ ಇತರೆ ಯಾವುದೇ ವಾಹನಗಳ ಮೇಲೆ, ಯಾವುದೇ ರಾಜಕೀಯ ವ್ಯಕ್ತಿಗಳ ಭಾವಚಿತ್ರ ಅಥವಾ ಪಕ್ಷಗಳನ್ನು ಬಿಂಬಿಸುವ ಬ್ಯಾನರ್, ಬಿತ್ತಿಪತ್ರಗಳು ಹಾಗೂ ಇತರೇ ಚಿತ್ರಗಳನ್ನು ಪೂರ್ವಾನುಮತಿ ಇಲ್ಲದೆ ಪ್ರದರ್ಶಿಸುವಂತಿಲ್ಲ ಹಾಗೂ ಪ್ರದರ್ಶನದ ಬ್ಯಾನರ್/ ಕಟೌಟ್ ಇತರೆ ಚಿತ್ರಗಳನ್ನು 24 ಗಂಟೆಗಳ ಒಳಗಾಗಿ ಕಡ್ಡಾಯವಾಗಿ ತೆರವುಗೊಳಿಸುವುದು. ತಪ್ಪಿದಲ್ಲಿ ಅಂತಹ ವಾಹನಗಳನ್ನು ಚುನವಣಾ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣವೆಂದು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಮತ್ತು ನೋಡೆಲ್ ಅಧಿಕಾರಿ ಎಸ್.ಎನ್ . ಮಧುರ ತಿಳಿಸಿದ್ದಾರೆ.
ವಿರಾಜಪೇಟೆ: ಏ.6 : ರಾಮಭಕ್ತ ಹನುಮನ ಜಯಂತಿಯನ್ನು ವಿರಾಜಪೇಟೆ ಪಟ್ಟಣದ ಶ್ರೀವೀರಾಂಜನೇಯ ದೇವಾಲಯ ಹಾಗೂ ಚಿಕ್ಕಪೇಟೆಯ ಚತ್ರಕೆರೆಯ ಶ್ರೀಗಣಪತಿ ಆಂಜನೇಯ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಭಕ್ತರಿಂದ ಶ್ರೀರಾಮ ಭಜನೆ, ಹನುಮನ ಸಂಕೀರ್ತನೆಗಳು ನಡೆಯಿತು. ವಿಶೇಷ ಅಭಿಷೇಕ, ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಅಲಂಕಾರ ಪೂಜೆ ನಡೆಯಿತು. ಮಹಾಪೂಜೆಯ ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು. ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಅರ್ಚಕರು ಸೇರಿದಂತೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ನಾಪೋಕ್ಲು ಏ.6 : ಬೇಸಿಗೆಯ ತಾಪಮಾನ ಅಧಿಕವಾಗುತ್ತಿರುವ ಬೆನ್ನಲ್ಲೇ ಕೊಡಗು ಜಿಲ್ಲೆಯ ಹಲವೆಡೆ ಮೋಡ ಮುಸುಕಿದ ವಾತಾವರಣ ಕಂಡು ಬಂದಿದೆ. ಕಳೆದ ಮೂರು ದಿನಗಳಿಂದ ಇದೇ ರೀತಿಯ ಹವಾಗುಣವಿದ್ದು, ಜನ ಮಳೆಗಾಗಿ ಎದುರು ನೋಡುತ್ತಿದ್ದಾರೆ. ನಾಪೋಕ್ಲು ವ್ಯಾಪ್ತಿಯಲ್ಲಿ ಬುಧವಾರ ಮಧ್ಯಾಹ್ನ ಗುಡುಗು ಸಹಿತ ಮಳೆಯಾಗಿದೆ. ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಮಳೆ ಸುರಿದು ತಂಪಾಗಿದೆ. ಬಲ್ಲಮಾವಟಿ, ನೆಲಜಿ, ಎಮ್ಮೆಮಾಡು , ಕಕ್ಕಬ್ಬೆ, ಕೋಟೇರಿ ವ್ಯಾಪ್ತಿಯಲ್ಲಿ ಆಲಿಕಲ್ಲು ಸಹಿತ 96 ಸೆಂಟ್ ಮಳೆಯಾಗಿದೆ. ಗಾಳಿ ಮಳೆಗೆ ನಾಪೋಕ್ಲು – ಕಕ್ಕಬೆ ಮುಖ್ಯ ಸಂಪರ್ಕ ರಸ್ತೆಯ ಕೋಟೇರಿಯಲ್ಲಿ ಮರವೊಂದು ಬಿದ್ದು ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಮತ್ತೆ ಉತ್ತಮ ಮಳೆಯಾಗುವ ನಿರೀಕ್ಷೆ ಮೂಡಿದೆ. ವರದಿ : ದುಗ್ಗಳ ಸದಾನಂದ
ಮಡಿಕೇರಿ ಏ.6 : ಮೂರ್ನಾಡು ಸಮೀಪದ ಕಿಗ್ಗಾಲು ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವರ ವಾರ್ಷಿಕೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ದೇವರಿಗೆ ಕೋಟ್ಟಿ ಹಾಡುವುದು, ದೇವ ತಕ್ಕರ ಮನೆಯಿಂದ ಭಂಡಾರವನ್ನು ಬನಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆದು ಕಟ್ಟು ಸಡಿಲಿಸಿ ನಂತರ ದೈವ ಸನ್ನಿಧಿಯಲ್ಲಿ ಕುಟ್ಟಿಚಾತ ತೆರೆ ಹಾಗೂ ಪ್ರಸಾದ ವಿನಿಯೋಗ ನಡೆಯಿತು. ನಂತರ ಭಂಡಾರವನ್ನು ಅಂಬಲಕ್ಕೆ ತಂದು ರಾತ್ರಿ ಮೆಲೇರಿಗೆ ಅಗ್ನಿ ಸ್ಪರ್ಶ ನಡೆದ ನಂತರ ಬೆಳಗ್ಗಿನವರೆಗೆ ಹಲವು ದೈವಗಳ ತೆರೆ ನಡೆಯಿತು. ಮುಂಜಾನೆ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ ನಡೆಯಿತು. ನಂತರ ಶ್ರೀ ಚಾಮುಂಡೇಶ್ವರಿ ದೈವದ ದೊಡ್ಡಮುಡಿ ತೆರೆಯೊಂದಿಗೆ ಉತ್ಸವವು ಸಂಪನ್ನಗೋಂಡಿತು.






