ವಿರಾಜಪೇಟೆ ಮೇ 11 : ನಗರದ ಹೊರವಲಯದ ಕೊಮ್ಮೆತ್ತೊಡು ಗ್ರಾಮದ ಮುಖ್ಯ ರಸ್ತೆಯಲ್ಲಿ ಕಾರು ಮತ್ತು ಗೂಡ್ಸ್ ವಾಹನಗಳ ನಡುವೆ ಅಪಘಾತ ಸಂಭವಿಸಿದ್ದು, ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ವಿರಾಜಪೇಟೆ-ಸಿದ್ದಾಪುರ ಮುಖ್ಯ ರಸ್ತೆಯ ಕೊಮ್ಮೆತೋಡು ಬಳಿಯ ಸಂತ ಮರಿಯ ಚರ್ಚ್ ಮುಂಭಾಗದ ತಿರುವಿನಲ್ಲಿ ವಿರಾಜಪೇಟೆಯಿಂದ ಸಿದ್ದಾಪುರಕ್ಕೆ ತೆರಳುತಿದ್ದ ಗೂಡ್ಸ್ ವಾಹನ ಮತ್ತು ಸಿದ್ದಾಪುರದಿಂದ ವಿರಾಜಪೇಟೆ ನಗರಕ್ಕೆ ಆಗಮಿಸುತಿದ್ದ ಕಾರಿನ ನಡುವೆ ಡಿಕ್ಕಿ ಸಂಭವಿಸಿದ್ದು, ವಾಹನಗಳ ಮುಂಭಾಗ ಜಖಂಗೊಂಡಿದೆ. ಅಪಘಾತದ ಸಂದರ್ಭ ಕಾರಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಿಗೆ ಒಳಗಾಗಿದ್ದು, ಇವರನ್ನು ಅಮ್ಮತ್ತಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ವಿರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಲೇಖಕ: admin
ಮಡಿಕೇರಿ ಮೇ 10 : ಹಾವಿನ ಕಡಿತದಿಂದ ವೃದ್ಧೆಯೊಬ್ಬರು ಸಾವನ್ನಪ್ಪಿರುವ ಘಟನೆ ದಕ್ಷಿಣ ಕೊಡಗಿನ ಅತ್ತೂರು ಗ್ರಾಮದಲ್ಲಿ ನಡೆದಿದೆ. ಗೋಣಿಕೊಪ್ಪ ಸಮೀಪದ ಅತ್ತೂರು ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರಾದ, ಮೋಹನ್ ನೆಲ್ಲೂರಾಯ ಅವರ ತಾಯಿ ಶುಭಲಕ್ಷ್ಮೀ (68) ಎಂಬವರೆ ಸಾವನ್ನಪ್ಪಿರುವ ದುರ್ದೈವಿ. ಇಂದು ಬೆಳಗ್ಗೆ ಶುಭಲಕ್ಷ್ಮೀ ಅವರು ವಿಷ ಪೂರಿತ ಗರಗಸ ಮಂಡಲ ಹಾವಿನ ಕಡಿತಕ್ಕೆ ಒಳಗಾಗಿದ್ದು, ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವ ಹಂತದಲ್ಲಿ ಅವರು ಕೊನೆಯುಸಿರೆಳೆದಿರುವುದಾಗಿ ತಿಳಿದು ಬಂದಿದೆ.
ಬೇಕಾದ ಸಾಮಾಗ್ರಿಗಳು: ಮಾವಿನ ಹಣ್ಣು ಮೂರರಿಂದ ನಾಲ್ಕು , ಹಣ್ಣು ಹಸಿಮೆಣಸಿನ ಕಾಯಿ: 4 ರಿಂದ 5, ತೆಂಗಿನ ಕಾಯಿ: ¼ ಕಪ್, ಒಣಮೆಣಸು: 2, ಸಾಸಿವೆ: ಅರ್ಧ ಚಮಚ, ಕರಿಬೇವು: 5 ರಿಂದ 6 ಎಲೆಗಳು, ಉಪ್ಪು: ರಚಿಗೆ ತಕ್ಕಷ್ಟು. ಮಾಡುವ ವಿಧಾನ: ಮೊದಲು ಮಾವಿನ ಹಣ್ಣಿನ ಸಿಪ್ಪೆ ತೆಗೆದು ಚೆನ್ನಾಗಿ ಕಿವುಚಿ. ಒಂದು ಮಿಕ್ಸಿ ಜಾರಿಗೆ ಕಾಯಿತುರಿ, ಹಸಿಮೆಣಸಿನಕಾಯಿ ಹಾಕಿ ಗ್ರೈಂಡ್ ಮಾಡಿ. ಗ್ರೈಂಡ್ ಮಾಡಿದ ಖಾರವನ್ನು ಮಾವಿನ ಹಣ್ಣಿನ ರಸಕ್ಕೆ ಹಾಕಿ. ಇದಕ್ಕೆ ರಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಒಂದು ಸಣ್ಣ ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ಅದಕ್ಕೆ ಸಾಸಿವೆ, ಕರಿಬೇವು, ಒಣಮೆಣಸು ಹಾಕಿ. ಈ ಒಗ್ಗರಣೆಯನ್ನು ಗೊಜ್ಜಿಗೆ ಹಾಕಿ. ಗೊಜ್ಜು ರೆಡಿ.
ಮಡಿಕೇರಿ ಮೇ 11 : ದೇವಸ್ತೂರು ಗ್ರಾಮದ ಮನೆಯೊಂದರಲ್ಲಿ ಸೇರಿಕೊಂಡಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಉರಗ ಪ್ರೇಮಿ ಪಿಯೂಷ್ ಪೆರೆರಾ ರಕ್ಷಿಸಿ ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಅರಣ್ಯಕ್ಕೆ ಬಿಟ್ಟರು.
ಕೆಲವೊಂದು ಕಡೆಗಳಲ್ಲಿ ಈಗಲೂ ಮಕ್ಕಳನ್ನು ಸ್ನಾನ ಮಾಡಿಸಲು ಕಡಲೆ ಹಿಟ್ಟನ್ನು ಬಳಸುವುದು ಇದೆ. ಕಡಲೆ ಹಿಟ್ಟು ತ್ವಚೆಗೆ ತುಂಬಾ ಒಳ್ಳೆಯದು ಎನ್ನುವ ಕಾರಣಕ್ಕಾಗಿ ಇದನ್ನು ಬಳಸಲಾಗುತ್ತದೆ. ನಾವು ಬಳಸುವಂತಹ ಸೋಪಿಗಿಂತ ಕಡಲೆ ಹಿಟ್ಟು ಚರ್ಮಕ್ಕೆ ಒಳ್ಳೆಯದು. ಕಡಲೆಹಿಟ್ಟಿನಲ್ಲಿ ಯಾವುದೇ ರೀತಿಯ ಹಾನಿಕಾರಕ ಪದಾರ್ಥಗಳು ಇರುವುದಿಲ್ಲ. ನಮ್ಮ ಹಿರಿಯರು ಹಿಂದಿನಿಂದಲೂ ಕಡಲೆಹಿಟ್ಟನ್ನು ಚರ್ಮದ ಆರೈಕೆಗೆ ಬಳಸಿಕೊಂಡು ಬಂದಿದ್ದಾರೆ. ಕಡಲೆಹಿಟ್ಟನ್ನು ಬಳಸಿದರೆ ಚರ್ಮದ ಕಲೆಗಳನ್ನು ನಿವಾರಿಸಬಹುದು. ಕಡಲೆಹಿಟ್ಟಿನಿಂದ ಒಳ್ಳೆಯ ತ್ವಚೆಯನ್ನು ಕೂಡ ಪಡೆಯಬಹುದಾಗಿದೆ. ನಿಯಮಿತವಾಗಿ ದೇಹಕ್ಕೆ ಕಡಲೆಹಿಟ್ಟನ್ನು ಬಳಸುವುದರಿಂದ ಕಾಂತಿಯುತ ತ್ವಚೆಯು ನಮ್ಮದಾಗುತ್ತದೆ. ಕಡಲೆಹಿಟ್ಟನ್ನು ಬಳಸಿ ನಿವಾರಿಸಬಹುದಾದ ಕೆಲವೊಂದು ಸಮಸ್ಯೆಗಳು. ಬಿಸಿಲಿನಲ್ಲಿ ತಿರುಗಾಡಿಕೊಂಡು ಬಂದ ಬಳಿಕ ಮುಖದ ಮೇಲೆ ಕಪ್ಪು ಕಲೆಗಳು ಬಿದ್ದಿದೆಯಾ? ಹಾಗಾದರೆ ಕಡಲೆಹಿಟ್ಟಿನಿಂದ ಇದನ್ನು ನಿವಾರಿಸಬಹುದು. ಎರಡು ಚಮಚ ಕಡಲೆ ಹಿಟ್ಟಿಗೆ ಒಂದು ಹಿಡಿ ಅರಶಿನ, ಕೆಲವು ಹನಿ ನಿಂಬೆರಸ ಮತ್ತು ಮೊಸರು ಹಾಕಿಕೊಂಡು ಬೆರೆಸಿಕೊಳ್ಳಿ. ಇದನ್ನು ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಇದನ್ನು ಒಣಗಲು ಬಿಡಿ. ಕೆಲವು ದಿನಗಳ ಕಾಲ…
ಮಡಿಕೇರಿ ಮೇ 11 : ಕಾಡುಕೋಣ ಡಿಕ್ಕಿ ಹೊಡೆದ ಪರಿಣಾಮ ಆಟೋವೊಂದು ಪ್ರಪಾತಕ್ಕೆ ಬಿದ್ದ ಘಟನೆ ಮಡಿಕೇರಿ ಸಮೀಪದ ಉದಯಗಿರಿಯಲ್ಲಿ ನಡೆದಿದೆ. ಚಂದ್ರಗಿರಿ ನಿವಾಸಿ ಜೈನುದ್ದೀನ್ ಎಂಬುವರಿಗೆ ಸೇರಿದ ಆಟೋ ಸುಮಾರು 30 ಅಡಿ ಪ್ರಪಾತಕ್ಕೆ ಉರುಳಿ ಬಿದ್ದಿದ್ದು, ಅದೃಷ್ಟವಶತ್ ಯಾವುದೇ ಪ್ರಾಣಾಪಯ ಸಂಭವಿಸಿದಲ್ಲ.
ಮಡಿಕೇರಿ ಮೇ 11 : ಕಂಡಕರೆಯ ಗಾಂಧಿ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಇರ್ಷಾದ್ ಕಂಡಕರೆ ಹಾಗೂ ಉಪಾಧ್ಯಕ್ಷ ಸವಾದ್ ಉಸ್ಮಾನ್ ಮತಗಟ್ಟೆ ಸಂಖ್ಯೆ 233 ಪೊನ್ನತ್ಮೊಟ್ಟೆಯಲ್ಲಿ ಮತ ಚಲಾಯಿಸಿದರು.
ಮಡಿಕೇರಿ ಮೇ 10 : ವಿಧಾನಸಭಾ ಚುನಾವಣೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಶೇ.74.74 ರಷ್ಟು ಮತದಾನವಾಗಿದೆ. ಒಟ್ಟು 4,56,313 ಮತದಾರರಲ್ಲಿ 3,41,046 ಮತದಾರರು ಮತದಾನ ಮಾಡಿದ್ದಾರೆ. ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,32,148 ಮತದಾರರಲ್ಲಿ 1,75,009 ಮತದಾರರು ಮತ ಚಲಾಯಿಸಿದ್ದು, ಶೇ.75.39 ರಷ್ಟು ಮತದಾನವಾಗಿದೆ. ವಿರಾಜಪೇಟೆ ಕ್ಷೇತ್ರದಲ್ಲಿ ಒಟ್ಟು 2,24,165 ಮತದಾರರಿದ್ದು, 1,66,037 ಮತದಾರರು ಮತ ಚಲಾಯಿಸಿದ್ದು, ಶೇ.74.07 ರಷ್ಟು ಮತದಾನವಾಗಿದೆ. ಜಿಲ್ಲೆಯಲ್ಲಿ 9 ಗಂಟೆ ವೇಳೆಗೆ ಶೇ.11.74 ರಷ್ಟು, 11 ಗಂಟೆ ವೇಳೆಗೆ ಶೇ.26.52 ರಷ್ಟು, ಮಧ್ಯಾಹ್ನ 1 ಗಂಟೆ ವೇಳೆಗೆ ಶೇ.45.64 ರಷ್ಟು, ಮಧ್ಯಾಹ್ನ 3 ಗಂಟೆ ವೇಳೆಗೆ 58.24 ರಷ್ಟು ಮತದಾನವಾಗಿತ್ತು. ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದ ಒಟ್ಟು 543 ಮತಗಟ್ಟೆಗಳಲ್ಲಿ ಮತದಾರರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಬೆಳಗ್ಗಿನ ವೇಳೆಯಲ್ಲಿ ಮತಗಟ್ಟೆ ಕೇಂದ್ರಗಳಲ್ಲಿ ಸರದಿ ಸಾಲಿನಲ್ಲಿ ನಿಂತು ಮತಹಕ್ಕು ಚಲಾಯಿಸಿದ್ದು ಕಂಡು ಬಂದಿತು. ಮತದಾರರು ಮತಹಕ್ಕು ಚಲಾಯಿಸಿ ಮತಗಟ್ಟೆಯಿಂದ ಹೊರಬರುತ್ತಿದ್ದ ದೃಶ್ಯವು ಮತದಾನದ ಹುಮ್ಮಸ್ಸನ್ನು ಹೆಚ್ಚಿಸಿತು. ಪ್ರಥಮ…
ಮಡಿಕೇರಿ ಮೇ 10 : ‘ಕೊಡಗಿನ ಕಾಫಿ’ ಈ ಬಾರಿಯ ಚುನಾವಣೆಯಲ್ಲಿ ಮತದಾರರನ್ನು ಮತಗಟ್ಟೆಯತ್ತ ಸೆಳೆೆಯುವ ಅಂಶವಾಗಿರುವ ವಿಶೇಷ ಈ ಬಾರಿಯ ಚುನಾವಣೆಯದ್ದು. ಜಿಲ್ಲೆಯ ಮೂರು ಮತಗಟ್ಟೆಗಳು ಕಾಫಿಯ ಚಿತ್ರಣಗಳನ್ನು ಒಳಗೊಂಡು ಅತ್ಯಾಕರ್ಷಕವಾಗಿ ಗಮನ ಸೆಳೆದದ್ದು ವಿಶೇಷ. ನಗರದ ಹಿಲ್ ರಸ್ತೆಯ ಸಿಎಂಸಿ ಮಾದರಿ ಪ್ರಾಥಮಿ ಶಾಲೆಯ 210 ನೇ ಮತಗಟ್ಟೆ ಕಾಫಿ ಹಣ್ಣುಗಳ ಗಿಡ, ಕಾಫಿ ಕೊಯ್ಯುವ ಮಹಿಳೆಯ ಚಿತ್ರಣಗಳೊಂದಿಗೆ ಅತ್ಯಾಕರ್ಷಕವಾಗಿ ಅಲಂಕೃತಗೊoಡಿತ್ತಲ್ಲದೆ, ಬಿಸಿ ಬಿಸಿ ಕಾಫಿ ಸವಿಯಲು ಇಲ್ಲಿ ಅವಕಾಶ ಕಲ್ಪಿಸಿದ್ದು ವಿನೂತನವಾಗಿತ್ತು. ಇದೇ ಮತಗಟ್ಟೆಯಲ್ಲಿ ವಿಶೇಷ ಚೇತನರಿಗಾಗಿ ರ‍್ಯಾಂಪ್, ರೈಲಿಂಗ್ಸ್, ವೀಲ್‌ಚೇರ್ ಹಾಗೂ ವಾಹನ ಸೌಲಭ್ಯ ಕಲ್ಪಿಸುವ ಮೂಲಕ ಮಾದರಿ ಮತಗಟ್ಟೆಯನ್ನಾಗಿಯೂ ರೂಪಿಸಲಾಗಿತ್ತು. ನಿರೀಕ್ಷಣಾ ಕೊಠಡಿ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳು ಕಲ್ಪಿಸಿದ್ದು ಮಾತ್ರವಲ್ಲದೆ, ವಿಶೇಷಚೇತನರು ಹಾಗೂ ಹಿರಿಯ ನಾಗರಿಕ ಮತದಾರರ ಸಹಾಯಕ್ಕಾಗಿ ಸ್ವಯಂ ಸೇವಕರ ಸೇವೆಯನ್ನು ಒದಗಿಸಲಾಗಿತ್ತು. ಈ ರೀತಿಯ ಮತಗಟ್ಟೆಗಳನ್ನು ರಂಗ ಸಮುದ್ರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಪೊನ್ನಂಪೇಟೆ ಜಿಎಂಪಿಎಸ್ ಶಾಲೆಯಲ್ಲೂ ಸಜ್ಜುಗೊಳಿಸಿ…
ಮಡಿಕೇರಿ ಮೇ 10 : ಪ್ರಜಾತಂತ್ರ ವ್ಯವಸ್ಥೆಯ ಅತ್ಯಂತ ಪವಿತ್ರ ‘ಮತದಾನ’ ಪ್ರಕ್ರಿಯೆಯ ಒಟ್ಟು ಪ್ರಮಾಣದ ಹೆಚ್ಚಳಕ್ಕೆ ಪೂರಕವಾಗಿ ಜಿಲ್ಲೆಯ ಎರಡು ಮತ ಕ್ಷೇತ್ರಗಳ ಹತ್ತು ಮತಗಟ್ಟೆಗಳು ‘ಸಖಿ ಮತಗಟ್ಟೆ’ಗಳಾಗಿ ಮತದಾರರ ಗಮನ ಸೆಳೆಯಿತು. ಜಿಲ್ಲಾ ಕೇಂದ್ರ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಮತಗಟ್ಟೆ 199 ಮತ್ತು ಮಹದೇವಪೇಟೆಯ ಸಿಎಂಸಿ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆ 201 ಸರ್ವಾಲಂಕೃತಗೊoಡು ‘ಸಖಿ ಮತಗಟ್ಟೆ’ಯಾಗಿ ಗಮನ ಸೆಳೆಯಿತು. ವಿಶೇಷವಾಗಿ ಈ ಮತಗಟ್ಟೆಗಳಲ್ಲಿ ಚುನಾವಣಾ ಸಿಬ್ಬಂದಿಗಳೆಲ್ಲರು ಮಹಿಳೆಯರೇ ಆಗಿದ್ದು, ಅತ್ಯಂತ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿ ಮೆಚ್ಚುಗೆಗೆ ಪಾತ್ರರಾದರು. ‘ನಾನು ಹೆಮ್ಮೆಯ ಮತದಾರ. ನನ್ನ ಮತ, ನನ್ನ ಧ್ವನಿ” ಘೋಷವಾಕ್ಯದ ಆಕರ್ಷಕ ಘೋಷಣೆಯೊಂದಿಗೆ ಸಖಿ ಮತಗಟ್ಟೆಯ ಮುಖ್ಯ ದ್ವಾರ ಮತದಾರರನನ್ನು ತನ್ನೆಡೆಗೆ ಸೆಳೆಯುವುದರೊಂದಿಗೆ, ಘೋಷಣೆಯ ಮೂಲಕ ಗಮನ ಸೆಳೆಯುತಿತ್ತು. ಈ ವಿಶೇಷ ಮತಗಟ್ಟೆಯಲ್ಲಿ ಮತದಾನ ಮಾಡಿದವರು ತಮ್ಮ ಭಾವ ಚಿತ್ರ ತೆಗೆದುಕೊಳ್ಳಲು ಅನುಕೂಲವಾಗುವಂತೆ ‘ಸೆಲ್ಫಿ ಬೂತ್’ ಸಜ್ಜುಗೊಳಿಸಿದ್ದು, ಸಾಕಷ್ಟು ಮತದಾರರು ಈ ಸೆಲ್ಫಿ ಬೂತ್‌ನಲ್ಲಿ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದು…






