ಲೇಖಕ: admin

ಸೋಮವಾರಪೇಟೆ ಫೆ.28 : ಭತ್ತದ ಫಸಲು ತುಂಬಿದ ಹುಲ್ಲಿನ ಮೆದೆಗೆ ಕಾಡಾನೆಗಳು ದಾಳಿ ನಾಶಪಡಿಸಿರುವ ಘಟನೆ ಐಗೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೃಷಿಕ ಕೆ.ಪಿ.ದಿನೇಶ್ ಎಂಬವರು ಗದ್ದೆಯಲ್ಲಿ ಸಂಗ್ರಹಿಸಿಟ್ಟ ಹುಲ್ಲನ್ನು ನಾಶಪಡಿಸಿದ್ದು, ರೂ. 1 ಲಕ್ಷ ನಷ್ಟ ಉಂಟಾಗಿದೆ ಎಂದು ಕೆ.ಪಿ.ದಿನೇಶ್ ಅರಣ್ಯ ಇಲಾಖೆಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಸ್ಥಳಕ್ಕೆ ಡಿಆರ್‍ಎಫ್‍ಒ ಜಗದೀಶ್ ಮತ್ತು ಅರಣ್ಯ ರಕ್ಷಕ ಭರಮಪ್ಪ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

Read More

ಸೋಮವಾರಪೇಟೆ ಫೆ.28 : ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆ ಮತ್ತು ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಲು ರಾಜ್ಯ ಸರ್ಕಾರಿ ನೌಕರರ ಸಂಘ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ತಾಲ್ಲೂಕು ಪ್ರಥಮಿಕ ಶಾಲಾ ಶಿಕ್ಷಕರ ಸಂಘ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಸಂಘದ ತಾಲೂಕು ಘಟಕ ಅಧ್ಯಕ್ಷ ಬಸವರಾಜು, ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಸೌಲಭ್ಯಗಳನ್ನು 2022ರ ಜುಲೈ 1 ರಿಂದಲೇ ಜಾರಿಗೊಳಿಸಬೇಕಾಗಿತ್ತು. ಆದರೆ, ಇದೂವರೆಗೂ ಜಾರಿಯಾಗಿಲ್ಲ. ಪ್ರಸಕ್ತ ಸಾಲಿನ ಮುಂಗಡ ಪತ್ರದಲ್ಲೂ ಇದರ ಉಲ್ಲೇಖವಿಲ್ಲ. ರಾಜ್ಯ ಸರ್ಕಾರಿ ನೌಕರರು ಹಾಗೂ ಸರ್ಕಾರದ ಅಧೀನಕ್ಕೆ ಒಳಪಡುವ ನೌಕರರು 7ನೇ ವೇತನ ಆಯೋಗದ ಸೌಲಭ್ಯಕ್ಕೆ ಅರ್ಹರಾಗಿದ್ದು, ರಾಜ್ಯ ಸರ್ಕಾರ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮೊದಲು ಈ ಸೌಲಭ್ಯಗಳನ್ನು ನೀಡಬೇಕೆಂದು ಆಗ್ರಹಿಸಿದರು. ರಾಜ್ಯದ ಎನ್‍ಪಿಎಸ್ ನೌಕರರ ಜೀವನ ನಿರ್ವಹಣೆ ಹಾಗೂ ಸಂದ್ಯಾಕಾಲದ ಬದುಕು ಅತ್ಯಂತ ಕಷ್ಟಕರವಾಗಿರುವುದರಿಂದ ಎನ್‍ಪಿಎಸ್ ನೌಕರರನ್ನು ಓಪಿಎಸ್ ವ್ಯಾಪ್ತಿಗೆ ತರಲೇಬೇಕು. ಈಗಾಗಲೇ ಪಂಜಾಬ್, ರಾಜಸ್ಥಾನ,…

Read More

ಸೋಮವಾರಪೇಟೆ ಫೆ.28 : ದೊಡ್ಡಮಳ್ತೆ ಫಾರ್ಮರ್ಸ್ ಸ್ಪೋರ್ಟ್ಸ್ ರಿಕ್ರಿಯೇಷನ್ ಅಸೋಸಿಯೇಷನ್ ವತಿಯಿಂದ ದೊಡ್ಡಮಳ್ತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬ್ಯಾಂಡ್‍ ಸೆಟ್ ನ್ನು ಕೊಡುಗೆಯಾಗಿ ನೀಡಲಾಯಿತು. ಶಾಲಾ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಸೋಸಿಯೇಷನ್ ಅಧ್ಯಕ್ಷ ಜಿ.ಪಿ.ಸುನೀಲ್ ಬ್ಯಾಂಡ್ ಸೆಟ್ ಹಸ್ತಾಂತರಿಸಿದರು. ನಂತರ ಮಾತನಾಡಿದ ಅವರು ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಅನುಭವಿ ಶಿಕ್ಷಕರು ಇರುತ್ತಾರೆ. ಸರ್ಕಾರದಿಂದ ಎಲ್ಲಾ ರೀತಿಯ ಸೌಲಭ್ಯಗಳು ಸಿಗುತ್ತಿವೆ. ಹಳ್ಳಿಗಾಡಿನ ಕ್ರೀಡಾ ಪ್ರತಿಭೆಗಳು ಗ್ರಾಮೀಣ ಶಾಲೆಯಲ್ಲಿ ಇದ್ದು, ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಶಿಕ್ಷಕರು, ಪೋಷಕರು, ನಾವೆಲ್ಲರೂ ಮಾಡಬೇಕು ಎಂದರು. ಈ ಸಂದರ್ಭ ಅಸೋಸಿಯೇಷನ್ ಕಾರ್ಯದರ್ಶಿ ಎಂ.ಪಿ.ರವಿ, ಎಸ್‍ಡಿಎಂಸಿ ಅಧ್ಯಕ್ಷ ಸತೀಶ್, ಗ್ರಾ.ಪಂ ಸದಸ್ಯ ರುದ್ರಪ್ಪ, ಮುಖ್ಯಶಿಕ್ಷಕಿ ತಂಗಮ್ಮ, ಶಾಲಾ ಜಾಗದ ದಾನಿಗಳಾದ ಶಾಂತಪ್ಪ, ಮಾಜಿ ಸೈನಿಕ ಶಾಂತರಾಜು, ದೈಹಿಕ ಶಿಕ್ಷಣ ಶಿಕ್ಷಕ ಶಿವಶಂಕರ್, ಅಸೋಸಿಯೇಷನ್ ಸದಸ್ಯರಾದ ಎಚ್.ಕೆ.ಪೃಥ್ವಿ, ಡಿ.ಎಸ್.ಸುಬ್ರಮಣಿ, ಎಂ.ಬಿ.ಚಂದ್ರಶೇಖರ್, ಎಚ್.ಕೆ.ಗಿರೀಶ್, ಚಿದಾನಂದ ಇದ್ದರು. ವಿದ್ಯಾರ್ಥಿಗಳಿಂದ ಆಕರ್ಷಕ ಕವಾಯತು ನಡೆಯಿತು.

Read More

ಮಡಿಕೇರಿ ಫೆ.27 : ನಗರಸಭೆ ಕೌನ್ಸಿಲ್‍ನ ಸಾಮಾನ್ಯ ಸಭೆಯು ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ಮಾ.2 ರಂದು ಬೆಳಗ್ಗೆ 11 ಗಂಟೆಗೆ ನಗರಸಭಾ ಕೌನ್ಸಿಲ್ ಸಭಾಂಗಣದಲ್ಲಿ ನಡೆಯಲಿದೆ ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.

Read More

ನಾಪೋಕ್ಲು ಫೆ.28 :  ಪ್ರತಿಯೊಬ್ಬರೂ ಸಮಾಜದಲ್ಲಿ ಸೌಹಾರ್ದತೆ ಮತ್ತು ಸಹಬಾಳ್ವೆಗೆ ಪ್ರಾಮುಖ್ಯತೆ  ನೀಡಿದರೆ ಮಾತ್ರ ಶಾಂತಿಯಿಂದ ಉತ್ತಮ ಜೀವನ ಸಾಗಿಸಲು ಸಾಧ್ಯ ಎಂದು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಶಾಫಿ ಸಅದಿ ಹೇಳಿದರು. ಇತಿಹಾಸ ಪ್ರಸಿದ್ಧ ನಾಪೋಕ್ಲು ಸಮೀಪದ ಎಮ್ಮೆಮಾಡು ಮಖಾಂ ಉರೂಸ್ ನ ಸರ್ವಧರ್ಮ ಸಮ್ಮೇಳನ ಉದ್ಘಾಟಿಸಿ  ಮಾತನಾಡಿದರು. ಎಮ್ಮೆಮಾಡುವಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಸೂಫಿ ಶಹೀದ್ ಅವರ ಜೀವನ ಚರಿತ್ರೆ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ 14ನೇ ಶತಮಾನದ ಜೀವನ ಚರಿತ್ರೆಯಾಗಿದೆ. ಇಸ್ಲಾಂ ಧರ್ಮವು ಶಾಂತಿಯ ಧರ್ಮವಾಗಿದ್ದು ಇಲ್ಲಿ ಯಾರಿಗೂ ಅಶಾಂತಿಯನ್ನು ಮೂಡಿಸಲು ಕಲಿಸಿಕೊಟ್ಟಿಲ್ಲ. ನಮ್ಮ ರಾಜ್ಯದ ವಿವಿಧ ಜಿಲ್ಲೆಗಳ ದರ್ಗಾ ಮತ್ತು ದೇವಾಲಯಗಳಲ್ಲಿ ಸಾಮರಸ್ಯದಿಂದ ಉತ್ಸವಗಳನ್ನು ಆಚರಿಸುತ್ತಾರೆ. ಇದು ಹಿಂದಿನ ಕಾಲದಿಂದಲೂ ರಾಜ್ಯದ ಕೆಲವು ಕಡೆಗಳಲ್ಲಿ ಎಲ್ಲಾ ಧರ್ಮದವರು ಒಗ್ಗೂಡಿ ಸಾಮರಸ್ಯದಿಂದ ಉತ್ಸವಗಳನ್ನು ಆಚರಿಸುವಂತಹ ಪದ್ಧತಿ, ಅದು ಕೆಲವು ಕಡೆಗಳಲ್ಲಿ ಈಗಲೂ ನಡೆಯುತ್ತಿದೆ. ಇದರಿಂದ ಕೆಲವು ಮಂದಿರಗಳಲ್ಲಿ ಮುಸ್ಲಿಮರ ಮೊಹರಂ, ಈದ್ ಆಚರಣೆ ನಡೆಯುತ್ತದೆ, ಅದೇ ರೀತಿ…

Read More

ಸೋಮವಾರಪೇಟೆ ಫೆ.27 : ಆಕಸ್ಮಿಕವಾಗಿ ಕಾಫಿ ತೋಟಕ್ಕೆ ಬೆಂಕಿ ಬಿದ್ದು ಹಾನಿಯಾಗಿರುವ ಘಟನೆ ಕಿರಗಂದೂರು ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ. ಬಡಗಿಮನೆ ಬಿ.ಎನ್.ಚಂದ್ರ, ಗಿರಿಜಮ್ಮ ಎಂಬವರ ಕಾಫಿ ತೋಟಕ್ಕೆ ಬೆಂಕಿ ಬಿದ್ದಿದೆ. ಗ್ರಾಮಸ್ಥರು ಬೆಂಕಿ ಆರಿಸಿದ್ದಾರೆ. ಫಸಲು ಕೊಡುತ್ತಿದ್ದ 200 ಕಾಫಿ ಗಿಡಗಳು, 30 ಮೆಣಸಿನ ಬಳ್ಳಿ, ಹತ್ತು ಸಿಲ್ವರ್ ಮರಗಳು ಬೆಂಕಿಗಾಹುತಿಯಾಗಿವೆ. ಬೆಂಕಿ ಅವಗಡಕ್ಕೆ ಕಾರಣ ತಿಳಿದುಬಂದಿಲ್ಲ. ತೋಟಗಾರಿಕಾ ಇಲಾಖೆ ಮತ್ತು ಕಂದಾಯ ಇಲಾಖೆಗೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ.

Read More

ಸೋಮವಾರಪೇಟೆ ಫೆ.27 : ರಾಷ್ಟ್ರೀಯ ಮತದಾನ ಜಾಗೃತಿ ಅಭಿಯಾನದ ಅಂಗವಾಗಿ ಪಟ್ಟಣ ಪಂಚಾಯಿತಿ ಮತಗಟ್ಟೆಯಲ್ಲಿ ಅಣಕು ಮತದಾನ ನಡೆಯಿತು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ.ಚಂದ್ರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಚುನಾವಣಾಧಿಕಾರಿ ನಾಚಪ್ಪ ಅವರು ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ ಮತದಾನ ಮಾಡುವ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಸದಸ್ಯರಾದ ಎಸ್.ಮಹೇಶ್ ಇದ್ದರು.

Read More

ಸೋಮವಾರಪೇಟೆ ಫೆ.27 : ಸೋಮವಾರಪೇಟೆ ತಾಲ್ಲೂಕಿನ ಯಡವಾರೆ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಕಾಫಿ ತೋಟಕ್ಕೆ ನುಗ್ಗಿ ದಾಂಧಲೆ ಮಾಡುತ್ತಿದೆ ಎಂದು ಮಚ್ಚಂಡ ಅಶೋಕ್ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಅಶೋಕ್ ಅವರ ಕಾಫಿ ತೋಟದಲ್ಲಿ ಕಾರ್ಮಿಕರು ಕಾಫಿ ಕೂಯ್ಲು ಮಾಡುತ್ತಿರುವ ಸಂದರ್ಭದಲ್ಲಿಯೇ ಕಾಡಾನೆಗಳು ಕಾಣಿಸಿಕೊಂಡಿದ್ದು, ಭಯಭೀತರಾದ ಕಾರ್ಮಿಕರು ಧಿಕ್ಕಾಪಾಲಾಗಿ ಓಡಿ ಪ್ರಾಣ ಉಳಿಸಿಕೊಂಡ ಘಟನೆ ನಡೆದಿದೆ. ಶನಿವಾರ ಸಂಜೆ ಕಾಡಾನೆಗಳ ಹಿಂಡು ಕಾಫಿತೋಟಕ್ಕೆ ಲಗ್ಗೆ ಇಟ್ಟಿವೆ. ಇಲಾಖೆಗೆ ವಿಷಯ ತಿಳಿಸಿದ ಮೇರೆಗೆ ಸ್ಥಳಕ್ಕೆ ಆಗಮಿಸಿದ ಆನೆ ಕಾರ್ಯಚರಣೆ ಪಡೆ ಸಿಬ್ಬಂದಿಗಳು ಪಟಾಕಿಯನ್ನು ಸಿಡಿಸಿ ಕಾಡಾನೆಗಳನ್ನು ಕಾಡಿಗಟ್ಟಲು ಶ್ರಮಿಸಿದ್ದಾರೆ. ಈ ಸಂದರ್ಭ ಕಾಫಿ ತೋಟದ ಮಾಲೀಕರು, ತೋಟದಲ್ಲಿದ್ದ ಕಾಫಿಯನ್ನು ಸಾಗಿಸಲಾಗದೆ ಬೆಳಗ್ಗೆ ಬಂದು ನೋಡಿದಾಗ ಕಾಡಾನೆಗಳ ಹಿಂಡು ಸುಮಾರು 15 ಕಾಫಿ ಗಿಡ ಮುರಿದು, ಸುಮಾರು 50 ಚೀಲದಷ್ಟು ಕಾಫಿ ಮೂಟೆಗಳನ್ನು ಎಸೆದು ನಾಶಪಡಿಸಿವೆ. ಇದರಿಂದ ತೋಟದ ಮಾಲೀಕರಿಗೆ ಸುಮಾರು 70 ಸಾವಿರ ರೂಪಾಯಿಗಳ ನಷ್ಟ ಸಂಭವಿಸಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳಾದ…

Read More

ಸೋಮವಾರಪೇಟೆ ಫೆ.27 : ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ವಾರ್ಷಿಕ ಮಹಾಸಭೆಯು  ಸ್ಥಳೀಯ ಕೊಡವ ಸಮಾಜದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಎಚ್.ಕೆ.ಗಂಗಾಧರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಹೊಸ ಸದಸ್ಯತ್ವ ಶುಲ್ಕ, ಸಂಘದ ಸದಸ್ಯರ ವೈದ್ಯಕೀಯ ವೆಚ್ಚ, ಮರಣ ನಿಧಿ ವಂತಿಗೆ ಕುರಿತು ಚರ್ಚೆ ನಡೆಯಿತು. ಸಂಘದ ಅಭಿವೃದ್ಧಿ ಕುರಿತು ಹಿರಿಯ ಸದಸ್ಯರುಗಳು ಸಲಹೆ ನೀಡಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಟಿ.ಎಂ.ಅಬ್ದುಲ್ ಕರೀಂ, ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜನಾರ್ಧನ್, ಉಪ ಕಾರ್ಯದರ್ಶಿ ರಮೇಶ್,ಖಜಾಂಚಿ ಸುದೀಪ್ ಆಲ್ಬರ್ಟ್, ಸಹ ಕಾರ್ಯದರ್ಶಿ ಪ್ರಭಾಕರ್ ಸೇರಿದಂತೆ ಮಾಜಿ ಅಧ್ಯಕ್ಷರುಗಳು, ಗೌರವ ಸಲಹೆಗಾರರು ಇದ್ದರು.

Read More

ಮಡಿಕೇರಿ ಫೆ.27 : ಹೆಚ್.ಡಿ.ದೇವೇಗೌಡ ಅಭಿಮಾನಿಗಳ ಸಂಘದಿಂದ ಮಡಿಕೇರಿಯಲ್ಲಿ ಮಾ.18 ಮತ್ತು 19 ರಂದು ರಾಷ್ಟçಮಟ್ಟದ ಪುರುಷರು ಹಾಗೂ ಮಹಿಳೆಯರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ನಡೆಯಲಿದೆ. ಸಂಘದ ಸಂಚಾಲಕ ಬಲ್ಲಚಂಡ ಗೌತಮ್, ಸಹ ಸಂಚಾಲಕರುಗಳಾದ ಎನ್.ಸಿ.ಸುನಿಲ್, ಇಸಾಕ್ ಖಾನ್, ಪುಷ್ಪಾವತಿ ರಮೇಶ್ ಹಾಗೂ ಮುಸ್ತಫ ಅವರುಗಳು ಪಂದ್ಯಾವಳಿಯ ಕುರಿತು ಮಾಹಿತಿ ನೀಡಿದ್ದಾರೆ. ಹೆಚ್.ಡಿ.ಡಿ. ಟ್ರೋಫಿ -2023 ಪಂದ್ಯಾವಳಿಯು ಎರಡು ದಿನಗಳ ಕಾಲ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದೇ ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಮಹಿಳಾ ತಂಡಗಳ ನಡುವೆ ವಾಲಿಬಾಲ್ ಪಂದ್ಯಾವಳಿ ನಡೆಯುತ್ತಿರುವುದು ವಿಶೇಷ. ಆಹ್ವಾನಿತ ಪುರುಷರ 8 ತಂಡಗಳು ಹಾಗೂ ಮಹಿಳೆಯರ 4 ತಂಡಗಳು ಪಾಲ್ಗೊಳ್ಳಲಿದ್ದು, ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ. ::: ಪೋಸ್ಟರ್ ಬಿಡುಗಡೆ ::: ಹೆಚ್.ಡಿ.ಡಿ. ಟ್ರೋಫಿ -2023 ಪಂದ್ಯಾವಳಿಯ ಪೋಸ್ಟರ್ ನ್ನು ಇತ್ತೀಚೆಗೆ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ…

Read More