ಲೇಖಕ: admin

ಮಡಿಕೇರಿ ಏ.5 : ಕರ್ನಾಟಕ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ನಡೆದ 42 ನೇ ರಾಷ್ಟ್ರೀಯ ವೆಟರನ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಮಡಿಕೇರಿಯ ಜಿಲ್ಲಾಸ್ಪತ್ರೆಯ ಶುಶ್ರೂಷಕ ಅಧಿಕಾರಿ ಬಿ.ವಸಂತಿ ಅವರು ಎರಡು ಪದಕಗಳನ್ನು ಗೆದ್ದಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟೇಡಿಯಂ ನಲ್ಲಿ ನಡೆದ 400 ಮೀ ಓಟದಲ್ಲಿ ಬೆಳ್ಳಿ ಪದಕ ಮತ್ತು 100 ಮೀ ನಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡು ಅಂತರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಮೈಸೂರಿನ ಚಾಮುಂಡೇಶ್ವರಿ ಸ್ಟೇಡಿಯಂನಲ್ಲಿ ನಡೆದ ಸರಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ 100 ಮೀ ಓಟದಲ್ಲಿ ಬೆಳ್ಳಿ ಪದಕ ಗೆದ್ದು ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದರು. ಬಿ.ವಸಂತಿ ಅವರು ಜಿಲ್ಲಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸರಕಾರಿ ಆಸ್ಪತ್ರೆಯಲ್ಲಿ ಶುಶ್ರೂಷಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ, ಇತ್ತೀಚೆಗೆ ಮೈಸೂರು ಕೆ.ಆರ್.ಆಸ್ಪತ್ರೆಯಲ್ಲಿ ಹಿರಿಯ ಶುಶ್ರೂಕ ಅಧಿಕಾರಿಯಾಗಿ ಬಡ್ತಿ ಹೊಂದಿದ್ದಾರೆ. ಇವರು ಅನೇಕ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಕೊಡಗು ಜಿಲ್ಲೆ ಹಾಗೂ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದಾರೆ.…

Read More

ಮಡಿಕೇರಿ ಏ.5 : ಶನಿವಾರಸಂತೆ ಸಮೀಪದ ಗೌಡಳ್ಳಿ ಗ್ರಾ.ಪಂ ವ್ಯಾಪ್ತಿಯ ಹಿರಿಕರ ಗ್ರಾಮದೊಳಗೆ ಲಗ್ಗೆ ಇಡುತ್ತಿದ್ದ ಕಾಡಾನೆಗಳು ಹಾಗೂ ಕಾಟಿಗಳ ನಿಯಂತ್ರಣಕ್ಕಾಗಿ ಅರಣ್ಯ ಇಲಾಖೆ ಸಿಮೆಂಟ್ ಪಿಲ್ಲರ್ ತಡೆಗೋಡೆಯನ್ನು ಪ್ರಾಯೋಗಿಕವಾಗಿ ನಿರ್ಮಾಣ ಮಾಡಿದ್ದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ. ಅರಣ್ಯ ಇಲಾಖೆ ರೂ.16 ಲಕ್ಷ ವೆಚ್ಚದಲ್ಲಿ 2.25 ಮೀಟರ್ ಎತ್ತರ ಹಾಗೂ 75 ಮೀಟರ್ ಉದ್ದದ ತಡೆಗೋಡೆ ನಿರ್ಮಾಣ ಮಾಡಿ ಒಂದು ತಿಂಗಳಾಗಿದೆ.ಈವರೆಗೂ ಆನೆಗಳು ಗ್ರಾಮದೊಳಗೆ ಕಾಣಿಸಿಕೊಂಡಿಲ್ಲ ಎಂದು ಅಧಿಕಾರಿಗಳು ಹಾಗೂ ಗ್ರಾಮಸ್ಥರು ಅಭಿಪ್ರಾಯಪಡುತ್ತಾರೆ. ಸಮೀಪದ ಮಾಲಂಬಿ ಮೀಸಲು ಅರಣ್ಯದಿಂದ ಪಂಚಾಯಿತಿ ವ್ಯಾಪ್ತಿಯ ಹಿರಿಕರ ಗ್ರಾಮದ ಮೂಲಕ ಸಂಚರಿಸುತ್ತಿದ್ದ ಕಾಡಾನೆಗಳು, ಕಾಟಿಗಳು ಕೂಗೂರು, ಚಿಕ್ಕಾರ ಇತರ ಗ್ರಾಮಗಳಲ್ಲಿ ಬೀಡುಬಿಟ್ಟು ತೋಟ-ಗದ್ದೆಗಳಿಗೆ ನುಗ್ಗಿ ದಾಂಧಲೆ ಎಬ್ಬಿಸಿ ಬೆಳೆ ಹಾನಿ ಮಾಡುತ್ತಿದ್ದವು.ಕಾಡಾನೆಗಳು ಹಾಗೂ ಕಾಟಿಗಳು ಹಾವಳಿಯಿಂದ ಗ್ರಾಮಸ್ಥರು ಕಂಗಾಲಾಗಿದ್ದರು. ಈ ಹಿಂದೆ ಹಿರಿಕರ ಗ್ರಾಮದ ರೈತ ಮಹಿಳೆಯೊಬ್ಬರ ಕಾಫಿ ತೋಟದ ಅಂಚಿನಲ್ಲಿ ಆನೆಗಳು ಬರುತ್ತಿದ್ದ ಜಾಗ ಗುರುತಿಸಿ ಕಂದಕ ನಿರ್ಮಾಣ ಮಾಡಲಾಗಿತ್ತು.ಮಣ್ಣು ಕುಸಿದು ಕಂದಕ ಮುಚ್ಚಿಹೋದ…

Read More

ವಿರಾಜಪೇಟೆ ಏ.5 : ಬಿಟ್ಟಂಗಾಲ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಪೊನ್ನಿಮನೆ ಅಯ್ಯಪ್ಪ ಮತ್ತು ಬೋಟೆ ಚಾಮುಂಡಿ ದೇವರ ವಾರ್ಷಿಕ ಉತ್ಸವವು ಇದೇ ಏ.8 ಮತ್ತು 9 ರಂದು ಜರುಗಲಿದೆ. ಉತ್ಸವದ ಅಂಗವಾಗಿ ಏ.8ರಂದು ಶನಿವಾರ ರಾತ್ರಿ 8 ಗಂಟೆಗೆ ಭಂಡಾರ ಹೊರಡುವುದು, 8.30 ಗಂಟೆಗೆ ದೇವಸ್ಥಾನದಲ್ಲಿ ಕೊಟ್ಟಿ ಪಾಟ್ ಮತ್ತು 10 ಗಂಟೆಗೆ ವಿವಿಧ ಧಾರ್ಮಿಕ ಕೋಲಗಳು ನಡೆಯಲಿದೆ. ಏ.9 ರಂದು ಬೆಳಿಗ್ಗೆ 9 ಗಂಟೆಗೆ ಬೋಟೆ ಚಾಮುಂಡಿ ಹಾಗೂ ವಿಷ್ಣುಮೂರ್ತಿ ದೇವರ ತೆರೆ ಸೇರಿದಂತೆ ವಿವಿಧ ತೆರೆಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ ಎಂದು ಬಿಟ್ಟಂಗಾಲದ ಪೊನ್ನಿರ ಕುಟುಂಬಸ್ಥರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಮಡಿಕೇರಿ ಏ.5 : ರೋಟರಿ ಮಡಿಕೇರಿ ವತಿಯಿಂದ ವಿದ್ಯಾಸಿರಿ ಯೋಜನೆಯಡಿ ಮಾದಾಪುರದ ಡಿ.ಚೆನ್ನಮ್ಮ ಪ್ರೌಢಶಾಲೆಗೆ ರೂ.50 ಸಾವಿರ ಮೌಲ್ಯದ ಇನ್ವರ್ಟರ್ ಮತ್ತು ಪ್ರಿಂಟಿಂಗ್ ಯಂತ್ರವನ್ನು ಕೊಡುಗೆಯಾಗಿ ನೀಡಲಾಯಿತು. ರೋಟರಿ ಮಡಿಕೇರಿ ಅಧ್ಯಕ್ಷ ಕೆ.ಸಿ.ಕಾರ್ಯಪ್ಪ, ರೋಟರಿಯನ್ ಉಪ ರಾಜ್ಯಪಾಲ ರತನ್ ತಮ್ಮಯ್ಯ, ಕಾಲೇಜಿನ ಪ್ರಾಂಶುಪಾಲರಾದ ಮಂದಪ್ಪ, ಶಾಲಾ ಸಮಿತಿ ಅಧ್ಯಕ್ಷ ಕರ್ನಲ್ ಕುಮಾರ್, ಕಾರ್ಯದರ್ಶಿ ಮಧು ಬೋಪಣ್ಣ, ರೋಟರಿಯನ್ ಅನಿಲ್ ಕೃಷ್ಣಾನಿ, ಲಲಿತಾ ರಾಘವನ್, ಮಲ್ಲಿಗೆ ಪೈ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.

Read More

ಮಡಿಕೇರಿ ಏ.5 : ಕೊಡಗು ರಕ್ಷಣಾ ವೇದಿಕೆ, ಮಡಿಕೇರಿ ನಗರ ಆಟೋ ಚಾಲಕರ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಅಧ್ಯಕ್ಷರಾಗಿ ಸುಲೇಮಾನ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ವರ್ಗೀಸ್, ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ್, ಕಾರ್ಯದರ್ಶಿಯಾಗಿ ಯಕ್ಷಿತ್, ಖಜಾಂಚಿಯಾಗಿ ರಫೀಕ್, ಸಂಘಟನಾ ಕಾರ್ಯದರ್ಶಿ ಫಯಾಜ್ ನೇಮಕಗೊಂಡಿದ್ದಾರೆ. ನಿರ್ದೇಶಕರುಗಳಾದ ಇಮ್ರಾನ್, ಅಕ್ರಂ, ನವೀನ, ಕೆ.ಕೆ.ಶರೀಫ್, ನಿಯಾಜ್ (ಅಣ್ಣ), ಸುಲ್ತಾನ್, ಬಿ.ಎಂ.ಸತೀಶ್, ಮುಕುಂದ, ನೌಶಾದ್, ಅಲ್ಮಾಸ್, ಶರೀಫ್, ಹರ್ಷ, ದಾವುದ್, ಇರ್ಫಾನ್, ಅಶ್ರಫ್, ಜಮೀಲ್ ಆಯ್ಕೆಯಾಗಿದ್ದಾರೆ ಎಂದು ಕೊರವೇ ಅಧ್ಯಕ್ಷ ಅಚ್ಚಂಡಿರ ಪವನ್ ಪೆಮ್ಮಯ್ಯ ತಿಳಿಸಿದ್ದಾರೆ.

Read More

ಮಡಿಕೇರಿ ಏ.5 : ಗುಂಡು ಹೊಡೆದುಕೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಡಿಕೇರಿ ಸಮೀಪದ ಕಾಟಕೇರಿ ಗ್ರಾಮದಲ್ಲಿ ನಡೆದಿದೆ. ಕಾಟಕೇರಿ ನಿವಾಸಿ ಕೆ.ಎ.ಉತ್ತಪ್ಪ (72) ಎಂಬುವವರೆ ಸಾವನ್ನಪ್ಪಿರುವ ವ್ಯಕ್ತಿ. ಬುಧವಾರ ಬೆಳಗ್ಗಿನ ಜಾವ ಉತ್ತಪ್ಪ ಅವರು ಕಾಫಿ ತೋಟದಲ್ಲಿ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದ್ದು, ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

Read More

ಮಡಿಕೇರಿ ಏ.5 : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ಪ್ರತಿಷ್ಠಿತ “ಗೌರಮ್ಮ ದತ್ತಿ ಪ್ರಶಸ್ತಿ”ಗೆ ಜಿಲ್ಲೆಯ ಮಹಿಳಾ ಲೇಖಕಿಯರು ಬರೆದು ಪ್ರಕಟಿಸಿದ ಕನ್ನಡ ಭಾಷೆಯ ಕೃತಿಗಳನ್ನು ಆಹ್ವಾನಿಸಲಾಗಿದೆ. 2022-23 ನೇ ಸಾಲಿನ ಪ್ರಶಸ್ತಿ ಪುರಸ್ಕಾರ ಪಡೆಯಲು ಆಸಕ್ತ ಲೇಖಕಿಯರು ತಾವು ರಚಿಸಿದ ಪುಸ್ತಕದ ನಾಲ್ಕು ಪ್ರತಿಗಳನ್ನು ಅರ್ಜಿಯೊಂದಿಗೆ ಅಧ್ಯಕ್ಷರು, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅಂಬೇಡ್ಕರ್ ಭವನದ ಬಳಿ, ಸುದರ್ಶನ ವೃತ್ತ, ಮಡಿಕೇರಿ. ಮೊಬೈಲ್ ಸಂಖ್ಯೆ 94483 46276. ಇಲ್ಲಿಗೆ ದಿನಾಂಕ 20.4.2023 ರ ಒಳಗಾಗಿ ತಲುಪಿಸಬೇಕೆಂದು ಪರಿಷತ್ತಿನ ಅಧ್ಯಕ್ಷ  ಎಂ.ಪಿ. ಕೇಶವ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಮಡಿಕೇರಿ ಏ.4 : ಬಸ್ ವೊಂದು ಎರಡು ಬೈಕ್ ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ಹೊರ ವಲಯದ ಆಸ್ಪತ್ರೆ ಬಳಿ ಮಂಗಳವಾರ ನಡೆದಿದೆ. ಮಾಡ್ರಹಳ್ಳಿ ಗ್ರಾಮದ ರಾಜು(45) ಮೃತ ವ್ಯಕ್ತಿಯಾಗಿದ್ದು, ಮತ್ತೊಂದು ಬೈಕ್ ಸವಾರ ಕಿಲಗೆರೆ ಗ್ರಾಮದ ವೆಂಕಟಯ್ಯ(70) ಎಂಬುವವರ ಬಲಗಾಲು ತುಂಡಾಗಿದೆ. ಗುಂಡ್ಲುಪೇಟೆಯಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಅರುಣಾಚಲ ಪ್ರದೇಶ ಮೂಲದ ಬಸ್ ಎರಡು ಬೈಕ್ ಗಳಿಗೆ ಡಿಕ್ಕಿಯಾಗಿದ್ದು, ಘಟನೆ ನಡೆದ ತಕ್ಷಣ ಚಾಲಕ ಹಾಗೂ ನಿರ್ವಾಹಕ ತಲೆ ಮರೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮಡಿಕೇರಿ ಏ.4 : ನಿಮ್ಮ ಮನಮೆಚ್ಚುವ  ಆಭರಣ ಸಂಗ್ರಹದೊಂದಿಗೆ ಜಿ.ಎಲ್ ಆಚಾರ್ಯದ ಅತಿದೊಡ್ಡ ವಾರ್ಷಿಕ ಹಬ್ಬ “ಹರುಷದ ವರುಷ” April 03 ರಿಂದ 09 ರವರೆಗೆ ನಡೆಯಲಿದೆ. ಬಗೆಬಗೆಯ ಚಿನ್ನ, ವಜ್ರ ಮತ್ತು ಬೆಳ್ಳಿಯ ಆಭರಣದ ಸಂಗ್ರಹ ಹಾಗೂ ಆಕರ್ಷಕ ಕೊಡುಗೆಗಳೊಂದಿಗೆ ನಿಮ್ಮನ್ನು ಪ್ರೀತಿಪೂರ್ವಕವಾಗಿ ಬರಮಾಡಿಕೊಳ್ಳಲು ಜಿ ಎಲ್ ಆಚಾರ್ಯ ಕುಟುಂಬ ಕಾತರದಿಂದ ಕಾದಿದೆ. ತಪ್ಪದೆ ಭೇಟಿ ನೀಡಿ! .

Read More