ಮಡಿಕೇರಿ ಮಾ.30 : ಎಸ್‍ಎಸ್‍ಎಲ್‍ಸಿ ಪರೀಕ್ಷೆಯು ಮಾರ್ಚ್ 31 ರಿಂದ ಆರಂಭವಾಗಲಿದ್ದು, ಜಿಲ್ಲೆಯಲ್ಲಿ 170 ಶಾಲೆಗಳ 6,587 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ಸಿ.ರಂಗಧಾಮಯ್ಯ ಅವರು ತಿಳಿಸಿದ್ದಾರೆ. ಮಡಿಕೇರಿ ತಾಲ್ಲೂಕಿನ 43 ಶಾಲೆಗಳ 1,886, ಸೋಮವಾರಪೇಟೆ ತಾಲ್ಲೂಕಿನ 70 ಶಾಲೆಗಳ 2,611 ವಿದ್ಯಾರ್ಥಿಗಳು, ವಿರಾಜಪೇಟೆ ತಾಲ್ಲೂಕಿನ 57 ಶಾಲೆಯ 2,090 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 2022-23 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 10 ನೇ ತರಗತಿ ಪರೀಕ್ಷೆಗೆ ತಾಲ್ಲೂಕುವಾರು ನೋಂದಣಿ ಮಾಡಿಕೊಂಡಿರುವ ವಿದ್ಯಾರ್ಥಿಗಳ ವಿವರ ಇಂತಿದೆ. ಮಡಿಕೇರಿ ತಾಲ್ಲೂಕಿನ 43 ಶಾಲೆಗಳ 1886 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಅದರಲ್ಲಿ 922 ಹುಡುಗಿಯರು, 897 ಹುಡುಗರು, ಖಾಸಗಿಯಾಗಿ ಒಟ್ಟು 67 ವಿದ್ಯಾರ್ಥಿಗಳು, ಅದರಲ್ಲಿ 46 ಹುಡುಗಿಯರು, 21 ಹುಡುಗರು ಪರೀಕ್ಷೆ ಬರೆಯಲಿದ್ದಾರೆ. ಸೋಮವಾರಪೇಟೆ ತಾಲ್ಲೂಕಿನ 70 ಶಾಲೆಗಳ 2611 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಅದರಲ್ಲಿ 1311 ಹುಡುಗಿಯರು, 1157 ಹುಡುಗರು, ಖಾಸಗಿಯಾಗಿ ಒಟ್ಟು 143…
ಲೇಖಕ: admin
ಮಡಿಕೇರಿ ಮಾ.30: ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ರ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಯಾವುದೇ ಚುನಾವಣಾ ಸಂಬಂಧಿತ ಪ್ರಕ್ರಿಯೆ ಮತ್ತು ಚಟುವಟಿಕೆಗಳಲ್ಲಿ ಮಕ್ಕಳನ್ನು ಬಳಸಿಕೊಳ್ಳುವುದನ್ನು ನಿಷೇಧಿಸಲಾಗಿದೆ ಎಂದು ಕಾರ್ಮಿಕ ಅಧಿಕಾರಿಗಳು ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಸದಸ್ಯ ಕಾರ್ಯದರ್ಶಿ ಅವರು ತಿಳಿಸಿದ್ದಾರೆ.
ಮಡಿಕೇರಿ ಮಾ.30 : ಕೊಡಗು ಜಿಲ್ಲೆಯಲ್ಲಿ ಮಾರ್ಚ್, 31 ರಿಂದ ಏಪ್ರಿಲ್, 15 ರವರೆಗೆ ನಡೆಯುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳನ್ನು ಯಾವುದೇ ಅವ್ಯವಹಾರಗಳಿಲ್ಲದಂತೆ ಸುಗಮವಾಗಿ ನಡೆಸುವ ಸಲುವಾಗಿ ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ 144 ರಡಿ ದತ್ತವಾದ ಅಧಿಕಾರದಂತೆ ಪರೀಕ್ಷಾ ಕೇಂದ್ರ ಸೇರಿದಂತೆ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿನ ಪ್ರದೇಶವನ್ನು ನಿರ್ಬಂಧಿತ ಪ್ರದೇಶ ಎಂದು ಘೋಷಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ಬಿ.ಸಿ.ಸತೀಶ ಆದೇಶ ಹೊರಡಿಸಿದ್ದಾರೆ. ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಗಳ ವಿವರ:- ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಸಂತ ಮೈಕಲ್ಲರ ಪ್ರೌಢ ಶಾಲೆ, ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆ, ಚೇರಂಬಾಣೆ ಅರುಣಾ ಪದವಿ ಪೂರ್ವ ಕಾಲೇಜು, ಮೂರ್ನಾಡು, ಸಿದ್ದಾಪುರ, ಸಂಪಾಜೆ ಪ್ರೌಢಶಾಲೆ, ಸಂತ ಜೋಸೆಫರ ಪ್ರೌಢ ಶಾಲೆ, ಸೋಮವಾರಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು, ಓ.ಎಲ್.ವಿ. ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಕುಶಾಲನಗರ ಫಾತಿಮಾ ಕಾನ್ವೆಂಟ್ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು, ಶನಿವಾರಸಂತೆ ಪದವಿ ಪೂರ್ವ…
ಬೆಂಗಳೂರು: ಉದ್ಭವಃ ವತಿಯಿಂದ ಏಪ್ರಿಲ್ 9ರಂದು ಬೆಳಿಗ್ಗೆ 11 ರಿಂದ ಸಂಜೆ 7 ಗಂಟೆಯ ವರೆಗೆ ಒಂದು ದಿನದ ಉದ್ಭವಃ ಉತ್ಸವ ಹಮ್ಮಿಕೊಳ್ಳಲಾಗಿದೆ. ಕೆಂಗೇರಿ ಸಮೀಪದ ರಾಮೋನಹಳ್ಳಿ ಮುದ್ದಯ್ಯನಪಾಳ್ಯದ ಉದ್ಭವಃ ಕ್ಯಾಂಪಸ್‍ನಲ್ಲಿ ಈ ಉತ್ಸವ ನಡೆಯಲಿದೆ. ಪೋಷಕರು, ಮಕ್ಕಳು ಮತ್ತು ಇಡೀ ಕುಟುಂಬಕ್ಕೆ ಹಳ್ಳಿಗಾಡಿನ ಹಳ್ಳಿ ಆಟಗಳು ಮತ್ತು ಸಾಂಪ್ರದಾಯಿಕ ಕಲಾ ಕೆಲಸದ ಅನುಭವಗಳ ಆಚರಣೆ ಉತ್ಸವದ ವಿಶೇಷತೆಯಾಗಿದೆ. ಉತ್ಸವವು ನಗರದ ಜೀವನದ ಜಂಜಾಟದಿಂದ ದೂರವಿರುವ ಮಕ್ಕಳ ಸಂವೇದನಾ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಸರಳ ಆಟಗಳ ಸಂತೋಷವನ್ನು ಮರಳಿ ತರುವ ಗುರಿಯನ್ನು ಹೊಂದಿದೆ. ಏಪ್ರಿಲ್ 2ರ ಮೊದಲು ನೋಂದಾಯಿಸಬೇಕು, ನಾಲ್ಕು ವರ್ಷಗಳಿಗಿಂತ ಕೆಳಗಿನ ಮಕ್ಕಳಿಗೆ ಉಚಿತ.. ವಿವರಗಳಿಗೆ: 7892557881 ಅಥವಾ 7892914963ಗೆ ಸಂಪರ್ಕಿಸಬಹುದು. ಎಲ್ಲ ವಯೋಮಾನದವರಿಗೆ ವಿಶಿಷ್ಟ ಕಾರ್ಯಕ್ರಮಗಳು ಇರುತ್ತವೆ. ನಿಸರ್ಗದ ಮಡಿಲಲ್ಲಿ ಮಕ್ಕಳಿಗೆ ಮೋಜಿನ ಆಟಗಳು ಇರುತ್ತವೆ. ಸಾಂಪ್ರದಾಯಿಕ ಆಟಗಳು, ಕೆಸರು ಗದ್ದೆ, ಗೋವುಗಳ ಜತೆ ಒಡನಾಟ, ಗೊಂಬೆಯಾಟ, ನೈಸರ್ಗಿಕ ಕೆರೆಯಲ್ಲಿ ಜಲಕ್ರೀಡೆಗಳು ಇರುತ್ತವೆ. ವಯಸ್ಕರಿಗೆ ಮಳಿಗೆಗಳು ಮತ್ತು ಕಾರ್ಯಾಗಾರಗಳಿದ್ದು, ಇದಕ್ಕೆ…
ಮಡಿಕೇರಿ ಮಾ.30 : ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಕೊಡಗು ಶಾಖೆ, ತಾಲ್ಲೂಕು ಒಕ್ಕಲಿಗರ ಸಂಘ ಸೋಮವಾರಪೇಟೆ, ನಗರ ಒಕ್ಕಲಿಗರ ಸಂಘ ಸೋಮವಾರಪೇಟೆ ಹಾಗೂ ಸಮುದಾಯದ ಸಹಭಾಗಿತ್ವದೊಂದಿಗೆ “ಅಂಧ ವಿಶೇಷಚೇತನರಿಗೆ ಸ್ಥಳ ಪರಿಜ್ಞಾನ ಮತ್ತು ಚಲನವಲನ ವಸತಿಯುತ ಶಿಬಿರ”ದ ಸಮಾರೋಪ ಸಮಾರಂಭ ನಡೆಯಿತು. ಸೋಮವಾರಪೇಟೆಯ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಕೆ.ಜಿ.ವಿಮಲ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್‍ನ ಪ್ರತೀ ಕಾರ್ಯಕ್ರಮಗಳಿಗೂ ಭಾಗವಹಿಸಿದ್ದು, ಸಂಸ್ಥೆಯು ಕೊಡಗು ಜಿಲ್ಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಇದೀಗ ಸೋಮವಾರಪೇಟೆಯಲ್ಲಿ ಅಂಧ ವಿಶೇಷಚೇತನರಿಗೆ ಸ್ಥಳ ಪರಿಜ್ಞಾನ ಮತ್ತು ಚಲನವಲನ ಶಿಬಿರ ವಿಶೇಷ ಚೇತನರಿಗೆ ಸಹಕಾರಿಯಾಗಲಿದೆ ಎಂದರು. ಎಲ್.ಐ.ಸಿ ಅಭಿವೃದ್ಧಿ ಅಧಿಕಾರಿ ಮೋಹನ್ ರಾಮ್ ಮಾತನಾಡಿ, ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಸಂಸ್ಥೆಯ ವತಿಯಿಂದ ವಿಶೇಷಚೇತನರಿಗೆ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಉತ್ತಮ ಕೆಲಸವಾಗಿದ್ದು, ಇಂತಹ ಕೆಲಸಗಳಿಂದ ಅಂಧ ವಿಶೇಷಚೇತನರ ಬಾಳಿನಲ್ಲಿ ಬೆಳಕನ್ನು…
ಮಡಿಕೇರಿ ಮಾ.30 : ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಾ ಕೋಶ , ರೆಡ್ ರಿಬ್ಬನ್ ಕ್ಲಬ್ ಹಾಗೂ ಎನ್.ಎಸ್.ಎಸ್ ಘಟಕದ ವತಿಯಿಂದ ಯುವಜನತೆಯಲ್ಲಿ ಹೆಚ್.ಐ.ವಿ. / ಏಡ್ಸ್ ಜಾಗೃತಿ ‘ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಹಾಗೂ ಆಪ್ತ ಸಮಾಲೋಚನಾ ಕೇಂದ್ರದ ಸಮಾಲೋಚಕ ಕೆ.ಟಿ.ಚಿಟ್ಟಿಯಪ್ಪ ಮಾತನಾಡಿ, ಇಂದಿನ ಯುವ ಜನತೆಯು ರಕ್ತದಾನದ ಮಹತ್ವವನ್ನು ಅರ್ಥೈಸಿಕೊಂಡು ಇದರ ಬಗೆಗಿನ ಅಪನಂಬಿಕೆಗಳನ್ನು ಬಿಟ್ಟು ಸ್ವಯಂಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗಬೇಕು ಎಂದರು. ಯೌವನದ ಕ್ಷಣಿಕ ಸುಖಕ್ಕಾಗಿ ಹೆಚ್.ಐ.ವಿ. / ಏಡ್ಸ್ ನಂತಹ ಮಹಾಮಾರಿಯನ್ನು ಮೈಮೇಲೆ ಎಳೆದು ಕೊಳ್ಳದೇ , ಶಿಸ್ತು ಬದ್ಧತೆ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕೆಂದು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಸಿ.ದಯಾನಂದ, ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಗುಣ – ನಡತೆಗಳೊಂದಿಗೆ ರಕ್ತದಾನ, ಹೆಚ್.ಎ.ವಿ. /ಏಡ್ಸ್ ಸಾಂಕ್ರಾಮಿಕತೆಯ ವಿಚಾರಗಳನ್ನು ತಿಳಿದು ಸಮಾಜದಲ್ಲಿ ಅದರ ಬಗ್ಗೆ ಅರಿವು ಮೂಡಿಸಲು ಕರೆ…
ಕಣಿವೆ ಮಾ.30 : ಕಣಿವೆ ಗ್ರಾಮದ ಕಾವೇರಿ ನದಿ ದಂಡೆಯಲ್ಲಿನ ಶ್ರೀ ರಾಮಲಿಂಗೇಶ್ವರ ದೇವರ ವಾರ್ಷಿಕ ಬ್ರಹ್ಮರಥೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ರಥೋತ್ಸವದ ಅಂಗವಾಗಿ ಕಣಿವೆ, ಹುಲುಸೆ ಹಾಗೂ ಹಕ್ಕೆ ಗ್ರಾಮಗಳ ಪ್ರತಿ ಮನೆಗಳ ಮುಂದೆ ಭಕ್ತ ಜನರು ತಳಿರು ತೋರಣಗಳನ್ನು ಕಟ್ಟಿದರೆ, ಹೊಸ ಉಡುಗೆ ತೊಟ್ಟ ಭಕ್ತ ಮಹಿಳೆಯರು ತಮ್ಮ ತಮ್ಮ ಮನೆ ಮುಂಬದಿ ರಂಗೋಲಿ ಹಚ್ಚಿ ಸಂಭ್ರಮಿಸಿದರು. ಮುಂಜಾನೆಯಿಂದಲೇ ದೇವಾಲಯದ ಗರ್ಭ ಗುಡಿಯಲ್ಲಿ ಪ್ರತಿಷ್ಠಾಪಿತ ಶಿವ ಲಿಂಗಕ್ಕೆ ವಿವಿಧ ಬಗೆಯ ಅಭಿಷೇಕಗಳನ್ನು ನೆರವೇರಿಸಿ, ಬಗೆ ಬಗೆಯ ಪುಷ್ಪಗಳಿಂದ ಅಲಂಕೃತಗೊಳಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಮಹಾಮಂಗಳಾರತಿ ನೆರವೇರಿತು. ಹಾಗೆಯೇ ರಥೋತ್ಸವದಲ್ಲಿ ಪ್ರತಿಷ್ಠಾಪಿಸುವ ಶ್ರೀರಾಮನ ಕಂಚಿನ ವಿಗ್ರಹಕ್ಕೆ ಕೇಸರಿ ಪೇಟವನ್ನು ಕಟ್ಟಿ ಅಲಂಕೃತಗೊಳಿಸಿದ ಬಗೆ ನೋಡುಗ ಭಕ್ತರ ಗಮನ ಸೆಳೆಯಿತು. ಬೆಂಗಳೂರು ಮೂಲಕದ ನರಹರಿ ಭಟ್ ನೇತೃತ್ವದ ಅರ್ಚಕರ ತಂಡದಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ನೆರೆಯ ಹೆಬ್ಬಾಲೆ ಗ್ರಾಮದ ಬಸವೇಶ್ವರ ದೇವಾಲಯಕ್ಕೆ ಸಾಂಪ್ರದಾಯಿಕವಾಗಿ ಕಾಶಿಯಿಂದ ಅಂಚೆಯಲ್ಲಿ ಬರುವ ಪವಿತ್ರ ಗಂಗಾಜಲವನ್ನು…
ಸಂಪಾಜೆ ಮಾ.30 : ಸಂಪಾಜೆ ಗ್ರಾಮದ ಚೆಡಾವು ಸ್ವಾಮಿ ಕೊರಗಜ್ಜ ದೈವದ ಸನ್ನಿಧಿಯಲ್ಲಿ ವಾರ್ಷಿಕ ನೇಮೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ಶನಿವಾರ ಸಂಜೆ ಸ್ವಾಮಿ ಗುಳಿಗ ಬಂಟ, ವರ್ಣಾರ ಪಂಜುರ್ಲಿ ದೈವ, ಕಲ್ಲುರ್ಟಿ ದೈವದ ನರ್ತನ ಸೇವೆ ನಡೆದು, ಮರುದಿನ ಬೆಳಗ್ಗೆ ಕಾರಣಿಕ ದೈವ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ನಡೆಯಿತು. ಊರ, ಪರವೂರ ಸಾವಿರಾರು ಭಕ್ತಾಧಿಗಳು ಆಗಮಿಸಿ ದೈವಗಳ ಸಿರಿ ಗಂಧ ಪ್ರಸಾದ ಸ್ವೀಕರಿಸಿದರು.ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಮಡಿಕೇರಿ ಮಾ.30 : ಶ್ರೀ ರಾಮನವಮಿಯನ್ನು ನಗರದೆಲ್ಲಡೆ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ನಗರದ ರಾಮಮಂದಿರ ಹಾಗೂ ಆಂಜನೇಯ ದೇವಾಲಯದಲ್ಲಿ ಸೀತಾ, ಲಕ್ಷ್ಮಣ, ಆಂಜನೇಯ ಸಮೇತ ಶ್ರೀರಾಮನಿಗೆ ಪುಷ್ಪಾಲಂಕಾರ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳು ನೆರವೇರಿತು. ನಂತರ ಮಹಾ ಮಂಗಳಾರತಿಯೊಂದಿಗೆ ಪ್ರಸಾದ ವಿತರಣೆ ಮಾಡಲಾಯಿತು. ಸಾಕಷ್ಟು ಭಕ್ತರು ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು. ಅಂತರರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ (ಇಸ್ಕಾನ್) ವತಿಯಿಂದ ನಗರದಲ್ಲಿ ರಾಮನವಮಿ ಪ್ರಯುಕ್ತ ಶ್ರೀ ರಾಮಚಂದ್ರ ವಿಜಯೋತ್ಸವ ರಥಯಾತ್ರೆ ನಡೆಯಿತು. ರಥಯಾತ್ರೆಯು ಶ್ರೀ ಪೇಟೆ ರಾಮಮಂದಿರದಿಂದ ಆರಂಭಗೊಂಡು, ಗಣಪತಿಬೀದಿ, ಮಹದೇವಪೇಟೆ, ಹಳೇ ಖಾಸಗಿ ಬಸ್ ನಿಲ್ದಾಣ, ಜನರಲ್ ತಿಮ್ಮಯ್ಯ ವೃತ್ತದ ಮೂಲಕ ಸಾಗಿ ಗಾಂಧಿ ಮೈದಾನದಲ್ಲಿ ಕೊನೆಗೊಂಡಿತು. ರಾತ್ರಿ 8 ಗಂಟೆಗೆ ಶ್ರೀ ರಾಮಚಂದ್ರ ಕಥೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಮಡಿಕೇರಿ ಮಾ.30 : ನೆಲಜಿ ಫಾರ್ಮರ್ ಡೆವಲಪ್‍ಮೆಂಟ್ ಹಾಗೂ ರಿಕ್ರಿಯೇಷನ್ ಅಸೋಸಿಯೇಷನ್ ವತಿಯಿಂದ ಮೇ 27 ಮತ್ತು 28 ರಂದು ಬಲ್ಲಮಾವಟಿಯಲ್ಲಿ ‘ಕೊಡವ ಒಕ್ಕ ತೋಕ್ ನಮ್ಮೆ’ಯನ್ನು ಆಯೋಜಿಸಲಾಗಿದೆಯೆಂದು ಅಸೋಸಿಯೇಷನ್ ಅಧ್ಯಕ್ಷ ಮಂಡೀರ ನಂದಾ ನಂಜಪ್ಪ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಲ್ಲಮಾವಟಿಯ ನೇತಾಜಿ ಪ್ರೌಢಶಾಲೆ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದ್ದು, ಮೇ27 ರಂದು ಪ್ರಥಮ ವರ್ಷದ ಕೊಡವ ಕುಟುಂಬಗಳ ನಡುವಿನ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ, ಮೇ 28 ರಂದು ಮುಕ್ತ ಸ್ಪರ್ಧೆ ನಡೆಯಲಿದೆ ಎಂದು ಮಾಹಿತಿ ನೀಡಿದರು. ಕೊಡವ ಕುಟುಂಬಗಳ ನಡುವಿನ ಸ್ಪರ್ಧೆ ಮತ್ತು ಮುಕ್ತ ಸ್ಪರ್ಧೆ 0.22 ಮತ್ತು 12 ಬೋರ್ ಬಂದೂಕು ವಿಭಾಗಗಳಲ್ಲಿ ನಡೆಯಲಿದೆ. 0.22 ವಿಭಾಗ 50 ಮೀ. ಗುರಿಯನ್ನು ಹಾಗೂ 12 ಬೋರ್ ವಿಭಾಗ 30 ಮೀಟರ್ ಗುರಿಯನ್ನು ಹೊಂದಿರುತ್ತದೆಯೆಂದು ತಿಳಿಸಿದರು. ಕೊಡವ ಕುಟುಂಬಗಳ ನಡುವಿನ ತೋಕ್ ನಮ್ಮೆಯಲ್ಲಿ ಈಗಾಗಲೆ 150 ತಂಡಗಳು ಪಾಲ್ಗೊಂಡಿವೆ. ಈ ಹಿಂದೆ ಪಂದ್ಯಾವಳಿಯನ್ನು ಜ.12 ಮತ್ತು 14 ರಂದು…






