ಮಡಿಕೇರಿ ಮಾ.31 : ಪದ್ಮಭೂಷಣ ಜನರಲ್ ತಿಮ್ಮಯ್ಯ ಅವರ 117ನೇ ಹುಟ್ಟುಹಬ್ಬದ ದಿನವಾದ ಇಂದು ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಜನರಲ್ ತಿಮ್ಯಯ್ಯ ಅವರ ಪುತ್ಥಳಿಯನ್ನು ಏರ್‌ಮಾರ್ಷಲ್ ಕೊಡಂದೇರ ನಂದಾ ಕಾರ್ಯಪ್ಪ ಅನಾವರಣಗೊಳಿಸಿದರು. ನಂತರ ಮಾತನಾಡಿದ ಅವರು ಜನರಲ್ ತಿಮ್ಮಯ್ಯ ಅವರು ತಮ್ಮ ಕಾರ್ಯಕ್ಷಮತೆ, ದಕ್ಷತೆಯ ಮೂಲಕ ಸೇನಾ ಕ್ಷೇತ್ರಕ್ಕೆ ಮಾದರಿ ಎನಿಸಿಕೊಂಡಿದ್ದಾರೆ. ಜನರಲ್ ತಿಮ್ಮಯ್ಯ ಶಾಲೆಯಲ್ಲಿ ಮಹಾನ್ ಸೇನಾನಿಯ ಪುತ್ತಳಿ ಅನಾವರಣವಾಗಿರುವುದು ಹೆಮ್ಮೆ ತಂದಿದೆ ಎಂದರು. ಕಾರ್ಯಕ್ರಮದಲ್ಲಿ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಮುತ್ತಪ್ಪ ಅವರು ನಾಮಫಲಕವನ್ನು ಉದ್ಘಾಟಿಸಿದರು. ಅತಿಥಿಗಳು ನೂತನ ಕಚೇರಿ, ಶಾಲಾ ಕೊಠಡಿ, ವಾಚನಾ ಲಯ, ಕ್ರೀಡಾಕೊಠಡಿಯನ್ನು ಉದ್ಘಾಟಿಸಿದರು. ಶಾಲಾ ಪ್ರಾಂಶುಪಾಲರಾದ ಕಲ್ಮಾಡಂಡ ಸರಸ್ವತಿ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲೆಯಲ್ಲಿ ಜನರಲ್ ತಿಮ್ಮಯ್ಯನವರ ಪುತ್ಥಳಿ ಸ್ಥಾಪನೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ಇದಕ್ಕೆ ಕಾರಣಕರ್ತರಾದ ಶಾಲಾ ಆಡಳಿತ ಮಂಡಳಿ, ದಾನಿಗಳು, ಶಾಲಾ ಸಿಬ್ಬಂದಿ ವರ್ಗದ ಸಹಕಾರಕ್ಕೆ ಅಭಿನಂದನೆ ಸಲ್ಲಿಸಿದರು. ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಮುತ್ತಪ್ಪ…
ಲೇಖಕ: admin
ವಿರಾಜಪೇಟೆ ಮಾ.31 : ಕೊಡವ ಜನಾಂಗಕ್ಕೆ ಮುಜುಗರ ಉಂಟುಮಾಡುವ ಹೇಳಿಕೆಗಳನ್ನು ನೀಡುವ ಮೂಲಕ ಜನಾಂಗದ ಘನತೆಗೆ ಕುತ್ತು ತರುವವರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಕೊಡವ ಜನಾಂಗದ ಮಾತೃ ಸಂಸ್ಥೆಯಾಗಿರುವ ಅಖಿಲ ಕೊಡವ ಸಮಾಜ ಎಚ್ಚರಿಕೆ ನೀಡಿದೆ. ವಿರಾಜಪೇಟೆಯಲ್ಲಿ ಅಖಿಲ ಕೊಡವ ಸಮಾಜದ ಕೇಂದ್ರ ಕಚೇರಿಯಲ್ಲಿ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಕೊಡವ ಜನಾಂಗದ ಕೀರ್ತಿ ಬಾನೆತ್ತರದಲ್ಲಿದೆ. ಮಾತ್ರವಲ್ಲ, ಸ್ವಾತಂತ್ರ್ಯಕ್ಕಾಗಿ ತನ್ನ ಜೀವನವನ್ನೆ ಬಲಿದಾನ ಮಾಡಿದ ಹಲವರಿದ್ದಾರೆ. ಕೊಡವರ ಪೂರ್ವಾಪರ ತಿಳಿಯದೆ ಕೊಡವರನ್ನು ಅವಹೇಳನ ಮಾಡುವುದು ಎಷ್ಟು ಸರಿ ಎಂದು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಜನಾಂಗದ ಪ್ರಮುಖರು ಕೊಡವ ಜನಾಂಗದ ಹೆಸರಿನಲ್ಲಿ ಅಸಂಬದ್ಧ ಹೇಳಿಕೆಗಳನ್ನು ನೀಡುವುದನ್ನು ತಕ್ಷಣವೇ ನಿಲ್ಲಿಸಬೇಕಿದೆ ಎಂಬ ಸ್ಪಷ್ಟ ಸಂದೇಶವನ್ನು ಸಮಾಜಕ್ಕೆ ರವಾನಿಸಲು ಸಭೆ ಒಮ್ಮತದ ತೀರ್ಮಾನ ಕೈಗೊಂಡಿತು. ಕೊಡವ ಜನಾಂಗದಲ್ಲಿ ಕೂಡ ಹಲವಾರು ಸಂಘ, ಸಂಸ್ಥೆ, ಸಂಘಟನೆಗಳಿದ್ದು…
ಮಡಿಕೇರಿ ಮಾ.312 : ಭಾರತೀಯ ಸೇನಾ ದಕ್ಷಿಣ ವಲಯದ ಮುಖ್ಯಸ್ಥರಾದ ಲೆಪ್ಟಿನೆಂಟ್ ಜನರಲ್ ಎ.ಕೆ.ಸಿಂಗ್ ಅವರು ಇತ್ತೀಚೆಗೆ ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗೌರವ ಪೂರ್ವಕವಾಗಿ ನೀಡಲಾಗಿದ್ದ ‘ಸೇನಾ ಸ್ಮರಣಿಕೆ’ಯನ್ನು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂ ಸಂಚಾಲಕ ಮೇಜರ್(ನಿವೃತ್ತ) ಬಿದ್ದಂಡ ನಂಜಪ್ಪ ಅವರು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರಿಗೆ ಹಸ್ತಾಂತರಿಸಿದರು.
ಮಡಿಕೇರಿ ಮಾ.31 : ವೀರ ಸೇನಾನಿ, ಪದ್ಮಭೂಷಣ ಜನರಲ್ ಕೆ.ಎಸ್.ತಿಮ್ಮಯ್ಯ ಅವರ 117ನೇ ಹುಟ್ಟು ಹಬ್ಬವನ್ನು ಜಿಲ್ಲಾಡಳಿತ ವತಿಯಿಂದ ಸರಳವಾಗಿ ಆಚರಿಸಲಾಯಿತು. ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿ ನಡೆದ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂನ ಸಂಚಾಲಕರಾದ ಮೇಜರ್(ನಿವೃತ್ತ) ಬಿದ್ದಂಡ ನಂಜಪ್ಪ, ಮಡಿಕೇರಿ ತಾಲ್ಲೂಕು ಜಾನಪದ ಪರಿಷತ್ತು ಅಧ್ಯಕ್ಷರಾದ ಅನಿಲ್ ಎಚ್.ಟಿ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚಿನ್ನಸ್ವಾಮಿ, ಗೌಡಂಡ ಸುಬೇದಾರ್ ತಿಮ್ಮಯ್ಯ, ಇತರರು ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಗೌರವ ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂನ ಸಂಚಾಲಕ ಬಿದ್ದಂಡ ನಂಜಪ್ಪ ಅಮರ ಸೇನಾನಿ ಜನರಲ್ ತಿಮ್ಮಯ್ಯ ಅವರು ಹುಟ್ಟಿದ ಮನೆ ಸನ್ನಿಸೈಡ್ ‘ದೇವರ ಮನೆ’ ಇದ್ದಂತೆ, ದೇವಸ್ಥಾನವೆಂದು ಭಾವಿಸುತ್ತೇವೆ ಎಂದು ನುಡಿದರು. ಜನರಲ್ ತಿಮ್ಮಯ್ಯ ಅವರು ಭಾರತೀಯ…
ಮಡಿಕೇರಿ ಮಾ.31 : ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಶೀಘ್ರ ನೋಂದಣಿಗೆ ಅನುವಾಗುವಂತೆ ಏಪ್ರಿಲ್, 21 ರಿಂದ ನೋಂದಣಿ ಕಚೇರಿಗಳಲ್ಲಿ ಪ್ರಸ್ತುತ ಬಳಸಲಾಗುತ್ತಿರುವ ಗಣಕೀಕೃತ ನೋಂದಣಿ ಪ್ರಕ್ರಿಯೆಯಲ್ಲಿ ಕಾಲೋಚಿತ ಸುಧಾರಣೆಗಳೊಂದಿಗೆ ‘ಕಾವೇರಿ-2’ ಸುಲಭ ನೋಂದಣಿ ತಂತ್ರಾಂಶ ಜಾರಿಗೊಳಿಸಲಾಗುತ್ತಿದೆ. ಸಾರ್ವಜನಿಕರು ಸುಧಾರಿತ ಕಾವೇರಿ-2 ವನ್ನು ವ್ಯಾಪಕವಾಗಿ ಬಳಸಲು ಅನುವಾಗುವಂತೆ ತಂತ್ರಾಂಶದ ಬಳಕೆಯ ಕುರಿತು ಸಂಕ್ಷಿಪ್ತ ತರಬೇತಿ ಕಾರ್ಯಕ್ರಮವು ಏಪ್ರಿಲ್, 1 ರಂದು ಮಧ್ಯಾಹ್ನ 3 ಗಂಟೆಗೆ ಪ್ರವಾಸೋದ್ಯಮ ಇಲಾಖೆಯ (ವಾರ್ತಾ ಭವನ ಹತ್ತಿರ) ಮೊದಲನೇ ಮಹಡಿಯ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ನಡೆಯಲಿದೆ. ನೋಂದಣಿ ಇಲಾಖೆಯ ಸೇವೆಯನ್ನು ಬಳಸುವ ಎಲ್ಲರೂ ತಪ್ಪದೇ ಭಾಗವಹಿಸಿ ಕಾರ್ಯಕ್ರಮದ ಗರಿಷ್ಟ ಫಲ ಪಡೆಯಬಹುದು ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಉಪ ನೋಂದಣಾಧಿಕಾರಿ ಅವರು ತಿಳಿಸಿದ್ದಾರೆ.
ಮಡಿಕೇರಿ ಮಾ.31 : ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾವತಿಯಿಂದ ಕುಶಾಲನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೌಲಾನಾ ಆಜಾದ್ ಮಾದರಿ ಶಾಲೆಗೆ 2023-24ನೇ ಸಾಲಿಗೆ (ಆಂಗ್ಲ ಮಾಧ್ಯಮ) 6 ನೇ ತರಗತಿ (ಆಂಗ್ಲ ಮಾಧ್ಯಮ) ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅಲ್ಪಸಂಖ್ಯಾತರ ಸಮುದಾಯದ ಸಿಖ್, ಬೌದ್ಧ, ಜೈನ್, ಕ್ರಿಶ್ಚಿಯನ್, ಮುಸ್ಲಿಂ ಮತ್ತು ಪಾರ್ಸಿ ಶೇ.75 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಇತರೆ ಹಿಂದುಳಿದ ವರ್ಗದವರಿಗೆ(ಒಬಿಸಿ) ಶೇ.25 ಸೀಟು ಲಭ್ಯವಿರುತ್ತದೆ. ಉಚಿತ ಶಿಕ್ಷಣ ಮತ್ತು ವಸತಿ ಸೌಲಭ್ಯವಿದ್ದು, 5 ನೇ ತರಗತಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗೆ ಮುಖ್ಯೋಪಾಧ್ಯಾಯರು, ಮೌಲಾನಾ ಆಜಾದ್ ಮಾದರಿ ಶಾಲೆ, ಕುಶಾಲನಗರ, ಕುಶಾಲನಗರ ತಾಲ್ಲೂಕು, ದೂ.ಸಂ.6361802037 ನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅವರು ತಿಳಿಸಿದ್ದಾರೆ.
ಮಡಿಕೇರಿ,ಮಾ.31 : ವಾಂಡರ‍್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿ. ಶಂಕರ್ ಸ್ವಾಮಿ ಅವರ ಸ್ಮರಣಾರ್ಥ ಏರ್ಪಡಿಸಿಕೊಂಡು ಬರಲಾಗುತ್ತಿರುವ 29ನೇ ಮಕ್ಕಳ ಬೇಸಿಗೆ ಕ್ರೀಡಾಶಿಬಿರದ ಉದ್ಘಾಟನೆ ಏ.1 ರಂದು ನಡೆಯಲಿದೆ. ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಬೆಳಿಗ್ಗೆ 8 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಮಾಸ್ಟರ್ ಅಥ್ಲೆಟ್ ಮಾರಮಾಡ ಮಾಚಮ್ಮ ಉದ್ಘಾಟನೆ ಮಾಡುವರು. ವಾಂಡರ‍್ಸ್ ಅಧ್ಯಕ್ಷ ಕೋಟೇರ ಮುದ್ದಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ, ರಾಷ್ಟ್ರೀಯ, ಅಂತರರಾಷ್ಟ್ರೀಯ ಹಿರಿಯ ಆಟಗಾರರು, ವಾಂಡರ‍್ಸ್ನ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
ಮಡಿಕೇರಿ ಮಾ.31 : ಮಡಿಕೇರಿ ಕೊಡವ ಸಮಾಜದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ವೀರಸೇನಾನಿ ಜನರಲ್ ಕೆ.ಎಸ್.ತಿಮ್ಮಯ್ಯ ಅವರ 117ನೇ ಜನ್ಮದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಏರ್‌ಮಾರ್ಷಲ್ ನಂದಾ ಕಾರ್ಯಪ್ಪ ಅವರು ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಪುತ್ಥಳಿ ಅನಾವರಣಗೊಳಿಸಿದರು. ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಪದ್ಮಶ್ರೀ ಪ್ರಶಸ್ತಿ ವಿಜೇತೆ ರಾಣಿ ಮಾಚಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಮುಖರಾದ ಕನ್ನಂಡ ಕವಿತಾ ಬೊಳ್ಳಪ್ಪ, ಪ್ರಾಂಶುಪಾಲರಾದ ಬಿ.ಎಂ.ಸರಸ್ವತಿ, ಆಡಳಿತ ಮಂಡಳಿ ಸದಸ್ಯರು, ಕೊಡವ ಸಮಾಜದ ನಿರ್ದೇಶಕರು, ಶಿಕ್ಷಕವೃಂದ, ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು.
ಮಡಿಕೇರಿ ಮಾ.31 : ಮಡಿಕೇರಿಯ ಅಶ್ವಿನಿ ಆಸ್ಪತ್ರೆಯ ಸ್ಥಾಪಕ ಸದಸ್ಯ ಹಾಗೂ ಅಶ್ವಿನಿ ಆಸ್ಪತ್ರೆಯ ನಿರ್ಮಾಣಕ್ಕೆ ಪ್ರಮುಖ ರೂವಾರಿಯಾಗಿದ್ದ ದಿ.ಬೇ.ಸು. ಶೇಷಾದ್ರಿಯವರು ಇತ್ತೀಚೆಗೆ ದೈವಾಧೀನಾರಾದ್ದರು. ಅವರ ಒಡನಾಡಿಗಳು, ಸಹಕಾರಿಗಳು ಮತ್ತು ಅಶ್ವಿನಿ ಆಸ್ಪತ್ರೆಯ ಶ್ರೇಯೋಭಿವೃದ್ಧಿಗೆ ಕೈ ಜೋಡಿಸಿದ ಮಿತ್ರರೆಲ್ಲರೂ ಸೇರಿ ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಇಂದು ಶಾಂತಿ ಪೂಜೆ ನಡೆಸಿದರು. ನಂತರ ನಡೆದ ಸಂತಾಪ ಸೂಚಕ ಸಭೆಯಲ್ಲಿ ನೆಲ್ಲಮಕ್ಕಡ ಶಂಭು, ಮಚ್ಚಾರಂಡ ಮಣಿ ಕಾರ್ಯಪ್ಪ, ಮಂಡೀರ ದೇವಿ ಪೂಣಚ್ಚ, ಡಿ.ಹೆಚ್. ತಮ್ಮಪ್ಪ, ಡಿ. ನರಸಿಂಹ, ಟಿ.ಕೆ. ತಿಮ್ಮಪ್ಪ ಮಾತನಾಡಿ ದಿ. ಶೇಷಾದ್ರಿಯವರೊಂದಿಗಿನ ಒಡನಾಟ ಮತ್ತು ಅವರು ಅಶ್ವಿನಿ ಆಸ್ಪತ್ರೆಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು. ನಂತರ ಶಾಂತಿ ಮಂತ್ರ ಪಠಣದೊಂದಿಗೆ ಸಂತಾಪ ಸೂಚಕ ಸಭೆ ಮುಕ್ತಾಯವಾಯಿತು.
ಹಿಂದೂ ಸಂಸ್ಕೃತಿಯಲ್ಲಿ ಕರ್ಪೂರಕ್ಕೆ ಎಲ್ಲಿಲ್ಲದ ಸ್ಥಾನಮಾನವಿದೆ. ಯಾವುದೇ ಶುಭಕಾರ್ಯವಿರಲಿ ಅಥವಾ ಪೂಜೆಗಳಿರಲಿ ಕರ್ಪೂರ ಇರಲೇಬೇಕು. ಆದರೆ ಇಷ್ಟಕ್ಕೆ ಕರ್ಪೂರದ ಬಳಕೆ ಮುಗಿಯುವುದಿಲ್ಲ. ಏಕೆಂದರೆ ಆರೋಗ್ಯದ ದೃಷ್ಟಿಯಿಂದಲೂ ಕರ್ಪೂರ ಬಲು ಉಪಕಾರಿ. ಕರ್ಪೂರದಲ್ಲಿ ಎರಡು ವಿಧ. ಒಂದು ಸೇವನೆಗೆ ಯೋಗ್ಯವಾದ ಕರ್ಪೂರ ಇನ್ನೊಂದು ತಯಾರು ಮಾಡಲ್ಪಟ್ಟ ಕರ್ಪೂರ. ಕರ್ಪೂರದ ಮರದ ಕಾಂಡದಿಂದ ತಯಾರಿಸ್ಪಡುವುದು ಒಂದು ರೀತಿಯ ಕರ್ಪೂರವಾದರೆ ಇನ್ನೊಂದನ್ನು ಟರ್ಪೆಂಟೈನ್ ತೈಲದಿಂದ ತಯಾರಿಸಲಾಗುತ್ತದೆ. ಕರ್ಪೂರದಲ್ಲಿ ಪ್ರತಿಜೀವಕ ಮತ್ತು ಆಂಟಿಫಂಗಲ್ ಗುಣಗಳಿವೆ. ಈ ಕಾರಣಕ್ಕಾಗಿ, ಇದು ನಮ್ಮ ಆರೋಗ್ಯ ಮತ್ತು ಸೌಂದರ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಕರ್ಪೂರ ಮತ್ತು ಕರ್ಪೂರ ಎಣ್ಣೆ ಎರಡೂ ಬಹಳ ಉಪಯುಕ್ತ ವಸ್ತುಗಳು. ಸಾಮಾನ್ಯವಾಗಿ ನರಗಳ ಉಳುಕುವಿಕೆ. ಉರಿ ಬಾವು ಮತ್ತು ವಾತಗ್ರಸ್ತ ನೋವುಗಳಿಗೆ ಲೇಪಿ ಸಲು ಇದನ್ನು ಉಪಯೋಗಿಸುತ್ತಾರೆ. ಅತಿಸಾರದಂಥ ರೋಗ ಗಳಲ್ಲಿ ಶಮನಕಾರಿ ಯಾಗಿ ಹೃದಯವನ್ನು ಉತ್ತೇಜನಗೊಳಿಸುವಲ್ಲಿ ಉತ್ತೇಜನಕಾರಿ ಯಾಗಿ ಇದರ ಉಪಯೋಗವಿದೆ. ಸೌಮ್ಯ ನಂಜುನಿರೋಧಕ ಹಾಗೂ ಸುಗಂಧಗುಣಯುಕ್ತವಾದ್ದರಿಂದ ಇದನ್ನು ಸೌಂದರ್ಯವರ್ಧಕ ವನ್ನಾಗಿಯೂ ಬಳಸುತ್ತಾರೆ. ಪೂಜಾಸಮಾರಂಭದಲ್ಲಿ ದೇವರ ಮುಂದೆ…






