ಲೇಖಕ: admin

ಶಿಡ್ಲಘಟ್ಟ ಫೆ.22 : ಸುಟ್ಟು ಕರಕಲಾದ ಮೂವರ ಮೃತದೇಹ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಯಣ್ಣೂರು ಗ್ರಾಮದ ಮನೆಯೊಂದರಲ್ಲಿ ಪತ್ತೆಯಾಗಿದೆ. ಒಂದೇ ಕುಟುಂಬದ ನೇತ್ರಾ(35), ಪುತ್ರಿಯರಾದ ವರ್ಷಿತ(7 ತರಗತಿ) ಹಾಗೂ ಸ್ನೇಹ(4 ತರಗತಿ) ಅವರುಗಳ ಮೃತದೇಹ ಮನೆಯೊಳಗೆ ಕಂಡು ಬಂದಿದೆ. ನೇತ್ರಾರ ಪತಿ ಸೊಣ್ಣಪ್ಪ ಎಂಬುವವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗಿದೆ. ಈ ಸಾವಿಗೆ ಕಾರಣ ಏನು ಮತ್ತು ಯಾವ ರೀತಿ ನಡೆದಿದೆ ಎನ್ನುವ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸೊಣ್ಣಪ್ಪ ಅವರಿಗೆ ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

Read More

ಮಡಿಕೇರಿ ಫೆ.22 : ವಿದ್ಯುತ್ ತಂತಿಗೆ ಅಲ್ಯುಮೀನಿಯಂ ಏಣಿ ಸ್ಪರ್ಷಗೊಂಡು ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಶ್ರೀಮಂಗಲ ಹೋಬಳಿಯ ನಾಲ್ಕೇರಿ ಗ್ರಾಮದಲ್ಲಿ ನಡೆದಿದೆ. ಅಸ್ಸಾಂ ಮೂಲದ ಕಾರ್ಮಿಕ ಅಬ್ರುದ್ದೀನ್ ಎಂಬುವವರೇ ಮೃತ ದುರ್ದೈವಿ. ಸ್ಥಳೀಯ ಬೆಳೆಗಾರರ ತೋಟವೊಂದರಲ್ಲಿ ಕರಿಮೆಣಸು ಕೊಯ್ಯುತ್ತಿದ್ದ ಸಂದರ್ಭ ಈ ದುರ್ಘಟನೆ ನಡೆದಿದೆ. ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ಅಲ್ಯುಮೀನಿಯಂ ಏಣಿ ತಗುಲಿದಾಗ ಆಘಾತಕ್ಕೊಳಗಾದ ಅಬ್ರುದ್ದೀನ್ ಅವರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭ ಮೃತ ಪಟ್ಟಿದ್ದಾರೆ. ಸ್ಥಳಕ್ಕೆ ಕುಟ್ಟ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ರವಿಶಂಕರ್ ಅವರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಮಡಿಕೇರಿ ಫೆ.22 : ಮಡಿಕೇರಿ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್ ಫೆ.24 ರಿಂದ ಮಾ.3ರವರೆಗೆ ನಡೆಯಲಿದೆಯೆಂದು ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಪಿ.ಎ.ಅಬೂಬಕ್ಕರ್ ಸಖಾಫಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಹಝ್ರತ್ ಸೂಫಿ ಶಹೀದ್(ರ) ಮತ್ತು ಸಯ್ಯುದ್ ಹಸನ್ ಸಖಾಫ್ ಹಳ್ರಮಿ(ರ) ಮತ್ತು ಇತರ ಮಹಾನುಭಾವರ ಹೆಸರಿನಲ್ಲಿ ಎಮ್ಮೆಮಾಡಿನಲ್ಲಿ ವರ್ಷಂಪ್ರತಿ ನಡೆಯುವ ವಾರ್ಷಿಕ ಉರೂಸ್ ಜಾತಿ ಮತ ಧರ್ಮಗಳನನ್ನು ಮೀರಿ ಜಿಲ್ಲೆ, ರಾಜ್ಯ, ಹೊರ ರಾಜ್ಯದ ಜನರನ್ನು ತನ್ನೆಡೆಗೆ ಆಕರ್ಷಿಸುತ್ತಿದೆ. ಈ ಬಾರಿಯ ಉರೂಸ್‍ನಲ್ಲಿ ನಾಡಿನ ವಿವಿಧೆಡೆಗಳಿಂದ 55 ಸಾವಿರಕ್ಕೂ ಹೆಚ್ಚಿನ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇರುವುದಾಗಿ ಹೇಳಿದರು. ಫೆ.24 ರಂದು ಎಮ್ಮೆಮಾಡು ಜಮಾಅತ್ ಅಧ್ಯಕ್ಷನಾದ ತಾನು ಧ್ವಜಾರೋಹಣವನ್ನು ನೆರವೇರಿಸಲಿದ್ದು, ಉರೂಸ್‍ನ್ನು ಕೋಝಿಕೋಡ್ ಖಾಝಿಗಳಾದ ಸಯ್ಯಿದ್ ಮುಹಮ್ಮದ್ ಕೋಯ ಜಮಲುಲ್ಲೈಲಿ ತಂಙಳ್ ಅವರು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕೊಡಗಿನ ನಾಯಿಬ್ ಖಾಝಿ ಶಾದುಲಿ ಫೈಝಿ ವಹಿಸಲಿದ್ದಾರೆ. ಸಂಜೆ 8 ಗಂಟೆಗೆ ಶಾಫಿ…

Read More

ಮಡಿಕೇರಿ ಫೆ.22 : ಆಯುಷ್ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆಯಡಿಯಲ್ಲಿ ಮಡಿಕೇರಿ ತಾಲೂಕಿನ ಬೋಯಿಕೇರಿ-ಇಬ್ಬನಿವಳವಾಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ “ಆಯುಷ್ ಸೇವಾ ಗ್ರಾಮ” ಕಾರ್ಯಕ್ರಮಗಳಲ್ಲಿ ಒಂದಾದ ಯೋಗ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಭಾರತೀಯ ವಿದ್ಯಾಭವನದ ಯೋಗ ಶಿಕ್ಷಕರಾದ ಮಹೇಶ್ ಕುಮಾರ್ ಅವರು ಮಕ್ಕಳಿಗೆ ಯೋಗದ ಕುರಿತು ಮಾಹಿತಿ ನೀಡಿದರು ಮತ್ತು ಕೆಲವು ಯೋಗಭ್ಯಾಸಗಳನ್ನು ಮಕ್ಕಳಿಗೆ ತಿಳಿಸಿಕೊಟ್ಟರು. ಪ್ರತಿ ದಿನ ಯೋಗಭ್ಯಾಸ ಮಾಡಲು ವಿದ್ಯಾರ್ಥಿಗಳಿಗೆ ತಿಳಿಸಿದರು. ಗ್ರಾ.ಪಂ.ಅಧ್ಯಕ್ಷರಾದ ಜಯಣ್ಣ, ಜಿಲ್ಲಾ ಆಯುಷ್ ಅಧಿಕಾರಿ ಡಾ. ರೇಣುಕಾದೇವಿ, ಶಾಲೆಯ ಮುಖ್ಯೋಪಾಧ್ಯಾಯರಾದ ರಾಜು, ಶಾಲೆಯ ಶಿಕ್ಷಕರು, ಮಡಿಕೇರಿ ಜಿಲ್ಲಾ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯರಾದ ಡಾ.ಸರಸ್ವತಿ ಮತ್ತು ಸಿಬ್ಬಂದಿ ವರ್ಗದವರು ಹಾಗೂ ಸಿಎಚ್‍ಒ, ಆಶಾ ಕಾರ್ಯಕರ್ತೆಯರು, ಶುಶ್ರೂಷಕಿಯವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Read More

ಮಡಿಕೇರಿ ಫೆ.22 : ಆಯುಷ್ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆಯಡಿಯಲ್ಲಿ “ಆಯುಷ್ ಸೇವಾ ಗ್ರಾಮ”ದ ಕಾರ್ಯಕ್ರಮಗಳಲ್ಲಿ ಒಂದಾದ ಯೋಗ ಕಾರ್ಯಕ್ರಮವನ್ನು ಕುಶಾಲನಗರ ತಾಲೂಕಿನ ಕೊಡಗರಳ್ಳಿ ಗ್ರಾಮದ ನೇತಾಜಿ ಸಮುದಾಯ ಭವನದಲ್ಲಿ ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ನೀತಾ ಹರೀಶ್, ಚನ್ನಬಸವಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ರೇಣುಕಾದೇವಿ, ಮಡಿಕೇರಿ ಜಿಲ್ಲಾ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯರಾದ ಡಾ. ಸರಸ್ವತಿ, ಆಶಾ ಕಾರ್ಯಕರ್ತೆಯರು, ಅಂಗವಾಡಿ ಶಿಕ್ಷಕರು, ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರು, ಶಿಕ್ಷಕರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಭಾರತೀಯ ವಿದ್ಯಾಭವನದ ಯೋಗ ಶಿಕ್ಷಕರಾದ ಮಹೇಶ್‍ಕುಮಾರ್ ಅವರು ಯೋಗದ ಮಾಹಿತಿ ನೀಡಿದರು ಮತ್ತು ಕೆಲವು ಯೋಗಭ್ಯಾಸಗಳನ್ನು ಮಕ್ಕಳಿಗೆ ತಿಳಿಸಿಕೊಟ್ಟರು ಮತ್ತು ಪ್ರತಿ ದಿನ ಯೋಗಭ್ಯಾಸ ಮಾಡಲು ವಿದ್ಯಾರ್ಥಿಗಳಿಗೆ ತಿಳಿಸಿದರು.

Read More

ಮಡಿಕೇರಿ ಫೆ.21 : ವಿದ್ಯುನ್ಮಾನ ಮತಯಂತ್ರಗಳ ಪ್ರಾತ್ಯಕ್ಷಿಕೆ ಕೇಂದ್ರಗಳನ್ನು ನಗರದ ಜಿಲ್ಲಾಧಿಕಾರಿ ಕಚೇರಿ, ಉಪ ವಿಭಾಗಾಧಿಕಾರಿ ಕಚೇರಿ ಮತ್ತು ವಿರಾಜಪೇಟೆಯ ವಿಧಾನಸಭಾ ಚುನಾವಣಾಧಿಕಾರಿ ಅವರ ಕಚೇರಿಯಲ್ಲಿ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ವಿದ್ಯುನ್ಮಾನ ಮತಯಂತ್ರ ಮತ್ತು ವಿವಿಪ್ಯಾಟ್ ಸಂಬಂಧಿಸಿದಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟವಾಗುವವರೆಗೆ ಈ ಪ್ರಾತ್ಯಕ್ಷಿಕೆ ನಡೆಯಲಿದೆ. ಜೊತೆಗೆ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯ ಎಲ್ಲಾ 542 ಮತಗಟ್ಟೆ ವ್ಯಾಪ್ತಿಯಲ್ಲಿಯೂ ಸಹ ಜಾಗೃತಿ ಮೂಡಿಸಲಾಗುತ್ತದೆ. ವಿದ್ಯುನ್ಮಾನ ಮತಯಂತ್ರದ ಬಗ್ಗೆ ಪ್ರಾತ್ಯಕ್ಷಿಕೆ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅವರು ವಿವರಿಸಿದರು. ಭಾರತ ಚುನಾವಣಾ ಆಯೋಗದಿಂದ ಕೊಡಗು ಜಿಲ್ಲೆಗೆ ತೆಲಂಗಾಣ ರಾಜ್ಯದ ಹೈದ್ರಾಬಾದ್‍ನ ಭಾರತೀಯ ವಿದ್ಯುನ್ಮಾನ ನಿಗಮದಿಂದ ವಿವಿಎಂ ಮತ್ತು ವಿವಿಪ್ಯಾಟ್ ಪೂರೈಕೆಯಾಗಿದ್ದು, ಅದರಲ್ಲಿ ಬ್ಯಾಲೆಟ್ ಯುನಿಟ್ 1013, ಕಂಟ್ರೋಲ್ ಯುನಿಟ್…

Read More

ಮಡಿಕೇರಿ ಫೆ.21 : ಅಂತರರಾಷ್ಟ್ರೀಯ ಮಾತೃಭಾಷಾ ದಿನವಾದ ಇಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿತು. ಸಂವಿಧಾನದ 8 ನೇ ಶೆಡ್ಯೂಲ್‍ಗೆ ಕೊಡವ ಭಾಷೆಯನ್ನು ಸೇರಿಸಬೇಕು, ವಿಶ್ವ ಸಂಸ್ಥೆಯ ಅಧಿಕೃತ ಭಾಷೆಗಳಲ್ಲೊಂದಾಗಿ ಪರಿಗಣಿಸಬೇಕು, ಆಕ್ಸ್‍ಫರ್ಡ್ ಡಿಕ್ಷನರಿಯಲ್ಲಿ ಕೊಡವ ಭಾಷೆಯ ಪದಗಳನ್ನು ಸೇರಿಸಬೇಕು ಸೇರಿದಂತೆ ಒಟ್ಟು 26 ಹಕ್ಕೊತ್ತಾಯಗಳನ್ನು ಮಂಡಿಸಿತು. ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ವಿವಿಧ ಬೇಡಿಕೆಗಳ ಪರವಾದ ಘೋಷಣೆಗಳನ್ನು ಕೂಗಿದ ಪ್ರಮುಖರು ಒಂದು ಜನಾಂಗದ ಉಳಿವಿಗೆ ಭಾಷೆಯ ಬೆಳವಣಿಗೆಯೂ ಮುಖ್ಯ ಎಂದು ಅಭಿಪ್ರಾಯಪಟ್ಟರು. ಅತ್ಯಂತ ಸೂಕ್ಷ್ಮ ಜನಾಂಗವಾಗಿರುವ ಕೊಡವರ ಮಾತೃಭಾಷೆ ಕೊಡವ ತಕ್ ಗೆ ಸಂವಿಧಾನದ ಭದ್ರತೆ ನೀಡಬೇಕು, ಕೊಡವ ಭಾಷೆಯನ್ನು ಅಧಿಕೃತವೆಂದು ಘೋಷಿಸಿ ಕೊಂಕಣಿ ಭಾಷೆಯ ಮಾದರಿಯಲ್ಲಿ ರಾಜ್ಯದ 3ನೇ ಆಡಳಿತ ಭಾಷೆಯನ್ನಾಗಿ ಮಾಡಬೇಕು. ಸಂವಿಧಾನದ 345, 350, 350 ಎ, 350 ಬಿ ವಿಧಿಯಡಿ 1ನೇ ತರಗತಿಯಿಂದಲೇ ಪಠ್ಯಕ್ರಮದಲ್ಲಿ ಕೊಡವ ತಕ್ ನ್ನು ಕಡ್ಡಾಯಗೊಳಿಸಬೇಕು. ವಿಶ್ವಸಂಸ್ಥೆಯ…

Read More

ವಿರಾಜಪೇಟೆ ಫೆ,21 : ಅಮ್ಮತ್ತಿ ಕಾರ್ಮಾಡು ಗ್ರಾಮದ ಶ್ರೀ ಚಾಮುಂಡೇಶ್ವರಿ ಹಾಗೂ ಶ್ರೀ ಪಾಷಾಣಮೂರ್ತಿ ಕ್ಷೇತ್ರದ ವಾರ್ಷಿಕೋತ್ಸವದ ಅಂಗವಾಗಿ ಪಂಜುರ್ಲಿ ದೈವದ ಪ್ರತಿಷ್ಠಾಪನಾ ಕಾರ್ಯ ಶ್ರದ್ಧಾಭಕ್ತಿಯಿಂದ ಜರುಗಿತು. ಅಮ್ಮತ್ತಿಯ ಗುರುರಾಜ್ ಭಟ್ ನೇತೃತ್ವದಲ್ಲಿ ದೇವಾಲಯದಲ್ಲಿ ಗಣಪತಿ ಹೋಮ, ಶ್ರೀ ಪಂಜುರ್ಲಿ ದೈವದ ಪ್ರತಿಷ್ಠಾಪನೆ ಹಾಗೂ ಪ್ರತಿಷ್ಠಾಪನೆ ಹೋಮ, ಕಲಶ ಪೂಜೆ ಮಹಾಪೂಜೆ, ಶ್ರೀ ಸತ್ಯನಾರಾಯಣ ಸ್ವಾಮಿಯ ಪೂಜೆ, ಅಲಂಕಾರ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಸಂಜೆ ದೀಪಾರಾಧನೆ ನಂತರ ದೇವರ ಭಂಡಾರವನ್ನು ವಾದ್ಯಗೋಷ್ಠಿಯೊಂದಿಗೆ ತೆಗೆಯಲಾಯಿತು. ಬಳಿಕ ಧಾರ್ಮಿಕ ಪ್ರವಚನವು ನಡೆಯಿತು. ಅಮ್ಮತ್ತಿಯ ಉದ್ದಪಂಡ ಕರುಣ್ ಕುಟ್ಟಪ್ಪ ಪ್ರವಚನದ ಕುರಿತು ಮಾತನಾಡಿದರು. ರಾತ್ರಿ ಪರಿವಾರ ದೈವಗಳಾದ ಶ್ರೀ ಪಾಷಾಣಮೂರ್ತಿ, ಪಂಜುರ್ಲಿ, ಗುಳಿಗ ದೈವಗಳ ನೇಮೋತ್ಸವವು ಬೆಳಗ್ಗಿನವರೆಗೆ ನಡೆಯಿತು. ಶ್ರೀ ಚಾಮುಂಡೇಶ್ವರಿ ಮತ್ತು ಪಾಷಾಣಮೂರ್ತಿ ಕ್ಷೇತ್ರದ ವಾರ್ಷಿಕೋತ್ಸವದ ಅಂಗವಾಗಿ ದೇವಾಲಯ ಹಾಗೂ ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ದೀಪಗಳಿಂದ ಹಾಗೂ ಹೂವುಗಳಿಂದ ಅಲಂಕೃತಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಸಮೃದ್ಧಿ ಎ.ವಿ ಪ್ರಾರ್ಥಿಸಿದರು. ಹರ್ಷಿತಾ ಲೋಕೇಶ್ ಸ್ವಾಗತಿಸಿ, ಗುರುರಾಜ್…

Read More

ಚೆಯ್ಯಂಡಾಣೆ ಫೆ.21 :  ಸುನ್ನಿ ಯುವಜನ ಸಂಘ (ಎಸ್ ವೈ ಎಸ್) ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್ ಎಡಪಾಲ ಶಾಖೆಯ ವಾರ್ಷಿಕ ಮಹಾ ಸಭೆ ನಡೆಯಿತು. ಸಭೆಯಲ್ಲಿ ಎಸ್‍ವೈಎಸ್  ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್ ಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಎಸ್‍ವೈಎಸ್ ಪದಾಧಿಕಾರಿಗಳು ::  ಅಧ್ಯಕ್ಷರಾಗಿ ಖಾದರ್ ಸಅದಿ, ಉಪಾಧ್ಯಕ್ಷರಾಗಿ ಎ.ಎಂ.ಮಹ್ಮೂದ್ , ಪಿ.ಎ.ಬಷೀರ್ , ಕಾರ್ಯದರ್ಶಿಯಾಗಿ ಎಂ.ಇ.ಹಂಝ , ಕೋಶಾಧಿಕಾರಿಯಾಗಿ ಕೆ.ಯು.ಸಿದ್ದೀಕ್ , ದಅವಾ ಕಾರ್ಯದರ್ಶಿಯಾಗಿ ಶರೀಫ್ ಝೈನಿ, ಜೊತೆ ಕಾರ್ಯದರ್ಶಿಯಾಗಿ ಆಸಿಫ್, ಕಾರ್ಯಕಾರಿಣಿ ಸದಸ್ಯರಾಗಿ ಮಜೀದ್, ಹಮೀದ್, ಲತೀಫ್, ಝುಬೈರ್, ನಾಸಿರ್, ಮಜೀದ್ ಪಿ.ಎ, ರಶೀದ್, ಅದ್ದು, ಶಂಸು ಅವರನ್ನು ಆಯ್ಕೆ ಮಾಡಲಾಯಿತು. ಕರ್ನಾಟಕ ಮುಸ್ಲಿಂ ಜಮಾಅತ್ ಪದಾಧಿಕಾರಿಗಳು :: ಅಧ್ಯಕ್ಷರಾಗಿ ಉಮ್ಮರ್ ಸಿ ಆರ್ ಪಿ, ಉಪಾಧ್ಯಕ್ಷರಾಗಿ ಕೆ.ಇ.ಅಬ್ದುಲ್ಲ , ಎ.ಎಂ.ಅಬ್ದುಲ್ಲ , ಕಾರ್ಯದರ್ಶಿಯಾಗಿ ಸಿ.ಎ.ಅಬೂಬಕ್ಕರ್ , ಕೋಶಾಧಿಕಾರಿಯಾಗಿ ಇಸ್ಮಾಯಿಲ್ ಸಖಾಫಿ, ಕೋಡಿನೆಟರ್ ಆಗಿ ಖಾದರ್ ಮುಸ್ಲಿಯಾರ್,ಜೊತೆ ಕಾರ್ಯದರ್ಶಿಯಾಗಿ ಹುಸೈನಾರ್ ಪಿ.ಎಸ್, ಮುಹಮ್ಮದ್ ಕುಂಞಿ ಕಾರ್ಯಕಾರಿಣಿ…

Read More

ಚೆಯ್ಯಂಡಾಣೆ, ಫೆ.21. ನರಿಯಂದಡ ಗ್ರಾ.ಪಂ  ಗೆ ಒಳಪಟ್ಟ ಕೊಡಗು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಚೇಲಾವರದ ಕಬ್ಬೆ ಜಲಪಾತ ಹಾಗೂ ಸಮೀಪದ ಬೆಟ್ಟ ಪ್ರದೇಶದಲ್ಲಿ ತಮಾರಾ ರೆಸಾರ್ಟ್ ವತಿಯಿಂದ ಸ್ವಚ್ಛತಾ ಶ್ರಮದಾನ ನಡೆಯಿತು. ಚೇಲಾವರದ ಕಬ್ಬೆ ಜಲಪಾತಕ್ಕೆ ಪ್ರವಾಸಿಗರು ಹೆಚ್ಚಾಗಿ ಆಗಮಿಸುತ್ತಿದ್ದು, ಪ್ಲಾಸ್ಟಿಕ್ ತ್ಯಾಜ್ಯಗಳು ಹಾಗೂ ಬಾಟಲಿಗಳನ್ನು ಅಲ್ಲೇ ಬಿಟ್ಟು ತೆರಳಿದ್ದನ್ನು ಮನಗಂಡು ಸ್ವಚ್ಛತಾ ಕಾರ್ಯಕ್ಕೆ ಮುಂದಾದ ಸಿಬ್ಬಂದಿಗಳು ಸುಮಾರು 13 ಕ್ಕೂ ಹೆಚ್ಚು ಚೀಲ ಕಸ, ಪ್ಲಾಸ್ಟಿಕ್,ಬಾಟಲಿಗಳನ್ನು ಸಂಗ್ರಹಿಸಿ, ರೆಸಾರ್ಟ್ ಗೆ ತಂದು ವಿಲೇವಾರಿ ಮಾಡಲಾಯಿತು. ಕಾರ್ಯಕ್ರಮದ ನೇತೃತ್ವವನ್ನು ತಮಾರಾ ರೆಸಾರ್ಟ್ ನ ವ್ಯವಸ್ಥಾಪಕರಾದ ಕೃಷ್ಣ ಕುಮಾರ್ ಬಾಜ್ ಪೈ ಹಾಗೂ ಗಿರೀಶ್ ಸುಬ್ಬಯ್ಯ ವಹಿಸಿದರು. ಈ ಸಂದರ್ಭ ರೆಸಾರ್ಟ್ ನ ನೀತು ಬೋಪ್ಪಣ್ಣ, ಶಾಮ್ ಸಾಜಿ ರಾಮ್, ಡಾಕ್ಟರ್ ಸುನೀತಾ, ಅಂಜಿತ್, ಚಂಗಪ್ಪ ಹಾಗೂ ಸಿಬ್ಬಂದಿಗಳು ಮತ್ತಿತರರು ಇದ್ದರು. ವರದಿ :ಅಶ್ರಫ್ 

Read More