ಲೇಖಕ: admin

ನಾಪೋಕ್ಲು ಏ.11 : ಕಕ್ಕುಂದಕಾಡು ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಾಲಯದ ಜಾತ್ರಾ ಮಹೋತ್ಸವವು ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು. ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆದ ಉತ್ಸವದಲ್ಲಿ ಊರಿನ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮಹಾಪೂಜೆ, ಧ್ವಜಾರೋಹಣ, ದೀಪಾರಾಧನೆ, ದೇವರ ಬಲಿಯೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಿತು. ದೇವಾಲಯದಲ್ಲಿ ಬೆಳಿಗ್ಗೆ ದರ್ಶ ಬಲಿ, ಮಹಾಭಿಷೇಕ, ಮತ್ತು ಮಧ್ಯಾಹ್ನ ಮಹಾಪೂಜೆ, ವಿಶೇಷ ಸೇವೆಗಳು ಜರುಗಿದವು. ದೇವರ ನೃತ್ಯಬಲಿ (ಪಟ್ಟಣಿ ) ನಂತರ ಪ್ರಸಾದ ವಿತರಣೆ ನೆರವೇರಿತು. ಸಂಜೆ ಪಟ್ಟಣದಲ್ಲಿ ದೇವರ ಉತ್ಸವ ಮೂರ್ತಿಯನ್ನು ಚೆಂಡೆ, ವಾದ್ಯಗೋಷ್ಠಿಗಳೊಂದಿಗೆ ಪಟ್ಟಣದಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಕಾವೇರಿನದಿಯಲ್ಲಿ ಅವಭೃತಸ್ನಾನದ ಬಳಿಕ ದೇವರ ದರ್ಶನಬಲಿ ಜರುಗಿತು. ನಂತರ ಶುದ್ಧ ನವಕ ಕಲಶ, ಮಹಾಪೂಜೆ, ಮಂತ್ರಾಕ್ಷತೆಯೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು. ದೇವಾಲಯದ ಮುಖ್ಯ ಅರ್ಚಕ ಸುಧೀರ, ರಮೇಶ್ ಶರ್ಮಾ, ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಈ ಸಂದರ್ಭ ಆಡಳಿತ ಮಂಡಳಿ ಅಧ್ಯಕ್ಷ ಟಿ.ಎಸ್.ಮಂಜಯ್ಯ, ಕಾರ್ಯದರ್ಶಿ ಟಿ.ಎ.ಸುಜಿಕುಮಾರ್, ಖಜಾಂಚಿ ಎಂ.ಪಿ.ಗೋಪಾಲ, ಉಪಾಧ್ಯಕ್ಷ ಟಿ.ಆರ್.ಶ್ರೀನಿವಾಸ, ಕಾರ್ಯಾಧ್ಯಕ್ಷ ಟಿ.ಎನ್.ರಮೇಶ್, ಹಿರಿಯರಾದ ಶ್ರೀನಿವಾಸ, ಆನಂದ…

Read More

ಮಡಿಕೇರಿ ಏ.11  : ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಎಸ್ಸೋಸಿಯೇಷನ್, ಕೊಡಗು ಜಿಲ್ಲೆ (ನೀಮಾ, ಕೊಡಗು) ವತಿಯಿಂದ ಏ.13 ರಂದು  ಜಿಲ್ಲೆಯಾದ್ಯಂತ 30ಕ್ಕೂ ಹೆಚ್ಚಿನ ಆಯುವೇ೯ದ ವೈದ್ಯರು ತಮ್ಮ ಚಿಕಿತ್ಸಾಲಯಗಳಲ್ಲಿ ನೀಮಾ ದಿನಾಚರಣೆ ಆಯೋಜಿಸಿದ್ದಾರೆ. ಏ.13 ರಂದು  ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿವಿಧ ಆರೋಗ್ಯ ಚಿಕಿತ್ಸಾ ಕಾಯ೯ಕ್ರಮಗಳು ಆಯೋಜಿತವಾಗಿದೆ. ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣೆ ಸೇರಿದಂತೆ ಅನೇಕ ಕಾಯ೯ಕ್ರಮಗಳು ಜರುಗಲಿದೆ. ಸೋಮವಾರಪೇಟೆ ತಾಲೂಕಿನ ಆಯುವೇ೯ದ ಚಿಕಿತ್ಸಾಲಯಗಳಲ್ಲಿ ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ, ಮಾಹಿತಿ, ಕುಶಾಲನಗರ ತಾಲೂಕಿನ ಆಯುವೇ೯ದ ಚಿಕಿತ್ಸಾಲಯಗಳಲ್ಲಿ ವಿಶೇಷ ಚೇತನರಿಗೆ ಚಿಕಿತ್ಸೆ, ಮಾಹಿತಿ, ಮಡಿಕೇರಿ ತಾಲೂಕಿನ ಆಯುವೇ೯ದ ಚಿಕಿತ್ಸಾಲಯಗಳಲ್ಲಿ ಮಹಿಳೆಯರಿಗೆ ಚಿಕಿತ್ಸೆ,ಮಾಹಿತಿ, ವಿರಾಜಪೇಟೆ ತಾಲೂಕಿನ ಆಯುವೇ೯ದ ಚಿಕಿತ್ಸಾಲಯಗಳಲ್ಲಿ ಯುವಕ, ಯುವತಿಯರಿಗೆ ಆರೋಗ್ಯ ಸಂರಕ್ಷಣೆಯ ಮಾಹಿತಿ, ಚಿಕಿತ್ಸೆ ಕಾಯ೯ಕ್ರಮಗಳನ್ನು ಅಂದಿನ ದಿನ ಆಯೋಜಿಸಲಾಗಿದೆ. ಅಲ್ಲದೇ ಈಗ ಹಲವರಿಗೆ ಕಾಡುತ್ತಿರುವ ಥೈರಾಯ್ಡ್, ಬೊಜ್ಜುತನ, ಸಕ್ಕರೆ ಕಾಯಿಲೆ, ರಕ್ತದೊತ್ತಡ, ಪಿ.ಸಿ.ಓ.ಡಿ ಸಮಸ್ಯೆಗಳಿಗೆ ಮನೆಯಲ್ಲೇ ಮಾಡಬಹುದಾದ ಯೋಗಾಸನಗಳ ಮಾಹಿತಿಯನ್ನು ಎಲ್ಲರ ಉಪಯೋಗಕ್ಕಾಗಿ…

Read More

ಸೋಮವಾರಪೇಟೆ ಏ.11 :  ಬೆಟ್ಟದಳ್ಳಿ ಯಶೋದೆ ರಂಗಟ್ರಸ್ಟ್ ಹಾಗೂ  ಸಾಂದೀಪನಿ ಪ್ರೌಢಶಾಲೆ  ಸಂಯುಕ್ತಾಶ್ರಯದಲ್ಲಿ ಏ.15ರಿಂದ ಮೇ 3ರ ವರೆಗೆ ಮಕ್ಕಳ ಕಲಾಕಲಿಕೆ ಶಿಬಿರ ನಡೆಯಲಿದೆ ಎಂದು ಶಿಬಿರ ಸಂಚಾಲಕ ನಿಶಾಂತ್ ಮುತ್ತಣ್ಣ ತಿಳಿಸಿದ್ದಾರೆ. ಚೌಡ್ಲು  ಸಾಂದೀಪನಿ ಶಾಲಾ ಆವರಣ ಹಾಗೂ ಗೌಡಳ್ಳಿ ಶ್ರಿ ನವದುರ್ಗಾ ದೇವಾಲಯದ ಆವರಣದಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಶಿಬಿರ ನಡೆಯಲಿದ್ದು, ಡ್ರಾಮಾ ಜೂನಿಯರ್ಸ್, ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮಾರ್ಗದರ್ಶಕರಿಂದ  ರಂಗಾಟ, ಅಭಿನಯ, ಚಿತ್ರಕಲೆ, ಕರಕುಶಲತೆ, ಯಕ್ಷಗಾನ, ಮೂಕಾಭಿನಯ, ಜಾನಪದ ಕುಣಿತ ಸೇರಿದಂತೆ ಇನ್ನಿತರ ರಂಗ ತರಬೇತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ 8123557304 ಹಾಗೂ 7259479331 ಸಂಪರ್ಕಿಸಬಹುದೆಂದು ತಿಳಿಸಿದ್ದಾರೆ.   

Read More

ಬೆಂಗಳೂರು ಏ.11 : ಚುನಾವಣಾ ರಾಜಕೀಯದಿಂದ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ನಿವೃತ್ತರಾಗಿದ್ದಾರೆ. ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಬಿ.ನಡ್ಡಾ ಅವರಿಗೆ ಪತ್ರ ಬರೆದಿರುವ ಅವರು, ನಾನು ಸ್ವ-ಇಚ್ಚೆಯಿಂದ ಚುನಾವಣಾ ರಾಜಕೀಯದಿಂದ ನಿವೃತ್ತನಾಗಲು ಬಯಸಿದ್ದೇನೆ. ಹಾಗಾಗಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ನನ್ನ ಹೆಸರನ್ನು ಪರಿಗಣಿಸಬಾರದು ಎಂದು ವಿನಂತಿಸುತ್ತೇನೆ ಎಂದಿದ್ದಾರೆ. ಕಳೆದ 40ಕ್ಕೂ ಹೆಚ್ಚು ವರ್ಷ ರಾಜಕೀಯ ಜೀವನದಲ್ಲಿ ಬೂತ್ ಮಟ್ಟದಿಂದ ರಾಜ್ಯ ಉಪ-ಮುಖ್ಯಮಂತ್ರಿಯವರೆಗೆ ಗೌರವ ಸ್ಥಾನಮಾನವನ್ನು ನೀಡಿದ ಪಕ್ಷದ ಹಿರಿಯರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದಿದ್ದಾರೆ.

Read More

ಪರೀಕ್ಷೆ ಎಂಬುದು ನಾವು ವಿಷಯವನ್ನು ಎಷ್ಟರ ಮಟ್ಟಿಗೆ ತಿಳಿದುಕೊಂಡಿದ್ದೇವೆ ಎಂಬುದಕ್ಕೆ ಒಂದು ಮಾಪನ ಅಷ್ಟೇ. ಪರೀಕ್ಷಾ ಫಲಿತಾಂಶ ಎಂದರೆ “ವಿದ್ಯಾರ್ಥಿಯ ಸಾಮಥ್ರ್ಯವನ್ನು ಅಳೆಯುವ ಹಲವಾರು ವಿಧಾನಗಳಲ್ಲಿ ಒಂದು. ಫಲಿತಾಂಶಕ್ಕೆ ತೀರಾ ಹೆಚ್ಚು ಬೆಲೆ ಕೊಡಬಾರದು. ಅಂಕ ಕಡಿಮೆ ಬಂದಾಗ ವಿದ್ಯಾರ್ಥಿಗಳಿಗೆ ಬರುವ ಯೋಚನೆಗಳು ಯಾರಿಗೂ ಮುಖ ತೋರಿಸುವುದು ಬೇಡ, ನನಗೆ ಭವಿಷ್ಯವೇ ಇಲ್ಲ, ಫಲಿತಾಂಶ ಯಾರಿಗೂ ಹೇಳುವುದೇ ಬೇಡ, ನಕಾರಾತ್ಮಕ ಚಿಂತನೆ, ಸದಾ ದುಃಖದಿಂದ ಇರುವುದು, ಭಯ/ಆತಂಕದ ಮನಸ್ಥಿತಿ, ಒಂಟಿಯಾಗಿರುವುದು, ಆತ್ಮಹತ್ಯಾ ಆಲೋಚನೆ, ಮನೆ ಬಿಟ್ಟು ಓಡಿಹೋಗುವುದು, ಅಂಕಗಳ ಬಗ್ಗೆ ಸುಳ್ಳು ಹೇಳುವ ಆಲೋಚನೆಗಳು ಬರುತ್ತವೆ. ಆದರೆ ಬೇರೆಯವರಿಂದ ಬಚ್ಚಿಡುವುದರಲ್ಲಿ ಅರ್ಥವಿಲ್ಲ, ಅಂಕ ಕಡಿಮೆ/ಫೇಲ್ ಆದರೆ ಏಕೆ ಹೀಗಾಯಿತೆಂದು ವಿಮರ್ಶೆ ಮಾಡಿಕೊಂಡು ಮುಂದಿನ ಪರೀಕ್ಷೆಯ ಸಿದ್ಧತೆಯಲ್ಲಿ ತೊಡಗಬೇಕು. ಫಲಿತಾಂಶ ಸಮಯದಲ್ಲಿ ಪೋಷಕರ ಪಾತ್ರ ಬಹಳ ಮುಖ್ಯವಾಗುತ್ತದೆ. ಹಾಗಾಗಿ ನಿಮ್ಮ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಸಬೇಡಿ ಮತ್ತು ಚುಚ್ಚು ಮಾತನಾಡಬೇಡಿ. ಫಲಿತಾಂಶ ಬರುವ ಸಮಯದಲ್ಲಿ ಮಗುವಿನ ಜೊತೆ ಇದ್ದರೆ ತುಂಬಾ ಒಳ್ಳೆಯದು. ಮಗುವಿನ…

Read More

ಸಾಧಾರಣವಾಗಿ ಹೆಚ್ಚಿನವರು ಸಂಸ್ಕರಿತ ಆಹಾರ ಪದಾರ್ಥಗಳ ವ್ಯಸನ ಅಥವಾ ಜಂಕಫುಡ್ ವ್ಯಸನ ಎಂಬ ಪದಗಳನ್ನು ಕೇಳಿರುತ್ತೀರಿ. ನಾವೀಗ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಸೇವಿಸುವ ಪದಾರ್ಥಗಳಲ್ಲಿ ಹೆಚ್ಚಿನಂಶವು ವ್ಯಸನವಾಗಿ ಮಾರ್ಪಟ್ಟು ಇಡೀ ಆಹಾರ ವ್ಯಸನವೇ ಆಗಿ ಹೋಗಿದೆ. ಹಿರಿಯರು, ಮಧ್ಯವಯಸ್ಕರು, ಮಕ್ಕಳು ಎಂಬಿತ್ಯಾದಿಯಾಗಿ ಬೇಧಭಾವವಿಲ್ಲದೆ ನಾವು ನೋಡುವ ಎಲ್ಲರೂ ಆಹಾರದ ವ್ಯಸನಿಗಳೇ ಆಗಿದ್ದಾರೆ. ಯಾವುದೇ ಒಂದು ಪದಾರ್ಥಕ್ಕೆ ಅದು ವ್ಯಸನವನ್ನುಂಟು ಮಾಡುತ್ತದೆ ಎಂದು ಯಾವಾಗ ಹೇಳುತ್ತೇವೆಂದರೆ ಆ ಪದಾರ್ಥದಿಂದ ದೂರವಿರಲು ನಮ್ಮಿಂದ ಸಾಧ್ಯವಾಗದೇ ಇದ್ದಾಗ ಅಥವಾ ನಿಂತಲ್ಲಿ, ಕೂತಲ್ಲಿ, ಹೋದಲ್ಲಿ, ಬಂದಲ್ಲಿ ಆ ವಸ್ತುವಿನ ಚಿಂತೆ ಹತ್ತಿ ಅದೇ ಬೇಕೆಂದು ಅನಿಸಿದಾಗ. ಈಗಿನ ಆಹಾರವೇ ವ್ಯಸನಯುಕ್ತ ಆಹಾರವಾಗಿ ಪರಿವರ್ತನೆಗೊಂಡಿದೆ. ಅತಿಯಾದ ಉಪ್ಪು, ಸಕ್ಕರೆ, ಮೈದಾ, ಮಾಂಸಾಹಾರ, ಮಸಾಲೆ ಪದಾರ್ಥ, ಎಣ್ಣೆ (ಕೊಬ್ಬು) ಇತ್ಯಾದಿಗಳ ಬಳಕೆಯಿಂದಾಗಿ ಎಣ್ಣೆ + ಮಸಾಲೆ ಪದಾರ್ಥ + ಉಪ್ಪು ಅಥವಾ ಎಣ್ಣೆ +ಮೈದಾ+ಸಕ್ಕರೆ ಅಥವಾ ಎಣ್ಣೆ + ಕಡಲೇ ಹಿಟ್ಟು + ಸಕ್ಕರೆ ಇವುಗಳನ್ನು ಬಳಸದೇ…

Read More

ಮಡಿಕೇರಿ ಏ.10 : ಯೋಗಾಸನ, ಪ್ರಾಣಾಯಾಮ ಅಭ್ಯಾಸ ಮಾಡುವದರಿಂದ ಉತ್ತಮ ಮನುಜನಾಗಲು ಸಾಧ್ಯವೆಂದು ಶಕ್ತಿ ಪತ್ರಿಕೆ ಸಲಹಾ ಸಂಪಾದಕ, ಕೊಡಗು ಜಿಲ್ಲಾ ಜಾನಪದ ಪರಿಷತ್ತು ಅಧ್ಯಕ್ಷ ಬಿ.ಜಿ.ಅನಂತಶಯನ ಹೇಳಿದರು. ವಾಂಡರ ರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿ.ಸಿ.ವಿ.ಶಂಕರ್ ಸ್ವಾಮಿ ಸ್ಮರಣಾರ್ಥ ಇಲ್ಲಿನ ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಉಚಿತ ಮಕ್ಕಳ ಬೇಸಿಗೆ ಕ್ರೀಡಾ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮನುಜ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು, ಆತ್ಮಶಕ್ತಿ ವೃದ್ಧಿಗೊಳ್ಳಲು ಮಾನಸಿಕ ಸಮತೋಲನ ಮುಖ್ಯ. ಮನಸು ಯಾರಿಗೂ ಕಾಣುವದಿಲ್ಲ. ಮನಸಿನ ಬೀಗವನ್ನು ತೆರೆಯಲು ಯೋಗ, ಪ್ರಾಣಾಯಾಮದಿಂದ ಸಾಧ್ಯ, ಇದು ನಮ್ಮೊಳಗಿರುವ 72ಸಾವಿರ ನರ ನಾಡಿಗಳನ್ನು ಶುಧ್ಧ ಮಾಡುವದಲ್ಲದೆ ಗಟ್ಟಿಗೊಳಿಸುತ್ತದೆ. ಯೋಗ ಮಾಡುವದರಿಂದ ಏಕಾಗ್ರತೆ ಮೂಡುತ್ತದೆ. ಮನಸು ಕ್ರಿಯಾಶೀಲವಾಗಿ ಚಟುವಟಿಕೆಯಿಂದಿರಲು ಸಾಧ್ಯವಾಗುತ್ತದೆ. ಉತ್ತಮ ಮಾನವನಾಗಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ಶಿಬಿರದಲ್ಲಿ ಕಲಿಸುವದನ್ನು ನಿರಂತರವಾಗಿ ಅಭ್ಯಾಸ ಮಾಡಬೇಕೆಂದು ಕಿವಿಮಾತು ಹೇಳಿದರು. ಗೋವಾ ಮೂಲದ ಸಮಾಜ ಸೇವಕಿ ರೂಬಿ ಮಾತನಾಡಿ; ಜೀವನದಲ್ಲಿ ಮತ್ತೊಬ್ಬರಿಗೆ ಸಹಾಯ ಮಾಡಿದಲ್ಲಿ ನಮಗೆ ಅದಕ್ಕಿಂತ…

Read More

ಮಡಿಕೇರಿ ಏ.10 : ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗಡೆ ಅವರನ್ನು ಭೇಟಿಯಾದ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ನಿಯೋಗ ಸರ್ಕಾರಿ ದಾಖಲೆಗಳಲ್ಲಿ “ಕೊಡವ” ಎಂಬ ಶಾಸ್ತ್ರೀಯ ಪದ ಬಳಕೆಯ ಕುರಿತು ಚರ್ಚಿಸಿತು. ಬೆಂಗಳೂರಿನ ದೇವರಾಜ ಅರಸು ಭವನದಲ್ಲಿರುವ ಹಿಂದುಳಿದ ವರ್ಗಗಳ ಆಯೋಗದ ಕಛೇರಿಯಲ್ಲಿ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಮತ್ತಿತರರು ಹೆಗಡೆ ಅವರನ್ನು ಭೇಟಿಯಾಗಿ ನ್ಯಾಯಾಲಯದ ಆದೇಶವಿದ್ದರೂ ಸರ್ಕಾರ “ಕೊಡವ” ಪದ ಬಳಕೆಗೆ ಕ್ರಮ ಕೈಗೊಳ್ಳದಿರುವುದನ್ನು ಮತ್ತೊಮ್ಮೆ ಕಾನೂನಿನ ಮೂಲಕ ಪ್ರಶ್ನಿಸುವುದಾಗಿ ತಿಳಿಸಿದರು. ಉಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ ಗೆಜೆಟ್ ಅಧಿಸೂಚನೆಯ ಮೂಲಕ ಎಲ್ಲಾ ಸರ್ಕಾರಿ ದಾಖಲೆಗಳಲ್ಲಿ ಕೊಡವ ಎಂಬ ಶಾಸ್ತ್ರೀಯ ಪದವನ್ನು ಅಳವಡಿಸುವ ಕುರಿತು ಚರ್ಚಿಸಲಾಗಿದೆ. 2021 ಡಿ.8 ರಂದು, ಡಾ.ದ್ವಾರಕನಾಥ್ ಆಯೋಗದ ವರದಿ ಕೂಡ ಇದನ್ನು ಶಿಫಾರಸು ಮಾಡಿದೆ. ಹೈಕೋರ್ಟ್ ತೀರ್ಪು ನೀಡಿ ಈಗಾಗಲೇ 16 ತಿಂಗಳು ಕಳೆದಿದೆ. ಆದರೆ ಆದೇಶವನ್ನು ಅನುಷ್ಠಾನಗೊಳಿಸುವ ಬದ್ಧತೆಯನ್ನು ಸರ್ಕಾರ ಪ್ರದರ್ಶಿಸುತ್ತಿಲ್ಲ. ಈಗಾಗಲೇ ಕರ್ನಾಟಕ ಹೈಕೋರ್ಟ್ ನಲ್ಲಿ ಸಂಬಂಧಪಟ್ಟವರ ವಿರುದ್ದ ನಾವು…

Read More

ಮಡಿಕೇರಿ ಏ.10 : ಕರ್ನಾಟಕ ರಾಜ್ಯದ ರೈತರ ಜೀವನಾಡಿಯಾಗಿರುವ ಕೆಎಂಎಫ್ ನಂದಿನಿಯನ್ನು ಅಮೂಲ್ ನೊಂದಿಗೆ ಯಾವುದೇ ಕಾರಣಕ್ಕು ವಿಲೀನ ಮಾಡಬಾರದು ಎಂದು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಬಿ.ಎನ್.ಮುದ್ದುರಾಜು ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಗುಜರಾತ್‌ನ ಅಮುಲ್ ಸಂಸ್ಥೆ ನಂದಿನಿಯನ್ನು ಅತಿಕ್ರಮಿಸಿಕೊಳ್ಳಲು ಕರ್ನಾಟಕ ರಾಜ್ಯ ಸರ್ಕಾರ ನೆರವು ನೀಡುತ್ತಿದೆ ಎಂದು ಆರೋಪಿಸಿದ್ದಾರೆ. ಗೋ ಬ್ಯಾಕ್ ಅಮೂಲ್ ಅಭಿಯಾನದ ಮೂಲಕ ರಾಜ್ಯದ ರೈತರು ಹಾಗೂ ಜನರು ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಕೂಡ ಬೆಂಬಲ ನೀಡಲಿದೆ ಎಂದು ತಿಳಿಸಿದ್ದಾರೆ. ಬೆಲೆ ಏರಿಕೆಯ ದುಬಾರಿ ಜೀವನದ ಈ ದಿನಗಳಲ್ಲಿ ಆರ್ಥಿಕತೆಯನ್ನು ಸರಿದೂಗಿಸಲು ರೈತರು ಕೃಷಿಯೊಂದಿಗೆ ಹಸುಗಳನ್ನು ಸಾಕಾಣಿಕೆ ಮಾಡಿ ಹಾಲು ಮಾರಾಟ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಯಥೇಚ್ಚವಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಲಭ್ಯತೆ ಇದ್ದರೂ ಸರ್ಕಾರ ಕೃತಕ ಕೊರತೆಯನ್ನು ಸೃಷ್ಟಿಸುತ್ತಿದೆ. ಗುಜರಾತ್ ನ ಸಂಸ್ಥೆಗೆ ಲಾಭ ಮಾಡಿಕೊಡಲು ಕರ್ನಾಟಕದ ರೈತರ ಜೀವನದ…

Read More

ಮಡಿಕೇರಿ ಏ.10 :  ಓಕಿನವ ಡ್ರ್ಯಾಗನ್ ಮಾರ್ಷಿಯಲ್ ಆರ್ಟ್ಸ್ ಶೋಟೋಕನ್ ರಿಜಿಸ್ಟರ್ಡ್ ಸಂಸ್ಥೆಯಲ್ಲಿ  ನಡೆದ ರಾಷ್ಟ್ರೀಯ ಕರಾಟೆ ಪಂದ್ಯಾವಳಿಯನ್ನು ಅರುಣ್ ಮಚಯ್ಯ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷರಾದ ಡಾಕ್ಟರ್ ದೀಲಿತ್ ಉತ್ತಪ್ಪ  ಪಂದ್ಯಾವಳಿಯನ್ನು ನಡೆಸಿಕೊಟ್ಟು, ಎಲ್ಲಾ ಕರಾಟೆ ತರಬೇತುದಾರರಿಗೆ  ಧನ್ಯವಾದ ಸಲ್ಲಿಸಿದರು.

Read More