ಮಡಿಕೇರಿ ಏ.12 : ಪವಿತ್ರ ರಂಝಾನ್ (ರಮಳಾನ್) ತಿಂಗಳ ಅಂಗವಾಗಿ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್ ಹಾಗೂ ಎಸ್ ಎಸ್ ಎಫ್ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಬೃಹತ್ ಝಿಕ್ರ್ ಮಜ್ಲಿಸ್ ಮತ್ತು ಇಫ್ತಾರ್ ಸಂಗಮ ನಡೆಯಿತು. ಕುಂಜಿಲ ಪೈನರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮುಖರಾದ ಅಬ್ದುಲ್ ರಶೀದ್ ದಾರಿಮಿ, ಮುನೀರ್ ಮಳ್ಹರಿ, ಮಹಮದ್ ಹಾಜಿ, ಮುಂತಾದ ಗಣ್ಯರು ಸೇರಿದಂತೆ, ಸಾರ್ವಜನಿಕರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ 2021-22ರ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ಕುಂಜಿಲ ರೌಲತುಲ್ ಉಲೂಮ್ ಮದ್ರಸ ವಿದ್ಯಾರ್ಥಿನಿ ಫರೀದ ಎಮ್ ಎಸ್ ಹಾಗೂ ಮದ್ರಸ ಸದರ್ ಹಾಗೂ ಶಿಕ್ಷಕಿ ಅಬ್ದುಲ್ಲ ಸಖಾಫಿ ಉಸ್ತಾದರನ್ನು ಗೌರವಿಸಲಾಯಿತು.
ಲೇಖಕ: admin
ಮಡಿಕೇರಿ ಏ.12 : ಪ್ರಾದೇಶಿಕ ಭಾಷಾ ಚಲನಚಿತ್ರಗಳಿಗೆ ಸರ್ಕಾರದಿಂದ ಕೊಡಮಾಡುವ ಸಹಾಯಧನ ಮತ್ತು ಪ್ರಶಸ್ತಿಗಳನ್ನು ಪಡೆಯುವ ಏಕಮಾತ್ರ ಉದ್ದೇಶದಿಂದ ಕೊಡವ ಭಾಷಾ ಚಲನಚಿತ್ರಗಳನ್ನು ನಿರ್ಮಿಸುವ ಕ್ರಮವನ್ನು ತೀವ್ರವಾಗಿ ಖಂಡಿಸುವುದಾಗಿ ಕೊಡವ ಭಾಷಾ ಚಲನಚಿತ್ರ ನಿರ್ದೇಶಕ ಮುಲ್ಲೇಂಗಡ ಮಧೋಶ್ ಪೂವಯ್ಯ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡವ ಭಾಷಾ ಬೆಳವಣಿಗೆಗೆ ಪೂರಕವಾಗಿ ಕೊಡವ ಭಾಷೆಯ ಚಲನಚಿತ್ರಗಳನ್ನು ನಿರ್ಮಿಸಬೇಡಿ ಎನ್ನುವುದಿಲ್ಲ. ಆದರೆ, ಇಲ್ಲಿನ ಮೂಲ ಸಂಸ್ಕೃತಿಗಳ ಅರಿವಿಲ್ಲದೆ, ಕೇವಲ ಕೊಡವ ಭಾಷೆ ಆಧರಿಸಿ ನಿರ್ಮಿಸುವ ಚಲನ ಚಿತ್ರಗಳು ಹೊರ ಜಗತ್ತಿಗೆ ಕೊಡವ ಸಮುದಾಯದ ಬಗ್ಗೆ ತಪ್ಪು ಭಾವನೆಗಳನ್ನು ಮೂಡಿಸುತ್ತದೆಂದು ತೀಕ್ಷ್ಣವಾಗಿ ನುಡಿದರು. ಪ್ರದೇಶಿಕ ಭಾಷಾ ಎರಡು ಚಲನಚಿತ್ರಗಳಿಗೆ ವಾರ್ಷಿಕ 18 ರಿಂದ 20 ಲಕ್ಷ ರೂ. ಸಹಾಯಧನವನ್ನು ಸರ್ಕಾರ ಒದಗಿಸುತ್ತದೆ. ಇದನ್ನು ಪಡೆಯುವ ಏಕಮಾತ್ರ ಉದ್ದೇಶದಿಂದ ಚಲನಚಿತ್ರಗಳನ್ನು ನಿರ್ಮಿಸುವುದು ಮತ್ತು ಪ್ರಶಸ್ತಿಗಾಗಿ ಲಾಬಿ ನಡೆಸುವ ಪಕ್ರಿಯೆಗಳು ಇಂದು ನಡೆಯುತ್ತಿದೆ. ಇಂತಹ ಚಿತ್ರಗಳು ಸೆನ್ಸಾರ್ ಮಂಡಳಿಯ ಮುಂದೆ ಬಂದಾಗ ಅದು ಯೋಗ್ಯವೇ ಅಲ್ಲವೇ ಎಂದಬುದನ್ನು ನಿರ್ಧರಿಸಲು…
ಮಡಿಕೇರಿ ಏ.12 : ಚೆಟ್ಟಳ್ಳಿಯ ಶ್ರೀಮಂಗಲ (ಪೊವ್ವೊದಿ ) ಭಗವತಿ ಉತ್ಸವವು ಏ.14 ಮತ್ತು 15 ರಂದು ನಡೆಯಲಿದೆ. ಏ. 11 ರಂದು ರಾತ್ರಿ ತಕ್ಕಮುಖ್ಯಸ್ಥರ ಸಮ್ಮುಖದಲ್ಲಿ ಶುದ್ದಕಳಸ ಪೂಜೆ ಸಲ್ಲಿಸಿ ಬೊಳಕ್ ಮರವನ್ನಿಟ್ಟು ಹಬ್ಬಕಟ್ಟು ಹಾಕಲಾಯಿತು. ಏ.14 ರಂದು ಪಟ್ಟಣಿಹಬ್ಬ, ಮಧ್ಯಾಹ್ನ 2 ಗಂಟೆಗೆ ದೇವಾಲಯ ತಕ್ಕರಾದ ಮುಳ್ಳಂಡ ಐನ್ ಮನೆಯಿಂದ ಎತ್ತು ಪೋರಾಟದೊಂದಿಗೆ ದೇವರ ಭಂಡಾರವನ್ನು ತರುವುದು. ಏ.15 ರಂದು ದೊಡ್ದಹಬ್ಬವಾಗಿದ್ದು ದೇವರ ಭಂಡಾರವನ್ನು ದೇವಾಲಯಕ್ಕೆ ತರಲಾಗುವುದು. ನಂತರ ವಿಶೇಷ ಪೂಜೆ, ತೆಂಗಿಕಾಯಿ ಎಳೆಯುವುದು, ತೆಂಗಿನ ಕಾಯಿಗೆ ಗುಂಡು ಹೊಡೆಯುವುದು, ಬೊಳಕ್ ಮರವನ್ನು ದೇವಾಲಯಕ್ಕೆ ಇಡಲಾಗುವುದು. ನಂತರ ಪ್ರಸಾದ ವಿತರಣೆ ನೆರವೇರಲಿದೆ. ಏ.16 ರಂದು ಪೂರ್ವಾಹ್ನ 7 ಗಂಟೆಗೆ ಶುದ್ದ ಕಳಸ ಪೂಜೆ ನೆವೇರಿಸಿ, ದೇವರ ಭಂಡಾರವನ್ನು ತಕ್ಕರಾದ ಮುಳ್ಳಂಡ ಐನ್ ಮನೆಯಲ್ಲಿ ಒಪ್ಪಿಸಲಾಗುವುದು.
ಮಡಿಕೇರಿ ಏ.12 : ಕಳೆದ ಹಲವಾರು ವರ್ಷಗಳಲ್ಲಿ ಬಾಹ್ಯಾಕಾಶದಲ್ಲಿ ದೇಶ ಮಾಡಿದ ಸಾಧನೆಗಳನ್ನು ಪ್ರದರ್ಶಿಸಲು ಮತ್ತು ಮಕ್ಕಳಲ್ಲಿ ಬಾಹ್ಯಾಕಾಶದ ಹೆಚ್ಚಿನ ಆಸಕ್ತಿ ಬೆಳೆಸಲು ಏ.18 ರಂದು ಪೊನ್ನಂಪೇಟೆಯಲ್ಲಿ ಉಡಾವಣಾ ವಾಹನಗಳು, ಉಪಗ್ರಹಗಳು ಇತ್ಯಾದಿಗಳ ಮಾದರಿಗಳನ್ನು ಸಾಗಿಸುವ ’ಸ್ಪೇಸ್ ಆನ್ವೀಲ್ಸ್’ ಪ್ರದರ್ಶನ ನಡೆಯಲಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಪ್ರಾಶುಂಪಾಲ ಡಾ.ಎಂ.ಬಸವರಾಜು ಹಾಗೂ ಪಿಯು ಕಾಲೇಜಿನ ಪ್ರಾಂಶುಪಾಲೆ ಡಾ.ರೋಹಿಣಿ, ಭಾರತೀಯ ಬಾಹ್ಯಾಕಾಶಸಂಸ್ಥೆ, ಕೂರ್ಗ್‌ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಕೂರ್ಗ್‌ಇನ್ಸ್ಟಿಟ್ಯೂಟ್ ಆಫ್ ಯೂನಿವರ್ಸಿಟಿಯ ಸಹಯೋಗದೊಂದಿಗೆ ಕೂರ್ಗ್‌ಇನ್ಸ್ಟಿಟ್ಯೂಟ್ ಆಫ್ಟೆಕ್ನಾಲಜಿ ಕಾಲೇಜಿನ ಆವರಣದಲ್ಲಿ ಭಾರತೀಯ ಬಾಹ್ಯಾಕಾಶ ಕೇಂದ್ರವು ಪ್ರಪ್ರಥಮ ಬಾರಿಗೆ ಕೊಡಗಿನಲ್ಲಿ ’ಸ್ಪೇಸ್‌ಆನ್ವೀಲ್ಸ್’ ಪ್ರದರ್ಶನ ನಡೆಸುತ್ತಿದೆ ಎಂದರು. ಅಂದು ಬೆಳಿಗ್ಗೆ 10.30 ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಇಸ್ರೋದ ವಿಜ್ಞಾನಿ ಶ್ರೀನಿವಾಸ್ ಮತ್ತು ಕೊಡವ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಡಾ.ಎಂ.ಸಿ.ಕಾರ್ಯಪ್ಪ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ವೈಜ್ಞಾನಿಕ ಅಭಿವೃದ್ಧಿಯ ಭಾರತದ ದೃಷ್ಟಿಯನ್ನು ಸಾಕಾರಗೊಳಿಸಲು ರಾಕೆಟ್‌ಗಳು, ಉಪಗ್ರಹಗಳು ಮತ್ತು…
ವಿರಾಜಪೇಟೆ ಏ.12 : ಬಿಟ್ಟಂಗಾಲ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಪೊನ್ನಿಮನೆ ಅಯ್ಯಪ್ಪ ಮತ್ತು ಬೋಟೆ ಚಾಮುಂಡಿ ದೇವರ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ಉತ್ಸವದ ಅಂಗವಾಗಿ ಭಂಡಾರ ಹೊರಡುವುದು, ದೇವಸ್ಥಾನದಲ್ಲಿ ಕೊಟ್ಟಿ ಪಾಟ್ ಮತ್ತು ವಿವಿಧ ಧಾರ್ಮಿಕ ಕೋಲಗಳಾದ ಬೋಟೆ ಚಾಮುಂಡಿ ಹಾಗೂ ವಿಷ್ಣುಮೂರ್ತಿ ದೇವರ ತೆರೆ ಸೇರಿದಂತೆ ವಿವಿಧ ತೆರೆಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು. ವಿವಿಧ ಗ್ರಾಮದ ಭಕ್ತಾದಿಗಳು ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಮಡಿಕೇರಿ ಏ.12 : ನಗರದ ಶ್ರೀ ಓಂಕಾರೇಶ್ವರ ದೇವಾಲಯದ ಸಮೀಪವಿರುವ ಮಧುಕೃಪದ ಆವರಣದಲ್ಲಿ ಮಕ್ಕಳಿಗಾಗಿ “ಬಾಲಗೋಕುಲ” ವಸಂತ ಉಚಿತ ಬೇಸಿಗೆ ಶಿಬಿರ ನಡೆಯಿತು. ಶಿಬಿರದಲ್ಲಿ ಐದರಿಂದ ಹದಿನೈದನೆಯ ವಯಸ್ಸಿನ ಐವತ್ತಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ಸಂಭ್ರಮಿಸಿದರು. ಶಿಬಿರದಲ್ಲಿ ವಿವಿಧ ಕ್ಷೇತ್ರಗಳ ನುರಿತ ವ್ಯಕ್ತಿಗಳು ಮಕ್ಕಳಿಗೆ ಅಮೃತ ವಚನ, ಶ್ಲೋಕಗಳು, ಕಬೀರನ ದೋಹಗಳು, ಗಾದೆಗಳು, ಒಗಟುಗಳು, ಮಂಕುತಿಮ್ಮನ ಕಗ್ಗ, ದೇಶಭಕ್ತಿ ಗೀತೆಗಳು, ಅಭಿನಯ ಗೀತೆಗಳು, ದೇಶಿಯ ಆಟಗಳು, ಯೋಗಾಸನ, ಸಂಗೀತ, ಕ್ರಾಫ್ಟ್ ಮುಂತಾದವುಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಜೊತೆಗೆ ಮರೆಯಾಗುತ್ತಿರುವ ದೇಶಿಯ ಆಟಗಳನ್ನು ಮಕ್ಕಳು ಆಟವಾಡಿ ಸಂಭ್ರಮಿಸಿದರು. ಸಮಾರೋಪ ಸಮಾರಂಭ : ಶಿಬಿರದ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೊಡಗು ಜಿಲ್ಲಾ ಸಂಘಚಾಲಕ ಚಕ್ಕೇರ ಮನು ಕಾವೇರಪ್ಪ ಮಾತನಾಡಿ, “ಇಂದಿನ ಸಮಾಜದಲ್ಲಿ ಸಂಸ್ಕಾರ ಹಾಗೂ ಸಂಸ್ಕೃತಿಯ ಕೊರತೆ ಬಹಳಷ್ಟು ಇದೆ. ಇದನ್ನು ಹೋಗಲಾಡಿಸಲು ಬಾಲ ಗೋಕುಲದಂತಹ ಕಾರ್ಯಕ್ರಮಗಳು ಅಗತ್ಯ ಹಾಗೂ ಅನಿವಾರ್ಯ’ ಎಂದರು. ಕಾರ್ಯಕ್ರಮದಲ್ಲಿ ಮಕ್ಕಳಿಗೆ ಶ್ಲೋಕ, ಕಥೆ…
ನಾಪೋಕ್ಲು ಏ.12 : ಬಲ್ಲಮಾವಟಿ ಗ್ರಾಮ ಪಂಚಾಯತಿಯ ಪೇರೂರಿಯನ್ಸ್ ಹಾಕಿ ಕೋಚಿಂಗ್ ಕ್ಯಾಂಪ್ ವತಿಯಿಂದ ಆಯೋಜಿಸಲಾಗಿರುವ ಉಚಿತ ಕ್ರೀಡಾ ತರಬೇತಿ ಶಿಬಿರವನ್ನು ಬಲ್ಲಮಾವಟಿ ಗ್ರಾ.ಪಂ ಅಧ್ಯಕ್ಷ ಮುಕ್ಕಾಟಿರ ಸುತನ್ ಸುಬ್ಬಯ್ಯ ಹಾಗೂ ಮಂಡಲ ಮಾಜಿ ಪ್ರಧಾನ ಕಾರ್ಯದರ್ಶಿ ಮೂವೇರ ನಾಣಪ್ಪ ದೀಪ ಬೆಳಗಿಸಿ ಉದ್ಘಾಟಿಸಿದರು. ಪೇರೂರು ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಚಿಂಗ್ ಕ್ಯಾಂಪ್ ಅಧ್ಯಕ್ಷ ಮೊವೇರ ಪಟ್ಟು ತಮ್ಮಯ್ಯ ವಹಿಸಿದ್ದರು. ಈ ಸಂದರ್ಭ ಕೋಚಿಂಗ್ ಕ್ಯಾಂಪು ಕಾರ್ಯದರ್ಶಿ ತಾಪಂಡ ಅಪ್ಪಣ್ಣ, ಗ್ರಾ.ಪಂ ಸದಸ್ಯರಾದ ಮಚ್ಚೂರ ರವೀಂದ್ರ, ಚೋಕಿರ ಬಾಬಿ ಬೀಮಯ್ಯ, ಚ0ಗೇಟ್ಟಿರ ಕುಮಾರ್ ಸೋಮಣ್ಣ, ಪಾಲಯಾಡ ಸಂತೋಷ ದೇವಯ್ಯ, ಅಯ್ಯಪ್ಪ, ತರಬೇತಿದಾರ ಮಾಜಿ ಸೈನಿಕ ಕುಮ್ಮಂಡ ವಿಠಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಈ ಕೋಚಿಂಗ್ ಕ್ಯಾಂಪ್ 18 ವರ್ಷಕ್ಕೆ ಒಳಪಟ್ಟ ಮಕ್ಕಳಿಗೆ ಏ.28ರ ವರೆಗೆ ಪೇರೂರು ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಬೆಳಿಗ್ಗೆ 6.30 ಗಂಟೆಯಿಂದ ಬೆಳಿಗ್ಗೆ 9 ಗಂಟೆವರೆಗೆ ಜರುಗಲಿದೆ. ವರದಿ : ದುಗ್ಗಳ ಸದಾನಂದ
ನನಗೆ ವಿರಾಜಪೇಟೆ ಕ್ಷೇತ್ರದ ಟಿಕೆಟ್ ನೀಡದೆ ಇರುವ ಪಕ್ಷದ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ. ನಾನು ರಾಜಕೀಯಕ್ಕೆ ವೈಯುಕ್ತಿಕವಾಗಿ ಏನನ್ನೋ ಪಡೆಯಬೇಕೆಂದು ಬಂದವನಲ್ಲ. ಜನರಿಗಾಗಿ ಏನಾದರು ಮಾಡೋಣ ಎಂದು ಬಂದವನು. ಕಳೆದ 30 ವರ್ಷಗಳಿಂದ ಕೊಡಗು ಜಿಲ್ಲೆಯ ಜನರ ಸೇವೆ ಮಾಡಲು ಅವಕಾಶ ಸಿಕ್ಕಿದ್ದೇ ನನ್ನ ಭಾಗ್ಯ. ಪ್ರವಾಹ ಮತ್ತು ಕೋವಿಡ್ ಸಂದರ್ಭದಲ್ಲಿ ಜನರ ಕಷ್ಟವನ್ನು ಹತ್ತಿರದಿಂದ ನೋಡಿದವನು ನಾನು. ಜೀವನದುದ್ದಕ್ಕೂ ಜನಸೇವೆಯಲ್ಲೇ ತೊಡಗಿಸಿಕೊಳ್ಳಬೇಕಂದು ನಿರ್ಧರಿಸಿದವನು ನಾನು. ಎಲ್ಲಾ ಸಂದರ್ಭಗಳಲ್ಲೂ ಕೊಡಗಿನ ಜನತೆ ನನ್ನ ಜೊತೆಯಲ್ಲಿರುವುದೇ ನಾನು ಮಾಡಿದ ಸೇವೆಗೆ ಸಿಕ್ಕ ಜನಾಶೀರ್ವಾದ. ರಾಜಕೀಯ ನನಗೆ ವ್ಯಾಪಾರವು ಅಲ್ಲ, ಜೀವನವು ಅಲ್ಲ ಕೇವಲ ಒಂದು ಸೇವಾಕ್ಷೇತ್ರ ಮಾತ್ರ. ಆದುದರಿಂದ ಬಿಜೆಪಿ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ದುಡಿದಿದ್ದೇನೆ, ಇನ್ನು ಮುಂದೆಯೂ ದುಡಿಯುತ್ತೇನೆ. ಕೊಡಗು ಜಿಲ್ಲೆಯ ಜನರು ಕರೆ ಮಾಡಿ ಅವರ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನಿಮ್ಮ ನಿರೀಕ್ಷೆಯಂತೆ ನನಗೆ ಈ ಬಾರಿ ನಿಮ್ಮನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿಲ್ಲ. ಹಾಗೆಂದು ನಾನು ನಿಮ್ಮ ಸೇವೆಯನ್ನು ಮತ್ತು ನಿಮ್ಮ ಪರವಾದ…
ಮಡಿಕೇರಿ ಏ.12 : ಅರಮೇರಿಯ ಎಸ್‌ಎಂಎಸ್ ವಿದ್ಯಾ ಸಂಸ್ಥೆಯಲ್ಲಿ ಮಾರ್ಚ್ 27ರಿಂದ ಏಪ್ರಿಲ್ 5 ರವರೆಗೆ ಹತ್ತು ದಿನಗಳ ಕಾಲ ವಿದ್ಯಾರ್ಥಿಗಳಿಗೆ ಬೇಸಿಗೆ ಶಿಬಿರ ನಡೆಯಿತು. ಶಿಬಿರದಲ್ಲಿ ಪಾಲ್ಗೊಂಡಿದ್ದ 145 ಶಿಬಿರಾರ್ಥಿಗಳಿಗೆ ಕಸದಿಂದ ರಸ, ಕಲೆ, ಕರಕುಶಲ, ಕ್ರೀಡೆ, ಅಡುಗೆ, ಇನ್ನಿತರ ಚಟುವಟಿಕೆಗಳ ಜೊತೆಗೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಕಾಂತ್ ರಾವ್ ಬೇಟೋಳಿ ಮತ್ತು ದೇವರ ಕಾಡುಗಳಲ್ಲಿ ಪಕ್ಷಿಗಳ ಚಲನವಲನಗಳ ಕುರಿತು ಮಾರ್ಗದರ್ಶನ ನೀಡಿದರು. ಶಿಬಿರದಲ್ಲಿ ಸ್ಕೌಟ್ಸ್ ಮತ್ತು ಗೈಡ್ ವಿದ್ಯಾರ್ಥಿಗಳು ಭಾಗವಹಿಸಿ ಹಲವಾರು ಬ್ಯಾಡ್ಜ್ ಗಳನ್ನು ಸಂಪಾದಿಸಿಕೊಂಡರು. ಕೊಡಗು ರೆಡ್ ಕ್ರಾಸ್ ಸೊಸೈಟಿಯ ಡಾ. ರವೀಂದ್ರಕಾಮತ್, ಶ್ರೀಮುರಳಿಧರ್ ಪ್ರಥಮ ಚಿಕಿತ್ಸೆಯ ಕಾರ್ಯಾಗಾರ ನಡೆಸಿದರು. ದಂತ ವೈದ್ಯರಾದ ಡಾ.ಸುಪ್ರೀತಾ ದೀಪಕ್ ಮಕ್ಕಳ ಹಲ್ಲುಗಳ ಶುಚಿತ್ವ ಕಾಪಾಡುವ ಬಗೆಗೆ ಮಾಹಿತಿ ನೀಡಿದರು. ಜನರಲ್ ತಿಮ್ಮಯ್ಯ ಜನ್ಮದಿನದ ಪ್ರಯುಕ್ತ ಮಡಿಕೇರಿಯ ತಿಮ್ಮಯ್ಯ ವೃತ್ತದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಮುಖ್ಯ ಆಯುಕ್ತ ಕೆ.ಟಿ ಬೇಬಿ ಮ್ಯಾಥ್ಯು ತಿಮ್ಮಯ್ಯ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಶಿಬಿರಾರ್ಥಿಗಳೊಡನೆ…
ಮಡಿಕೇರಿ ಏ.12 : ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಮಡಿಕೇರಿ ಕ್ಷೇತ್ರದಿಂದ ಎಂ.ಪಿ.ಅಪ್ಪಚ್ಚು ರಂಜನ್ ಹಾಗೂ ವಿರಾಜಪೇಟೆ ಕ್ಷೇತ್ರದಿಂದ ಕೆ.ಜಿ.ಬೋಪಯ್ಯ ಅವರಿಗೆ ಮತ್ತೆ ಟಿಕೆಟ್ ನೀಡಲಾಗಿದೆ. ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚುನಾವಣಾ ಉಸ್ತುವಾರಿಗಳಾದ ಅರುಣ್ ಸಿಂಗ್, ಧರ್ಮೇಂದ್ರ ಪ್ರಧಾನ್ ಅವರುಗಳು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು. ಒಟ್ಟು 224 ಕ್ಷೇತ್ರಗಳ ಪೈಕಿ ಮೊದಲ ಪಟ್ಟಿಯಲ್ಲಿ 189 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ.






