ಕುಶಾಲನಗರ,ಫೆ.27 : ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ನ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕುಶಾಲನಗರದ ಎಸ್.ಆದಂ ಆಯ್ಕೆಯಾಗಿದ್ದಾರೆ. ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ನ ಅಧ್ಯಕ್ಷರಾದ ಅಬ್ದುಲ್ ಖಾದರ್ ಅವರ ಅಧ್ಯಕ್ಷತೆಯಲ್ಲಿ ಮೂರ್ನಾಡುವಿನಲ್ಲಿ ನಡೆದ ಸಭೆಯಲ್ಲಿ ಆದಂ ಅವರನ್ನು ಸರ್ವ ಸದಸ್ಯರು ಆಯ್ಕೆ ಮಾಡಿದ್ದಾರೆ. ಎಸ್.ಆದಂ ಅವರು ಕೊಡಗು ಕಬಡ್ಡಿ ಅಸೋಸಿಯೇಷನ್ ನ ಜಿಲ್ಲಾ ಸಂಘಟನಾ ಕಾರ್ಯದರ್ಶಿ, ಕೊಡಗು ನೆಟ್ ಬಾಲ್ ಅಸೋಸಿಯೇಷನ್ ಉಪಾಧ್ಯಕ್ಷ, ರಂಜಿತ್ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಇದರೊಂದಿಗೆ ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಆಗಿ ಆಯ್ಕೆಯಾಗಿದ್ದಾರೆ. ಇವರಿಗೆ ಬಂಧು ಬಳಗ, ಸ್ನೇಹಿತರು ಹಾಗೂ ಕುಶಾಲನಗರದ ಜನತೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಲೇಖಕ: admin
ಮಡಿಕೇರಿ ಫೆ.27 : ಚಂಡಿಘಡದಲ್ಲಿ ನಡೆದ ಆಲ್ ಇಂಡಿಯಾ ಪೊಲೀಸ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಫ್ ನಲ್ಲಿ ಮಡಿಕೇರಿ ಡಿಎಆರ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಜಿತೇಂದ್ರ ರೈ ಅವರು ಬೆಳ್ಳಿ ಪದಕ ಗೆದ್ದಿದ್ದಾರೆ.
ಮಡಿಕೇರಿ ಫೆ.25 : ಹೆಜ್ಜೇನು ದಾಳಿಗೆ ಸಿಲುಕಿ ವ್ಯಕ್ತಿಯೊಬ್ಬಾತ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಮಡಿಕೇರಿ ತಾಲ್ಲೂಕಿನ ಹುಲಿತಾಳ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಂಜುನಾಥ ಮಾಸ್ಟರ್ ಮತ್ತು ಭಾಗೀರಥಿ ದಂಪತಿಗಳ ಪುತ್ರ ಅಶ್ವಿನಿ ಕುಮಾರ್(48) ಸಾವನ್ನಪ್ಪಿರುವ ವ್ಯಕ್ತಿ. ಶನಿವಾರ ಬೆಳಗ್ಗೆ ಅಶ್ವಿನಿ ಕುಮಾರ್ ಅವರು ಸಹೋದರಿ ಅಪರ್ಣ ಅವರೊಂದಿಗೆ ಗದ್ದೆಗೆ ತೆರಳಿದ್ದ ಸಂದರ್ಭ ಅವರ ಮೇಲೆ ಹೆಜ್ಜೇನು ದಾಳಿ ನಡೆದಿತ್ತು. ಈ ಸಂದರ್ಭ ಇವರಿಬ್ಬರು ಮನೆಯತ್ತ ಓಡಿ ಕದವಿಕ್ಕಿಕೊಂಡಿದ್ದರು. ಅಷ್ಟರಲ್ಲೆ ಸಾಕಷ್ಟು ಹೆಜ್ಜೇನುಗಳ ಕಡಿತಕ್ಕೆ ಒಳಗಾಗಿ ಅಸ್ವಸ್ಥರಾಗಿದ್ದ ಅಶ್ವ್ವಿನಿ ಕುಮಾರ್ ಮತ್ತು ಅಪರ್ಣ ಅವರನ್ನು ಮಡಿಕೇರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರು, ಅಷ್ಟರಲ್ಲೆ ಅಶ್ವಿನಿ ಕುಮಾರ್ ಕೊನೆಯುಸಿರೆಳೆದಿದ್ದರು. ಇವರ ಸಹೋದರಿ ಅಪರ್ಣ ಪ್ರಾಣಾಪಾಯದಿಮದ ಪಾರಾಗಿದ್ದಾರೆ.
ಸುಂಟಿಕೊಪ್ಪ ಫೆ.25: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ನೌಕರರು ಅನಿರ್ಧಿಷ್ಟಾವಧಿ ಮುಷ್ಕರವನ್ನು ಹಮ್ಮಿಕೊಂಡಿರುವ ಹಿನ್ನಲೆ ಶಿಕ್ಷಕರ ಸಂಘ ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿಗಳು ಭಿತ್ತಿ ಪತ್ರ ಹಿಡಿದು ಬೆಂಬಲ ಸೂಚಿಸಿದರು. ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರೌಢ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿ.ಟಿಸೋಮಶೇಖರ್, ತಾಲೂಕು ಪ್ರಾಥಮಿಕ ಶಾಲಾ ಉಪಾಧ್ಯಕ್ಷೆ ಸೌಭಾಗ್ಯ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಎನ್‍ಪಿಎಸ್ ರದ್ದುಪಡಿಸಿ, ಒಪಿಎಸ್ ಯೋಜನೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಭಿತ್ತಿ ಪತ್ರವನ್ನು ಪ್ರದರ್ಶಿಸಿದರು. ಕರ್ನಾಟಕ ರಾಜ್ಯದ ಸರ್ಕಾರಿ ನೌಕರರ ನ್ಯಾಯಯುತ ಬೇಡಿಕೆಗಳಾದ ವೇತನ ಭತ್ಯೆಗಳ ಪರಿಷ್ಕರಣೆ, ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ಆಗ್ರಹಿಸಿದರು.
ಮಡಿಕೇರಿ ಫೆ.25 : ದೇಶಪ್ರೇಮ ಎಂಬುದು ಪ್ರತೀಯೋವ೯ ಭಾರತೀಯನ ಮನಸ್ಸಿನಲ್ಲಿಯೂ ಹಾಸುಹೊಕ್ಕಾಗಬೇಕು. ಭಾರತ ದೇಶದ ಹಿರಿಮೆಯನ್ನು ಪ್ರತೀಯೋವ೯ರೂ ಗೌರವಿಸುವಂತಾಗಬೇಕು ಎಂದು ರೋಟರಿ ಜಿಲ್ಲೆ 3181 ನ ಗವನ೯ರ್ ಪ್ರಕಾಶ್ ಕಾರಂತ್ ಹೇಳಿದ್ದಾರೆ. ಮಡಿಕೇರಿಯ ಜನರಲ್ ತಿಮ್ಮಯ್ಯ ಮ್ಯೂಸಿಯಂನಲ್ಲಿರುವ ಅಮರ್ ಜವಾನ್ ಸ್ಮಾರಕದಲ್ಲಿ ಆಯೋಜಿತ ದೇಶಪ್ರೇಮ ಕುರಿತ ರೋಟರಿ ಜಿಲ್ಲಾ ಕಾಯ೯ಕ್ರಮದಲ್ಲಿ ನಿವೃತ್ತ ಸೇನಾಧಿಕಾರಿಗಳನ್ನು ಸನ್ಮಾನಿಸಿ ಮಾತನಾಡಿದ ಪ್ರಕಾಶ್ ಕಾರಂತ್, ಯುವಪೀಳಿಗೆಯಲ್ಲಿ ದೇಶಪ್ರೇಮ ಮೂಡಿಸುವಂತ ಕಾಯ೯ಕ್ರಮಗಳು ಹೆಚ್ಚು ಹೆಚ್ಚು ಆಯೋಜಿತವಾಗಬೇಕು. ಭಾರತದ ಅಪ್ರತಿಮ ಸೇನಾಧಿಕಾರಿಗಳನ್ನು ಯುವಪೀಳಿಗೆಗೆ ಪರಿಚಯಿಸುವ ಯೋಜನೆಗಳು ನಡೆಯಬೇಕು ಎಂದರಲ್ಲದೇ, ಈ ನಿಟ್ಟಿನಲ್ಲಿ ರೋಟರಿ ಜಿಲ್ಲೆ 3181 ಮಂಗಳೂರಿನಿಂದ ಮೈಸೂರಿನವರೆಗೆ ದೇಶಪ್ರೇಮ ಬಿಂಬಿಸುವ ಸಂದೇಶ ಸಾರುವ ವಾಹನ ಜಾಥಾ ಆಯೋಜಿಸಿದ್ದು, 30 ರೋಟರಿ ಸದಸ್ಯರು ಪಾಲ್ಗೊಂಡಿದ್ದಾರೆ ಎಂದರು. ಭಾರತದ ಅಪ್ರತಿಮ ಸೇನಾ ನಾಯಕ ಜನರಲ್ ತಿಮ್ಮಯ್ಯ ನೆನಪುಗಳನ್ನು ಹೊಂದಿರುವ ಭವನವಾದ ತಿಮ್ಮಯ್ಯ ಮ್ಯೂಸಿಯಂಗೆ ರೋಟರಿ ಸದಸ್ಯರ ಭೇಟಿ ಸಾಥ೯ಕತೆ ಮೂಡಿಸಿದೆ. ಪ್ರತೀಯೋವ೯ ದೇಶಪ್ರೇಮಿಯೂ ಈ ಸ್ಮಾರಕ ಭವನಕ್ಕೆ ಭೇಟಿ ನೀಡಿದಾಗ ಖಂಡಿತಾ…
ಚೆಟ್ಟಳ್ಳಿ ಫೆ.25 : ಚೆಟ್ಟಳ್ಳಿ ಶ್ರೀ ಅಯ್ಯಪ್ಪ ದೇವಾಲಯದಲ್ಲಿ ಫೆ.28 ರಂದು 48ನೇ ದಿನದ ಮಂಡಳ ಪೂಜೆ ಜರುಗಲಿದೆ ಎಂದು ದೇವಾಲಯ ಸಮಿತಿ ತಿಳಿಸಿದೆ. ಬೆಳಿಗ್ಗೆ 7 ಗಂಟೆ ಯಿಂದ ಗಣಪತಿ ಹೋಮ, ನವಕಕಲಶ ಪೂಜೆ, ಸಂಜೆ 7.30ಕ್ಕೆ ದೀಪರಾಧನೆ, ಮಹಾಪೂಜೆ, ಮಂಗಳಾರತಿ ನಂತರ ಅನ್ನಸಂತರ್ಪಣೆ ನಡೆಯಲಿದೆ.
ನಾಪೋಕ್ಲು ಫೆ.25 : ನಾಪೋಕ್ಲು ಗ್ರಾ.ಪಂ ಗೆ ಒಳಪಟ್ಟ ಕೋಟೇರಿ-ಬೊಮ್ಮಂಜಿಕೇರಿ ಗ್ರಾಮಕ್ಕೆ ರೂ.12.70 ಲಕ್ಷ ವೆಚ್ಚದಲ್ಲಿ ನಿರ್ಮಿಸಲಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಭೂಮಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಈಗಾಗಲೇ ನಾಪೋಕ್ಲು ಗ್ರಾ.ಪಂ ವ್ಯಾಪ್ತಿಯ ವಿವಿಧ ಗ್ರಾಮಗಳ ರಸ್ತೆಗಳ ಅಭಿವೃದ್ಧಿಗೆ ವಿವಿಧ ಯೋಜನೆ ಅಡಿಯಲ್ಲಿ ಸುಮಾರು 1.30 ಕೋಟಿ ರೂ ಗಳು ಬಿಡುಗಡೆಯಾಗಿದೆ. ಇದರಲ್ಲಿ ಕೆಲವು ರಸ್ತೆಗಳ ಕಾಮಗಾರಿ ನಡೆಯುತ್ತಿದ್ದು, ಬಾಕಿ ಉಳಿದಿರುವ ರಸ್ತೆಗಳ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭವಾಗಲಿದೆ ಎಂದು ಬೋಪಯ್ಯ ತಿಳಿಸಿದರು. ಈ ಸಂದರ್ಭ ನಾಪೋಕ್ಲು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಬಿಜೆಪಿ ಮಡಿಕೇರಿ ತಾಲೂಕು ಪ್ರಧಾನ ಕಾರ್ಯದರ್ಶಿ ಕೋಡಿರ ಪ್ರಸನ್ನ, ತಾಲ್ಲೂಕು ಕಾರ್ಯದರ್ಶಿ ಪಾಡಿಯಮ್ಮಂಡ ಮನು ಮಹೇಶ್, ತಾಲೂಕು ಕೃಷಿ ಮೋರ್ಚಾದ ಅಧ್ಯಕ್ಷ ಶಿವಚಾಳಿಯಂಡ ಜಗದೀಶ್, ಗ್ರಾ.ಪಂ ಸದಸ್ಯೆ ಕೋಟೆರ ನೀಲಮ್ಮ, ಪ್ರಮುಖರಾದ ಅಪ್ಪಾರಂಡ ಅಪ್ಪಯ್ಯ, ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಬಿದ್ದಾಟಂಡ ಜಿನ್ನು ನಾಣಯ್ಯ,…
ವಿರಾಜಪೇಟೆ ಫೆ.25 : ವಿರಾಜಪೇಟೆ ತಾಲೂಕಿನ ಬೇಟೋಳಿ ಗ್ರಾಮದ ರಾಮನಗರದ ಬಿ.ಬಿ. ರಾಮಕೃಷ್ಣ ಬೋರ್ಕರ್ ಅವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ 22ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ರಾಮಕೃಷ್ಣ ಬೋರ್ಕರ್ ಪ್ರಸ್ತುತ ಪೊನ್ನಂಪೇಟೆಯ ಸಿಐಟಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರು ಹಾಗೂ ಕಾಲೇಜಿನ ನ್ಯಾಕ್ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬೇಟೋಳಿ ಶ್ರೀ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೇಟೋಳಿಯ ಬಿ.ವಿ. ಭವಾನಿ ಶಂಕರ್ ಬೋರ್ಕರ್ ಅವರ ಪುತ್ರರಾಗಿದ್ದಾರೆ.
ವಿರಾಜಪೇಟೆ ಫೆ.25 : ವಿಶೇಷ ಅನುದಾನದ ರೂ.1 ಕೋಟಿ ಪ್ಯಾಕೇಜ್‍ನಡಿಯಲ್ಲಿ ವಿರಾಜಪೇಟೆ ತಾಲೂಕಿನ ಕಾರ್ಮಾಡು ಗ್ರಾ.ಪಂ ವ್ಯಾಪ್ತಿಯ ಕಾವಾಡಿ ಗ್ರಾಮದ ಕಾವಾಡಿಚಂಡ ಐನ್‍ಮನೆ ರಸ್ತೆ ಮತ್ತು ಕಾವಾಡಿ ಭಗವತಿ ದೇವಸ್ಥಾನದ ಕಾವಾಡಿಚಂಡ ಕುಟುಂಬದ ರಸ್ತೆ ಅಭಿವೃದ್ಧಿಗೆ ವಿಧಾನ ಪರಿಷತ್ತಿನ ಸದಸ್ಯರ ವಿಶೇಷ ಅನುದಾನ ರೂ.5ಲಕ್ಷ ವೆಚ್ಚದ ಕಾಮಗಾರಿಗೆ ಎಂಎಲ್‍ಸಿ ಮಂಡೇಪಂಡ ಸುಜಾ ಕುಶಾಲಪ್ಪ ಭೂಮಿ ನೆರವೇರಿಸಿದರು. ನಂತರ ಮಾತನಾಡಿದ ಅವರು ಕೆಲವೆ ದಿನಗಳಲ್ಲಿ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗುವುದು. ರಸ್ತೆ ಕಾಮಗಾರಿಗಳು ನಡೆಯುವ ಸಂದರ್ಭ ಸ್ಥಳಿಯರು ಸಹಕಾರ ನೀಡಬೇಕು. ಮೂಲಭೂತ ಸೌಲಭ್ಯಗಳನ್ನು ಸರಕಾರದಿಂದ ಒದಗಿಸಿ ಕೊಡಲಾಗುತ್ತದೆ. ಹಾಗೆಯೇ ರಾಜ್ಯ ಸರಕಾರ ಕೊಡಗಿನ ಅಭಿವೃದ್ಧಿ ದೃಷ್ಟಿಯಿಂದ ಬಹಳಷ್ಟು ಅನುದಾನಗಳನ್ನು ಒದಗಿಸಿಕೊಟ್ಟು ಸಹಕರಿಸಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವುದಾಗಿ ತಿಳಿಸಿದರು. ಬಿಜೆಪಿ ಪ್ರಮುಖರಾದ ಮಾಚಿಮಂಡ ಸುವಿನ್ ಗಣಪತಿ ಮಾತನಾಡಿ, ಗ್ರಾಮೀಣ ಭಾಗದ ರಸ್ತೆಗಳಿಗೆ ವಿಧಾನ ಪರಿಷತ್ತಿನ ಸದಸ್ಯರಾದ ಸುಜಾ ಕುಶಾಲಪ್ಪ ಅವರು ತಮ್ಮ ಜನಪರ ಕಾಳಜಿಯಿಂದ ವಿಶೇಷ ಮುತುವರ್ಜಿ ವಹಿಸಿ…
ಮೂರ್ನಾಡು ಫೆ.25 : ಮೂರ್ನಾಡು ಹೋಬಳಿ ಬಂಟರ ಸಂಘದ ವತಿಯಿಂದ ಎರಡು ದಿನ ಕಾಲ ಹಮ್ಮಿಕೊಂಡಿರುವ ‘ಸ್ವಜಾತಿ ಬಂಧುಲೆನ ಸಮ್ಮಿಲನ-2023’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮೂರ್ನಾಡು ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಬಂಟರ ಸಂಘದ ಗೌರವಾಧ್ಯಕ್ಷ ಬಿ.ಬಿ. ಐತಪ್ಪ ರೈ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಸಮುದಾಯದ ಎಲ್ಲರು ಒಟ್ಟು ಸೇರಲು ಮೂರ್ನಾಡು ಹೋಬಳಿ ಘಟಕ ವೇದಿಕೆ ಒದಗಿಸಿರುವುದು ಖುಷಿಯ ವಿಚಾರ ಎಂದರು. ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ರವೀಂದ್ರ ರೈ ಮಾತನಾಡಿ, ಮೂರ್ನಾಡು ಹೋಬಳಿ ಘಟಕ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಜಿಲ್ಲೆಯ ಎಲ್ಲಾ ಹೋಬಳಿಯೂ ಈ ರೀತಿ ಚಟುವಟಿಕೆಯಿಂದ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು. ಮಡಿಕೇರಿ ತಾಲೂಕು ಘಟಕ ಅಧ್ಯಕ್ಷ ರಮೇಶ್ ರೈ ಮಾತನಾಡಿ, ಜಿಲ್ಲೆಯಲ್ಲಿ ಬಂಟರ ಸಂಘಟನೆ ಆರಂಭವಾದಾಗ ಜನ ಕಡಿಮೆ ಸಂಖ್ಯೆಯಲ್ಲಿ ಸೇರುತ್ತಿದ್ದರು. ಮೂರ್ನಾಡು ಹೋಬಳಿ ಘಟಕದವರು ಬಂಟರ ಸಂಘಟನೆಯನ್ನು ಜೀವಂತವಾಗಿರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮೂರ್ನಾಡು ಹೋಬಳಿ ಘಟಕ ಅಧ್ಯಕ್ಷ…






