ಲೇಖಕ: admin

ಮಡಿಕೇರಿ ಮಾ.21 : ರಾಜ್ಯ ಸರ್ಕಾರ ಕೊಡವರ ಸರ್ವಾಂಗೀಣ ಅಭಿವೃದ್ಧಿಗಾಗಿ ಕೊಡವ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿರುವುದು ಸ್ವಾಗತಾರ್ಹ ಕ್ರಮವೆಂದು ಹರ್ಷ ವ್ಯಕ್ತಪಡಿಸಿರುವ ಕೊಡಗು ಜಿಲ್ಲಾ ಬಿಜೆಪಿಯ ಕಾರ್ಯಕಾರಿಣಿ ಸಮಿತಿಯ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ, ಮುಖ್ಯಮಂತ್ರಿಗಳು ನಿಗಮಕ್ಕೆ 100 ಕೋಟಿ ರೂ. ಅನುದಾನವನ್ನು ಮೀಸಲಿಡಬೇಕೆಂದು ಮನವಿ ಮಾಡಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡವರ ಅನೇಕ ವರ್ಷಗಳ ಬೇಡಿಕೆಯನ್ನು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು ಈಡೇರಿಸಿದ್ದಾರೆ. ಅವರಿಗೆ ನಾವು ಚಿರಋಣಿಗಳಾಗಿದ್ದೇವೆ, ಕೊಡವರ ಸರ್ವಾಂಗೀಣ ಅಭಿವೃದ್ಧಿಗಾಗಿ ಇರುವ ನಿಗಮಕ್ಕೆ 100 ಕೋಟಿ ರೂ.ಗಳನ್ನು ಬಿಡುಗಡೆ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. ಯುನೈಟೆಡ್ ಕೊಡವ ಆರ್ಗನೈಸೇಷನ್ ಸಂಘಟನೆ ನಿಗಮ ಸ್ಥಾಪನೆಯ ಬೇಡಿಕೆ ಇಟ್ಟಾಗ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರ ನೇತೃತ್ವದಲ್ಲಿ ತಾವು ಸೇರಿದಂತೆ ಅನೇಕರು ಬೆಳಗಾವಿಗೆ ನಿಯೋಗ ತೆರಳಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದೆವು. ಅಂದು ಸಿಎಂ ನೀಡಿದ ಭರವಸೆ ಇಂದು ಈಡೇರಿದ್ದು, ಶಾಸಕರಾದ ಕೆ.ಜಿ.ಬೋಪಯ್ಯ, ಯುಕೊ ಸಂಘಟನೆಯ ಎಲ್ಲಾ ಪದಾಧಿಕಾರಿಗಳು,…

Read More

ಮಡಿಕೇರಿ ಮಾ.21 : ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ ಪೂರಕವಾಗಿ ಬಿಜೆಪಿ ಸರ್ಕಾರ ಸಾಕಷ್ಟು ಅನುದಾನವನ್ನು ವಿರಾಜಪೇಟೆ ಕ್ಷೇತ್ರ ವ್ಯಾಪ್ತಿಗೆ ನೀಡಿದೆ. ಆದರೆ ಬಿಜೆಪಿ ಪದಾಧಿಕಾರಿಯಾಗಿದ್ದ ಜೋಕಿಂ ರೋಡ್ರಿಗಸ್ ಅವರು ಸ್ವಹಿತಾಸಕ್ತಿಗೋಸ್ಕರ ಪಕ್ಷ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ಅಧ್ಯಕ್ಷ ಪಿ.ಎಂ.ಹಕೀಂ ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಅಲ್ಪಸಂಖ್ಯಾತರ ಮೋರ್ಚಾದ ರಾಜ್ಯ ಪದಾಧಿಕಾರಿಯಾಗಿದ್ದ ಜೋಕಿಂ ರೋಡ್ರಿಗಸ್ ಅವರು ಸರ್ಕಾರದಿಂದ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯಕ್ಕೆ ಯಾವುದೇ ಪ್ರಯೋಜನವಾಗಿಲ್ಲವೆಂದು ಟೀಕೆ ಮಾಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿ ಸರ್ಕಾರದ ಕಳೆದ ಐದು ವರ್ಷಗಳ ಅವಧಿಯಲ್ಲಿ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಚರ್ಚ್‍ಗಳ ಸಮುದಾಯ ಭವನ ನಿರ್ಮಾಣ, ಸ್ಮಶಾನ ಅಭಿವೃದ್ಧಿ ಮೊದಲಾದ ಕಾರ್ಯಗಳಿಗೆ 10 ಕೋಟಿಗೂ ಹೆಚ್ಚಿನ ಅನುದಾನವನ್ನು ಶಾಸಕ ಕೆ.ಜಿ.ಬೋಪಯ್ಯ ಅವರ ಶಿಫಾರಸ್ಸಿನ ಮೇಲೆ ಒದಗಿಸಲಾಗಿದೆ. ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದ ಸಂದರ್ಭ ಕ್ರಿಶ್ಚಿಯನ್ ಅಭಿವೃದ್ಧಿ…

Read More

ಮಡಿಕೇರಿ ಮಾ.21 : ನಗರದ ಪ್ರಸಿದ್ಧ ಪ್ರವಾಸಿತಾಣ ರಾಜಾಸೀಟು ಅಭಿವೃದ್ಧಿಯ ಸಂದರ್ಭ ದುರುಪಯೋಗ ನಡೆದಿದೆ ಎಂದು ಆರೋಪಿಸಿರುವ ಕಾಂಗ್ರೆಸ್‍ನ ರಾಜೀವ್‍ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ಈ ಸಂಬಂಧ ಉಪ ಲೋಕಾಯುಕ್ತರಿಗೆ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 4.55 ಕೋಟಿ ವೆಚ್ಚದ ಗ್ರೇಟರ್ ರಾಜಾಸೀಟು ಯೋಜನೆಯಡಿ ದೊಡ್ಡ ಮೊತ್ತದ ದುರುಪಯೋಗವಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಮತ್ತು ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸುವಂತೆ ಲೋಕಾಯುಕ್ತಕ್ಕೆ ನೀಡಿರುವ ದೂರಿನಲ್ಲಿ ಕೋರಲಾಗಿದೆ ಎಂದರು. ಮಡಿಕೇರಿ ರಾಜಾಸೀಟಿನ ಅಭಿವೃದ್ಧಿಗಾಗಿ ಪ್ರವಾಸೋದ್ಯಮ ಇಲಾಖೆಗೆ ರಾಜ್ಯ ಸರ್ಕಾರ 2016-17 ನೇ ಸಾಲಿನಲ್ಲಿ 4.55 ಕೋಟಿ ರೂ.ಗಳನ್ನು ಒದಗಿಸಿತ್ತು. ಇದರ ಕಾಮಗಾರಿಯನ್ನು 2020-21 ರಲ್ಲಿ ಲೋಕೋಪಯೋಗಿ ಇಲಾಖೆಗೆ ವಹಿಸಿಕೊಟ್ಟ ಬಳಿಕ, 2020 ರ ಜೂ.30 ರಿಂದ ಕಾಮಗಾರಿ ಆರಂಭಗೊಂಡಿತು. ಈ ಹಂತದಲ್ಲಿ ಮಾಜಿ ಸಚಿವ ಎಂ.ಸಿ. ನಾಣಯ್ಯ, ಅಂದಿನ ಎಂಎಲ್‍ಸಿ ವೀಣಾ ಅಚ್ಚಯ್ಯ ಅವರು ಸ್ಥಳಕ್ಕೆ ಭೇಟಿಯನ್ನಿತ್ತು ಕಾಮಗಾರಿ ನಡೆಯುತ್ತಿದ್ದ ರೀತಿಯ ಬಗ್ಗೆ ತಮ್ಮ…

Read More

ಚೆಯ್ಯಂಡಾಣೆ ಮಾ.21 :  ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಕಕ್ಕಬೆಯ ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಸಾಮಾಜಿಕ ಸಬಲೀಕರಣ ದಿನಾಚರಣೆ ಆಚರಿಸಲಾಯಿತು. ಡಾ. ಬಿ.ಆರ್. ಅಂಬೇಡ್ಕರ್ ರವರು ತಮ್ಮ ಬಹಿಷ್ಕೃತ ಹಿತಕಾರಿಣಿ ಸಭಾ ವತಿಯಿಂದ ಮೊದಲ ಬಾರಿಗೆ ಮಹಾರಾಷ್ಟ್ರ ದ ಮಹಾಡ್ ನಗರದಲ್ಲಿ ಚೌಡಾರ್ ಕೆರೆ ಆಂದೋಲನ ನಡೆಸಿದ್ದು,  ಇದು ಅಸ್ಪೃಶ್ಯತೆ ಆಚರಣೆ ವಿರುದ್ಧ ಜಾಗೃತಿಗಾಗಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಅರಿವು ಕಾರ್ಯಕ್ರಮವನ್ನು ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಗ್ರಾ.ಪಂ  ಅಭಿವೃದ್ದಿ ಅಧಿಕಾರಿ ಅಶೋಕ್ ಆಗಮಿಸಿ ದಿನದ ಮಹತ್ವದ ಕುರಿತು ಉಪನ್ಯಾಸ ಹಾಗೂ ಜಾಗೃತಿ ಮೂಡಿಸಿದರು. ಈ ಸಂದರ್ಭ ಸ್ಥಳೀಯ ಗ್ರಾ.ಪಂ ಅಧ್ಯಕ್ಷ  ಸಂಪನ್ ಅಯ್ಯಪ್ಪ ಮತ್ತಿತರರು ಇದ್ದರು. ಮುಖ್ಯ ಶಿಕ್ಷಕಿ ಸುಮಯ್ಯ ಕೆ.ಎಂ. ಸ್ವಾಗತಿಸಿ, ವಂದಿಸಿದರು. ವರದಿ : ಅಶ್ರಫ್   

Read More

ಶ್ರೀಮಂಗಲ ಮಾ.21 : ಕೊಡವ ಟಗ್ ಆಫ್ ವಾರ್ ಅಕಾಡೆಮಿಯ ಮಾನ್ಯತೆ ಪಡೆದ, ಕೊಡವ ಒಕ್ಕಡೊಕ್ಕಡ ಕೇರ್ ಬಲಿಪ ನಮ್ಮೆ ಚೆಟ್ಟಂಗಡ ಕಪ್ -2023 ಕ್ಕೆ “ಕೇರ್ ಪೂಜೆ” ನೆಮ್ಮಲೆ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಶಾಸ್ತ್ರೋತ್ತವಾಗಿ ಜರುಗಿತು. ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಉತ್ಸವದ ಎರಡನೇ ವರ್ಷದ ಆತಿಥ್ಯ ವಹಿಸಿಕೊಂಡಿರುವ ನೆಮ್ಮಲೆ ಗ್ರಾಮದ ಚೆಟ್ಟಂಗಡ ಕುಟುಂಬವು ಹಗ್ಗಜಗ್ಗಾಟ ಪಂದ್ಯಾವಳಿಗೆಂದೇ ಕೇರಳ ರಾಜ್ಯದ ಪರಿಣಿತ ಹಗ್ಗ ತಯಾರಿಸುವವರಿಂದ ವಿಶೇಷವಾಗಿ ತಯಾರಿಸಿಕೊಂಡು ತಂದಿರುವ ಹಗ್ಗಗಳಿಗೆ ಕುಟುಂಬದ ಹಿರಿಯರು, ಅಧ್ಯಕ್ಷ, ಆಡಳಿತ ಮಂಡಳಿ ಹಾಗೂ ಕುಟುಂಬದ ಸದಸ್ಯರ ಸಮ್ಮುದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಹಗ್ಗಜಗ್ಗಾಟರ ಸಂದರ್ಭ ಯಾವುದೇ ಕ್ರೀಡಾಪಟುಗಳಿಗೂ ಕಿಂಚಿತ್ತೂ ತೊಂದರೆಯಾಗದೆ ಕೇರ್ ಬಲಿಪ ನಮ್ಮೆ ಯಶಸ್ವಿಯಾಗಲೆಂದು ಪ್ರಾರ್ಥಿಸಿದರು. ಆರಂಭದಲ್ಲಿ ಚೆಟ್ಟಂಗಡ ಕುಟುಂಬದ ಗುರುಕಾರೋಣರ ಸನ್ನಿಧಿಯಾದ ಕೈಮಡದಲ್ಲಿ ನೂತನವಾಗಿ ತಯಾರಿಸಿದ ಹಗ್ಗಗಳನ್ನಿಟ್ಟು ಒಕ್ಕಣೆ ಕಟ್ಟಿ ಒಗ್ಗಟ್ಟಿನಿಂದ ಅತ್ಯುತ್ತಮವಾಗಿ ಕೇರ್ ಬಲಿಪ ನಮ್ಮೆ ನಡೆಸಲು ಕುಟುಂಬ ಸದಸ್ಯರಿಗೆ ಶಕ್ತಿ ಹಾಗೂ ಸೌಕರ್ಯ ನೀಡುವಂತೆ ಚೆಟ್ಟಂಗಡ ಕುಟುಂಬದ ಗುರುಕಾರೋಣರನ್ನು ಬೇಡಿಕೊಂಡು…

Read More

ಮಡಿಕೇರಿ ಮಾ.21 :  ಶಾಲಾ ಶಿಕ್ಷಣ ಇಲಾಖೆ ವತಿಯಿಂದ  ನಡೆದ ಪ್ರಜಾವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಾದ ಮೋಹನ್ ರಾಜ್ ಮತ್ತು ಸಂಜನಾ ಭಾಗವಹಿಸಿ ಪ್ರಶ್ನೆಗಳನ್ನು ಕೇಳಿದರು.

Read More

ಮಡಿಕೇರಿ ಮಾ.21 : ಈ ಬಾರಿ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ರೈತ ಸಂಘದ ಅಂಗ ಪಕ್ಷವಾದ ಸರ್ವೋದಯ ಕರ್ನಾಟಕ ಪಕ್ಷದಿಂದ ಕಾಡ್ಯಮಾಡ ಮನು ಸೋಮಯ್ಯ ಸ್ಪರ್ಧಿಸುವುದು ಖಚಿತವಾಗಿದ್ದು, ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದು ರೈತ ಸಂಘದ ಪ್ರಮುಖರು ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜೈ ಬೋಪಯ್ಯ, ರಾಷ್ಟ್ರೀಯ ಪಕ್ಷಗಳು ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಸ್ಪರ್ಧೆಯಿಂದ ಹಿಂದೆ ಸರಿಯುತ್ತಾರೆ ಎಂದು ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಮನು ಸೋಮಯ್ಯ ಅವರು ಸರ್ವೋದಯ ಕರ್ನಾಟಕ ಪಕ್ಷದಿಂದ ಸ್ಪರ್ಧಿಸುವುದು ಖಚಿತವಾಗಿದೆ. ಆದರೆ ರಾಷ್ಟ್ರೀಯ ಪಕ್ಷಗಳು ಮನು ಸೋಮಯ್ಯ ಅವರ ವ್ಯಕ್ತಿತ್ವ ಮತ್ತು ಅಪಾರ ಜನ ಬೆಂಬಲವನ್ನು ಗಮನಿಸಿ ಇಲ್ಲ ಸಲ್ಲದ ಅಪಪ್ರಚಾರ ನಡೆಸುತ್ತಿದ್ದಾರೆ. ರೈತ ಸಂಘ ಬೆಳೆಗಾರರು, ಕಾರ್ಮಿಕರು, ದಲಿತರ ಪರವಾಗಿ ಜಿಲ್ಲೆಯಲ್ಲಿ ಹಲವಾರು ಹೋರಾಟ ಮಾಡಿದ್ದು, ಜನಪರ ಕಾರ್ಯಕ್ರಮಗಳನ್ನು ನಡೆಸಿದೆ. ಈ ಎಲ್ಲಾ ವಿಚಾರಗಳು…

Read More

ಮಡಿಕೇರಿ ಮಾ.21 : ಮುಂದಿನ ಸಾಲಿಗೆ ಒಟ್ಟು 73,13,48,792 ರೂಪಾಯಿ ಗಾತ್ರದ ಆಯವ್ಯಯವನ್ನು ನಗರಸಭೆ ಅಧ್ಯಕ್ಷತೆ ನೆರವಂಡ ಅನಿತಾ ಪೂವಯ್ಯ ಮಂಡಿಸಿ ಅನುಮೋದನೆ ಪಡೆದುಕೊಂಡರು. ನಗರಸಭೆ ಸಭಾಂಗಣದಲ್ಲಿ ನಡೆದ ಆಯವ್ಯಯ ಅಂದಾಜುಪಟ್ಟಿಯನ್ನು ಅಧ್ಯಕ್ಷೆ ಸಭೆಯ ಮುಂದಿಟ್ಟು ಅಭಿವೃದ್ಧಿ ಕಾರ್ಯದ ಬಗ್ಗೆ ವಿವರಿಸಿದರು. 2023-24ನೇ ಸಾಲಿನಲ್ಲಿ ಆರಂಭ ಶಿಲ್ಕು 12,09,89,630 ರೂಪಾಯಿ ಹೊಂದಿದ್ದು, ರೂ.61,03,59,162 ಸ್ವೀಕೃತಿಯೊಂದಿಗೆ ರೂ.73,13,48,792 ನಿರೀಕ್ಷಿತ ಆಯವ್ಯಯವನ್ನು ಸಿದ್ಧಪಡಿಸಲಾಗಿದೆ. ಈ ಪೈಕಿ ರೂ.66,88,08,000 ವೆಚ್ಚವಾಗಲಿದ್ದು, 6,25,40,792 ರೂಪಾಯಿ ಉಳಿಕೆಯಾಗಲಿದೆ ಎಂದು ಮಾಹಿತಿ ಒದಗಿಸಿದರು. ನಗರಸಭೆಯ ಸ್ವಂತ ಮೂಲಗಳಿಂದ ಬರುವ ನಿರೀಕ್ಷಿತ ಆದಾಯದ ಬಗ್ಗೆ ವಿವರಿಸಿದ ಅನಿತಾ ಪೂವಯ್ಯ, ಆಸ್ತಿ ತೆರಿಗೆ, ದಂಡಗಳಿಂದ ರೂ.3.85 ಕೋಟಿ, ನೀರಿನ ಶುಲ್ಕ ಠೇವಣಿಯಿಂದ ರೂ.96.50 ಲಕ್ಷ ಮಳಿಗೆಗಳ ಬಾಡಿಗೆಯಿಂದ ರೂ.1.25 ಕೋಟಿ, ರಾಜಾಸೀಟ್ ಹಾಗೂ ಬಸ್ ನಿಲ್ದಾಣದಲ್ಲಿ ವಾಹನ ನಿಲುಗಡೆಗಳ ಹಾರಾಜಿನಿಂದ ರೂ.50 ಲಕ್ಷ, ಉದ್ದಿಮೆ ಸೇರಿದಂತೆ ಇತರ ಪರವಾನಗಿಯಿಂದ ರೂ.81 ಲಕ್ಷ, ಕಟ್ಟಡ ಪರವಾಗಿ, ಅಭಿವೃದ್ಧಿ ಶುಲ್ಕದಿಂದ ರೂ.50 ಲಕ್ಷ, ವಾಹನ ನಿಲುಗಡೆ…

Read More

ಮಡಿಕೇರಿ ಮಾ.21 : ಬರಹಗಾರ, ನಟ, ನಿರ್ದೇಶಕ, ನಿರ್ಮಾಪಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಬರೆದಿರುವ ಕೊಡವ ಮಕ್ಕಡ ಕೂಟದ 63ನೇ ಪುಸ್ತಕ “ಹೊಂಬೆಳಕು” ಇಂದು ಬಿಡುಗಡೆಗೊಂಡಿತು. ನಗರದ ಪತ್ರಿಕಾಭವನದಲ್ಲಿ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ, ಸಾಮಾಜಿಕ ಕಳಕಳಿಯ ಪುಸ್ತಕ ಇದಾಗಿದೆ ಎಂದರು. ಮಕ್ಕಳಿಲ್ಲದ ಮನಸ್ಸುಗಳ ತುಡಿತ, ದತ್ತು ಶಿಶು ಸ್ವೀಕಾರದ ಸಾಮಾಜಿಕ ಜಾಗೃತಿ, ಜಾತಿಯನ್ನು ಮೀರಿದ ಮಾನವೀಯತೆ, ಪ್ರೀತಿ, ಸೌಹಾರ್ದತೆ, ಕುತೂಹಲ ಸೇರಿದಂತೆ ಅನೇಕ ಭಾವನಾತ್ಮಕ ವಿಚಾರಧಾರೆಗಳಿಗೆ ಒತ್ತು ನೀಡಿ ಕಥೆಯನ್ನು ಬರೆಯಲಾಗಿದೆ. ಇದು ಪ್ರಗತಿಪರ ಚಿಂತನೆಯ ಪುಸ್ತಕವಾಗಿದ್ದು, ಕೊಡವ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. “ಹೊಂಬೆಳಕು” ಪುಸ್ತಕ ರಚನೆಕಾರ ಚಿತ್ರ ನಿರ್ದೇಶಕ, ನಟ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಮಾತನಾಡಿ, ನಾನು ಸ್ವತ: ಕಂಡ ಕೆಲವು ಘಟನೆಗಳನ್ನು ಪುಸ್ತಕದ ರೂಪದಲ್ಲಿ ಹೊರತಂದಿದ್ದೇನೆ. ಮೊಬೈಲ್ ಪ್ರಪಂಚದಲ್ಲಿ ಕಾದಂಬರಿಗಳು ಬಾಂಧವ್ಯ ವೃದ್ಧಿಸುವ ಕೆಲಸ ಮಾಡುತ್ತಿದ್ದು, ಸಾಹಿತ್ಯದ ಬಗ್ಗೆ ಅಭಿರುಚಿ ಇರುವವರು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತಾಗಬೇಕು…

Read More

ವಿರಾಜಪೇಟೆ ಮಾ.21 : ತಾಲ್ಲೂಕು ಬಂಟರ ಸಂಘದ ಅಧ್ಯಕ್ಷ ಬಿ.ಎಂ.ದುಶ್ಯಂತ್ ರೈ ಅವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಬಂಟರ ಸಂಘದ ಮಹಾಸಭೆಯು ಮಾ. 26 ರಂದು ಪಟ್ಟಣದ ಗೋಣಿಕೊಪ್ಪಲು ರಸ್ತೆಯಲ್ಲಿನ ಮಂಜುನಾಥ ಹೊಟೇಲ್‍ನಲ್ಲಿ ನಡೆಯಲಿದೆ ಎಂದು ಸಂಘದ ಕಾರ್ಯಕಾರಿ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ. ಬೆಳಿಗ್ಗೆ 10.30ಕ್ಕೆ ನಡೆಯಲಿರುವ ಮಹಾಸಭೆಯಲ್ಲಿ ಬಂಟರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಡಿ.ಜಗದೀಶ್ ರೈ ಹಾಗೂ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಸಭೆಯಲ್ಲಿ ಮುಂದಿನ ಸಾಲಿನ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲ್ಲೂಕಿನ ಸಮುದಾಯ ಬಾಂಧವರು ಸಭೆಗೆ ಆಗಮಿಸಿ ಸಲಹೆ ಸೂಚನೆಗಳನ್ನು ನೀಡುವ ಮೂಲಕ ಸಭೆಯನ್ನು ಯಶಸ್ವಿಗೊಳಿಸುವಂತೆ ಸಂಘದ ಪ್ರಕಟಣೆಯಲ್ಲಿ ಕೋರಲಾಗಿದೆ.

Read More