ಲೇಖಕ: admin

ಮಡಿಕೇರಿ ಮಾ.18 : ಸಮಾವೇಶಕ್ಕೆ ಎರಡು ಗಂಟೆ ತಡವಾಗಿ ಬಂದದ್ದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಭಿಕರ ಕ್ಷಮೆ ಕೋರಿದರು. ಪಕ್ಕದಲ್ಲೇ ಪಿಯುಸಿ ಪರೀಕ್ಷೆ ನಡೆಯುತ್ತಿದ್ದ ಕಾರಣ ತಡವಾಗಿ ಬಂದೆ ಎಂದು ಹೇಳುವ ಮೂಲಕ ಸಿಎಂ ಆಶ್ಚರ್ಯ ಮೂಡಿಸಿದರು. ಯಾಕೆಂದರೆ ಸಿಎಂ ಬರುವವರೆಗೂ ಧ್ವನಿವರ್ಧಕಗಳು ಪರೀಕ್ಷೆಯ ನಿಷೇಧಾಜ್ಞೆಯನ್ನು ಮೀರಿ ಘರ್ಜಿಸುತ್ತಿದ್ದವು. ಫಲಾನುಭವಿಗಳ ಸಮಾವೇಶದ ಆಹ್ವಾನ ಪತ್ರಿಕೆಯಲ್ಲಿ ಬೆಳಗ್ಗೆ 11.30 ಕ್ಕೆ ಕಾರ್ಯಕ್ರಮವೆಂದು ಇತ್ತು. ಮುಖ್ಯಮಂತ್ರಿಗಳ ಪ್ರವಾಸದ ವೇಳಾಪಟ್ಟಿಯ ಪ್ರಕಾರ ಮಧ್ಯಾಹ್ನ 12ರಿಂದ 12.15 ರೊಳಗೆ ಮಡಿಕೇರಿ ತಲುಪಬೇಕಾಗಿತ್ತು. ಆದರೆ ಸಿಎಂ ಎರಡು ಗಂಟೆ ತಡವಾಗಿ ಬಂದರು, ಸಭಿಕರು ಬಿಸಿಲಿನಿಂದ ಸಹನೆ ಕಳೆದುಕೊಂಡು ಮರಳಲು ನೋಡುತ್ತಿದ್ದಾಗ ಆಯೋಜಕರು ಜ್ಯೂಸ್ ಮತ್ತು ಬಿಸ್ಕೇಟ್ ನೀಡಿ ಸಮಾಧಾನ ಪಡಿಸುತ್ತಿದ್ದರು. ಗಾಂಧಿ ಮೈದಾನದ ಪಕ್ಕದಲ್ಲೇ ಇದ್ದ ಸಂತ ಮೈಕಲರ ಶಾಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿತ್ತು.

Read More

ಮಡಿಕೇರಿ ಮಾ.18 : ಕೊಡಗಿನ ಇಬ್ಬರು ಶಾಸಕರನ್ನು ಹಾಡಿ ಹೊಗಳಿದ ಬಸವರಾಜ ಬೊಮ್ಮಾಯಿ ಇವರು ಜನಪ್ರಿಯ ಶಾಸಕರು ಎನ್ನುವುದಕ್ಕಿಂತ ಜನಪಯೋಗಿ ಶಾಸಕರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶ್ಲಾಘಿಸಿದರು. ಬೆಂಗಳೂರಿಗೆ ಬಂದಾಗ ಜಿಲ್ಲೆಯ ಕಡತಗಳನ್ನು ನನ್ನ ಬಳಿಗೆ ತಂದು ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿಯೇ ಮರಳುತ್ತಿದ್ದರು. ಇವರುಗಳಿಗೆ ಅಭಿವೃದ್ಧಿಯ ಬಗ್ಗೆ ಕಾಳಜಿ ಇದೆ, ಇನ್ನು ಮುಂದೆಯೂ ಇವರಿಬ್ಬರ ಮೇಲೆ ನಿಮ್ಮ ಆಶೀರ್ವಾದವಿದ್ದರೆ ಕೈಗೊಂಡ ಕಾಮಗಾರಿಗಳನ್ನು ಪೂರ್ಣಗೊಳಿಸಬಹುದು ಮತ್ತು ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದು ಎಂದರು.

Read More

ಮಡಿಕೇರಿ ಮಾ.18 : ಕೊಡಗು ಜಿಲ್ಲೆಗೆ ಕರ್ನಾಟಕ ರಾಜ್ಯದಲ್ಲಿಯೇ ವಿಶೇಷ ಸ್ಥಾನಮಾನವಿದೆ, ಇಲ್ಲಿ ಸ್ವರ್ಗದಂತಹ ನಿಸರ್ಗವಿದೆ, ವಿಶಿಷ್ಟವಾದ ಸಂಸ್ಕೃತಿ  ಇದೆ. ಇಲ್ಲಿನ ಜನರು ಸ್ವಾಭಿಮಾನಿಗಳು ಎಂದು ಕೊಂಡಾಡಿದ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಮೈಸೂರಿನೊಂದಿಗೆ ಕೊಡಗಿನ ಪ್ರವಾಸೋದ್ಯಮಕ್ಕೂ ಅಂತರಾಷ್ಟ್ರೀಯ ಮಟ್ಟದ ಮನ್ನಣೆ ನೀಡಲು ಯೋಜನೆ ರೂಪಿಸಲಾಗಿದೆ ಎಂದರು. ಮಡಿಕೇರಿಯಲ್ಲಿ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸ್ವಿಝರ್ ಲ್ಯಾಂಡ್ ನಂತಿರುವ ಕೊಡಗಿನ ಪ್ರವಾಸೋದ್ಯಮದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು. ::: ಉಚಿತ ವಿದ್ಯುತ್ ::: ಕೊಡಗಿನ ಕಾಫಿ ಬೆಳೆಗಾರರಿಗೆ 10 ಹೆಚ್.ಪಿ.ವಿದ್ಯುತ್ ಅನ್ನು ಉಚಿತವಾಗಿ ನೀಡಬೇಕೆನ್ನುವ ಬೇಡಿಕೆ ಇತ್ತು. ಕೊಡಗಿನ ಬೆಳೆಗಾರರ ಸಂಕಷ್ಟವನ್ನು ಅರಿತಿರುವ ನಾನು 10 ಹೆಚ್.ಪಿ.ವಿದ್ಯುತನ್ನು ಉಚಿತವಾಗಿ ನೀಡಲು ಆದೇಶಿಸಿದ್ದೇನೆ. ಬೆಳೆಗಾರರ ಹಳೆಯ ಬಾಕಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ 10 ಹೆಚ್.ಪಿ.ವಿದ್ಯುತ್ ಅನ್ನು ಉಚಿತವಾಗಿ ನೀಡಬೇಕೆಂದು ಈ ವೇದಿಕೆ ಮೂಲಕ ಅಧಿಕಾರಿಗಳಿಗೆ ಆದೇಶಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದರು. ಕೊಡಗು ಜಿಲ್ಲೆಯಲ್ಲಿ ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ 50,623 ರೈತರಿಗೆ 12 ಕೋಟಿ…

Read More

ಮಡಿಕೇರಿ ಮಾ.18 : ಕರ್ನಾಟಕ ಹಿಂದಿನಂತಿಲ್ಲ, ಪ್ರಗತಿಥದತ್ತ ಸಾಗುತ್ತಿದೆ. ಜಾತಿ, ಮತ, ಭೇದವಿಲ್ಲದೆ ಪ್ರತಿಯೊಬ್ಬರಿಗೆ ಬದುಕುವ ಶಕ್ತಿಯನ್ನು ಸರ್ಕಾರ ತುಂಬುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಹೇಳಿದ್ದಾರೆ. ಮಡಿಕೇರಿಯ ಗಾಂಧಿ ಮೈದಾನದಲ್ಲಿ ಫಲಾನುಭವಿಗಳ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಸರ್ಕಾರ ಆರೋಗ್ಯ, ಶಿಕ್ಷಣ ಮತ್ತು ಉದ್ಯೋಗಕ್ಕೆ ಆದ್ಯತೆ ನೀಡಿ ದುಡಿಯುವ ವರ್ಗದ ಆದಾಯವನ್ನು ಹೆಚ್ಚಿಸುತ್ತಿದೆ. ವಿವಿಧ ಇಲಾಖೆಗಳಲ್ಲಿ ರೂಪಿಸಲಾಗಿರುವ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಮೂಲಕ ಸಮೃದ್ಧಿಯ ಕರ್ನಾಟಕವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು. ಫಲಾನುಭವಿಗಳ ಸಮ್ಮೇಳನದಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿ 30 ರಿಂದ 50 ಸಾವಿರ ಕುಟುಂಬಗಳಿಗೆ ಸರ್ಕಾರದ ಕಾರ್ಯಕ್ರಮಗಳ ಸೌಲಭ್ಯವನ್ನು ತಲುಪಿಸಲಾಗುತ್ತಿದೆ. ಆ ಮೂಲಕ ಜನಸಾಮಾನ್ಯರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಮಾಡಲಾಗುತ್ತಿದೆ. ಸರ್ಕಾರ ಮತ್ತು ಜನರ ನಡುವಿನ ಸಂಬಂಧವನ್ನು ಗಟ್ಟಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು. ದೂರ ದೃಷ್ಟಿಯ ರಾಜಕರಣಿ ಮುಂದಿನ ಜನಾಂಗದ ಬಗ್ಗೆ ಯೋಚಿಸುತ್ತಾನೆ. ಸಾಮಾನ್ಯ ರಾಜಕರಣಿ ಮುಂದಿನ ಚುನಾವಣೆ ಬಗ್ಗೆ ಚಿಂತಿಸುತ್ತಾನೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ದೇಶದ ಸುರಕ್ಷತೆ,…

Read More

ಮಡಿಕೇರಿ ಮಾ.18 : ವಿಶ್ವ ಹಿಂದೂ ಪರಿಷದ್, ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಅಮ್ಮತ್ತಿ ಘಟಕದ 25ನೇ ವರ್ಷದ ಸತ್ಯನಾರಾಯಣ ಪೂಜೆಯ ಪ್ರಯುಕ್ತ ಮಾ.21 ರಂದು ಹಿಂದೂ ಸಮಾವೇಶ ನಡೆಯಲಿದೆ. ಸಂಜೆ 5.30 ಗಂಟೆಗೆ ಪಾಲಿಬೆಟ್ಟ ಮಾರುಕಟ್ಟೆಯಿಂದ ಶೋಭಾ ಯಾತ್ರೆ ಹೊರಡಲಿದ್ದು, 6.30 ಗಂಟೆಗೆ ಅಮ್ಮತ್ತಿ ಕೊಡವ ಸಮಾಜದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವ ಹಿಂದೂ ಪರಿಷತ್ ಅಮ್ಮತ್ತಿ ಘಟಕದ ಅಧ್ಯಕ್ಷ ಬಿ.ಜಿ.ಪ್ರಥಮ್ ಕರುಂಬಯ್ಯ ವಹಿಸಲಿದ್ದು, ಪರಿಷದ್‍ನ ವಿರಾಜಪೇಟೆ ಪ್ರಖಂಡ ಬಿ.ಎಂ.ಕುಮಾರ್ ಉಪಸ್ಥಿತರಿರಲಿದ್ದಾರೆ. ವಿಶ್ವ ಹಿಂದೂ ಪರಿಷದ್‍ನ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಘು, ಸಕಲೇಶಪುರ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

Read More

ಮಡಿಕೇರಿ ಮಾ.18 : ಕ್ಯಾಂಟರ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮೈಸೂರು ಹೆದ್ದಾರಿಯ ಯಶೋಧರ ಪುರದ ಬಳಿ ನಡೆದಿದೆ. ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಯ ಡಿ.ಗ್ರೂಪ್ ನೌಕರ, ಹುಣಸೂರು ತಾಲ್ಲೂಕಿನ ಕೊತ್ತೆಗಾಲ ಗ್ರಾಮದ ನಿವಾಸಿ ಮಾದೇಶ್ ಗೌಡ(57) ಮೃತ ದುರ್ದೈವಿ. ಪಿರಿಯಾಪಟ್ಟಣ ಕಡೆಗೆ ಬರುತ್ತಿದ್ದ ಕ್ಯಾಂಟರ್ ಗೂಡ್ಸ್ ವಾಹನ ಮತ್ತು ಹುಣಸೂರು ಕಡೆಗೆ ಹೋಗುತ್ತಿದ್ದ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಈ ದುರ್ಘಟನೆ ನಡೆದಿದೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

Read More

ಮಡಿಕೇರಿ ಮಾ.18 : ಜಿಲ್ಲಾಡಳಿತ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಯ ಫಲಾನುಭವಿಗಳ ಸಮ್ಮೇಳನ ಕಾರ್ಯಕ್ರಮದ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊಡಗಿಗೆ ಆಗಮಿಸಿದ್ದು, ಕೆ.ಬಾಡಗ ಗ್ರಾಮದ ಗಾಲ್ಫ್ ಮೈದಾನದ ಹೆಲಿಪ್ಯಾಡ್ ನಲ್ಲಿ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಹಾಗೂ ಕೆ.ಜಿ.ಬೋಪಯ್ಯ ಆತ್ಮೀಯವಾಗಿ ಬರಮಾಡಿಕೊಂಡರು.

Read More

ಮಡಿಕೇರಿ ಮಾ.18 :  ಪೊನ್ನಂಪೇಟೆ ಗ್ರಾ.ಪಂ ಸ್ವಚ್ಛತಾಗಾರರಾದ ಹೆಚ್.‌ ಆರ್.‌ಪರಮೇಶ್‌  ಅವರ ಪುತ್ರಿ ಹೆಚ್.‌ ಪಿ.ಸ್ವಾತಿ   ದ್ವಿತೀಯ ಪಿಯುಸಿ ಯಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದು, ಇವರ ಉನ್ನತ ವ್ಯಾಸಂಗಕ್ಕಾಗಿ ಗ್ರಾ. ಪಂ  ವತಿಯಿಂದ ಲ್ಯಾಪ್‌ಟಾಪ್‌ ನೀಡಿ ಪ್ರೋತ್ಸಾಯಿಸಲಾಯಿತು.

Read More

ಮಡಿಕೇರಿ ಮಾ.18 : ಮಡಿಕೇರಿ ನಗರ ಕಾಂಗ್ರೆಸ್ ವತಿಯಿಂದ ಮನೆಮನೆಗೆ ಗ್ಯಾರಂಟಿ ಕಾರ್ಡ್ ವಿತರಿಸಲಾಯಿತು. ಬೂತ್ ನಂಬರ್ 212ರ ಅಧ್ಯಕ್ಷ ಹಫೀಜ್ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ನ ಮೊದಲ ಗ್ಯಾರಂಟಿ ಕಾರ್ಡ್ “ಗೃಹಜ್ಯೋತಿ” ಯೋಜನೆ ಮೂಲಕ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಪೂರೈಕೆ, 2ನೇ ಗ್ಯಾರಂಟಿ ಪ್ರತಿ ಮನೆಯೊಡತಿಗೆ 2 ಸಾವಿರ ರೂ. ಪ್ರೋತ್ಸಾಹ ಧನ ನೀಡಲು “ಗೃಹಲಕ್ಷ್ಮಿ” ಯೋಜನೆ ಜಾರಿ ಮತ್ತು 3ನೇ ಗ್ಯಾರಂಟಿಯಾಗಿ ಅನ್ನಭಾಗ್ಯ ಯೋಜನೆ ಮೂಲಕ ಬಿಪಿಎಲ್ ಕಾರ್ಡ್‍ದಾರರಿಗೆ 10 ಕೆ.ಜಿ.ಅಕ್ಕಿ ಉಚಿತವಾಗಿ ನೀಡುವುದಾಗಿ ಪ್ರಮುಖರು ಮತದಾರರಿಗೆ ಭರವಸೆ ನೀಡಿದರು. ಈ ಸಂದರ್ಭ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ.ರಮೇಶ್, ಮಡಿಕೇರಿ ಬ್ಲಾಕ್ ಸಂಘಟನಾ ಕಾರ್ಯದರ್ಶಿ ಎಂ.ಎನ್.ರವುಫ್, ಮಡಿಕೇರಿ ನಗರ ಕಾಂಗ್ರೆಸ್ ಕಾರ್ಯದರ್ಶಿ ಕೌಸರ್, ಮಡಿಕೇರಿ ನಗರ ಅಲ್ಪಸಂಖ್ಯಾತರ ಖಜಾಂಜಿ ಅಜೀಜ್, ಬೂತ್ ಪ್ರಮುಖ ಹಮೀದ್, ಸೇವಾದಳದ ಹಬೀಬ್, ಹಿರಿಯ ಕಾಂಗ್ರೆಸ್ ಮುಖಂಡ ನಿಸಾರ್ ಅಹ್ಮದ್ ಹಾಗೂ ನಿರಂಜನ್ ಕ್ಸೇವಿಯರ್…

Read More

ಮಡಿಕೇರಿ ಮಾ.18 : ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೊಡಗು ಜಿಲ್ಲಾ ಘಟಕದ ವತಿಯಿಂದ ಮಾ.19 ರಂದು 34ನೇ ವರ್ಷದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ನಡೆಯಲಿದೆ. ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಸಮಾಜ ಸೇವಕ ಹಾಗೂ ಕಾಂಗ್ರೆಸ್ ಮುಖಂಡ ಡಾ.ಮಂಥರ್ ಗೌಡ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ವಹಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ನಗರದ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಹೆಚ್.ಪಿ.ನಿರ್ಮಲಾ ಭಾಗವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸ್ಮಿತಾ ಐ ಕೇರ್ ನೇತ್ರ ತಜ್ಞ ಡಾ.ಸಿ.ಆರ್.ಪ್ರಶಾಂತ್, ಸ್ತ್ರೀ ರೋಗ ತಜ್ಞೆ ಮತ್ತು ಪ್ರಸೂತಿ ವೈದ್ಯೆ ಡಾ.ಸೌಮ್ಯ ಪ್ರಕಾಶ್, ವ್ಯಾಂಡಂ ಎಂಟರ್ ಪ್ರೈಸಸ್ ಮಾಲೀಕ ಕೆ.ಕೆ.ದಾಮೋದರ್, ಮಡಿಕೇರಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಎಂ.ಶ್ರೀನಿವಾಸ್, ರಾಜರಾಜೇಶ್ವರಿ ದೇವಾಲಯದ ಧರ್ಮಾಧಿಕಾರಿ ಹೆಚ್.ಎಸ್.ಗೋವಿಂದ ಸ್ವಾಮಿ, ಕೆ.ನಿಡುಗಣೆ ಗ್ರಾ.ಪಂ ಸದಸ್ಯ ಜಾನ್ಸನ್ ಪಿಂಟೋ ಹಾಗೂ ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.  

Read More