ಲೇಖಕ: admin

ಬೆಂಗಳೂರು ಮಾ.14 : ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಪತ್ನಿ ಪರಿಮಳ, ಪುತ್ರ ಯತಿರಾಜ್ ಜೊತೆಗಿದ್ದರು. ಮೋದಿ ಅವರಿಗೆ ಮಂತ್ರಾಲಯದ ರಾಯರ ಮೂರ್ತಿ ನೀಡಿದ ಜಗ್ಗೇಶ್ ಮಾರ್ಚ್ 17 ನನ್ನ ಜನ್ಮ ದಿನವಾಗಿದ್ದು, ಆಶೀರ್ವಾದ ಮಾಡುವಂತೆ ಕೋರಿದರು. 60 ವಸಂತ ಪೂರ್ಣಗೊಳ್ಳುತ್ತಿರುವ ಈ ಸುಸಂದರ್ಭದಲ್ಲಿ ವಿಶ್ವ ನಾಯಕ ಪ್ರಧಾನಿ ನರೇಂದ್ರಮೋದಿ ಅವರಿಂದ ಆಶೀರ್ವಾದ ಪಡೆದು ಪುನೀತನಾದೆ ಎಂದು ಫೇಸ್ ಬುಕ್ ಪೋಸ್ಟ್ ಮೂಲಕ ಜಗ್ಗೇಶ್ ಹರ್ಷ ಹಂಚಿಕೊಂಡಿದ್ದಾರೆ.

Read More

ಸುಂಟಿಕೊಪ್ಪ,ಮಾ.14 : ಸುಂಟಿಕೊಪ್ಪ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗುಡುಗು, ಮಿಂಚು, ಆಲಿಕಲ್ಲು  ಸಹಿತ ಉತ್ತಮ ಮಳೆಯಾಗಿದೆ.  ಮಂಗಳವಾರ ಸಂಜೆ ಸುಂಟಿಕೊಪ್ಪ, ನಾಕೂರು, ಪನ್ಯ, ಹರದೂರು, ಗರಗಂದೂರು ಸೇರಿದಂತೆ ವಿವಿಧ ಭಾಗಗಳಲ್ಲಿ  2 ಇಂಚಿನಷ್ಟು ಮಳೆಯಾಗಿದೆ.  ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಐದು ದಿನಗಳ ಕಾಲ ಮಳೆಯಾಗುವ ಸಾಧ್ಯತೆಗಳಿದೆ. ಗುಡುಗು ಸಿಡಿಲಿನ ಅಬ್ಬರ ಬೆಚ್ಚಿ ಬೀಳಿಸಿದೆ.

Read More

ಮಡಿಕೇರಿ ಮಾ.14 : ಇಲ್ಲಿಗೆ ಸಮೀಪದ ಮಕ್ಕಂದೂರು ಗ್ರಾಮದ ಮಕ್ಕಂದೂರು ಕ್ರಿಕೆಟ್ ಕ್ಲಬ್ ವತಿಯಿಂದ ನಡೆಸಿಕೊಂಡು ಬರಲಾಗುತ್ತಿರುವ ಮಕ್ಕಂದೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಮೂರನೇ ಆವೃತ್ತಿಯ ಚಾಂಪಿಯನ್ ಆಗಿ ಹಿಂದೂ ಕ್ರಿಕೆಟ್‌ಕ್ಲಬ್(ಹೆಚ್‌ಸಿಸಿ) ಹೊರ ಹೊಮ್ಮಿದೆ. ಭಜರಂಗಿ ಬಾಯ್ಸ್ ತಂಡ ದ್ವಿತೀಯ ಸ್ಥಾನ ಗಳಿಸಿದರೆ, ರಾಯಲ್ ಟೈರ‍್ಸ್ ತಂಡ ತೃತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಮಕ್ಕಂದೂರು ಶ್ರೀ ಭದ್ರಕಾಳೇಶ್ವರಿ ದೇವಾಲಯದ ಬಳಿಯ ಮೈದಾನದಲ್ಲಿ ನಡೆದ ಪಂದ್ಯಾವಳಿಯಲ್ಲಿ ಹೆಚ್‌ಸಿಸಿ, ಭಜರಂಗಿ ಬಾಯ್ಸ್, ರಾಯಲ್ ಟೈರ‍್ಸ್, ಟೀಂ ಟೈಟಾನ್ಸ್, ಸ್ಟಾರ್ ಲೈಟ್, ಶಿವಾಜಿ ಫ್ರೆಂಡ್ಸ್, ಧರ್ಮಶಾಸ್ಥ ಹಾಗೂ ಟೀಂ ರೆಬೆಲ್ಸ್ ತಂಡಗಳು ಭಾಗವಹಿಸಿದ್ದವು. ಈ ಪೈಕಿ ಕ್ವಾಲಿಫೈರ್ ಹಂತದಲ್ಲಿ ಫೈನಲ್‌ಗೇರಿದ ಕಿರುವಾಲೆ ಪವನ್ ಮಾಲೀಕತ್ವದ ಶಾಂತೆಯಂಡ ಲೂತನ್ ನಾಯಕನಾಗಿದ್ದ ಹೆಚ್‌ಸಿಸಿ ಹಾಗೂ ಲಕ್ಕಪ್ಪನ ವಿಜೇತ ಮಾಲೀಕ ಹಾಗೂ ನಾಯಕತ್ವದ ದಿನೇಶ್ ನಾಯಕನಾಗಿದ್ದ ಭಜರಂಗಿ ಬಾಯ್ಸ್ ತಂಡಗಳ ನಡುವೆ ಪಂದ್ಯಾಟ ನಡೆದು ಹೆಚ್‌ಸಿಸಿ ತಂಡ ಜಯ ಗಳಿಸಿತು. ಭಜರಂಗಿ ಬಾಯ್ಸ್ ತಂಡ ದ್ವಿತೀಯ ಸ್ಥಾನ ಗಳಿಸಿದರೆ,…

Read More

ಮಡಿಕೇರಿ ಮಾ.14 : ಮಂಗಳೂರು- ಮಡಿಕೇರಿ ರಸ್ತೆಯಲ್ಲಿ ಮೀನು ಸಾಗಾಟ ಮಾಡುವ ಲಾರಿಗಳಿಂದ ಕಲುಷಿತ ನೀರು ಸೋರಿಕೆಯಾಗುತ್ತಿದ್ದು, ಮಾಲಿನ್ಯವನ್ನುಂಟು ಮಾಡುತ್ತಿದೆ ಎಂದು ಆರೋಪಿಸಿ ಮದೆನಾಡು ನಿವಾಸಿ ಜಿ.ಎ.ಇಬ್ರಾಹಿಂ ಎಂಬುವವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಹೆದ್ದಾರಿಯುದ್ದಕ್ಕೂ ಮೀನು ಸಾಗಾಟದ ಕಲುಷಿತ ನೀರು ಸೋರಿಕೆಯಾಗುತ್ತದೆ. ಇದರಿಂದ ಮಾಲಿನ್ಯ ಉಂಟಾಗುತ್ತದೆಯಲ್ಲದೆ ರೋಗ ರುಜಿಗಳು ಹರಡುವ ಭೀತಿ ಇದೆ. ಅಪಘಾತವೂ ಸಂಭವಿಸಬಹುದು ಎಂದು ದೂರಿನಲ್ಲಿ ತಿಳಿಸಿರುವ ಅವರು ವೈಜ್ಞಾನಿಕ ಕ್ರಮ ಅನುಸರಿಸದ ಲಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Read More

ಮಡಿಕೇರಿ ಮಾ.14 : ಕಾಡಾನೆ ದಾಳಿ ಮಾಡಿದ ಸಂದರ್ಭ ತಪ್ಪಿಸಿಕೊಳ್ಳಲು ಓಡುತ್ತಿದ್ದಾಗ ನಿಯಂತ್ರಣ ತಪ್ಪಿ ಬಿದ್ದ ಅರಣ್ಯ ಸಿಬ್ಬಂದಿಯೊಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಪೊನ್ನಂಪೇಟೆ ತಾಲ್ಲೂಕಿನ ಬೇಗೂರು ಗ್ರಾಮದ ಚಿನಿವಾಡ ಎಂಬಲ್ಲಿ ನಡೆದಿದೆ. ತೇಜಸ್ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದು, ಸುಳ್ಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕೆಲವು ದಿನಗಳ ಹಿಂದೆ ಕಾಡಾನೆ ಮರಿಗೆ ಜನ್ಮ ನೀಡಿತ್ತು. ಆದರೆ ಮರಿ ಹುಟ್ಟಿದಾಕ್ಷಣ ಸಾವನ್ನಪ್ಪಿತ್ತು. ಇಂದು ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾಗ ಕಾಡಾನೆ ದಾಳಿಗೆ ಮುಂದಾಗಿದೆ. ತಕ್ಷಣ ಎಚ್ಚೆತ್ತುಕೊಂಡ ತೇಜಸ್ ಓಡಲು ಆರಂಭಿಸಿದಾಗ ಆಯತಪ್ಪಿ ಬಿದಿದ್ದಾರೆ ಎಂದು ಹೇಳಲಾಗಿದೆ.

Read More

ಕುಶಾಲನಗರ  ಮಾ.14 :  ಉತ್ತಮ ಜೀವನ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಮೂಲಕ ನೆಮ್ಮದಿಯ ಬದುಕು ಸಾಗಿಸಲು ಅನುವು ಮಾಡಿ ಕೊಡುವುದು ಪ್ರತಿಯೊಬ್ಬ ಪೋಷಕರ ಜವಾಬ್ದಾರಿಯಾಗಿದೆ ಎಂದು ಉಡುಪಿ ಪುತ್ತಿಗೆ ಮಠದ ಪ್ರಚಾರಕ  ರಮಣ ಶ್ರೀ ಆಚಾರ್ಯ  ಕರೆ ನೀಡಿದ್ದಾರೆ. ಉಡುಪಿ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ನಡೆಯುತ್ತಿರುವ ಕೋಟಿ ಭಗವದ್ಗೀತಾ ಲೇಖನ ಯಜ್ಞ ಭಾಗವಾಗಿ ಕುಶಾಲನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆದ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನೆಯಲ್ಲಿ ಮಕ್ಕಳು ಹಿರಿಯರ ಚಟುವಟಿಕೆಗಳನ್ನು ಗಮನಿಸಿ ಅನುಕರಣೆ ಮಾಡುತ್ತಾರೆ. ಉತ್ತಮ ಕರ್ತವ್ಯಗಳನ್ನು ಮಾಡುವ ಮೂಲಕ ನೆಮ್ಮದಿ ಗಳಿಸಲು ಸಾಧ್ಯ ಎಂದ ಅವರು, ದೇಶಪ್ರೇಮ, ದೈವ ಭಕ್ತಿ, ದೇಹ ಪ್ರೇಮ ಇವುಗಳನ್ನು ಪ್ರತಿಯೊಬ್ಬರು ಹೊಂದಬೇಕಾಗಿದೆ ಎಂದರು. ಎರಡು ವರುಷದ ಅವಧಿಯ ಒಳಗೆ ದಿನಕ್ಕೆ ಭಗವದ್ಗೀತೆಯ ಎರಡು ಶ್ಲೋಕಗಳನ್ನು ಬರೆಯುವ ಮೂಲಕ ಪೂರ್ಣಗೊಳಿಸಿ ನಂತರ ಅದನ್ನು ಸ್ವಯಂಸೇವಕರ ಅಥವಾ ನೇರವಾಗಿ ಮಠಕ್ಕೆ ತಲುಪಿಸಬಹುದು ಎಂದರು. ಈ ಅಭಿಯಾನದಲ್ಲಿ ಪಾಲ್ಗೊಳ್ಳುವವರಿಗೆ ಅವಶ್ಯವಿರುವ ಭಗವದ್ಗೀತೆ ಮತ್ತು ಬರೆಯುವ ಪುಸ್ತಕಗಳನ್ನು…

Read More

ಮಡಿಕೇರಿ ಮಾ.14 : ಇತ್ತೀಚೆಗೆ ಗೋಣಿಕೊಪ್ಪಲಿನಲ್ಲಿ ನಡೆದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ಸಮಾವೇಶದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಜಾತ್ಯತೀತ ಜನತಾದಳದ ಕೊಡಗು ಜಿಲ್ಲಾ ಘಟಕ ದೂರು ನೀಡಿದೆ. ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಅವರು ಗೋಣಿಕೊಪ್ಪಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈಶ್ವರಪ್ಪ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಒಂದು ಸಮುದಾಯದ ಧಾರ್ಮಿಕ ಆಚರಣೆ ಕುರಿತು ಅವಹೇಳನಕಾರಿ ಭಾಷಣ ಮಾಡುವ ಮೂಲಕ ಶಾಸಕ ಕೆ.ಎಸ್.ಈಶ್ವರಪ್ಪ ಅವರು ಕೀಳು ಮಟ್ಟದ ರಾಜಕಾರಣವನ್ನು ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿದರು. ಮತ್ತೊಂದೆಡೆ ವಿಜಯ ಸಂಕಲ್ಪ ಯಾತ್ರೆಯ ಸಂದರ್ಭ ಬಿಜೆಪಿ ಕಟೌಟ್ ಗಳನ್ನು ಅಳವಡಿವಾಗ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅಪಮಾನ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಪ್ರಕರಣದ ಬಗ್ಗೆಯೂ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಜೆಡಿಎಸ್ ಪ್ರಮುಖರು ಹಾಗೂ ಕಾರ್ಯಕರ್ತರು ಹಾಜರಿದ್ದರು.

Read More

ಮಡಿಕೇರಿ ಮಾ.14 : ಕೊಡಗು ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ 35 ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಸಂಬಂಧ ಅಧಿಸೂಚನೆ ಹೊರಡಿಸಿ, ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿ, ಮೆರಿಟ್ ಹಾಗೂ ವರ್ಗವಾರು ಮೀಸಲಾತಿ ಆಧಾರದಲ್ಲಿ 1:5 ರ ಅನುಪಾತದಲ್ಲಿ ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಪರಿಶೀಲನಾ ಪಟ್ಟಿಯನ್ನು ಪ್ರಕಟಿಸಿ, ಆಕ್ಷೇಪಣೆಗಳನ್ನು ಆಹ್ವಾನಿಸಿ, ತಾತ್ಕಾಲಿಕ ಪರಿಶೀಲನಾ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಮೂಲಕ ದಾಖಲಾತಿಗಳನ್ನು ವಿವಿಧ ದಿನಾಂಕಗಳಂದು ಪರಿಶೀಲನೆ ನಡೆಸಿ, ದಾಖಲಾತಿ ಪರಿಶೀಲನೆಗೆ ಹಾಜರಾದ ಅಭ್ಯರ್ಥಿಗಳ ಅಂತಿಮ ಆಯ್ಕೆಪಟ್ಟಿ ಮತ್ತು ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟಿಸಲಾಗಿದೆ. ಅಂತಿಮ ಆಯ್ಕೆ ಪಟ್ಟಿಯಂತೆ ಆಯ್ಕೆಯಾದ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಮತ್ತು ಅಂತಿಮ ಆಯ್ಕೆಪಟ್ಟಿಯಲ್ಲಿ ಆಯ್ಕೆಯಾದ ಕೆಲವು ಅಭ್ಯರ್ಥಿಗಳು ಗೈರುಹಾಜರಾದ ಕಾರಣ ಹೆಚ್ಚುವರಿ ಆಯ್ಕೆಪಟ್ಟಿಯ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಪಡೆದು ಸಂಬಂಧಪಟ್ಟ ಪ್ರಾಧಿಕಾರದಿಂದ ನೈಜತೆಯ ಬಗ್ಗೆ ದೃಢೀಕರಣ ಪಡೆಯಲಾಗಿದೆ. ಆದ್ದರಿಂದ ಅಂತಿಮ ಆಯ್ಕೆಪಟ್ಟಿ ಮತ್ತು ಹೆಚ್ಚುವರಿ ಆಯ್ಕೆಪಟ್ಟಿಯಲ್ಲಿ ಆಯ್ಕೆಗೊಂಡ ಅಭ್ಯರ್ಥಿಗಳ…

Read More

ಮಡಿಕೇರಿ ಮಾ.14 : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರ ಆದಾಯ ವೃದ್ಧಿಸಲು ಜಿಲ್ಲೆಯ ಎಲ್ಲಾ ರೈತ ಕುಟುಂಬಗಳಿಗೆ ಪ್ರತಿ ವರ್ಷ 6 ಸಾವಿರ ರೂ. ವನ್ನು ಒಟ್ಟು 3 ಸಮಾನ ಕಂತುಗಳಲ್ಲಿ ರೈತರ ಖಾತೆಗೆ ಜಮೆ ಮಾಡಲಾಗುತ್ತಿದೆ. ಜಿಲ್ಲೆಯ ಸುಮಾರು 49,582 ರೈತರು ನೋಂದಣಿಯಾಗಿದ್ದು, ಈಗಾಗಲೇ ನೇರ ಆರ್ಥಿಕ ನೆರವು ವರ್ಗಾವಣೆ ಚಾಲ್ತಿಯಲ್ಲಿದೆ. ಈ ಯೋಜನೆಯ ನೆರವು ಆರ್ಹ ಫಲಾನುಭವಿಗಳಿಗೆ ದೊರಕುತ್ತಿರುವುದನ್ನು ಖಾತ್ರಿ ಪಡಿಸಿಕೊಳ್ಳಲು ಇ-ಕೆವೈಸಿ ಮಾಡುವುದು ಅತ್ಯಂತ ಅವಶ್ಯಕವಾಗಿದೆ. e-ಏಙಅ ಮಾಡಿಕೊಂಡ ರೈತರಿಗೆ ಮಾತ್ರ ಮುಂದಿನ ಕಂತು ಬಿಡುಗಡೆ ಮಾಡಲಾಗುವುದು. ರೈತರು http://pmkisan.gov.in ಪೋರ್ಟಲ್‌ ನ Farmers Corner ನ e-KYC ಅವಕಾಶದಡಿ ರೈತನ (ಈಗಾಗಲೇ ಪಿಎಂಕಿಸಾನ್ ಯೋಜನೆಯಡಿ ಫಲಾನುಭವಿಗಳಾಗಿರುವ ಪ್ರತಿಯೊಬ್ಬ) ಆಧಾರ್ ಸಂಖ್ಯೆಯನ್ನು ನಂತರ ಆಧಾರ್ ಸಂಖ್ಯೆಯೊಂದಿಗೆ ನೋಂದಣಿಯಾಗಿರುವ ಮೊಬೈಲ್ ಸಂಖ್ಯೆಯನ್ನು ದಾಖಲಿಸಬೇಕು. ನಂತರ ಮೊಬೈಲ್ ಗೆ OTP ಯು ರವಾನೆಯಾಗುತ್ತದೆ. ಹೀಗೆ ಸ್ವೀಕರಿಸಿದ OTP ಯನ್ನು ಪೋರ್ಟಲ್‌ನಲ್ಲಿ ದಾಖಲಿಸಿ “SUBMIT FOR AUTH”ಎಂಬ ಬಟನ್…

Read More

ಮಡಿಕೇರಿ ಮಾ.14 : ಜಿಲ್ಲಾಡಳಿತ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವೇದಿಕೆ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಕುಶಾಲನಗರ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಗ್ರಾಹಕರ ದಿನಾಚರಣೆಯು ‘ಶುದ್ಧ ಶಕ್ತಿ ಪರಿವರ್ತನೆ’ ಮಾ.15 ರಂದು ಬೆಳಗ್ಗೆ 11 ಗಂಟೆಗೆ ಕುಶಾಲನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ. ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ರೇಣುಕಾಂಭ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ಗೌರಮ್ಮಣ್ಣಿ, ಕುಶಾಲನಗರ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಅಧ್ಯಕ್ಷರಾದ ಎ.ಎ.ಚಂಗಪ್ಪ, ಕುಶಾಲನಗರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಕಾಳೇಗೌಡ, ವಕೀಲರಾದ ನಿರಂಜನ್ ಇತರರು ಪಾಲ್ಗೊಳ್ಳಲಿದ್ದಾರೆ.

Read More