ಸುಂಟಿಕೊಪ್ಪ,ಮಾ.10 : ಗ್ರಾ.ಪಂ ಗಳು ಜನರ ಆಶೋತ್ತರಗಳನ್ನು ಈಡೇರಿಸುವ ದೇವಾಲಯವಿದ್ದಂತೆ ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಹೇಳಿದರು. ಸುಂಟಿಕೊಪ್ಪ ಗ್ರಾ.ಪಂ ವತಿಯಿಂದ ನಿರ್ಮಿಸಲಾದ ನೂತನ ಗ್ರಾ.ಪಂ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು ಗ್ರಾ.ಪಂ ನಿಧಿಯಿಂದ 5 ಲಕ್ಷ 12 ಸಾವಿರ ರೂ, 4ನೇ ಹಣಕಾಸು ನಿಧಿಯಿಂದ 7 ಲಕ್ಷ ರೂ.15ನೇ ಹಣಕಾಸು ನಿಧಿಯಿಂದ 8 ಲಕ್ಷ ರೂ ಶಾಸಕರ ನಿಧಿಯಿಂದ ರೂ. 5 ಲಕ್ಷ, ಎಂಜಿಎಸ್ ಶಾಸಕರ ನಿಧಿಯಿಂದ ರೂ.16 ಲಕ್ಷ, ಜಿ.ಪಂ.ನಿಂದ ರೂ.10 ಲಕ್ಷ ವೆಚ್ಚದಲ್ಲಿ ಉತ್ತಮವಾದ ಗ್ರಾ.ಪಂ.ಕಟ್ಟಡ ನಿರ್ಮಾಣವಾಗಿದೆ. ತಾ.ಪಂ.ಅನುದಾನ 5 ಲಕ್ಷ ರೂ.ನಿಂದ ಡಿಜಿಟಲ್ ಗ್ರಂಥಾಲಯ, ಪ್ರತ್ಯೇಕ ನಿಧಿಯಿಂದ 5 ಲಕ್ಷ ರೂ.ವೆಚ್ಚದ ಶೌಚಾಲಯ ನಿರ್ಮಾವಾಗಿದೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ (275) ಗ್ರೇಡ್ 1 ಸುಂಟಿಕೊಪ್ಪ ಗ್ರಾ.ಪಂ ಗೆ ಹೈಟೆಕ್ ಮಾರುಕಟ್ಟೆ ನಿರ್ಮಾಣಕ್ಕೆ ನಬಾರ್ಡ್ ಯೋಜನೆಯಡಿ 3 ಕೋಟಿ ರೂ. ಮಂಜೂರಾತಿಯಾಗಿದ್ದು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದರು. ಬಿಜೆಪಿ ಸರಕಾರ ಎಲ್ಲಾ ಧರ್ಮ ಜಾತಿ, ಪಂಗಡ…
ಲೇಖಕ: admin
ಮಡಿಕೇರಿ ಮಾ.10 : ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಇತರೆ ಹಿಂದುಳಿದ ವರ್ಗಗಳ ಘಟಕದ ಕಾರ್ಯಕಾರಿಣಿ ಸಭೆ ಘಟಕದ ಜಿಲ್ಲಾಧ್ಯಕ್ಷ ಬಾನಂಡ ಪ್ರಥ್ಯು ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಎಲ್ಲರೂ ಒಗ್ಗಟ್ಟಾಗಿ ಪಕ್ಷವನ್ನು ಸಂಘಟಿಸುವಂತೆ ತಿಳಿಸಿದರು. ಕಾಂಗ್ರೆಸ್ ಪಕ್ಷದ ಸಾಧನೆಗಳಾದ ಉಳುವವನಿಗೆ ಭೂಮಿ, ಸೂರು ಇಲ್ಲದವನಿಗೆ ಸೂರು ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮನೆ ಮನೆಗೆ ತಲುಪಿಸಬೇಕು. ಎಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ದುಡಿದ ಕಾಂಗ್ರೆಸ್ ಪಕ್ಷವನ್ನು ಕೊಡಗಿನ ಎರಡೂ ಕ್ಷೇತ್ರಗಳಲ್ಲಿ ಗೆಲ್ಲಿಸಲು ಶ್ರಮವಹಿಸುವಂತೆ ಕರೆ ನೀಡಿದರು. ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಕೊಡಗಿನಲ್ಲಿರುವ 34 ಹಿಂದುಳಿದ ವರ್ಗ, 18 ಉಪ ಜಾತಿಗಳನ್ನು ಮುಖ್ಯವಾಹಿನಿಗೆ ತರಬೇಕು. ಪಕ್ಷದ ಸಾಧನೆ ಮತ್ತು ಕಾಂಗ್ರೆಸ್ ಆಡಳಿತ ನೀಡಿದ ಜನೋಪಯೋಗಿ ಕೊಡುಗೆಗಳನ್ನು ಈ ವರ್ಗಕ್ಕೆ ತಿಳಿಸುವಂತೆ ಹೇಳಿದರು. ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ತೆನ್ನಿರ ಮೈನಾ…
ಕುಶಾಲನಗರ, ಮಾ.10: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ಜನಜಾಗೃತಿ ವೇದಿಕೆಗಳ ಮೂಲಕ ಸಮಾಜದಲ್ಲಿ ಬೃಹತ್ ಬದಲಾವಣೆ ಕಂಡು ಬಂದಿದೆ ಎಂದು ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ಪಾಯಸ್ ತಿಳಿಸಿದ್ದಾರೆ. ಕುಶಾಲನಗರದಲ್ಲಿ ನಡೆದ ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆ ಸಭೆಯಲ್ಲಿ 2022-23 ನೇ ವರ್ಷದ ಕ್ರಿಯಾಯೋಜನೆಯ ಮತ್ತು ಅನುದಾನದ ಕುರಿತು ಮಾಹಿತಿ ನೀಡಿ ಮಾತನಾಡಿದರು. ಮಧ್ಯವರ್ಜನ ಶಿಬಿರಗಳ ಮೂಲಕ ಲಕ್ಷಾಂತರ ಸಂಖ್ಯೆಯ ಮದ್ಯ ವ್ಯಸನಿಗಳನ್ನು ಪಾನಮುಕ್ತರಾಗಿಸುವುದರೊಂದಿಗೆ ಶಾಶ್ವತ ಪರಿಹಾರ ಶಿಬಿರಗಳ ಮೂಲಕ ಲಭಿಸಿದೆ. ವಲಯಕ್ಕೊಂದು ನವ ಜೀವನ ಸಮಿತಿ ನಿರ್ಮಾಣ ಮಾಡುವುದರೊಂದಿಗೆ ಸ್ವಾಸ್ಥ್ಯ ಸಮಾಜ ನಿರ್ಮಾಣದ ಕಲ್ಪನೆ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ ಮೂಲಕ ಆಗಲಿದೆ ಎಂದರು. ಎಲ್ಲಾ ವಲಯ ಹಂತಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಜನರ ಮತ್ತು ಗ್ರಾಮಗಳ ಅಭಿವೃದ್ಧಿಗೆ ಕ್ರಿಯಾಯೋಜನೆ, ಶಿಬಿರಗಳು ನಡೆಯಲಿವೆ ಎಂದು ತಿಳಿಸಿದರು. ಜನಜಾಗೃತಿ ವೇದಿಕೆಯ ಕೊಡಗು ಜಿಲ್ಲಾ ವ್ಯಾಪ್ತಿಯ ಸಮಗ್ರ ವರದಿಯನ್ನು ಅರಕಲಗೂಡು ಪಿರಿಯಾಪಟ್ಟಣ, ಸೋಮವಾರಪೇಟೆ, ಮತ್ತಿತರ ವ್ಯಾಪ್ತಿಯ ಯೋಜನೆ ಅಧಿಕಾರಿಗಳು ನೀಡಿದರು.…
ಮಡಿಕೇರಿ ಮಾ.10 : ಮೂರು ವರ್ಷಗಳ ಹಿಂದೆ ಕೊಡಗಿನಲ್ಲಿ ಸಂಭವಿಸಿದ ಮಹಾಮಳೆ ಹಾನಿಯಿಂದ ಮನೆಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳಿಗೆ ನೆಲ್ಯಹುದಿಕೇರಿಯ ನಲ್ವತ್ತುಎಕರೆ ಗ್ರಾಮದಲ್ಲಿ ಪೀಪಲ್ಸ್ ಫೌಂಡೇಷನ್ ವತಿಯಿಂದ 25 ಮನೆಗಳನ್ನು ನಿರ್ಮಿಸಲಾಗಿದೆ. ಇದರ ಹಸ್ತಾಂತರ ಕಾರ್ಯಕ್ರಮ ಮಾ.13 ರಂದು ನಡೆಯಲಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್‍ನ ವಲಯ ಸಂಚಾಲಕರು ಹಾಗೂ ಯೋಜನೆಯ ವಲಯ ಮೇಲ್ವಿಚಾರಕರಾದ ಯು. ಅಬ್ದುಸ್ಸಲಾಮ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮಾಅತೆ ಇಸ್ಲಾಮಿ ಹಿಂದ್‍ನ ಅಧೀನ ಸಂಸ್ಥೆ ಪೀಪಲ್ಸ್ ಫೌಂಡೇಶನ್ ಮೂಲಕ ಸುಮಾರು 6 ಲಕ್ಷ ವೆಚ್ಚದ 25 ಮನೆಗಳ ‘ಪೀಪಲ್ಸ್ ವಿಲೇಜ್ ಕೊಡಗು’ವನ್ನು ಎಂ.ಕೆ. ಅಶ್ರಫ್ ಅವರ ಉಸ್ತುವಾರಿಯಲ್ಲಿ ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ. ಪ್ರತಿ ಮನೆ 500 ಚದರ ಅಡಿ ವಿಸ್ತೀರ್ಣದ್ದಾಗಿದ್ದು, 3.50 ಸೆಂಟ್ಸ್ ಜಾಗವನ್ನು ಹೊಂದಿದೆ. ಈ ಮನೆಗಳನ್ನು ಜಾತಿ ಮತ ಭೇದವಿಲ್ಲದೆ ಎಲ್ಲಾ ಸಮುದಾಯಕ್ಕೆ ಸೇರಿದ ಸಂತ್ರಸ್ತ ಕುಟುಂಬಗಳಿಗೆ ವಿತರಿಸಲಾಗುವುದೆಂದು ಹೇಳಿದರು. ನೆರೆ ಹಾವಳಿಯಿಂದ ಜಿಲ್ಲೆಯಲ್ಲಿ ಸಂಕಷ್ಟಗಳು ತಲೆದೋರಿ ಮನೆಗಳನ್ನು ಕಳೆದುಕೊಂಡು ಹಲವರು ನಿರಾಶ್ರಿತರಾದ…
ಮಡಿಕೇರಿ ಮಾ.10 : ಕೊಡವ ಹಾಕಿ ಅಕಾಡೆಮಿಯ 2022-23ನೇ ಸಾಲಿನ ಮಹಾಸಭೆಯು ಮಾ.13 ರಂದು ಅಕಾಡೆಮಿಯ ಅಧ್ಯಕ್ಷ ಪಾಂಡಂಡ ಬೋಪಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಸರ್ವ ಸದಸ್ಯರು ಸಭೆಗೆ ತಪ್ಪದೆ ಹಾಜರಾಗುವಂತೆ ಅಕಾಡೆಮಿ ಉಪಾಧ್ಯಕ್ಷ ಕುಕ್ಕೇರ ಜಯಾ ಚಿಣ್ಣಪ್ಪ ಮನವಿ ಮಾಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10.30 ಗಂಟೆಗೆ ವಿರಾಜಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ಸಭೆ ನಡೆಯಲಿದೆ. ಸಂತಾಪ ಸೂಚನೆ, ಕಳೆದ ಮಹಾಸಭೆಯ ವರದಿ ವಾಚನ, ಆಡಳಿತ ಮಂಡಳಿಯ ವರದಿ ವಾಚನ, ಜಮಾ ಖರ್ಚು, ಅಪ್ಪಚಟ್ಟೋಳಂಡ ಹಾಕಿ ಉತ್ಸವಕ್ಕೆ ಬೆಂಬಲ ಸೂಚಿಸುವುದು ಮತ್ತಿತರ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದರು. ದಿ.ಪಾಂಡಂಡ ಕುಟ್ಟಪ್ಪ (ಕುಟ್ಟಣಿ) ಅವರು 1997ರಲ್ಲಿ ಅಕಾಡೆಮಿಯನ್ನು ಪ್ರಾರಂಭಿಸಿದ್ದು, ಪ್ರಸ್ತುತ 406 ಕುಟುಂಬಗಳು ಸದಸ್ಯತ್ವ ಪಡೆದುಕೊಂಡಿವೆ. ಹೆಚ್ಚಿನ ಮಾಹಿತಿಗೆ ಗೌರವ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್ 9110808009 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು. ::: ಹಾಕಿ ಉತ್ಸವ ::: 23ನೇ ವರ್ಷದ ಕೊಡವ ಕುಟುಂಬಗಳ ನಡುವಣ ಪ್ರತಿಷ್ಠಿತ…
ಮಡಿಕೇರಿ ಮಾ.10 : ಜನ್ಮ ದಿನಾಂಕದ ಕುರಿತು ತಾವು ಸುಳ್ಳು ಮಾಹಿತಿ ನೀಡಿರುವುದಾಗಿ ವ್ಯಕ್ತಿಯೊಬ್ಬರು ತಮ್ಮ ವಿರುದ್ಧ ನೀಡಿರುವ ದೂರು ಅರ್ಥಹೀನವಾಗಿದೆ. ಪ್ರತಿ ಚುನಾವಣೆ ಸಂದರ್ಭ ವ್ಯವಸ್ಥಿತ ಗ್ಯಾಂಗ್ ಷಡ್ಯಂತ್ರ ನಡೆಸುತ್ತಿದ್ದು, ಇದಕ್ಕೆಲ್ಲ ನಾನು ಜಗ್ಗಲ್ಲ ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನನ್ನ ತಂದೆ ಹೆಬ್ಬೆಟ್ಟು, ಅವರು ಹೇಳಿದ ಜನ್ಮ ದಿನಾಂಕವನ್ನೇ ನಾನು ಅನುಸರಿಸುತ್ತಿದ್ದೇನೆ. ಚುನಾವಣಾ ಆಯೋಗ ನಮ್ಮ ವಯಸ್ಸನ್ನು ಕೇಳುತ್ತದೆ ಹೊರತು ಹುಟ್ಟಿದ ಇಸವಿಯನ್ನು ಕೇಳುವುದಿಲ್ಲ. ಮಾಹಿತಿ ಸಲ್ಲಿಸುವ ಸಂದರ್ಭ ಗಡಿಬಿಡಿಯಲ್ಲಿ ಸ್ವಲ್ಪ ಹೆಚ್ಚು, ಕಮ್ಮಿ ಆಗಿರಬಹುದು. ಇದು ದೊಡ್ಡ ಅಪರಾಧವೇನಲ್ಲ ಎಂದು ಸ್ಪಷ್ಟಪಡಿಸಿದರು. ಪ್ರತಿ ಚುನಾವಣೆ ಬಂದಾಗಲೂ ಗ್ಯಾಂಗ್ ಒಂದು ನನ್ನ ವಿರುದ್ಧ ಷಡ್ಯಂತ್ರ ರೂಪಿಸುತ್ತಲೇ ಬರುತ್ತಿದೆ. ಕಳೆದ ಚುನಾವಣೆಯಲ್ಲಿ ನನ್ನ ಮನೆ ಅರಣ್ಯ ಭಾಗದಲ್ಲಿದೆ ಎಂದು ಆರೋಪಿಸಿ ಕೆಲವರು ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತು, ಇದೀಗ ನನ್ನ ಜನ್ಮ ದಿನಾಂಕದ ಬಗ್ಗೆ ತಕರಾರು ತೆಗೆದಿದ್ದಾರೆ, ಇದಕ್ಕೆಲ್ಲ…
ಮಡಿಕೇರಿ ಮಾ.10 : ( ವಿಶೇಷ ವರದಿ : ಬೊಳ್ಳಜಿರ ಬಿ. ಅಯ್ಯಪ್ಪ ) ಕೊಡವ ಕೌಟುಂಬಿಕ ಹಾಕಿ ಉತ್ಸವ ಇದು ಪತ್ರಕರ್ತ ಬಾಚರಣಿಯಂಡ ಅನು ಕಾರ್ಯಪ್ಪ ಬರೆದಿರುವ ಪುಸ್ತಕ. ದೇಶದಲ್ಲಿಯೇ ಹೆಸರು ಮಾಡಿರುವ ಕೊಡವ ಕೌಟುಂಬಿಕ ಹಾಕಿ ಹಬ್ಬ ಇದೀಗ 23 ನೇ ವರ್ಷಕ್ಕೆ ಕಾಲಿಟ್ಟಿದೆ. 1997 ರಲ್ಲಿ ಪಾಂಡಂಡ ಕುಟ್ಟಪ್ಪ ಅವರು ಆರಂಭ ಮಾಡಿದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಹಬ್ಬದ ರೀತಿಯಲ್ಲಿ ನಡೆಯುತ್ತಿರುವುದು ಎಲ್ಲಾರಿಗೂ ತಿಳಿದಿದೆ. ಕಳೆದ 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿರುವ ಉತ್ತಮ ಬರಹಗಾರರು ಆಗಿರುವ ಬಾಚರಣಿಯಂಡ ಅನುಕಾರ್ಯಪ್ಪ ಕೊಡವ ಹಾಕಿ ಹಬ್ಬವನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಈ ಪುಸ್ತಕದಲ್ಲಿ 1997 ರಿಂದ ಇಲ್ಲಿಯವರೆಗೆ ನಡೆದ ಎಲ್ಲಾ ಹಾಕಿ ಪಂದ್ಯಾವಳಿಯ ಬಗ್ಗೆ ಮಾಹಿತಿ ಅಡಕವಾಗಿದೆ. ಒಟ್ಟು 22 ವರ್ಷಗಳು ನಡೆದ ಹಾಕಿ ಪಂದ್ಯಾವಳಿಯ ಮಾಹಿತಿ , ಪಂದ್ಯಾವಳಿ ನಡೆಸಿದ ಕುಟುಂಬದ ಹಿನ್ನಲೆ, ಅದಕ್ಕೆ ಸಂಬಂಧಿಸಿದ ಫೋಟೊಗಳು, ಪಂದ್ಯಾವಳಿ ನಡೆಸಿದ ಕುಟುಂಬದ ಐನ್ ಮನೆ, ಕೈಮಡ…
ಮಡಿಕೇರಿ ಮಾ.10 : ಪ್ರತಿ ಚುನಾವಣೆ ಸಂದರ್ಭ ಚುನಾವಣಾ ಆಯೋಗಕ್ಕೆ ತಮ್ಮ ಜನ್ಮ ದಿನಾಂಕದ ಕುರಿತು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರು ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ಪಿ.ಬಿ.ತಿಮ್ಮಯ್ಯ ಎಂಬುವವರು ವಿರಾಜಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಿಮ್ಮಯ್ಯ ಅವರು ಶಾಸಕ ಕೆ.ಜಿ.ಬೋಪಯ್ಯ ಅವರು ತಮ್ಮ ಜನ್ಮ ದಿನಾಂಕದ ವಿಚಾರದಲ್ಲಿ ಸುಳ್ಳು ಮಾಹಿತಿ ನೀಡುತ್ತಲೇ ಬಂದಿದ್ದಾರೆ ಎಂದು ಆರೋಪಿಸಿದರು. ಚುನಾವಣಾ ಆಯೋಗ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ವಿರಾಜಪೇಟೆ ಪೊಲೀಸ್ ಠಾಣೆಗೆ ಶಾಸಕರ ವಿರುದ್ಧ ದೂರು ನೀಡಲಾಗಿದೆ. ಸಾಮಾಜಿಕ ಕಳಕಳಿಯ ಚಿಂತನೆಯಡಿ ದೂರು ನೀಡಿದ್ದು, ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶವಿಲ್ಲವೆಂದು ಸ್ಪಷ್ಟಪಡಿಸಿದರು. 1979ರಲ್ಲಿ ಬಾರ್ ಕೌನ್ಸಿಲ್ ನಲ್ಲಿ ತಮ್ಮ ಹುಟ್ಟಿದ ದಿನಾಂಕವನ್ನು 1951 ಅಕ್ಟೋಬರ್ 17 ಎಂದು ದಾಖಲಿಸಿರುತ್ತಾರೆ. 2004 ನೇ ಸಾಲಿನ ವಿಧಾನಸಭಾ ಚುನಾವಣೆ ಸಮಯದಲ್ಲಿ ಅವರ ವಯಸ್ಸು ಅವರ ಜನ್ಮ ದಿನಾಂಕದ ಅನುಗುಣವಾಗಿ 53 ವರ್ಷ ಆಗಿರುತ್ತದೆ. ಆದರೆ…
ಕುಶಾಲನಗರ, ಮಾ.10: ನದಿ, ಪ್ರಕೃತಿ ಆರಾಧನೆ ಮೂಲಕ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಮಾಡುವ ಜವಾಬ್ದಾರಿ ನಿಭಾಯಿಸಬೇಕಾಗಿದೆ ಎಂದು ಕುಶಾಲನಗರ ಗಣಪತಿ ದೇವಾಲಯದ ಪ್ರಧಾನ ಅರ್ಚಕ ಆರ್.ಕೆ. ನಾಗೇಂದ್ರ ಬಾಬು ತಿಳಿಸಿದ್ದಾರೆ. ಕುಶಾಲನಗರ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ಅರ್ಚಕರ ಸಂಘದ ಸಹಯೋಗದೊಂದಿಗೆ ನಡೆದ 142ನೇ ಕಾವೇರಿ ಮಹಾಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಜಲಮೂಲ, ನದಿ ಮೂಲಗಳನ್ನು ಕಲುಷಿತಗೊಳಿಸಬಾರದು . ಪ್ರತಿಯೊಬ್ಬರು ನದಿಯ ಸ್ವಚ್ಛತೆ ವಿಷಯದಲ್ಲಿ ನಿತ್ಯ ಜಾಗೃತರಾಗಬೇಕಾಗಿದೆ ಎಂದರು. ಕಳೆದ 12 ವರ್ಷಗಳಿಂದ ನಿರಂತರವಾಗಿ ನದಿ ಸ್ವಚ್ಛತೆಯ ಬಗ್ಗೆ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುವ ಬಳಗದೊಂದಿಗೆ ಎಲ್ಲರೂ ಕೈಜೋಡಿಸುವಂತೆ ಕರೆ ನೀಡಿದರು. ಶಿವಮೊಗ್ಗದ ಖ್ಯಾತ ಪಾರಂಪರಿಕ ನಾಟಿ ವೈದ್ಯರಾದ ಸುಮನ ಮಳಲಗದ್ದೆ ಮಾತನಾಡಿ, ದೈವಿ ಸ್ವರೂಪದ ನದಿ ತೊರೆಗಳನ್ನು ತಾಯಿಯಂತೆ ನೋಡಿಕೊಂಡಲ್ಲಿ ಅದು ನಮ್ಮನ್ನು ಕಾಪಾಡುತ್ತದೆ ಎಂದರು. ಅರ್ಚಕ ಕೃಷ್ಣಮೂರ್ತಿ ಭಟ್ ಕುಂಕುಮಾರ್ಚನೆ, ಅಷ್ಟೋತ್ತರ ನಂತರ ನದಿಗೆ ಮಹಾ ಆರತಿ ಬೆಳಗಿದರು. ಈ ಸಂದರ್ಭ ಕೊಡಗು ಜಿಲ್ಲಾ ಅರ್ಚಕರ ಮತ್ತು ಪುರೋಹಿತರ ಸಂಘದ…
ಮಡಿಕೇರಿ ಮಾ.10 : ಮಡಿಕೇರಿ ಭಗವತಿ ನಗರದ ನಂ. 2769ನೇ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡದ ನಿರ್ಮಾಣಕ್ಕೆ ಶಾಸಕ ಕೆ.ಜಿ.ಬೋಪಯ್ಯ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭ ಸಂಘದ ಅಧ್ಯಕ್ಷರು, ಸದಸ್ಯರು ಹಾಜರಿದ್ದರು.






