ಲೇಖಕ: admin

ಮಡಿಕೇರಿ ಮಾ.9 : ತೋಟಗಾರಿಕೆ ಇಲಾಖೆ ಅಧೀನದ ತೋಟಗಾರಿಕೆ ತರಬೇತಿ ಕೇಂದ್ರಗಳಲ್ಲಿ ರೈತ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿಯು 2023 ರ ಮೇ, 2 ರಿಂದ 2024 ರ ಫೆಬ್ರವರಿ, 29 ರವರೆಗೆ ಹಾಸನ ಜಿಲ್ಲೆಯ ಸೋಮನಹಳ್ಳಿ ಕಾವಲ್, ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಭರ್ತಿ ಮಾಡಿದ ಅರ್ಜಿಯನ್ನು 2023ರ ಏಪ್ರಿಲ್, 12 ರಂದು ಸಂಜೆ 5 ಗಂಟೆಯೊಳಗೆ ಸಲ್ಲಿಸಬೇಕು. ಕಚೇರಿಯಿಂದ ಅರ್ಜಿ ಪಡೆಯಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಈ ಕಚೇರಿಯನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಅಥವಾ ದೂರವಾಣಿ ಸಂ:8310687707, ಅಂತರ್ಜಾಲ www.horticulture.kar.nic.in ಇಲ್ಲಿ ಪಡೆಯಬಹುದಾಗಿದೆ. ಮೂಲ ಅಗತ್ಯ ದಾಖಲಾತಿಗಳೊಡನೆ (ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ, ಛಾಪಾಕಾಗದ, ತಂದೆ/ ತಾಯಿ/ ಪೋಷಕರ ಹೆಸರಿನಲ್ಲಿರುವ ಜಮೀನಿನ ಆರ್‍ಟಿಸಿ, ಜಾತಿ ಪ್ರಮಾಣ ಪತ್ರ, ಫೋಟೋ, ತಂದೆ/ ತಾಯಿಯವರ ಒಪ್ಪಿಗೆ ಪತ್ರ) ಅರ್ಹ ಅಭ್ಯರ್ಥಿಗಳು ನಿಗಧಿತ ಸಮಯದೊಳಗೆ ಅರ್ಜಿ ಸಲ್ಲಿಸಬೇಕು ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಪ್ರಮೋದ್ ಅವರು ತಿಳಿಸಿದ್ದಾರೆ.

Read More

ಮಡಿಕೇರಿ ಮಾ.9 : ಪ್ರಸಕ್ತ (2022-23) ಸಾಲಿಗೆ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1 ಅಲೆಮಾರಿ/ ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುತ್ತಿರುವ “ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ, ಶುಲ್ಕ ವಿನಾಯಿತಿ, ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ ಸೌಲಭ್ಯಕ್ಕಾಗಿ” ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್, 15 ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎನ್.ಮಂಜುನಾಥ್ ಅವರು ತಿಳಿಸಿದ್ದಾರೆ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾದ ವೆಬ್‍ಸೈಟ್‍ವಿಳಾಸ: https://ssp.postmatric.karnataka.gov.in ಕಾರ್ಯಕ್ರಮಗಳ ವಿವರ, ಸೌಲಭ್ಯ ಪಡೆಯಲು ಇರಬೇಕಾದ ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳು ಹಾಗೂ ಕಾರ್ಯಕ್ರಮಗಳ ಸರ್ಕಾರಿ ಆದೇಶಗಳಿಗಾಗಿ ಇಲಾಖಾ ವೆಬ್‍ಸೈಟ್ https://bcwd.karnataka.gov.in ನ್ನು ನೋಡಬಹುದು. ಹಾಗೂ ಇಲಾಖಾ ಸಹಾಯವಾಣಿ ಸಂಖ್ಯೆ: 8050770005, ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದ ಸಹಾಯವಾಣಿ ಇಮೇಲ್: postmatrichelp@karnataka.gov.in,  ದೂರವಾಣಿ ಸಂಖ್ಯೆ:080-35254757 ನ್ನು ಸಂಪರ್ಕಿಸಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ…

Read More

ಮಡಿಕೇರಿ ಮಾ.9 : ರಾಷ್ಟ್ರೀಯ ಜಂತುಹುಳು ನಿಯಂತ್ರಣ ಕಾರ್ಯಕ್ರಮವು ಜಿಲ್ಲೆಯಲ್ಲಿ ಮಾ.13 ರಂದು ನಡೆಯಲಿದ್ದು, 1 ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಜಂತುಹುಳು ನಿವಾರಣೆಯ ಆಲ್‍ಬೆಂಡ್‍ಜೋಲ್ ಮಾತ್ರೆ ವಿತರಿಸಬೇಕು. ಅರ್ಹ ಮಕ್ಕಳು ಇದರಿಂದ ಹೊರಗುಳಿಯಬಾರದು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಅವರು ಸರ್ಕಾರದ ನಿರ್ದೇಶನದಂತೆ ಕಾರ್ಯಕ್ರಮ ಅನುಷ್ಠಾನಕ್ಕೆ ಕ್ರಮವಹಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಅವರು ಮಾಹಿತಿ ನೀಡಿ ದೇಶದಾದ್ಯಂತ ಮಾರ್ಚ್, 13 ರಂದು “ರಾಷ್ಟ್ರೀಯ ಜಂತು ಹುಳು ನಿವಾರಣಾ ಕಾರ್ಯಕ್ರಮ”(ಎನ್‍ಡಿಡಿ) ಜರುಗಲಿದೆ. ಹಾಗೆಯೇ ಮಾರ್ಚ್, 14 ರಿಂದ 25 ರವರೆಗೆ ಮೋಪ್ ಅಪ್ ಡೇ ಕಾರ್ಯಕ್ರಮ ನಡೆಯುತ್ತಿದ್ದು, 1-19 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಆಲ್‍ಬೆಂಡಜೋಲ್-400 ಎಂ.ಜಿ ಮಾತ್ರೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು. ರಾಷ್ಟ್ರೀಯ ಜಂತು…

Read More

ಮಡಿಕೇರಿ ಮಾ.9 ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ತಿಮ್ಮಯ್ಯ ಅವರ ಮೊಮ್ಮಗಳು ಅಮೃತಾ ಭೇಟಿ ನೀಡಿ ಸ್ಮಾರಕ ಭವನ ವೀಕ್ಷಿಸಿದರು. ಇದೇ ಮೊದಲ ಬಾರಿಗೆ ತಿಮ್ಮಯ್ಯ ಸ್ಮಾರಕ ಭವನಕ್ಕೆ ಭೇಟಿ ನೀಡಿದ ಅಮೖತಾ ತನ್ನ ಅಜ್ಜ ತಿಮ್ಮಯ್ಯ ಅವರ ಸ್ಮರಣಾರ್ಥ ಸರ್ಕಾರ ರೂಪಿಸಿದ ಸಂಗ್ರಹಾಲಯ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಮ್ಯೂಸಿಯಂ ವ್ಯವಸ್ಥಾಪಕ ಗೌಡಂಡ ಸುಬೇದಾರ್ ಮೇಜರ್ ತಿಮ್ಮಯ್ಯ ಇಲ್ಲಿನ ಸಂಗ್ರಹದ ಬಗ್ಗೆ ಮಾಹಿತಿ ನೀಡಿದರು.  ಅಮೃತಾ ಜನರಲ್ ತಿಮ್ಮಯ್ಯ ಪುತ್ರಿ ಮಿರೆಲ್ – ಮೇಜರ್ ಜನರಲ್ ಕೊಂಗೇಟಿರ ಚಂಗಪ್ಪ ಅವರ  ಪುತ್ರಿಯಾಗಿದ್ದು ಉತ್ತರಾಂಚಲ್‍ನ ಅಲ್ಮೋರಾ ಎಂಬಲ್ಲಿ ನೆಲೆಸಿದ್ದಾರೆ.

Read More

ಮಡಿಕೇರಿ ಮಾ.9 : ವಿದ್ಯುನ್ಮಾನ ಮತಯಂತ್ರ(ಇವಿಎಂ) ಹಾಗೂ ವಿವಿಪ್ಯಾಟ್(ಮತದಾನ ಖಾತ್ರಿ ಯಂತ್ರ) ಪ್ರಾತ್ಯಕ್ಷಿಕೆಯು ನಗರದ ಜಿಲ್ಲಾ ನ್ಯಾಯಾಲಯ ಸಭಾಂಗಣದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಎಂ.ಭೃಂಗೇಶ್ ಅವರ ಸಮ್ಮುಖದಲ್ಲಿ ನಡೆಯಿತು. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿ ಜಿಲ್ಲೆಯಲ್ಲಿ ವಿದ್ಯುನ್ಮಾನ ಮತಯಂತ್ರ ಮತ್ತು ವಿವಿಪ್ಯಾಟ್ ಸಂಬಂಧಿಸಿದಂತೆ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯ 542 ಮತಗಟ್ಟೆ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಭಾರತ ಚುನಾವಣಾ ಆಯೋಗವು ಇವಿಎಂ/ ವಿವಿಪ್ಯಾಟ್‍ಗಳ ಕುರಿತು ಜಾಗೃತಿ ಮತ್ತು ಪ್ರಾತ್ಯಕ್ಷಿಕೆ ನೀಡುವುದರ ಮೂಲಕ ಮತದಾರರಲ್ಲಿ/ ನಾಗರಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದರು. ಇವಿಎಂ/ ವಿವಿಪ್ಯಾಟ್‍ಗಳ ಕುರಿತು ಜಾಗೃತಿ ಮತ್ತು ಪ್ರಾತ್ಯಕ್ಷಿಕೆಗೆ ಸಂಬಂಧಿಸಿದಂತೆ, ಡಮ್ಮಿ ಬ್ಯಾಲೆಟ್ ಪೇಪರ್ ಬಳಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ವಿವರಿಸಿದರು. ಇವಿಎಂ ಡೆಮೊಂಸ್ಟ್ರೇಷನ್ ಕೇಂದ್ರ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ, 208-ಮಡಿಕೇರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಯಾದ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಮತ್ತು 209-ವಿರಾಜಪೇಟೆ ವಿಧಾನಸಭಾ…

Read More

ಸುಂಟಿಕೊಪ್ಪ,ಮಾ.9 : ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸೆಸ್ಟೋಬಾಲ್ ಟೂರ್ನಿಯಲ್ಲಿ ಭಾರತೀಯ ಬಾಲಕರ ತಂಡವು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರೆ, ಬಾಲಕಿಯರ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಮಾ.3 ರಿಂದ 5 ರವರೆಗೆ ಮಹಾರಾಷ್ಟ್ರದ ಜವಾಹರ್ ಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆಡ ಅಂತರಾಷ್ಟ್ರೀಯ ಮಟ್ಟದ ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ನಡೆದ ಮೂರು ಲೀಗ್ ಪಂದ್ಯದಲ್ಲಿ ಉತ್ತಮವಾಗಿ ಸೆಣಸಾಗಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಸುಂಟಿಕೊಪ್ಪದ ಶಾಹಿಲ್ ಉಸ್ಮಾನ್ ನಾಯಕತ್ವದ ಭಾರತದ ಬಾಲಕರ ತಂಡವು ಫೈನಲ್ ಪಂದ್ಯದಲ್ಲಿ 38-8 ಅಂಕಗಳ ಭರ್ಜರಿ ಜಯವನ್ನು ಸಾಧಿಸಿತು. ಅನ್ವಿತ ನಾಯಕತ್ವದ ಭಾರತೀಯ ಬಾಲಕಿಯರ ತಂಡವು ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಉತ್ತಮ ಪೈಪೋಟಿ ನೀಡಿದರೂ ಕೊನೆಯ ಹಂತದಲ್ಲಿ 18-20 ಅಂಕಗಳಿಂದ ಸೋಲನ್ನು ಒಪ್ಪಿಕೊಂಡಿತು. ಉತ್ತಮ ಶೂಟರ್ ಪ್ರಶಸ್ತಿಯನ್ನು ಭಾರತ ತಂಡದ ನಾಯಕ ಸುಂಟಿಕೊಪ್ಪದ ಶಾಹೀಲ್ ಉಸ್ಮಾನ್ ಪಡೆದುಕೊಂಡರು. ಸುಂಟಿಕೊಪ್ಪದ ಶಾಹಿಲ್ ಉಸ್ಮಾನ್ ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಬಿಬಿಎ ವಿದ್ಯಾರ್ಥಿಯಾಗಿದ್ದಾನೆ.

Read More

ವಿರಾಜಪೇಟೆ ಮಾ.9 : ಬಲಿಜ ಬಾಂಧವರಿಂದ ಕೈವಾರ ತಾತಯ್ಯ ನವರ 297ನೇ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿರಾಜಪೇಟೆಯ ವಿದ್ಯಾ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನಾಂಗ ಬಾಂಧವರು ಕೈವಾರ ತಾತಯ್ಯನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಜನಾಂಗದ ಮುಖಂಡ ಯೋಗೇಶ್ ನಾಯ್ಡು, ಜಿಲ್ಲೆಯಲ್ಲಿ ಅನೇಕ ತಲೆಮಾರಿನಿಂದ ಬಲಿಜ ಜನಾಂಗದರವರು ನೆಲೆಸಿದ್ದಾರೆ. ಜಿಲ್ಲೆಯ ಯಾವುದಾದರೊಂದು ಭಾಗದಲ್ಲಿ ಶ್ರೀ ಕೈವಾರ ತಾತಯ್ಯನವರ ಪ್ರತಿಮೆ ನಿರ್ಮಾಣ ಮಾಡಬೇಕು. ಅಲ್ಲದೆ ವಿರಾಜಪೇಟೆಯ ಯಾವುದಾದರೂ ಬಡಾವಣೆಗೆ ತಾತಯ್ಯ ಅವರ ಹೆಸರನ್ನು ಇಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡುವುದಾಗಿ ಹೇಳಿದರು. ಜನಾಂಗದ ಪ್ರಮುಖರಾದ ಅಪ್ಪಣ್ಣ, ಗಣೇಶ್, ರಂಜನ್, ಚಂದ್ರ, ಮಿತುನ್, ಮೂರ್ತಿ, ಶ್ರೀನಿವಾಸ್, ವಿದ್ಯ, ಲಲಿತ, ಪೂರ್ಣಿಮಾ ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡಿದ್ದರು.

Read More

ಮಡಿಕೇರಿ ಮಾ.9 : ಮೈತಾಡಿ ಶ್ರೀ ಬೊಳ್ಳಿಬಿಲ್ಲಯ್ಯಪ್ಪ ದೇವರ ಉತ್ಸವವು ಮಾ.14, 15 ಮತ್ತು 16 ರಂದು ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದೇವಾಲಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳ ಕುರಿತು ಮಾಹಿತಿ ನೀಡಿದರು. ಮಾ.14 ರಂದು ಪಟ್ಟಣಿ, ಅಂದಿ ಬೊಳಕು ತೂಚಂಬಲಿ, ಕ್ಷೇತ್ರಫಲ ಪೂಜೆ ನಡೆಯಲಿದ್ದು, ರಾತ್ರಿ 8 ಗಂಟೆಗೆ ಮಹಾಪೂಜೆ ಜರುಗಲಿದೆ. ಮಾ.15 ರಂದು ಪ್ರಾತಕಾಲ 5 ಗಂಟೆಗೆ ಇರುಬೆಳಕು, ಪೂರ್ವಹ್ನ 9.30 ಗಂಟೆಗೆ ಭಕ್ತಾಧಿಗಳಿಂದ ಪೂಜೆ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಅಪರಾಹ್ನ 2.30 ಗಂಟೆಗೆ ಎತ್ತು ಪೊರಾಟ, ಬೊಳಕಾಟು, ದೇವರ ಮೆರವಣಿಗೆ, ಅಪರಾಹ್ನ 3.30 ಗಂಟೆಗೆ ದೇವರ ಬನಕ್ಕೆ ಹೋಗುವುದು, ದೇವರ ನೃತ್ಯ, ಸುಬ್ರಮಣ್ಯ ದೇವರ ಗುಡಿಯಲ್ಲಿ ಪೂಜೆ, ನಂತರ ವಸಂತ ಪೂಜೆ ಜರುಗಲಿದೆ. ಸಂಜೆ 7 ಗಂಟೆಗೆ ಭಕ್ತಾಧಿಗಳಿಂದ ಪೂಜೆ ಜರುಗಲಿದ್ದು, ರಾತ್ರಿ 8 ಗಂಟೆಗೆ…

Read More

ವಿರಾಜಪೇಟೆ ಮಾ.9 :  ಪುರಸಭೆ ವಿರೋಧ ಪಕ್ಷದ ಸದಸ್ಯರಿಗೆ ಅಭಿವೃದ್ದಿ ಕಾರ್ಯ ಬೇಕಾಗಿಲ್ಲ. ಕಾರ್ಯಸೂಚಿಯಲ್ಲಿ ಇಲ್ಲದ ವಿಷಯಗಳನ್ನು ಪ್ರಸ್ತಾಪಿಸಿ ಸಭೆಗೆ ಅಡ್ಡಿ ಪಡಿಸುವುದು ಇವರ ನಿತ್ಯ ಕಾಯಕವಾಗಿದೆ ಎಂದು ಬಿಜೆಪಿ ಸದಸ್ಯ ಸುಭಾಷ್ ಮಹಾದೇವ್ ಆರೋಪಿಸಿದರು. ವಿರೋಧ ಪಕ್ಷದ ಸದಸ್ಯರ ಹದ್ದು ಮೀರಿದ ವರ್ತನೆಯನ್ನು ತಡೆಯಲು ಸಾಧ್ಯವಿಲ್ಲದೆ ಪುರಸಭೆಯ ಬಜೆಟ್ ಪೂರ್ವಬಾವಿ ಸಭೆಯನ್ನು ಅಧ್ಯಕ್ಷರು ಮುಂದೂಡಿದ ಬಳಿಕ ಮಾತನಾಡಿ, ಕಳೆದ ಸಭೆಯಲ್ಲಿ ನಿರ್ಣಯ ಪುಸ್ತಕದಲ್ಲಿ ಸಹಿ ಮಾಡಿ ಕಾರ್ಯಸೂಚಿಯಲ್ಲಿ ಇಲ್ಲದ ವಿಷಯವನ್ನು ಪ್ರಸ್ತಾಪಿಸಿ ಸಭೆಯಿಂದ ಹೊರನಡೆದರು.  ಈ ಬಾರಿ ಕೂಡ ಅದನ್ನೆ ಮಾಡಿದ್ದಾರೆ. ಅಂಗಡಿ ಮಾಲೀಕರು ತಮ್ಮ ಅಂಗಡಿಯ ಮುಂದೆ ದಿನಗಟ್ಟಲೆ ವಾಹನವನ್ನು ತಂದು ನಿಲ್ಲಿಸುತ್ತಿದ್ದಾರೆ. ಗ್ರಾಮೀಣ ಭಾಗದಿಂದ ಬರುವ ಸಾರ್ವಜನಿಕರು ಪಟ್ಟಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಪರಿತಪಿಸುತ್ತಿದ್ದಾರೆ. ಪಟ್ಟಣದಲ್ಲಿ ಪೇ ಪಾರ್ಕಿಂಕ್ ಮಾಡಿದರೆ ಎಲ್ಲಾ ಸಮಸ್ಯೆಗಳು ಇತ್ಯರ್ಥವಾಗುತ್ತದೆ. ಪುರಸಭೆಗೂ ಆದಾಯ ಬರುತ್ತದೆ. ಇದ್ಯಾವುದಕ್ಕೆ ಅವಕಾಶ ಕೊಡದ ವಿರೋಧ ಪಕ್ಷದವರು ಪ್ರತಿ ಸಭೆಯಲ್ಲಿ ಗದ್ದಲ ಏರ್ಪಡಿಸಿ ಅಭಿವೃದ್ಧಿ ಕಾರ್ಯಗಳಿಗೆ ಕಂಟಕಪ್ರಾಯರಾಗುತ್ತಿದ್ದಾರೆ ಎಂದು…

Read More

ಮಡಿಕೇರಿ ಮಾ.9 : ಕುಂಜಿಲದಲ್ಲಿ ಅಂತಿಮ ವಿಶ್ರಾಂತಿ ಪಡೆಯುತ್ತಿರುವ ಪಯ್‍ನರಿ ವಲಿಯುಲ್ಲಾಹ್ ಅವರ ವಾರ್ಷಿಕ ಉರೂಸ್ ಸಮಾರಂಭವು ಮಾ.10 ರಿಂದ 16ರ ವರೆಗೆ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಯ್‍ನರಿ ಸುನ್ನೀ ಮುಸ್ಲಿಂ ಜಮಾಅತ್ ಮಾಜಿ ಕಾರ್ಯದರ್ಶಿ ಪಿ.ಎಂ.ಅಜೀಜ್ ಮಾಸ್ಟರ್, ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಮಾ.10 ರಂದು ಮಧ್ಯಾಹ್ನ 2 ಗಂಟೆಗೆ ಪಯ್‍ನರಿ ಸುನ್ನಿ ಮುಸ್ಲಿ ಜಮಾಅತ್ ನ ಅಧ್ಯಕ್ಷ ಶೌಕತ್ ಆಲಿ ಉರೂಸ್ ಧ್ವಜಾರೋಹಣ ನೆರವೇರಿಸಲಿದ್ದು, ಪಯ್‍ನರಿ ಜಮಾಅತ್ ಖತೀಬರಾದ ನಿಝಾರ್ ಅಹ್ಸನಿ ಮಖಾಂ ಅಲಂಕಾರ ನೇತೃತ್ವ ವಹಿಸಲಿದ್ದಾರೆ. ರಾತ್ರಿ 8.30 ಗಂಟೆಗೆ ಅಂತರಾಷ್ಟ್ರೀಯ ವಾಗ್ಮಿ ಡಾ.ಫಾರೂಖ್ ನಈಮಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮಾ.11 ರಂದು ರಾತ್ರಿ 8.30 ಗಂಟೆಗೆ ಆಶಿಖ್ ಧಾರಿಮಿ ಉಪನ್ಯಾಸ ನೀಡಲಿದ್ದು, ಮಾ.12 ರಂದು ರಾತ್ರಿ 8 ಗಂಟೆಗೆ ಸ್ವಾದಿಖ್ ಫಾಳಿಲಿ ಮತ್ತು ಸಂಗಡಿಗರಿಂದ ಬೃಹತ್ ಬುರ್ದಾ ಮಸ್ಲಿಸ್ ನಡೆಯಲಿದೆ. ಮಾ.13 ರಂದು ಮಧ್ಯಾಹ್ನ 1.15 ಗಂಟೆಗೆ ಸಯ್ಯಿದ್ ಶಿಹಾಬುದ್ಧೀನ್ ಅಲ್ ಐದರೂಸಿ…

Read More