ಕುಶಾಲನಗರ, ಮಾ.10: ನದಿ, ಪ್ರಕೃತಿ ಆರಾಧನೆ ಮೂಲಕ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಮಾಡುವ ಜವಾಬ್ದಾರಿ ನಿಭಾಯಿಸಬೇಕಾಗಿದೆ ಎಂದು ಕುಶಾಲನಗರ ಗಣಪತಿ ದೇವಾಲಯದ ಪ್ರಧಾನ ಅರ್ಚಕ ಆರ್.ಕೆ. ನಾಗೇಂದ್ರ ಬಾಬು ತಿಳಿಸಿದ್ದಾರೆ. ಕುಶಾಲನಗರ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ಅರ್ಚಕರ ಸಂಘದ ಸಹಯೋಗದೊಂದಿಗೆ ನಡೆದ 142ನೇ ಕಾವೇರಿ ಮಹಾಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಜಲಮೂಲ, ನದಿ ಮೂಲಗಳನ್ನು ಕಲುಷಿತಗೊಳಿಸಬಾರದು . ಪ್ರತಿಯೊಬ್ಬರು ನದಿಯ ಸ್ವಚ್ಛತೆ ವಿಷಯದಲ್ಲಿ ನಿತ್ಯ ಜಾಗೃತರಾಗಬೇಕಾಗಿದೆ ಎಂದರು. ಕಳೆದ 12 ವರ್ಷಗಳಿಂದ ನಿರಂತರವಾಗಿ ನದಿ ಸ್ವಚ್ಛತೆಯ ಬಗ್ಗೆ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುವ ಬಳಗದೊಂದಿಗೆ ಎಲ್ಲರೂ ಕೈಜೋಡಿಸುವಂತೆ ಕರೆ ನೀಡಿದರು. ಶಿವಮೊಗ್ಗದ ಖ್ಯಾತ ಪಾರಂಪರಿಕ ನಾಟಿ ವೈದ್ಯರಾದ ಸುಮನ ಮಳಲಗದ್ದೆ ಮಾತನಾಡಿ, ದೈವಿ ಸ್ವರೂಪದ ನದಿ ತೊರೆಗಳನ್ನು ತಾಯಿಯಂತೆ ನೋಡಿಕೊಂಡಲ್ಲಿ ಅದು ನಮ್ಮನ್ನು ಕಾಪಾಡುತ್ತದೆ ಎಂದರು. ಅರ್ಚಕ ಕೃಷ್ಣಮೂರ್ತಿ ಭಟ್ ಕುಂಕುಮಾರ್ಚನೆ, ಅಷ್ಟೋತ್ತರ ನಂತರ ನದಿಗೆ ಮಹಾ ಆರತಿ ಬೆಳಗಿದರು. ಈ ಸಂದರ್ಭ ಕೊಡಗು ಜಿಲ್ಲಾ ಅರ್ಚಕರ ಮತ್ತು ಪುರೋಹಿತರ ಸಂಘದ…
ಲೇಖಕ: admin
ಮಡಿಕೇರಿ ಮಾ.10 : ಮಡಿಕೇರಿ ಭಗವತಿ ನಗರದ ನಂ. 2769ನೇ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡದ ನಿರ್ಮಾಣಕ್ಕೆ ಶಾಸಕ ಕೆ.ಜಿ.ಬೋಪಯ್ಯ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭ ಸಂಘದ ಅಧ್ಯಕ್ಷರು, ಸದಸ್ಯರು ಹಾಜರಿದ್ದರು.
ಮಡಿಕೇರಿ ಮಾ.10 : ಹಿಂದುತ್ವದ ಪರ ಕಾರ್ಯನಿರ್ವಹಿಸುವುದು ಹಾಗೂ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಸಂಕಷ್ಟದಲ್ಲಿದ್ದಾಗ ಸ್ಪಂಧಿಸುವ ಹಿಂದೂ ಮುಖಂಡರಿಗೆ ಕೊಡಗು ಯುವ ಸೇನೆಯು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬೆಂಬಲ ಸೂಚಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಯುವಸೇನೆಯ ಜಿಲ್ಲಾ ಮುಖಂಡ ಕುಲದೀಪ್ ಪೂಣಚ್ಚ ಹಾಗೂ ಜಿಲ್ಲಾ ಸಂಚಾಲಕ ಮಾಚಟ್ಟಿರ ಸಚಿನ್ ಮಂದಣ್ಣ, ಯುವ ಜನತೆಯ ಕನಸು ನನಸಾಗಿಸುವ ನಿಟ್ಟಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅದಕ್ಕಾಗಿ ಒಳ್ಳೆಯ ಹಿಂದೂಪರ ಮುಖಂಡರ ಅವಶ್ಯಕತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಯುವ ಜನಾಂಗ ರಾಜಕೀಯದಲ್ಲಿದ್ದರೆ ಅಭಿವೃದ್ಧಿಯ ರೀತಿ ರೂಪುರೇಷೆಗಳು ವಿಭಿನ್ನ ರೀತಿಯಲ್ಲಿ ಇರುತ್ತದೆ ಎಂದು ತಿಳಿಸಿದರು.
ನಾಪೋಕ್ಲು ಮಾ.10 : ಹೆಲ್ತ್ ಗ್ಲೋರಿ ಜನ ಸೇವಾ ಕ್ಲಿನಿಕ್ ಆಶ್ರಯದಲ್ಲಿ ಪರಂ ಜ್ಯೋತಿ ಅನ್ನಪೂರ್ಣೇಶ್ವರಿ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಉಚಿತ ಬಿಪಿ ಮತ್ತು ಶುಗರ್ ತಪಾಸಣಾ ಶಿಬಿರ ನಡೆಯಿತು. ಬಿಜೆಪಿ ಪ್ರಮುಖರಾದ ಕೋಡಿನ ಪ್ರಸನ್ನ ನೂತನ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕರರು ಉಚಿತ ತಪಾಸಣಾ ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಡಾ. ಕೃಷಿ ಬೋಪಣ್ಣ ದೀಪ ಬೆಳಗಿಸಿ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಕ್ಲಿನಿಕ್ ಪಾಲುದಾರ ಟಿ.ಬಿ.ಸುಜಿ ಮಾತನಾಡಿ ಪ್ರತಿ ದಿನ ಇ.ಸಿ.ಜಿ. ಹಾಗೂ ಬಿ.ಪಿ, ಶುಗರ್ ತಪಾಸಣೆಗೆ ರೂ.200 ಪ್ಯಾಕೇಜ್ ನಿಗದಿಪಡಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಮಾಹಿತಿ ನೀಡಿದರು. ಕೆಎಂಸಿ ಆಸ್ಪತ್ರೆಯ ಮುಖ್ಯಸ್ಥ ಡಾ.ಪದ್ಮನಾಭ ಕಾಮತ್ ಉಚಿತ ವೈದ್ಯಕೀಯ ಸಲಹೆಯನ್ನು ಆನ್ ಲೈನ್ ಮೂಲಕ ರೋಗಿಗಳಿಗೆ ನೀಡಲಿದ್ದಾರೆ. ಸನಿಲ್ ಕುಮಾರ್, ಸೀಮಾ, ರವಿ ಓಂಕಾರ್ ಪಾಲ್ಗೊಂಡಿದ್ದರು. ಸಿಬ್ಬಂದಿಗಳಾದ ಎಂ.ಯು ಮುದ್ದಪ್ಪ, ಅನುಷಾ, ಭಾರತೀಶ್ ಹಾಜರಿದ್ದರು. ವರದಿ : ದುಗ್ಗಳ ಸದಾನಂದ.
ವಿರಾಜಪೇಟೆ ಮಾ.10 : ಸಮಾಜದಲ್ಲಿ ಸಂಘರ್ಷಗಳು ನಡೆಯುವುದು ಸಹಜ ಆದರೆ ಚುನಾವಣಾ ಹೊಸ್ತಿಲಲ್ಲಿ ಸಂಘರ್ಷಗಳು ನಡೆದರೆ ಸಹನೆಯಿಂದ ಸ್ವೀಕರಿಸಿ ಚುನಾವಣೆ ಎದುರಿಸಬೇಕು ಎಂದು ಕೆ.ಪಿ.ಸಿ.ಸಿ.ಕಾನೂನು ಘಟಕದ ರಾಜ್ಯ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು. ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕರ್ತರು ಭಾ.ಜ.ಪ. ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಸಮಾರಂಭದಲ್ಲಿ ಮಾತನಾಡಿದ ಅವರು ನಾವುಗಳು ಇಂದು ಚುನಾವಣಾ ಹೊಸ್ತಿಲಲ್ಲಿ ಇದ್ದೇವೆ. ಭಿನ್ನ ಪಕ್ಷದಲ್ಲಿ ಆಂತರಿಕ ಮತ್ತು ಇತರ ವಿಷಯಗಳ ಸಂಭಂದಿತ ವಿಚಾರಗಳಿಗೆ ಸಂಘರ್ಷಗಳು ನಡೆಯುವುದು ಸಹಜ. ಆದರೆ ಪಕ್ಷದ ಕಾರ್ಯಕರ್ತರು ಸಹನೆ ಕಳೆದುಕೊಳ್ಳದೆ ಶಾಂತಿಯಿಂದ ವರ್ತಿಸಬೇಕು, ಪಕ್ಷದ ಒಳಿತಿಗಾಗಿ ಪಕ್ಷದ ಅಭ್ಯರ್ಥಿಯನ್ನು ಜಯಗಳಿಸುವ ನಿಟ್ಟಿನಲ್ಲಿ ಸರ್ವರು ಶ್ರಮಿಸಬೇಕು ಎಂದರು. ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಪಕ್ಷಕ್ಜೆ ಸೇರ್ಪಡೆಗೊಂಡ ಯುವ ವಕೀಲ ಸಿ.ಕೆ.ಪೊನ್ನಣ್ಣ ಅವರಿಗೆ ಇದೇ ಸಂದರ್ಭ ಅಭಿನಂದನೆ ಸಲ್ಲಿಸಲಾಯಿತು. ರಾಜ್ಯ ವಕ್ತಾರ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿ, ಇಂದು ಕ್ಷೇತ್ರದಲ್ಲಿ ಬದಲಾವಣೆಯ ಪರ್ವ ಕಾಣಿಸಿಕೊಂಡಿದೆ. ಜಿಲ್ಲೆಯ ಮೂಲಭೂತ ಸಮಸ್ಯೆಗಳಿಗೆ ತಾತ್ವಿಕ…
ನಾಪೋಕ್ಲು ಮಾ.10 : ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಮಹಿಳಾ ದಿನಾಚರಣೆಯ ಪ್ರಯುಕ್ತ ರಾಜ್ಯ ಸರ್ಕಾರದ ವತಿಯಿಂದ ಬೆಂಗಳೂರು ರವೀಂದ್ರ ಕಲಾ ಕ್ಷೇತ್ರದಲ್ಲಿ ಸನ್ಮಾನಿಸಲಾಯಿತು. ಸಮೀಪದ ಹೊದ್ದೂರು ಗ್ರಾಮದ ಕಬ್ಬಡಕೇರಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ತಂಸೀನಾ ಬಾನು ಸಾಧಕ ಮಹಿಳೆಯರಲ್ಲಿ ಒಬ್ಬರು. ಅಂಗನವಾಡಿ ಕೇಂದ್ರದ ನಿರ್ವಹಣೆ, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಇಲಾಖೆಯಿಂದ ಸಿಗುವ ಸೌಲಭ್ಯ, ಮಾದರಿ ಶಿಕ್ಷಣ ಭೋದನೆಯಲ್ಲಿನ ಮುತುವರ್ಜಿ, ಮಾತೃವಂದನಾ -ಭಾಗ್ಯಲಕ್ಷ್ಮಿ ಯೋಜನೆಯ ಸೌಲಭ್ಯಗಳನ್ನು ಫಲಾನುಭವಿಗಳಿಗೆ ದೊರಕಿಸಿಕೊಡುವಲ್ಲಿನ ನಿರಂತರ ಪ್ರಯತ್ನ, ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಸೌಲಭ್ಯಗಳನ್ನು ಫಲಾನುಭವಿಗಳಿಗೆ ಸಮರ್ಪಕವಾಗಿ ಒದಗಿಸಲು ತೆಗೆದು ಕೊಂಡಿರುವ ಕ್ರಮಗಳನ್ನು ಗುರುತಿಸಿ ರಾಜ್ಯದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಗೆ ಪ್ರಶಸ್ತಿ ನೀಡಿ ಗೌರವಿಸಿದರು. ವರದಿ : ದುಗ್ಗಳ ಸದಾನಂದ.
ಮಡಿಕೇರಿ ಮಾ.9 : ಪ್ರಭಾರ ವಲಯ ಅರಣ್ಯಾಧಿಕಾರಿ ಬಳಿಯಿಂದ ರೂ.50 ಸಾವಿರ ಲಂಚ ಸ್ವೀಕರಿಸಿದ ಆರೋಪದಡಿ ಲೋಕಾಯುಕ್ತರು ಡಿ.ಎಫ್.ಓ ಕು.ಪೂರ್ಣಿಮ ಎಂಬುವವರನ್ನು ಮಡಿಕೇರಿ ಅರಣ್ಯ ಭವನದ ಬಳಿ ವಶಕ್ಕೆ ಪಡೆದಿದ್ದಾರೆ. ದೂರುದಾರ ಸಾಮಾಜಿಕ ಅರಣ್ಯ ವಲಯದ ಪ್ರಭಾರ ವಲಯ ಅರಣ್ಯಾಧಿಕಾರಿ ಮಯೂರ ಅವರು ಆರೋಪಿ ಪೂರ್ಣಿಮ ಅವರ ಸೂಚನೆಯಂತೆ ಅರಣ್ಯ ಭವನದ ಬಳಿ ಹಣದ ಕವರ್ ನ್ನು ಜೀಪ್ ನಲ್ಲಿ ಇಡುತ್ತಿದ್ದ ಸಂದರ್ಭ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದರು. ::: ದೂರಿಗೆ ಕಾರಣ ::: ಮಯೂರ ಅವರ ಕರ್ತವ್ಯದ ವ್ಯಾಪ್ತಿಗೆ ಒಳಪಡುವ ಹೊದ್ದೂರು ವೋಟೆಕಾಡು ನರ್ಸರಿಯಲ್ಲಿ ಕರ್ತವ್ಯ ನಿರ್ವಹಿಸಲು ಓರ್ವ ವಾಚರ್ ನ್ನು ನೇಮಿಸಿಕೊಂಡು ಮಾಸಿಕ ರೂ.15 ಸಾವಿರ ವೇತನ ನೀಡಲಾಗುತ್ತಿತ್ತು. ಆದರೆ ಮತ್ತೊಬ್ಬ ವಾಚರ್ ನ್ನು ನೇಮಿಸಿಕೊಂಡAತೆ ಸುಳ್ಳು ದಾಖಲೆಯನ್ನು ಸೃಷ್ಟಿಸಿ ಆ ಮಾಸಿಕ ಸಂಬಳವನ್ನು ನನಗೆ ನೀಡುವಂತೆ ಪೂರ್ಣಿಮ ಅವರು ಒತ್ತಡ ಹೇರಿದ್ದರು. ಅಲ್ಲದೆ ನನ್ನ ಕರ್ತವ್ಯದ ವ್ಯಾಪ್ತಿಯಲ್ಲಿ ನಡೆದ ಎರಡು ಕಾಮಗಾರಿಗಳ ಒಟ್ಟು ಮೊತ್ತ ರೂ.1.60 ಲಕ್ಷ…
ಸುಂಟಿಕೊಪ್ಪ,ಮಾ.9: ಪುರುಷರಂತೆ ಮಹಿಳೆಯರಿಗೂ ಸಮಾನ ಹಕ್ಕುಗಳನ್ನು ನೀಡಿದರೆ ಸಮಾಜದಲ್ಲಿ ಗೌರವಯುತ ಸ್ಥಾನ ಮಾನ ಪಡೆಯಲು ಸಾಧ್ಯವಾಗಲಿದೆ ಎಂದು ಜೆಸಿಐ ಸಂಸ್ಥೆಯ ವಲಯ ಅಧ್ಯಕ್ಷೆ ತುಮಕೂರಿನ ಯಶಸ್ವಿನಿ ಅಭಿಪ್ರಾಯಪಟ್ಟರು. ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ವತಿಯಿಂದ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರತಿಯೊಬ್ಬ ಮಹಿಳೆಯರು ಸಮಾಜದಲ್ಲಿ ಎಲ್ಲ ರೀತಿಯ ಸಮಾನತೆ, ಪ್ರೀತಿ, ಗೌರವವನ್ನು ಮಾತ್ರ ಬಯಸುತ್ತಾರೆ. ಮಹಿಳೆಯರ ಸಾಧನೆಗೆ ಪುರುಷರು ಅಡ್ಡಿಪಡಿಸದೆ ಸಹಕಾರ ಮತ್ತು ಪ್ರೋತ್ಸಾಹ ನೀಡಿದರೆ ಮಹಿಳೆಯರ ಗೌರವ ಮತ್ತು ಸಾಧನೆಗಳು ಉತ್ತುಂಗ ಮುಟ್ಟಲಿದೆ ಎಂದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಯಶಸ್ವಿನಿ( ಸಮಾಜ ಸೇವೆ), ಆರತಿ ಸೋಮಯ್ಯ( ಸ್ವಸ್ಥ ಸಂಸ್ಥೆಯ ವಿಶೇಷ ಚೇತನ ಶಾಲೆಯ ನಿರ್ದೇಶಕಿ), ಶ್ರೀದೇವಿ( ಚುಟುಕು ಕವಿ), ರೂಪಾ ರಮೇಶ್( ಅನಾಥರಿಗೆ ಆಶ್ರಯ) ಅವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ನಿರ್ಗಮಿತ ಅಧ್ಯಕ್ಷ ಸತೀಶ್ ಪೂಜಾರಿ, ನಿಯೋಜಿತ ಅಧ್ಯಕ್ಷ ಜಿ.ಟಿ.ಪ್ರೇಮಕುಮಾರ್, ವಲಯ ಉಪಾಧ್ಯಕ್ಷ ನೆಲ್ಸನ್,ಪೂರ್ವ ವಲಯ ಅಧಿಕಾರಿಗಳಾದ ದೇವಿಪ್ರಸಾದ್ ಕಾಯಾರ್ ಮಾರ್,…
ಮಡಿಕೇರಿ ಮಾ.9 : ಭಾಗಮಂಡಲ ಗ್ರಾ.ಪಂ.ಗೆ ಮಹಾರಾಷ್ಟ್ರದ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ RDPR ಅಧಿಕಾರಿಗಳು, ಅಬ್ದುಲ್ ನಜೀರ್ ಸಾಬ್ ಸಂಸ್ಥೆಯ ಭೋಧಕರು, SBM ನ ಸಂಯೋಜಕರು ಅಧ್ಯಾಯನ ಪ್ರವಾಸದ ಭಾಗವಾಗಿ ಭೇಟಿ ನೀಡಿ ಪಂಚಾಯತ್ ಕಾರ್ಯ ವೈಖರಿ ಬಗ್ಗೆ ಮಾಹಿತಿ ಪಡೆದರು. ನಂತರ ದ್ರವ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ತೆರಳಿ ವೀಕ್ಷಿಸಿದರು.
ವಿರಾಜಪೇಟೆ ಮಾ.9 : ಕೇಂದ್ರ ಮತ್ತು ರಾಜ್ಯ ಸರ್ಕಾರ ದಿನ ನಿತ್ಯ ಉಪಯೋಗಿಸುವ ಆಹಾರ ದಾನ್ಯ ಸೇರಿದಂತೆ ಅಡಿಗೆ ಅನಿಲದ ಬೆಲೆಯನ್ನು ನಿರಂತರ ಏರಿಕೆ ಮಾಡುತ್ತಿರುವುದನ್ನು ವಿರೋಧಿಸಿ ಸಿ.ಪಿ.ಐ(ಎಂ) ಪಕ್ಷದ ವಿರಾಜಪೇಟೆ ನಗರ ಶಾಖೆ ಪ್ರತಿಭಟನೆ ನಡೆಸಿತು. ಪಟ್ಟಣದ ಗಡಿಯಾರ ಕಂಬದ ಬಳಿ ಜಮಾಯಿಸಿ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಬೆಲೆ ಬೆಲೆ ಏರಿಕೆಯನ್ನು ನಿಯಂತ್ರಿಸುವಂತೆ ಒತ್ತಾಯಿಸಿದರು. ಈ ಸಂದರ್ಭ ಸಿಪಿಐಎಂ ಪಕ್ಷದ ಜಿಲ್ಲಾ ಸಮಿತಿ ಮುಖಂಡ ಎ.ಸಿ. ಸಾಬು ಮಾತನಾಡಿ ಸರಕಾರಗಳು ಬಜೆಟ್ ಮಂಡನೆ ಸಂದರ್ಭ ಕೊಡಗನ್ನು ಕಡೆಗಣಿಸಿ ಕಾರ್ಮಿಕರಿಗೆ ಮತ್ತು ರೈತರಿಗೂ ಯಾವುದೇ ಯೋಜನೆಗಳನ್ನು ಜಾರಿಗೆತಂದಿಲ್ಲ. ಈ ಹಿಂದೆ ಕೇಂದ್ರ ಮತ್ತು ರಾಜ್ಯ ಸರಕಾರ ಅಧಿಕಾರಕ್ಕೆ ಬಂದರೆ ಎಲ್ಲಾ ವಸ್ತುಗಳ ಬೆಲೆಯನ್ನು ಕಡಿಮೆ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದರು. ಉಜ್ವಲ ಯೋಜನೆಯಲ್ಲಿ ಉಚಿತ ಅಡುಗೆ ಅನಿಲ ನೀಡುವುದಾಗಿ ಹೇಳಿ ಈಗ 1,150 ರೂ ಏರಿಕೆಮಾಡಲಾಗಿದೆ. ಅದಕ್ಕೆ ಸಬ್ಸಿಡಿಯು ಇಲ್ಲ. ಕೊರೊನದ ನಂತರ ಜನರು ತತ್ತರಿಸಿ ಹೋಗಿದ್ದಾರೆ.…






