ಮಡಿಕೇರಿ ಮಾ.9 : ಅರಣ್ಯ ಇಲಾಖೆಯ ನಿವೃತ್ತ ನೌಕರ ಬೆಟ್ಟಗೇರಿಯ ಚಾಳಿಯಂಡ ಸುರೇಶ್ ಚಂಗಪ್ಪ (64) ನಿಧನರಾಗಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಲೇಖಕ: admin
ಮಡಿಕೇರಿ ಮಾ.8 : ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರು ಮಾರ್ಚ್ 12 ರಂದು ಮೈಸೂರು- ಬೆಂಗಳೂರು ದಶಪಥ ಹೆದ್ದಾರಿಯನ್ನು ಉದ್ಘಾಟಿಸಲಿದ್ದಾರೆ. ಪ್ರಧಾನಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಯುವ ಸ್ಥಳವನ್ನು ಪರಿಶೀಲಿಸಿದ ಮೈಸೂರು- ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಸೂಕ್ತ ವ್ಯವಸ್ಥೆಗಳ ಬಗ್ಗೆ ಸಭೆ ನಡೆಸಿ ಅಧಿಕಾರಿಗಳಿಗೆ ಸಲಹೆ ನೀಡಿದರು. ಸಚಿವ ಗೋಪಾಲಯ್ಯ, ಮಂಡ್ಯ ಜಿಲ್ಲಾಧಿಕಾರಿಗಳು, ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ನವದೆಹಲಿ ಮಾ.8 : ಅಗ್ನಿವೀರ್ ಯೋಜನೆಯಡಿ, ಸಂಕುಚಿತ ಸಮಯದ ಚೌಕಟ್ಟಿನಲ್ಲಿ ತರಬೇತಿಯನ್ನು ಪೂರ್ಣಗೊಳಿಸಬೇಕು. ದೈಹಿಕ ಕಂಡೀಷನಿಗ್, ಶಸ್ತಾಸ್ತ್ರ ತರಬೇತಿ, ಸಣ್ಣ ಶಸ್ತ್ರಾಸ್ತ್ರಗಳ ನಿರ್ವಹಣೆ ಮತ್ತು ಮಿಲಿಟರಿ ಪೋಲೀಸ್‌ನ ಇತರ ಕಾರ್ಯಾಚರಣೆಯ ಅಂಶಗಳೂ ಅಗ್ನಿವೀರ್ ನಲ್ಲಿ ಅಡಕವಾಗಿರುತ್ತದೆ. ದೇಶ ಸೇವೆಯ “ಅಗ್ನಿವೀರ್” ಪರಿಕಲ್ಪನೆಯಡಿ ಲಕ್ಷಾಂತರ ಯುವ ಆಕಾಂಕ್ಷಿಗಳು ತರಬೇತಿಗಾಗಿ ಮುಂದೆ ಬಂದಿದ್ದಾರೆ. ಅಗ್ನಿವೀರ್ ನೇಮಕಾತಿಗಳ ಎರಡನೇ ಬ್ಯಾಚ್ ಆಗಿದ್ದು, ಕೇಂದ್ರದಲ್ಲಿ 350 ಕ್ಕೂ ಹೆಚ್ಚು ಅಗ್ನಿವೀರ್ ತರಬೇತಿ ನಡೆಯುತ್ತಿದೆ. ಮೊದಲ ಬ್ಯಾಚ್ ಪ್ರಸ್ತುತ ಹತ್ತನೇ ವಾರದ ತರಬೇತಿಯಲ್ಲಿದೆ, ಇಲ್ಲಿ ಎಲ್ಲರೂ ಪುರುಷರೇ ಇದ್ದಾರೆ. ಎರಡನೇ ಬ್ಯಾಚ್ ನಲ್ಲಿ 100 ಯುವತಿಯರು ಹಾಗೂ 140 ಪುರುಷ ನೇಮಕಾತಿ ನಡೆಯಲಿದೆ. ಮಾರ್ಚ್ 1 ರಿಂದಲೇ ತರಬೇತಿ ಪ್ರಾರಂಭವಾಗಿದ್ದು, 31 ವಾರಗಳ ತರಬೇತಿ ನಡೆಯಲಿದೆ. ತರಬೇತಿ ಬಳಿಕ ಯುವಕ, ಯುವತಿಯರು ಕಾರ್ಪ್ಸ್ ಆಫ್ ಮಿಲಿಟರಿ ಪೋಲೀಸ್ (ಸಿಎಂಪಿ) ಆಗಿ ಹೊರಹೊಮ್ಮಲಿದ್ದಾರೆ. ದೈನಂದಿನ ಕರ್ತವ್ಯಗಳು ಮಿಲಿಟರಿ ಪೋಲೀಸರ ಪಾತ್ರವನ್ನು ಹೋಲುತ್ತವೆ. ಕಂಟೋನ್ಮೆಂಟ್‌ನ ಶಿಸ್ತು, ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಗಳನ್ನು…
ಮೈಸೂರು ಮಾ.8 : ಬೇಸಿಗೆಯ ಹಿನ್ನೆಲೆ ತಾಪಮಾನ ಮಿತಿ ಮೀರುತ್ತಿದೆ. ಕಾಡ್ಗಿಚ್ಚಿನಿಂದ ಅರಣ್ಯ ಪ್ರದೇಶಗಳು ಬೆಂಕಿಗಾಹುತಿಯಾಗುತ್ತಿರುವ ಘಟನೆಗಳು ನಡೆಯುತ್ತಿದ್ದು, ವನ್ಯಜೀವಿಗಳು ಸಾವನ್ನಪ್ಪುತ್ತಿವೆ. ಈ ನಡುವೆ ಮೈಸೂರು ಮೃಗಾಲಯ ಕೂಡ ಅಧಿಕ ತಾಪಮಾನದ ಸಮಸ್ಯೆಯನ್ನು ಎದುರಿಸುತ್ತಿದ್ದು, ಇಲ್ಲಿರುವ ಪ್ರಾಣಿಗಳ ಹಿತಕಾಯುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಮೃಗಾಲಯದಲ್ಲಿ 624 ಸಸ್ತನಿಗಳು, 731 ಪಕ್ಷಿಗಳು, 100 ಸರೀಸೃಪಗಳು ಸೇರಿದಂತೆ 1,455 ಪ್ರಾಣಿಗಳಿವೆ. ನಾಲ್ಕು ಬೋರ್ನಿಯನ್ ಒರಾಂಗುಟನ್, ಆರು ಚಿಂಪಾoಜಿಗಳು, ಎರಡು ವೆಸ್ಟರ್ನ್ ಲೋಲ್ಯಾಂಡ್ ಗೊರಿಲ್ಲಾಗಳೂ ಕೂಡ ಇವೆ. ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಿದ್ದು, ಪ್ರಾಣಿಗಳು ಕೂಡ ತತ್ತರಿಸಿ ಹೋಗುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಾಣಿಗಳ ಹಿತದೃಷ್ಟಿಯಿಂದ ಸುಮಾರು 130 ವರ್ಷಗಳಷ್ಟು ಹಳೆಯದಾದ ಮೈಸೂರು ಮೃಗಾಲಯದಲ್ಲಿ ಏರ್ ಕೂಲರ್ ಗಳನ್ನು ಅಳವಡಿಸಲಾಗುತ್ತಿದೆ. ಎಸಿಗಳಂತೆಯೇ ಇವು ಕಾರ್ಯನಿರ್ವಹಿಸಲಿವೆ. ಅತಿಯಾದ ತಾಪಮಾನವು ಪ್ರಾಣಿಗಳು ನಿರ್ಜಲೀಕರಣ ಎದುರಿಸುವಂತೆ ಮಾಡುತ್ತದೆ. ಹೀಗಾಗಿ ಇದನ್ನು ತಡೆಗಟ್ಟಲು ಹೆಚ್ಚಿನ ನೀರಿನ ಅಂಶವಿರುವ ಹಣ್ಣುಗಳನ್ನು ಕೂಡ ನೀಡುವ ಕೆಲಸ ಮಾಡುತ್ತಿದ್ದೇವೆ ಎಂದು ಮೈಸೂರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್…
ಬೆಂಗಳೂರು ಮಾ.8 : ವಿಮಾನದಲ್ಲಿ ಧೂಮಪಾನ ಮಾಡಿದ ಆರೋಪದಡಿ ಮಹಿಳೆಯೊಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಪಶ್ಚಿಮ ಬಂಗಾಳದ ಸೀಲ್ದಾ ಜಿಲ್ಲೆಯ ಮಹಿಳೆ ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡಿದ್ದರು ಎಂದು ಆರೋಪಿಸಲಾಗಿದೆ. ಕೊಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಈ ಪ್ರಕರಣ ನಡೆದಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದರು.
ಬೆಂಗಳೂರು ಮಾ.8 : ಸಿಗರೇಟ್ ತುಂಡುಗಳನ್ನು ಎಲ್ಲೆಂದರಲ್ಲಿ ಹಾಕುವುದಕ್ಕೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಆಕ್ಷೇಪ ವ್ಯಕ್ತಪಡಿಸಿದೆ. ಆರೋಗ್ಯ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಬಿಬಿಎಂಪಿ ಮತ್ತು ತಂಬಾಕು ತಯಾರಕರು ಸೇರಿದಂತೆ ಮಧ್ಯಸ್ಥಗಾರರ ಸಭೆಯನ್ನು ಮಾರ್ಚ್ 15 ರಂದು ಕರೆಯಲಾಗಿದೆ. ಸಿಗರೇಟ್ ತುಂಡು ಕಸ ಹಾಕುವುದಕ್ಕೆ ದಂಡ ವಿಧಿಸಲು ನಿಯಮಗಳನ್ನು ಜಾರಿಗೊಳಿಸಲು ಸ್ಥಳೀಯ ಅಧಿಕಾರಿಗಳಿಗೆ ಅವಕಾಶ ನೀಡಲಾಗಿದೆ. ಸಿಗರೇಟ್ ತಯಾರಕರು ಸಿಗರೇಟ್ ತುಂಡುಗಳ ಕಸದಿಂದ ಪರಿಸರ ಮತ್ತು ಆರೋಗ್ಯದ ಅಪಾಯ ಕುರಿತು ಮಾಹಿತಿ ನಮೂದಿಸಬೇಕು. ಸಾರ್ವಜನಿಕ ಪ್ರದೇಶ, ಹೊರಾಂಗಣ, ಒಳಾಂಗಣ ಮತ್ತು ಕೆಲಸದ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸುವವರಿಗೆ ಸಂಬoಧಪಟ್ಟ ಅಧಿಕಾರಿಗಳು ದಂಡ ಹಾಕಲಿದ್ದು, ದಂಡ ವಿಧಿಸುವ ನಿಬಂಧನೆಯನ್ನು ಸ್ಥಳೀಯ ಅಧಿಕಾರಿಗಳು ತಮ್ಮ ಬೈಲಾಗಳಲ್ಲಿ ಸೇರಿಸಿಕೊಳ್ಳಬಹುದು ಎಂದು ಮಂಡಳಿ ಹೇಳಿದೆ.
ಕುಶಾಲನಗರ, ಮಾ.8 : ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಅಂಗವಾಗಿ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಆಶ್ರಯದಲ್ಲಿ ಬೆಳ್ಳಿ ಮಹೋತ್ಸವ ಸಾಂಸ್ಕೃತಿಕ ಸಮಿತಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಕುಶಾಲನಗರದಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಮಡಿಕೇರಿಯ ರೂಪಾ ಸತೀಶ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸಮಾಜಕ್ಕೆ, ತುಂಬಿದ ಕುಟುಂಬಕ್ಕೆ ತಾಯಂದಿರ ಕೊಡುಗೆ ಅಪಾರ. ಎಲ್ಲಾ ಕ್ಷೇತ್ರದಲ್ಲಿ ಮಹಿಳೆ ತನ್ನ ಛಾಪು ಮೂಡಿಸುತ್ತಿದ್ದಾಳೆ. ಕುಟುಂಬದ ಆರೈಕೆ ನಡುವೆ ದೊರೆಯುವ ಬಿಡುವನ್ನು ಉತ್ತಮ ಹವ್ಯಾಸಗಳಿಗೆ ಮೀಸಲಿಡುವ ಮೂಲಕ ಆರೋಗ್ಯಯುತ ಬದುಕಿಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು. ಸಾಧನೆಗೆ ಅಡ್ಡಿ ಎಂಬುದು ಯಾವುದು ಇಲ್ಲ. ದೃಢ ಮನಸ್ಸಿನ ಸಂಕಲ್ಪ, ನಿರಂತರ ಅಧ್ಯಯನ, ಪ್ರಯತ್ನಗಳು ಯಶಸ್ಸಿನೆಡೆಗೆ ಕೊಂಡೊಯ್ಯುತ್ತದೆ ಎಂದು ಸಲಹೆ ನೀಡಿದರು. ಅತಿಥಿಗಳಾಗಿ ಪಾಲ್ಗೊಂಡಿದ್ದ ಕೂಡಿಗೆ ಕ್ರೀಡಾಶಾಲೆ ನಿವೃತ್ತ ಮುಖ್ಯ ಶಿಕ್ಷಕಿ ಕುಂತಿ ಬೋಪಯ್ಯ ಮಾತನಾಡಿ, ಹೆಣ್ಣೆಂದರೆ…
ಕುಶಾಲನಗರ, ಮಾ.8 : ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಅಂಗವಾಗಿ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಆಶ್ರಯದಲ್ಲಿ ಬೆಳ್ಳಿ ಮಹೋತ್ಸವ ಸಾಂಸ್ಕೃತಿಕ ಸಮಿತಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಕುಶಾಲನಗರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು. ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಮಹಾ ಪೋಷಕ ಜಿ.ರಾಜೇಂದ್ರ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಇಂದಿನ ಆಧುನಿಕ ಕಾಲಘಟ್ಟದಲ್ಲಿ ಮಹಿಳೆ ಸಶಕ್ತಳಾಗಿದ್ದಾಳೆ. ಭಾರತದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರಿಗೆ ಪ್ರಾಧಾನ್ಯತೆ ದೊರೆಯುತ್ತಿದೆ ಎಂದ ಅವರು, ಮಹಿಳೆಯರ ಸೌಂದರ್ಯ ಆರಾಧಿಸುವಂತಾಗಬೇಕು.ಆದರೆ ಸೌಂದರ್ಯ ಭಗ್ನಗೊಳಿಸುವ ಕಾರ್ಯ ವಿಷಾದನೀಯ ಬೆಳವಣಿಗೆ ಎಂದರು. ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಬೆಳ್ಳಿ ಮಹೋತ್ಸವದ ಅಂಗವಾಗಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜನಮಾನಸಕ್ಕೆ ತಲುಪುವಂತಹ ವೈವಿಧ್ಯಮಯ ಕಾರ್ಯಕ್ರಮ ವಿವಿಧೆಡೆ ಜರುಗುತ್ತಿವೆ ಎಂದರು. ಸಮಾನತೆಯ ಉದ್ದೇಶಕ್ಕಾಗಿ ಆರಂಭವಾದ ಮಹಿಳಾ ದಿನಾಚರಣೆ…
ಮಡಿಕೇರಿ ಮಾ.8 : ಕೊಡವ ಮಹಿಳೆಯರ ಸಬಲೀಕರಣಕ್ಕಾಗಿ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ “ಅಂತರರಾಷ್ಟ್ರೀಯ ಮಹಿಳಾ ದಿನ”ವಾದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯುತ ಧರಣಿ ಸತ್ಯಾಗ್ರಹ ನಡೆಸಿತು. ಕೊಡವ ಬುಡಕಟ್ಟು ಜನಾಂಗದ ಮಹಿಳೆಯರು ಹಾಗೂ ಬಾಲಕಿಯರಿಗೆ ಸಾಂವಿಧಾನಿಕ ಹಕ್ಕು ಮತ್ತು ಸಬಲತೆ ನೀಡಬೇಕೆಂದು ಧರಣಿಯ ನೇತೃತ್ವದ ವಹಿಸಿದ್ದ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದರು. ಸಂಸತ್, ವಿಧಾನಸಭೆ, ವಿಧಾನ ಪರಿಷತ್ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗಾಗಿ ಘೋಷಿಸಿರುವ ಶೇ.33 ಸೀಟುಗಳಲ್ಲಿ ಕೊಡವ ಮಹಿಳೆಯರಿಗೆ ಪ್ರತ್ಯೇಕ ಆಂತರಿಕ ಕೋಟಾವನ್ನು ನೀಡಬೇಕು. ಕೊಡವ ಬುಡಕಟ್ಟು ಜನಾಂಗದ ಮಹಿಳೆಯರು ಉತ್ತಮ ಕೃಷಿಕರು. ಆದರೆ ಶೇ.99 ರಷ್ಟು ಕೊಡವ ಮಹಿಳೆಯರು ತಮ್ಮದೇ ಆದ ಕೃಷಿಭೂಮಿಯನ್ನು ಹೊಂದಿಲ್ಲ. ಆದ್ದರಿಂದ ತಮ್ಮ ಸಾಂಸ್ಕೃತಿಕ ಮೂಲವನ್ನು ಹೊಂದಿರುವ ಮಡಿಕೇರಿಯಲ್ಲಿ ಪ್ರತಿ ಕೊಡವತಿಗೆ 5 ಎಕರೆ ಭೂಮಿಯನ್ನು ಕಡ್ಡಾಯವಾಗಿ ಮಂಜೂರು ಮಾಡಬೇಕು. ಇದರಿಂದ ಕೊಡವ ಮಹಿಳೆಯರು ಆರ್ಥಿಕ ಸಬಲತೆಯನ್ನು ಹೊಂದಬಹುದು ಮತ್ತು ವಿವಿಧ ಅಧಿಕಾರವನ್ನು ಅನುಭವಿಸಬಹುದು. ಕೊಡವ ಮಹಿಳೆಯರು…
ಮಡಿಕೇರಿ ಮಾ.8 : ಮಡಿಕೇರಿ ಬ್ರಹ್ಮಕುಮಾರಿ ಲೈಟ್ ಹೌಸ್‍ಗೆ ಉತ್ತರ ಪ್ರದೇಶದ ರಾಜಧಾನಿ ಲಕ್ನೊದಲ್ಲಿರುವ ಬ್ರಹ್ಮಕುಮಾರಿ ಶಾಖೆಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ರಾಧ, ರಾಜಸ್ಥಾನದ ಉದಯ್‍ಪುರದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಕುಮಾರಿ ವಿಜಯಲಕ್ಷ್ಮಿ ಹಾಗೂ ಡೊಂಗರ್ ಪುರ್‍ನ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ಪದ್ಮ ಭೇಟಿ ನೀಡಿದ್ದಾರೆ. ಇವರು ಮೂಲತಃ ಕರ್ನಾಟಕದವರಾಗಿದ್ದು, ಉತ್ತರ ಭಾರತದಲ್ಲಿ ಈಶ್ವರಿಯ ಸೇವೆಯಲ್ಲಿ ತಮ್ಮ ಜೀವನವನ್ನು ಸಮರ್ಪಿತಗೊಳಿಸಿ, ಅನೇಕರಿಗೆ ಆದ್ಯಾತ್ಮಿಕದ ಮಾರ್ಗದರ್ಶಕರಾಗಿದ್ದಾರೆ. ರಾಜಯೋಗಿನಿ ಬ್ರಹ್ಮಕುಮಾರಿ ಗಾಯತ್ರಿ ಜೀ ಅವರು ಹೂ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು. ಮಹಿಳಾ ದಿನಾಚರಣೆ ಪ್ರಯುಕ್ತ ಸ್ಫೂರ್ತಿದಾಯಕ ನುಡಿಗಳು ಕಾರ್ಯಕ್ರಮ ನಡೆಯಲಿದೆ.






