ಲೇಖಕ: admin

ನಾಪೋಕ್ಲು ಫೆ.11 :  ಇತಿಹಾಸ ಪ್ರಸಿದ್ಧ ನಾಪೋಕ್ಲು ಸಮೀಪದ ಚೆರಿಯಪರಂಬು ದರ್ಗಾದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಅಬ್ದುಲ್ ರಾಹ್ಮಾನ್ ವಲಿಯುಲ್ಲಾಹಿ ಹಾಗೂ ಅವುಲಿಯಾಗಳ ಉರೂಸ್ ಸಮಾರಂಭಕ್ಕೆ ಗಣ್ಯರು ಚಾಲನೆ ನೀಡಿದರು. ಜುಮಾ ನಮಾಜಿನ ಬಳಿಕ ದಫ್ ಪ್ರದರ್ಶನ ದೊಂದಿಗೆ ದರ್ಗಾಗೆ ತೆರಳಿದ ಬಾಂಧವರು ಮಸೀದಿಯ ಖತೀಬರಾದ ಹಂಝ ರಹ್ಮಾನಿ ಅವರ ನೇತೃತ್ವದಲ್ಲಿ ಮಖಾಂ ಝಿಯಾರತ್ ಹಾಗೂ ವಿಶೇಷ ಪ್ರಾರ್ಥನೆ ನಡೆಯಿತು. ಬಳಿಕ ಚೆರಿಯಪರಂಬು ಮುಹಿಯುದ್ದೀನ್ ಜುಮಾ ಮಸೀದಿಯ ಆಡಳಿತ ಮಂಡಳಿ ಅಧ್ಯಕ್ಷ ಕೆ.ಎಚ್.ಅಹಮದ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಫೆ.14ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಉರೂಸ್ ಕಾರ್ಯಕ್ರಮ ನಡೆಯಲಿದೆ. ಫೆ.13 ಸೋಮವಾರ ಸರ್ವಧರ್ಮ ಸಮ್ಮೇಳನ ನಡೆಯಲಿದ್ದು. ಈ ಕಾರ್ಯಕ್ರಮದಲ್ಲಿ ಧಾರ್ಮಿಕ ಪಂಡಿತರು, ಜನಪ್ರತಿನಿಧಿಗಳು,ಸಮಾಜಸೇವಕರು,ಗಣ್ಯರು ಭಾಗವಹಿಸಲಿದ್ದಾರೆ. ಅದೇ ದಿನ ಸಂಜೆ 4 ಗಂಟೆಗೆ ಮೌಲೂದ್ ಪಾರಾಯಣ ಹಾಗೂ ಸರ್ವಧರ್ಮೀಯರಿಗೆ ಅನ್ನದಾನ ಕಾರ್ಯಕ್ರಮ ನೆರವೇರಲಿದ್ದು, ಭಕ್ತಾಧಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಉರೂಸ್ ಸಮಾರಂಭ ಯಶಸ್ವಿ ಗೊಳಿಸುವಂತೆ ಮನವಿ ಮಾಡಿದರು. ಈ ಸಂದರ್ಭ ಜಮಾಅತ್ ಉಪಾಧ್ಯಕ್ಷ…

Read More

ಮಡಿಕೇರಿ ಫೆ.10 : ಸಂವಿಧಾನದ 8 ನೇ ಶೆಡ್ಯೂಲ್‌ಗೆ ಕೊಡವ ತಕ್ (ಕೊಡವ ಭಾಷೆ) ನ್ನು ಸೇರಿಸಬೇಕೆಂದು ಒತ್ತಾಯಿಸಿ ಅಂತರರಾಷ್ಟ್ರೀಯ ಮಾತೃಭಾಷಾ ದಿನವಾದ ಫೆ.21 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಸತ್ಯಾಗ್ರಹ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಅಂದು ಬೆಳಗ್ಗೆ 10.30 ಗಂಟೆಯಿoದ 11.30 ರವರೆಗೆ ಸತ್ಯಾಗ್ರಹ ನಡೆಯಲಿದ್ದು, ಅತ್ಯಂತ ಸೂಕ್ಷ್ಮ ಜನಾಂಗವಾಗಿರುವ ಕೊಡವರ ಮಾತೃಭಾಷೆ ಕೊಡವ ತಕ್ ಗೆ ಸಂವಿಧಾನದ ಭದ್ರತೆ ನೀಡಬೇಕೆಂದು ಒತ್ತಾಯಿಸಿ ಸರ್ಕಾರದ ಗಮನ ಸೆಳೆಯಲಾಗುವುದೆಂದು ತಿಳಿಸಿದ್ದಾರೆ. ಕೊಡವ ಭಾಷೆಯನ್ನು ಅಧಿಕೃತವೆಂದು ಘೋಷಿಸಿ ಕೊಂಕಣಿ ಭಾಷೆಯ ಮಾದರಿಯಲ್ಲಿ ರಾಜ್ಯದ 3ನೇ ಆಡಳಿತ ಭಾಷೆಯನ್ನಾಗಿ ಮಾಡಬೇಕು. ಸಂವಿಧಾನದ 345, 350, 350 ಎ, 350 ಬಿ ವಿಧಿಯಡಿ 1ನೇ ತರಗತಿಯಿಂದಲೇ ಪಠ್ಯಕ್ರಮದಲ್ಲಿ ಕೊಡವ ತಕ್ ನ್ನು ಕಡ್ಡಾಯಗೊಳಿಸಬೇಕು. ವಿಶ್ವಸಂಸ್ಥೆಯ ಅಧಿಕೃತ ಭಾಷೆ ಎಂದು ಘೋಷಿಸಬೇಕು, ಪ್ರಾಚೀನ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಕೊಡವ ತಕ್ ಅಧ್ಯಯನ ಪೀಠ ಸ್ಥಾಪಿಸಬೇಕು. ರಾಜ್‌ಗೀರ್‌ನ ನಳಂದಾ, ಟೋಕಿಯೊದ…

Read More

ಮಡಿಕೇರಿ ಫೆ.10 : ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಅನುಗುಣವಾಗಿ ಕನಿಷ್ಠ ವೇತನ ನಿಗಧಿ ಮಾಡಬೇಕು ಸೇರಿದಂತೆ ಕಾರ್ಮಿಕರ ವಿವಿಧ ಬೇಡಿಕೆಗಳಿಗೆ ಕರ್ನಾಟಕ ರಾಜ್ಯ ಸರ್ಕಾರ ಮಂಡಿಸುವ ಬಜೆಟ್‌ನಲ್ಲಿ ಆದ್ಯತೆ ನೀಡಬೇಕೆಂದು ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಕೊಡಗು ಜಿಲ್ಲಾ ಸಮಿತಿ ನಗರದಲ್ಲಿ ಪ್ರತಿಭಟನೆ ನಡೆಸಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಸಂಘಟನೆಯ ಪ್ರಮುಖರು ಹಾಗೂ ಕಾರ್ಯಕರ್ತರು, ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಸಿಐಟಿಯು ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಮಾತನಾಡಿ, ಸಂಪತ್ತನ್ನು ಸೃಷ್ಟಿಸುವ ಭೌತಿಕ-ದೈಹಿಕ ಶ್ರಮಿಕರು ಬಂಡವಾಳಗಾರರ ಪರವಾಗಿ ರೂಪಿತವಾದ ನೀತಿಗಳಿಂದ ಹಲವು ರೀತಿಯಲ್ಲಿ ಸಂಕಷ್ಟಕ್ಕೊಳಗಾಗಿದ್ದಾರೆ. ಕೆಲಸದ ಭದ್ರತೆಗಿಂತ ಉದ್ದಿಮೆಗಳ ಭದ್ರತೆ ಆದ್ಯತೆಯಾಗಿದೆ. ಉದ್ಯೋಗಗಳಿಗೆ ದೀರ್ಘಾವಧಿಯ ಭದ್ರತೆ ಇಲ್ಲದಂತಾಗಿದೆ. ಮುಷ್ಕರದ ಹಕ್ಕು ಮತ್ತು ಸಾಮೂಹಿಕ ಚೌಕಾಸಿಯ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ ಎಂದು ಆರೋಪಿಸಿದರು. ::: ಬೇಡಿಕೆಗಳು ::: ಎಲ್ಲಾ ರೀತಿಯ ಶ್ರಮಿಕ ಜೀವಿಗಳ ಕನಿಷ್ಠ ವೇತನವನ್ನು ಬೆಲೆಯೇರಿಕೆಯ ಆಧಾರದಲ್ಲಿ 31 ಸಾವಿರ ರೂ.ಗಳೆಂದು ನಿಗಧಿ ಮಾಡಬೇಕು. ಕೇಂದ್ರದ…

Read More

ಮಡಿಕೇರಿ ಫೆ.10 : ಅಹ್ಮದಿಯಾ ಮುಸ್ಲಿಂ ಜಮಾಅತ್ ವತಿಯಿಂದ “3ನೇ ಮಹಾಯುದ್ಧವನ್ನು ನಿಲ್ಲಿಸಿ” ಎಂಬ ವಿಷಯದಡಿ ಭಾರತದ ವಿವಿಧೆಡೆ ಶಾಂತಿಯುತ ಅಭಿಯಾನ ನಡೆಯುತ್ತಿದ್ದು, ಇದರ ಭಾಗವಾಗಿ ಮಡಿಕೇರಿ ನಗರದಲ್ಲೂ ಜಾಗೃತಿ ಕಾರ್ಯಕ್ರಮ ಫೆ.11 ರಂದು ನಡೆಯಲಿದೆ ಎಂದು ಸಂಘಟನೆಯ ಮಡಿಕೇರಿಯ ಅಧ್ಯಕ್ಷ ಜಿ.ಎಂ.ಮೊಹಮ್ಮದ್ ಷರೀಫ್ ತಿಳಿಸಿದ್ದಾರೆ. ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ವಿಶ್ವದ ಶಾಂತಿ ಮತ್ತು ಭದ್ರತೆಗೆ ಆದ್ಯತೆ ನೀಡುವ ಅಂಶಗಳನ್ನು ಪ್ರಸ್ತಾಪಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. 20ನೇ ಶತಮಾನದಲ್ಲಿ ಘಟಿಸಿದ ಎರಡು ವಿನಾಶಕಾರಿ ವಿಶ್ವ ಯುದ್ಧಗಳಿಂದ ಪಾಠಗಳನ್ನು ಕಲಿಯಬೇಕು ಎಂದು ಅಹ್ಮದಿಯಾ ಮುಸ್ಲಿಂ ಜಮಾಅತಿನ ಜಾಗತಿಕ ನೇತಾರ ಹಝ್‍ರತ್ ಮಿರ್ಝಾ ಮಸ್‍ರೂರ್ ಅಹ್ಮದ್ ಸಾಹಿಬ್ ಹಲವು ವರ್ಷಗಳಿಂದ ಲೋಕದ ಪ್ರಮುಖ ರಾಷ್ಟ್ರಗಳಿಗೆ ಮುನ್ನೆಚ್ಚರಿಕೆ ನೀಡುತ್ತಾ ಬಂದಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಲಿದೆ ಎಂದು ಹೇಳಿದ್ದಾರೆ.

Read More

ಮಡಿಕೇರಿ ಫೆ.10 : ಅಬ್ದುಲ್ ಕಲಾಂ ಆಟ್ರ್ಸ್ ಹಾಗೂ ಸ್ಫೋಟ್ರ್ಸ್ ಅಸೋಸಿಯೇಷನ್ ವತಿಯಿಂದ ಫೆ.18 ಮತ್ತು 19 ರಂದು ಐಪಿಎಲ್ ಮಾದರಿಯಲ್ಲಿ ಅಯ್ಯಂಗೇರಿ ಕ್ರಿಕೆಟ್ ಪ್ರೀಮಿಯರ್ ಲೀಗ್ ನಡೆಯಲಿದೆ ಎಂದು ಅಯ್ಯಂಗೇರಿ ಗ್ರಾ.ಪಂ ಸದಸ್ಯ ಪಿ.ಎಂ.ಅಬ್ದುಲ್ ರಾಶೀದ್ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯ್ಯಂಗೇರಿ, ಸಣ್ಣ ಪುಲಿಕೋಟ್, ದೊಡ್ಡಪುಲಿಕೋಟ್, ಗೊಲ್ಲಕೇರಿ ವ್ಯಾಪ್ತಿಯ ಗ್ರಾಮಸ್ಥರನ್ನು ಒಗ್ಗೂಡಿಸುವ ಸಲುವಾಗಿ ಕ್ರಿಕೆಟ್ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು. ಫೆ.18 ರಂದು ಬೆಳಗ್ಗೆ 9 ಗಂಟೆಗೆ ಅಯ್ಯಂಗೇರಿಯ ಕೊಲೊಂಬೊ ಮೈದಾನದಲ್ಲಿ ಪಂದ್ಯಾವಳಿಗೆ ಚಾಲನೆ ದೊರೆಯಲಿದ್ದು, ಕಾರ್ಯಕ್ರಮಕ್ಕೆ ಜಿಲ್ಲೆ ಮತ್ತು ರಾಜ್ಯದ ನಾಯಕರು ಪಾಲ್ಗೊಳ್ಳಲಿದ್ದು, 8 ತಂಡಗಳು ಪ್ರಶಸ್ತಿಗಾಗಿ ಹಣಾಹಣಿ ನಡೆಸಲಿದೆ. ಒಟ್ಟು 130 ಆಟಗಾರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ವಿಜೇತ ತಂಡಕ್ಕೆ ರೂ.33,333, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ 16,666 ನಗದು ಹಾಗೂ ಆಕರ್ಷಕ ಟ್ರೋಫಿ ಹಾಗೂ ವಿವಿಧ ವಿಭಾಗದ ವೈಯಕ್ತಿಕ ಬಹುಮಾನ ನೀಡಲಾಗುವುದು. ಅಲ್ಲದೆ ಕಾರ್ಯಕ್ರಮದ ಪ್ರಯುಕ್ತ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು…

Read More

ಮಡಿಕೇರಿ ಫೆ.10 : ಹಾಕತ್ತೂರು ಯುವ ಸ್ಪಂದನ ಯೂತ್ ಫೌಂಡೇಶನ್ ವತಿಯಿಂದ ಫೆ.25, 26 ಹಾಗೂ 27 ರಂದು 3ನೇ ವರ್ಷದ ಸೂಪರ್ ಎಯ್ಟ್ (8 ಜನರ ತಂಡ) ಮುಕ್ತ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ ಎಂದು ಪೌಂಡೇಶನ್‍ನ ಅಧ್ಯಕ್ಷ ಕೆ.ಎಂ.ಶಿವರಾಜ್ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಕತ್ತೂರು ಮೂರ್ನಾಡು ಮುಖ್ಯರಸ್ತೆ ಬಳಿಯ ಮುತ್ತಾರ್ಮುಡಿ ವಿಜಯಾನಂದ ಅವರ ಗದ್ದೆಯಲ್ಲಿ ಪಂದ್ಯಾವಳಿ ನಡೆಯಲಿದ್ದು, ಸುಮಾರು 60ಕ್ಕೂ ಅಧಿಕ ತಂಡಗಳ ಭಾಗವಹಿಸುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು. ವಿಜೇತ ತಂಡಕ್ಕೆ ಪ್ರಥಮ ಬಹುಮಾನ 33,333 ನಗದು, ಆಕರ್ಷಣೆ ಟ್ರೋಫಿ, ದ್ವಿತೀಯ ಬಹುಮಾನ 16666 ನಗದು, ಅಕರ್ಷಕ ಟ್ರೋಫಿ, ಸೆಮಿಫೈನಲ್ ಪ್ರವೇಶಿಸುವ ಉಳಿದ ಎರಡು ತಂಡಗಳಿಗೂ ಅಕರ್ಷಕ ಟ್ರೋಫಿ ನೀಡಿ ಗೌರವಿಸಲಾಗುವುದು. ಜತೆಗೆ ಮ್ಯಾನ್ ಆಫ್ ದಿ ಮ್ಯಾಚ್, ಮ್ಯಾನ್ ಆಫ್ ದಿ ಸೀರಿಸ್, ಉತ್ತಮ ಬ್ಯಾಟ್ಸ್ ಮ್ಯಾನ್, ಉತ್ತರು ಬೌಲರ್ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು. ಮೈದಾನ ಶುಲ್ಕ ರೂ.2500…

Read More

ಮಡಿಕೇರಿ ಫೆ.10 : ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಟಿ.ಜಾನ್ ಅವರ ನಿಧನಕ್ಕೆ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಸಂತಾಪ ಸೂಚಿಸಿದೆ. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಂತಾಪ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಕ್ಷದ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್, ಹಿರಿಯ ಕಾಂಗ್ರೆಸ್ಸಿಗ ಟಿ.ಜಾನ್ ಅವರ ಗುಣಗಾನ ಮಾಡಿದರು. ಕೊಡುಗೈ ದಾನಿಯೂ ಆಗಿದ್ದ ಅವರು ಸಾಮಾಜಿಕ ಕಳಕಳಿಯೊಂದಿಗೆ ಯಶಸ್ವೀ ರಾಜಕಾರಣಿ ಎನಿಸಿಕೊಂಡಿದ್ದರು. ಅವರ ಅಗಲಿಕೆ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ ಕಾಂಗ್ರೆಸ್ ಗಾಗಿ ಶ್ರಮಿಸಿದ ನಿಷ್ಠಾವಂತ ನಾಯಕ ಟಿ.ಜಾನ್ ಅವರನ್ನು ಕಳೆದುಕೊಂಡು ಪಕ್ಷ ಬಡವಾಗಿದೆ. ಯುವ ಕಾರ್ಯಕರ್ತರಿಗೆ ಮಾರ್ಗದರ್ಶಕರಾಗಿದ್ದ ಅವರು ಸದಾ ನಮ್ಮ ನೆನಪಿನಲ್ಲಿ ಉಳಿಯುತ್ತಾರೆ ಎಂದರು. ಕೆಪಿಸಿಸಿ ಪದಾಧಿಕಾರಿಗಳಾದ ಕೆ.ಪಿ.ಚಂದ್ರಕಲಾ, ಸಿ.ಎಸ್.ಅರುಣ್ ಮಾಚಯ್ಯ, ಎಚ್.ಎಸ್.ಚಂದ್ರಮೌಳಿ, ಎ.ಎಸ್.ಪೆÇನ್ನಣ್ಣ, ಮೆರೋಜ್ ಖಾನ್, ಸುಮಾ ವಸಂತ್, ಮಿಟ್ಟು ಚಂಗಪ್ಪ, ವೀಣಾ ಅಚ್ಚಯ್ಯ, ಎಂ.ಸಿ.ನಾಣಯ್ಯ,…

Read More

ಶನಿವಾರಸಂತೆ ಫೆ.10 : ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಾಧ್ಯಮ ಕ್ಷೇತ್ರವು ಒಂದಾಗಿದ್ದು, ವಿದ್ಯಾವಂತರಿಗೆ ಉದ್ಯೋಗವಕಾಶಗಳಿವೆ ಎಂದು ಆಲೂರು ಸಿದ್ದಾಪುರ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಎ.ಎಸ್.ಶ್ರುತಿ ಅಭಿಪ್ರಾಯಪಟ್ಟರು. ಶನಿವಾರಸಂತೆ ಪ್ರೌಢಶಾಲೆಯ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ಪತ್ರಿಕೆ ಮತ್ತು ಸಮೂಹ ಮಾಧ್ಯಮಗಳ ಕುರಿತು ಹಮ್ಮಿಕೊಂಡಿದ್ದ ಮಾಹಿತಿ ಅರಿವು ಕಾರ್ಯಕ್ರಮದಲ್ಲಿ   ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳು ನಾಲ್ಕನೆ ಅಂಗವಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಮೂಲಕ ಸಮಾಜವನ್ನು ತಿದ್ದುವ ಕಾರ್ಯಮಾಡುತ್ತಿದೆ ಎಂದರು.  ವಿದ್ಯಾರ್ಥಿಗಳಿಗೆ ಪತ್ರಿಕೆ, ಮಾಧ್ಯಮಗಳ ಬಗ್ಗೆ ಅರಿವಿನ ಅಗತ್ಯ ಇದೆ. ಈ ಮೂಲಕ ವಿದ್ಯಾರ್ಥಿಗಳು ಪತ್ರಿಕೋದ್ಯಮ ಕ್ಷೇತ್ರದ ಬಗ್ಗೆ ಆಸಕ್ತಿವಹಿಸುವಂತೆ ಸಲಹೆ ನೀಡಿದರು. ಶಾಲೆಯ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಯೋಜನಾಧಿಕಾರಿ ಧರ್ಮಪ್ಪ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ವತಿಯಿಂದ ಹಲವಾರು ಮಾಹಿತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಇತರೆ ವಿಷಯಗಳ ಬಗ್ಗೆ ಅರಿವು ಮೂಡುತ್ತದೆ ಎಂದ ಅವರು ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮ ಬಗ್ಗೆ ಆಸಕ್ತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ…

Read More

ಮಡಿಕೇರಿ ಫೆ.10 :  ಗೋವಾದ ಕೇಂದ್ರೀಯ ಕರಾವಳಿ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಕರ್ನಾಟಕ, ಕೇರಳ, ಮಹಾರಾಷ್ಟ್ರ ರಾಜ್ಯಗಳ ಆಕಾಶವಾಣಿ ಮತ್ತು ದೂರದರ್ಶನ ಕೃಷಿ ಕಾರ್ಯಕ್ರಮ ಹಾಗೂ ಅಧಿಕಾರಿಗಳ  ಕಾರ್ಯಾಗಾರ ನಡೆಯಿತು. ಕಾರ್ಯಕ್ರಮದಲ್ಲಿ ಮಡಿಕೇರಿ ಆಕಾಶವಾಣಿಯಲ್ಲಿ  ಪ್ರತೀ ದಿನ ಸಂಜೆ 6.50 ಕ್ಕೆ ಬಿತ್ತರಿಸುತ್ತಿರುವ ಕಿಸಾನ್ ವಾಣಿ ಕಾರ್ಯಕ್ರಮಗಳನ್ನು ಪರಿಚಯಿಸಿ, ಕೃಷಿ ಗೀತೆಗಳನ್ನು ಅಧರಿಸಿದ ಕೃಷಿ ಕಳಸದ ಬಗ್ಗೆ ಮಾಹಿತಿ ನೀಡಲಾಯಿತು.  ಇದು ದೆಹಲಿಯಿಂದ ಆಗಮಿಸಿದ್ದ ಆಕಾಶವಾಣಿಯ ಹಾಗೂ ಕೃಷಿ ಮತ್ತು ರೈತ ಕಲ್ಯಾಣ ಮಂತ್ರಾಲಯದ ಹಿರಿಯ ಅಧಿಕಾರಿಗಳ ಮೆಚ್ಚುಗೆಯನ್ನು ಗಳಿಸಿತು. ಮಡಿಕೇರಿ ಆಕಾಶವಾಣಿಯಲ್ಲಿ ಕೃಷಿ ಕುರಿತು ತಯಾರಿಸಿರುವ 50 ಕೃಷಿ ಗೀತೆಗಳ ಬಗ್ಗೆಯೂ ಉಲ್ಲೇಖ ಮಾಡಲಾಯಿತು.  ಅಧಿಕಾರಿಗಳು  ಈ ಪ್ರಯತ್ನ  ಉಪಯುಕ್ತವಾಗಿದ್ದು, ಪರಿಣಾಮಕಾರಿಯಾಗಿದೆ ಎಂದು ಒಕ್ಕೊರಳಿಂದ ಹೇಳಿದರು. ಅಲ್ಲದೆ ಹಾಡುಗಳ ಮೂಲಕ ಕೃಷಿ ಮಾಹಿತಿ ತಿಳಿಸುವುದು ಸೂಕ್ತ  ಎಂದವರು ಹೇಳಿದರು. ಮಡಿಕೇರಿ ಆಕಾಶವಾಣಿಯಿಂದ ಮಾಡುತ್ತಿರುವ ಕೃಷಿ ರಸ ಪ್ರಶ್ನೆಗಳ ನೇರ ಪ್ರಸಾರದ ಕೃಷಿ ಸಿರಿ, ನೇರ ಫೋನ್ ಇನ್, ಇತ್ಯಾದಿ ಕಾರ್ಯಕ್ರಮಗಳ ಬಗ್ಗೆಯೂ…

Read More

ಶನಿವಾರಸಂತೆ ಫೆ.10 :  ಸಮೀಪದ ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರದ್ಧಾಭಕ್ತಿಯಿಂದ ಶಾರದ ಪೂಜೆ ನೆರವೇರಿತು. ವಿದ್ಯಾರ್ಥಿಗಳೇ ಮಂತ್ರ ಪಠಿಸಿ ದೇವಿಗೆ ಪೂಜೆ ಸಲ್ಲಿಸಿದರು. ಸ್ಥಳೀಯ ಆರೋಗ್ಯ ವೈದ್ಯಾಧಿಕಾರಿಗಳಾದ ಸುಪರ್ಣಾ ಕೃಷ್ಣಾನಂದರವರು ಕಾರ್ಯಕ್ರಮಕ್ಕೆ ಭೇಟಿ ನೀಡಿ ಶಾರದ ಪೂಜೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಿದರು. ಮುಖ್ಯ ಶಿಕ್ಷಕರಾದ ಸಿ.ಎಸ್.ಸತೀಶ್,  ಅತಿಥಿ ಶಿಕ್ಷಕಿ ಎಮ್.ಆರ್. ನವ್ಯ, ಶಾಲಾ ಎಸ್. ಡಿ .ಎಂ .ಸಿ ಅಧ್ಯಕ್ಷೆ ಬಿಂದು ಸುರೇಶ್, ದ್ರಾಕ್ಷಾಯಿಣಿ ಉಪಸ್ಥಿತರಿದ್ದರು. ವರದಿ : ದಿನೇಶ್ ಮಾಲಂಬಿ (ಶನಿವಾರಸಂತೆ) 

Read More