ಲೇಖಕ: admin

ಮಡಿಕೇರಿ ಜ.24 : ಗಣರಾಜ್ಯೋತ್ಸವವನ್ನು ಸಂಭ್ರಮದಿAದ ಆಚರಿಸುವ ಉದ್ದೇಶದಿಂದ ಮಡಿಕೇರಿ ನಗರ ಆಟೋ ಮಾಲೀಕ, ಚಾಲಕರ ಸಂಘದ ವತಿಯಿಂದ ವಿವಿಧ ಕ್ರೀಡಾಕೂಟ ಮತ್ತು ಡ್ಯಾನ್ಸ್ ಮೇಳವನ್ನು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎ.ಅರುಣ್‌ಕುಮಾರ್ ಹಾಗೂ ಪ್ರಧಾನ ಕಾರ್ಯದರ್ಶಿ ಬಾರನ ದಿನೇಶ್ ತಿಳಿಸಿದ್ದಾರೆ. ಜ.26 ರಂದು ನಗರದ ಗಾಂಧಿ ಮೈದಾನದಲ್ಲಿ ಆಟೋ ಚಾಲಕರು ಹಾಗೂ ಸಾರ್ವಜನಿಕರಿಗಾಗಿ ಕ್ರೀಡಾಕೂಟ ಮತ್ತು ಡ್ಯಾನ್ಸ್ ಮೇಳವನ್ನು ಆಯೋಜಿಸಲಾಗಿದೆ. ಕ್ರೀಡಾಕೂಟ ಬೆಳಗ್ಗೆ 9 ಗಂಟೆಗೆ ಮತ್ತು 25 ಕ್ಕೂ ಹೆಚ್ಚು ನೃತ್ಯ ತಂಡಗಳು ಭಾಗವಹಿಸುವ ಡ್ಯಾನ್ಸ್ ಮೇಳ ಸಂಜೆ 6 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಅಂದು ಬೆಳಗ್ಗೆ 8:30 ಗಂಟೆಗೆ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಆಟೋ ನಿಲ್ದಾಣದಲ್ಲಿ ಧ್ವಜಾರೋಹಣ ನೆರವೇರಿಸಲಾಗುವುದು. ನಂತರ ಬನ್ನಿ ಮಂಟಪದಿoದ ಗಾಂಧಿ ಮೈದಾನದವರೆಗೆ ಆಟೋಗಳ ಮೆರವಣಿಗೆ ನಡೆಯಲಿದೆ. ::: ಸನ್ಮಾನ ::: 10ನೇ ತರಗತಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಆಟೋ ಚಾಲಕರ ಮಕ್ಕಳನ್ನು ಗುರುತಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುವುದು.…

Read More

ಸೋಮವಾರಪೇಟೆ ಜ.24 : ಸಮೀಪದ ಯಡೂರು ಬಿ.ಟಿ.ಸಿ.ಜಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಭೆಯನ್ನು ಜನವರಿ 30 ಸೋಮವಾರ ಬೆಳಗ್ಗೆ 10 ಗಂಟೆಯಿಂದ ಕಾಲೇಜಿ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಾಸಕ ಎಂಪಿಅಪ್ಪಚ್ಚುರಂಜನ್ ಅವರ ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆಯಲಾಗಿದೆ. ಅಂದು 11 ಗಂಟೆಗೆ ವಿದ್ಯಾರ್ಥಿಗಳ ಪೋಷಕರ ಸಭೆಯನ್ನು ಸಹ ಹಮ್ಮಿಕೊಳ್ಳಲಾಗಿದೆಯೆಂದು ಕಾಲೇಜಿನ ಪ್ರಾಂಶುಪಾಲ ಹೆಚ್.ಎನ್.ರಾಜು ಅವರು ತಿಳಿಸಿದ್ದಾರೆ. ಹಳೆಯ ವಿದ್ಯಾರ್ಥಿಗಳ ಸಂಘದ ಮಾಹಿತಿಗಾಗಿ ಎಸ್.ಮಹೇಶ್ (ಕಾಲೇಜಿ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರು) 9481059223, ಹಳೆಯ ವಿದ್ರ‍್ಥಿಗಳ ಸಭೆಯ ಉಸ್ತುವಾರಿ ಭಾನುಪ್ರಕಾಶ್ – 9449226443 ಸುನಿಲ್ ಎಂ.ಎಸ್. ಇತಿಹಾಸ ಉಪನ್ಯಾಸಕರು – 8904040640 ಅವರನ್ನು ಸಂಪರ್ಕಿಸುವಂತೆ ಪತ್ರಿಕಾ ಹೇಳಿಕೆ ನೀಡಿದ್ದಾರೆ.

Read More

ಮಡಿಕೇರಿ ಜ.24 : ವ್ಯಕ್ತಿಯೊಬ್ಬರಿಂದ 2 ಸಾವಿರ ರೂ. ನಗದು ಮತ್ತು 1 ಬಾಟಲಿ ಮದ್ಯ ಸ್ವೀಕರಿಸುತ್ತಿದ್ದ ಸಂದರ್ಭ ಮಡಿಕೇರಿ ಸರ್ವೇ ಇಲಾಖೆ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರದ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸರ್ವೇಯರ್ ಆಗಿರುವ ಮಾದಪ್ಪ ಎಂಬುವವರೇ ವಿಚಾರಣೆಗೊಳಪಟ್ಟಿರುವ ಆರೋಪಿ. 2 ಸಾವಿರ ನಗದು ಹಾಗೂ 1 ಮದ್ಯದ ಬಾಟಲಿಯನ್ನು ವಶಕ್ಕೆ ಪಡೆಯಲಾಗಿದ್ದು ತನಿಖೆ ಮುಂದುವರೆಸಲಾಗಿದೆ. ಚೇರAಬಾಣೆ ಬಾಡಗ ಗ್ರಾಮದ ವ್ಯಕ್ತಿಯೊಬ್ಬರು 2 ಸರ್ವೇ ನಂಬರ್‌ಗಳಲ್ಲಿ ಕಾಫಿ ತೋಟ ಹೊಂದಿದ್ದು, ಮನೆ ನಿರ್ಮಿಸುವ ಸಲುವಾಗಿ ನಿವೇಶನ ಮಾಡಲು ಮುಂದಾಗಿದ್ದರು. ಈ ಸ್ಥಳದಲ್ಲಿ 3 ಬೀಟೆ ಮರಗಳಿದ್ದು, ಅದನ್ನು ತೆರವು ಮಾಡುವುದು ಮತ್ತು ನಿವೇಶನವನ್ನಾಗಿ ಪರಿವರ್ತಿಸಲು ಸ್ಥಳದ ಸರ್ವೇ ನಡೆಸಬೇಕಿತ್ತು. ಈ ಹಿನ್ನೆಲೆಯಲ್ಲಿ ಕಳೆದ 6 ತಿಂಗಳ ಹಿಂದೆ ಮಡಿಕೇರಿ ಸರ್ವೇ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಮಾತ್ರವಲ್ಲದೇ ಸರ್ವೇಗಾಗಿ ಸರಕಾರ ನಿಗದಿಪಡಿಸಿದ್ದ ಶುಲ್ಕವನ್ನೂ ಪಾವತಿ ಮಾಡಿದ್ದರು. ಈ ವೇಳೆ ಸರ್ವೇಯರ್ ಮಾದಪ್ಪ ಅವರು ಹಣಕ್ಕೆ ಬೇಡಿಕೆ…

Read More

ಮಡಿಕೇರಿ ಜ.24 : ಪಕ್ಷದ ಮುಖಂಡರಾದ ನಾಪಂಡ ಮುತ್ತಪ್ಪ ಅವರ ವಿರುದ್ಧ ಕ್ರಮಕೈಗೊಳ್ಳುವುದು ರಾಜಾಧ್ಯಕ್ಷರಿಗೆ ಸಂಬಂಧಪಟ್ಟ ವಿಷಯ. ಪಕ್ಷದ ಅಂತರಿಕ ವಿಷಯವನ್ನು ಪಕ್ಷದ ಮುಖಂಡರ ಸಮ್ಮುಖದಲ್ಲಿ ಚರ್ಚೆಯಾಗಬೇಕು. ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಅವರು ವಿಷಯವನ್ನು ಮಾಧ್ಯಮದವರ ಮುಂದೆ ತರುವುದು ಸರಿಯಾದ ಕ್ರಮವಲ್ಲ, ಈ ಬಗ್ಗೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಜೆಡಿಎಸ್ ಮುಖಂಡ ಪ್ರಜ್ವಲ್ ರೇವಣ್ಣ ಸ್ಪಷ್ಟಪಡಿಸಿದ್ದಾರೆ. ಸೋಮವಾರಪೇಟೆಯಲ್ಲಿ ಮಾತನಾಡಿದ  ಅವರು ಮಾಜಿ ಸಚಿವ ಬಿ.ಎ.ಜೀವಿಜಯ ಅವರು, ಜೆಡಿಎಸ್ ಬಿಟ್ಟಿರುವುದರಿಂದ ಯಾವುದೇ ಸಮಸ್ಯೆಯಿಲ್ಲ. ಬಸ್‌ನಿಂದ ಡ್ರೈವರ್ ಇಳಿದಿದ್ದಾರೆ. ಪ್ರಯಾಣಿಕರು ಬಸ್‌ನಲ್ಲೇ ಇದ್ದಾರೆ. ದೇವೆಗೌಡರು ಜೀವಿಜಯ ಅವರ ಮನೆಗೆ ಹೋಗಿ ಬಿ ಫಾರಂ ಕೊಡುತ್ತಿದ್ದರು. ಈಗ ಜೀವಿಜಯ ಟಿಕೇಟ್‌ಗಾಗಿ ಮನೆ ಮನೆ ಬಾಗಿಲು ಬಡಿಯುವಂತಾಗಿದೆ ಎಂದು ಹೇಳಿದರು.

Read More

ಸೋಮವಾರಪೇಟೆ ಜ.24 : ಸಮೀಪದ ಯಡೂರು ಬಿ.ಟಿ.ಸಿ.ಜಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾಗಿ ಎಸ್. ಮಹೇಶ್‌ ಅವರು ಅವರೋಧವಾಗಿ ಆಯ್ಕೆಯಾಗಿದ್ದಾರೆ. ಕಾಲೇಜಿನ ಸಭಾಂಗಣದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕಾರ್ಯಾಧ್ಯಕ್ಷರಾಗಿ ಪ್ರಾಂಶುಪಾಲರಾದ ಹೆಚ್.ಎನ್.ರಾಜು ಅವರನ್ನು ನೇಮಕ ಮಾಡಲಾಯಿತು. ಸದಸ್ಯರುಗಳಾಗಿ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ,  ಎಂ.ಪಿ.ಗೋಪಾಲ್ ತಾಕೇರಿ, ಜೆ.ಸಿ.ಶೇಖರ್ ಸೋಮವಾರಪೇಟೆ, ತಂಗಮ್ಮ ಹಾನಗಲ್, ಧರ್ಮಪ್ಪ ಹರಗ, ಮನುಕುಮಾರ್ ಚೌಡ್ಲು, ಭಾನುಪ್ರಕಾಶ್, ಯಡೂರು ಪ್ರಸನ್ನ ನಾಯರ್ ಸೋಮವಾರಪೇಟೆ, ಜೀವನ್ ನೇಗಳ್ಳಿ ಸೋಮವಾರಪೇಟೆ, ಶರತ್ ಸೋಮವಾರಪೇಟೆ, ಲಕ್ಷ್ಮಿ ಗ್ರಾ.ಪಂ ಅಧ್ಯಕ್ಷರು, ಪ್ರವೀಣ್  ಸದಸ್ಯರು, ಪ್ರಶಾಂತ್, ದಿವ್ಯಮೋಹನ್, ಪಿ.ಡಿ.ಪ್ರಕಾಶ್, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಆಯ್ಕೆಯಾದರು. ಕಾಲೇಜಿನ ಸರ್ವತೋಮುಖ ಅಬಿವೃದ್ಧಿಗೆ ಸಂಬಂಧಿಸಿದಂತೆ ಹಲವು ವಿಷಯಗಳನ್ನು ಚರ್ಚಿಸಲಾಯಿತು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಹೊಸದಾಗಿ ಬಿ.ಸಿ.ಎ., ಹೋಟೆಲ್ ಮ್ಯಾನೇಜ್‌ಮೆಂಟ್ ಹಾಗೂ ಟೂರಿಸಂ ವಿಷಯಗಳಿಗೆ ಸಂಬಂಧಿಸಿದಂತೆ ಹೊಸ ಕೋರ್ಸ್ ಗಳನ್ನು ಮುಂದಿನ ಶೈಕ್ಷಣಿಕ…

Read More

ಸೋಮವಾರಪೇಟೆ ಜ.24 : ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.  ಕಾಂಗ್ರೆಸ್‌ನಲ್ಲಿ ಕಮಲ ಕಾಂಗ್ರೆಸಿಗರದ್ದೇ ಕಾರುಬಾರು, ಮುಸ್ಲಿಂ ಸಮುದಾಯ ಕಾಂಗ್ರೆಸ್‌ಗೆ ಮತ ನೀಡಿದರೆ ಕೋಮುವಾದಿ ಬಿಜೆಪಿಗೆ ಮತ ನೀಡಿದಂತೆ ಎಂದು ಹಾಸನ ಲೋಕಸಭಾ ಕ್ಷೇತ್ರದ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಪ್ರಜ್ವಲ್ ರೇವಣ್ಣ ಹೇಳಿದರು. ಜೆಡಿಎಸ್ ಕ್ಷೇತ್ರ ಸಮಿತಿ ವತಿಯಿಂದ ಪಟ್ಟಣದ ಒಕ್ಕಲಿಗರ ಸಮುದಾಯಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಬಿಜೆಪಿ ಕೋಮುವಾದಿಗಳು ಬುರ್ಕಾ ಧರಿಸಿದ ಮುಸ್ಲಿಂ ಹೆಣ್ಣುಮಕ್ಕಳನ್ನು ಅಟ್ಟಿಸಿಕೊಂಡು ಹೋದ ಸಂದರ್ಭದಲ್ಲೂ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಬಾಯಿಗೆ ಬೀಗ ಹಾಕಿಕೊಂಡಿದ್ದರು. ಯಾರು ಮಾತನಾಡದಂತೆ, ಹೇಳಿಕೆ ಕೊಡದಂತೆ ಕಟ್ಟಾಪ್ಪಣೆ ಕೊಟ್ಟಿದರು. ಆದರೆ ಎಚ್.ಡಿ.ಕುಮಾರಸ್ವಾಮಿ, ಮುಸ್ಲಿಂ ಮಹಿಳೆಯರ ಪರವಾಗಿ ಹೇಳಿಕೆ ನೀಡಿ ಅವರಿಗೆ ಮಾನಸಿಕ ಧೈರ್ಯ ತುಂಬಿದರು ಎಂದರು. ರಾಜ್ಯದಲ್ಲಿ ಜಾತ್ಯಾತೀತ ಜನತಾದಳ ಅಧಿಕಾರಕ್ಕೆ ಬಂದು, ಮುಂದಿನ ಮೂರು ತಿಂಗಳಲ್ಲಿ ರಾಜ್ಯದ ರೈತರು ಮತ್ತು ಸ್ತ್ರೀಶಕ್ತಿ ಸಂಘಗಳ ಸದಸ್ಯರ ಸಂಪೂರ್ಣ ಸಾಲವನ್ನು ಮನ್ನಾ ಮಾಡಲು ಎಚ್.ಡಿ.ಕುಮಾರಸ್ವಾಮಿಯವರು ಮಾತುಕೊಟ್ಟಿದ್ದಾರೆ.…

Read More

ಮಡಿಕೇರಿ ಜ.24 : ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾದ ಮಡಿಕೇರಿ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಎ.ಎ.ಅಯ್ಯಣ್ಣ ಅಧಿಕಾರ ಸ್ವೀಕರಿಸಿದರು. ನಗರದಲ್ಲಿ ನಡೆದ ಸಂಘದ ಸಭೆಯಲ್ಲಿ ಉಪಾಧ್ಯಕ್ಷರಾಗಿ ಕೆ.ಬಿ.ವಿಜಯಕುಮಾರ್ ಹಾಗೂ ಪಿ.ಕೆ.ನಾಗೇಶ್, ಕಾರ್ಯಾಧ್ಯಕ್ಷರಾಗಿ ಬಿ.ಎಂ.ರಾಜಶೇಖರ್, ಖಜಾಂಚಿಯಾಗಿ ಕೆ.ಎಂ.ರವೀಂದ್ರನ್ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಡಿ.ಪಿ.ದಯಾನಂದ ಅಧಿಕಾರ ವಹಿಸಿಕೊಂಡರು. ಅಧ್ಯಕ್ಷತೆ ವಹಿಸಿ ಮಾತನಾಡಿದ ನೂತನ ಅಧ್ಯಕ್ಷ ಎ.ಎ.ಅಯ್ಯಣ್ಣ, ವಿಶ್ವವ್ಯಾಪಿ ಹೆಸರುವಾಸಿಯಾಗಿರುವ ಸಂಘದ ಮಡಿಕೇರಿ ಘಟಕದ ಅಭ್ಯುದಯಕ್ಕಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು. ತಮಗೆ ಅಧ್ಯಕ್ಷ ಸ್ಥಾನ ನೀಡಿದ ಸರ್ವರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. 2018 ರ ಅತಿವೃಷ್ಟಿಯಿಂದ ಇಲ್ಲಿಯವರೆಗೆ ಚಾರಣ ನಡೆಸಲು ಸಾಧ್ಯವಾಗಿರಲಿಲ್ಲ. ಪ್ರಸ್ತುತ ನರಿಮಲೆ ಮತ್ತು ಪಕ್ಷಿ ಪಾತಾಳಕ್ಕೆ ಚಾರಣ ಆಯೋಜಿಸಲು ಸಭೆ ನಿರ್ಧರಿಸಿತು. ಸಹಕಾರ್ಯದರ್ಶಿ ಎಂ.ಕೆ.ಮನೋಹರ್ ವಂದಿಸಿದರು. ಕಾರ್ಯಕಾರಿ ಸಮಿತಿಯ 9 ಸದಸ್ಯರು ಸೇರಿದಂತೆ ಇತರ ಸದಸ್ಯರು ಉಪಸ್ಥಿತರಿದ್ದರು.

Read More

ಮಡಿಕೇರಿ ಜ.24 : ಮಣ್ಣು ಮತ್ತು ನೀರಿನ ಸಂರಕ್ಷಣೆಯ ಸಂದೇಶ ಸಾರುವ ರೋಟರಿ ಜಿಲ್ಲೆ 3181 ನ ಮಹತ್ವದ ಬೈಕ್ ಜಾಥಾ,  ರೈಡ್ ಫಾರ್ ರೋಟರಿಗೆ ಮಡಿಕೇರಿ ರೋಟರಿ ಕ್ಲಬ್ ವತಿಯಿಂದ ಸಂಭ್ರಮದ ಸ್ವಾಗತ ಕೋರಲಾಯಿತು. ಏಳನೇ ಆವೖತ್ತಿಯ ರೈಡ್ ಫಾರ್ ರೋಟರಿಯಲ್ಲಿ ಈ ವಷ೯ 16 ದೇಶಗಳ 41 ಬೈಕ್ ಸವಾರರು ಪಾಲ್ಗೊಂಡಿದ್ದಾರೆ. ಮಡಿಕೇರಿ ರೋಟರಿ ಸಭಾಂಗಣದಲ್ಲಿ ರೋಟರಿ ಮಾಜಿ ಗವನ೯ರ್ ಡಾ.ರವಿ ಅಪ್ಪಾಜಿ, ರೋಟರಿ ವಲಯ 6 ರ ಸಹಾಯಕ ಗವನ೯ರ್ ರತನ್ ತಮ್ಮಯ್ಯ, ರೋಟರಿ ಅಧ್ಯಕ್ಷ ಕಾಂಡಂಡ   ಕಾಯ೯ಪ್ಪ, ರೋಟರಿ ಜಿಲ್ಲಾ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ.  ಅಂತರರಾಷ್ಟ್ರೀಯ ಸೇನಾ ಸಮಿತಿ ಅಧ್ಯಕ್ಷ  ದೇವಣೀರ ಕಿರಣ್, ಗೀತಾ ಗಿರೀಶ್, ಶರತ್, ಅಮರ್, ಇನ್ನರ್ ವೀಲ್ ಸಂಸ್ಥೆಯ ಮುಂದಿನ ವಷ೯ದ ಜಿಲ್ಲಾಧ್ಯಕ್ಷೆ ಪೂಣಿ೯ಮಾ ರವಿ  ಸೇರಿದಂತೆ ರೋಟರಿ ಪ್ರಮುಖರು ರೈಡ್ ಫಾರ್ ರೋಟರಿ ತಂಡವನ್ನು ಸ್ವಾಗತಿಸಿದರು. ಮಡಿಕೇರಿಯ ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ಕೆಲ…

Read More

ನಾಪೋಕ್ಲು ಜ.24 : ನಾಪೋಕ್ಲುವಿನ ಪ್ರತಿಷ್ಠಿತ ಡೆಕ್ಕನ್ ಯೂತ್ ಕ್ಲಬ್ ವತಿಯಿಂದ ಆಯೋಜಿಸಲಾದ 6ನೇ ವರ್ಷದ ನಾಪೋಕ್ಲು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಎಲ್ ರೈಸರ್ಸ್ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.  ಚೆರಿಯಪರಂಬು ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣರದಲ್ಲಿ ನಡೆದ ಆಕರ್ಷಕ ಫೈನಲ್ ಪಂದ್ಯಾಟದಲ್ಲಿ ಮನ್ಸೂರ್ ನಾಯಕತ್ವದ ರಫಾ ಕ್ರಿಕೇಟರ್ಸ್ ತಂಡವನ್ನು ಮಣಿಸಿ, ನೌಮಾನ್ ನಾಯಕತ್ವದ ಎಲ್ ರೈಸರ್ಸ್ ತಂಡ ನಗದು ಮತ್ತು ಆಕರ್ಷಕ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು .ರಫಾ ಕ್ರಿಕೇಟರ್ಸ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.  ಪಂದ್ಯಾವಳಿಯಲ್ಲಿ ನಾಪೋಕ್ಲುವಿನ ಸುಮಾರು 6 ತಂಡಗಳು ಪಾಲ್ಗೊಂಡಿದ್ದವು.  ಪಂದ್ಯಾವಳಿಯಲ್ಲಿ ಉತ್ತಮ ಬ್ಯಾಟ್ಸ್ ಮೆನ್ ಪ್ರಶಸ್ತಿಯನ್ನು ರಫಾ ಕ್ರಿಕೇಟರ್ಸ್ ತಂಡದ ಖಾದರ್ ಪಡೆದುಕೊಂಡರು. ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಎಲ್ ರೈಸರ್ಸ್ ತಂಡದ ನಾಸಿಫ್ ಪಡೆದುಕೊಂಡರೆ, ಉತ್ತಮ ಬೌಲರ್ ಪ್ರಶಸ್ತಿಯನ್ನು ಎಲ್ ರೈಸರ್ಸ್ ತಂಡದ ನೌಮಾನ್ ಪಡೆದರು.ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಎಲ್ ರೈಸರ್ಸ್ ತಂಡದ ಮನ್ಸೂರ್ ಭಾಜನರಾದರು.  ಪಂದ್ಯಾವಳಿಯ ತೀರ್ಪುಗಾರರಾಗಿ ನೌಶಾದ್ ಹಾಗೂ ಸಿದ್ದೀಕ್ ಕಾರ್ಯನಿರ್ವಹಿಸಿದ್ದರು. ಈ ಸಂದರ್ಭ…

Read More

ಮಡಿಕೇರಿ ಜ.24 : ದಕ್ಷಿಣ ಕೊಡಗಿನಲ್ಲಿ ಹುಲಿ ಉಪಟಳ ಮತ್ತೆ ಮಿತಿ ಮೀರಿದೆ. ಕಳೆದ ಎರಡು ದಿನಗಳಲ್ಲಿ ನಾಲ್ಕು ಜಾನುವಾರುಗಳನ್ನು ಹುಲಿ ಕೊಂದು ಹಾಕಿದೆ. ವಿರಾಜಪೇಟೆ ತಾಲ್ಲೂಕಿನ ಆರ್ಜಿ ಗ್ರಾಮದಲ್ಲಿ ಇಂದು ಹುಲಿ ದಾಳಿ ಮಾಡಿದ್ದು, ಪಿ.ಲವ ಎಂಬುವವರಿಗೆ ಸೇರಿದ ಹಸುವನ್ನು ಬಲಿ ಪಡೆದಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ಪಶುವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ನಿರಂತರ ದಾಳಿ ಮಾಡುತ್ತಿರುವ ಹುಲಿ ಜಾಡನ್ನು ಪತ್ತೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗ್ರಾಮದಲ್ಲಿ ಆತಂಕದ ವಾತಾವರಣವಿದ್ದು, ತಕ್ಷಣ ಹುಲಿಯನ್ನು ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇತ್ತೀಚೆಗಷ್ಟೇ ಬಿಟ್ಟಂಗಾಲ ಸಮೀಪ 2 ನೇ ರುದ್ರಗುಪ್ಪೆ ಗ್ರಾಮದಲ್ಲಿ ಎ.ಧನು ಎಂಬುವವರಿಗೆ ಸೇರಿದ ಮೂರು ಕರುಗಳನ್ನು ಹುಲಿ ಕೊಂದು ಹಾಕಿತ್ತು.

Read More