ಲೇಖಕ: admin

ಮಡಿಕೇರಿ ಜ.27 : ಗಣರಾಜ್ಯೋತ್ಸವ ಪ್ರಯುಕ್ತ ಕೊಡಗು ಜಿಲ್ಲಾ ಎಸ್‍ಕೆಎಸ್‍ಎಸ್‍ಎಫ್ ವತಿಯಿಂದ ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ ಎಂಬ ಘೋಷವಾಕ್ಯದಲ್ಲಿ ಮಾನವ ಸರಪಳಿ ಹಾಗೂ ಸೌಹಾರ್ದಾ ಜಾಥಾ ನಡೆಯಿತು. ನಗರದ ಗಣಪತಿ ಬೀದಿಯ ಬದ್ರಿಯ ಮಸೀದಿಯಿಂದ ಮಹದೇವಪೇಟೆ ಮಾರ್ಗವಾಗಿ, ಜನರಲ್ ತಿಮ್ಮಯ್ಯ ವೃತ್ತದ ತನಕ ಸಾಗಿ ಕಾವೇರಿ ಕಲಾಕ್ಷೇತ್ರದಲ್ಲಿ ಜಾಥಾ ಮುಕ್ತಾಯಗೊಂಡಿತು. ಮೆರವಣಿಗೆಯಲ್ಲಿ ಜಿಲ್ಲೆಯ ವಿವಿಧೆಡೆಯ ಸಂಘಟನೆ ಕಾರ್ಯಕರ್ತರು, ವಿದ್ಯಾರ್ಥಿಗಳು ಕೋಮು ಸಾಮರಸ್ಯ ಮೂಡಿಸುವ ಘೋಷಣೆಗಳನ್ನು ಕೂಗಿ, ಸೌಹಾರ್ದ ರಾಷ್ಟ್ರ ನಿರ್ಮಾಣ ಮಾಡುವ ಸಂದೇಶ ಸಾರುವ ಜೊತೆಗೆ ಉಗ್ರವಾದ, ಕೋಮುಗಲಭೆ ಕೊನೆಗೊಂಡು ಸಹೋದರತ್ವದಿಂದ ಕೂಡಿದ ಭಾರತ ನಿರ್ಮಾಣವಾಗಲಿ ಎಂಬ ಆಶಯ ವ್ಯಕ್ತಪಡಿಸಿದರು. ಜಾಥಕ್ಕೆ ಕ್ರೈಸ್ತಧರ್ಮಗುರು ಫ್ರಾನ್ಸಿಸ್ ಚರಕಲ್, ಜಿಲ್ಲಾ ಉಪಖಾಝಿ ಅಬ್ದುಲ್ಲ ಫೈಝಿ ಪ್ರಾರ್ಥನೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಜಾಥಾ ನಡೆದ ಬಳಿಕ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಸೌಹಾರ್ದ ಸಮ್ಮೇಳನ ನಡೆಯಿತು. ವಕೀಲ ಬಾಲಸುಬ್ರಮಣ್ಯ ಕಂಜರ್ಪಣೆ, ಎಸ್‍ಕೆಎಸ್‍ಎಸ್‍ಎಫ್ ಅಧ್ಯಕ್ಷ ತಮ್ಲಿಕ್ ಧಾರಿಮಿ, ಸಂಚಾಲಕ ಅಬ್ದುಲ್ ಕರೀಂ ಮುಸ್ಲಿಯಾರ್, ಕಾರ್ಯದರ್ಶಿ ಜಂಶೀರ್,…

Read More

ಮಡಿಕೇರಿ ಜ.27 –  ಕಡಗದಾಳು ಸಕಾ೯ರಿ  ಹಿರಿಯ ಪ್ರಾಥಮಿಕ ಶಾಲೆಯ ನಲಿಕಲಿ ವಿಭಾಗದ  1ರಿಂದ 3 ನೇ ತರಗತಿ ವಿದ್ಯಾಥಿ೯ಗಳಿಗೆ  ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯಿಂದ 10 ಕುಚಿ೯ಗಳನ್ನು ಕೊಡುಗೆಯಾಗಿ ನೀಡಲಾಯಿತು. ಶಾಲಾ ಮುಖ್ಯ ಶಿಕ್ಷಕಿ ವತ್ಸಲ, ಇನ್ನರ್ ವೀಲ್ ಅಧ್ಯಕ್ಷೆ ಡಾ.ರೇಣುಕಾ ಸುಧಾಕರ್, ಕಾಯ೯ದಶಿ೯ ಲಲಿತಾ ರಾಘವನ್, ಖಜಾಂಜಿ ರಶ್ಮಿ ಪ್ರವೀಣ್, ಸದಸ್ಯೆಯರಾದ ಉಮಾಗೌರಿ, ಶಮ್ಮಿಪ್ರಭು ಹಾಜರಿದ್ದರು.

Read More

ಮಡಿಕೇರಿ ಜ.27 : ಮಡಿಕೇರಿ ತಾಲ್ಲೂಕು ವ್ಯಾಪ್ತಿಯ ಅಮೃತ ಸರೋವರದ ದಂಡೆ ಮೇಲೆ ಗಣರಾಜೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ನಾಪೋಕ್ಲು, ಕಾಂತೂರು ಮೂರ್ನಾಡು, ಕಡಗದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮೃತ ಸರೋವರ ದಂಡೆ ಮೇಲೆ ಮಾಜಿ ಸೈನಿಕರು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು. ಶ್ರಮದಾನ, ಗಿಡ ನೆಡುವ ಮೂಲಕ ಗಣರಾಜ್ಯೋತ್ಸವವನ್ನು ಅರ್ಥಪೂರ್ಣಗೊಳಿಸಲಾಯಿತು.

Read More

ಚೆಯ್ಯಂಡಾಣೆ ಜ.27 : ಕರಡ  ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 74ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ನರಿಯಂದಡ ಗ್ರಾ.ಪಂ ಸದಸ್ಯೆ ಎಂ.ಬಿ. ನೇತ್ರಾವತಿ ಧ್ವಜಾರೋಹಣ ನೆರವೇರಿಸಿದರು. ವಿದ್ಯಾರ್ಥಿಗಳಿಂದ ಭಾಷಣ, ಹಾಡು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಇದೇ ಸಂದರ್ಭ ಗ್ರಾ.ಪಂ  ವತಿಯಿಂದ ಏರ್ಪಡಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಗ್ರಾ.ಪಂ  ಹಾಗೂ ಸಲಹಾ ಸಮಿತಿಯ ಸದಸ್ಯ ಬೇಪುಡಿಯಂಡ ಬಿದ್ದಪ್ಪ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಿದರು. ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಸದಸ್ಯರು, ಪೋಷಕರು ಇದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರೆ, ಮುಖ್ಯ ಶಿಕ್ಷಕಿ ಲೀಲಾವತಿ  ಸ್ವಾಗತಿಸಿದರು.ಶಿಕ್ಷಕಿ ಬಿ.ಎ.ದಮಯಂತಿ ಸರ್ವರನ್ನು ವಂದಿಸಿದರು. ವರದಿ :  ಅಶ್ರಫ್   

Read More

ಸುoಟಿಕೊಪ್ಪ ಜ.27 : ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 74ನೇ ಗಣರಾಜ್ಯೋತ್ಸವ ಸಂಭ್ರಮದಿoದ ನಡೆಯಿತು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಧ್ವಜಾರೋಹಣ ನೇರವೇರಿಸಿದರು. ಕಾರ್ಯದರ್ಶಿ ಶಶಾಂಕ್, ಗ್ಲೇನ್ ಮೇನೆಜೇಸ್, ಶಾಲಾ ಎಸ್.ಡಿ.ಎಂ.ಸಿ ಪದಾಧಿಕಾರಿಗಳು, ಮುಖ್ಯ ಶಿಕ್ಷಕಿ ವೀರಾ ಡಿಸೋಜ ಈವಾ ಬೆನ್ಸಿಸ್, ಪ್ರೀತಿ ಪಿಂಠೋ, ಆರ್.ಡಿ.ತೋಮಸ್, ಮೇರಿ ತೋಮಸ್, ಅಶ್ವಿತ ಮತ್ತಿತರರು ಇದ್ದರು.

Read More

ನಾಪೋಕ್ಲು ಜ.27 :  ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ 2.76 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾದ ವಿವಿಧ ಶಾಲಾ ಕಟ್ಟಡಗಳನ್ನು ಶಾಲಾ ಶಿಕ್ಷಣ ಸಾಕ್ಷರತಾ ಮತ್ತು ಸಕಾಲ ಖಾತೆ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ  ಬಿ.ಸಿ ನಾಗೇಶ್ ಉದ್ಘಾಟಿಸಿದರು. ನಂತರ ನಡೆದ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಬಡ ಮತ್ತು ಮಧ್ಯಮ ವರ್ಗದ ಸರ್ಕಾರಿ ಶಾಲೆಯ ಮಕ್ಕಳಿಗೆ ಆಂಗ್ಲಭಾಷೆ ಶಿಕ್ಷಣ ದೊರಕಬೇಕೆಂಬ ಉದ್ದೇಶದಿಂದ ಗ್ರಾಮೀಣ ಪ್ರದೇಶದಲ್ಲಿ ಕೆಪಿಎಸ್ ಶಾಲೆಯನ್ನು ನಿರ್ಮಾಣ ಮಾಡಲಾಗಿದೆ. ದಿವಂಗತ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಕನಸಿನಂತೆ ಎಲ್ಲಾ ಮಕ್ಕಳಿಗೂ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ ಸರ್ವ ಶಿಕ್ಷಣ ಅಭಿಯಾನವನ್ನು ಎರಡು ಸಾವಿರ ಇಸವಿಯಲ್ಲಿ ಪ್ರಾರಂಭಿಸಲಾಗಿದೆ.  ನಮ್ಮ ದೇಶದ ಪ್ರತಿಯೊಬ್ಬ ಹೆಣ್ಣು ಮಗು ಸ್ವಾವಲಂಬಿಯಾಗಿ, ಸ್ವಾಭಿಮಾನಿಯಾಗಿ ಬದುಕಬೇಕಾದರೆ ಒಳ್ಳೆಯ ಶಿಕ್ಷಣವನ್ನು ಕೊಡಬೇಕು. ಅದಕ್ಕೆ ಆದ್ಯತೆಯನ್ನು ನೀಡಲು “ಭೇಟಿ ಪಡಾವೊ ಭೇಟಿ ಬಚಾವೊ” ಆಂದೋಲನವನ್ನು  ಪ್ರಧಾನಮಂತ್ರಿಯವರು ಪ್ರಾರಂಭಿಸಿದೆ.ಅದರಂತೆ ಎಲ್ಲಾ ಶಾಲೆಗಳಲ್ಲೂ…

Read More

ಮಡಿಕೇರಿ ಜ.27 : 2021-22ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಮಡಿಕೇರಿ ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಪಡೆದ ಕರಿಕೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಟಿ.ಎಸ್.ಶ್ರೀಷ್ಮ ಅವರನ್ನು ಅಭಿನಂದಿಸಲಾಯಿತು. ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ಅವರು ಲ್ಯಾಪ್‍ಟಾಪ್ ಹಾಗೂ ಅಭಿನಂದನಾ ಪತ್ರವನ್ನು ವಿತರಿಸಿ, ಪ್ರಶಂಶಿಸಿದರು.

Read More

ಮಡಿಕೇರಿ ಜ.27 :  ಕಡಂಗ ಸರಕಾರಿ ಶಾಲೆಯಲ್ಲಿ  74ನೇ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಶಾಲಾ ಮುಖ್ಯ ಶಿಕ್ಷಕಿ  ಪಿ.ಎಂ.ಶಾಂತಿಕುಮಾರಿ  ಧ್ವಜಾರೋಹಣ ನೆರವೇರಿಸಿ,  ಶುಭಹಾರೈಸಿದರು.  ಪಂಚಾಯಿತಿ ಸದಸ್ಯ  ಕೋಡೀರ ವಿನೋದ್  ಮಾತನಾಡಿ, ದಿನದ ಮಹತ್ವ  ತಿಳಿಸಿದರು. ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಫಾತಿಮ  ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ  ಪ್ರಮುಖರಾದ  ವತ್ಸಲಾ, ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು, ಶಾಲಾ ಶಿಕ್ಷಕರು,ಪೋಷಕರು, ಕರಡ ಗ್ರಂಥಪಾಲಕರು, ಆಯುಷ್ ಆರೋಗ್ಯ ಕೇಂದ್ರ ಸಿಬ್ಬಂದಿಗಳು ಹಾಗು ಮಕ್ಕಳ ಹಾಜರಿದ್ದರು. ಪಿ.ಎಂ ಶಾಂತಿಕುಮಾರಿ ಸ್ವಾಗತಿಸಿದರು. ಕೆ. ಎಂ. ವಿಮಲಾ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ನರಿಯಂದಡ ಗ್ರಾ.ಪಂ ವತಿಯಿಂದ  ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವರಿಗೆ  ಹಾಗೂ ಹಳೆಯ ವಿದ್ಯಾರ್ಥಿಗಳಿಗೆ ದತ್ತಿನಿಧಿ ಬಹುಮಾನವನ್ನು  ಬಬಿತಾ ವಿತರಿಸಿದರು. ಕೊನೆಯಲ್ಲಿ  ವಿದ್ಯಾರ್ಥಿಗಳಿ ಗೆ ಸಿಹಿ ವಿತರಣೆ ಮಾಡಿದರು.  ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಿತು.

Read More

ಶನಿವಾರಸಂತೆ ಜ.27 : ವಿಶ್ವದಲ್ಲೆ ಹಿರಿದಾದ ಭಾರತದ ಸಂವಿಧಾನವನ್ನು ರಚಿಸಿ ನಮ್ಮೆಲ್ಲಾರಿಗೂ ಸಮಾನತೆ ತಂದುಕೊಟ್ಟ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಎಲ್ಲಾರೂ ಪ್ರತಿದಿನ ನೆನಪಿಸಿಕೊಳ್ಳಬೇಕಿದೆ ಎಂದು ಗೋಣಿಮರೂರು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಆಶಾ ಅಭಿಪ್ರಾಯಪಟ್ಟರು. ಆಲೂರುಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ 74ನೇ ಗಣರಾಜ್ಯೋತ್ಸವ ಸಂಭ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಶಾಲೆಯ ಹತ್ತನೆ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಮತ್ತು ಹಾಲಿ ಹಾಗೂ ನಿವೃತ್ತ ಸೈನಿಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತದ ಸಂವಿಧಾನಕ್ಕೆ ತಳಹದಿ ಹಾಕಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ವಿಶ್ವ ಮಟ್ಟದ ನಾಯಕರಾಗಿದ್ದಾರೆ ಇಂದು ನಾವೆಲ್ಲಾರೂ ಸಮಾಜದಲ್ಲಿ ಸಮಾನತೆಯಿಂದ ಬದುಕು ನಡೆಸುತ್ತಿದ್ದೇವೆ. ಆದರೆ ಇಂದು ಸಮಾಜದ ಸ್ವಾಸ್ಥ್ಯ ಬದಲಾಗುತ್ತಿದೆ ಈ ನಿಟ್ಟಿನಲ್ಲಿ ವಿದ್ಯಾವಂತರ ಮನಸು ಪರಿಶುದ್ಧವಾಗಬೇಕು ಇದರಿಂದ ಸಮಾಜ ಪರಿಶುದ್ಧವಾಗಿ ಬದಲಾಗುತ್ತದೆ ಎಂದರು. ಕೂಡಿಗೆಯ ನಿವೃತ್ತ ಸೈನಿಕ ಹಾಗೂ ಪ್ರಸ್ತುತ ಪಿಡಿಒ ಆಗಿ ಸೇವೆ ಸಲ್ಲಿಸುತ್ತಿರುವ ಗಣೇಶ್ ಮಾತನಾಡಿ, ಹಿರಿಯ ನಾಯಕರು ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಮತ್ತು ಸಂವಿಧಾನ ರಚಿಸಲು…

Read More

ಚೆಯ್ಯಂಡಾಣೆ ಜ.27 :  ನರಿಯಂದಡ ಗ್ರಾ.ಪಂ ಯಲ್ಲಿ 74 ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಗ್ರಾ.ಪಂ  ಅಧ್ಯಕ್ಷ  ಬಿದ್ದಂಡ ರಾಜೇಶ್ ಅಚ್ಚಯ್ಯ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ  ಗ್ರಾ.ಪಂ  ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ, ಉಪಾಧ್ಯಕ್ಷೆ ಪುಷ್ಪ, ಸದಸ್ಯರಾದ ಕೋಡಿರ ವಿನೋದ್ ನಾಣಯ್ಯ, ಮುಂಡಿಯೋಳಂಡ ಈರಪ್ಪ, ಮಮ್ಮದ್, ಪೆಮ್ಮಂಡ ಕಾವೇರಮ್ಮ, ಮಂಜುಳಾ, ನೇತ್ರಾವತಿ, ಕಾರ್ಯದರ್ಶಿ ಬಿದ್ದಪ್ಪ, ಗ್ರಂಥಾಪಲಾಕಿ ರೆನ್ನಿ ಬಿಬೋ ಹಾಗೂ ಗ್ರಾ.ಪಂ  ಸಿಬ್ಬಂದಿಗಳು  ಹಾಜರಿದ್ದರು. ವರದಿ : ಅಶ್ರಫ್  

Read More