ಸುಂಟಿಕೊಪ್ಪ ಜ.26 : ಸುಂಟಿಕೊಪ್ಪ ಗ್ರಾ.ಪಂ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ 74ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಸುಂಟಿಕೊಪ್ಪ ಜಿ.ಯಂ.ಪಿ.ಶಾಲಾ ಮೈದಾನದಲ್ಲಿ ಗ್ರಾ.ಪಂ.ಅಧ್ಯಕ್ಷೆ ಶಿವಮ್ಮ ಧ್ವಜಾರೋಹಣ ನೆರವೇರಿಸಿದರು.. ಸಂಪನ್ಮೂಲ ವ್ಯಕ್ತಿ ಆಗಿ ಪಾಲ್ಗೊಂಡಿದ್ದ ಮೋಹನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಮಾತನಾಡಿ ದಿನದ ಮಹತ್ವ ತಿಳಿಸಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಸದಸ್ಯರುಗಳಾದ ಪಿ.ಆರ್.ಸುನಿಲ್ ಕುಮಾರ್, ಆಲಿಕುಟ್ಟಿ, ರಫೀಕ್‍ಖಾನ್, ಸಬಾಸ್ಟೀನ್, ಶಬ್ಬೀರ್, ಮಂಜುಳ, ಹಸೀನಾ, ವಸಂತಿ, ಶಾಂತಿ, ನಾಗರತ್ನ, ಸೋಮನಾಥ್, ಮಂಜುನಾಥ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಕಾರ್ಯದರ್ಶಿ ರಹೆನಾ ಫೈರೋಜ್, ವಿವಿಧ ಶಾಲೆಯ ಮುಖ್ಯೋಪಾದ್ಯಾಯರುಗಳಾದ ಸೇಲ್ವರಾಜ್, ವೀರಾ ಡಿಸೋಜ, ಗೀತಾ, ಬಾಲಕೃಷ್ಣ ಹಾಗೂ ಪಂಚಾಯಿತಿ ಲೆಕ್ಕ ಪರಿಶೋಧಕಿ ಚಂದ್ರಕಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಪದಾಧಿಕಾರಿಗಳ, ಸ್ತ್ರೀಶಕ್ತಿ ಸಂಘದ ಸದಸ್ಯರು ಮತ್ತಿತರರು ಇದ್ದರು. ಪೊಲೀಸ್ ಇಲಾಖೆಯಿಂದ ರಾಷ್ಟ್ರ ಧ್ವಜಕ್ಕೆ ಗೌರವ ರಕ್ಷೆ ಅರ್ಪಿಸಲಾಯಿತು. ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು. ಪುಟಾಣಿ ವಿದ್ಯಾರ್ಥಿಗಳ ಅಂಗಸಾಧನೆಯ…
ಲೇಖಕ: admin
ಕುಶಾಲನಗರ ಜ.25 : ದೇಶದಲ್ಲಿ ರಾಜ್ಯ ಪ್ರಾಂತ್ಯಗಳ ವಿಂಗಡಣೆಯಾಗಿದ್ದು, ನಿಯಮಾನುಸಾರ, ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ, ಪ್ರತಿಯೊಬ್ಬ ಪ್ರಜೆ ತನ್ನ ಕರ್ತವ್ಯ ಮತ್ತು ಜವಾಬ್ದಾರಿಯನ್ನು ನಿಭಾಯಿಸಬೇಕಾಗಿದೆ ಎಂದು ಕುಶಾಲನಗರ ತಾಲೂಕು ತಹಶೀಲ್ದಾರ್ ಮತ್ತು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷ ಟಿ.ಎಂ ಪ್ರಕಾಶ್ ತಿಳಿಸಿದರು. ಕುಶಾಲನಗರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ನಡೆದ 74ನೇ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸಂವಿಧಾನಾತ್ಮಕವಾಗಿ ದೇಶದ ಅಭಿವೃದ್ಧಿ ಮತ್ತು ಬದಲಾವಣೆ ಸಾಧ್ಯ, ಪ್ರತಿಯೊಬ್ಬರು ಸಂವಿಧಾನದ ಅರಿವು ಮೂಡಿಸಿಕೊಳ್ಳಬೇಕಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಡಿಕೇರಿ ವಿಧಾನಸಭಾ ಶಾಸಕ ಎಂ.ಪಿ ಅಪ್ಪಚ್ಚುರಂಜನ್ ಮಾತನಾಡಿ, ಪ್ರತಿಯೊಬ್ಬರು ಶಾಸನಬದ್ಧವಾಗಿ, ಕಾನೂನುಬದ್ಧವಾಗಿ ನಡೆದುಕೊಳ್ಳಬೇಕು. ಪ್ರಜ್ಞಾವಂತ ಸರ್ಕಾರ ನಿರ್ಮಾಣ ಮಾಡುವ ಜವಾಬ್ದಾರಿ ಪ್ರಜೆಗಳ ಮೇಲಿದೆ ಎಂದರು. ಸಂವಿಧಾನ ಶಿಲ್ಪಿ ಡಾ.ಬಿ.ಆರ್‍ಅಂಬೇಡ್ಕರ್ ಅವರ ಆಶಯವನ್ನು ಈಡೇರಿಸುವಂತಾಗಬೇಕು ಎಂದರು. ಮುಖ್ಯ ಭಾಷಣಕಾರರಾಗಿ ದಿನದ ಮಹತ್ವದ ಬಗ್ಗೆ ಮಾತನಾಡಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಟಿ.ಶ್ರೀಕಾಂತ್,…
ಮಡಿಕೇರಿ ಜ.26 : ದೇಶದ ಆಡಳಿತದ ಚುಕ್ಕಾಣಿಯನ್ನು ಸುದೀರ್ಘಾವಧಿ ತನ್ನ ಕೈಯಲ್ಲಿ ಹಿಡಿದಿದ್ದ ಕಾಂಗ್ರೆಸ್ ಪಕ್ಷವು, ತನ್ನ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಚುರುಕುಗೊಳಿಸುವುದಕ್ಕೆ ಬದಲಾಗಿ ‘ನಾಟಕ’ವನ್ನಷ್ಟೆ ಮಾಡಿತ್ತೆಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ವ್ಯಂಗ್ಯವಾಡಿದ್ದಾರೆ. ಮಡಿಕೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಗಳಾದ ಬಳಿಕ, ರಾಷ್ಟ್ರದ ಪ್ರಗತಿ ಕಾರ್ಯಗಳನ್ನು ಚುರುಗೊಳಿಸಿ, ದೇಶದ ಸರ್ವಾಂಗೀಣ ಪ್ರಗತಿಗೆ ಶ್ರಮಿಸುತ್ತಿದ್ದಾರೆ. ಇಂತಹ ಕಾರ್ಯ ಕಾಂಗ್ರೆಸ್ ಅವಧಿಯಲ್ಲಿ ಯಾಕೆ ಸಾಧ್ಯವಾಗಿಲ್ಲವೆಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷ ಇಲ್ಲಿಯವರೆಗೂ ಒಂದು ಸಮುದಾಯವನ್ನು ತನ್ನ ಓಟ್ ಬ್ಯಾಂಕ್ ಮಾಡಿಕೊಂಡು, ಸಮಾಜವನ್ನು ಒಡೆಯುತ್ತ ರಾಜಕಾರಣ ಮಾಡುತ್ತಿದೆ. ಆ ಪಕ್ಷದ ಇಂತಹ ನಿಲುವುಗಳಿಗೆ ಜನತೆ ಉತ್ತರವನ್ನು ಈಗಾಗಲೆ ನೀಡಿದ್ದು, ಮುಂದೆಯೂ ತಕ್ಕ ಪಾಠ ಕಲಿಸಲಿದ್ದಾರೆಂದು ನಾಗೇಶ್ ಹೇಳಿದರು.
ಮಡಿಕೇರಿ ಜ.26 : ಕೊಡವ ಜಾನಪದ ಕಲೆಯ ಪ್ರಸರಣಕ್ಕೆ ಅರ್ಧ ಶತಮಾನದ ತಮ್ಮ ಬದುಕನ್ನು ಮೀಸಲಿಟ್ಟ ಕೊಡಗಿನ ಜಾನಪದ ಕಲಾವಿದೆ ಐಮುಡಿಯಂಡ ರಾಣಿ ಮಾಚಯ್ಯ ಅವರು ಕೇಂದ್ರದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಪದ್ಮಶ್ರೀ’ಗೆ ಭಾಜನರಾಗಿದ್ದಾರೆ. ‘ಕನಸು ಮನಸಿನಲ್ಲೂ ನಿರೀಕ್ಷಿಸದ ಪ್ರಶಸ್ತಿ ತನಗೆ ಬಂದಿದೆ. ತುಂಬಾ ಸಂತೋಷವಾಗಿದೆ’ ಎಂದು ಪತ್ರಿಕೆಗೆ ಪ್ರತಿಕ್ರಿಯಿಸಿದ ರಾಣಿ ಮಾಚಯ್ಯ ಅವರು, ಜಾನಪದ ಕಲಾವಿದೆಯಾಗಿ 10 ಸಾವಿರಕ್ಕೂ ಹೆಚ್ಚಿನ ಮಕ್ಕಳಿಗೆ ಕೊಡಗಿನ ವಿಶಿಷ್ಟ ಜಾನಪದ ಕಲಾ ಪ್ರಕಾರ ‘ಉಮ್ಮತ್ತಾಟ್’ ನ್ನು ಕಲಿಸಿಕೊಟ್ಟವರು. ಜಿಲ್ಲಾ ಕೇಂದ್ರ ಮಡಿಕೇರಿಯ ಐಮುಡಿಯಂಡ ದಿವಂಗತ ಮಾಚಯ್ಯ ಅವರ ಪತ್ನಿ, 78 ರ ಪ್ರಾಯದಲ್ಲೂ ಲವಲವಿಕೆಯಿಂದ ಇರುವ ರಾಣಿ ಮಾಚಯ್ಯ, ಕೊಡವರ ಆರಾಧ್ಯ ದೇವತೆ ಕಾವೇರಿಯನ್ನು ಸ್ತುತಿಸಿ, ತಾಳಕ್ಕೆ ತಕ್ಕಂತೆ ನರ್ತಿಸುವ ಉಮ್ಮತ್ತಾಟ್‍ನಲ್ಲಿ ಸಿದ್ಧಹಸ್ತರು. ಕೊಡವ ಜಾನಪದ ಕಲೆಯಲ್ಲಿ ಆಸಕ್ತ ಪ್ರತಿಭಾವಂತರ ತಂಡವನ್ನು ಕಟ್ಟಿ, ಕೊಡಗಿನ ಶ್ರೀಮಂತ ಕಲೆಯನ್ನು ರಾಷ್ಟ್ರದ ವಿವಿಧೆಡೆಗಳಲ್ಲಿ ಪ್ರದರ್ಶಿಸುವ ಮೂಲಕ ಜಿಲ್ಲೆಯ ಅಪರೂಪದ ಕಲೆಯನ್ನು ಹೊರ ನಾಡಿನವರಿಗೆ ಪರಿಚಯಿಸಿದ ಕೀರ್ತಿ ಇವರದ್ದು.…
ಮಡಿಕೇರಿ ಜ.26 : ವಿರಾಜಪೇಟೆ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ 74 ನೇ ಗಣರಾಜ್ಯೋತ್ಸವದ ಪ್ರಯುಕ್ತ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣಗೊಂಡ ಅಮೃತ್ ಸರೋವರ ಕೆರೆಗಳ ದಡದಲ್ಲಿ ನಿವೃತ್ತ ಸೈನಿಕರಿಂದ ಧ್ವಜಾರೋಹಣ ನಡೆಯಿತು. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ ಕೆರೆಗಳನ್ನು ಸಂರಕ್ಷಣೆ ಮಾಡುವ ಸಲುವಾಗಿ ಸಮಗ್ರ ಕೆರೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಅಭಿವೃದ್ಧಿ ಪಡಿಸಲಾಗಿದ್ದು, ಈ ಬಾರಿಯ ಗಣರಾಜ್ಯೋತ್ಸವನ್ನು ವಿಶೇಷವಾಗಿ ಹಾಗೂ ಅರ್ಥ ಪೂರ್ಣವಾಗಿ ಆಚರಿಸಲು ಆಯುಕ್ತಾಲಯವು ನಿರ್ದೇಶನವನ್ನು ನೀಡಿತ್ತು, ಅದರಂತೆ ಅಮೃತ್ ಸರೋವರ ಕೆರೆಗಳ ದಡದಲ್ಲಿ ನಿವೃತ್ತ ಸೈನಿಕರಿಂದ ಧ್ವಜಾರೋಹಣ ಕೈಗೊಂಡು, ಶಾಲಾ ಮಕ್ಕಳನ್ನು ಒಳಗೊಂಡಂತೆ ಮಕ್ಕಳಿಗೆ ಪರಿಸರ ವಿಷಯದ ಕುರಿತು ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನವನ್ನು ವಿತರಿಸಿ, ನೀರಿನ ಮಹತ್ವ ಹಾಗೂ ಜಲಸಂಜೀವಿನಿ ಯೋಜನೆಯ ಕುರಿತು ಮಕ್ಕಳಿಗೆ ಮಾಹಿತಿ ನೀಡಲಾಯಿತು. ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ, ಕಿರುಗೂರು, ಬಲ್ಯಮಂಡೂರು, ಹುದಿಕೇರಿ, ಪೊನ್ನಂಪೇಟೆ, ಬಿ.ಶೆಟ್ಟಿಗೇರಿ, ಬಾಳೆಲೆ, ಚೆನ್ನಯ್ಯನಕೋಟೆ, ಗ್ರಾಮ ಪಂಚಾಯಿತಿಗಳಲ್ಲಿ 74ನೇ ಗಣರಾಜ್ಯೋತ್ಸವನ್ನು ವಿಶೇಷವಾಗಿ ಅಮೃತ್…
ಮಡಿಕೇರಿ ಜ.26 : ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 74 ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕರಾದ ಡಾ.ಕಾರ್ಯಪ್ಪ ಕೆ.ಬಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ದ್ವಜಾರೋಹಣ ನೆರೆವೇರಿಸಿ ಮಾತನಾಡಿ ದೇಶಕ್ಕಾಗಿ ಮಡಿದ ವೀರರನ್ನು ಸ್ಮರಿಸಿ ವೈದ್ಯಕೀಯ ವೃತ್ತಿಯಲ್ಲಿರುವ ನಾವೆಲ್ಲರೂ ಸಮಾಜಕ್ಕೆ ಸೇವೆಯನ್ನು ನೀಡುವಂತಾಗಬೇಕು ಎಂದರು. ಶೈಕ್ಷಣಿಕವಾಗಿ ವರ್ಷದಿಂದ ವರ್ಷಕ್ಕೆ ಹೊಸ ಹೊಸ ಕೊರ್ಸ್‍ಗಳನ್ನು ಸಂಸ್ಥೆಯಲ್ಲಿ ಪ್ರಾರಂಬಿಸಲಾಗುತ್ತಿದ್ದು, ಅದರಂತೆ ಈ ಬಾರಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿಯಲ್ಲಿ ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್ ಪ್ರಾರಂಭಿಸಲಾಗಿದೆ. ಅಲ್ಲದೆ ಸರ್ಕಾರದಿಂದ 36.97 ಕೋಟಿ ವೆಚ್ಚದಲ್ಲಿ ಕ್ರೀಟಿಕಲ್ ಕೇರ್ ಘಟಕ ಆಸ್ಪತ್ರೆ ನಿರ್ಮಾಣ ಮಾಡಲು ಆಡಳಿತಾತ್ಮಾಕ ಅನುಮೋದನೆ ದೊರೆತಿರುವ ಬಗ್ಗೆ ತಿಳಿಸಿದರು. ಸಮಾರಂಭದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಾಂಶುಪಾಲರಾದ ಡಾ.ವಿಶಾಲ್ ಕುಮಾರ್, ಮುಖ್ಯ ಆಡಳಿತಾಧಿಕಾರಿ ಸ್ವಾಮಿ ಎಸ್.ಎಲ್ ಅವರು ಮಾತನಾಡಿದರು. ವಿದ್ಯಾರ್ಥಿಗಳಿಂದ ದೇಶಭಕ್ತಿ ಗಾಯನ ನಡೆಯಿತು. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆಯ ವೈದ್ಯರುಗಳು, ಬೋಧಕ, ಬೋಧಕೇತರ…
ಮಡಿಕೇರಿ ಜ.26 ಗ್ರೇಟರ್ ರಾಜಾಸೀಟು ಉದ್ಯಾನವನವನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ಅವರು ಗುರುವಾರ ವೀಕ್ಷಿಸಿದರು. ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ನಿಟ್ಟಿನಲ್ಲಿ ಗ್ರೇಟರ್ ರಾಜಾಸೀಟು ಅಭಿವೃದ್ಧಿ ಪಡಿಸಲಾಗಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ರಾಜಾಸೀಟು ವೀಕ್ಷಣೆಗೆ ಆಗಮಿಸುತ್ತಾರೆ. ಆ ನಿಟ್ಟಿನಲ್ಲಿ ಗ್ರೇಟರ್ ರಾಜಾಸೀಟು ಮತ್ತಷ್ಟು ಅಭಿವೃದ್ಧಿ ಪಡಿಸಲಾಗಿದೆ. ರಾಜಸೀಟು ಉದ್ಯಾನವನ ಮುಂದಿನ ದಿನಗಳಲ್ಲಿ ಇನ್ನಷ್ಟು ಆಕರ್ಷಣೀಯ ಸ್ಥಳ ಆಗಲಿದೆ ಎಂದು ಸಚಿವರು ತಿಳಿಸಿದರು. ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರಾದ ನಾಪಂಡ ರವಿಕಾಳಪ್ಪ, ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿ.ಪಂ.ಸಿಇಒ ಡಾ.ಆಕಾಶ್ ಎಸ್. ಡಿವೈಎಸ್ಪಿ ಗಜೇಂದ್ರ ಪ್ರಸಾದ್ ಇತರರು ಇದ್ದರು.
ಮಡಿಕೇರಿ ಜ.26 : ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ 96 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಕಟ್ಟಡವನ್ನು ಶಾಲಾ ಶಿಕ್ಷಣ, ಸಾಕ್ಷರತಾ ಮತ್ತು ಸಕಾಲ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ನಾಗೇಶ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರಾದ ನಾಪಂಡ ರವಿಕಾಳಪ್ಪ, ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿ.ಪಂ.ಸಿಇಒ ಡಾ.ಆಕಾಶ್ ಎಸ್. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪುಟ್ಟರಾಜು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ರಂಗಧಾಮಯ್ಯ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಜಯ ಇತರರು ಇದ್ದರು.
ಮಡಿಕೇರಿ ಜ.26 : ಗಣರಾಜ್ಯೋತ್ಸವ ಸಮಾರಂಭದಲ್ಲಿ ಪೆರೇಡ್ ಕಮಾಂಡರ್ ಚನ್ನನಾಯಕ್ ನೇತೃತ್ವದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ನಾಗರಿಕ ಸೇವಾ ಪೊಲೀಸ್ ತಂಡ, ಅರಣ್ಯ ಇಲಾಖೆ, ಗೃಹ ರಕ್ಷಕ ದಳ ಸೇರಿದಂತೆ ವಿವಿಧ ಶಾಲೆಗಳ ಎನ್‍ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾದಳದ ಒಟ್ಟು 22 ತಂಡಗಳು ಪಥ ಸಂಚಲನದಲ್ಲಿ ಪಾಲ್ಗೊಂಡು ಗಮನ ಸೆಳೆದವು.
ಮಡಿಕೇರಿ ಜ.26 : ರಾಷ್ಟ್ರ ಪ್ರೇಮ ಉದ್ದೀಪನಗೊಳಿಸುವ, ನಾಡಿನ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಅತ್ಯಾಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜಿಲ್ಲಾಡಳಿತದಿಂದ ಆಯೋಜಿತ 74ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ಶಾಲಾ ತಂಡಗಳು ಪ್ರದರ್ಶಿಸುವ ಮೂಲಕ ಗಮನ ಸೆಳೆದವು. ಜವಾಹರ್ ನವೋದಯ ವಿದ್ಯಾಲಯ ತಂಡ ಕೊಡಗಿನ ಇತಿಹಾಸ ಮತ್ತು ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರದರ್ಶಿಸಿ ಜನ ಮೆಚ್ಚುಗೆಗೆ ಪಾತ್ರವಾಯಿತಾದರೆ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮಕ್ಕಳು, ಕೋವಿಡ್ ಸಂದರ್ಭ ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ರೂಪಿಸಿದ ಕ್ರಮಗಳು, ಕೋವಿಡ್ ನಂತರ ಸರ್ಕಾರ ಶೈಕ್ಷಣಿಕ ಉತ್ತೇಜನಕ್ಕಾಗಿ ರೂಪಿಸಿದ ಯೋಜನೆಗಳನ್ನು ತಿಳಿಸಿಕೊಡುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಪ್ರಸ್ತುತ ಪಡಿಸಿ ಗಮನ ಸೆಳೆಯಿತು. ನಗರದ ಸಂತ ಜೋಸೆಫರ ಶಾಲೆ, ಲಿಟ್ಲ್ ಫ್ಲವರ್, ಬ್ಲಾಸಂ ಶಾಲೆ, ಸಂತ ಮೈಕೆಲರ ಶಾಲೆ, ಜನರಲ್ ತಿಮ್ಮಯ್ಯ ಶಾಲಾ ತಂಡಗಳು ವಿವಿಧ ದೇಶ ಭಕ್ತಿ ಗೀತೆಗಳಿಗೆ ಅತ್ಯಾಕರ್ಷಕವಾದ ನೃತ್ಯವನ್ನು ಪ್ರಸ್ತುತ ಪಡಿಸಿ ಗಮನ ಸೆಳೆದವು.






