ಮಡಿಕೇರಿ ಜ.27 : ಬೈತೂರು ಉತ್ಸವದ ಹಿನ್ನೆಲೆಯಲ್ಲಿ ವಿರಾಜಪೇಟೆಯಿಂದ ಬೈತೂರಪ್ಪ ದೇವಸ್ಥಾನಕ್ಕೆ ನಾಲ್ವರು ಯುವ ಭಕ್ತರು ಪಾದಯಾತ್ರೆ ಮಾಡಿದರು. ಚೆಟ್ಟೋಳಿರ ಶರತ್ ಸೋಮಣ್ಣ, ಮುರುವಂಡ ಸವನ್ ಸೋಮಣ್ಣ, ಕಾಳಮಂಡ ರಾಬಿನ್ ಹಾಗೂ ಮಾಚಂಗಡ ಸಚಿನ್ ವಿರಾಜಪೇಟೆಯಿಂದ, ಪೆರುಂಬಾಡಿ, ಮಾಕುಟ್ಟ, ಕೂಟುಪೊಳೆ, ಬಲ್ಲಿತೋಡ್, ಹುಲಿಕಲ್ ಮೂಲಕ ಪಾದಯಾತ್ರೆ ಮಾಡಿ ಸಾಯಂಕಾಲ 4 ಗಂಟೆ ಸುಮಾರಿಗೆ 40 ಕಿ.ಮೀ ಕ್ರಮಿಸಿದರು. ದೇವಸ್ಥಾನ ತಲುಪಿದ ನಂತರ ವಿಶೇಷ ಪ್ರಾರ್ಥನೆ ಸಲ್ಲಿಸಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿದರು.
ಲೇಖಕ: admin
ಮಡಿಕೇರಿ ಜ.27 : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೆಹಲಿಯ ಟಾಲ್ಕಟೋರಾ ಸ್ಟೇಡಿಯಂನಲ್ಲಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಈ ಕಾರ್ಯಕ್ರಮದ ನೇರ ಪ್ರಸಾರದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಾಲೇಜಿನ ವಿದ್ಯಾರ್ಥಿಗಳು ವೀಕ್ಷಣೆ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮದ ಮೂಲಕ ಪರೀಕ್ಷೆಗೆ ಮಾಡಬಹುದಾದ ಉತ್ತಮ ತಯಾರಿ ಹಾಗೂ ವಿದ್ಯಾರ್ಥಿಗಳ ಮನಸ್ಸಿನಿಂದ ಪರೀಕ್ಷೆಗಳ ಭಯವನ್ನು ಹೋಗಲಾಡಿಸುವ ತಂತ್ರಗಳನ್ನು ಹಂಚಿಕೊಂಡು ಉಪಯುಕ್ತ ಮಾಹಿತಿ ನೀಡಿದರು. ಸಂಸ್ಥೆಯಲ್ಲಿ ನಿರ್ದೇಶಕರು ಹಾಗೂ ಡೀನ್ ಡಾ.ಕೆ.ಬಿ.ಕಾರ್ಯಪ್ಪ, ಪ್ರಾಂಶುಪಾಲರಾದ ಡಾ.ವಿಶಾಲ್ ಕುಮಾರ್, ಕಿಸಾನ್ ಅಕಾಡೆಮಿಕ್ ರಿಜಿಸ್ಟ್ರಾರ್ ಡಾ ರವಿಕಿರಣ, ನಸಿರ್ಂಗ್ ಪ್ರಾಂಶುಪಾಲರಾದ ಮಂಜುಳ, ಬೋದಕ ಸಿಬ್ಬಂದಿ ಸೇರಿದಂತೆ ವೈದ್ಯಕೀಯ, ನಸಿರ್ಂಗ್ ವಿದ್ಯಾರ್ಥಿಗಳು ಹಾಜರಿದ್ದರು.
ಮಡಿಕೇರಿ ಜ.27 ಮಡಿಕೇರಿ ನಗರದಲ್ಲಿ ವಸತಿ ಯೋಜನೆಯಡಿ 72 ಫಲಾನುಭವಿಗಳಿಗೆ ಮಂಜೂರಾತಿ ಪತ್ರವನ್ನು ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ವಿತರಿಸಿದರು. ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಸತಿ ಯೋಜನೆಯ ಮಂಜೂರಾತಿ ಪತ್ರವನ್ನು ವಿತರಿಸಿದರು. ಇದಕ್ಕೂ ಮೊದಲು ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಶಾಸಕರು, ವಿದ್ಯುತ್ ಸಂಪರ್ಕ, ಖಾತೆ ಬದಲಾವಣೆ, ಮಳೆಹಾನಿ ಪರಿಹಾರ, ಇಂದಿರಾ ಆವಾಸ್ ಯೋಜನೆಯಡಿ ಮನೆ ನಿರ್ಮಾಣ…, ಹೀಗೆ 7 ಅರ್ಜಿಗಳು ಬಂದಿದ್ದು, ವಿದ್ಯುತ್ ಸಂಪರ್ಕ ಮತ್ತು ಖಾತೆ ಬದಲಾವಣೆ ಸಂಬಂಧ 15 ದಿನದಲ್ಲಿ ಬಗೆಹರಿಸಲಾಗುವುದು. ಹಾಗೆಯೇ ಮಳೆಹಾನಿ ಪರಿಹಾರ ಸಂಬಂಧ ಪರಿಶೀಲಿಸಲು ತಹಶೀಲ್ದಾರರಿಗೆ ಸೂಚಿಸಲಾಗುವುದು. ಜೊತೆಗೆ ಇಂದಿರಾ ಅವಾಸ್ ಯೋಜನೆಯಡಿ ಮನೆ ನಿರ್ಮಾಣಕ್ಕೆ ಅವಕಾಶ ಮಾಡಲಾಗುವುದು ಎಂದರು. ಮಡಿಕೇರಿ ನಗರಸಭೆ ವ್ಯಾಪ್ತಿಗೆ ನಗರೋತ್ಥಾನ ಯೋಜನೆಯಡಿ 40 ಕೋಟಿ ರೂ., 15 ನೇ ಹಣಕಾಸು ಯೋಜನೆಯಡಿ 1.48 ಕೋಟಿ ರೂ., ಹಾಗೆಯೇ ನಗರಸಭೆಯಿಂದ 1.15 ಕೋಟಿ ರೂ., ಹೀಗೆ ವಿವಿಧ ವಿಭಾಗದ ಅನುದಾನ ಬಿಡುಗಡೆಯಾಗಿದ್ದು, ಮಡಿಕೇರಿ ನಗರದ ಅಭಿವೃದ್ಧಿಗೆ ಹೆಚ್ಚಿನ ಹಣ ಬಿಡುಗಡೆ…
ಮಡಿಕೇರಿ ಜ.27 : ಸೋಮವಾರಪೇಟೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎನ್. ಮಹೇಂದ್ರ ಕುಮಾರ್ (56) ಇಂದು ಸಂಜೆ ಸೋಮವಾರಪೇಟೆಯ ತಮ್ಮ ವಸತಿ ಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ,ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅತ್ಯಕ್ರಿಯೆ ನಾಳೆ (ಶನಿವಾರ)ಮಧ್ಯಾಹ್ನ ದ ನಂತರ ಅವರ ಸ್ವಗ್ರಾಮ ಕುಶಾಲನಗರ ಸಮೀಪದ ಬಸವನ ಹಳ್ಳಿಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ವಿರಾಜಪೇಟೆ ಜ.27 : ಸಮರ್ಪಣಾ ಶ್ರೀಮತಿ ರಾಧಮ್ಮ ಸ್ಮಾರಕ ಟ್ರಸ್ಟ್ ವತಿಯಿಂದ ಮೈಸೂರಿನಲ್ಲಿ ನಡೆದ 10ನೇ ವರ್ಷದ ರಾಜ್ಯಮಟ್ಟದ ಗಾಯನ ಸ್ಪರ್ಧೆಯಲ್ಲಿ ವಿರಾಜಪೇಟೆಯ ಕೆ.ಜಿ.ಅನುಷಾ ಸ್ಪರ್ಧಿಸಿ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ದೇವರನಾಮ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅನುಷಾ ವಿರಾಜಪೇಟೆಯ ಸಂತ ಅನ್ನಮ್ಮ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಇವರು ರಾಜಲಕ್ಷ್ಮಿ ಅವರ ಪುತ್ರಿ. ವಿರಾಜಪೇಟೆಯ ಸ್ವರಾರ್ಣವ ಸಂಗೀತ ಶಾಲೆಯ ವಿದ್ಯಾರ್ಥಿಯಾಗಿದ್ದು, ವಿದ್ವಾನ್ ದಿಲಿಕುಮಾರ್ ಅವರ ಶಿಷ್ಯೆಯಾಗಿದ್ದಾರೆ. ಇವರೊಂದಿಗೆ ಟಿ.ಎಸ್.ದೇವಿಕ ಅವರು ಭಾಗವಹಿಸಿ ಸಮಧಾನಕರ ಬಹುಮಾನ ಪಡೆದಿದ್ದಾರೆ.
ಮಡಿಕೇರಿ ಜ.27 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಡಿಕೇರಿಯ ಕೋಟೆ ಆವರಣ, ಯವಕಪಾಡಿಯ ನಾಲ್ ನಾಡ್ ಅರಮನೆ ಮತ್ತು ದೇವಟ್ ಪರಂಬುವಿನಲ್ಲಿ “ಅಂತರ ರಾಷ್ಟ್ರೀಯ ಹತ್ಯಾಕಾಂಡದ ಸ್ಮರಣೆ ದಿನ” ವನ್ನು ಆಚರಿಸಿತು. ಮೂರು ಪ್ರದೇಶಗಳಿಗೆ ಭೇಟಿ ನೀಡಿದ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಹಾಗೂ ಪ್ರಮುಖರು ಹತ್ಯೆಗೀಡಾದ ಕೊಡವರಿಗೆ ಪುಷ್ಪ ನಮನದೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಅರಸರ ಆಳ್ವಿಕೆಯ ಕಾಲದಲ್ಲಿ ರಾಜಕೀಯ ಷಡ್ಯಂತ್ರದಿಂದ ಕೊಡವರ ನರಮೇಧವಾಗಿದೆ. ದೇವಟ್ ಪರಂಬುವಿನಲ್ಲಿ ಸಾವಿರಾರು ಕೊಡವರು ಬಲಿಯಾಗಿದ್ದಾರೆ. ಬುಡಕಟ್ಟು ಜನಾಂಗ ಕೊಡವರ ಹತ್ಯೆ ಘೋರ ದುರಂತವಾಗಿದ್ದು, ಅಂತರ ರಾಷ್ಟ್ರೀಯ ಮಟ್ಟದ ಸ್ಮಾರಕ ನಿರ್ಮಾಣ ಮಾಡುವ ಅಗತ್ಯವಿದೆ. ಆ ಮೂಲಕ ಮಡಿದವರಿಗೆ ಗೌರವ ಸಲ್ಲಿಸುವ ಕಾರ್ಯ ನಡೆಯಬೇಕು ಎಂದು ನಾಚಪ್ಪ ಇದೇ ಸಂದರ್ಭ ಒತ್ತಾಯಿಸಿದರು. ಟಿಪ್ಪು ಸೋಲಿನ ಸೇಡು ತೀರಿಸಿಕೊಳ್ಳಲು ಸಾವಿರಾರು ಅಮಾಯಕ ನಿರಾಯುಧ ಕೊಡವ ಯೋಧರನ್ನು ಕುತಂತ್ರದಿಂದ ಹತ್ಯೆ ಮಾಡಿದನು. ಬದುಕುಳಿದವರನ್ನು ಶ್ರೀರಂಗಪಟ್ಟಣಕ್ಕೆ ಎಳೆದೊಯ್ದು ಕಿರುಕುಳ ನೀಡಿದನು ಎಂದು ಆರೋಪಿಸಿದರು. ಮಡಿಕೇರಿ ಕೋಟೆ, ನಾಲ್ ನಾಡ್…
ವಿರಾಜಪೇಟೆ ಜ.27 : ಕನ್ನಡ ಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕ ಸಂಘ ಹೆಚ್ಚು ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೋಳ್ಳುವುದು ಉತ್ತಮ. ಇದಕ್ಕೆ ಸರಕಾರ ಕನ್ನಡ ಸಂಸ್ಕೃತಿ ಇಲಾಖೆಯ ಸಹಕಾರವು ಅಗತ್ಯವಾಗಿದೆ ಎಂದು ಚೇರಂಬಾಣೆಯ ಸಮಾಜ ಸೇವಕ ತೇಲಪಂಡ ಶಿವಕುಮಾರ್ ನಾಣಯ್ಯ ಅಭಿಪ್ರಾಯಪಟ್ಟರು. ಗಣರಾಜ್ಯೋತ್ಸವದ ಅಂಗವಾಗಿ ವಿರಾಜಪೇಟೆ ಕರ್ನಾಟಕ ಸಂಘದ ವತಿಯಿಂದ ಪುರಭವನದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸ್ಪರ್ಧಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಇತರ ರಾಜ್ಯಗಳಿಂದ ವ್ಯಾಪಾರಕ್ಕಾಗಿ ಬಂದವರು ಅವರ ರಾಜ್ಯದ ಭಾಷೆಯನ್ನೆ ಮಾತನಾಡುತ್ತಾರೆ, ಆದರೆ ಕರ್ನಾಟಕ ರಾಜ್ಯದಿಂದ ಹೊರ ರಾಜ್ಯಕ್ಕೆ ನಾವುಗಳು ಹೋದಾಗ ಆ ರಾಜ್ಯದ ಭಾಷೆಯಲ್ಲಿ ಮಾತನಾಡಬೇಕಾಗಿದೆ. ಆದರಿಂದ ಕರ್ನಾಟಕದಲ್ಲಿ ಯಾರೆ ಬಂದರು ಕನ್ನಡವನ್ನೆ ಮಾತನಾಡುವಂತಾಗಬೇಕು ಎಂದ ಶಿವಕುಮಾರ್ ನಾಣಯ್ಯ ಕನ್ನಡ ಪ್ರಾಚೀನ ಕಾಲದ ಭಾಷೆಯಾಗಿದ್ದು, ಅವರವರ ಮನೆಯಲ್ಲಿ ಯಾವುದೇ ಭಾಷೆ ಮಾತನಾಡಿದರು, ಪ್ರತಿಯೋಬ್ಬರೂ ಕನ್ನಡ ಭಾಷೆಗೆ ಆದ್ಯತೆ ನೀಡುವಂತಾಗಬೇಕು ಎಂದರು. ಜಿ.ಪಂ ಮಾಜಿ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ ಅವರು ದೀಪ ಬೆಳಗಿಸಿ ಸ್ಪರ್ಧಾ…
ಮಡಿಕೇರಿ ಜ.27 : ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ರಾಣಿ ಮಾಚಯ್ಯ ಅವರನ್ನು ಶಾಸಕ ಕೆ.ಜಿ.ಬೋಪಯ್ಯ ಅವರು ಸನ್ಮಾನಿಸಿ ಗೌರವಿಸಿದರು. ರಾಣಿ ಮಾಚಯ್ಯ ಅವರ ನಿವಾಸಕ್ಕೆ ಪತ್ನಿ ಕುಂತಿ ಬೋಪಯ್ಯನವರೊಂದಿಗೆ ತೆರಳಿ ಸನ್ಮಾನಿಸಿ, ಗೌರವಿಸಿದರು. ಈ ಸಂದರ್ಭ ಮಾತನಾಡಿದ ಕೆ.ಜಿ.ಬೋಪಯ್ಯ, ಕೊಡಗಿನ ಪಾರಂಪಾರಿಕ ಉಮ್ಮತ್ತಾಟ್ ನೃತ್ಯವನ್ನು ಭಾರತ ಮಾತ್ರವಲ್ಲ ಪ್ರಪಂಚಕ್ಕೆ ಪರಿಚಯಿಸುವ ಮೂಲಕ ಕೊಡವ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿರುವ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಐಮುಡಿಯಂಡ ರಾಣಿ ಮಾಚಯ್ಯ ಅವರಿಗೆ 2023ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಸಂದಿರುವುದು ಕೊಡಗಿನ ಹೆಮ್ಮೆ ಎಂದರು.
ಕುಶಾಲನಗರ ಜ.27 : ಕುಶಾಲನಗರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ 74ನೇ ಗಣರಾಜ್ಯೋತ್ಸವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಾಜಿ ಸೈನಿಕ ಕೆ.ಸಿ.ಸೋಮಣ್ಣ, ಕ್ರೀಡಾಪಟು ಎಸ್.ಪುನೀತ್, ಪೌರಕಾರ್ಮಿಕ ಮಹದೇವ್, ಹಿರಿಯ ಪತ್ರಕರ್ತಎಂ.ಎನ್.ಚಂದ್ರಮೋಹನ್, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ, ಗ್ರಾಮ ಒನ್ ನಿರ್ವಾಹಕರಾದ ಪಿ.ಕೆ.ಧರ್ಮರಾಜ್, ಹೆಚ್.ಪಿ ಶ್ರೀಕಾಂತ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಡಿಕೇರಿ ಜ.27 : ಹುಣಸೂರು ಭಾಗಮಂಡಲ ಸಂಪರ್ಕಿಸುವ ರಾಜ್ಯ ಹೆದ್ದಾರಿಯ ಹಳೇತಾಲೂಕು ಮಾರ್ಗವಾಗಿ ಭಾಗಮಂಡಲಕ್ಕೆ ತೆರಳುವ ರಸ್ತೆ ಮರುಡಾಂಬರೀಕರಣಕ್ಕೆ ಕೆಡಿಪಿ ಸದಸ್ಯ ಶಿವಚಾಳಿಯಂಡ ಅಂಬಿ ಕಾರ್ಯಪ್ಪ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಹಳೇತಾಲ್ಲೂಕುನಿಂದ ಚೋನಾಕೆರೆ ಶಾಲಿಮಾರ್ ಮಿಲ್ ವರೆಗೆ ರಸ್ತೆ ಹದಗೆಟ್ಟು ಸಾರ್ವಜನಿಕರಿಗೆ ಸಂಚಾರಕ್ಕೆ ಸಮಸ್ಯೆಯಾಗುತ್ತಿರುವ ಬಗ್ಗೆ ಶಾಸಕ ಕೆ.ಜಿ ಬೋಪಯ್ಯ ಅವರ ಗಮನಕ್ಕೆ ತರಲಾಗಿತ್ತು. ಇದಕ್ಕೆ ಸ್ಪಂದಿಸಿದ ಶಾಸಕರು ಸುಮಾರು 86 ಲಕ್ಷ ರೂ ವೆಚ್ಚದಲ್ಲಿ 1.6 ಕಿ.ಮೀ.ರಸ್ತೆಯನ್ನು ಮರು ಡಾಂಬರೀಕರಣ ಗೊಳಿಸಲು ಚಾಲನೆ ನೀಡಲಾಗಿದೆ. ಎರಡು ದಿನದಲ್ಲಿ ಡಾಂಬರೀಕರಣ ಪೂರ್ಣಗೊಂಡು ಸಾರ್ವಜನಿಕರ ಸುಗಮ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಅಂಬಿ ಕಾರ್ಯಾಪ್ಪ ತಿಳಿಸಿದರು. ಈ ಸಂದರ್ಭ ಬಿಜೆಪಿ ತಾಲೂಕು ಕಾರ್ಯದರ್ಶಿ ಪಾಡಿಯಮ್ಮಂಡ ಮನು ಮಹೇಶ್, ಬಿಜೆಪಿ ಯುವಮೋರ್ಚಾದ ಶಿವಚಾಳಿಯಂಡ ಜಗದೀಶ್, ಬಿಜೆಪಿ ಮುಖಂಡರಾದ ಕುಂದ್ಯೋಳಂಡ ರಮೇಶ್ ಮುದ್ದಯ್ಯ, ಚಿಯಕ ಪೂವಂಡ ಅಪ್ಪಚ್ಚ, ಕಂಗಾಂಡ ಜಾಲಿ ಪೂವಪ್ಪ, ಚಿಯಕಪೂವಂಡ ಸುರಿ, ಕುಲ್ಲೇಟಿರ ರಾಜೇಶ್, ಚೋಕಿರ ಸಜಿತ್, ಚಿಯಕಪೂವಂಡ ಸತೀಶ್, ಶಿವಚಾಳಿಯಂಡ…






