ಮಡಿಕೇರಿ ಜ.26 : ರಾಷ್ಟ್ರದ ಪ್ರತಿಯೊಬ್ಬ ಪ್ರಜೆಯು ಪ್ರಗತಿಯನ್ನು ಸಾಧಿಸಿ, ಗೌರವಯುತ ಜೀವನ ನಡೆಸಬೇಕು. ಯಾರೊಬ್ಬರಿಗೂ ತಾರತಮ್ಯ ಮಾಡಬಾರದು ಎನ್ನುವುದು ನಮ್ಮ ಸಂವಿಧಾನದ ಮೂಲ ಆಶಯವಾಗಿದ್ದು, ಇದಕ್ಕೆ ಅನುಗುಣವಾಗಿ ಸರ್ವರ ಕಲ್ಯಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಶಿಕ್ಷಣ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ಜಿಲ್ಲಾಡಳಿತದ ವತಿಯಿಂದ ನಗರದ ಜನರಲ್ ಕೆ.ಎಸ್. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿತ 74ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು. ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಘೋಷ ವಾಕ್ಯದಂತೆ ದೇಶದ ಸಮಗ್ರ ಅಭಿವೃದ್ಧಿಗಾಗಿ ಅನೇಕ ಕ್ರಾಂತಿಕಾರಕ ಬದಲಾವಣೆಗಳನ್ನು ಕೇಂದ್ರ ಸರ್ಕಾರ ತಂದಿದೆ. ಮುಂದಿನ 25 ವರ್ಷಗಳು ಭಾರತಕ್ಕೆ ‘ಅಮೃತ ಕಾಲ’. ಈ ನಿಟ್ಟಿನಲ್ಲಿ ರೂಪಿಸಲಾಗಿರುವ ಯೋಜನೆಗಳ ಅನುಷ್ಠಾನಕ್ಕೆ ನಾವೆಲ್ಲರೂ ಕಾರ್ಯ ನಿರ್ವಹಿಸಬೇಕು ಎಂದು ಪ್ರಧಾನಮಂತ್ರಿಯವರು ಹೇಳಿದ್ದಾರೆ. ಕೈಗಾರಿಕೆ, ಕೃಷಿ, ನೀರಾವರಿ, ಉದ್ಯಮ, ಉದ್ಯೋಗ, ಸಂಪರ್ಕ, ಸಾರಿಗೆ, ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ವೇಗದ ಬೆಳವಣಿಗೆಗೆ…
ಲೇಖಕ: admin
ಮಡಿಕೇರಿ ಜ.26 : ಕೊಡಗು ಪತ್ರಿಕಾ ಭವನ ಟ್ರಸ್ಟ್ ವತಿಯಿಂದ 74ನೇ ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕೊಡಗು ಪತ್ರಿಕಾ ಭವನ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ.ಕೇಶವಕಾಮತ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ಎಸ್.ಜಿ ಉಮೇಶ್, ವರ್ತಕರುಗಳಾದ ರೆಹಮಾನ್, ಅಶ್ರಫ್, ರಾಮಣ್ಣ, ಲೀಲಾವತಿ, ಪತ್ರಿಕಾ ಭವನದ ಸಿಬ್ಬಂದಿಗಳಾದ ಕೆ.ಪಿ.ಯಮುನಾ, ಬಿ.ಪಿ.ರಾಜೇಶ್ ಹಾಗೂ ಪುಟಾಣಿಗಳಾದ ಬಿ.ಡಿ.ತರುಣ್, ಇನ್ನಿತತರು ಭಾಗವಹಿಸಿದ್ದರು.
ಮಡಿಕೇರಿ ಜ.26 : ಕಡಂಗ ಮನ್‍ಶಉಲ್ ಉಲೂಂ ಮದ್ರಸದಲ್ಲಿ ಎಸ್.ಕೆ.ಎಸ್.ಬಿ.ವಿ ವತಿಯಿಂದ 74ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಜಮಾಅತ್ ಅಧ್ಯಕ್ಷ ಕುಞ್ಞಬ್ದುಲ್ಲಾ ಧ್ವಜಾರೋಹಣ ನೆರವೇರಿಸಿ ವಿದ್ಯಾರ್ಥಿಗಳಿಗೆ ದಿನನ ಮಹತ್ವದ ಕುರಿತು ತಿಳಿಸಿದರು. ಕಾರ್ಯಕ್ರಮದಲ್ಲಿ ಹನೀಫ ಮುಸ್ಲಿಯಾರ್, ಮಮ್ಮಿ ಉಸ್ತಾದ್, ಹಾರಿಸ್, ಶಿಹಾಬ್, ಇಕ್ಬಾಲ್, ನಿಝಾರ್, ಬಶೀರ್, ಅಹ್ಮದ್, ಮುಹಮ್ಮದ್, ನಸೀರ್ , ಸುಲೈಮಾನ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಸ್ವಾಗತವನ್ನು ಹನೀಫ್ ಫೈಝಿ ಮಾಡಿದರೆ, ಸುಹೈಬ್ ಫೈಝಿ ಭಾಷಣ ಮಾಡಿದರು. ವರದಿ : ನೌಫಲ್ ಕಡಂಗ
ಮಡಿಕೇರಿ ಜ.26 : ಬದ್ರಿಯಾ ಸುನ್ನಿ ಮುಸ್ಲಿಂ ಜಮಾಅತ್, ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ ಎಸ್ ಎಫ್, ಬದ್ರಿಯಾ ಮದರಸ ಸಂಯುಕ್ತ ಆಶ್ರಯದಲ್ಲಿ 74ನೇ ಗಣರಾಜ್ಯೋತ್ಸವವನ್ನು ಕಡಂಗದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಬದ್ರಿಯಾ ಜಮಾಅತ್ ಆಡಳಿತ ಮಂಡಳಿಯ ಸದಸ್ಯ ಸಲಾಂ ಹಾಗೂ ಬದ್ರಿಯಾ ಮದರಸ ಮುಖ್ಯೋಪಾಧ್ಯಾಯರಾದ ಹ್ಯಾರಿಸ್ ಬಯಾನಿ ಧ್ವಜಾರೋಹಣ ನೇರವೇರಿಸಿದರು. ಈ ಸಂದರ್ಭ ಹಂಝ ಎಡಪಾಲ ದಿನದ ಮಹತ್ವದ ಕುರಿತು ಪ್ರಾಸ್ತಾವಿಕ ಮಾತನಾಡಿದರು. ಎಸ್ ವೈ ಎಸ್ ಪ್ರಧಾನ ಕಾರ್ಯದರ್ಶಿ ಸಿ.ಎ.ಅಶ್ರಫ್, ಕೋಶಾಧಿಕಾರಿ ರಜಾಕ್, ಶಂಸುದ್ದಿನ್, ಎಂ.ಎಂ.ನಿಝರ್, ಮದರಸ ಶಿಕ್ಷಕರಾದ ರಝಕ್ ಮುಸ್ಲಿಯಾರ್ ಹಾಗೂ ಇಸ್ಮಾಯಿಲ್ ಮುಸ್ಲಿಯಾರ್, ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ ಎಸ್ ಎಸ್ ಸದಸ್ಯರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಮಡಿಕೇರಿ ಜ.26 : ಮಡಿಕೇರಿ ಆಕಾಶವಾಣಿ ಕೇಂದ್ರದಲ್ಲಿ 74ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ನಿಲಯದ ಮುಖ್ಯಸ್ಥರಾದ ಆರ್.ಶ್ರೀನಿವಾಸನ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ರಾಷ್ಟ್ರಕ್ಕಾಗಿ ತ್ಯಾಗ, ಬಲಿದಾನಗೈದ ನಾಯಕರನ್ನು ಸ್ಮರಿಸುವುದರೊಂದಿಗೆ ಅವರ ಆದರ್ಶ ಗುಣಗಳನ್ನು ಅನುಸರಿಸುವುದೇ ನಾವು ದೇಶಕ್ಕೆ ಸಲ್ಲಿಸುವ ನಿಜವಾದ ಗೌರವ ಎಂದರು. ಹಿರಿಯ ಉದ್ಘೋಷಕರಾದ ಸುಬ್ರಾಯ ಸಂಪಾಜೆ, ಗ್ರಂಥಪಾಲಕ ಪಂಕಜ್ ಕುಡ್ತರ್ಕರ್ ಹಾಗೂ ಇತರ ಸಿಬ್ಬಂದಿಗಳು ಹಾಜರಿದ್ದರು.
ಮಡಿಕೇರಿ ಜ.26 : ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕರ್ತವ್ಯ ನಿರತ ಪಿಡಿಒ ಅನಿಲ್ ಕುಮಾರ್ ಮೇಲಿನ ಹಲ್ಲೆಯನ್ನು ಖಾಸಗಿ ಅನುದಾನಿತ ಶಾಲಾ ಕಾಲೇಜು ನೌಕರರ ಸಂಘದ ಕೊಡಗು ಜಿಲ್ಲಾ ಘಟಕದ ಖಂಡಿಸಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಘಟಕದ ಅಧ್ಯಕ್ಷ ಪಡಿಞರಂಡ ಪ್ರಭುಕುಮಾರ್, ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಮೇಲಿನಿಂದ ಮೇಲೆ ನಡೆಯುತ್ತಿದ್ದು, ಸರ್ಕಾರಿ ನೌಕರರು ನಿರ್ಭಯವಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಘಟನೆಗಳು ಮರುಕಳಿಸಿದ್ದಲ್ಲಿ ನೌಕರ ವರ್ಗವನ್ನು ಸಂಘಟಿಸಿ ಹೋರಾಟಕ್ಕಿಳಿಯುವ ಸಾಮರ್ಥ್ಯವನ್ನು ನೌಕರರ ಸಂಘಟನೆಗಳು ಹೊಂದಿವೆಯೆಂದು ಎಚ್ಚರಿಕೆ ನೀಡಿದರು. ಸರ್ಕಾರದ ಜನಪರ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ನೌಕರರ ಜೀವ ಭದ್ರತೆಗೆ ಹೆಚ್ಚಿನ ಒತ್ತನ್ನು ನೀಡಿ ನೌಕರರ ಮನೋಸ್ಥರ್ಯ ಹೆಚ್ಚಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಮತ್ತು ಈ ಘಟನೆಯಲ್ಲಿ ಭಾಗಿಯಾಗಿರುವವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಮಡಿಕೇರಿ ಜ.26 : ವಿಂಗ್ಸ್ ಆಫ್ ಫ್ಯಾಶನ್ ನೃತ್ಯ ಸಂಸ್ಥೆ ವತಿಯಿಂದ ಮಕ್ಕಳಿಗಾಗಿ ಫೆ.4 ರಂದು “ಟ್ಯಾಲೆಂಟ್ ಆಫ್ ಕೂರ್ಗ್” ಸ್ಪರ್ಧೆ ನಡೆಯಲಿದೆ. ನಗರದ ಬಾಲ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಫ್ಯಾಷನ್ ಷೋ, ಫ್ಯಾನ್ಸಿ ಡ್ರೆಸ್ ಮತ್ತು ಜಾನಪದ ನೃತ್ಯ ಕಾರ್ಯಕ್ರಮ ನಡೆಯಲಿದ್ದು, ಹೆಚ್ಚಿನ ಮಾಹಿತಿಗೆ 9632976833 ಸಂಪರ್ಕಿಸುವಂತೆ ಎಂದು ನೃತ್ಯ ಸಂಸ್ಥೆಯ ಸ್ಥಾಪಕರು, ನೃತ್ಯ ಸಂಯೋಜಕಿ ಪ್ರೀತ ಕೃಷ್ಣ ತಿಳಿಸಿದ್ದಾರೆ.
ನಾಪೋಕ್ಲು ಜ.26 : ಕರ್ನಾಟಕ ಸರ್ಕಾರ, ಕೊಡಗು ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ವತಿಯಿಂದ ಸರಕಾರಿ ಶಾಲಾ ಮಕ್ಕಳ ಕಲಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಕ್ಲಸ್ಟರ್ ನಲ್ಲಿ ಮಕ್ಕಳಿಗೋಸ್ಕರ ಕಲಿಕಾ ಹಬ್ಬವನ್ನು ಆಚರಿಸಲಾಗುತ್ತಿದ್ದು, ನಾಪೋಕ್ಲು ಕ್ಲಸ್ಟರ್ ವ್ಯಾಪ್ತಿಯ ಕಲಿಕಾ ಹಬ್ಬವನ್ನು ಎಮ್ಮೆಮಾಡಿನಲ್ಲಿ ಆಚರಿಸಲಾಯಿತು. ಎಮ್ಮೆಮಾಡುವಿನ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಆವರಣದ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬದಲ್ಲಿ ಮಕ್ಕಳು ಆಟ-ಪಾಠಗಳೊಂದಿಗೆ ಸಂಭ್ರಮಿಸಿದರು. ಎಮ್ಮೆಮಾಡು ಮುಖ್ಯರಸ್ತೆಯಲ್ಲಿ ಅತಿಥಿಗಳು, ಶಿಕ್ಷಕರು, ಕ್ಲಸ್ಟರ್ ನ ಶಾಲೆಯಿಂದ ಬಂದ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಸಾಗಿದರು. ನಂತರ ನಡೆದ ಸಭಾ ಕಾರ್ಯಕ್ರಮವನ್ನು ಗ್ರಾ.ಪಂ ಅಧ್ಯಕ್ಷ ಆಯಿಸ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಮಡಿಕೇರಿ ತಾಲೂಕಿನ ಕ್ಷೇತ್ರ ಸಂಪನ್ಮೂಲ ಆಧಿಕಾರಿ ಬಡ್ಡಿರ ನಳಿನಿ ಪೂವಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ಕಾರಿ ಶಾಲೆಯ ಮಕ್ಕಳಿಗೆ ಜ್ಞಾನ ಅಭಿವೃದ್ಧಿಸಿಕೊಳ್ಳಲು ಕಲಿಕಾ ಹಬ್ಬ ಉತ್ತಮ ಅವಕಾಶವಾಗಿದೆ ಇದನ್ನು ಎಲ್ಲಾ ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಪ್ರಾಥಮಿಕ ಮುಖ್ಯ ಶಿಕ್ಷಕ ಲೋಕೇಶ್…
ಬೆಂಗಳೂರು: 74ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ನಗರದ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಧ್ವಜಾರೋಹಣ ನೆರವೇರಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ, ಜನತೆಯನ್ನುದ್ದೇಶಿಸಿ ಮಾತನಾಡಿದರು.
ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 74ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಕರ್ತವ್ಯಪಥದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧ್ವಜಾರೋಹಣ ನೆರವೇರಿಸಿದರು. ರಾಷ್ಟ್ರಪತಿಗಳಿಗೆ ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಜಯದೀಪ್ ಧನಕರ್ ಸಾಥ್ ನೀಡಿದರು. ನಂತರ ಭವ್ಯ ಮೆರವಣಿಗೆ ಪ್ರಾರಂಭವಾಯಿತು. ಸಮಾರಂಭದಲ್ಲಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಾರೆ. ವಾಯುಪಡೆ ತಂಡದಿಂದ ಆಕಾಶ್ ಮಿಸೈಲ್, ಏರ್ ಡಿಫೆನ್ಸ್ ತಂಡ, ಬ್ರಿಡ್ಜ್ ಎಂಜಿನಿಯರಿಂಗ್ ತಂಡ, ಬ್ರಹ್ಮೋಸ್-861 ಮಿಸೈಲ್ ತಂಡ, ಕೆ9 ವಜ್ರಾ ಟ್ಯಾಂಕ್ ಗ್ರೂಪ್ ತಂಡ, ಕ್ವಿಕ್ ರೆಸ್ಪಾನ್ಸ್ ಲಡಾಖ್ ಸ್ಕೌಟ್ ತಂಡ, ಬಿಎಂಪಿ ಸಾರಥ್ ಇನ್ಫೆಂಟ್ರಿ ತಂಡ, ನಾಗಾ ಮಿಸೈಲ್ ಸಿಸ್ಟಂ ತಂಡದಿಂದ ಪರೇಡ್ ನಡೆಯಿತು.






