ಮಡಿಕೇರಿ NEWS DEESK ಮಾ.20 : ಕಾನೂನು ಮತ್ತು ನಿಯಮ ಬದ್ಧವಾಗಿ ಪೆರುಂಬಾಡಿ ಸಮೀಪದ ಬಾಳುಗೋಡಿನಲ್ಲಿ ಲೇಔಟ್‌ಗಳನ್ನು ಮಾಡಲಾಗುತ್ತಿದ್ದರು, ಇದಕ್ಕೆ ಪರಿಸರದ ಹೆಸರಿನಲ್ಲಿ ತಡೆಮಾಡುವ ಪ್ರಯತ್ನ ಮಾಡಲಾಗುತ್ತಿದೆಯೆಂದು ಲೇಔಟ್ ಮಾಲೀಕರಾದ ಡಾ.ಕೆ.ಎಸ್.ಪ್ರಸಾದ್ ಪಣಿಕ್ಕರ್ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಳುಗೋಡಿನಲ್ಲಿ ತಾವು ಕೆಲ ವರ್ಷಗಳ ಹಿಂದೆ ಪರಿವರ್ತನೆಯಾದ ಜಾಗವನ್ನೆ ಖರೀದಿ ಮಾಡಿದ್ದು, ಅದರಲ್ಲಿ ಅತ್ಯಂತ ವ್ಯವಸ್ಥಿತವಾಗಿ ನಿವೇಶನಗಳನ್ನು ರೂಪಿಸಲಾಗುತ್ತಿದೆ. ಈ ಹಂತಗಳಲ್ಲಿ ಯಾವುದೇ ರೀತಿಯಲ್ಲು ಅಲ್ಲಿನ ಪರಿಸರಕ್ಕೆ ಧಕ್ಕೆಯುಂಟಾಗುವ ಕೆಲಸ ನಡೆಸಿಲ್ಲವೆಂದು ಸ್ಪಷ್ಟಪಡಿಸಿದರು. ಲೇಜೌಟ್‌ನ್ನು ಅತ್ಯಂತ ವೈಜ್ಞಾನಿಕವಾಗಿ ಸಿದ್ಧಪಡಿಸಲಾಗುತ್ತಿದ್ದು, ಲೇಔಟ್‌ನಲ್ಲಿ ಸುಮಾರು 70 ನಿವೇಶನಗಳು ಬರುತ್ತದೆಯಾದರೆ, ಲೇಜೌಟ್ ಒಳಭಾಗ 40 ಅಡಿ ಅಗಲದ ರಸ್ತೆಯನ್ನು ನಿರ್ಮಿಸಲಾಗಿದೆ. ಇಂತಹ ಒಂದು ಪ್ರಯತ್ನ ಇತರೆ ಯಾವುದೇ ಲೇಔಟ್‌ಗಳಲ್ಲು ಇಲ್ಲವೆಂದು ಅವರು ತಿಳಿಸಿದರು. ಬಾಳೂಗೋಡಿನಲ್ಲಿ ಲೇಔಟ್‌ನೊಂದಿಗೆ ಅಮೃತಾನಂದಮಯಿ ಚಾರಿಟೇಬಲ್ ಟ್ರಸ್ಟ್ನಿಂದ ಆಸ್ಪತ್ರೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಇದು ಲೇಔಟ್ ಸೇರಿದಂತೆ ಸುತ್ತಮುತ್ತಲ ನಿವಾಸಿಗಳಿಗೆ ಹೆಚ್ಚಿನ ಅನುಕೂಲತೆಯನ್ನು ಒದಗಿಸಲಿದೆ. ಲೇಔಟ್ ನಿರ್ಮಾಣದಿಂದ ಸುತ್ತಮುತ್ತಲ ಪ್ರದೇಶವೂ ಅಭಿವೃದ್ಧಿಯನ್ನು ಕಾಣಲು ಸಾಧ್ಯವಿದೆಯೆಂದು…
ಲೇಖಕ: admin
ಮಡಿಕೇರಿ NEWS DESK ಮಾ.20 : ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ವಶದಲ್ಲಿರುವ ಭಾಗಮಂಡಲ ತಲಕಾವೇರಿ ದೇವಸ್ಥಾನ ಮತ್ತು ಅಂಜನಗೇರಿ ಬೆಟ್ಟಗೇರಿ ಗ್ರಾಮದ ಶ್ರೀ ಬೆಳ್ಳಾರಿಕಮ್ಮ ದೇವಾಲಯಕ್ಕೆ ಸೇರಿದ ಒತ್ತುವರಿಯಾಗಿರುವ ಜಾಗವನ್ನು, ಆಯಾ ಒತ್ತುವರಿದಾರರು ಸ್ವಯಂ ಇಚ್ಛೆಯಿಂದ ತೆರವುಗೊಳಿಸಬೇಕೆಂದು ಕೊಡಗು ಏಕೀಕರಣ ರಂಗ ಮನವಿ ಮಾಡಿದೆ. ಸುದ್ದಿಗೋಷ್ಠಿಯಲ್ಲಿ ಕೊಡಗು ಏಕೀಕರಣ ರಂಗದ ಪ್ರಮುಖರಾದ ಮಂದಪoಡ ಕೆ.ಅಪ್ಪಚ್ಚು ಅವರು ಮಾತನಾಡಿ, ಈ ಎರಡೂ ದೇವಸ್ಥಾನಗಳ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಸಮುದಾಯಗಳ ಸಮಾಜಕ್ಕೆ ಸಂಘಟನೆಯ ಮೂಲಕ ಪತ್ರವನ್ನು ಬರೆದು, ಒತ್ತುವರಿದಾರರ ಮನವೊಲಿಸಿ ದೇವಸ್ಥಾನದ ಜಾಗವನ್ನು ತೆರವು ಮಾಡುವಂತೆ ಕೇಳಿಕೊಳ್ಳಲಾಗಿದೆಯೆಂದು ತಿಳಿಸಿದರು. ಸಂಘಟನೆಯ ಮನವಿಗೆ ಸ್ಪಂದಿಸಿ ಒತ್ತುವರಿದಾರರು, ಒತ್ತುವರಿಯನ್ನು ತೆರವುಗೊಳಿಸಲಿ. ಇಲ್ಲವಾದಲ್ಲಿ ಸರ್ಕಾರದ ಮೂಲಕ ಒತ್ತುವರಿ ತೆರವಿನ ಪ್ರಕ್ರಿಯೆಗಳು ನಡೆಯಬೇಕೆಂದು ತಿಳಿಸಿದ ಅವರು, ಶ್ರೀ ಭಗಂಡೇಶ್ವರ ಮತ್ತು ತಲಕಾವೇರಿ ದೇವಾಲಯದ ಜಮೀನು ಮತ್ತು ಅಂಜನಗೇರಿ ಬೆಟ್ಟಗೇರಿ ಗ್ರಾಮದ ಶ್ರೀ ಬೆಳ್ಳಾರಿಕಮ್ಮ ದೇವಾಲಯದ ದೇವರಕಾಡು ಒತ್ತುವರಿಯಾಗಿ, ಕಾಫಿ ತೊಟಗಳಾಗಿ, ರೆಸಾರ್ಟ್ಗಳಾಗಿ ಬದಲಾಗುತ್ತಿದ್ದರು ಕ್ರಮ…
ಸುಂಟಿಕೊಪ್ಪ ಮಾ.20 NEWS DESK : 7ನೇ ಹೊಸಕೋಟೆಯ ತೊಂಡೂರು ಗ್ರಾಮದಲ್ಲಿ ನೆಲೆಸಿದ್ದ ಕಾಫಿ ಬೆಳೆಗಾರ ಚೇನಂಡ ಎ.ಉತ್ತಯ್ಯ (92) ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೆಯು ಮಡಿಕೇರಿಯ ಕೊಡವ ರುದ್ರಭೂಮಿಯಲ್ಲಿ ನೆರವೇರಿತು. ಮೃತರು ಓರ್ವ ಪುತ್ರ ಮತ್ತು ಪುತ್ರಿಯನ್ನು ಆಗಲಿದ್ದಾರೆ. ಚೇನಂಡ ಉತ್ತಯ್ಯ ಅವರು ಈ ಬಾರಿಯ ಹಾಕಿ ಉತ್ಸವ ನಡೆಸುವ ಕುಟುಂಬದ ಪಟ್ಟೆದಾರರಾಗಿದ್ದರು. ಉತ್ತಯ್ಯ ಅವರು ಲಯನ್ಸ್ ಕ್ಲಬ್‍ನ ಹಿರಿಯ ಸದಸ್ಯರಾಗಿದ್ದು, ಕೊಡಗರಹಳ್ಳಿಯ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಹಾಗೂ ಅಧ್ಯಕ್ಷರಾಗಿ ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ಕೊಡಗರಹಳ್ಳಿಯ ಶ್ರೀ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವಸ್ಥಾನ ಟ್ರಸ್ಟ್‍ನ ಸ್ಥಾಪಕ ಟ್ರಸ್ಟಿಗಳಲ್ಲಿ ಒಬ್ಬರಾಗಿದ್ದರು. ಸುಂಟಿಕೊಪ್ಪ ಕೊಡವ ಸಮಾಜದ ಅಧ್ಯಕ್ಷರಾಗಿ ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಮಡಿಕೇರಿ NEWS DESK ಮಾ.20 : ಪ್ರವೇಶ ಪತ್ರ ಇಲ್ಲ ಎನ್ನುವ ಕಾರಣದಿಂದ ಬೆಟ್ಟಗೇರಿಯ ಇಬ್ಬರು ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಅವಕಾಶವನ್ನು ನಿರಾಕರಿಸಿರುವ ಅಧಿಕಾರಿಗಳ ಕ್ರಮವನ್ನು ವಿರೋಧಿಸಿರುವ ಗ್ರಾಮಸ್ಥರು ಹಾಗೂ ಮಕ್ಕಳ ಪೋಷಕರು, ಮಾ.23ರಂದು ನಡೆಯುವ ಎರಡನೇ ಪರೀಕ್ಷೆ ಬರೆಯಲು ಈ ಮಕ್ಕಳಿಗೆ ಅವಕಾಶ ನೀಡಬೇಕು, ಇಲ್ಲವಾದಲ್ಲಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಬೆಟ್ಟಗೇರಿ ಗ್ರಾಮಸ್ಥರಾದ ಹೊಸೂರು ಗಿರೀಶ್ ಮಾತನಾಡಿ, ಬೆಟ್ಟಗೇರಿ ಪ್ರೌಢಶಾಲೆಯಲ್ಲಿ 15 ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಪ್ರವೇಶ ಪತ್ರ ಬಂದಿದ್ದರು, ಇಬ್ಬರು ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಪತ್ರ ಬಂದಿಲ್ಲ. ಮಕ್ಕಳ ಭವಿಷ್ಯದ ಹಿತ ದೃಷ್ಟಿಯಿಂದ ಪರೀಕ್ಷೆಗೆ ಅವಕಾಶ ನೀಡಬೇಕಿದ್ದ ಅಧಿಕಾರಿಗಳು,ಅನುಮತಿ ನೀಡದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಬೆಟ್ಟಗೇರಿ ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ದೊರಕದಿರುವುದಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ ಅವರು, ಮುಂದಿನ ಸೋಮವಾರ ನಡೆಯುವ ಪರೀಕ್ಷೆಗೆ ಮೊದಲ ಪರೀಕ್ಷೆ ವಂಚಿತ ಇಬ್ಬರು ಮಕ್ಕಳಿಗೆ ಅವಕಾಶ ನೀಡಬೇಕೆಂದು ಪುನರುಚ್ಚರಿಸಿದರು. ಪರೀಕ್ಷೆಗೆ ಅವಕಾಶ…
ಕುಶಾಲನಗರ, ಮಾ.19 NEWS DESK : ತೊರೆನೂರಿನಲ್ಲಿ ಯುಗಾದಿಯ ಅಂಗವಾಗಿ ಕೃಷಿಕರಿಂದ ಹೊನ್ನಾರು ಉತ್ಸವ ಸಂಭ್ರಮದಿಂದ ನಡೆಯಿತು. ಗ್ರಾಮದ ಬಸವೇಶ್ವರ ದೇವಾಲಯದ ಬಳಿ ಆಕಳುಗಳೊಂದಿಗೆ ಆಗಮಿಸಿದ ಅನ್ನದಾತರು ಗ್ರಾಮದ ದೈವ ಬಸವೇಶ್ವರ ಸನ್ನಿಧಿಯಲ್ಲಿ ಸಾಮೂಹಿಕವಾಗಿ ಪೂಜೆ ನೆರವೇರಿಸಿದರು. ಬಳಿಕ ಗ್ರಾಮದ ದೇವರ ಭೂಮಿಗೆ ತೆರಳಿ ಎತ್ತು ಹಾಗೂ ನೇಗಿಲು ಗಳಿಗೆ ಪೂಜೆ ಸಲ್ಲಿಸಿದ ನಂತರ ವರ್ಷದ ಮೊದಲ ಉಳುಮೆಯನ್ನು ಆರಂಭಿಸಿದರು. ಬಳಿಕ ಗ್ರಾಮದ ಮುಖ್ಯ ಬೀದಿಗಳಲ್ಲಿ ಹೊನ್ನಾರಿನೊಂದಿಗೆ ಮೆರವಣಿಗೆಯಲ್ಲಿ ಧಾವಿಸಿ ಗ್ರಾಮದ ಹೊರಬದಿಯ ಮುಖ್ಯ ರಸ್ತೆಯ ಬಸವೇಶ್ವರ ದೇವಾಲಯದಿಂದ ತಮ್ಮ ಮನೆಗಳಿಗೆ ಮರಳಿದರು. ಅಲಂಕೃತ ಉಳುಮೆಯ ಎತ್ತುಗಳ ಹೊನ್ನಾರು ಉತ್ಸವ ಕಣ್ತುಂಬಿಕೊಳ್ಳಲು ಗ್ರಾಮದ ಮಹಿಳೆಯರು ಮಕ್ಕಳಾದಿಯಾಗಿ ಇಡೀ ಗ್ರಾಮಸ್ಥರು ಒಂದೆಡೆ ಸೇರಿ ಸಂಭ್ರಮಿಸಿದರು. ದೇವಾಲಯ ಸಮಿತಿ ಅಧ್ಯಕ್ಷ ಟಿ.ಬಿ.ಜಗದೀಶ್, ಕಾರ್ಯದರ್ಶಿ ಟಿ.ಎಲ್.ಮಹೇಶ್, ಕಾರ್ಯಾಧ್ಯಕ್ಷ ಟಿ.ಜಿ.ಶಿವಣ್ಣ, ಗೌರವ ಅಧ್ಯಕ್ಷ ಟಿ.ಡಿ.ಈಶ್ವರ್, ಪ್ರಮುಖರಾದ ಟಿ.ಜಿ.ಪ್ರೇಮಕುಮಾರ್, ಚಿದಾನಂದ, ಗ್ರಾಪಂ ಮಾಜಿ ಸದಸ್ಯ ಟಿ.ಸಿ.ಶಿವಕುಮಾರ್, ಶಿಕ್ಷಕ ರಮೇಶ್, ಸಣ್ಣಪ್ಪ, ಸೋಮಣ್ಣ, ತ್ರಿಣೇಶ್, ಸುನಿಲ್, ಮೊದಲಾದವರಿದ್ದರು. ವರದಿ : ಕೆ.ಎಸ್.ಮೂರ್ತಿ
ಮಡಿಕೇರಿ NEWS DESK ಮಾ.20 : ವಾಂಡರರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಏ.1ರಿಂದ 1 ತಿಂಗಳ ಕಾಲ 32ನೇ ವರ್ಷದ ಉಚಿತ ಕ್ರೀಡಾ ಶಿಬಿರವನ್ನು ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆಯೆಂದು ಕ್ಲಬ್ ಅಧ್ಯಕ್ಷ ಕೋಟೇರ ಎನ್.ಮುದ್ದಯ್ಯ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಹಾಕಿ ಅಥ್ಲೆಟಿಕ್ಸ್ ಮತ್ತು ಯೋಗವನ್ನು ಒಳಗೊಂಡoತೆ ಶಿಬಿರ ನಡೆಯಲಿದೆ. ಶಿಬಿರ ಇದೇ ಮಾ.29ರಂದು ಆರಂಭಗೊoಡರು, ಹಿರಿಯ ಕ್ರೀಡಾ ಮಾರ್ಗದರ್ಶಕರಾಗಿದ್ದ ದಿ.ಸಿ.ವಿ.ಶಂಕರ್ ಅವರ ಜನ್ಮದಿನವಾದ ಏ.1 ರಂದು ಶಿಬಿರಕ್ಕೆ ಅಧಿಕೃತ ಚಾಲನೆ ನೀಡಲಾಗುತ್ತದೆ. ಸಮಾರೋಪ ಮೇ3 ರಂದು ನಡೆಯಲಿದೆಯೆಂದು ಮಾಹಿತಿಯನ್ನಿತ್ತರು. ಕ್ಲಬ್‌ನ ಪ್ರಮುಖರಾದ ಬೊಪ್ಪಂಡ ಶ್ಯಾಂ ಮಾತನಾಡಿ, 1934ರಲ್ಲಿ ಆರಂಭಗೊAಡ ವಾಂಡರ‍್ಸ್ ಸ್ಪೋರ್ಟ್ಸ್ ಕ್ಲಬ್ ಮೂಲಕ ಕಳೆದ 31 ವರ್ಷಗಳಿಂದ ಬೇಸಿಗೆ ಕ್ರೀಡಾ ಶಿಬಿರವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಕ್ರೀಡಾ ಮರ್ಗದರ್ಶಕರಾಗಿದ್ದ ದಿ.ಸಿ.ವಿ.ಶಂಕರ್ ಅವರ ಗರಡಿಯಲ್ಲಿ ಪಳಗಿದ್ದ ಎಂ.ಪಿ.ಗಣೇಶ್, ಬಿ.ಪಿ.ಗೋವಿಂದ ಅವರು ಒಲಂಪಿಯನ್‌ಗಳಾಗಿದ್ದು, ಹಾಕಿ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದ್ದಾರೆ. ಇಲ್ಲಿಯವರೆಗಿನ 11 ಮಂದಿ…
ಪರಸ್ಪರ ಕಾರುಣ್ಯ ಸಹನೆ, ಮತ್ತು ಪ್ರೀತಿಯ ಸಂಕೇತವಾದ ಈದುಲ್ ಫಿತರ್ ಹಬ್ಬವು ವಿಶ್ವಾಸಿಗಳು ಸಂಭ್ರಮಿಸುವ ಕ್ಷಣವಾಗಿದೆ ..ಕಳೆದ ಮೂವತ್ತು ದಿನಗಳಿಂದ ಹಸಿವು, ದಾಹದೊಂದಿಗೆ ವಿಶ್ವಾಸಿಗಳು ನಿರ್ವಹಿಸಿದ ಉಪವಾಸದಿಂದ ನಮ್ಮಲ್ಲಿರುವ ಎಲ್ಲಾ ರೀತಿಯ ಕೆಡುಕುಗಳನ್ನು ದೂರಿಕರಿಸುವುದರೊಂದಿಗೆ ನಮ್ಮನ್ನು ಒಳಿತಿನಡೆಗೆ ಕೊಂಡೊಯ್ಯಲು ಸಹಕಾರಿಯಾಗುತ್ತದೆ ಇಸ್ಲಾಮಿನ ಅತ್ಯುತ್ತಮ ಸಂದೇಶವನ್ನು ಸರ್ವರಿಗೂ ತಲುಪಿಸುವ ಹೊಣೆಗಾರಿಕೆಯು ಮುಸ್ಲಿಮರಿಗಿದೆ..ಇಂದು ಲೋಕಾದ್ಯಂತ ಜನಸಾಮಾನ್ಯರು ಯುಧ್ದದ ಪರಿಣಾಮದಿಂದ ನಲುತ್ತಿರುವುದು ದುಃಖಕರ ಸಂಗತಿ .ಯಾರದ್ದೋ ಸ್ವಾರ್ಥಕ್ಕಾಗಿ ಇನ್ಯಾರದ್ದೋ ಅಧಿಕಾರಕ್ಕಾಗಿ ಬಾಂಬುಗಳು ಮಿಸೈಲುಗಳಿಂದ ಮಕ್ಕಳು ಮಹಿಳೆಯರು ನಿರಪರಾಧಿಗಳ ಜೀವ ಬಲಿ ಪಡೆಯುತ್ತಿರುವುದು ಬಹು ದೊಡ್ಡ ದುರಂತ ನೀವು ಭೂಮಿಯಲ್ಲಿರವವರ ಮೇಲೆ ಕರುಣೆ ತೋರಿದರೆ ಆಕಾಶದಲದಲ್ಲಿರುವವನು ನಿಮ್ಮ ಮೇಲೆ ಕರುಣೆ ತೋರುತ್ತಾನೆ ಎಂದು ತಿಳಿಸಿದ ಪ್ರವಾದಿ (ಸ)ರವರ ಅನುಯಾಯಿಗಳು ಎಂದಿಗೂ ಹಿಂಸಾತ್ಮಕ ಕೃತ್ಯವನ್ನು ಮಾಡಲಾರರು. ಪರಸ್ಪರ ಬಿಕ್ಕಟ್ಟು ಬಿನ್ನಾಭಿಪ್ರಾಯ, ಅನಕ್ಯತೆ ಹಾಗೂ ಒಗ್ಗಟ್ಟಿನ ಕೊರತೆಯಿಂದ ಮುಸ್ಲಿಮರು ಬಳಲುತ್ತಿದ್ದಾರೆ , ಆದ್ದರಿಂದ ಪರಸ್ಪರ ,ಸಮಾಲೋಚನೆ , ಸಹಕಾರ ಮತ್ತು ಒಗ್ಗಟ್ಟಿಂನಿಂದ ಮುಂದೆ ಸಾಗಬೇಕಾಗಿದೆ ಎಂದು ಮಸ್ಜಿದ್ ಉರ್ ರಹ್ಮಾ…
ಕುಶಾಲನಗರ, NEWS DESK ಮಾ೨೦: ಮುಸಲ್ಮಾನರ ಪವಿತ್ರ ಧರ್ಮಗಳಲ್ಲಿ ಒಂದಾದ ಈದುಲ್ ಫಿತರ್ ಹಬ್ಬವನ್ನು ಕುಶಾಲನಗರದ ಹಿಲಾಲ್ ಮಸೀದಿಯಲ್ಲಿ ಆಚರಿಸಲಾಯಿತು. ನಿರಂತರ ೨೯ ದಿನಗಳ ವ್ರತಾಚರಣೆಯ ನಂತರ ಶಾಫಿ ಬಾಂಧವರು ಈದುಲ್ ಫಿತರ್ ಹಬ್ಬವನ್ನು ಆಚರಿಸಿದರು. ಹಬ್ಬದ ದಿನದಂದು ಬೆಳಿಗ್ಗೆ ವಿಶೇಷವಾದ ಪ್ರಾರ್ಥನೆ ನೆರವೇರಿಸಲಾಯಿತು. ಶಾಂತಿ, ಸೌಹಾರ್ದತೆ, ಕರುಣೆ, ಸಹನೆ ಬಗ್ಗೆ ಧರ್ಮಗುರುಗಳಾದ ಶಾಫಿ ಫೈಜ಼ಿ ಇರ್ಪಾನಿಯವರು ಪ್ರಭಾಷಣ ನೀಡಿದರು. ಜೊತೆಗೆ ಈದುಲ್ ಫಿತರ್ ನ ಪ್ರಾಮುಖ್ಯತೆ ಬಗ್ಗೆ, ಪ್ರತಿಯೊಬ್ಬರೂ ಖಡ್ಡಾಯವಾಗಿ ನೀಡಬೇಕಾದ ದಾನದ ಬಗ್ಗೆ ಅವರು ಭೋದನೆ ನೀಡಿದರು. ನಮಾಜ಼್ ನ ನಂತರ ಪರಸ್ಪರ ಈದ್ ನ ಶುಭಾಶಯ ಹಂಚಿಕೊಂಡಿದರು. ಈ ಸಂದರ್ಭ ಮಾತನಾಡಿದ ಹಿಲಾಲ್ ಮಸೀದಿ ಅಧ್ಯಕ್ಷರಾದ ರಫೀಕ್ ಹಾಗೂ ಕಾರ್ಯದರ್ಶಿ ಕರೀಂ, ಹಸಿದವನ ನೋವನ್ನು ಅರಿಯುವ ಉದ್ದೇಶದಿಂದ ನಾವು ಮೂವತ್ತು ದಿನಗಳ ಕಾಲ ವ್ರತಾಚರಣೆ ಮಾಡುತ್ತೇವೆ. ಎಲ್ಲರಿಗೂ ಈದುಲ್ ಫಿತರ್ ಹಬ್ಬದ ಶುಭಾಶಯಗಳು ಎಂದರು. ಈ ಸಂದರ್ಭ ಹಿಲಾಲ್ ಮಸೀದಿ ಕಮಿಟಿ ಪ್ರಮುಖರು, ಸದಸ್ಯರು, ನುಸ್ರತುಲ್ ಇಸ್ಲಾಂ…
ಮಡಿಕೇರಿ ಮಾ.20 NEWS DESK : ಜಿಲ್ಲೆಯಲ್ಲಿ ಗೃಹ ಬಳಕೆ ಅಡುಗೆ ಅನಿಲ ಸಂಪರ್ಕ ಹೊಂದಿರುವ ಪ್ರತಿ ಮನೆಗೂ ಅಡುಗೆ ಅನಿಲ ಸಿಲಿಂಡರ್ ಅನ್ನು ಪೂರೈಕೆ ಮತ್ತು ಬೇಡಿಕೆಗೆ ತಕ್ಕಂತೆ ಸರ್ಕಾರದ ನಿಯಮಾನುಸಾರ ಸರಬರಾಜು ಮಾಡುವಂತೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಅಡುಗೆ ಅನಿಲ ವಿತರಕರ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಮೆರಿಕ ಮತ್ತು ಇಸ್ರೇಲ್ ದೇಶಗಳು ಇರಾನ್ ವಿರುದ್ದ ಸಾರಿರುವ ಸಮರ ತೀವ್ರಗೊಂಡಿರುವ ಪರಿಣಾಮವಾಗಿ ಅಡುಗೆ ಅನಿಲ ಪೂರೈಕೆ ಬಗ್ಗೆ ಸಾರ್ವಜನಿಕರಲ್ಲಿ ಒಂದು ರೀತಿಯ ಆತಂಕ ಉಂಟಾಗಿದ್ದು, ಇದನ್ನು ನಿವಾರಿಸಬೇಕು. ಆ ನಿಟ್ಟಿನಲ್ಲಿ ಯಾರೂ ಸಹ ಆತಂಕಕ್ಕೆ ಒಳಗಾಗದಂತೆ ಗೃಹ ಬಳಕೆ ಅಡುಗೆ ಅನಿಲವನ್ನು ಪೂರೈಸಬೇಕು ಎಂದು ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು. ಸರ್ಕಾರ ಕಾಲ ಕಾಲಕ್ಕೆ ಹೊರಡಿಸುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಗೃಹ ಬಳಕೆಯ ಎಲ್‍ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ. ಒಟ್ಟಾರೆ…
ಮಡಿಕೇರಿ NEWS DESK ಮಾ.20 : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಪೊನ್ನಂಪೇಟೆ ತಾಲೂಕಿನ ಅರುವತೊಕ್ಲು ಗ್ರಾಮಕ್ಕೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರು ಇಂದು ಭೇಟಿ ನೀಡಿದರು. ತಮ್ಮ ಅನುದಾನದಲ್ಲಿ ಕೈಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದರು. ಅರುವತ್ತೊಕ್ಲು ಗ್ರಾಮದ ಮೈಸೂರಮ್ಮ ನಗರಕ್ಕೆ, ಗೋಣಿಕೊಪ್ಪ ಬೈಪಾಸ್ ನಿಂದ ತೆರಳುವ ರಸ್ತೆಗೆ ರೂ.18 ಲಕ್ಷಗಳಲ್ಲಿ ಕೈಗೊಂಡ ಕಾಮಗಾರಿಯ ಲೋಕಾರ್ಪಣೆ ಮಾಡಿದ ಬಳಿಕ, ರೂ.15 ಲಕ್ಷಗಳಲ್ಲಿ ನಿರ್ಮಾಣಗೊಂಡ ಕಾಡ್ಲ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ತೆರಳುವ ರಸ್ತೆಯ ಉದ್ಘಾಟನೆಯನ್ನು ನೆರವೇರಿಸಿದರು. ಬಳಿಕ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ತೆರಳಿದ ಶಾಸಕರು ಪೂಜೆ ಸಲ್ಲಿಸಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು. ಶಾಸಕರ ಅನುದಾನ ರೂ.3.50 ಲಕ್ಷದಲ್ಲಿ, ಕಾಡ್ಯಮಾಡ ಐನ್ ಮನೆಗೆ ತೆರಳುವ ಓಣಿಗೆ ಮೆಟ್ಟಲುಗಳನ್ನು ನಿರ್ಮಿಸಲಾಗಿದೆ. ಐನ್ ಮನೆ ಪ್ರಮುಖರು ನೀಡಿದ ಆತಿಥ್ಯವನ್ನು ಶಾಸಕರು ಸ್ವೀಕರಿಸಿದರು. ಈ ಕಾರ್ಯಕ್ರಮಕ್ಕೆ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮಿದೇರಿರ…






