ಲೇಖಕ: admin

ವಿರಾಜಪೇಟೆ ಡಿ.19 NEWS DESK : ಕ್ರೀಡಾಕೂಟಗಳು ವಿದ್ಯಾರ್ಥಿಗಳಲ್ಲಿ ಶಾರೀರಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯ ಮತ್ತು ಶಿಸ್ತುಬದ್ಧ ನಾಯಕತ್ವದ ಗುಣಗಳನ್ನು ಬೆಳೆಸುತ್ತದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ಭಾರತೀಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಎಸ್.ಅರುಣ್ ಮಾಚಯ್ಯ ಹೇಳಿದರು. ವಿರಾಜಪೇಟೆ ಕೊಡವ ಸಮಾಜದ ಪೂಮಾಲೆ ಮಂದ್ ಮೈದಾನದಲ್ಲಿ ತ್ರಿವೇಣಿ ಶಾಲೆಯ ವಾರ್ಷಿಕ ಕ್ರೀಡಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ವಿದ್ಯಾರ್ಥಿಗಳನ್ನು ಸಾಮಾಜಿಕ ಜಾಲತಾಣದ ಹಾವಳಿಯಿಂದ ಒಂದು ಹಂತದವರೆಗೆ ತಡೆಗಟ್ಟಲು ಕ್ರೀಡೆಗಳು ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳಲ್ಲಿ ಉಂಟಾಗುತ್ತಿರುವ ನೈತಿಕ ಮೌಲ್ಯಗಳ ಕುಸಿತದ ಬಗ್ಗೆ ಶಿಕ್ಷಕರು ಹಾಗೂ ಪೋಷಕರು ಸದಾ ಜಾಗೃತರಾಗಿರಬೇಕು. ಶಿಕ್ಷಣ ಸಂಸ್ಥೆಗಳು ವಾರ್ಷಿಕ ಕ್ರೀಡಾ ದಿನಾಚರಣೆಯಂತೆ ಸಾಂಸ್ಕøತಿಕ ದಿನಾಚರಣೆಯನ್ನು ಏರ್ಪಡಿಸಿದಲ್ಲಿ ವಿದ್ಯಾರ್ಥಿಗಳಲ್ಲಿ ನಮ್ಮ ಸಂಸ್ಕøತಿ-ಪರಂಪರೆ ಬಗ್ಗೆ ಅರಿವು ಮೂಡಲು ಸಹಕಾರಿಯಾಗುತ್ತದೆ ಎಂದರು. ರಾಷ್ಟ್ರೀಯ ಹಾಕಿ ಪಟು ಮೇಕೇರಿರ ನಿತಿನ್ ತಿಮ್ಮಯ್ಯ ಕ್ರೀಡಾ ಜ್ಯೋತಿ ಬೆಳಗುವುದರೊಂದಿಗೆ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ಆಪಾಡಂಡ ಕಾರ್ಯಪ್ಪ ಅಧ್ಯಕ್ಷತೆ ವಹಿಸಿದ್ದರು. ಕೊಡವ ಸಮಾಜದ ಅಧ್ಯಕ್ಷ ಅಮ್ಮುಣಿಚಂಡ…

Read More

ಮಡಿಕೇರಿ ಡಿ.19 NEWS DESK : ಕರಾವಳಿಯ ಸಾಂಸ್ಕೃತಿಕ ನಗರಿ ಪುತ್ತೂರಿನ ಹೃದಯಭಾಗದಲ್ಲಿರುವ ಜಿ.ಎಲ್‌. ಮಾಲ್ ಇದೀಗ ಚಳಿಗಾಲದ ಸಂಭ್ರಮಕ್ಕೆ ಸಜ್ಜಾಗಿದೆ. ಶಾಪಿಂಗ್ ಪ್ರಿಯರಿಗಾಗಿ ಹಾಗೂ ಆಹಾರ ಪ್ರೇಮಿಗಳಿಗಾಗಿ ಇದೇ ಡಿಸೆಂಬರ್ 20ರಿಂದ ಜನವರಿ 04ರವರೆಗೆ ಅದ್ಧೂರಿ ‘ಜಿ.ಎಲ್‌.ಮಾಲ್ ಉತ್ಸವ’ ಹಾಗೂ ‘ಫುಡ್ ಫೆಸ್ಟಿವಲ್’ ಆಯೋಜಿಸಲಾಗಿದೆ.  ಹದಿನಾರು ದಿನಗಳ ಕಾಲ ನಡೆಯಲಿರುವ ಈ ಮೇಳವು ರಿಯಾಯಿತಿಗಳ ಮಹಾಪೂರವನ್ನೇ ಹರಿಸಲಿದ್ದು, ಗ್ರಾಹಕರಿಗೆ ಮನರಂಜನೆಯ ಜೊತೆಗೆ ಅದೃಷ್ಟ ಪರೀಕ್ಷೆಗೂ ವೇದಿಕೆ ಕಲ್ಪಿಸಿದೆ.  :: ನೋಡೋಕೆ ಎರಡು ಕಣ್ಣು ಸಾಲದು : ಏನೆಲ್ಲಾ ವಿಶೇಷತೆಗಳಿವೆ..? :: ಲಕ್ಕಿ ಡ್ರಾ ಸೌಭಾಗ್ಯ: ಮಾಲ್‌ನಲ್ಲಿ ಶಾಪಿಂಗ್ ಮಾಡುವ ಅದೃಷ್ಟಶಾಲಿ ಗ್ರಾಹಕರಿಗೆ ಅತ್ಯಾಧುನಿಕ ಸ್ಮಾರ್ಟ್‌ಫೋನ್ ಗೆಲ್ಲುವ ಬಂಪರ್ ಅವಕಾಶವಿದೆ. ಆಕರ್ಷಕ ರಿಯಾಯಿತಿಗಳು: ಮಾಲ್‌ನ ಎಲ್ಲಾ ಪ್ರಮುಖ ಮಳಿಗೆಗಳಲ್ಲಿ ಹಬ್ಬದ ಪ್ರಯುಕ್ತ ವಿಶೇಷ ದರ ಕಡಿತ ಹಾಗೂ ಶಾಪಿಂಗ್ ಕೂಪನ್‌ಗಳು ಲಭ್ಯವಿವೆ. :: ರೀಲ್ಸ್ ಚಾಲೆಂಜ್ : : ಸಾಮಾಜಿಕ ಜಾಲತಾಣ ಪ್ರಿಯರಿಗಾಗಿ ವಿಶೇಷ ‘ರೀಲ್ಸ್ ಚಾಲೆಂಜ್’ ಆಯೋಜಿಸಲಾಗಿದ್ದು, ಸೃಜನಶೀಲತೆಗೆ ಬಹುಮಾನದ…

Read More

ಮಡಿಕೇರಿ ಡಿ.19 NEWS DESK : ಶಿವನ ಆರಾಧನೆಯ ಭಕ್ತಿ ಮಾರ್ಗದ ಮೂಲಕ ಆತ್ಮ ಪರಿವರ್ತನೆಯ ಮಹಾನ್ ಚಿಂತನೆಯೊಂದಿಗೆ ಉಡುಪಿಯಿಂದ ಆರಂಭಗೊಂಡಿರುವ ‘ಆದಿಯೋಗಿ ರಥ ಯಾತ್ರ್ರೆ’ಯು ಡಿ.22ರಂದು ದಕ್ಷಿಣ ಕನ್ನಡ ಜಿಲ್ಲೆಯಿಂದ ಮದೆನಾಡಿನ ಮೂಲಕ ಕೊಡಗನ್ನು ಪ್ರವೇಶಿಸಲಿದ್ದು, ಅಂದು ನಗರದಲ್ಲಿ ನಡೆಯಲಿರುವ ಭಕ್ತಿ ಭಾವದ ರಥ ಯಾತ್ರೆಯಲ್ಲಿ ಭಕ್ತಾದಿಗಳು ಪಾಲ್ಗೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ. ಕೊಯಂಬತ್ತೂರಿನ ಈಶಾ ಯೋಗ ಕೇಂದ್ರದ ವತಿಯಿಂದ ಶಿವರಾತ್ರಿಯ ಹಿನ್ನೆಲೆಯಲ್ಲಿ ಇದೇ ಡಿ.7ರಿಂದ ಶ್ರೀ ಕೃಷ್ಣನ ನಗರಿ ಉಡುಪಿಯಿಂದ ಆದಿಯೋಗಿ ರಥ ಯಾತ್ರೆಗೆ ಚಾಲನೆ ದೊರಕಿದೆ. ಯಾತ್ರೆ ಫೆ.13ರಂದು ಕೊಯಂಬತ್ತೂರಿನ ಈಶಾ ಕೇಂದ್ರವನ್ನು ತಲುಪಲಿದ್ದು, ಒಟ್ಟು 1 ಸಾವಿರ ಕಿ.ಮೀ. ಅಂತರವನ್ನು 70 ದಿನಗಳ ಕಾಲ ಕ್ರಮಿಸಲಿದೆ. ಈ ಸಂದರ್ಭ ನೂರಕ್ಕೂ ಹೆಚ್ಚಿನ ಗ್ರಾಮಗಳನ್ನು ಹಾದು ಹೋಗಲಿದೆಯೆಂದು ಈಶಾ ಯೋಗ ಕೇಂದ್ರ್ರದ ಸ್ವಯಂ ಸೇವಕರಾದ ಎಂ.ಧನಂಜಯ್ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು. :: ಮಡಿಕೇರಿಯಲ್ಲಿ ರಥ ಯಾತ್ರೆ :: ರಥ ಯಾತ್ರೆ ಪ್ರಸ್ತುತ ಪುತ್ತೂರನ್ನು ಹಾದು ಸುಳ್ಯದತ್ತ ಬರುತ್ತಿದ್ದು,…

Read More

ಮಡಿಕೇರಿ ಡಿ.19 NEWS DESK : ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ, ಸಮುದಾಯ ವೈದ್ಯಕೀಯ ವಿಭಾಗದ ವತಿಯಿಂದ ಉಪನ್ಯಾಸ ಕಾರ್ಯಕ್ರಮ ನಡೆಯಿತು. “ಮಾನಸಿಕ ಅಸ್ವಸ್ಥತೆ ಮಹಾಮಾರಿ: ಆರೈಕೆ ನೀಡುವವರ ದೃಷ್ಟಿಕೋನ” ಎಂಬ ವಿಷಯದ ಮೇಲೆ ಟೆಕ್ಸಿಲಾ ಅಮೆರಿಕನ್ ಯುನಿವರ್ಸಿಟಿ ಕಾಲೇಜ್ ಆಫ್ ಮೆಡಿಸಿನ್, ಗಯಾನಾ, ಇಲ್ಲಿನ ಮುಖ್ಯ ಶೈಕ್ಷಣಿಕ ಅಧಿಕಾರಿ ಹಾಗೂ ಡೀನ್ ಆಗಿರುವ ಡಾ.ಧೀರಜ್ ಬನ್ಸಾಲ್ (ಎಂ.ಡಿ.,ಎಂ.ಪಿ.ಎಚ್.) ಅವರು ಉಪನ್ಯಾಸ ನೀಡಿದರು. ತಮ್ಮ ಉಪನ್ಯಾಸದಲ್ಲಿ ಮಾನಸಿಕ ಅಸ್ವಸ್ಥತೆಗಳ ಹೆಚ್ಚುತ್ತಿರುವ ಪ್ರಮಾಣ, ಆರೋಗ್ಯ ವ್ಯವಸ್ಥೆಯ ಮೇಲಿನ ಪರಿಣಾಮ, ಹಾಗೂ ರೋಗಿಗಳಿಗೆ ಸಮಗ್ರ ಆರೈಕೆ ನೀಡುವಲ್ಲಿ ಆರೈಕೆದಾರರ ಪಾತ್ರದ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ.ರಾಮಚಂದ್ರ ಕಾಮತ್ ಅವರು ಸ್ವಾಗತವನ್ನು ನೀಡಿದರು. ಮಾನಸಿಕ ಆರೋಗ್ಯವು ಸಾರ್ವಜನಿಕ ಆರೋಗ್ಯದ ಪ್ರಮುಖ ಅಂಶವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮಕ್ಕೆ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕರಾದ ಡಾ.ಲೋಕೇಶ್ ಎ.ಜೆ. ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು, ಬೋಧಕ…

Read More

ಮಡಿಕೇರಿ ಡಿ.19 NEWS DESK : ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ ನ್ಯಾಯಾಲಯದಲ್ಲಿ ಬಾಕಿಯಿದ್ದ ಪ್ರಕರಣಗಳು 2,553 ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳು 12,297, ಒಟ್ಟು 14,850 ಪ್ರಕರಣಗಳು ರಾಜಿ ತೀರ್ಮಾನವಾಗಿರುತ್ತದೆ. ಈ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜಿ ಸಂಧಾನದ ಒಟ್ಟು ಮೊತ್ತ ರೂ.53,75,54,248. ಜಿಲ್ಲೆಯಾದ್ಯಂತ ಒಟ್ಟು 14 ಪೀಠಗಳು ಕಾರ್ಯನಿರ್ವಹಿಸಿದ್ದವು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಅವರು ತಿಳಿಸಿದ್ದಾರೆ. ಜಿಲ್ಲೆಯ ಎಲ್ಲಾ ನ್ಯಾಯಾಧೀಶರುಗಳು, ವಕೀಲರುಗಳು, ಸಿಬ್ಬಂದಿ ವರ್ಗ, ವಿಮಾ ಕಂಪನಿ ಮತ್ತು ಬ್ಯಾಂಕ್ ಅಧಿಕಾರಿಗಳು ಭಾಗವಹಿಸಿದ್ದರು. ಕೊಡಗು ಜಿಲ್ಲೆಯಾದ್ಯಂತ ಮತ್ತು ತಾಲ್ಲೂಕು ನ್ಯಾಯಾಲಯಗಳಲ್ಲಿ 2025 ನವೆಂಬರ್, 30 ರಂದು ಒಟ್ಟು 18,049 ಪ್ರಕರಣಗಳು ವಿಚಾರಣೆಗೆ ಬಾಕಿಯಿದ್ದು, ಅವುಗಳ ಪೈಕಿ 6,361 ಸಿವಿಲ್ ಪ್ರಕರಣಗಳು ಹಾಗೂ 11,688 ಕ್ರಿಮಿನಲ್ ಪ್ರಕರಣಗಳಿದ್ದು, ಈ ಪ್ರಕರಣಗಳಲ್ಲಿ 5,754 ರಾಜಿಯಾಗಬಹುದಾದ ಪ್ರಕರಣಗಳಾಗಿರುತ್ತದೆ. ಅವುಗಳ ಪೈಕಿ 3,321 ಪ್ರಕರಣಗಳನ್ನು ರಾಜಿ ಸಂಧಾನಕ್ಕಾಗಿ ತೆಗೆದುಕೊಳ್ಳಲಾಗಿತ್ತು. ರಾಜಿ ಸಂಧಾನಕ್ಕಾಗಿ ತೆಗೆದುಕೊಂಡ…

Read More

ಕುಶಾಲನಗರ NEWS DESK : ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಸೋಮವಾರಪೇಟೆ ಹಾಗೂ ಕುಶಾಲನಗರ ಕ್ಲಸ್ಟರ್ ಕೇಂದ್ರದ ಆಶ್ರಯದಲ್ಲಿ ಬುಧವಾರ ಕುಶಾಲನಗರ ಪಿಎಂಶ್ರೀ ಶಾಲಾ ಸಭಾಂಗಣದಲ್ಲಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ, ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಂಡಿತು. ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ವಿವಿಧ ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದರು. ಮಕ್ಕಳು ಕಂಠಪಾಠ, ಧಾರ್ಮಿಕ ಪಠಣ, ಛದ್ಮವೇಷ ಸ್ಪರ್ಧೆ, ರಸಪ್ರಶ್ನೆ, ರಂಗೋಲಿ, ಜಾನಪದ ಗೀತೆ, ಕವ್ವಾಲಿ, ಕ್ಲೇ ಮಾಡಲಿಂಗ್, ಭಾಷಣ ಮತ್ತು ಪ್ರಬಂಧ ಸ್ಪರ್ಧೆ ಸೇರಿದಂತೆ ಮುಂತಾದ ಸ್ಪರ್ಧೆಗಳಲ್ಲಿ ಮಕ್ಕಳ ಪ್ರತಿಭಾ ಪ್ರದರ್ಶನ ಪ್ರೇಕ್ಷಕರ ಗಮನ ಸೆಳೆಯಿತು. ಕೂಡಿಗೆ ಡಯಟ್ ಪ್ರಾಂಶುಪಾಲ ರಾಮಚಂದ್ರರಾಜೇ ಅರಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಅಂದರೆ ಕೇವಲ ಓದು,ಬರಹ,ಪರೀಕ್ಷೆ ,ಅಂಕ,ತೇರ್ಗಡೆ ಇಷ್ಟಕ್ಕೆ ಸೀಮಿತವಾಗದೆ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಹೊರತರುವುದು.ಜೊತೆಗೆ ಬೇರೆ…

Read More

ಮಡಿಕೇರಿ NEWS DESK ಡಿ.18 : ಆದಿಮ ಸಂಜಾತ ಆನಿಮಿಸ್ಟಿಕ್ ನಂಬಿಕೆಯ ಏಕಜನಾಂಗೀಯ ಕೊಡವರ ಧಾರ್ಮಿಕ ಸಂಸ್ಕಾರವಾದ ತೋಕ್ – ಗನ್ ಹಕ್ಕಿಗೆ ಸಿಖ್ಖರ ಕಿರ್ಪಾಣ್ ಮಾದರಿಯಲ್ಲಿ ಸಂವಿಧಾನದ 25-26 ನೇ ವಿಧಿ ಪ್ರಕಾರ ಎಸೆನಿಶಿಯಲ್, ರಿಲೀಜಿಯಸ್ ಅಕ್ಟಿವಿಟೀಸ್ ಆಕ್ಟ್ ನಡಿಯಲ್ಲಿ ಶಾಶ್ವತ ರಾಜ್ಯಾಂಗ ಭದ್ರತೆ ನೀಡಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ. ಸಿಎನ್‌ಸಿ ವತಿಯಿಂದ ಮೂರ್ನಾಡಿನ ಬಲಂಬೇರಿಯ ರಸ್ತೆಯ ಚೇನಂಡ ಪೃಥ್ವಿ ಅವರ ಕಾಫಿ ಕ್ಯಾಸಲ್ ಕೂರ್ಗ್ ರೆಸಾರ್ಟ್ನಲ್ಲಿ ನಡೆದ 16ನೇ ವರ್ಷದ ಗನ್ ಕಾರ್ನಿವಲ್ – ತೋಕ್ ನಮ್ಮೆಯನ್ನು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. 2026- 27ರ ರಾಷ್ಟ್ರೀಯ ಜನಗಣತಿಯಲ್ಲಿ ಕೊಡವರು ಎಂದೇ ಎಲ್ಲಾ ಕಾಲಂನಲ್ಲೂ ದಾಖಲಿಸಬೇಕು, ಇಲ್ಲದಿದ್ದರೆ 2029ರ ನಂತರ ತೋಕ್ ಹಕ್ಕು ಸೇರಿದಂತೆ ಕೊಡವರು ಎಲ್ಲಾ ಹಕ್ಕುಗಳನ್ನು ಕಳೆದುಕೊಳ್ಳುವ ಅಪಾಯವಿದೆ. ಆದ್ದರಿಂದ ಜನಗಣತಿಯಲ್ಲಿ ‘ಕೊಡವ’ ಎಂದೇ ದಾಖಲೀಕರಣಗೊಳ್ಳುವ ಮೂಲಕ ನಮ್ಮ ಭವಿಷ್ಯತ್ತು ನಿರ್ಣಯಕ್ಕೆ ಬುನಾದಿ ಹಾಕಬೇಕೆಂದು…

Read More

ಕುಶಾಲನಗರ NEWS DESK ಡಿ.18 : ಇಲ್ಲಿಗೆ ಸಮೀಪದ ಆತ್ತೂರು ಗ್ರಾಮದಲ್ಲಿ ಇರುವ ಜ್ಞಾನಗಂಗಾ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಗಳಲ್ಲಿ ಪಠ್ಯೇತರ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ  ಒಲೆಯಿಲ್ಲದ ಹಾಗೂ ಬೆಂಕಿಯೂ ಇಲ್ಲದ ವೈವಿಧ್ಯಮಯ ತಿನಿಸುಗಳ ಮೇಳವನ್ನು ಆಯೋಜಿಸಲಾಗಿತ್ತು. ಯಾವಾಗಲೂ ಮನೆಗಳಲ್ಲಿ ಅಮ್ಮನ ಕೈ ತುತ್ತು ಮತ್ತು  ಅಜ್ಜಿಯ ಕೈ ತುತ್ತು ಸವಿದು ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿಗಳು ತಿನಿಸುಗಳನ್ನು ಸಿದ್ದಪಡಿಸುವಲ್ಲಿ ನಾವೇನು ಕಡಿಮೆ ಇಲ್ಲ ಎಂಬಂತೆ ತಯಾರಿಸಿದ್ದ ತಿನಿಸುಗಳು ಹಾಗೂ  ಪಾನೀಯಗಳು ಇನ್ನಿತರೇ  ವಿದ್ಯಾರ್ಥಿಗಳಷ್ಟೇ ಅಲ್ಲದೇ ಶಾಲಾ ಶಿಕ್ಷಕ ಸಮೂಹದಲ್ಲೂ ಬಾಯಿ ನೀರೂರಿಸಿತು. ಶಾಲೆಯ ಕಾರ್ಯದರ್ಶಿ ಬಿ.ಎಸ್. ನಿಂಗಪ್ಪ ಅವರ ಮಾರ್ಗದರ್ಶನದಲ್ಲಿ ಮಕ್ಕಳು ಹಾಗೂ ಬೋಧಕರು ಇಂತಹ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದು ಹೇಳಿದ ಸಂಸ್ಥೆಯ ಪ್ರಾಂಶುಪಾಲೆ ಸತ್ಯ ಸುಲೋಚನಾ, ಜಂಕ್ ಫುಡ್ ಗಳಿಂದ ಮಕ್ಕಳನ್ನು ದೂರವಿಡುವ ಮೂಲಕ ಮನೆಯಲ್ಲಿ ಅತಿ ಸುಲಭದಲ್ಲಿ  ಹೆಚ್ಚು ಪೌಷ್ಟಿಕಾಂಶ ಗಳುಳ್ಳ ತರಕಾರಿ, ಸೊಪ್ಪು, ಹಣ್ಣುಗಳಿಂದ  ಸಿದ್ದಪಡಿಸಿದ್ದ ತಿನಿಸುಗಳ ಮೇಳ ವಿದ್ಯಾರ್ಥಿ ಸಮೂಹಕ್ಕೆ ನೆರವಾಗಲಿದೆ ಎಂದರು.

Read More

ಮಡಿಕೇರಿ NEWS DESK  ಡಿ.18 :  ಅಖಿಲ ಕನಾ೯ಟಕ ಬ್ರಾಹ್ಮಣ ಮಹಾಸಭಾದ ಮಹಿಳಾ ಸಮಿತಿಯ ಕೊಡಗು ಜಿಲ್ಲಾ  ಸದಸ್ಯರಾಗಿ ಮಡಿಕೇರಿಯ ಸಂಸ್ಕೃತ ಶಿಕ್ಷಕಿ ವೀಣಾ ಹೊಳ್ಳ ನೇಮಕಗೊಂಡಿದ್ದಾರೆ. ಇವರು ಮಡಿಕೇರಿಯ ಉದ್ಯಮಿ ಸುಬ್ರಹ್ಮಣ್ಯ  ಹೊಳ್ಳ ಅವರ ಪತ್ನಿಯಾಗಿದ್ದಾರೆ. ಮಹಾಸಭಾದ ಅಧ್ಯಕ್ಷ ಎಸ್ .ರಘುನಾಥ್ ಅವರು ವೀಣಾ  ಹೊಳ್ಳ ಅವರನ್ನು ಅಖಿಲ ಕನಾ೯ಟಕ ಬ್ರಾಹ್ಮಣ ಮಹಾಸಭಾದ ಕೊಡಗು ಜಿಲ್ಲಾ ಮಹಿಳಾ ಸಮಿತಿಯ  ಸದಸ್ಯರನ್ನಾಗಿ ನೇಮಿಸಿದ್ದಾರೆ.

Read More

ಮಡಿಕೇರಿ NEWS DESK ಡಿ.18 : ಪೆಟ್ರೋಲ್ ಬಂಕ್ ನಲ್ಲಿ    ಬಿದ್ದು ಸಿಕ್ಕಿದ್ದ 2 ಲಕ್ಷ ರು. ಮೌಲ್ಯದ  ಚಿನ್ನದ  ಬ್ರೆಸ್ ಲೆಟ್  ನ್ನು  ಅಲ್ಲಿನ ಸಿಬ್ಬಂದಿ  ಮಾಲೀಕರಿಗೆ ಮರಳಿ  ನೀಡಿ ಮಾದರಿಯಾಗಿದ್ದಾರೆ.  ಸುಂಟಿಕೊಪ್ಪದ ಟಿ.ಎಂ.ಬಸವರಾಜು ಪತ್ನಿಯೊಂದಿಗೆ ಶಿವಮೊಗ್ಗಕ್ಕೆ ತೆರಳುತ್ತಿದ್ದ ಸಂದಭ೯ ಕೊಡಗರಹಳ್ಳಿಯಲ್ಲಿರುವ ಕಾವೇರಿ ಪೆಟ್ರೋಲ್ ಬಂಕ್ ನಲ್ಲಿ  ವಾಹನಕ್ಕೆ ಇಂಧನ ಹಾಕಿಸಿಕೊಂಡರು. ಈ ಸಂದಭ೯ ಅಕಸ್ಮಿಕವಾಗಿ ಬ್ರೇಸ್ ಲೆಟ್ ಅಲ್ಲಿ ಬಿದ್ದುಹೋಗಿತ್ತು. ಕೊಣನೂರು  ಬಳಿ ಕೈಯಲ್ಲಿದ್ದ ಬ್ರೆಸ್ ಲೆಟ್ ಕಾಣೆಯಾಗಿರುವುದು ಬಸವರಾಜು ಗಮನಕ್ಕೆ ಬಂದು  ವಾಪಾಸ್ ಹಿಂದಿರುಗಿ ತಾವು ವಾಹನ ನಿಲ್ಲಿಸಿದ್ದ ವಿವಿಧ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದರು. ಈ ಸಂದಭ೯ ಪೆಟ್ರೋಲ್ ಬಂಕ್ ನ ಸಿಬ್ಬಂದಿ ರಾಧ ಎಂಬಾಕೆ ಬ್ರೆಸ್ ಲೆಟ್ ನ್ನು ಸುರಕ್ಷಿತವಾಗಿ ಮಾಲೀಕರಿಗೆ ನೀಡಿದ್ದು ಗೊತ್ತಾಯಿತು. ಮಾಲೀಕರಿಂದ ಬ್ರೆಸ್ ಲೆಟ್ ಹಿಂದಿರುಗಿ ಪಡೆದ ಬಸವರಾಜು ಸಿಬ್ಬಂದಿ ರಾಧಾ ಅವರ ಪ್ರಾಮಾಣಿಕತೆಯನ್ನು ಪ್ರಶಂಶಿಸಿದರು.  17 ಗ್ರಾಮ್ ಮೌಲ್ಯದ ಚಿನ್ನದ ಬ್ರೆಸ್ ಲೆಟ್ ನ್ನು ಸುರಕ್ಷಿತವಾಗಿ ಮಾಲೀಕರಿಗೆ ಒಪ್ಪಿಸಿ…

Read More