ಕುಶಾಲನಗರ NEWS DESK ಡಿ.18 : ಇಲ್ಲಿಗೆ ಸಮೀಪದ ಆತ್ತೂರು ಗ್ರಾಮದಲ್ಲಿ ಇರುವ ಜ್ಞಾನಗಂಗಾ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಗಳಲ್ಲಿ ಪಠ್ಯೇತರ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಒಲೆಯಿಲ್ಲದ ಹಾಗೂ ಬೆಂಕಿಯೂ ಇಲ್ಲದ ವೈವಿಧ್ಯಮಯ ತಿನಿಸುಗಳ ಮೇಳವನ್ನು ಆಯೋಜಿಸಲಾಗಿತ್ತು. ಯಾವಾಗಲೂ ಮನೆಗಳಲ್ಲಿ ಅಮ್ಮನ ಕೈ ತುತ್ತು ಮತ್ತು ಅಜ್ಜಿಯ ಕೈ ತುತ್ತು ಸವಿದು ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿಗಳು ತಿನಿಸುಗಳನ್ನು ಸಿದ್ದಪಡಿಸುವಲ್ಲಿ ನಾವೇನು ಕಡಿಮೆ ಇಲ್ಲ ಎಂಬಂತೆ ತಯಾರಿಸಿದ್ದ ತಿನಿಸುಗಳು ಹಾಗೂ ಪಾನೀಯಗಳು ಇನ್ನಿತರೇ ವಿದ್ಯಾರ್ಥಿಗಳಷ್ಟೇ ಅಲ್ಲದೇ ಶಾಲಾ ಶಿಕ್ಷಕ ಸಮೂಹದಲ್ಲೂ ಬಾಯಿ ನೀರೂರಿಸಿತು. ಶಾಲೆಯ ಕಾರ್ಯದರ್ಶಿ ಬಿ.ಎಸ್. ನಿಂಗಪ್ಪ ಅವರ ಮಾರ್ಗದರ್ಶನದಲ್ಲಿ ಮಕ್ಕಳು ಹಾಗೂ ಬೋಧಕರು ಇಂತಹ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದು ಹೇಳಿದ ಸಂಸ್ಥೆಯ ಪ್ರಾಂಶುಪಾಲೆ ಸತ್ಯ ಸುಲೋಚನಾ, ಜಂಕ್ ಫುಡ್ ಗಳಿಂದ ಮಕ್ಕಳನ್ನು ದೂರವಿಡುವ ಮೂಲಕ ಮನೆಯಲ್ಲಿ ಅತಿ ಸುಲಭದಲ್ಲಿ ಹೆಚ್ಚು ಪೌಷ್ಟಿಕಾಂಶ ಗಳುಳ್ಳ ತರಕಾರಿ, ಸೊಪ್ಪು, ಹಣ್ಣುಗಳಿಂದ ಸಿದ್ದಪಡಿಸಿದ್ದ ತಿನಿಸುಗಳ ಮೇಳ ವಿದ್ಯಾರ್ಥಿ ಸಮೂಹಕ್ಕೆ ನೆರವಾಗಲಿದೆ ಎಂದರು.
ಲೇಖಕ: admin
ಮಡಿಕೇರಿ NEWS DESK ಡಿ.18 : ಅಖಿಲ ಕನಾ೯ಟಕ ಬ್ರಾಹ್ಮಣ ಮಹಾಸಭಾದ ಮಹಿಳಾ ಸಮಿತಿಯ ಕೊಡಗು ಜಿಲ್ಲಾ ಸದಸ್ಯರಾಗಿ ಮಡಿಕೇರಿಯ ಸಂಸ್ಕೃತ ಶಿಕ್ಷಕಿ ವೀಣಾ ಹೊಳ್ಳ ನೇಮಕಗೊಂಡಿದ್ದಾರೆ. ಇವರು ಮಡಿಕೇರಿಯ ಉದ್ಯಮಿ ಸುಬ್ರಹ್ಮಣ್ಯ ಹೊಳ್ಳ ಅವರ ಪತ್ನಿಯಾಗಿದ್ದಾರೆ. ಮಹಾಸಭಾದ ಅಧ್ಯಕ್ಷ ಎಸ್ .ರಘುನಾಥ್ ಅವರು ವೀಣಾ ಹೊಳ್ಳ ಅವರನ್ನು ಅಖಿಲ ಕನಾ೯ಟಕ ಬ್ರಾಹ್ಮಣ ಮಹಾಸಭಾದ ಕೊಡಗು ಜಿಲ್ಲಾ ಮಹಿಳಾ ಸಮಿತಿಯ ಸದಸ್ಯರನ್ನಾಗಿ ನೇಮಿಸಿದ್ದಾರೆ.
ಮಡಿಕೇರಿ NEWS DESK ಡಿ.18 : ಪೆಟ್ರೋಲ್ ಬಂಕ್ ನಲ್ಲಿ ಬಿದ್ದು ಸಿಕ್ಕಿದ್ದ 2 ಲಕ್ಷ ರು. ಮೌಲ್ಯದ ಚಿನ್ನದ ಬ್ರೆಸ್ ಲೆಟ್ ನ್ನು ಅಲ್ಲಿನ ಸಿಬ್ಬಂದಿ ಮಾಲೀಕರಿಗೆ ಮರಳಿ ನೀಡಿ ಮಾದರಿಯಾಗಿದ್ದಾರೆ. ಸುಂಟಿಕೊಪ್ಪದ ಟಿ.ಎಂ.ಬಸವರಾಜು ಪತ್ನಿಯೊಂದಿಗೆ ಶಿವಮೊಗ್ಗಕ್ಕೆ ತೆರಳುತ್ತಿದ್ದ ಸಂದಭ೯ ಕೊಡಗರಹಳ್ಳಿಯಲ್ಲಿರುವ ಕಾವೇರಿ ಪೆಟ್ರೋಲ್ ಬಂಕ್ ನಲ್ಲಿ ವಾಹನಕ್ಕೆ ಇಂಧನ ಹಾಕಿಸಿಕೊಂಡರು. ಈ ಸಂದಭ೯ ಅಕಸ್ಮಿಕವಾಗಿ ಬ್ರೇಸ್ ಲೆಟ್ ಅಲ್ಲಿ ಬಿದ್ದುಹೋಗಿತ್ತು. ಕೊಣನೂರು ಬಳಿ ಕೈಯಲ್ಲಿದ್ದ ಬ್ರೆಸ್ ಲೆಟ್ ಕಾಣೆಯಾಗಿರುವುದು ಬಸವರಾಜು ಗಮನಕ್ಕೆ ಬಂದು ವಾಪಾಸ್ ಹಿಂದಿರುಗಿ ತಾವು ವಾಹನ ನಿಲ್ಲಿಸಿದ್ದ ವಿವಿಧ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದರು. ಈ ಸಂದಭ೯ ಪೆಟ್ರೋಲ್ ಬಂಕ್ ನ ಸಿಬ್ಬಂದಿ ರಾಧ ಎಂಬಾಕೆ ಬ್ರೆಸ್ ಲೆಟ್ ನ್ನು ಸುರಕ್ಷಿತವಾಗಿ ಮಾಲೀಕರಿಗೆ ನೀಡಿದ್ದು ಗೊತ್ತಾಯಿತು. ಮಾಲೀಕರಿಂದ ಬ್ರೆಸ್ ಲೆಟ್ ಹಿಂದಿರುಗಿ ಪಡೆದ ಬಸವರಾಜು ಸಿಬ್ಬಂದಿ ರಾಧಾ ಅವರ ಪ್ರಾಮಾಣಿಕತೆಯನ್ನು ಪ್ರಶಂಶಿಸಿದರು. 17 ಗ್ರಾಮ್ ಮೌಲ್ಯದ ಚಿನ್ನದ ಬ್ರೆಸ್ ಲೆಟ್ ನ್ನು ಸುರಕ್ಷಿತವಾಗಿ ಮಾಲೀಕರಿಗೆ ಒಪ್ಪಿಸಿ…
ವಿಶೇಷ ಲೇಖನ : ಡಾ. ಕೆ. ಬಿ. ಸೂರ್ಯ ಕುಮಾರ್ >>> ಕೊಡಗು ಜಿಲ್ಲೆಯಲ್ಲಿ ಈ ಬಾರಿ ಮಳೆ ತನ್ನ ಆರ್ಭಟವನ್ನು ಜೋರಾಗಿಯೇ ತೋರಿಸಿದೆ. ಆ ಹಸಿರು ಹೊದಿಕೆಯ ನಂತರ, ಈಗ ನಮ್ಮನ್ನು ಆವರಿಸಿಕೊಂಡಿರುವುದು ಮೈ ಕೊರೆಯುವ ತೀವ್ರ ಚಳಿ. ಬೆಟ್ಟದ ಪ್ರದೇಶವಾಗಿರುವ ಕೊಡಗಿನಲ್ಲಿ ಬೆಳಿಗ್ಗೆ ಮತ್ತು ಸಂಜೆ ದಟ್ಟ ಮಂಜು, ತಂಪಾದ ಗಾಳಿ ಹಾಗೂ ಕಡಿಮೆಯಾದ ತಾಪಮಾನ ನಮ್ಮ ದೈನಂದಿನ ಜೀವನದ ಮೇಲೆ ಸ್ಪಷ್ಟ ಪರಿಣಾಮ ಬೀರುತ್ತಿದೆ. ಈ ಚಳಿಯು ಪ್ರಕೃತಿಯ ವರವಾದರೂ, ಆರೋಗ್ಯದ ದೃಷ್ಟಿಯಿಂದ ನಾವು ನಿರ್ಲಕ್ಷಿಸಲಾಗದ ಕೆಲವು ಸವಾಲುಗಳನ್ನು ತರುತ್ತದೆ. *ತೀವ್ರ ಚಳಿಯ ಕೆಲವು ಪ್ರಯೋಜನಗಳು ಇಲ್ಲಿವೆ* *ಕೃಷಿಗೆ ವರ : ಮಳೆ ನಂತರದ ತಂಪಾದ ಹವಾಮಾನವು ಕಾಫಿ, ಮೆಣಸು ಮತ್ತು ಇತರ ಬೆಳೆಗಳ ಉತ್ತಮ ಇಳುವರಿಗೆ ಅನುಕೂಲಕರವಾಗಿದೆ. ಇದು ಪ್ರಕೃತಿಯಲ್ಲಿ ಹೊಸ ಚೈತನ್ಯ ತುಂಬುತ್ತದೆ. *ಕೀಟಾಣುಗಳ ನಿಯಂತ್ರಣ: ತಂಪಾದ ವಾತಾವರಣವು ರೋಗಕಾರಕ ಕೀಟಾಣುಗಳ ಪ್ರಮಾಣವನ್ನು ತಗ್ಗಿಸುವ ಸಾಧ್ಯತೆ ಇರುತ್ತದೆ. *ದೈಹಿಕ ಮತ್ತು ಮಾನಸಿಕ ಆರೋಗ್ಯ: ಉತ್ತಮ ನಿದ್ರೆ:…
ಸೋಮವಾರಪೇಟೆ NEWS DESK ಡಿ.18 : ಐಗೂರು ಗ್ರಾಮದಲ್ಲಿ ಫೆ.9ರಂದು ಆಯೋಜಿಸಿರುವ 9ನೇ ಸೋಮವಾರಪೇಟೆ ತಾಲೂಕು ಸಮ್ಮೇಳನಕ್ಕೆ ಅಗತ್ಯ ಸಿದ್ಧತೆಗಳ ಕುರಿತು ವಿವಿಧ ಸಮಿತಿಯ ಪದಾಧಿಕಾರಿಗಳೊಂದಿಗೆ ಐಗೂರಿನ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಸಭೆ ನಡೆಸಲಾಯಿತು. ಸಮ್ಮೇಳನದ ಅಧ್ಯಕ್ಷರ ಆಯ್ಕೆ, ಹೋಬಳಿ ಮಟ್ಟದಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕುರಿತು ಸದಸ್ಯರುಗಳು ಸಲಹೆ ನೀಡಿದರು. ಸ್ಮರಣ ಸಂಚಿಕೆಗೆ ಲೇಖನಗಳನ್ನು ಆಹ್ವಾನಿಸುವ ಕುರಿತು ಚರ್ಚಿಸಲಾಯಿತು. ಈ ಸಂದರ್ಭ ಹಣಕಾಸು ಸಮಿತಿಯ ಅಧ್ಯಕ್ಷ ಕೆ.ಪಿ.ರಾಯ್ ಅವರಿಗೆ ರಶೀದಿ ಪುಸ್ತಕಗಳನ್ನು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಡಿ.ವಿಜೇತ್ ಹಸ್ತಾಂತರಿಸಿದರು. ಸಭೆಯ ಅಧ್ಯಕ್ಷತೆಯನ್ನು ವಿಜೇತ್ ವಹಿಸಿದ್ದರು. ಕಾರ್ಯದರ್ಶಿ ಜ್ಯೋತಿ ಅರುಣ್, ಖಜಾಂಚಿ ಕೆ.ಪಿ.ದಿನೇಶ್ ಹಾಗೂ ವಿವಿಧ ಸಮಿತಿಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು ಮತ್ತು ಸದಸ್ಯರು ಇದ್ದರು.
ಸೋಮವಾರಪೇಟೆ NEWS DESK ಡಿ.18 : ರಾಜ್ಯ ಹೆದ್ದಾರಿ ಪ್ರಾಧಿಕಾರದಿಂದ 20 ಕೋಟಿ ರೂ. ವೆಚ್ಚದಲ್ಲಿ ಕೂಡುರಸ್ತೆ, ತೋಳೂರುಶೆಟ್ಟಳ್ಳಿ, ಕೂತಿ ಗ್ರಾಮದ 10 ಕಿ.ಮೀ ವ್ಯಾಪ್ತಿಯ ಸಂಪರ್ಕ ರಸ್ತೆ ಕಾಮಗಾರಿ ಕಳಪೆಯಾಗುತ್ತಿದೆ ಎಂದು ಆರೋಪಿಸಿ ಕೂತಿ ಗ್ರಾಮಸ್ಥರು ಕೂಡುರಸ್ತೆ ಜಂಕ್ಷನ್‌ನಲ್ಲಿ ಲೋಕೂಪಯೋಗಿ ಇಲಾಖೆ ಅಧಿಕಾರಿಗಳನ್ನು ರಸ್ತೆಯಲ್ಲಿ ತಡೆದು ತರಾಟೆಗೆ ತೆಗೆದುಕೊಂಡರು. ಮಾಗಡಿ, ಜಾಲ್ಸೂರು ಎಸ್.ಎಚ್. 85 ಹೆದ್ದಾರಿಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕಲ್ಕಂದೂರು, ಹೊಸಬೀಡು, ತೋಳೂರುಶೆಟ್ಟಳ್ಳಿ, ಹರಪಳ್ಳಿ, ಇನಕನಹಳ್ಳಿ, ಕೂತಿ, ಎಡದಂಟೆ ಸೇರಿದಂತೆ ಇನ್ನಿತರ ಗ್ರಾಮಗಳ ಜನರ ಹತ್ತಾರು ವರ್ಷಗಳ ರಸ್ತೆ ಕನಸು ನನಸಾಗುವ ಹಂತದಲ್ಲಿರುವಾಗ, ಗುತ್ತಿಗೆದಾರರು ಕಾಮಗಾರಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಗುಣಮಟ್ಟದ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಕೂತಿ ಗ್ರಾಮಸ್ಥರು ದೂರಿದರು. ರಸ್ತೆ ಕಾಮಗಾರಿ ಸಂದರ್ಭ ಗ್ರಾಮಸ್ಥರು ತಮ್ಮ ಜಾಗದಲ್ಲಿದ್ದ ಮರದ ರೆಂಬೆಗಳನ್ನು ತೆಗೆದುಕೊಟ್ಟು ಸಹಕಾರ ನೀಡಿದ್ದಾರೆ. ಆದರೂ ಬೇಕಾಬೆಟ್ಟಿ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಕೂತಿ ಗ್ರಾಮದ ಉಪಾಧ್ಯಕ್ಷ ಕೆ.ಡಿ.ಗಿರೀಶ್ ದೂರಿದರು. ಹೆಚ್ಚಿನ ರಸ್ತೆ ಕಾಮಗಾರಿಗಳು ಕಳಪೆಯಾಗುತ್ತಿರುವುದರಿಂದ…
ಸೋಮವಾರಪೇಟೆ NEWS DESK ಡಿ.18 : ಸೋಮವಾರಪೇಟೆ ಮೀಸಲು ಅರಣ್ಯದಲ್ಲಿ ತೇಗ ಸೇರಿದಂತೆ ಬೆಲೆಬಾಳುವ ಮರಗಳನ್ನು ಕಡಿದು ಸಾಗಿಸುತ್ತಿದ್ದ ಆರೋಪದಡಿ ಸೋಮವಾರಪೇಟೆ ವಲಯ ಅರಣ್ಯಾಧಿಕಾರಿಗಳು ಓರ್ವ ಆರೋಪಿಯನ್ನು ಬಂಧಿಸಿದ್ದು, ತಲೆ ಮರೆಸಿಕೊಂಡಿರುವವರ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ. ಸೋವವಾರಪೇಟೆ ವಲಯದ ಹುದುಗೂರು ಶಾಖಾ ವ್ಯಾಪ್ತಿಯ ಐಗೂರು ಗ್ರಾಮದ ಕಾಜೂರು ಅರಣ್ಯ ಪ್ರದೇಶದಲ್ಲಿ ತೇಗದ ಮರಗಳನ್ನು ಕಡಿದು ನಾಟಗಳಾನ್ನಾಗಿ ಪರಿವರ್ತಿಸಿ ಸಾಗಿಸಲು ಬೊಲೆರೋ ಪಿಕಪ್ ವಾಹನಕ್ಕೆ ತುಂಬಿಸುತ್ತಿದ್ದ ಸಂದರ್ಭ ಅರಣ್ಯ ಅಧಿಕಾರಿಗಳು ದಾಳಿ ನಡೆಸಿದರು. ಅರೋಪಿಗಳು ಅರಣ್ಯ ಸಿಬ್ಬಂದಿಗಳ ಮೇಲೆ ದಾಳಿಗೆ ಪ್ರಯತ್ನಿಸಿದ ಸಂದರ್ಭ, ಆತ್ಮರಕ್ಷಣೆಗಾಗಿ ಸಿಬ್ಬಂದಿಗಳು ಗುಂಡು ಹಾರಿಸಿದ್ದಾರೆ. ಎಡವಾರೆ ಗ್ರಾಮದ ಓರ್ವ ಆರೋಪಿಯನ್ನು ಸ್ಥಳದಲ್ಲೇ ಬಂಧಿಸಿ ತೇಗದ ನಾಟಗಳನ್ನು ವಶಪಡಿಸಿಕೊಂಡಿದ್ದಾರೆ. ನಾಪತ್ತೆಯಾಗಿರುವ ಐವರು ಆರೋಪಿಗಳ ಬಂಧನಕ್ಕೆ ಆರ್‌ಎಫ್‌ಒ ಶೈಲೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಸಿಸಿಎಫ್ ಸೋನಾಲ್, ಡಿಎಫ್‌ಒ ಅಭಿಷೇಕ್, ಎಸಿಎಫ್ ಎ.ಎ.ಗೋಪಾಲ್, ಅರಣ್ಯ ಸಂಚಾರಿ ದಳದ ಎಸಿಎಫ್ ಗಾನಶ್ರೀ ಭೇಟಿ ನೀಡಿ ಪರಿಶೀಲನೆ ನಡೆಸಿದರು.…
ವಿರಾಜಪೇಟೆ ಡಿ.17 NEWS DESK : ಕೊಡಗು ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಮಹಿಳೆಯರ ಫುಟ್ಬಾಲ್ ಪಂದ್ಯಾವಳಿಯಲ್ಲಿ ವಿರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿನಿಯರನ್ನು ಕಾಲೇಜಿನ ಪ್ರಾಂಶುಪಾಲರು ಮತ್ತು ಅಧ್ಯಾಪಕ ವರ್ಗದವರು ಅಭಿನಂದಿಸಿದ್ದಾರೆ.
ಮಡಿಕೇರಿ ಡಿ.17 NEWS DESK : ಅಖಿಲ ಕನಾ೯ಟಕ ಬ್ರಾಹ್ಮಣ ಮಹಾಸಭಾದ ಕೇಂದ್ರಕಾಯ೯ಕಾರಿ ಸಮಿತಿ ಸದಸ್ಯರಾಗಿ ಮಡಿಕೇರಿಯ ಎಸ್ ಎಸ್ ಸಂಪತ್ ಕುಮಾರ್ ನೇಮಕಗೊಂಡಿದ್ದಾರೆ. ಕೊಡಗು ಬ್ರಾಹ್ಮಣ ವಿದ್ಯಾಭಿವೖದ್ದಿ ನಿಧಿಯ ನಿದೇ೯ಶಕರಾಗಿಯೂ ಕಾಯ೯ನಿವ೯ಹಿಸಿದ್ದ ಸಂಪತ್ ಕುಮಾರ್ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕೊಡಗು ಜಾನಪದ ಪರಿಷತ್ ನ ಖಜಾಂಜಿಗಳೂ ಆಗಿದ್ದಾರೆ. ಸಂಪತ್ ಕುಮಾರ್ ಅವರನ್ನು ಅಖಿಲ ಕನಾ೯ಟಕ ಬ್ರಾಹ್ಮಣ ಮಹಾಸಭಾದ ಕೇಂದ್ರಕಾಯ೯ಕಾರಿ ಸಮಿತಿ ಸದಸ್ಯರನ್ನಾಗಿ ನೇಮಿಸಿ ಮಹಾಸಭಾದ ಅಧ್ಯಕ್ಷರಾದ ಎಸ್ ರಘುನಾಥ್ ಆದೇಷ ಹೊರಡಿಸಿದ್ದಾರೆ.
ಮಡಿಕೇರಿ ಡಿ.17 NEWS DESK : ಕೊಡಗು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮುಕೋಡ್ಲು ಹಾಗೂ ಹಮ್ಮಿಯಾಲ ಗ್ರಾಮಸ್ಥರಿಗೆ ಅರಿವು ಕಾರ್ಯಕ್ರಮ ನಡೆಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಪ್ರಸನ್ನ ಕುಮಾರ್ ಮಾತನಾಡಿ, ಪ್ರತಿ ಗ್ರಾಮ ದಿಂದ ಹೆಣ್ಣುಮಕ್ಕಳ ರಕ್ಷಣೆಯಾಗಬೇಕು ಹಾಗೂ ಹೆಣ್ಣು ಮಕ್ಕಳು ಉತ್ತಮ ಶಿಕ್ಷಣವಂತರಾಗಬೇಕು, ಹೆಣ್ಣು ಮಕ್ಕಳ ಸ್ವಾವಲಂಬಿ ಬದುಕಿಗೆ ಸಹಕರಿಸಲು ಇಲಾಖೆ ಮತ್ತು ಸಮುದಾಯ ಒಂದಾಗಿ ಶ್ರಮಿಸಬೇಕು ಎಂದು ತಿಳಿಸಿದರು. ಸಖಿ ಓನ್ ಸ್ಟಾಫ್ ಸೆಂಟರ್ ಕುರಿತು ಮಾಹಿತಿ ನೀಡಿ, ಸಖಿ ಕೇಂದ್ರವು ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ ನೆರವು, ಕಾನೂನು ನೆರವು, ಆಪ್ತ ಸಮಾಲೋಚನೆ, ತಾತ್ಕಾಲಿಕ ಆಶ್ರಯ ಹಾಗೂ ಪೊಲೀಸ್ ನೆರವು ನೀಡುತ್ತದೆ , ಮಕ್ಕಳ ಸಹಾಯವಾಣಿ 1098, ಮಹಿಳಾ ಸಹಾಯವಾಣಿ 181 ರ ಸಹಕಾರದೊಂದಿಗೆ ಇಲಾಖೆಯನ್ನು ಮಹಿಳೆಯರು ಮತ್ತು ಮಕ್ಕಳು ದಿನದ 24 ಗಂಟೆಗಳು ವಾರದ ಏಳು ದಿನಗಳು ಉಚಿತವಾಗಿ ಸಂಪರ್ಕಿಸಬಹುದಾಗಿ ತಿಳಿಸಿದರು. ಕರ್ನಾಟಕ…






