ಲೇಖಕ: admin

ಮಡಿಕೇರಿ ಜ.22 NEWS DESK : ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮ ಸ್ಥಳವಾದ ಅಯೋಧ್ಯೆಯಲ್ಲಿ, ಕೋಟ್ಯಂತರ ಹಿಂದೂ ಬಾಂಧವರ ನಿರೀಕ್ಷೆಯಂತೆ ‘ಶ್ರೀ ರಾಮ ಲಲ್ಲಾ’ನ ಪ್ರತಿಷ್ಠಾಪನೆಯೊಂದಿಗೆ, ಭವ್ಯ ಮಂದಿರ ಲೋಕಾರ್ಪಣೆಗೊಂಡ ಪುಣ್ಯದಿನದ ಅಂಗವಾಗಿ ನಗರದ ಶ್ರೀ ರಾಮ ಜನ್ಮಭೂಮಿ ಸೇವಾ ಸಮಿತಿಯಿಂದ ಅನ್ನ ಪ್ರಸಾದ ವಿತರಣಾ ಕಾರ್ಯಕ್ರಮ ಭವ್ಯವಾಗಿ ನೆರವೇರಿತು. ಶ್ರೀರಾಮ ಲಲ್ಲಾನ ಮೂರ್ತಿಯೊಂದಿಗೆ ಮಂದಿರ ಅಯೋಧ್ಯೆಯಲ್ಲಿ ಭಕ್ತರಿಗೆ ತೆರೆದುಕೊಂಡಲ್ಲಿಂದ ನಗರದ ಶ್ರೀ ರಾಮ ಜನ್ಮಭೂಮಿ ಸೇವಾ ಸಮಿತಿ ವರ್ಷಂಪ್ರತಿ ಅನ್ನದಾನದ ಸಂಕಲ್ಪದೊಂದಿಗೆ, ಅದನ್ನು ನಡೆಸಿಕೊಂಡು ಬರುತ್ತಿದೆ. ವರ್ಷಂಪ್ರತಿಯಂತೆ ಈ ಬಾರಿಯೂ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಸಹಸ್ರಾರು ಮಂದಿಗೆ ಅನ್ನ ಪ್ರಸಾದ ವಿತರಣೆÉ ಅತ್ಯಂತ ಶಿಸ್ತುಬದ್ಧವಾಗಿ, ಭಕ್ತಿಪೂರ್ವಕವಾಗಿ ನೆರವೇರಿತು. ಶ್ರೀ ರಾಮ ಜನ್ಮಭೂಮಿ ಸೇವಾ ಸಮಿತಿಯ ಪದಾಧಿಕಾರಿಗಳು ಗುರುವಾರ ಬೆಳಗ್ಗೆ ಖಾಸಗಿ ಬಸ್ ನಿಲ್ದಾಣದ, ಅನ್ನ ಪ್ರಸಾದ ವಿತರಣಾ ಜಾಗದಲ್ಲಿ ಗಣಪತಿ ಹೋಮವನ್ನು ನಡೆಸಿ, ನಗರದ ಪೇಟೆ ಶ್ರೀ ರಾಮ ಮಂದಿರದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದರು. ಬಳಿಕ ಬೆ.11 ಗಂಟೆಯಿಂದ ಆರಂಭಗೊಂಡ…

Read More

ಸುಂಟಿಕೊಪ್ಪ ಜ.22 NEWS DESK : ಮಾದಾಪುರ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಛಾಪಾ ಕಾಗದ (ಸ್ಟ್ಯಾಂಪ್ ಪೇಪರ್) ಮಾರಾಟ ಕೇಂದ್ರವನ್ನು ಸಂಘದ ಅಧ್ಯಕ್ಷರಾದ ನಾಪಂಡ ಉಮೇಶ್ ಉತ್ತಪ್ಪ ಉದ್ಘಾಟಿಸಿದರು. ಮಾದಾಪುರ ಹೋಬಳಿ ಕೇಂದ್ರದಲ್ಲಿ ಕೃಷಿಕರಿಗೆ ಸಾಮಾನ್ಯ ಜನರಿಗೆ ಉಪಯೋಗಕ್ಕೆ ಬೇಕಾಗಿದ್ದ ಛಾಪ ಕಾಗದಕ್ಕಾಗಿ ಹತ್ತಾರು ಕಿ.ಮೀ. ದೂರ ಕ್ರಮಿಸಿ ತರಬೇಕಾಗಿದ್ದು ಇಲ್ಲಿ ಜನತೆಯ ಸಂಕಷ್ಟವನ್ನು ಮನಗಂಡ ಮಾದಾಪುರ ಕೃಷಿ ಪತ್ತಿನ ಸಹಕಾರ ಸಂಘದವರು ಛಾಪ ಕಾಗದ (ಸ್ಟ್ಯಾಂಪ್ ಪೇಪರ್) ಮಾರಾಟ ಕೇಂದ್ರವನ್ನು ತೆರೆಯಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ಕರೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ಪವಿತ್ರ ಹರೀಶ್, ನಿರ್ದೇಶಕರುಗಳಾದ ಬಿ.ಐ.ಮೊಣ್ಣಪ್ಪ, ಪಿ.ಪಿ.ತಿಲಕ್‍ಕುಮಾರ್, ಸಿ.ಎ.ತಮ್ಮಯ್ಯ, ಕುಟ್ಟಂಡ ಕುಟ್ಟಪ್ಪ, ಮುಕ್ಕಾಟಿರ ತಿಮ್ಮಯ್ಯ, ದೇಚಮ್ಮ ಸೋನು,ಕೆ.ಎ.ಲತೀಫ್, ನಾಗಂಡ ಭವಿನ್, ಗಿರೀಶ್ ಎಂ.ಆರ್., ಹೆಚ್.ಇ.ಭೀಮಯ್ಯ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಕಾವೇರಪ್ಪ ಉಪಸ್ಥಿತರಿದ್ದರು.

Read More

ಮಡಿಕೇರಿ ಜ.22 NEWS DESK : ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಸೋಮವಾರಪೇಟೆ ತಾಲ್ಲೂಕು ತಹಶೀಲ್ದಾರ್ ಕಛೇರಿಯಲ್ಲಿ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯ ಸಭೆ ನಡೆಸಿದರು. ಬಗರ್ ಹುಕುಂ ಸಾಗುವಳಿಯ ಅರ್ಜಿಗಳ ವಿಲೇವಾರಿ ಕುರಿತು ತಹಶೀಲ್ದಾರ್ ಹಾಗೂ ಕಂದಾಯ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

Read More

ಸುಂಟಿಕೊಪ್ಪ 22 NEWS DESK : ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮದ್ಯಪಾನ ಮುಕ್ತ ಸಮಾಜದಿಂದ ಮಾತ್ರ ರಾಮರಾಜ್ಯ ಸ್ಥಾಪನೆ ಎಂಬುದನ್ನು ಪ್ರತಿಪಾದಿಸಿದ್ದು, ಅವರ ತತ್ವ ಆದರ್ಶಗಳನ್ನು ಪಾಲಿಸುವಂತೆ ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಎಂ.ಬಿ.ಅಭಿಮನ್ಯುಕುಮಾರ್ ಹೇಳಿದರು. ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಮಡಿಕೇರಿ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಕೊಡಗು ಜಿಲ್ಲೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನ ಕೇಂದ್ರ ರಾಯಿಲ ಉಜಿರೆ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಮತ್ತು ಪಗ್ರತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಸುಂಟಿಕೊಪ್ಪ ವಲಯದ ಎಲ್ಲಾ ಅಂಗ ಸಂಸ್ಥೆಗಳು ಆರಕ್ಷಕಠಾಣೆ ಪ್ರಾಥಮಿಕ ಆರೋಗ್ಯ ಕೆಂದ್ರ ನವಜೀವನ ಸಮಿತಿ, ಶೌರ್ಯ ವಿಪತ್ತು ನಿರ್ವಹಣ ಘಟಕ ಮಡಿಕೇರಿ ತಾಲೂಕು ಹಾಗೂ ಸ್ಥಳೀಯ ಸಂಸ್ಥೆಗಳ ನೆರವಿನೊಂದಿಗೆ 2040ನೇ ಮದ್ಯವರ್ಜನ ಶಿಬಿರದ ಉದ್ಘಾಟನೆಯನ್ನು ನೇರವೇರಿಸಿ ಅವರು ಮಾತನಾಡಿದರು. ಎಲ್ಲಾ ಕ್ಷೇತ್ರಗಳಲ್ಲಿ…

Read More

ಮಡಿಕೇರಿ ಜ.22 NEWS DESK : ಕೊಡಗು ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ, ಸಂಸ್ಕøತಿ, ಪರಿಸರ, ಕಲೆ, ಜಾನಪದ ಸಂಸ್ಕೃತಿಯ ಸಂರಕ್ಷಣೆಗಾಗಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು 37 ದತ್ತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡು ಬರುತ್ತಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ನಾಲ್ಕು ವರ್ಷಗಳ ಹಿಂದೆ ತಾವು ಅಧಿಕಾರಕ್ಕೆ ಬಂದ ಹಂತದಲ್ಲಿ ಜಿಲ್ಲಾ ಕಸಾಪದಲ್ಲಿದ್ದ 19 ದತ್ತಿಗಳನ್ನು ಪ್ರಸ್ತುತ 37ಕ್ಕೆ ಹೆಚ್ಚಿಸಲಾಗಿದೆ. ಆಗ ಇದ್ದ 2 ಸಾವಿರ ಸದಸ್ಯತ್ವವನ್ನು 3500ಕ್ಕೆ ಹೆಚ್ಚಿಸಲಾಗಿದೆ. ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಸಂಸ್ಕøತಿಯ ಬೆಳವಣಿಗೆಯ ದೃಷ್ಟಿಯಿಂದ, ಮಕ್ಕಳಲ್ಲಿ ಕನ್ನಡದ ಬಗ್ಗೆ ಒಲವು ಮೂಡಿಸುವುದಕ್ಕಾಗಿ ದತ್ತಿ ನಿಧಿಯ ಬಹುತೇಕ ಕಾರ್ಯಕ್ರಮಗಳನ್ನು ಗ್ರಾಮೀಣ ಭಾಗದ ಶಾಲಾ ಕಾಲೇಜುಗಳಲ್ಲಿ ಆಯೋಜಿಸಿಕೊಂಡು ಬರುತ್ತಿರುವುದಾಗಿ ಹೇಳಿದರು. ದತ್ತಿ ನಿಧಿ ಸ್ಥಾಪಕ ಖ್ಯಾತ ಸಂಶೋಧಕ ಡಾ.ಎಂ.ಜಿ.ನಾಗರಾಜು ಅವರ ಆಶಯಗಳಿಗೆ ಅನುಗುಣವಾಗಿ ಫೆ.14 ರಂದು ಪೊನ್ನಂಪೇಟೆಯ ಅರಣ್ಯ ಕಾಲೇಜಿನಲ್ಲಿ ಕೊಡಗಿನ ದೇವರಕಾಡುಗಳ ಕುರಿತ…

Read More

ಬೆಂಗಳೂರು ಜ.22 NEWS DESK : ಬಿಗ್ ಬಾಸ್ 12ನೇ ಆವೃತ್ತಿಯ ವಿಜೇತ ಗಿಲ್ಲಿ ನಟರಾಜ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದಿಸಿ, ಸನ್ಮಾನಿಸಿದರು. ಮುಂದಿನ ಜೀವನ ಇನ್ನಷ್ಟು ಯಶಸ್ಸು, ಸಂತಸದಿಂದ ಕೂಡಿರಲಿ ಎಂದು ಶುಭ ಹಾರೈಸಿದರು.

Read More

ಮಡಿಕೇರಿ ಜ.22 NEWS DESK : ಕೊಡಗಿನ ಹಿತಚಿಂತನೆಯೊಂದಿಗೆ, ಅರಬ್ ರಾಷ್ಟ್ರಗಳಲ್ಲಿರುವ ಕೊಡಗಿನ ಮೂಲದ ಅನಿವಾಸಿ ಭಾರತೀಯರನ್ನು ಕೇಂದ್ರೀಕರಿಸಿಕೊಂಡು ಹಲವಾರು ಹಲ ಜನಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘÀಟಿಸಿಕೊಂಡು ಬರುತ್ತಿರುವ ‘ಯುಎಇ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್’ ಇಪ್ಪತ್ತೈದು ವಸಂತಗಳನ್ನು ಪೂರೈಸಿದ ಸಂಭ್ರಮದಲ್ಲಿದ್ದು, ತನ್ನ ಬೆಳ್ಳಿ ಹಬ್ಬವನ್ನು ‘ಕನೆಕ್ಟ್ ಕೊಡಗು-2026’ ಶೀರ್ಷಿಕೆಯಡಿ ಫೆ.8 ರಂದು ಯುಎಇನ ಶಾರ್ಜಾದಲ್ಲಿ ಆಚರಿಸಿಕೊಳ್ಳಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ ಅಧ್ಯಕ್ಷ ಅಹ್ಮದ್ ಚಾಮಿಯಾಲ್ ಈ ಕುರಿತು ಮಾಹಿತಿ ನೀಡಿ, ಯುಎಇಯ ಶಾರ್ಜಾ ಅಲ್ ಬತಾಯ ಗಾರ್ಡನ್‍ನಲ್ಲಿ ಅಂದು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದ್ದು. ಆ ಸಂದರ್ಭ ವಾಲಿಬಾಲ್, ಹಗ್ಗ ಜಗ್ಗಾಟ, ಫುಟ್ಬಾಲ್ ಸೇರಿದಂತೆ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ. ಜೊತೆಗೆ ಮಕ್ಕಳಿಗಾಗಿ ವಿಶೇಷ ಕ್ರೀಡೆಗಳು ಹಾಗೂ ಮಹಿಳೆಯರಿಗಾಗಿ ವಿವಿಧ ಚಟುವಟಿಕೆಗಳೂ ನಡೆಯಲಿದೆ. ಸಂಜೆ 4 ಗಂಟೆಗೆ ಸಮಾರೋಪ ನಡೆಯಲಿರುವುದಾಗಿ ತಿಳಿಸಿದರು. ಅಸೋಸಿಯೇಷನ್‍ನ ಸಲಹಾ ಸಮಿತಿ ನಾಯಕರಾದ ಉಸ್ಮಾನ್ ಹಾಜಿ ಅವರು ಮಾತನಾಡಿ, ಶಾರ್ಜಾದಲ್ಲಿ ಆಯೋಜಿತ…

Read More

ಮಡಿಕೇರಿ ಜ.22 NEWS DESK : ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಭೆ ನಡೆಸಿದ ಅವರು ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿದರು. ಅನುಷ್ಠಾನಗೊಳ್ಳುತ್ತಿರುವ ಸರಕಾರದ ಯೋಜನೆಗಳು ಮತ್ತು ಕೈಗೊಳ್ಳಬೇಕಾಗಿರುವ ಕಾಮಗಾರಿಗಳ ಬಗ್ಗೆ ಶಾಸಕರು ಮಾಹಿತಿ ಪಡೆದು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.  

Read More

ಮಡಿಕೇರಿ ಜ.22 NEWS DESK : ಅಂತರರಾಷ್ಟ್ರೀಯ ಶೋಲಿಂಗ್ ಕುಂಗ್ಫು ಸಂಸ್ಥೆಯ ವತಿಯಿಂದ ಚೇರಂಬಾಣೆಯ ಶ್ರೀ ರಾಜರಾಜೇಶ್ವರಿ ಶಾಲೆಯಲ್ಲಿ ನಡೆದ ಕರಾಟೆ ಪರೀಕ್ಷೆಯಲ್ಲಿ ಚೇರಂಬಾಣೆಯ ಶ್ರೀ ರಾಜ ರಾಜೇಶ್ವರಿ ಶಾಲೆಯ ವಿದ್ಯಾರ್ಥಿಗಳ ಸಾಧನೆ ಮಾಡಿದ್ದಾರೆ. ಶಾಲೆಯ ಒಂಭತ್ತನೇ ತರಗತಿಯ ವಿದ್ಯಾರ್ಥಿಗಳಾದ ಅಂಕಿತ್ ಬಿ.ಎ. ಬ್ಲಾಕ್ ಬೆಲ್ಟ್ ಪ್ರಥಮ ಡಿಗ್ರಿ, ಲಕ್ಷಣ್ ಕೆ.ಎ ಹಾಗೂ ಮೋನಿಷ್ ಮುತ್ತಣ್ಣ ಬ್ಲ್ಯಾಕ್ ಬೆಲ್ಟ್ ಪಡೆದುಕೊಂಡಿರುತ್ತಾರೆ. ಪರೀಕ್ಷೆಯಲ್ಲಿ ಒಟ್ಟು ಮೂವತ್ಮೂರು ವಿದ್ಯಾರ್ಥಿಗಳು ಭಾಗವಹಿಸಿದ್ದು,  ಹನ್ನೊಂದು ವಿದ್ಯಾರ್ಥಿಗಳು ಹಳದಿ, ಎಂಟು ವಿದ್ಯಾರ್ಥಿಗಳು ಅರೇಂಜ್, ಒಬ್ಬ ವಿದ್ಯಾರ್ಥಿ ಹಸಿರು, ಏಳು ವಿದ್ಯಾರ್ಥಿಗಳು ನೀಲಿ, ಆರು ವಿದ್ಯಾರ್ಥಿಗಳು ಬ್ರೌನ್ ಬೆಲ್ಟ್ ಪಡೆದು ಸಾಧನೆ ಮಾಡಿದ್ದಾರೆ. ಈ ಸಂದರ್ಭ ಪರೀಕ್ಷಾರ್ಥಿಗಳಾಗಿ ಇಂಡಿಯನ್ ಗ್ರ್ಯಾಂಡ್ ಮಾಸ್ಟರ್ ಶಿಫು ಇಂದ್ರಜಿತ್, ಇಂಡಿಯನ್ ತರಬೇತುದಾರರಾದ ದೇವರಾಜ್, ಕೊಡಗು ಜಿಲ್ಲೆಯ ತರಬೇತುದಾರರಾದ ವೇಣು ಗೋಪಾಲ್, ಕರ್ನಾಟಕ ರಾಜ್ಯದ ತರಬೇತುದಾರರಾದ ನಾಟೋಳಂಡ ನಂಜುಂಡ ಪಾಲ್ಗೊಂಡಿದ್ದರು. ಉತ್ತಿರ್ಣರಾದ ವಿದ್ಯಾರ್ಥಿಗಳನ್ನು ವಿದ್ಯಾಸಂಸ್ಥೆಯ ವ್ಯವಸ್ಥಾಪಕರಾದ ನಾಟೋಳಂಡ ವಿಜು ಹಾಗೂ ಮುಖ್ಯ ಶಿಕ್ಷಕರಾದ ಕುದುಪಜೆ ಕವನ್…

Read More

ಮಡಿಕೇರಿ ಜ.22 NEWS DESK : ವಿದ್ಯಾರ್ಥಿಗಳಿಗೆ ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳಲು ಇಂತಹ ಕಥಾ ಸ್ಪರ್ಧೆಗಳು ದಾರಿದೀಪವಾಗಲಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಕೊಡಗಿನ ಗೌರಮ್ಮ ತಮ್ಮ ಸಾಹಿತ್ಯ ಮತ್ತು ಕತೆ, ಕವನ ರಚನೆಗಳನ್ನು ರೂಡಿಸಿಕೊಂಡಿದ್ದರು. ಕೊಡಗಿಗೆ ಗಾಂಧೀಜಿ ಭೇಟಿ ಕೊಟ್ಟ ಸಂದರ್ಭದಲ್ಲಿ ತಮ್ಮ ಮೈ ಮೇಲಿನ ಚಿನ್ನವನ್ನು ಸ್ವಾತಂತ್ರ್ಯ ಹೋರಾಟಕ್ಕೆ ದಾನ ನೀಡುವ ಮೂಲಕ ಸ್ವಾತಂತ್ರ ಹೋರಾಟಗಾರರಿಗೆ ಪ್ರೇರಣದಾಯಕರಾಗಿದ್ದರು ಎಂದು ಬ್ಲಾಸಂ ಶಾಲೆಯ ಮುಖ್ಯೋಪಾಧ್ಯಾಯನಿ ಕಟ್ಟೆಮನೆ ಅನುಸೂಯ ನುಡಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೊಡಗಿನ ಗೌರಮ್ಮ ಅವರ ನೆನಪಿನಲ್ಲಿ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆಸುತ್ತಿರುವ ಸಣ್ಣ ಕಥೆಗಳ ಗೌರಮ್ಮ ಕಥಾಸ್ಪರ್ಧೆಯನ್ನು ಬ್ಲಾಸಂ ಶಾಲೆಯ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಮುಂದೊಂದು ದಿನ ಸಾಹಿತಿಗಳಾಗಿ ಬೆಳೆಯಲು ಈ ಕಥಾ ಸ್ಪರ್ಧೆಯು ಮೆಟ್ಟಿಲುಗಳಾಗಲಿ ಎಂದರು.  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರೇವತಿ ರಮೇಶ್  ಮಾತನಾಡಿ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತರವಾದದ್ದು.…

Read More