ವಿರಾಜಪೇಟೆ ಡಿ.17 NEWS DESK : ಮೊಗಳ್ಳಿ ಗಣೇಶ್ ಅವರ ಚಿಂತನೆಗಳು ಹಾಗೂ ಬರಹಗಳು ನಮ್ಮನ್ನು ಹೃದಯಕ್ಕೆ ಇಳಿಸುತ್ತವೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ನ ಪ್ರಧಾನ ಕಾರ್ಯದರ್ಶಿ ಡಾ.ರೇಣುಕಾ ಪ್ರಸಾದ್ ಅಭಿಪ್ರಾಯಪಟ್ಟರು. ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜಿನ ಕನ್ನಡ ವಿಭಾಗ, ನುಡಿ ಉತ್ಸವ ಸಮಿತಿ ಕೊಡಗು ಜಿಲ್ಲೆ, ದಸಾಪ ಕೊಡಗು ಜಿಲ್ಲೆ ಸಹಯೋಗದಲ್ಲಿ ನುಡಿ ಸಾಹಿತ್ಯ ಲಹರಿ ಪ್ರಯುಕ್ತ ನಡೆದ ಮೊಗಳ್ಳಿ ಗಣೇಶ್ ಅವರ ಬದುಕು-ಬರಹ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದರು. ಮೊಗಳ್ಳಿ ಗಣೇಶ್ ಅವರ ಚಿಂತನೆಗಳು ಸಾರ್ವಕಾಲಿಕವಾಗಿವೆ. ಸಾಹಿತ್ಯ ಹಾಗೂ ಬರಹಗಳು ಲೋಕಾಂತವಾಗಬೇಕು. ಮಾತ್ರವಲ್ಲದೆ ಸಾಹಿತ್ಯದ ದಾಖಲೀಕರಣವನ್ನು ಮಾಡಬೇಕು. ಮನುಷ್ಯನು ತನ್ನನ್ನು ತಾನು ಪ್ರಶ್ನಿಸುತ್ತಲೆ ಬದುಕಬೇಕು. ಕಥೆ, ಕಾದಂಬರಿಗಳು ವಿಶ್ವಾವ್ಯಾಪಿಯಾಗಬೇಕು ಎಂದು ಹೇಳಿದರು. ಕಲಿಕೆ, ಬದುಕು, ಅನುಭವ, ಸುತ್ತ ಮುತ್ತಲಿನ ಪರಿಸರವು ನಮಗೆ ಪ್ರೇರಣೆಯಾಗಿದೆ ಎಂದರು. ಹೊಸ ಚಿಂತನೆಗಳು ಮೂಡಿದಾಗ ಮಾತ್ರ ಬರಹಗಳಿಗೆ ಅರ್ಥ ಬರಲು ಸಾಧ್ಯವಾಗುತ್ತದೆ. ಅಂತೆಯೇ ಮೊಗಳ್ಳಿ ಗಣೇಶ್ …
ಲೇಖಕ: admin
ಕುಶಾಲನಗರ ಡಿ.17 NEWS DESK : ಮುಂಬರುವ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನಕ್ಕೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನಿವೃತ್ತ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಅವರ ಆಯ್ಕೆಯಾಗಬೇಕಿದೆ ಎಂದು ಪರಿಷತ್ತಿನ ರಾಜ್ಯ ಪ್ರತಿನಿಧಿ ನಭಿ ಕುಷ್ಟಗಿ ಹೇಳಿದರು. ಸಾಹಿತ್ಯಾಸಕ್ತರ ವೇದಿಕೆಯ ವತಿಯಿಂದ ಜಿಲ್ಲಾದ್ಯಂತ ನಡೆಸುತ್ತಿರುವ ಕಸಾಪಕ್ಕೆ ಡಾ.ಸಿ.ಸೋಮಶೇಖರ್ ಸೂಕ್ತ ಎಂಬ ಆಂದೋಲನದಲ್ಲಿ ಡಾ.ಸಿ.ಸೋಮಶೇಖರ್ ಅವರ ವ್ಯಕ್ತಿ ಪರಿಚಯದ ಭಿತ್ತಿ ಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಾಹಿತ್ಯಾಸಕ್ತರಿಂದ ಡಾ.ಸಿ.ಸೋಮಶೇಖರ್ ಅವರ ಪರವಾದ ಜನಾಭಿಪ್ರಾಯ ಬಹಳ ಉತ್ತಮವಾಗಿ ರೂಪುಗೊಳ್ಳುತ್ತಿದೆ. ಆದ್ದರಿಂದ ಕೊಡಗು ಜಿಲ್ಲೆಯ ಸಾಹಿತ್ಯಾಭಿಮಾನಿಗಳು ಕಸಾಪ ಸದಸ್ಯರು ತಮ್ಮ ಮುಂದಿನ ಆಯ್ಕೆಯಾಗಿ ಡಾ.ಸಿ.ಸೋಮಶೇಖರ್ ಅವರನ್ನು ಬೆಂಬಲಿಸಬೇಕಾದ ಅನಿವಾರ್ಯತೆ ಬಗ್ಗೆ ಮಾತನಾಡಿದರು. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕರಾದ ರಾಮಚಂದ್ರರಾಜೇ ಅರಸು ಈ ಸಂದರ್ಭ ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ಅವರ ವ್ಯಕ್ತಿ ಪರಿಚಯದ ಹೊತ್ತಿಗೆಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭ ಸೋಮವಾರಪೇಟೆ ತಾಲ್ಲೂಕು ಕ್ಷೇತ್ರ…
ಮಡಿಕೇರಿ ಡಿ.17 NEWS DESK : ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನದ ಜನಜಾಗೃತಿ ರಥಯಾತ್ರೆ ಕೊಡಗಿಗೆ ಆಗಮಿಸಿದ್ದು, ರಥಯಾತ್ರೆ ಸಾಗುವ ಹಾದಿ ಮತ್ತು ಕಾರ್ಯಕ್ರಮಗಳ ವಿವರ. ಡಿ.17 ರಂದು ಬೆಳಿಗ್ಗೆ 10 ಗಂಟೆಗೆ ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮದಲ್ಲಿ ಮಠಾಧೀಶರಿಂದ ಜಾಗೃತಿ ಸಂದೇಶ. ನಂತರ ಪೊನ್ನಂಪೇಟೆಯಿಂದ ಹೊರಟು ಗೋಣಿಕೊಪ್ಫ ಬಸ್ಸ್ ನಿಲ್ದಾಣದಲ್ಲಿ 11 ಗಂಟೆಗೆ ಡ್ರಗ್ಸ್ ವಿರುದ್ಧ ಜನಜಾಗೃತಿ ಭಾಷಣ ನಡೆಯಲಿದೆ. 11.30 ಗಂಟೆಗೆ ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ ಯುವ ಸಮುದಾಯ ವಿನಾಶಕಾರಿ ಡ್ರಗ್ಸ್ ನಿಂದ ದೂರ ಉಳಿಯುವಂತೆ ಯುವಜಾಗೃತಿ ಭಾಷಣ ಮಾಡಲಿದ್ದಾರೆ. 12.30 ಗಂಟೆಗೆ ಗೋಣಿಕೊಪ್ಪದಿಂದ ಹೊರಡುವ ರಥವು 1.30 ಗಂಟೆಗೆ ವಿರಾಜಪೇಟೆಯ ಸೈಂಟ್ ಆನ್ಸ್ ಕಾಲೇಜಿನಲ್ಲಿ ವಿನಾಶಕಾರಿ ಡ್ರಗ್ಸ್ ಬಗ್ಗೆ ಯುವ ಜಾಗೃತಿ ಮೂಡಿಲಾಗವುದು. ನಂತರ ಮಧ್ಯಾಹ್ನ 2.30 ಗಂಟೆಗೆ ವಿರಾಜಪೇಟೆಯ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಮಾರಕ ಡ್ರಗ್ಸ್ ವಿರುದ್ಧ ವಿದ್ಯಾರ್ಥಿ ಜಾಗೃತಿ ಭಾಷಣ ನಡೆಯಲಿದೆ. 3.30 ಗಂಟೆಗೆ ಅಮ್ಮತ್ತಿಯ ಸಿದ್ಧಾಪುರ ರಸ್ತೆ ಜಂಕ್ಷನ್ ನಲ್ಲಿ ಡ್ರಗ್ಸ್ ಬಳಕೆಯ ದುಷ್ಫರಿಣಾಮಗಳ…
ವಾಮಂಜೂರು ಡಿ.17 NEWS DESK : ವಾಮಂಜೂರಿನ ಸಂತೋಷನಗರ ಮೈದಾನದಲ್ಲಿ ಎಸ್.ಜೆ.ಸಿ. ಫ್ರೆಂಡ್ಸ್ ವಾಮಂಜೂರು, ರೊ ಇಂಟರ್‌ನ್ಯಾಷನಲ್ ಹಾಗೂ ಗಜಾನನ ಕ್ರಿಕೆಟರ್ಸ್ (ಪ್ರಜ್ವಲ್ ಫಿಲ್ಮ್ಸ್) ಪ್ರಾಯೋಜಕತ್ವದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಚರ್ಚ್ ಹಂತದ ಎರಡು ದಿನಗಳ ಅಂಡರ್‌ಆರ್ಮ್ ಕ್ರಿಕೆಟ್ ಪಂದ್ಯಾವಳಿ ನಡೆಯಿತು. ಪಂದ್ಯದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ವಿವಿಧ ಚರ್ಚ್‌ಗಳಿಂದ ಒಟ್ಟು 19 ತಂಡಗಳು ಭಾಗವಹಿಸಿದ್ದವು. ಅಂತಿಮ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಸಂತ ಸೆಬೆಸ್ಟಿಯನ್ ಪೆರ್ಮನ್ನುರ್ ಕ್ರಿಕೆಟ್ ತಂಡವು ಕುಡ್ಲ ಟ್ರೋಫಿಯನ್ನು ತನ್ನದಾಗಿಸಿಕೊಂಡು ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಟೀಂ ಪಾಲಡ್ಕಾ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಪಂದ್ಯಗಳನ್ನು ನ್ಯಾಯಸಮ್ಮತವಾಗಿ ನಡೆಸುವಲ್ಲಿ ಅಂಪೈರ್‌ಗಳಾಗಿ ರಾಜೇಶ್ ಪಡಿಲ್, ಸೈಫ್ ಬಜಾಲ್, ರಂಜೇಶ್ ಉಚಿಲ್, ಆರಿಫ್ ಜೋಕಟ್ಟೆ ಹಾಗೂ ಅಶ್ವತ್ ಕುಂಪಲ ಸಮರ್ಥವಾಗಿ ನಿರ್ವಹಿಸಿದರು. ಪಂದ್ಯದ ಪ್ರತಿಯೊಂದು ಹಂತವನ್ನೂ ರೋಚಕವಾಗಿಸುವಂತೆ ರಾಜೇಶ್ ಪೆರೇರಾ ಹಾಗೂ ಸಯ್ಯಾದ್ ಗುರುಕಂಬಳ ಅವರು ಮನಮೋಹಕ ಹಾಗೂ ವಿವರವಾದ ಕಾಮೆಂಟ್ರಿ ನೀಡಿದರು. ಆಟಗಾರರು, ಆಯೋಜಕರು ಹಾಗೂ ಪ್ರೇಕ್ಷಕರ ಉತ್ತಮ ಸಹಕಾರದಿಂದ ಕ್ರಿಕೆಟ್ ಪಂದ್ಯಾವಳಿಯು…
ಮಡಿಕೇರಿ ಡಿ.17 NEWS DESK : ರಾಯಚೂರಿನಲ್ಲಿ ಡಿ.20 ಹಾಗೂ 21 ರಂದು ಖ್ಯಾತ ಸಾಹಿತಿಗಳಾದ ಡಾ. ಜಯದೇವಿ ಗಾಯಕವಾಡ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯುತ್ತಿರುವ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಕೊಡಗಿನ ಸಾಮಾಜಿಕ ಕಾರ್ಯಕರ್ತೆ ಡಾ.ಕಾವೇರಿ ಹೆಚ್.ಎಂ ಅವರು ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆಂದು ಕೊಡಗು ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಅರ್ಜುನ್ ಮೌರ್ಯ ತಿಳಿಸಿದ್ದಾರೆ. “ಸಂವಿಧಾನ ಭಾರತ” ಧ್ಯೇಯವಾಕ್ಯದಲ್ಲಿ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ನಡೆಯುತ್ತಿರುವ ಈ ಸಮ್ಮೇಳನದಲ್ಲಿ ಕೊಡಗಿನ ಕವಯಿತ್ರಿ ರಮ್ಯ ಮೂರ್ನಾಡು ಅವರು ಮಹಿಳಾ ಕಾವ್ಯಯಾನಕ್ಕೆ, ಮಾರುತಿ ದಾಸಣ್ಣವರ್ ಪುಸ್ತಕ ಪ್ರಶಸ್ತಿಗೆ, ಸಾಧಕ ಪ್ರಶಸ್ತಿಗೆ ಬರಹಗಾರ್ತಿ ಡಾ.ಮಹಾಲಕ್ಷ್ಮಿ ಟಿ.ಎಸ್, ಸಮ್ಮೇಳನ ಲಾಂಛನ ರಚನೆಗಾಗಿ ಧನುಷ್ ಎ. ಇವರುಗಳನ್ನು ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಈ ಬಾರಿಯ ಸಮ್ಮೇಳನದಲ್ಲಿ ಕೊಡಗಿನವರನ್ನು ಪರಿಗಣಿಸದ್ದಕ್ಕಾಗಿ ಆಯ್ಕೆ ಸಮಿತಿಯ ಅಧ್ಯಕ್ಷರೂ ಹಾಗೂ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ.ಅರ್ಜುನ ಗೊಳಸಂಗಿ ಹಾಗೂ ಎಲ್ಲಾ ಆಯ್ಕೆ ಸಮಿತಿಯ ಪದಾಧಿಕಾರಿಗಳಿಗೆ ಕೊಡಗು…
ವಿರಾಜಪೇಟೆ ಡಿ.17 NEWS DESK : ಬೇಟೋಳಿ ಗ್ರಾಮದ ಶ್ರೀ ಶಕ್ತಿ ವೃದ್ಧಾಶ್ರಮದಲ್ಲಿ ಜೆಡಿಎಸ್ ಕಾರ್ಯಕರ್ತರು ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಧ್ಯಕ್ಷ, ಕೇಂದ್ರದ ಬೃಹತ್ ಕೈಗಾರಿಕಾ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರ 66ನೇ ಹುಟ್ಟುಹಬ್ಬವನ್ನು ಆಚರಿಸಿದರು. ವಿರಾಜಪೇಟೆ ತಾಲ್ಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ಪಿ.ಎ.ಮಂಜುನಾಥ್ ಅವರ ನೇತೃತ್ವದಲ್ಲಿ ವೃದ್ಧಾಶ್ರಮದಲ್ಲಿನ ವೃದ್ಧರಿಗೆ ಸಿಹಿ ಹಂಚಿ, ಮಧ್ಯಾಹ್ನದ ಬೋಜನ ನೀಡಿ ಹುಟ್ಟುಹಬ್ಬವನ್ನು ಆಚರಿಸಲಾಯಿತು. ವೃದ್ಧಾಶ್ರಮದ ಹಿರಿಯರೊಂದಿಗೆ ಕೆಲಕಾಲ ಕಳೆದ ಜೆಡಿಎಸ್ ಪಕ್ಷದ ಸದಸ್ಯರು ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭ ಮಾತನಾಡಿದ ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಮಂಜುನಾಥ್, ದೇಶದ ಅಭಿವೃದ್ಧಿ ಜೊತೆಗೆ ಹೆಚ್ಚಿನ ಆದ್ಯತೆಯ ಮೇಲೆ ರಾಜ್ಯದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವ ಕುಮಾರಸ್ವಾಮಿ ಅವರಿಗೆ ದೇವರು ಹೆಚ್ಚಿನ ಆರೋಗ್ಯ ಕರುಣಿಸಲಿ ಎಂದರಲ್ಲದೆ, ಈಗಾಗಲೇ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿ ಜನರ ನೆನಪಿನಲ್ಲಿ ಉಳಿಯುವಂತಹ ಲಾಟರಿ ನಿಷೇಧ, ಸಾರಾಯಿ ನಿಷೇಧ, ಗ್ರಾಮ ವಾಸ್ತವ್ಯ, ರೈತರ ಸಾಲ ಮನ್ನಾ…
ವಿರಾಜಪೇಟೆ ಡಿ.17 NEWS DESK : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಬೆಂಗಳೂರು ಕೇಂದ್ರ ಸಮಿತಿಯ ಚುನಾವಣೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಶೀಲರಾದ ವಿರಾಜಪೇಟೆಯ ವಿದ್ಯುತ್ ಗುತ್ತಿಗೆದಾರ ಬಿ.ಎಂ. ಗಣೇಶ್ ಅವರನ್ನು ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ವಿರಾಜಪೇಟೆಯ ಸಮಿತಿ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು. ವಿರಾಜಪೇಟೆಯ ತಾಲೂಕು ಸಮಿತಿ ಕಚೇರಿಯಲ್ಲಿ ನಡೆದ ಅಭಿನಂದನೆ ಕಾರ್ಯಕ್ರಮದಲ್ಲಿ ತಾಲೂಕು ಸಮಿತಿ ಅಧ್ಯಕ್ಷ ಬಿ.ಸಿ. ಭರತ್, ಉಪಾಧ್ಯಕ್ಷ ಕೆ. ಎಂ. ಹಂಸ, ಕಾರ್ಯದರ್ಶಿ ಎನ್.ಜಿ. ಚಂದ್ರಶೇಖರ್, ಸಹ ಕಾರ್ಯದರ್ಶಿ ಸಿ.ಜಿ. ಹರೀಶ್. ಖಜಾಂಚಿ ಎಂ.ಎಂ. ಸರ್ಫು, ಸಂಘಟನಾ ಕಾರ್ಯದರ್ಶಿ ಬಿ.ಎಂ. ರಮೇಶ್, ಸದಸ್ಯರಾದ ಬಿ.ಸಿ. ಕಿರಣ್, ಎಂ.ಡಿ. ರಫೀಕ್, ಅಲೆಕ್ಸ್, ಬಿ.ಎಸ್. ಚಂದ್ರಶೇಖರ್. ಸಿ.ಜಿ. ಜೋಯ್, ಬಿ.ಆರ್. ಮನು, ಬಿ.ಎಂ. ಮ್ಯಾಥ್ಯೂ, ಬಿ.ಬಿ. ಹೊನ್ನಪ್ಪ ಹಾಗೂ ರಾಜಶೇಖರ ಇವರುಗಳು ಉಪಸ್ಥಿತರಿದ್ದರು.
ಮಡಿಕೇರಿ ಡಿ.16 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಹಯೋಗದೊಂದಿಗೆ 2025-26 ನೇ ಸಾಲಿನ ಬೇಟಿ ಬಚಾವೋ ಬೇಟಿ ಪಡಾವೋ ಕಾಯಕ್ರಮದಡಿಯಲ್ಲಿ ಬಾಲ್ಯ ವಿವಾಹ ನಿಷೇಧದ ಕುರಿತು ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಜೆಂಡರ್ ಸ್ಪೆಷಲೀಸ್ಟ್ ಕೇಶಿನಿ ಅವರು ಉದ್ಘಾಟಿಸಿ ಮಾತನಾಡಿ, ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು, ಹೆಣ್ಣು ಮಕ್ಕಳ ಉಳಿವು ಮತ್ತು ಅವರ ರಕ್ಷಣೆಯನ್ನು ಖಾತ್ರಿಗೊಳಿಸುವುದು, ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಖಾತ್ರಿಗೊಳಿಸುವುದು, ಲಿಂಗ ಪಕ್ಷಪಾತ ಮತ್ತು ಲಿಂಗ ಆಯ್ಕೆ ಮಾಡುವುದನ್ನು ತಡೆಗಟ್ಟುವುದು, ಹೆಣ್ಣು ಮತ್ತು ಗಂಡು ಮಕ್ಕಳ ನಡುವಿನ ಸಮಾನತೆಯನ್ನು ಪ್ರೋತ್ಸಾಹಿಸುವುದು, ಹೆಣ್ಣು ಮಗು ಶಾಲೆಗೆ ಹೋಗುವುದನ್ನು ಕಾಪಾಡುವುದು, ಲಿಂಗ ಪತ್ತೆ ಪರೀಕ್ಷೆ…
ಮಡಿಕೇರಿ ಡಿ.16 NEWS DESK : ಜನನ ಮತ್ತು ಮರಣ ನಾಗರಿಕ ನೋಂದಣಿ ಪದ್ಧತಿಯನ್ನು ನಿಖರವಾಗಿ ದಾಖಲಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಜನನ ಮತ್ತು ಮರಣ ನಾಗರಿಕ ನೋಂದಣಿ ಪದ್ಧತಿಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಷ್ಟ್ರದ ನಾಗರಿಕ ನೋಂದಣಿ ಜನನ ಮತ್ತು ಮರಣ ಅಧಿನಿಯಮ 1960 ರನ್ವಯ ಕರ್ನಾಟಕ ಜನನ ಮತ್ತು ಮರಣ ನೋಂದಣಿ 1970 ಮತ್ತು ಪುನರ್ ರಚಿತ ಕರ್ನಾಟಕ ಜನನ ಮರಣ ನೋಂದಣಿ ಕಾಯ್ದೆ ನಿಯಮ 1990 ರ ರನ್ವಯ ಜನನ ಮತ್ತು ಮರಣ ನೋಂದಣಿ ಕಡ್ಡಾಯವಾಗಿದ್ದು, ಆ ನಿಟ್ಟಿನಲ್ಲಿ ಕಾಲ ಕಾಲಕ್ಕೆ ಈ ಕಾರ್ಯ ಆಗಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಿದರು. ಪ್ರಸ್ತುತ ಜನನ ಮತ್ತು ಮರಣ ನೋಂದಣಿಯನ್ನು ಗ್ರಾಮೀಣ ಭಾಗದಲ್ಲಿ 2015 ರ ಏ.1 ರಿಂದ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಜನ್ಮ ತಂತ್ರಾಂಶದ ಮೂಲಕ…
ಮಡಿಕೇರಿ ಡಿ.16 NEWS DESK : ರಾಜಪೇಟೆ ಉಪ ಖಜಾನೆಯ ನೂತನ ಕಚೇರಿಯು ವಿರಾಜಪೇಟೆ ತಾಲ್ಲೂಕು ಆಡಳಿತ ಸೌಧದಲ್ಲಿ ನಿರ್ಮಾಣಗೊಂಡಿದ್ದು, ಖಜಾನೆ ಆಯುಕ್ತರ ಅನುಮತಿ ನೀಡಿರುವ ಮೇರೆಗೆ ಈ ಉಪ ಖಜಾನೆಯು ಹಾಲಿ ಕಾರ್ಯನಿರ್ವಹಿಸುತ್ತಿರುವ ಬಾಡಿಗೆ ಕಟ್ಟಡದಿಂದ ವಿರಾಜಪೇಟೆ ತಾಲ್ಲೂಕು ಆಡಳಿತ ಸೌಧದ ನೆಲ ಮಹಡಿಯಲ್ಲಿರುವ ನೂತನ ಕಚೇರಿಗೆ ಡಿ.12 ರಂದು ಸ್ಥಳಾಂತರಗೊಂಡು ಕಚೇರಿ ಕಾರ್ಯ ಚಟುವಟಿಕೆಗಳು ಪ್ರಾರಂಭಗೊಂಡಿರುತ್ತದೆ ಎಂದು ವಿರಾಜಪೇಟೆ ಉಪ ಖಜಾನೆಯ ಪತ್ರಾಂಕಿತ ಉಪ ಖಜಾನಾಧಿಕಾರಿ ಅವರು ತಿಳಿಸಿದ್ದಾರೆ. ಉಪ ಖಜಾನೆಗೆ ಸಂಬಂಧಿಸಿದ ಎಲ್ಲಾ ಪತ್ರ ವ್ಯವಹಾರಗಳು ಹಾಗೂ ಖಜಾನೆ ಕೆಲಸ ಕಾರ್ಯಗಳಿಗೆ ಸಂಬಂಧಿಸಿದಂತೆ ಪತ್ರಾಂಕಿತ ಉಪ ಖಜಾನಾಧಿಕಾರಿಗಳು, ಉಪ ಖಜಾನೆ ಕಚೇರಿ, ನೆಲ ಮಹಡಿ, ತಾಲ್ಲೂಕು ಆಡಳಿತ ಸೌಧ, ವಿರಾಜಪೇಟೆ-571218. ವಿಳಾಸದ ವಿವರವುಳ್ಳ ನೂತನ ಕಚೇರಿಯನ್ನು ಸಂಪರ್ಕಿಸುವಂತೆ ವಿರಾಜಪೇಟೆ ಉಪ ಖಜಾನೆ ಪತ್ರಾಂಕಿತ ಉಪ ಖಜಾನಾಧಿಕಾರಿ ಅವರು ತಿಳಿಸಿದ್ದಾರೆ.






