ಗೋಣಿಕೊಪ್ಪ, NEWS DESK ಮಾ.7 : ಈ ಸಾಲಿನ ಬಜೆಟ್ ಅಧಿವೇಶನದ ಮೊದಲ ದಿನವೇ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರ ಪ್ರಯತ್ನದಿಂದ ಕರ್ನಾಟಕ ರಾಜ್ಯ ಘನ ಸರಕಾರ *ಕೊಡವ ಅಭಿವೃದ್ಧಿ ನಿಗಮ* ವನ್ನು ಸ್ಥಾಪಿಸಲು ಘೋಷಣೆ ಮಾಡಿದ್ದು, ಈ *ಸಂಭ್ರಮವನ್ನು* ಗೋಣಿಕೊಪ್ಪಲುವಿನಲ್ಲಿ *ಶಾಸಕರಿಗೆ ಸನ್ಮಾನಿಸುವ* ಮೂಲಕ ಆಚರಿಸಲಾಯಿತು. ಅಧಿವೇಶನದ ಮೊದಲ ದಿನ ಮುಗಿಸಿ ಕ್ಷೇತ್ರಕ್ಕೆ ಮಾನ್ಯ ಶಾಸಕರು ಆಗಮಿಸುತ್ತಿದ್ದ ಸಂದರ್ಭ ಯುಕೊ ಸಂಘಟನೆ ವತಿಯಿಂದ, ಗೋಣಿಕೊಪ್ಪಲುವಿನಲ್ಲಿ ಶಾಸಕರ ಆಗಮನಕ್ಕಾಗಿ ಕಾಯುತ್ತಿದ್ದ ಯುಕೋ ಸಂಘಟನೆಯ ಅಧ್ಯಕ್ಷರು ಹಾಗೂ ಸದಸ್ಯರುಗಳು ಶಾಸಕರನ್ನು ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸುವ ಮೂಲಕ ಶಾಸಕರಿಗೆ ತಮ್ಮ ಕೃತಜ್ಞತೆಯನ್ನು ಸಲ್ಲಿಸಿದರು. ಭಾಷಿಕ ಅಲ್ಪಸಂಖ್ಯಾತರು ಹಾಗೂ ಅತ್ಯಂತ ವಿಶಿಷ್ಟ ಹಾಗೂ ಪುರಾತನ ಸಂಸ್ಕೃತಿಯನ್ನು ಹೊಂದಿರುವ ಕೊಡವ ಜನಾಂಗದ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಬೇಕೆಂದು ಕೊಡವ ಜನಾಂಗದವರ ದಶಕಗಳ ಬೇಡಿಕೆಯಾಗಿತ್ತು. ಚುನಾವಣೆ ಸಂದರ್ಭದಲ್ಲಿ ಮಾನ್ಯ ಶಾಸಕರು ತಾನು ಆಯ್ಕೆಯಾಗಿ ಬಂದ ಸಂದರ್ಭದಲ್ಲಿ…
ಲೇಖಕ: admin
ಬೆಂಗಳೂರು, ಮಾರ್ಚ್ 7, 2026: ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು ಈಗ ಮಾಹಿತಿ ತಂತ್ರಜ್ಞಾನದ (IT) ಹೊಸ ಕೇಂದ್ರವಾಗಿ ಹೊರಹೊಮ್ಮಲು ಸಜ್ಜಾಗಿದೆ. ವಿಧಾನಸಭೆಯಲ್ಲಿ ಶನಿವಾರ 2026-27ನೇ ಸಾಲಿನ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬೆಂಗಳೂರು ನಂತರ ಮೈಸೂರನ್ನು ರಾಜ್ಯದ ಎರಡನೇ ಅತಿದೊಡ್ಡ ಐಟಿ ನಗರವಾಗಿ ಅಭಿವೃದ್ಧಿಪಡಿಸುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಮೈಸೂರು ಐಟಿ ನಗರವಾಗಲು ಕಾರಣವೇನು? ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಮತ್ತು ಜನಸಂದಣಿಯ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಸರ್ಕಾರ ಹೂಡಿಕೆಗಳನ್ನು ವಿಕೇಂದ್ರೀಕರಿಸಲು ನಿರ್ಧರಿಸಿದೆ. ಹಾಲಿ ಸ್ಥಿತಿ: ಮೈಸೂರಿನಲ್ಲಿ ಈಗಾಗಲೇ 100ಕ್ಕೂ ಹೆಚ್ಚು ಕಂಪನಿಗಳಿದ್ದು, 30,000ಕ್ಕೂ ಹೆಚ್ಚು ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಗುರಿ: ಈ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸಿ, ಜಾಗತಿಕ ಮಟ್ಟದ ಕಂಪನಿಗಳನ್ನು ಮೈಸೂರಿನತ್ತ ಸೆಳೆಯುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಜಾಗತಿಕ ಸಾಮರ್ಥ್ಯದ ಕೇಂದ್ರಗಳ (GCC) ಕ್ರಾಂತಿ ಭಾರತದಲ್ಲೇ ಮೊದಲ ಬಾರಿಗೆ ವಿಶೇಷ GCC ನೀತಿಯನ್ನು ಜಾರಿಗೆ ತಂದ ಕೀರ್ತಿ ಕರ್ನಾಟಕಕ್ಕೆ ಸಲ್ಲುತ್ತದೆ ಎಂದು ಸಿಎಂ ಹೆಮ್ಮೆಯಿಂದ ಪ್ರಕಟಿಸಿದರು. 3.5 ಲಕ್ಷ…
ಬೆಂಗಳೂರು, ಮಾರ್ಚ್ 07, 2026: ನೈಋತ್ಯ ರೈಲ್ವೆ ಇಲಾಖೆಯು ಕಾಚಿಗುಡ–ಯಶವಂತಪುರ ಹಾಗೂ ಬೆಂಗಳೂರು–ಕಲಬುರಗಿ ಮಾರ್ಗಗಳಲ್ಲಿ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಸಮಯದಲ್ಲಿ ಪರಿಷ್ಕರಣೆ ಮಾಡಿದೆ. ಈ ಹೊಸ ವೇಳಾಪಟ್ಟಿಯು ಮಾರ್ಚ್ 15ರಿಂದ ಅಧಿಕೃತವಾಗಿ ಜಾರಿಗೆ ಬರಲಿದ್ದು, ಪ್ರಯಾಣಿಕರು ತಮ್ಮ ಪ್ರಯಾಣದ ಯೋಜನೆಗಳನ್ನು ಈ ಬದಲಾವಣೆಗೆ ಅನುಗುಣವಾಗಿ ಮಾರ್ಪಡಿಸಿಕೊಳ್ಳಲು ಸೂಚಿಸಲಾಗಿದೆ. ಪರಿಷ್ಕೃತ ವೇಳಾಪಟ್ಟಿಯ ವಿವರಗಳು: 1. ಯಶವಂತಪುರ – ಕಾಚಿಗುಡ (ರೈಲು ಸಂಖ್ಯೆ: 20704) ಹಿಂದೂಪುರ ನಿಲ್ದಾಣ: ಈ ಮೊದಲು ಮಧ್ಯಾಹ್ನ 15.48ಕ್ಕೆ ಬಂದು 15.50ಕ್ಕೆ ನಿರ್ಗಮಿಸುತ್ತಿತ್ತು. ಇನ್ಮುಂದೆ 15.55ಕ್ಕೆ ಆಗಮಿಸಿ 15.57ಕ್ಕೆ ಹೊರಡಲಿದೆ. 2. ಕಾಚಿಗುಡ – ಯಶವಂತಪುರ (ರೈಲು ಸಂಖ್ಯೆ: 20703) ಹಿಂದೂಪುರ ನಿಲ್ದಾಣ: ಮಧ್ಯಾಹ್ನ 12.08ರ ಬದಲು ಪರಿಷ್ಕೃತ ಸಮಯದಂತೆ 12.17ಕ್ಕೆ ಆಗಮಿಸಿ 12.19ಕ್ಕೆ ನಿರ್ಗಮಿಸಲಿದೆ. 3. ಕಲಬುರಗಿ – ಎಸ್‌ಎಂವಿಟಿ ಬೆಂಗಳೂರು (ರೈಲು ಸಂಖ್ಯೆ: 22231) ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ: ಬೆಳಿಗ್ಗೆ 11.00ರ ಬದಲು 11.13ಕ್ಕೆ ಆಗಮಿಸಿ 11.15ಕ್ಕೆ ಹೊರಡಲಿದೆ. ಯಲಹಂಕ ನಿಲ್ದಾಣ:…
ವಿರಾಜಪೇಟೆಯ ಕಾವೇರಿ ಶಾಲೆಯಲ್ಲಿ ಯು.ಕೆ.ಜಿ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಒಂದು ಕಾರ್ಯಕ್ರಮದ ಬಗ್ಗೆ ಪ್ರಾ ಸ್ತಾವಿಕವಾಗಿ ಮಾತನಾಡಿ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮಾನ್ ಸುದೇ ಶ್ ರವರು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಅಂತಿಮ ಹಂತದಲ್ಲಿ ಹೇಗೆ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳ ಬೇಕು ಎಂಬುದನ್ನು ತಿಳಿಸುತ್ತಾ ಶುಭ ಹಾರೈಸಿದರು. ಈ ಒಂದು ಕಾರ್ಯಕ್ರಮದಲ್ಲಿ ಅತಿಥಿ ಸ್ಥಾನವನ್ನು ಅಲಂಕರಿಸಿದ್ದ ಪೋಷಕ ಶಿಕ್ಷಕ ಸಮಿತಿಯ ಸದಸ್ಯರಾದ ಶ್ರೀಮಾನ್ ಸುಮೇಶ್ ರವರು ಮಾತನಾಡಿ ಪ್ರಸ್ತುತ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸತತ ಪ್ರಯತ್ನದಿಂದ ಮಾತ್ರ ಸಾಧನೆ ಸಾಧ್ಯ ಎಂಬ ಹಿತನುಡಿಗಳೊಂದಿಗೆ ಶುಭ ಹಾರೈಸಿದರು. ಯು.ಕೆ.ಜಿ ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಪಾರ್ವತಿ ಪಿ . ಯು ಪದವಿ ಪ್ರಧಾನ ಮಾಡಿ ಅಭಿನಂದಿಸಿದರು. 10ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದಂತಹ ಶ್ರೀಮಾನ್ ಸುದೇಶ್ ಬಿ. ಎಸ್…
ಮಡಿಕೇರಿ, NEWS DESK ಮಾ.೬ : ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾ, ವಿರಾಜಪೇಟೆ ತಾಲ್ಲೂಕು, ಅಮ್ಮತ್ತಿ ಹೋಬಳಿ ಘಟಕ ಮತ್ತು ಸಿದ್ದಾಪುರ ಪ್ರೌಢ ಶಾಲೆಯ ಸಂಯುಕ್ತಾಶ್ರಯದಲ್ಲಿ ವಿರಾಜಪೇಟೆಯ ಮೊಣ್ಣಂಡ ಕೆ.ಚೆಂಗಪ್ಪ ಹಾಗೂ ಮರಗೋಡುವಿನ ಚೆರಿಯಮನೆ ಕೃಷ್ಣಪ್ಪ ಅವರ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಸಿದ್ದಾಪುರ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಕನ್ನಡ ಹಾಗೂ ಕೊಡವ ಭಾಷಾ ಬೆಳವಣಿಗೆ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಸಾಹಿತಿ ಸೋಮಯಂಡ ಕೌಶಲ್ಯ ಸತೀಶ್ ಅವರು ಕೊಡವ ಮತ್ತು ಕನ್ನಡ ಎರಡೂ ಭಾಷೆಗಳಿಗೆ ದ್ರಾವಿಡ ಮೂಲವಾಗಿದೆ. ಭಾಷೆ ಹುಟ್ಟಿ ಬಂದ ವಿವರ, ಜನಾಂಗಗಳ ಬೆಳವಣಿಗೆ ಮತ್ತು ಕೊಡವ ಭಾಷೆಯ ಉಲ್ಲೇಖ ಕನ್ನಡದ ಆದಿ ಕೃತಿಗಳಲ್ಲಿದೆ. ಸರಕಾರ ಕೊಡವ ಮತ್ತು ಕನ್ನಡ ಭಾಷೆಗಳ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು. ದೇವಣಗೇರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಲೋಕೇಶ ಹೆಚ್.ಡಿ ಅವರು ಜಾನಪದ ಸಾಹಿತ್ಯದ ಬಗ್ಗೆ ಉಪನ್ಯಾಸ ನೀಡಿ ಜಾನಪದ ಕಥೆಗಳ ಮೌಲ್ಯಗಳು, ಒಗಟು ಹಾಗೂ…
ಕರಡಿಗೋಡುವಿನ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಕುಕ್ಕುನೂರು ಕುಟುಂಬಸ್ಥರಿಂದ ಮಳೆ ಪೂಜೆಯನ್ನ ನೆರೆವೇರಿಸಲಾಯಿತು. ದೇವರ ಸನ್ನಿಧಿಯಲ್ಲಿ ನಾಡಿಗೆ ಉತ್ತಮ ಮಳೆಯಾಗಿ ಪ್ರಕೃತಿಯು ಹಚ್ಚ ಹಸಿರಿನಿಂದ ಕಂಗೊಳಿಸಿ ಭೂಮಿಯನ್ನ ತಂಪಾಗಿಸಿ ಧನ ದಾನ್ಯ ಬೆಳೆಗಳು ಸಮೃದ್ಧಿಯಾಗಿ ಬೆಳೆಯಬೇಕು. ಹಾಗು ಜನತೆಗೆ ಉತ್ತಮ ಆರೋಗ್ಯ ದೀರ್ಘಯುಷ್ಯ ವನ್ನ ಕೊಟ್ಟು ಮಳೆಯಿಂದ ಹಸಿರು ಹುಲ್ಲುಗಳು ಚಿಗುರುಹೊಡೆದು ಹುಲ್ಲುಗಾವಲಾಗಿ ಮಾರ್ಪಟ್ಟು ದನ ಕರುಗಳಿಗೆ ಒಳ್ಳೆಯ ಮೇವು ಒದಗಬೇಕು ಜೊತೆಗೆ ಭರತ ಖಂಡದಲ್ಲಿ ಗೋ ಸಂತತಿ ಹೆಚ್ಚಾಗಿ ಪರಿವರ್ತನೆಯಾಗಬೇಕೆಂದು ದೇವರಲ್ಲಿ ಪ್ರಾರ್ಥನೆಯನ್ನ ಮಾಡಿಕೊಂಡರು. ಈ ಸಂದರ್ಭದಲ್ಲಿ ಕುಕ್ಕುನೂರು ಕುಟುಂಬದ ದೇವ ತಕ್ಕಾರದ ಕೆ ಬಿ ದೇವಪ್ರಕಾಶ್ ದೇವಸ್ಥಾನದ ಅಧ್ಯಕ್ಷರಾದ ಕೆ ಬಿ ಪ್ರಸನ್ನ ಕಾರ್ಯದರ್ಶಿ ಚಿದಾನಂದ ಕುಟುಂಬದ ಹಿರಿಯರಾದ ಮೋಹನ್, ಪುರುಷೋತ್ತಮ, ಸೋಮಣ್ಣ, ಜಯರಾಮ್, ಸೂರಜ್, ಸುನಿಲ್, ಕಿಸನ್, ನವೀನ್, ಇನ್ನಿತರರು ಹಾಜರಿದ್ದರು.
ಆರ್ಥಿಕ ಶಿಸ್ತಿನಿಂದ ಕೂಡಿದ ಬಜೆಟ್ ಇದಾಗಿದ್ದು, ತಮ್ಮ ಸುದೀರ್ಘವಾದ 17ನೇ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ಪಂಚ ಗ್ಯಾರಂಟಿ ಯೋಜನೆಗಳಿಗೆ ಅನುದಾನವನ್ನು ಒದಗಿಸುವ ಮೂಲಕ ಇತರ ಕ್ಷೇತ್ರಗಳಿಗೂ ಸಮಾನ ಆದ್ಯತೆ ನೀಡಿದ್ದಾರೆ ಎಂದು ಶಾಸಕರು ಶ್ಲಾಘಿಸಿದ್ದಾರೆ. ವಿಶೇಷವಾಗಿ ಆರೋಗ್ಯ, ಶಿಕ್ಷಣ, ಕೃಷಿ, ಜಲಸಂಪನ್ಮೂಲ ಮತ್ತು ಉದ್ಯೋಗ ಸೃಷ್ಟಿ ಸೇರಿದಂತೆ ಮೂಲಭೂತ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿರುವುದು ರಾಜ್ಯದ ಅಭಿವೃದ್ಧಿಗೆ ಬಲ ನೀಡಲಿದೆ ಎಂದು ಡಾ.ಮಂಥರ್ ಗೌಡ ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. ರಾಜ್ಯದ ಸುದೀರ್ಘ ಮುಖ್ಯಮಂತ್ರಿ ಖ್ಯಾತಿಯ ಸಿದ್ದರಾಮಯ್ಯನವರು ಐತಿಹಾಸಿಕ 17 ನೇ ಬಜೆಟ್ ಮಂಡಿಸುವ ಮೂಲಕ ದಾಖಲೆ ಮಾಡಿದ್ದಾರೆ.ಇದು ಅತ್ಯಂತ ಜನಸ್ನೇಹಿ, ರೈತಪರ, ಮಹಿಳಾ ಪರ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಬಜೆಟ್ ಆಗಿದೆ. ಪ್ರತಿಯೊಂದು ವರ್ಗಕ್ಕೂ ನ್ಯಾಯ ಒದಗಿಸುವ ದೂರದೃಷ್ಟಿ ಬಜೆಟ್ ಆಗಿದೆ. ಈ ಮೂಲಕ ‘ ಸಕಾ೯ರ ಎಲ್ಲಾ ವಗ೯ದವರ ಹಿತಕಾಯಲು ಬದ್ದ ಎಂದು ನಿರೂಪಿಸಿದೆ ಸರ್ವರ ಸಬಲೀಕರಣ, ಅವಕಾಶಗಳ ಅನಾವರಣ, ನವ ಕರ್ನಾಟಕದ ನಿರ್ಮಾಣ” ಎಂಬ ನಮ್ಮ ಸರ್ಕಾರದ ಮೂಲ ಆಶಯಕ್ಕೆ…
ಮಡಿಕೇರಿ NEWS DESK ಮಾ.6 : ರಾಜ್ಯದ ಕಾಂಗ್ರೆಸ್ ಸರಕಾರ ಕೊಡಗು ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎನ್ನುವುದಕ್ಕೆ ಈ ಬಾರಿಯ ಬಜೆಟ್ ಸಾಕ್ಷಿಯಾಗಿದೆ. ಕಾವೇರಿ ನೀರಿನ ಮೂಲಕ ರಾಜ್ಯ ಸಾಕಷ್ಟು ಲಾಭ ಮಾಡಿಕೊಳ್ಳುತ್ತಿದ್ದರೂ ಜೀವನದಿಯ ತವರು ಜಿಲ್ಲೆಗೆ ವಿಶೇಷವಾದ ಯೋಜನೆ ಅಥವಾ ಅನುದಾನವನ್ನು ಘೋಷಿಸದೆ ಇರುವುದು ವಿಷಾದಕರ ಎಂದು ಕೊಡಗು ಜಿಲ್ಲಾ ಬಿಜೆಪಿಯ ಸಾಮಾಜಿಕ ಜಾಲತಾಣದ ಪ್ರಧಾನ ಸಂಚಾಲಕ ತೇಲಪಂಡ ಶಿವಕುಮಾರ್ ನಾಣಯ್ಯ ಟೀಕಿಸಿದ್ದಾರೆ. ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಸರಕಾರದ ಮೇಲೆ ಒತ್ತಡ ಹೇರಿ ವಿಶೇಷ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ. ಸ್ವತ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಯ ಬಗ್ಗೆ ಯಾವುದೇ ಆಸಕ್ತಿ ಹೊಂದದೆ ಇರುವುದು ಸ್ಪಷ್ಟವಾಗುತ್ತಿದೆ. ಪ್ರತಿವರ್ಷ ಅತಿವೃಷ್ಟಿಯಿಂದ ಜಿಲ್ಲೆಯ ಜನ ಹಾಗೂ ರೈತಾಪಿ ವರ್ಗ ಸಂಕಷ್ಟವನ್ನು ಎದುರಿಸುತ್ತಾರೆ. ವನ್ಯಜೀವಿಗಳ ದಾಳಿಯಿಂದ ನಲುಗಿ ಹೋಗಿದ್ದಾರೆ. ರಸ್ತೆಗಳ ಅವ್ಯವಸ್ಥೆಯಿಂದ ಪ್ರವಾಸೋದ್ಯಮಕ್ಕೆ ಹಿನ್ನಡೆಯಾಗುತ್ತಿದೆ. ಈ ಸಮಸ್ಯೆಗಳ ಪರಿಹಾರಕ್ಕೆ ಶಾಶ್ವತ ಯೋಜನೆಗಳನ್ನು ಘೋಷಿಸದೆ ನಿರ್ಲಕ್ಷಿಸಲಾಗಿದೆ. ಕೊಡಗಿಗೆ ರೈಲು ಸಂಪರ್ಕ ಕಲ್ಪಿಸಲು ಅಗತ್ಯ…
ಮಡಿಕೇರಿ NEWS DESK ಮಾ.6 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 17 ನೇ ಬಜೆಟ್ ನಲ್ಲಿ ಕೊಡಗಿನ ಜನರ ನಿರೀಕ್ಷೆಗಳು ಹುಸಿಯಾಗಿದೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಾರ್ಯದರ್ಶಿ ಭೋಜಣ್ಣ ಸೋಮಯ್ಯ ಟೀಕಿಸಿದ್ದಾರೆ. ಜಿಲ್ಲೆಯ ಜನ ಪ್ರಮುಖವಾಗಿ ಪ್ರವಾಸೋದ್ಯಮದ ಅಭಿವೃದ್ಧಿ, ಸರ್ವಋತು ರಸ್ತೆಗಳ ನಿರ್ಮಾಣ ಮತ್ತು ವನ್ಯಜೀವಿಗಳ ಉಪಟಳ ನಿಯಂತ್ರಣಕ್ಕೆ ಶಾಶ್ವತ ಹಾಗೂ ವಿಶೇಷ ಯೋಜನೆ ಘೋಷಿಸುವ ನಿರೀಕ್ಷೆಯಲ್ಲಿದ್ದರು. ಆದರೆ ರಾಜ್ಯ ಕಾಂಗ್ರೆಸ್ ಸರಕಾರ ಇದ್ಯಾವುದಕ್ಕೂ ಆದ್ಯತೆ ನೀಡಿಲ್ಲ. ಜಿಲ್ಲೆಯ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಸ ಯೋಜನೆಗಳನ್ನು ಘೋಷಿಸಿಲ್ಲ. ಅತಿವೃಷ್ಟಿಯಿಂದ ಫಸಲು ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರವನ್ನು ಕೂಡ ನೀಡಿಲ್ಲ. ಮುಂದೆ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪದಿಂದ ಸಂಕಷ್ಟಕ್ಕೆ ಸಿಲಕುವ ಕೃಷಿಕ ವರ್ಗಕ್ಕೆ ನೆರವಿನ ಪ್ಯಾಕೇಜ್ ನ್ನು ಬಜೆಟ್ ನಲ್ಲಿ ಮೀಸಲಿಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯ ಬಜೆಟ್ ನ ಗಾತ್ರ ರೂ.4.48ಲಕ್ಷ ಕೋಟಿ ಆಗಿದೆ, ಸಾಲದ ಗಾತ್ರ ಹೆಚ್ಚಾಗಿದೆ. ಈ ಹೊರೆ ಜನರ ಮೇಲೆ ಬೀಳಲಿದೆ, ತೆರಿಗೆ ಹೆಚ್ಚಳ ಮಾಡಲಾಗಿದೆ.…
ಮಡಿಕೇರಿ NEWS DESK ಮಾ.6 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 17 ನೇ ಬಜೆಟ್ ಮಂಡಿಸಿ ದಾಖಲೆ ಮಾಡಿದ್ದಾರೆ, ಅದೇ ರೀತಿ ರಾಜ್ಯದ ಜನರನ್ನು ಸಾಲದ ಶೂಲಕ್ಕೆ ತಳ್ಳಿದ ದಾಖಲೆಯನ್ನೂ ಬರೆದಿದ್ದಾರೆ. ಈ ಬಜೆಟ್ ನಲ್ಲಿ ವಿರಾಜಪೇಟೆ ಕ್ಷೇತ್ರದ ನಿರೀಕ್ಷೆಗಳು ಹುಸಿಯಾಗಿದೆ ಎಂದು ವಿರಾಜಪೇಟೆ ಬಿಜೆಪಿ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಆರೋಪಿಸಿದ್ದಾರೆ. ಮುಖ್ಯಮಂತ್ರಿಗಳು 1.32 ಲಕ್ಷ ಕೋಟಿ ರೂ. ಸಾಲ ಮಾಡುವ ಕುರಿತು ಬಜೆಟ್ ನಲ್ಲಿ ಘೋಷಿಸಿದ್ದಾರೆ. ಆ ಮೂಲಕ ಕಾಂಗ್ರೆಸ್ ಸರಕಾರÀ ರಾಜ್ಯದ ಜನರನ್ನು ಸಾಲಗಾರರನ್ನಾಗಿ ಮಾಡಿದೆ. ಸರಕಾರಕ್ಕೆ ಕಾವೇರಿ ತವರು ಜಿಲ್ಲೆ ಕೊಡಗಿನ ಅಭಿವೃದ್ಧಿಯ ಬಗ್ಗೆ ಯಾವುದೇ ಕಾಳಜಿ ಕಾಣುತ್ತಿಲ್ಲ. ಜಿಲ್ಲೆಗೆ ಹೊಸ ಯೋಜನೆಗಳನ್ನೇ ಘೋಷಿಸಿಲ್ಲ, ಪ್ರವಾಸೋದ್ಯಮದ ಅಭಿವೃದ್ಧಿಯ ಬಗ್ಗೆ ಉಲ್ಲೇಖವಿಲ್ಲ. ಮುಖ್ಯಮಂತ್ರಿಗಳಿಗೆ ಆತ್ಮೀಯರಾಗಿರುವ ವಿರಾಜಪೇಟೆ ಕ್ಷೇತ್ರದ ಶಾಸಕರು ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್ ತಂದು ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುತ್ತಾರೆ ಎನ್ನುವ ನಿರೀಕ್ಷೆ ಜನರಲ್ಲಿತ್ತು. ಆದರೆ ನಿರೀಕ್ಷೆಗಳು ಹುಸಿಯಾಗಿದೆ, ವನ್ಯಜೀವಿಗಳ ದಾಳಿ ತಡೆಗೆ ವಿಶೇಷ ಅನುದಾನ…






