ಮಡಿಕೇರಿ ಡಿ.16 NEWS DESK : 66/ 11 ಕೆ.ವಿ ಸೋಮವಾರಪೇಟೆ ವಿದ್ಯುತ್ ವಿತರಣಾ ಉಪ ಕೇಂದ್ರದಿಂದ ಹೊರಹೊಮ್ಮುವ ಎಫ್1-ದೊಡ್ಡಮಳ್ತೆ ಫೀಡರ್‍ನಲ್ಲಿ ಡಿಸೆಂಬರ್, 18 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಫೀಡರ್ ನಿರ್ವಾಹಣೆ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವುದರಿಂದ ಈ ಫೀಡರ್‍ನಿಂದ ಹೊರಹೊಮ್ಮುವ ಬಿಳಿರೆಕೊಪ್ಪ, ಮಟ್ನಳ್ಳಿ, ಕಿಬ್ಬೆಟ್ಟ, ಅಯ್ಯಪ್ಪ ಕಾಲೋನಿ, ದೊಡ್ಡಹನಕೋಡು, ಗೆಜ್ಜೆಹನಕೋಡು, ಕಾಡುಮನೆ, ಚಿಕ್ಕತೊಳೂರು, ಕಾಗಡೀಕಟ್ಟೆ, ದೊಡ್ಡಮಳ್ತೆ, ಒಳಗುಂದ, ಸುಳಿಮಳ್ತೆ, ಹೊನ್ನಾವಳ್ಳಿ, ಕೂಗೆಕೋಡಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.
ಲೇಖಕ: admin
ಬೆಳಗಾವಿ ಡಿ.16 NEWS DESK : ಕೊಡಗು ಜಿಲ್ಲೆಯ ಬಹುಕಾಲದ ಬೇಡಿಕೆಯಾದ ಪಟ್ಟೆದಾರರ ಹೆಸರನ್ನು ಪಹಣಿಯಲ್ಲಿ ನಮೂದಿಸಿರುವ ಸಮಸ್ಯೆಗೆ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕವು ಪರಿಹಾರವಾಗಲಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ತಿಳಿಸಿದರು. 2025ನೇ ಸಾಲಿನ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕವನ್ನು ಪರಿಶೀಲನಾ ಸಮಿತಿ ಶಿಫಾರಸು ಮಾಡಿದಂತೆ, ಬೆಳಗಾವಿಯ ಅಧಿವೇಶನದಲ್ಲಿ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅವರು ಮಂಡಿಸಿದರು. ಈ ಸಂದರ್ಭ ಮಾತನಾಡಿದ ಶಾಸಕ ಎ.ಎಸ್.ಪೊನ್ನಣ್ಣ ವಿಧೇಯಕವನ್ನು ಸ್ವಾಗತಿಸುವುದಾಗಿ ಹೇಳಿದರು, ಕೊಡಗಿನ ಬಹಳಷ್ಟು ವರ್ಷಗಳ ಅತ್ಯಂತ ಜಟಿಲವಾದ ಸಮಸ್ಯೆ ಇದರಿಂದ ಪರಿಹಾರವಾಗಲಿದೆ ಎಂದು ಬಣ್ಣಿಸಿದರು. ಕಂದಾಯ ಸಚಿವರ ಇಚ್ಚಾ ಶಕ್ತಿ ಹಾಗೂ ಕಾಳಜಿಯಿಂದ ಈ ಕಾಯ್ದೆ ಜಾರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾ, ಕೊಡಗಿನ ಜನತೆಯ ಪರವಾಗಿ ಸಚಿವರಿಗೆ ಹಾಗೂ ಪರಿಶೀಲನಾ ಸಮಿತಿಯ ಎಲ್ಲಾ ಸದಸ್ಯರಿಗೆ ಅಭಿನಂದನೆಗಳನ್ನು ಸಲ್ಲಿಸಿದರಲ್ಲದೆ, ಈ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು. ಪರಿಶೀಲನಾ ಸಮಿತಿ ಸಭೆಯಲ್ಲಿ…
ಮಡಿಕೇರಿ ಡಿ.16 NEWS DESK : ಕರ್ನಾಟಕ ಟೆಕ್ವಾಂಡೋ ವತಿಯಿಂದ ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಟೆಕ್ವಾಂಡೋ ಕಪ್ ಸ್ಪರ್ಧೆಯಲ್ಲಿ ಮಡಿಕೇರಿಯ ಮರ್ಕರ ಟೆಕ್ವಾಂಡೋ ಕ್ಲಬ್‍ನ ವಿದ್ಯಾರ್ಥಿಗಳು ಸ್ಪರ್ಧಿಸಿ ಚಾಂಪಿಯನ್ ಶಿಪ್ ಕಪ್‍ನ್ನು ಗೆದ್ದುಕೊಂಡಿದ್ದಾರೆ. ಸಬ್ ಜೂನಿಯರ್ ವಿಭಾಗದ 8 ವರ್ಷದೊಳಗಿನ ಸ್ಪರ್ಧೆಯಲ್ಲಿ ಕೊಡಗು ವಿದ್ಯಾಲಯದ ಜಿವಿನ್ ಅಯ್ಯಪ್ಪ, 10 ವರ್ಷದೊಳಗಿನ ವಿಭಾಗದಲ್ಲಿ ಸಂತ ಜೋಸೆಫರ ಶಾಲೆಯ ಆಲಿಯಾ ಪರ್ವಿನ್, 12 ವರ್ಷದೊಳಗಿನ ವಿಭಾಗದಲ್ಲಿ ಕೊಡಗು ವಿದ್ಯಾಲಯದ ಪಾವನಿ, ಎನ್.ಕೆ.ದಿವಿತ್, ಅಖಿಲ ರವಿ, ಲಕ್ಷಾ ಎ., ದಾನೀಶ್, ಜೀಯ ಬೋಜಮ್ಮ, ರಾಯಿಕ ಅಕ್ಕಮ್ಮ ಸ್ಪರ್ಧಿಸಿ ಕೊಡಗಿಗೆ ಕೀರ್ತಿ ತಂದಿದ್ದಾರೆ. 14 ವರ್ಷದೊಳಗಿನ ವಿಭಾಗದಲ್ಲಿ ಕೊಡಗು ವಿದ್ಯಾಲಯದ ಅಯಾನ್ ಖಾನ್, ದಕ್ಷ್ ಸೋಮಯ್ಯ, ಕೇಂದ್ರೀಯ ವಿದ್ಯಾಲಯದ ರೃತ್ವಿಸನ, ನವನ್ಯ ಮತ್ತು ಸಂತ ಮೈಕಲರ ಶಾಲೆಯ ಆರೂಶ್ ಪರ್ವಿನ್ ಮತ್ತು 17 ವರ್ಷದೊಳಗಿನ ವಿಭಾಗದಲ್ಲಿ ಕೇಂದ್ರೀಯ ವಿದ್ಯಾಲಯ ಅವಿನಾಶ್ ಪದಕವನ್ನು ಪಡೆದು ಕೊಡಗಿಗೆ ಚಾಂಪಿಯನ್ ಶಿಪ್ ಕಪ್ ತರುವುದರಲ್ಲಿ ಯಶಸ್ವಿಯಾಗಿದ್ದಾರೆ. …
ಸುಂಟಿಕೊಪ್ಪ ಡಿ.16 NEWS DESK : ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ, ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಮಾದಾಪುರ ಕ್ಲಸ್ಟರ್ ಕೇಂದ್ರದ ವತಿಯಿಂದ ಮಾದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿ ಗಳಿಗೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸಾಂಸ್ಕೃತಿಕ ಹಾಗೂ ಕಲೋತ್ಸವ ಸ್ಪರ್ಧೆ ನಡೆಯಿತು. ವಿವಿಧ ವೇಷಭೂಷಣಗಳನ್ನು ತೊಟ್ಟು ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ ವಿದ್ಯಾರ್ಥಿಗಳು ಪ್ರೇಕ್ಷಕರ ಗಮನ ಸೆಳೆದರು. ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಗ್ರಾ.ಪಂ ಅಧ್ಯಕ್ಷ ಪೊನ್ನಣ್ಣ, ಮಕ್ಕಳ ಇಂತಹ ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶಿಕ್ಷಕರ ಜತೆ ಪೋಷಕರು ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು. ಮಕ್ಕಳ ಪ್ರತಿಭಾ ಕಾರಂಜಿ ಸ್ಪರ್ಧೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಲಸ್ಟರ್ ಸಿಆರ್ ಪಿ, ಟಿ.ಈ. ಮಂಜುನಾಥ್ , ಮಕ್ಕಳ ಕಲಾ ಪ್ರತಿಭೆಗಳು ಅನಾವರಣಗೊಳ್ಳಲು ಇಂತಹ ಸ್ಪರ್ಧೆಗಳು ಉತ್ತಮ ವೇದಿಕೆ ಒದಗಿಸುತ್ತವೆ ಎಂದರು. ಶಾಲಾ ಮುಖ್ಯ ಶಿಕ್ಷಕಿ…
ನಾಪೋಕ್ಲು ಡಿ.16 NEWS DESK : ಅರೆಭಾಷೆ ದಿನಾಚರಣೆಯ ಪ್ರಯುಕ್ತ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಚೇರಂಬಾಣೆ ಗೌಡ ಸಮಾಜ ಮತ್ತು ಗೌಡ ಮಹಿಳಾ ಒಕ್ಕೂಟ ಚೇರಂಬಾಣೆ ಸಹಯೋಗದಲ್ಲಿ ಕಾರುಗುಂದ ಗೌಡ ಸಮಾಜದಲ್ಲಿ ಅರೆಭಾಷೆ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಮಾಜದ ಅಧ್ಯಕ್ಷರಾದ ಕೊಡಪಾಲು ಗಣಪತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಉದ್ಘಾಟಿಸಿ ಶುಭಹಾರೈಸಿದರು. ಮುಖ್ಯ ಭಾಷಣಗಾರರಾಗಿ ಗೌಡ ಸಾಂಸ್ಕೃತಿಕ ಅಕಾಡೆಮಿಯ ಮಾಜಿ ಅಧ್ಯಕ್ಷ ತುಂತಜೆ ವೆಂಕಟೇಶ (ಗಣೇಶ್) ಅವರು ಮಾತನಾಡಿ, ಮಾತೃ ಭಾಷೆ ಉಳಿಯುವುದು ಮನೆಯಿಂದ. ಪ್ರತಿ ಮನೆಯಲ್ಲೂ ಮಕ್ಕಳಿಗೆ ಮಾತೃ ಭಾಷೆಯನ್ನು ಕಲಿಸಿದಲ್ಲಿ ಭಾಷೆ ಉಳಿಯುವುದು. ಹಾಗೆಯೇ ನಮ್ಮ ಸಂಸ್ಕೃತಿ ಸಂಪ್ರದಾಯವನ್ನು ಕೈಬಿಡಬಾರದು ಎಂದು ಕಿವಿ ಮಾತು ಹೇಳಿದರು. ಶಿಕ್ಷಕಿ ತಳೂರು ಉಷಾ ಕಾಶಿ ಅವರು ಮಾತನಾಡಿ, ಭಾಷೆ, ಸಂಸ್ಕೃತಿಯನ್ನು ಮರೆತರೆ ಆ ಜನಾಂಗವನ್ನು ಮಾರಿಕೊಂಡಂತೆ. ಆದ್ದರಿಂದ ಆಯಾ ಜನಾಂಗಕ್ಕೆ ಸಂಬಂಧಪಟ್ಟ ಭಾಷೆ, ಉಡುಪು ಪದ್ದತಿ…
ವಿರಾಜಪೇಟೆ ಡಿ.16 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ,ಸಿ ಟ್ರಸ್ಟ್, ವಿರಾಜಪೇಟೆ ತಾಲ್ಲೂಕು, ಸ್ವಸಹಾಯ ಸಂಘಗಳ ಒಕ್ಕೂಟಗಳ ಆಶ್ರಯದಲ್ಲಿ ಕೃಷಿ ಕಾರ್ಯಕ್ರಮದಡಿಯಲ್ಲಿ ಮಣ್ಣು ಪರೀಕ್ಷೆ ಮಾಹಿತಿ ಕಾರ್ಯಕ್ರಮ ಕಾನೂರು ವಲಯದ ನಿಟ್ಟೂರು ಕಾರ್ಯಕ್ಷೇತ್ರದ ಕಾವೇರಿ ಅವರ ಕೃಷಿ ತಾಕುವಿನಲ್ಲಿ ನಡೆಯಿತು. ಮಣ್ಣು ವಿಜ್ಞಾನದ ವಿಷಯ ತಜ್ಞರಾದ ಡಾ.ಮೋಹನ್ ಕುಮಾರ್ ಕೆ.ಟಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮಾತನಾಡಿ ಮಣ್ಣು ಪರೀಕ್ಷೆ ಮತ್ತು ಮಣ್ಣು ಆರೋಗ್ಯ ಕಾರ್ಡ್, ಸಸ್ಯ ಪೋಷಕಾಂಶಗಳು, ಪೋಷಕಾಂಶ ಅಸಮತೋಲನದ ಪರಿಣಾಮಗಳು, ಮಣ್ಣು ಪರೀಕ್ಷೆಯ ಮಹತ್ವ ಮಣ್ಣು ಮಾದರಿ ಸಂಗ್ರಹಿಸಲು ಗಮನಿಸಬೇಕಾದ ಅಂಶಗಳು, ಮಣ್ಣು ಮಾದರಿ ಸಂಗ್ರಹಣೆ ಪ್ರಕ್ರಿಯೆ ಹೇಗೆ ಮಾಡಬೇಕು ಮತ್ತು ಆಮ್ಲ ಮಣ್ಣು ಮತ್ತು ಅದರ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ವಲಯದ ಮೇಲ್ವಿಚಾರಕರಾದ ಸುಜೀರ್, ಕೃಷಿ ಮೇಲ್ವಿಚಾರಕರಾದ ವಸಂತ್, ನಿಟ್ಟೂರು ಸೇವಾ ಪ್ರತಿನಿಧಿ ಸರೋಜ, ಬ್ರಹ್ಮಗಿರಿ ಸೇವಾ ಪ್ರತಿನಿಧಿ ಉದಯ್, ಪ್ರಗತಿಪರ ಕೃಷಿಕರು ನಿಟ್ಟೂರು ಒಕ್ಕೂಟದ ಪದಾಧಿಕಾರಿ ಕಾವೇರಿ ಸಂಘದ…
ಕುಶಾಲನಗರ ಡಿ.16 NEWS DESK : ಸಾಂಸ್ಕೃತಿಕವಾಗಿ ತೊಡಗಿಸಿಕೊಳ್ಳುವುದರಿಂದ ವ್ಯಕ್ತಿತ್ವ ವಿಕಸನ ಸಾಧ್ಯ ಎಂದು ಹಿರಿಯ ಪತ್ರಕರ್ತ ರವಿ ಕುಮಾರ್ ಟೆಲೆಕ್ಸ್ ಅಭಿಮತ ವ್ಯಕ್ತಪಡಿಸಿದರು. ಕುಶಾಲನಗರ ಸಮೀಪದ ಹುಣಸೆವಾಡಿ ಸರ್ಕಲ್ ನಲ್ಲಿರುವ ಕೂರ್ಗ್ ವಾಟರ್ ಪಾರ್ಕ್ ನಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧೀನದಲ್ಲಿ ಅಸ್ತಿತ್ವಕ್ಕೆ ಬಂದಿರುವ ಪತ್ರಕರ್ತರ ಸಾಂಸ್ಕೃತಿಕ ವೇದಿಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರರಾಗಿ ಪಾಲ್ಗೊಂಡು ಮಾತನಾಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಪತ್ರಕರ್ತರ ಉದ್ಯೋಗ, ಜೀವನ ಭದ್ರತೆ ಹಾಗೂ ಕ್ಷೇಮಾಭಿವೃದ್ಧಿಗಾಗಿ ಶ್ರಮಿಸುತ್ತದೆ. ಇದೀಗ ರಚನಾತ್ಮಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರೂಪಿಸಿ ಮಾದರಿಯಾಗುತ್ತಿದೆ. ಇದಕ್ಕೆ ಕೊಡಗು ಸಂಘ ಪ್ರೇರಣಾ ಶಕ್ತಿಯಾಗಿದೆ. ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಯಲ್ಲಿ ಪತ್ರಕರ್ತರ ಸಾಂಸ್ಕೃತಿಕ ವೇದಿಕೆ ಉದ್ಘಾಟನೆಯಾಗಿರುವುದು ಹೆಮ್ಮೆಯ ಸಂಗತಿ. ಈ ಕಾರ್ಯಕ್ರಮವನ್ನು ರಾಜ್ಯ ಮಟ್ಟದಲ್ಲಿ ವಿಸ್ತರಿಸುವ ಪ್ರಯತ್ನ ಮಾಡಲಾಗುವುದು ಎಂದ ಅವರು, ಕೊಡಗು ಸಾಂಸ್ಕೃತಿಕ ವೈಭವದ ತವರೂರು ಎಂದು ಬಣ್ಣಿಸಿದರು. ಪತ್ರಕರ್ತರ ಸಾಂಸ್ಕೃತಿಕ ವೇದಿಕೆಯನ್ನು ತಬಲ ಬಾರಿಸುವ ಮೂಲಕ ಉದ್ಘಾಟಿಸಿ…
ಸೋಮವಾರಪೇಟೆ ಡಿ.16 NEWS DESK : “ಕಣಿವೆ ಕಟ್ಟೆ”ಕೊಡಗು ಬಳಗದ ವತಿಯಿಂದ ಸೋಮವಾರಪೇಟೆ ತಾಲ್ಲೂಕಿನ ಯಡವನಾಡು ಶ್ರೀ ಶಿವ ಬಸವೇಶ್ವರ ದೇವಸ್ಥಾನ ಸಮಿತಿಯ ಸಂಯುಕ್ತಾಶ್ರಯದಲ್ಲಿ ಯಡವನಾಡು ಗ್ರಾಮದ ಶ್ರೀ ಶಿವ ಬಸವೇಶ್ವರ ದೇವಸ್ಥಾನದ ಆವರಣದ ಹಸಿರು ಪರಿಸರದ ಅಂಗಳದಲ್ಲಿ ಆಹ್ವಾನಿತ ಕವಿಗಳಿಂದ ಏರ್ಪಡಿಸಿದ್ದ ಕವಿಗೋಷ್ಠಿ ಕಾರ್ಯಕ್ರಮವು ಸಾಹಿತ್ಯಾಸಕ್ತರ ಮನೆಸೂರೆಗೊಂಡಿತು. ಯಡವನಾಡು ಗ್ರಾಮದ ಹಸಿರು ಪರಿಸರದ ಮಧ್ಯೆ ಪ್ರಕೃತಿ ಮಡಲಲ್ಲಿ ತೇಲಿ ಬಂದ ಕವನಗಳು. ಕವಿಗಳು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿ ಸಭಿಕರನ್ನು ರಂಜಿಸಿದರು. ಪ್ರಕೃತಿ ಮಡಿಲಲ್ಲಿ ಕವನಗಳ ಸಾಗರದಲ್ಲಿ ಮಿಂದೆದ್ದ ಸಹೃದಯರು. ಕಣಿವೆ ಕಟ್ಟೆ ಕೊಡಗು ಬಳಗದ ವತಿಯಿಂದ ಹಸಿರು ಪ್ರಕೃತಿ ಪರಿಸರದ ಮಧ್ಯೆ ಯಡವನಾಡು ಗ್ರಾಮದ ಹಸಿರು ಬನದ ಶ್ರೀ ಶಿವ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಒಟ್ಟು 28 ಮಂದಿ ವಾಚಿಸಿದ ಕವನಗಳು ಕೇಳುಗರ ಮನೆಸೂರೆಗೊಂಡವು. ಹಸಿರು ಪರಿಸರವನ್ನು ಹೊದ್ದುಕೊಂಡಿರುವ ಯಡವನಾಡು ಗ್ರಾಮದ ಶಿವ ಬಸವೇಶ್ವರ ದೇವಸ್ಥಾನವು ಹಸಿರು ಪರಿಸರದ ಮಧ್ಯೆ ಪ್ರಕೃತಿ ಸೌಂದರ್ಯವನ್ನು ಆಹ್ಲಾದಿಸುವುದೇ ಆನಂದ.…
ಸುಂಟಿಕೊಪ್ಪ ಡಿ.16 NEWS DESK : ಗ್ರಾಮ ಪಂಚಾಯಿತಿ ನೌಕರರ ಪ್ರಮುಖ 17 ಬೇಡಿಕೆಗಳಲ್ಲಿ ಕೆಲವನ್ನು ಮುಂದಿಟ್ಟುಕೊಂಡು ಡಿ.20 ರಿಂದ ಬೆಂಗಳೂರಿನಲ್ಲಿ ಅನಿರ್ಧಿಷ್ಟವಾದಿ ಧರಣಿ ಸತ್ಯಾಗ್ರಹವನ್ನು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್. ಭರತ್ ಹೇಳಿದ್ದಾರೆ. ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸರಿಸುಮಾರು 36 ಸಾವಿರ ನೌಕರರು ಇದ್ದು, 17 ಪ್ರಮುಖ ಬೇಡಿಕೆಗಳನ್ನು ಸರಕಾರದ ಮುಂದಿಟ್ಟು ನಿರಂತರ ಹೋರಾಟ ಮಾಡುತ್ತ ಬರಲಾಗಿದೆ. ಕೆಲವು ಬೇಡಿಕೆಗಳನ್ನು ಪಡೆಯಲಾಗಿದ್ದರೂ ಕೂಡ ಪ್ರಸ್ತುತ ಬೆಲೆ ಏರಿಕೆ ಆಧಾರದಲ್ಲಿ ಕನಿಷ್ಠ ವೇತನ ರೂ.36 ಸಾವಿರ ನಿಗಧಿಗಾಗಿ ಇದನ್ನೇ ಮಾನದಂಡವಾಗಿ ಇಟ್ಟುಕೊಂಡು ವಾರ್ಷಿಕ ವರಮಾನ ಹೆಚ್ಚು ಮಾಡಲು ಒತ್ತಾಯಿಸಿ ಕಾರ್ಮಿಕರ ಬಿಪಿಎಲ್ ಕಾರ್ಡ್ ರದ್ದು ಪಡಿಸದಿರಲು ಹೋರಾಟ ನಡೆಸಲಾಗುವುದೆಂದು ಅವರು ಹೇಳಿದರು. ಜೊತೆಗೆ ಸೇವ ಹಿತನದ ಆಧಾರದಲ್ಲಿ ವೇತನ ನಿಗಧಿಪಡಿಸಬೇಕು, ಸ್ವಚ್ಛಾವಾಹಿನಿ ನೌಕರರಿಗೆ ಪಂಚಾಯಿತಿ ನೌಕರರೆಂದು ಪರಿಗಣಿಸಬೇಕು, ಪಂಚಾಯಿತಿ ನೌಕರರ ನಿವೃತ್ತಿ ನಂತರ ರೂ.10…
ಮಡಿಕೇರಿ ಡಿ.16 NEWS DESK : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ ವತಿಯಿಂದ 2025 -26 ನೇ ಸಾಲಿನ ಮತೀಯ ಅಲ್ಪಸಂಖ್ಯಾತರಾದ ಕ್ರಿಶ್ಚಿಯನ್ ಜನಾಂಗದವರಿಗೆ ಶ್ರಮ ಶಕ್ತಿ ಯೋಜನೆ, ವೃತ್ತಿ ಪ್ರೋತ್ಸಾಹ ಯೋಜನೆಗೆ ಸಾಲ ಮತ್ತು ಸಹಾಯಧನ ಹಾಗೂ ವ್ಯಾಪಾರ ಮತ್ತು ಉದ್ಯಮಗಳಿಗೆ ನೇರ ಸಾಲ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ, ವಿದೇಶಿ ವಿದ್ಯಾಭ್ಯಾಸ ಸಾಲ ಯೋಜನೆ, ಸಾಂತ್ವನ ಯೋಜನೆ ಹಾಗೂ ಮಹಿಳಾ ಸ್ವ ಸಹಾಯ ಸಂಘ ಗುಂಪುಗಳಿಗೆ ಸಹಾಯಧನವನ್ನು ನೀಡಲಾಗುತ್ತದೆ. ಸಾಲ ಹಾಗೂ ಸಹಾಯಧನವನ್ನು ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ವೆಬ್‍ಸೈಟ್ https://kccdclonline.karnataka.gov.in/ ಮೂಲಕ ಆನ್‍ಲೈನ್ ಅರ್ಜಿ ಸಲ್ಲಸಬಹುದು. ಹೆಚ್ಚಿನ ಮಾಹಿತಿ ಪಡೆಯಲು ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ, ಮೌಲಾನಾ ಅಜಾದ್ ಭವನ, ಗ್ರಾಮಾಂತರ ಪೊಲೀಸ್ ಠಾಣೆ ಹತ್ತಿರ, ಎಫ್.ಎಂ.ಸಿ ಕಾಲೇಜು ರಸ್ತೆ, ಮಡಿಕೇರಿ ಇಲ್ಲಿಗೆ ಭೇಟಿ ನೀಡಬಹುದು. ಆನ್‍ಲೈನ್ ಅರ್ಜಿ ಸಲ್ಲಸಲು ಡಿಸೆಂಬರ್, 20 ರಂದು ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ…






