ಮಡಿಕೇರಿ ನ.10 NEWS DESK : ಕಳೆದ 25 ವರ್ಷಗಳಿಂದ ಅಭಿವೃದ್ಧಿ ಕಾಣದೆ ನೆನೆಗುದಿಗೆ ಬಿದ್ದಿದ್ದ ಮಡಿಕೇರಿ-ಗಾಳಿಬೀಡು-ಕಡಮಕಲ್ಲು ರಸ್ತೆ ದುರಸ್ತಿಗೆ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರ ಪ್ರಯತ್ನದ ಫಲವಾಗಿ ರೂ.3.50 ಕೋಟಿ ಬಿಡುಗಡೆಯಾಗಿದ್ದು, ನ.14 ರಂದು ಭೂಮಿಪೂಜೆ ನೆರವೇರಲಿದೆ ಎಂದು ಗಾಳಿಬೀಡು ವಲಯ ಕಾಂಗ್ರೆಸ್ ಪ್ರಮುಖರು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಲಯ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ.ಸುಭಾಷ್ ಆಳ್ವ ಅವರು, ಮಡಿಕೇರಿ ತಾಲ್ಲೂಕಿನ ಪ್ರಮುಖ ಸಂಪರ್ಕ ಕೊಂಡಿಯಾದ ಮಡಿಕೇರಿ-ಗಾಳಿಬೀಡು-ಕಡಮಕಲ್ಲು ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಕೊನೆಗೂ ಮೂಹೂರ್ತ ಕೂಡಿಬಂದಿದ್ದು, ಶಾಸಕರು ಗ್ರಾಮಸ್ಥರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು. ಶಾಸಕರಾಗಿ ಚುನಾಯಿತರಾದ ಸಂದರ್ಭವೇ ರೂ.2 ಕೋಟಿ ಹಣವನ್ನು ಬಿಡುಗಡೆಗೊಳಿಸಿದ್ದಾರೆ. ರಸ್ತೆ ಸಮಸ್ಯೆಯನ್ನು ಅರಿತು ಹೆಚ್ಚುವರಿಯಾಗಿ ಅನುದಾನ ಒದಗಿಸಿದ್ದಾರೆ. ನ.14 ರಂದು ಬೆಳಿಗ್ಗೆ 9.30ಕ್ಕೆ ಗಾಳಿಬೀಡು ಗ್ರಾಮದ ಕೋಳಿಗೂಡು ಎಂಬಲ್ಲಿ ಶಾಸಕರು ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದು ಹೇಳಿದರು. ವಲಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೋಳುಮುಡಿಯನ ಅನಂತಕುಮಾರ್ ಮಾತನಾಡಿ, ಹಿಂದಿನ ಜನಪ್ರತಿನಿಧಿಗಳು ಮಾಡಲಾಗದ…
ಲೇಖಕ: admin
ಮಡಿಕೇರಿ ನ.10 NEWS DESK : ಸಮರ್ಥ ಕನ್ನಡಿಗರು ಸಂಸ್ಥೆ ವತಿಯಿಂದ ಮಡಿಕೇರಿಯಲ್ಲಿ ನಡೆದ ಛದ್ಮವೇಷ ಸ್ಪರ್ಧೆಯಲ್ಲಿ ಸ್ಮೃತಿ ಎಸ್.ಭಾರಧ್ವಜ್ ದ್ವಿತೀಯ ಬಹುಮಾನ ಗೆದ್ದಿದ್ದಾಳೆ. 4 ರಿಂದ 7 ವರ್ಷದೊಳಗಿನ ವಿಭಾಗದಲ್ಲಿ ಸ್ಮೃತಿ ಎಸ್.ಭಾರಧ್ವಜ್ ಮಹಿಷ ಮರ್ದಿನಿಯಾಗಿ ಕಾಣಿಸಿಕೊಂಡು ತೀರ್ಪುಗಾರರ ಮೆಚ್ಚುಗೆಗೆ ಪಾತ್ರಳಾದಳು. ಈಕೆ ಪೊನ್ನಂಪೇಟೆ ಸಮೀಪದ ಬೇಗೂರು ಶ್ರೀ ಪೂಳೆಮಾಡು ಈಶ್ವರ ದೇವಸ್ಥಾನದ ಅರ್ಚಕರಾದ ಸುಂದರೇಶ ಭಾರಧ್ವ್ವಜ್ ಹಾಗೂ ಆಶಿಕಾ ದಂಪತಿಯ ಪುತ್ರಿ.
ಮಡಿಕೇರಿ ನ.10 NEWS DESK : ದಕ್ಷಿಣ ಕೊಡಗಿನ ಕ್ರಿಶ್ಚಿಯನ್ ಅಸೋಸಿಯೇಷನ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಗೋಣಿಕೊಪ್ಪದಲ್ಲಿರುವ ಪರಿಮಳ ಮಂಗಳ ವಿಹಾರ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಶಾಸಕರು ನೀಡಿದ ಅದ್ವಿತೀಯ ಕೊಡುಗೆಯನ್ನು ಸ್ಮರಿಸಿ ಅಸೋಸಿಯೇಷನ್ ನ ಪದಾಧಿಕಾರಿಗಳು ಶಾಸಕರನ್ನು ಸನ್ಮಾನಿಸಿ, ಗೌರವಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರು, ಬಹು ಹಿಂದಿನ ಕಾಲದಿಂದಲೂ ಕ್ರಿಶ್ಚಿಯನ್ ಸಮುದಾಯದವರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ವಿಶಿಷ್ಟ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ. ಸದಾ ಶಾಂತಿ, ಸೌಹಾರ್ದತೆಯನ್ನು ಬಯಸುವ ಸಮುದಾಯವು ಮತ್ತಷ್ಟು ಏಳಿಗೆಯನ್ನು ಕಾಣುವಂತಾಗಬೇಕೆಂದು ಆಶಿಸಿದರು. ತನ್ನ ಅಧಿಕಾರ ಅವಧಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಹಾಗೂ ತನ್ನ ವೈಯುಕ್ತಿಕ ನಿಧಿಯಿಂದ ಮಾತ್ರವಲ್ಲದೆ ಸರಕಾರದ ವಿಶೇಷ ಅನುದಾನಗಳ ಮೂಲಕ ಅಲ್ಪಸಂಖ್ಯಾತರಾದ ಕ್ರಿಶ್ಚಿಯನ್ ಸಮುದಾಯದ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಈಗಾಗಲೇ ಕೋಟ್ಯಾಂತರ ರೂಪಾಯಿಯನ್ನು ನೀಡಿದ್ದೇನೆ.…
ಪುತ್ತೂರು ನ.10 NEWS DESK : ಕ್ರೀಡೆ ಎಂದರೆ ಅದು ಕೇವಲ ಸ್ಪರ್ಧೆಯಲ್ಲ ಅದೊಂದು ಶಿಸ್ತು, ಅದೊಂದು ಶಕ್ತಿ ಅದೊಂದು ಸಮನ್ವಯ ಹೀಗಾಗಿ ನಿಜವಾದ ಕ್ರೀಡಾ ಮನೋಭಾವದಿಂದ ಸ್ಪರ್ಧಿಸಿದರೆ ಅವನು ದೇಶದ ಸಂಪತ್ತಾಗುವುದರಲ್ಲಿ ಸಂದೇಹವಿಲ್ಲ ಎಂದು ವಿಟ್ಲದ ವಿಠ್ಠಲ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀನಿವಾಸ ಗೌಡ ಹೇಳಿದರು. ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಾರ್ಷಿಕ ಕ್ರೀಡಾ ಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತಾಡಿದರು. ದೈಹಿಕ ಮತ್ತು ಮಾನಸಿಕ ಸ್ಥಿರತೆಗೆ ಸಹಕಾರಿಯಾದ ಕ್ರೀಡೆಯಲ್ಲಿ ಗೆದ್ದಾಗ ಸಂಭ್ರಮಿಸುತ್ತಾ, ಸೋತಾಗ ಸೋಲಿನ ಕಾರಣದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತಾ ಹೊಸತನವನ್ನು ರೂಢಿಸಿಕೊಳ್ಳಬೇಕು ಎಂದರು. ಗೌರವ ಅತಿಥಿಗಳಾಗಿದ್ದ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಪ್ರತಿಭಾವಂತ ಕ್ರೀಡಾಪಟು ಆದರ್ಶ್ ಎಸ್ ಪಿ ಮಾತನಾಡಿ ಕ್ರೀಡಾಪಟುಗಳ ಜೀವನ ಸುಲಭದ್ದಲ್ಲ. ಅವರ ಸಾಧನೆಯ ಹಿಂದೆ ಅಪಾರವಾದ ಪರಿಶ್ರಮವಿರುತ್ತದೆ ಅನೇಕ ಸಿಹಿ-ಕಹಿ ಘಟನೆಗಳಿರುತ್ತವೆ. ಸಾಧನಾ ಪಥದಲ್ಲಿ ಎದುರಾಗುವ ಎಡರು-ತೊಡರುಗಳನ್ನು ಮೆಟ್ಟಿ ನಿಲ್ಲುವುದು ನಿಜವಾದ ಸವಾಲಾಗಿರುತ್ತದೆ ಎಂದರು.ಕಾಲೇಜು ಆಡಳಿತ…
ಬೆಂಗಳೂರು ನ.10 NEWS DESK : ಬೆಂಗಳೂರಿನ ರಕ್ಷಣಾ ಲೆಕ್ಕಪತ್ರಗಳ ಪ್ರಧಾನ ನಿಯಂತ್ರಕರು 2025ರ ನವೆಂಬರ್ 12 ಮತ್ತು 13 ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಬೆಂಗಳೂರಿನ ಪಿಸಿಡಿಎ ಕಚೇರಿಯ ಬಹುಪಯೋಗಿ ಸಭಾಂಗಣದಲ್ಲಿ ಸ್ಪರ್ಶ್ ಜನಸಂಪರ್ಕ (ಔಟ್ ರೀಚ್) ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ಸ್ಪರ್ಶ್-ಸಂಬಂಧಿತ ಎಲ್ಲಾ ಸಮಸ್ಯೆಗಳು ಮತ್ತು ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರ ಕುಂದುಕೊರತೆಗಳನ್ನು ಪರಿಹರಿಸಲು ಮತ್ತು ಪರಿಹರಿಸಲು ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಕಾರ್ಯಕ್ರಮದ ಸಮಯದಲ್ಲಿ ಡಿಜಿಟಲ್ ಲೈಫ್ ಸರ್ಟಿಫಿಕೇಟ್ (ಡಿಎಲ್ ಸಿ) ಅಭಿಯಾನವನ್ನು ಸಹ ನಡೆಸಲಾಗುತ್ತದೆ. ಸ್ಪರ್ಶ್ ಮತ್ತು ಪಿಂಚಣಿಗೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳಿಗೆ ಸ್ಥಳದಲ್ಲೇ ಸಹಾಯ, ಮಾರ್ಗದರ್ಶನ ಮತ್ತು ಬೆಂಬಲವನ್ನು ಒದಗಿಸಲು ಸಮರ್ಪಿತ ತಂಡ ಲಭ್ಯವಿರುತ್ತದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ರಕ್ಷಣಾ ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರು ತಮ್ಮ ಕುಂದು ಕೊರತೆಗಳನ್ನು ಸಕಾಲಿಕವಾಗಿ ಪರಿಹರಿಸಲು ಈ ಕೆಳಗಿನ ದಾಖಲೆಗಳನ್ನು ತೆಗೆದುಕೊಂಡು ಬರಲು ಕೋರಲಾಗಿದೆ. 1. ನೋಂದಾಯಿತ ಮೊಬೈಲ್ ಫೋನ್, 2. ಆಧಾರ್ ಕಾರ್ಡ್, 3. ಪ್ಯಾನ್…
ಮಡಿಕೇರಿ ನ.10 NEWS DESK : ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನಾಚರಣೆಯ ಪ್ರಯುಕ್ತ ನ.13 ರಂದು ಪೊನ್ನಂಪೇಟೆಯಿಂದ ಗೋಣಿಕೊಪ್ಪದ ವರೆಗೆ ಏಕತಾ ಪಾದಯಾತ್ರೆ ನಡೆಯಲಿದೆ ಎಂದು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಭಾರತ ಸರಕಾರ, ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ಮೈ ಭಾರತ್ ಮೂಲಕ ‘ವಿಕಸಿತ ಭಾರತ್ ಪಾದಯಾತ್ರೆ’ಯನ್ನು ರಾಷ್ಟ್ರವ್ಯಾಪಿ ಆಯಾ ಕ್ಷೇತ್ರದ ಸಂಸದರ ನೇತೃತ್ವದಲ್ಲಿ ಆಯೋಜಿಸಲಾಗುತ್ತಿದೆ. ಇದು ರಾಷ್ಟ್ರೀಯ ಹೆಮ್ಮೆಯನ್ನು ಬೆಳೆಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾದ ಕಾರ್ಯಕ್ರಮವಾಗಿದೆ ಎಂದು ವಿವರಿಸಿದ್ದಾರೆ. ಕೊಡಗು ಜಿಲ್ಲಾ ಯುವ ಒಕ್ಕೂಟ ಹಾಗೂ ವಿರಾಜಪೇಟೆ, ಮಡಿಕೇರಿ ಮತ್ತು ಸೋಮವಾರಪೇಟೆ ತಾಲ್ಲೂಕು ಯುವ ಒಕ್ಕೂಟಗಳ ಸಂಯುಕ್ತಾಶ್ರಮದಲ್ಲಿ ಪೊನ್ನಂಪೇಟೆಯಿಂದ ಬೆಳಿಗ್ಗೆ 9.30 ಗಂಟೆಗೆ ಏಕತಾ ಪಾದಯಾತ್ರೆ ಆರಂಭಗೊಂಡು ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನವರೆಗೆ ಸಾಗಲಿದೆ. ಪಾದಯಾತ್ರೆಯಲ್ಲಿ ಸಂಸದರು, ಶಾಸಕದ್ವಯರು, ಸ್ಥಳೀಯ ಗ್ರಾಮ ಪಂಚಾಯಿತಿ ಪ್ರತಿನಿಧಿಗಳು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು, ಮಾಜಿ ಶಾಸಕರು,…
ಮಡಿಕೇರಿ ನ.10 NEWS DESK : ಸಮಥ೯ ಕನ್ನಡಿಗರು ಸಂಸ್ಥೆ ವತಿಯಿಂದ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಿ ಸನ್ಮಾನಿಸಲಾಯಿತು. ನಗರದ ಓಂಕಾರ ಸದನದಲ್ಲಿ ಆಯೋಜಿತ ಕಾಯ೯ಕ್ರಮದಲ್ಲಿ ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ.ದೇವಯ್ಯ ಸಾಧಕರನ್ನು ಸನ್ಮಾನಿಸಿದರು. ಕಾವಾಡಿಯ ಕಾಮಧೇನು ಗೋಶಾಲೆಯ ರಾಮಚಂದ್ರಭಟ್ (ಗೋಪಾಲನೆ), ಮಡಿಕೇರಿಯ ಪತ್ರಕತ೯ ಬಿ.ಜಿ. ಅನಂತಶಯನ ( ಸಾಮಾಜಿಕ ಸೇವೆ), ಮಡಿಕೇರಿಯ ಚೆರಿಯಮನೆ ಡಾ. ಆರ್. ಪ್ರಶಾಂತ್ (ವೈದ್ಯಕೀಯ), ಕಡಗದಾಳು ಗ್ರಾಮದ ಮಾದೇಟಿರ ಬೆಳ್ಯಪ್ಪ (ರಂಗಭೂಮಿ) , ಮಡಿಕೇರಿಯ ಕಡ್ಲೇರ ತುಳಸಿ ಮೋಹನ್ (ಸಂಘಟನೆ), ಬಾಳೆಲೆಯ ಅನ್ವಿತ್ ಕುಮಾರ್ (ಸಂಗೀತ), ಕೆ.ಆಕ್. ನಗರದ ಕೇಬಲ್ ಮಹದೇವ (ಕೖಷಿ) ಇವರನ್ನು ಸಮಥ೯ ಕನ್ನಡಿಗರು ಸಂಸ್ತೆಯ ವಾಷಿ೯ಕ ಪ್ರಶಸ್ತಿ ನೀಡಿ ಗೌರವಿಸಿತು. ಸಾಧಕರಿಗೆ ಸನ್ಮಾನ ನೆರವೇರಿಸಿ ಮಾತನಾಡಿದ ಎ.ಸಿ. ದೇವಯ್ಯ, ಪ್ರಾಚೀನ ಕಾಲದಿಂದಲೂ ದೇವಾಲಯಗಳಲ್ಲಿ ಸ್ಥಳೀಯ ಸಂಸ್ಕೖತಿ, ಸಾಹಿತ್ಯ ಚಟುವಟಿಕೆಗಳಿಗೆ ಆಶ್ರಯ ನೀಡಲಾಗುತ್ತಾ ಬರಲಾಗಿದೆ. ಓಂಕಾರ ಸದನದಲ್ಲಿಯೂ ಸಾಂಸ್ಕೖತಿಕ ಚಟುವಟಿಕೆಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ ಎಂದರು. ಶ್ರೀ ಆಂಜನೇಯ ದೇವಾಲಯ…
ಸೋಮವಾರಪೇಟೆ ನ.10 NEWS DESK : ರಾಜ್ಯದಲ್ಲಿ ಸರ್ಕಾರಿ ಶಾಲೆಗೆ 12 ಸಾವಿರ ಹಾಗೂ ಅನುದಾನಿತ ಶಾಲೆಗೆ 6 ಸಾವಿರ ಒಟ್ಟು 18 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರ ಶಿಕ್ಷಕರ ನೇಮಕಾತಿ ನಡೆಯಲಿದೆ ಎಂದು ಶಾಲಾ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ. ಸೋಮವಾರಪೇಟೆ ಬಳಿಯ ಬೇಳೂರು ಕುಸುಬೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಶಾಲೆಯ ಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಸಚಿವರು ಮಾತನಾಡಿದರು. ಸರ್ಕಾರಿ ಶಾಲೆಯನ್ನು ಬಲಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಲವು ಕಾರ್ಯಕ್ರಮ ರೂಪಿಸಿದೆ. ಆ ನಿಟ್ಟಿನಲ್ಲಿ ಪೂರ್ವ ಕಿರಿಯ ಪ್ರಾಥಮಿಕ (ಎಲ್ ಕೆಜಿ, ಯುಕೆಜಿ) ಆರಂಭಿಸಲಾಗಿದೆ ಎಂದು ಸಚಿವರಾದ ಮಧು ಬಂಗಾರಪ್ಪ ಅವರು ತಿಳಿಸಿದರು. ರಾಜ್ಯದ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಲಾ ಒಂದರಂತೆ ಸುಮಾರು 900 ಕೆಪಿಎಸ್ ಶಾಲೆ ಆರಂಭಿಸಲು ಸರ್ಕಾರ ಮಂಜೂರಾತಿ ನೀಡಿದ್ದು, ಸಾರಿಗೆಯನ್ನು ಉಚಿತವಾಗಿ ಕಲ್ಪಿಸಲಾಗುತ್ತದೆ ಎಂದು ಸಚಿವರು ವಿವರಿಸಿದರು. ಸರ್ಕಾರಿ ಶಾಲೆಗಳಲ್ಲಿ…
ಕುಶಾಲನಗರ ನ.10 NEWS DESK : ನಳಂದ ಗುರುಕುಲ ವಿದ್ಯಾಸಂಸ್ಥೆಯ ಎಂಟನೆಯ ತರಗತಿ ವಿದ್ಯಾರ್ಥಿ ನಿಶಾನ್ ಪಿ.ಗೌಡ ಬೆಂಗಳೂರಿನ ಲಿಟ್ಲ್ ಪ್ಲವರ್ ಶಾಲಾ ಕ್ರೀಡಾಂಗಣದಲ್ಲಿ ನಡೆದ ಪ್ರಾದೇಶಿಕ ಮಟ್ಟದ ಟೇಬಲ್ ಟೆನ್ನಿಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸುವ ಮೂಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. 14 ರ ವಯೋಮಾನದ ಒಳಗಿನ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಭಾಗವಹಿಸಿದ ನಿಶಾನ್, ಅಂತಿಮ ಸುತ್ತಿನಲ್ಲಿ ಮಂಗಳೂರಿನ ರಚಿತ್ ಎಂಬ ವಿದ್ಯಾರ್ಥಿ ಯನ್ನು ಮಣಿಸುವ ಮೂಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಈ ವಿದ್ಯಾರ್ಥಿಗೆ ಶಾಲೆಯ ಕ್ರೀಡಾ ತರಬೇತುದಾರ ನಿಶಾನ್ ಅವರ ತಾತ ರಾಜಶೇಖರ್ ತರಬೇತಿ ನೀಡಿದ್ದರು ಎಂದು ಶಾಲಾ ಪ್ರಾಂಶುಪಾಲ ಡಾ.ಸಿ.ಅಂತೋಣಿ ರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಪೋಕ್ಲು ನ.10 NEWS DESK : ರಾಜಸ್ಥಾನದ ಜೈಪುರದಲ್ಲಿ ನ.25 ರಿಂದ ಆರಂಭವಾಗಲಿರುವ ಖೇಲೋ ಇಂಡಿಯಾ ಯೂನಿವರ್ಸಿಟಿ ಮಹಿಳಾ ಹಾಕಿ ಟೂರ್ನಿಗೆ ಕರ್ನಾಟಕ ತಂಡಕ್ಕೆ ಕುಶಾಲನಗರದ ದಿಶಾ ನಿಡ್ಯಮಲೆ ಆಯ್ಕೆಯಾಗಿದ್ದಾರೆ. ಇವರು ದಿನೇಶ್ ನಿಡ್ಯಮಲೆ, ಸುಲೋಚನ ದಂಪತಿಯ ಪುತ್ರಿ. ವರದಿ : ದುಗ್ಗಳ ಸದಾನಂದ.






