ಸುಂಟಿಕೊಪ್ಪ ಜು.8 NEWS DESK : ಮೈಸೂರು ವಿಶ್ವ ವಿದ್ಯಾನಿಲಯದ 106ನೇ ಘಟಿಕೋತ್ಸವದಲ್ಲಿ ಕೊಡಗಿನ ವಿದ್ಯಾರ್ಥಿನಿ ಬಿ.ಪಿ.ಕೃತಿಕಾ ಸ್ನಾತಕೋತ್ತರ ಪದವಿಯನ್ನು ಮೊದಲ ರ್ಯಾಂಕ್ ನೊಂದಿಗೆ ಪಡೆದಿದ್ದು, 5 ಚಿನ್ನದ ಪದಕಗಳು ಮತ್ತು ನಗದು ಬಹುಮಾನಕ್ಕೆ ಭಾಜನರಾಗಿದ್ದಾರೆ. ಮೂಲತಃ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಹೋಬಳಿಯ ಕೊಡಗರಹಳ್ಳಿ ಗ್ರಾಮ ನಿವಾಸಿ ನಿವೃತ್ತ ಎ.ಎಸ್.ಐ ಪಾರ್ಥ ಮತ್ತು ನಿವೃತ್ತ ಮುಖ್ಯೋಪಾದ್ಯಾಯನಿ ಗೀತಾ ಪಾರ್ಥ ಅವರ ಪುತ್ರಿ. ಪ್ರಸ್ತುತ ಪೊನ್ನಂಪೇಟೆ ನಿವಾಸಿ ಲವೀನ್ ಬಿದ್ದಪ್ಪ ಅವರ ಪತ್ನಿಯಾಗಿರುವ ಕೃತಿಕಾ ತಮ್ಮ ಎಂ.ಎಡ್ ಪದವಿಯಲ್ಲಿ ಈ ಸಾಧನೆ ಮಾಡಿದ್ದಾರೆ. ಇತ್ತೀಚೆಗೆ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ಥವರ್‍ಚಂದ್ ಗೇಹ್ಲೋಟ್ ಅವರಿಂದ ಪ್ರಮಾಣ ಪತ್ರ ಮತ್ತು ಪ್ರಶಸ್ತಿ ಸ್ವೀಕರಿಸಿದರು. ಈ ಕುರಿತು ಪ್ರತಿಕ್ರಿಯಿಸಿರುವ ಕೃತಿಕಾ, ನನ್ನ ಸಾಧನೆಗೆ ಹೆತ್ತವರು ಮತ್ತು ಪತಿ ಸಹಕಾರ ಮಾರ್ಗದರ್ಶನ ಅವಿಸ್ಮರಣೀಯ. ಪ್ರಯತ್ನ, ಅವಿರತ ಶ್ರಮಕ್ಕೆ ಫಲ ಸಿಕ್ಕಿದ ತೃಪ್ತಿ ಇದೆ ಎಂದು ಅವರು ಹೇಳಿದರು. ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಎಂಸಿ.ಸುಧಾಕರ್, ಮೈಸೂರು ವಿವಿಕುಲಪತಿ…
ಲೇಖಕ: admin
ಮೈಸೂರು, ಜ.8 NEWS DESK : ಸಾರ್ವಜನಿಕರು ಸಮಸ್ಯೆಗಳನ್ನು ತಮ್ಮ ಬಳಿಗೆ ತಂದಾಗ ಅವುಗಳನ್ನು ಆಲಿಸಿ ತ್ವರಿತವಾಗಿ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು. ಪ್ರಮುಖವಾಗಿ ಗ್ರಾಮೀಣ ಭಾಗದ ಜನರನ್ನು ಪದೇಪದೆ ಕಚೇರಿಗಳಿಗೆ ಅಲೆಸುವ ಕೆಲಸ ಮಾಡಿಸಬೇಡಿ ಎಂದು ಅಧಿಕಾರಿಗಳಿಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೂಚನೆ ನೀಡಿದ್ದಾರೆ. ಮೈಸೂರಿನ ಬಸ್ ನಿಲ್ದಾಣ ಸಮೀಪದ ಮಿನಿ ವಿಧಾನಸೌಧದಲ್ಲಿರುವ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸಂಸದ ಯದುವೀರ್ ಮಾಹಿತಿ ನೀಡಿದ್ದಾರೆ. ತಾಲೂಕು ಕಚೇರಿಯಲ್ಲಿನ ಕೆಲವು ಲೋಪದೋಷಗಳ ಕುರಿತು ಜನರು ಅಹವಾಲುಗಳನ್ನು ನನ್ನ ಕಚೇರಿಗೆ ಕಳುಹಿಸಿದ್ದರು. ಈ ನಿಟ್ಟಿನಲ್ಲಿ ಇಂದು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು ಎಂದರು. :: ನಿರ್ಲಕ್ಷ್ಯ ಮಾಡಿದರೆ ಕ್ರಮ :: ತಾಲೂಕು ಕಚೇರಿಗಳಿಗೆ ಬರುವ ಹೆಚ್ಚಿನ ಜನರು ಗ್ರಾಮೀಣ ಭಾಗದವರಾಗಿರುತ್ತಾರೆ. ಇವರ ಅಹವಾಲುಗಳನ್ನು ತ್ವರಿತವಾಗಿ ಪರಿಹರಿಸಲು ಎಲ್ಲ ಅಧಿಕಾರಿಗಳು ಮುಂದಾಗಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿದರೆ ಮುಂದೆ…
ಮಡಿಕೇರಿ ಜ.8 NEWS DESK : ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ‘ವಿಕಸಿತ ಭಾರತ್ – ರೋಜಗಾರ್ ಮತ್ತು ಆಜೀವಿಕಾ ಮಿಷನ್ ಖಾತರಿ (ವಿಬಿ ಜಿರಾಮ್ ಜಿ) ಎಂದು ಬದಲಾಯಿಸಿರುವ ಬಗ್ಗೆ ರಾಜ್ಯ ಕಾಂಗ್ರೆಸ್ ಸರಕಾರದ ತಕರಾರಿಲ್ಲ. ಬದಲಿಗೆ ಈ ಯೋಜನೆಗೆ ತನ್ನ ಪಾಲು ಹಣ ಶೇ.40 ನ್ನು ನೀಡಬೇಕಲ್ಲ ಎನ್ನುವ ಆತಂಕ ಕಾಡುತ್ತಿದೆ ಎಂದು ಮೈಸೂರು-ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒಂದು ವೇಳೆ ರಾಜ್ಯ ಕಾಂಗ್ರೆಸ್ ಸರಕಾರ ‘ವಿಬಿ ಜಿರಾಮ್ ಜಿ’ ಯೋಜನೆಯನ್ನು ಜಾರಿಗೆ ತಾರದಿದ್ದಲ್ಲಿ ಕೇಂದ್ರ ಸರಕಾರ ಅನಿವಾರ್ಯವಾಗಿ ಪರ್ಯಾಯ ಚಿಂತನೆ ಮಾಡಬೇಕಾಗುತ್ತದೆ. ಜನಪರ ಕಾಳಜಿ ಇದ್ದರೆ ಸರಕಾರ ಅನುಷ್ಠಾನಗೊಳಿಸುತ್ತದೆ, ತಪ್ಪಿದಲ್ಲಿ ಎರಡೂವರೆ ವರ್ಷ ಕಳೆದ ನಂತರ ರಾಜ್ಯದಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬರುತ್ತದೆ, ಆಗ ನಾವು ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರುತ್ತೇವೆ ಎಂದರು. ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಶೇ.90 ರಷ್ಟು ಹಣವನ್ನು ಕೇಂದ್ರ ಸರಕಾರ…
ಬೆಂಗಳೂರು ಜ.8 NEWS DESK : ಅಂಗಾಂಗ ದಾನ ಕಾರ್ಯದಲ್ಲಿ ಕರ್ನಾಟಕ ರಾಜ್ಯ 2025ನೇ ಸಾಲಿನಲ್ಲಿ ದೇಶದಲ್ಲೇ ಮೂರನೇ ಸ್ಥಾನ ಪಡೆದುಕೊಂಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಈ ಸಾಧನೆ ರಾಜ್ಯದ ಆರೋಗ್ಯ ವ್ಯವಸ್ಥೆ, ವೈದ್ಯಕೀಯ ತಂಡಗಳ ಸಮರ್ಪಣೆ ಮತ್ತು ಜನಸಾಮಾನ್ಯರ ಮಾನವೀಯ ಸ್ಪಂದನೆಯ ಪ್ರತಿಫಲವಾಗಿದೆ ಎಂದು ಅವರು ಹೇಳಿದರು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿವರು, ಕಳೆದ ವರ್ಷ 198 ದಾನಿಗಳಿಂದ ಒಟ್ಟು 564 ಅಂಗಾಂಗಗಳನ್ನು ಕಸಿ ಮಾಡಲಾಗಿದ್ದು, ಇದರ ಮೂಲಕ ನೂರಾರು ರೋಗಿಗಳಿಗೆ ಹೊಸ ಜೀವನ ದೊರಕಿದಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. 2025ರ ಅಂಗಾಂಗ ದಾನದ ಪ್ರಮುಖ ಅಂಕಿ-ಅಂಶಗಳು: ಒಟ್ಟು ದಾನಿಗಳು: 198 ಕಿಡ್ನಿ ಕಸಿ: 306 ಲಿವರ್ ಕಸಿ: 167 ಹೃದಯ ಕಸಿ: 50 ಶ್ವಾಸಕೋಶ ಕಸಿ: 29 ಕಣ್ಣು (Cornea): 288 ರಾಜ್ಯದಲ್ಲಿ 2016ರಿಂದ ಇಂದಿನವರೆಗೂ ಅಂಗಾಂಗ ದಾನಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿರುವುದು…
ಮಡಿಕೇರಿ ಜ.8 NEWS DESK : ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಮಡಿಕೇರಿ ಗ್ರಾಮಾಂತರ ಠಾಣೆಯ ವತಿಯಿಂದ ಮೂರ್ನಾಡು ಮತ್ತು ಪೆರಾಜೆ ಗ್ರಾಮಗಳಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಜಾಥಾ ನಡೆಯಿತು. ನಂತರ ಸಭೆ ನಡೆಸಿ ವಿದ್ಯಾರ್ಥಿಗಳು ಮತ್ತು ನಾಗರಿಕರಿಗೆ ರಸ್ತೆ ಮತ್ತು ಸಂಚಾರ ಸುರಕ್ಷತೆ, ಸಂಚಾರ ಕಾನೂನು ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು.
ಮಡಿಕೇರಿ ಜ.8 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ವತಿಯಿಂದ 2025-26ನೇ ಸಾಲಿನ ಕೊಡಗು ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ 14 ಮತ್ತು 17 ವರ್ಷದೊಳಗಿನ ಜಿಲ್ಲಾ ಮಟ್ಟದ ವಿಶೇಷಚೇತನ ವಿದ್ಯಾರ್ಥಿಗಳ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವು ಜನವರಿ, 12 ರಂದು ಬೆಳಗ್ಗೆ 10.30 ಗಂಟೆಗೆ ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿ(ಪ್ರೌಢ ಶಾಲಾ ವಿಭಾಗ)ನಲ್ಲಿ ನಡೆಯಲಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಬಸವರಾಜು ಅವರು ತಿಳಿಸಿದ್ದಾರೆ.
ಮಡಿಕೇರಿ ಜ.8 NEWS DESK : ವಿಜಯಪುರ ಅಪ್ಪ ಸಾಹಿತ್ಯ ವೇದಿಕೆ ವತಿಯಿಂದ ಆಯೋಜಿಸಿದ ರಾಜ್ಯಮಟ್ಟದ ಕವಿಗೋಷ್ಟಿಯಲ್ಲಿ ಕೊಡಗಿನ ಪ್ರಿತುನ್ ಪೂವಣ್ಣ ಅಯ್ಯನೆರವಂಡ ಭಾಗವಹಿಸಿ, ಸನ್ಮಾನ ಸ್ವಿಕರಿಸಿದರು. ಅವರ ಅಪ್ಪನ ತ್ಯಾಗ ಕವನ ಸಂಕಲನಕ್ಕೆ ಅಭಿನಂದನಾ ಪತ್ರ ವಿತರಿಸಿ ಗೌರವಿಸಲಾಯಿತು.
ಮಡಿಕೇರಿ ಜ.8 NEWS DESK : K SHIP – 4 ಯೋಜನೆಯಡಿಯಲ್ಲಿ ಮಡಿಕೇರಿ – ದೋಣಿಗಲ್ (NH 75) ರಸ್ತೆ ಅಭಿವೃದ್ಧಿಗೆ ಕಳೆದ ಬಜೆಟ್ ನಲ್ಲಿ ಘೋಷಣೆಯಾಗಿದ್ದು, ರಸ್ತೆ ಅಭಿವೃದ್ಧಿ ಪಡಿಸುವ ಪ್ರಕ್ರಿಯೆಗಳ ತಾಂತ್ರಿಕ ಕಾರ್ಯಗಳು ಪ್ರಾರಂಭಗೊಂಡಿದೆ. ಡಿಪಿಆರ್ ಸಿದ್ಧಪಡಿಸುವ ನಿಟ್ಟಿನಲ್ಲಿ ಈಗಾಗಲೇ 7 ಕೋಟಿ ರೂ ಅನುದಾನ ಬಿಡುಗಡೆಯಾಗಿದ್ದು, ಈ ಹಿನ್ನೆಲೆಯಲ್ಲಿ ಡಿಪಿಆರ್ ಸಿದ್ಧಪಡಿಸಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಬೆಂಗಳೂರಿನ ಶಾಸಕರ ಭವನದ ಶಾಸಕರ ಕಚೇರಿಯಲ್ಲಿ ಡಿಪಿಆರ್ (DPR) ಸಂಬಂಧಿಸಿದಂತೆ ಕಂಪನಿಯ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಈ ರಸ್ತೆಯಿಂದ ಕೊಡಗಿನ ಜನತೆಗೆ ಹಾಗೂ ವಾಣಿಜ್ಯೋದ್ಯಮ, ನೂತನ ಕೈಗಾರಿಕೆಗಳು, ಪ್ರವಾಸೋದ್ಯಮ ಅಭಿವೃದ್ಧಿಗೆ ಮತ್ತಷ್ಟು ಸಹಕಾರಿಯಾಗಲಿದೆ ಎಂದು ಶಾಸಕ ಡಾ.ಮಂತರ್ ಗೌಡ ಅವರು ತಿಳಿಸಿದ್ದಾರೆ.
ಕುಶಾಲನಗರ ಜ.8 NEWS DESK : ಕುಶಾಲನಗರ ತಾಲ್ಲೂಕು ಸೌಂದರ್ಯ ವರ್ಧಕರ ಸಂಘದ 1ನೇ ವರ್ಷದ ವಾರ್ಷಿಕೋತ್ಸವ ಮತ್ತು ಮಹಾಸಭೆ ನಡೆಯಿತು. ಸ್ಥಳೀಯ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರಾದ ಕೆ.ಪಿ.ಚಂದ್ರಕಲಾ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಸೌಂದರ್ಯ ವರ್ಧಕರು ಉತ್ತಮ ಗುಣಮಟ್ಟದ ಸೇವೆಯನ್ನು ಗ್ರಾಹಕರಿಗೆ ಒದಗಿಸಬೇಕು. ಒಗ್ಗಟ್ಟಿನಿಂದ ಸಂಘಟನೆ ಮೂಲಕ ತಮ್ಮ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡು ಹಿಡಿಯುವಂತಾಗಬೇಕು. ಸರಕಾರದಿಂದ ದೊರಕುವ ಸೌಲಭ್ಯಗಳನ್ನು ಪಡೆಯಲು ಪ್ರಯತ್ನಿಸುವ ಮೂಲಕ ತಮ್ಮ ಅಭಿವೃದ್ಧಿ ಕಾಣುವಂತಾಗಬೇಕು ಎಂದರು. ಈ ಸಂಬಂಧ ತಾನು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಅವರು ಭರವಸೆ ವ್ಯಕ್ತಪಡಿಸಿದರು. ಜಿಲ್ಲಾ ಬ್ಯೂಟಿಷಿಯನ್ ಅಸೋಸಿಯೇಷನ್ ಅಧ್ಯಕ್ಷರಾದ ರತ್ನ ಯತೀಶ್ ಅವರು ಮಾತನಾಡಿ ಸಂಘದ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕುಶಾಲನಗರ ಶಾರದಾ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಶಾಂತ ಶ್ರೀಪತಿ ಅವರು ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಸಬಲವಾಗಬೇಕು ಈ ನಿಟ್ಟಿನಲ್ಲಿ…
ಸುಂಟಿಕೊಪ್ಪ ಜ.8 NEWS DESK : ಕೊಡಗು ಪ್ರವಾಸಿಗಾರ ತಾಣವಾಗಿದ್ದು ಇಲ್ಲಿ ಬಂದು ಹೋಗುವ ಪ್ರವಾಸಿಗಾರನ್ನು ಹಾಗೂ ಸ್ಥಳೀಯವಾಗಿ ನಡೆಯುವ ಅಪರಾಧಗಳನ್ನು ತಡೆಗಟ್ಟಲು ಆಟೋ ಚಾಲಕರು ಜೀವಂತ ಸಿಸಿಕ್ಯಾಮರವಿದ್ದಂತೆ ಅವರ ಬಗ್ಗೆ ನಿಖರ ಮಾಹಿತಿಗಳನ್ನು ನಿಮ್ಮಿಂದ ಮಾತ್ರ ಪಡೆಯಲು ಸಾಧ್ಯವೆಂದು ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷರಾದ ದಿನೇಶ್ ಕುಮಾರ್ ಬಾರಿಕೆ ಅಭಿಪ್ರಾಯ ವ್ಯಕ್ತಪಡಿಸಿದರು. ಸುಂಟಿಕೊಪ್ಪ ಗುಂಡುಗುಟ್ಟಿ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ನಡೆದ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹೆಚ್ಚುವರಿ ಪೊಲೀಸ್ ಅಧೀಕ್ಷರಾದ ದಿನೇಶ್ ಕುಮಾರ್ ಅವರು, ವಾಹನ ಚಾಲನೆಯ ಸಂದರ್ಭ ಚಾಲನಾ ಪರವನಾಗಿ, ವಾಹನ ವಿಮೆ, ವಾಹನಗಳಿಗೆ ಸಂಬಂಧಿಸಿದ ದಾಖಲಾತಿಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ಯಾಕೆಂದರೆ ಅಪಘಾತಗಳು ಸಂಭವಿಸಿದಾಗ ದಾಖಲಾತಿ ಹೊಂದಿಲ್ಲದೆ ಇರುವ ಸಂದರ್ಭ ವಾಹನಗಳ ಮಾಲೀಕರಿಗೆ ದುಪ್ಪಟ್ಟು ದಂಡ ಅಥವಾ ಜೀವನ ಪರ್ಯಂತ ಜೈಲು ಶಿಕ್ಷೆ ಅಥವಾ ದಂಡಕ್ಕೆ ತುತ್ತಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದರು. ಆದುರಿಂದ ಪ್ರತಿಯೊಬ್ಬ ಚಾಲಕರು ವಾಹನಗಳ…






