ಮಡಿಕೇರಿ ನ.6 NEWS DESK : ಮುಂದಿನ ಸಚಿವ ಸಂಪುಟ ವಿಸ್ತರಣೆಯ ಸಂದರ್ಭ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಕೊಡಗು ಗೌಡ ಹಿತರಕ್ಷಣಾ ಸಮಿತಿ ಒತ್ತಾಯಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಗೌರವ ಸಂಚಾಲಕ ಪಿ.ಎಲ್.ಸುರೇಶ್ ಅವರು ಬಹಳ ವರ್ಷಗಳ ಹಿಂದೆ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದಾಗ ಕೊಡಗು ಜಿಲ್ಲೆಯ ಮೂವರಿಗೆ ಸಚಿವ ದೊರೆತ್ತಿತ್ತು. ನಂತರ ಯಡಿಯೂರಪ್ಪ ಅವರ ನೇತೃತ್ವದ ಸರಕಾರದಲ್ಲಿ ಅಪ್ಪಚ್ಚು ರಂಜನ್ ಅವರಿಗೆ ಸಚಿವ ಸ್ಥಾನ ನೀಡಲಾಯಿತು. ಆದರೆ ಆನಂತರ ಬಂದ ಯಾವುದೇ ಸರಕಾರದಲ್ಲಿ ಕೊಡಗಿಗೆ ಸಚಿವ ಸ್ಥಾನ ದೊರೆಯಲಿಲ್ಲ. ಇದರಿಂದ ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಆದ್ದರಿಂದ ಈ ಬಾರಿ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮನವಿ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಈಗಾಗಲೇ ಕೊಡಗು ಗೌಡ ಹಿತರಕ್ಷಣಾ ಸಮಿತಿಯ ನಿಯೋಗ ಸಚಿವ ಮನವಿ ಸಲ್ಲಿಸಿ ಸಚಿವ ಸ್ಥಾನ ನೀಡುವಂತೆ ಕೋರಿದೆ. ಇದಕ್ಕೆ ಸೂಕ್ತ ಸ್ಪಂದನೆ ದೊರೆತ್ತಿದ್ದು, ಪೊನ್ನಣ್ಣ ಅವರು…
ಲೇಖಕ: admin
ಮಡಿಕೇರಿ ನ.6 NEWS DESK : ಆಟೋ ರಿಕ್ಷಾಗಳ ಚಾಲನ ಪರಿಮಿತಿಯನ್ನು 55 ಕಿ.ಮೀ.ಗೆ ಹೆಚ್ಚಿಸಬೇಕೆನ್ನುವ ಆಟೋ ಚಾಲಕರ ಮನವಿಗೆ ಪ್ರವಾಸಿ ವಾಹನ ಚಾಲಕರ ಮತ್ತು ಮಾಲೀಕರ ವಿವಿಧ ಸಂಘಟನೆಗಳು ತೀವ್ರ ವಿರೋಧವನ್ನು ವ್ಯಕ್ತಪಡಿಸಿವೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರದ ಪ್ರವಾಸಿ ವಾಹನ ಮಾಲೀಕರು ಹಾಗೂ ಚಾಲಕರ ಸಂಘದ ಅಧ್ಯಕ್ಷ ತೆಕ್ಕಡ ಸಂತೋಷ್ ಕಾರ್ಯಪ್ಪ ಅವರು, ಈಗಾಗÀಲೇ ಸರಕಾರದ ಕೆಲವು ನಿಯಮಾವಳಿಗಳು, ರೆಂಟಲ್ ಬೈಕ್‍ಗಳಿಂದಾಗಿ ಅಗತ್ಯ ಬಾಡಿಗೆ ಇಲ್ಲದೆ ವಾಹನ ಮಾಲೀಕರು ಮತ್ತು ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಆಟೋ ಚಾಲನ ಪರಿಮಿತಿಯನ್ನು ಹೆಚ್ಚಿಸಿದಲ್ಲಿ ಅದರ ನೇರ ದುಷ್ಪರಿಣಾಮ ಪ್ರವಾಸಿ ವಾಹನ ಮಾಲೀಕರ ಮತ್ತು ಚಾಲಕರ ಮೇಲೆ ಬೀಳುತ್ತದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದರು. ಜಿಲ್ಲೆಯ ಆಟೋ ಚಾಲಕರ ಸಂಘದ ನಿಯೋಗ ಇತ್ತೀಚೆಗೆ ಮುಖ್ಯಮಂತ್ರಿಗಳು ಮತ್ತು ಜಿಲ್ಲೆಯ ಶಾಸಕರನ್ನು ಭೇಟಿಯಾಗಿ, ಜಿಲ್ಲೆಯಲ್ಲಿ ಆಟೋ ಚಾಲನ ಪರಿಮಿತಿಯನ್ನು 15 ಕಿ.ಮೀ. ನಿಂದ 55 ಕಿ.ಮೀ.ಗೆ ಹೆಚ್ಚಿಸಬೇಕೆಂದು ಮನವಿ ಮಾಡಿದೆ. ಯಾವುದೇ ಕಾರಣಕ್ಕೂ…
ಮಡಿಕೇರಿ ನ.6 NEWS DESK : ಪೊನ್ನಂಪೇಟೆಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಪೌರಕಾರ್ಮಿಕರ ವಿಶೇಷ ಕುಂದು ಕೊರತೆಗೆ ಸಭೆ ನಡೆಯಿತು. ಸಭೆಯಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಪೌರಕಾರ್ಮಿಕರ ಅಹವಾಲುಗಳನ್ನು ಆಲಿಸಿದರು. ಹಿಂದೆ ಪೌರ ಕಾರ್ಮಿಕರನ್ನು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಭೇಟಿ ಮಾಡಿಸಿದ ಶಾಸಕರು, ಮುಖ್ಯಮಂತ್ರಿಗಳಿಗೆ ಇವರ ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿಯನ್ನು ಸಲ್ಲಿಸಿದ್ದನ್ನು ನೆನಪಿಸಿದ ಪೌರಕಾರ್ಮಿಕರು ತಮ್ಮ ಸೇವಾ ಭದ್ರತೆಗೆ ಬೇಕಾದ ಸವಲತ್ತುಗಳನ್ನು ಕಲ್ಪಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಚೆಪುಡೀರ ಅರುಣ್ ಮಾಚಯ್ಯ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ತಿತೀರ ಧರ್ಮಜ ಉತ್ತಪ್ಪ, ಉಪ ವಿಭಾಗಧಿಕಾರಿ ನಿತಿನ್ ಚಿಕ್ಕಿ, ಪೊನ್ನಂಪೇಟೆ ತಾಲೂಕು ಬಗರ್ ಹುಕುಂ ಅಧ್ಯಕ್ಷರಾದ ಅಣ್ಣಳಮಾಡ ಲಾಲಾ ಅಪ್ಪಣ್ಣ, ಪಂಚಾಯಿತಿ ಅಧ್ಯಕ್ಷರುಗಳು, ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ಪೊನಂಪೇಟೆ, ಗೋಣಿಕೊಪ್ಪ ಹಾಗೂ ವಿರಾಜಪೇಟೆಯ ಪೌರಕಾರ್ಮಿಕರು ಭಾಗವಹಿಸಿದರು.
ಮಡಿಕೇರಿ ನ.6 NEWS DESK : ಸಾಥ೯ಕ ಬದುಕಿನ ಮುಖ್ಯ ಸಾರವಾಗಿರುವ ಸಾಮಾಜಿಕ ಸೇವಾ ಕಾಯ೯ಗಳಿಗೆ ವಿಶ್ವದಲ್ಲಿಯೇ ರೋಟರಿ ಸಂಸ್ಥೆಯು ಮುಂಚೂಣಿಯಲ್ಲಿದೆ ಎಂದು ಹಿರಿಯ ಸಾಹಿತಿ, ಕಲಾವಿದ ಸುಬ್ರಾಯ ಸಂಪಾಜೆ ಶ್ಲಾಘಿಸಿದ್ದಾರೆ. ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ವುಡ್ಸ್ ವತಿಯಿಂದ ಆಯೋಜಿತ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಸುಬ್ರಾಯ ಸಂಪಾಜೆ, ಎಷ್ಟೇ ಹಣ ಸಂಪಾದಿಸಿದರೂ ಅಂತಿಮವಾಗಿ ಯಾರಿಗೆ ನಾವು ನೆರವಾಗಿದ್ದೇವೆ ಎಂಬುದರ ಮೇಲೆ, ಯಾರ ಸೇವೆಗಾಗಿ ನಾವು ಶ್ರಮವಹಿಸಿದ್ದೇವೆ ಎಂಬುದನ್ನು ಆಧರಿಸಿ ಜೀವನ ಸಾಥ೯ಕತೆ ಪಡೆಯುತ್ತದೆ. ಈ ನಿಟ್ಟಿನಲ್ಲಿ ಅಗತ್ಯವಿದ್ದವರಿಗ ಸ್ವಂತ ಹಣ ಕ್ರೋಡೀಕರಿಸಿ ಸಹಾಯ ಮಾಡುತ್ತಾ ಬಂದಿರುವ ರೋಟರಿ ಸಂಸ್ಥೆಯ ಸದಸ್ಯರ ಕೊಡುಗೆ ಅಭಿನಂದನಾಹ೯ ಎಂದರು. ಮಡಿಕೇರಿ ಸಕಾ೯ರಿ ಜೂನಿಯರ್ ಕಾಲೇಜಿನ ಕನ್ನಡ ಶಿಕ್ಷಕಿ ಕೆ.ಬಿ. ಗೌರಿ ಮಾತನಾಡಿ, ಪ್ರಾಥಮಿಕ ಶಿಕ್ಷಣವನ್ನು ಮಾತೖಭಾಷೆಯಾದ ಕನ್ನಡದಲ್ಲಿಯೇ ಕಲಿಸಲು ಮುಂದಾದಲ್ಲಿ ಎಲ್ಲರಲ್ಲಿಯೂ ಕನ್ನಡ ಎಂಬುದು ಹೖದಯದ ಭಾಷೆಯಾದೀತು ಎಂದು ಹೇಳಿದರು, ನವಂಬರ್ ತಿಂಗಳಿಗೆ ಮಾತ್ರ ಕನ್ನಡ ಭಾಷಾ ಪ್ರೇಮ ಸೀಮಿತವಾಗಬಾರದು ಎಂದೂ…
ಮಡಿಕೇರಿ ನ.6 NEWS DESK : ಕೊಡಗಿನ ಮೂಲದ ಯುವಪೀಳಿಗೆ ಮತ್ತೆ ಜಿಲ್ಲೆಗೆ ಮರಳುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಸಂಬಂಧಿತ ಯೋಜನೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಜಿಲ್ಲಾಧಿಕಾರಿ ವೆಂಕಟರಾಜಾ ಅಭಿಪ್ರಾಯಪಟ್ಟಿದ್ದಾರೆ. ನಗರದ ಕೊಡಗು ಪ್ರವಾಸೋದ್ಯಮ ಇಲಾಖೆ ಕಛೇರಿಯಲ್ಲಿ ಕೂಗ್೯ ರೆಸಾಟ್, ಹೋಟೇಲ್ ಅಸೋಸಿಯೇಷನ್ ನ ನೂತನ ಕಛೇರಿ ಉದ್ಘಾಟಿಸಿ ಮಾತನಾಡಿದ ವೆಂಕಟರಾಜಾ, ಉದ್ಯೋಗವಕಾಶ ಅರಸಿ ಹೊರನಾಡಿಗೆ ತರಳಿರುವ ಕೊಡಗಿನ ಅನೇಕ ಯುವಕ, ಯುವತಿಯರು ಮತ್ತೆ ಕೊಡಗಿಗೆ ಮರಳಲು ಸ್ಥಳೀಯವಾಗಿ ಪ್ರವಾಸೋದ್ಯಮ ಚಟುವಟಿಕೆಗಳು ಸಹಕಾರಿಯಾಗಬೇಕು. ಪ್ರವಾಸೋದ್ಯಮಿಗಳಲ್ಲಿ ಪರಸ್ಪರ ಸ್ಪಧೆ೯ಗಿಂತ ಎಲ್ಲಾ ಉದ್ಯಮಿಗಳನ್ನು ಪ್ರೋತ್ಸಾಹಿಸಿ ಕೊಡಗಿನಲ್ಲಿ ಸುಸ್ಥಿರ ಪ್ರವಾಸೋದ್ಯಮ ಸುಗಮವಾಗಿರುವಂತೆ ಕಾಯ್ದುಕೊಳ್ಳುವುದು ಮುಖ್ಯವಾಗಬೇಕೆಂದು ಹೇಳಿದರು. ಕೊಡಗಿನ ಪ್ರವಾಸೋದ್ಯಮಿಗಳು ಜನಸ್ಮೇಹಿಯಾಗಿದ್ದಲ್ಲಿ ಒಮ್ಮೆ ಭೇಟಿ ನೀಡಿದ ಪ್ರವಾಸಿಗರು ಮತ್ತೆ ಮತ್ತೆ ಕೊಡಗಿಗೆ ಪ್ರವಾಸ ಬರುವುದು ಖಂಡಿತಾ ಎಂದೂ ಕಿವಿಮಾತು ಹೇಳಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಕೂಗ್೯ ಹೋಟೇಲ್, ರೆಸಾಟ್೯ ಅಸೋಸಿಯೇಷನ್ ಕಳೆದ ತಿಂಗಳು ಆಯೋಜಿಸಿದ್ದ ಸ್ವಚ್ಚ ಕೊಡಗು ಸುಂದರ ಕೊಡಗು ಸ್ವಚ್ಚತಾ ಅಭಿಯಾನ ರಾಜ್ಯದ ಗಮನವನ್ನೇ ಸೆಳೆದಿದೆ.…
ಮಡಿಕೇರಿ ನ.6 NEWS DESK : ಆದಿಮಸಂಜಾತ ಏಕ-ಜನಾಂಗೀಯ ಆನಿಮಿಸ್ಟಿಕ್ ಕೊಡವ ಸಮುದಾಯಕ್ಕೆ ಕೊಡವಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ, ಸ್ವಯಂ ಆಡಳಿತ, ಆಂತರಿಕ ಸ್ವಯಂ ನಿರ್ಣಯದ ಹಕ್ಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ನ.7 ರಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯುತ ಸತ್ಯಾಗ್ರಹ ನಡೆಯಲಿದೆ ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ 10.30 ಗಂಟೆಗೆ ಸತ್ಯಾಗ್ರಹ ನಡೆಸಿ ಸಿಎನ್‍ಸಿ ಬೇಡಿಕೆಗಳ ಕುರಿತು ಕೇಂದ್ರ ಮತ್ತು ರಾಜ್ಯ ಸರಕಾರದ ಗಮನ ಸೆಳೆಯಲಾಗುವುದು. ಕೊಡವರ ಸಾಂಪ್ರದಾಯಿಕ ಗನ್ (ತೋಕ್) ವಿನಾಯಿತಿಯನ್ನು ಸಂವಿಧಾನದ 25 ಮತ್ತು 26ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಬೇಕು. ಕೊಡವರಿಗೆ ಎಸ್‍ಟಿ ಟ್ಯಾಗ್ ನೀಡಬೇಕು, ಕೊಡವರ ರಾಜಕೀಯ ಸಬಲೀಕರಣಕ್ಕೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಬೇಕು ಮತ್ತಿತರ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಲಾಗುವುದು ಎಂದು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಮಡಿಕೇರಿ ನ.6 NEWS DESK : ವಿರಾಜಪೇಟೆಯ ಬಾಳುಗೋಡು ಕೊಡವ ಸಮಾಜದಲ್ಲಿ ಆಯೋಜನೆಗೊಂಡ, ಅಂತರ ಕೊಡವ ಸಮಾಜ ಹಾಕಿ ಕ್ರೀಡಾ ಮತ್ತು ವಿವಿಧ ಸಾಂಸ್ಕೃತಿಕ ಪೈಪೋಟಿ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು. ವಿಶೇಷವಾಗಿ ಕೋವಿಯಲ್ಲಿ ಗುರಿಗೆ ತಾಗಿಸುವ ಸ್ಪರ್ಧೆ ಯಲ್ಲಿ ಶಾಸಕರು ಭಾಗಿಯಾಗಿ ಬಂದೂಕಿನಿಂದ ಗುಂಡು ಹಾರಿಸಿ ಗುರಿಗೆ ತಾಗಿಸಿ ಎಲ್ಲರ ಗಮನ ಸೆಳೆದರು. ಈ ಕಾರ್ಯಕ್ರಮದಲ್ಲಿ, ಕೊಡಗು ಮೈಸೂರು ಸಂಸದ ಯದುವೀರ್ ಒಡೆಯರ್, ರಾಜ್ಯ ಕ್ರೀಡಾ ಪ್ರಧಿಕಾರದ ಉಪಾಧ್ಯಕ್ಷರಾದ ಅರುಣ್ ಮಾಚಯ್ಯ, ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಬಾಳುಗೋಡು ಕೊಡವ ಸಮಾಜದ ಅಧ್ಯಕ್ಷರು ವಿಷ್ಣು ಕಾರ್ಯಪ್ಪ, ಎಲ್ಲಾ ಕೊಡವ ಸಮಾಜದ ಅಧ್ಯಕ್ಷರುಗಳು ಪ್ರಮುಖರು ಹಾಗೂ ಆಹ್ವಾನಿತ ಅತಿಥಿ ಗಣ್ಯರು ಉಪಸ್ಥಿತರಿದ್ದರು. ತಾವು ಶಾಸಕರಾಗಿ ಆಯ್ಕೆಯಾಗುವ ಮೊದಲೇ ಬಾಳುಗೋಡು ಕೊಡವ ಸಮಾಜದವರ ಮನವಿ ಮೇರೆಗೆ ವೈಯುಕ್ತಿಕವಾಗಿ ಅನೇಕ ಬಾರಿ ಸಮಾಜದ ಅಭಿವೃದ್ಧಿಗೆ ಸಹಾಯ ಮಾಡಿದ್ದರು. ಶಾಸಕರಾಗಿ ಆಯ್ಕೆಯಾದ…
ಮಡಿಕೇರಿ ನ.6 NEWS DESK : ಕುಶಾಲನಗರದ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಧಾತ್ರಿ ಹೋಮ ಪೂಜೆಯು ಶ್ರದ್ಧಾಭಕ್ತಿಯಿಂದ ಜರುಗಿತು. ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಅವರ ನೇತೃತ್ವದಲ್ಲಿ ಜರುಗಿದ ಪೂಜಾ ಕೈಂಕರ್ಯಗಳಲ್ಲಿ ಕುಶಾಲನಗರ ವ್ಯಾಪ್ತಿಯ ಆರ್ಯ ವೈಶ್ಯ ಸಮುದಾಯದ ನೂರಾರು ಮಂದಿ ಪಾಲ್ಗೊಂಡು ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ಕಾರ್ತಿಕ ಮಾಸದಲ್ಲಿ ಪವಿತ್ರವಾದ ನಿಂಬೆ ಮತ್ತು ತುಳಸಿಗೆ ವಿವಾಹದ ದೈವಿಕ ಕೈಂಕರ್ಯದ ಧಾತ್ರಿ ಹೋಮಹವನಾದಿಗಳನ್ನು ಅರ್ಚಕರಾದ ಗಿರೀಶ್ ಭಟ್, ಯೋಗೇಶ್ ಭಟ್, ಕೃಷ್ಣಮೂರ್ತಿ ಭಟ್ ನಡೆಸಿಕೊಟ್ಟರು. ಇದೇ ಸಂದರ್ಭ ತುಳಸಿ ಪೂಜೆ ಮತ್ತು ಶ್ರೀ ಸತ್ಯನಾರಾಯಣ ಪೂಜೆ ನೆರವೇರಿತು. ಕುಶಾಲನಗರ ಆರ್ಯ ವೈಶ್ಯ ಮಂಡಳಿ, ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್, ಆರ್ಯ ವೈಶ್ಯ ಮಹಿಳಾ ಮಂಡಳಿಯ ಪದಾಧಿಕಾರಿಗಳು ಸೇರಿದಂತೆ, ಪ್ರಮುಖರಾದ ಬಿ.ಎಲ್.ಸತ್ಯನಾರಾಯಣ, ಬಿ.ಆರ್.ನಟರಾಜ್, ಪಿ.ಎಸ್.ಪ್ರಶಾಂತ್, ಎಸ್.ಎನ್.ನಾಗೇಂದ್ರ, ಬಿ.ಎಲ್.ಅಶೋಕ್ ಕುಮಾರ್, ಕೆ.ಜೆ.ಸತೀಶ್, ಬಿ.ಎನ್.ವಸಂತ್ ಕುಮಾರ್, ಪಿ.ಪಿ.ಸತ್ಯನಾರಾಯಣ, ಕೆ.ಜೆ.ನಾಗೇಂದ್ರ, ಬಿ.ಎಲ್.ಉದಯಕುಮಾರ್, ಮಹಿಳಾ ಮಂಡಳಿ ಅಧ್ಯಕ್ಷೆ ವಾಣಿ ಮಹೇಶ್…
ಕಾರ್ಕಳ ನ.6 NEWS DESK : ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯದ ನೂತನ ಪಯಣಕ್ಕೆ ಚಾಲನೆಯ ರೂಪದಲ್ಲಿ ಕನ್ನಡ ಸಾಹಿತ್ಯ ಸಂಘವನ್ನು ರಚಿಸಲಾಯಿತು. ಕನ್ನಡ ಸಾಹಿತ್ಯ ಸಂಘದ ಉದ್ಘಾಟಿಸಿ, ಮಾತನಾಡಿದ ವಿದ್ವಾಂಸರು, ಸಾಹಿತಿಗಳು ಹಾಗೂ ನಿವೃತ್ತ ಪ್ರಾಂಶುಪಾಲರಾದ ಡಾ. ಪಾದೆಕಲ್ಲು ವಿಷ್ಣು ಭಟ್ಟರು “ಕನ್ನಡವನ್ನು ಉಳಿಸಿ ಬೆಳೆಸಬೇಕಾದ್ದು ಕನ್ನಡಿಗರಾದ ನಮ್ಮ ಕರ್ತವ್ಯ. ಸಾಹಿತ್ಯದ ಓದುವಿಕೆ ಮತ್ತು ಬರೆಯುವಿಕೆ ನಮ್ಮ ಅನುಭವಗಳನ್ನು ಹೆಚ್ಚಿಸುವ ಪ್ರಕ್ರಿಯೆ. ಆದ್ದರಿಂದ ಸಾಹಿತ್ಯವನ್ನು ಓದುವ ಆಸಕ್ತಿ ಬೆಳೆಸಿಕೊಳ್ಳಿ. ಭಾಷೆಯ ಬಗೆಗೆ ಹೆಚ್ಚಿನ ಗಮನ ಕೊಡಿ. ವಾಕ್ಯಗಳ ರಚನೆಯಲ್ಲಿ ತೊಡಗಿ, ಬಳಿಕ ಸಾಹಿತ್ಯ ರಚನೆಗೂ ಮುಂದಾಗಬೇಕು ಎನ್ನುತ್ತಾ ಕನ್ನಡ ಸಾಹಿತ್ಯದ ಕಾಲಘಟ್ಟಗಳು, ನಿಘಂಟುಗಳು, ಗದ್ಯ – ಪದ್ಯ ಕವಿಗಳ ವಿವರ, ಕವಿರಾಜಮಾರ್ಗ, ತಾಳೆಗರಿಗಳ ಉಲ್ಲೇಖದೊಂದಿಗೆ ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಕುರಿತು ವಿವರಿಸಿದರು. ಕ್ರಿಯೇಟಿವ್ ಕನ್ನಡ ಸಾಹಿತ್ಯ ಸಂಘದ ಮೂಲಕ ಇನ್ನಷ್ಟು ಸೃಜನಾತ್ಮಕ ಸಾಹಿತ್ಯ ಕೃತಿಗಳು ಮೂಡಿ ಬರಲಿ” ಎಂದು ಹಾರೈಸಿದರು. ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹಸಂಸ್ಥಾಪಕರಾದ…
ಕುಶಾಲನಗರ ನ.6 NEWS DESK : 12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದ ಬಸವಣ್ಣ ಮತ್ತು ಬಸವಾದಿ ಶರಣರದು ನಡೆ- ನುಡಿ ಸಿದ್ಧಾಂತ. ನುಡಿದಂತೆ ನಡೆದು ತೋರಿದ ಸಾತ್ವಿಕ ಧೀಮಂತರು, ಕಾಯಕ ಯೋಗಿಗಳು. ಅವರದು ದಯಾಮೂಲವಾದ ಧರ್ಮವಾಗಿತ್ತು ಎಂದು ಕೊಡ್ಲಿಪೇಟೆ ಕಲ್ಮಠದ ಮಹಾಂತ ಸ್ವಾಮೀಜಿ ಹೇಳಿದರು. ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾದ ಕೊಡಗು ಜಿಲ್ಲಾ ಘಟಕ ಹಾಗೂ ತೊರೆನೂರು ವಿರಕ್ತ ಮಠದ ವತಿಯಿಂದ ತೊರೆನೂರು ವಿರಕ್ತ ಮಠದಲ್ಲಿ ಬುಧವಾರ ಸಂಜೆ ನಡೆದ ಮಾಸಿಕ ಹುಣ್ಣಿಮೆ ಪೂಜಾ ಮಹೋತ್ಸವ ಹಾಗೂ ಶಿವಾನುಭವ ಗೋಷ್ಠಿಯಲ್ಲಿ 12ನೇ ಶತಮಾನದ ಶರಣರ ಸಾಮಾಜಿಕ ಮೌಲ್ಯಗಳು ಕುರಿತು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದರು. ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ಕಲಿಸುವ ಮೂಲಕ ಅವರನ್ನು ಸಮಾಜದ ಉತ್ತಮ ನಾಗರಿಕರನ್ನಾಗಿ ರೂಪಿಸುವ ಜವಾಬ್ದಾರಿ ಇದೆ. ಇದರಲ್ಲಿ ತಾಯಂದಿರ ಪಾತ್ರ ಪ್ರಮುಖವಾಗಿದೆ ಎಂದರು. ಅಂದು ಶರಣರು ಪೂಜೆಗಿಂತಲೂ ಹೆಚ್ಚಿನ ಮಹತ್ವವನ್ನು ದುಡಿಮೆಗೆ ಕೊಟ್ಟಿದ್ದರು. ಕಾಯಕ ಅವರ ಪಂಚಪ್ರಾಣವಾಗಿತ್ತು.…






