ಲೇಖಕ: admin

ಮಡಿಕೇರಿ ನ.5 NEWS DESK : ಮಡಿಕೇರಿಯ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ್ ನಲ್ಲಿ ರೋಟರಿ ಮಡಿಕೇರಿ ವುಡ್ಸ್ ವತಿಯಿಂದ ರೋಟರಾಕ್ಟ್ ಕ್ಲಬ್ ನ್ನು ಸ್ಥಾಪಿಸಲಾಯಿತು. ರೋಟರಿ ವುಡ್ಸ್ ಅಧ್ಯಕ್ಷ ಕಿರಣ್ ಕುಂದರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಪದಗ್ರಹಣ ಅಧಿಕಾರಿ ರೋಟರಿ ಕುಶಾಲನಗರ ಕ್ಲಬ್ ನ ಸುನಿತಾ ಮಹೇಶ್ ನೂತನವಾಗಿ ಅಸ್ತಿತ್ವಕ್ಕೆ ಬಂದ ರೋಟರ್ಯಾಕ್ಟ್ ಕ್ಲಬ್ ನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಶಾಲಾ ದಿನಗಳಿಂದಲೇ ಸೇವಾ ಮನೋಭಾವ ಬೆಳೆಸಿಕೊಳ್ಳುವಂತೆ ಕರೆ ನೀಡಿದರು. ಓದಿನ ಜೊತೆಗೆ ರೋಟರಿ ಬಗ್ಗೆ ಹೆಚ್ಚಿನ ವಿಚಾರಗಳನ್ನು ಅರಿತುಕೊಂಡು ಜನ ಸಾಮಾನ್ಯರ ಕಷ್ಟಗಳನ್ನು ಅರಿತು ಅಗತ್ಯಕ್ಕೆ ಅನುಗುಣವಾಗಿ ಅವರಿಗೆ ನೆರವು ನೀಡುವ ಪ್ರಯತ್ನ ಮಾಡಬೇಕು ಎಂದು ಅವರು ಹೇಳಿದರು. ಕೇವಲ ಒಬ್ಬನಿಂದ ಆಗದ ಕೆಲಸವನ್ನು ಹಲವು ಕೈಗಳನ್ನು ಸೇರಿಸಿಕೊಂಡು ಜನರ ನೋವಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ನಿಮ್ಮದಾಗಿರಲಿ ಎಂದು ಸುನೀತಾ ಹೇಳಿದರು. ಕಾಲೇಜು ಪ್ರಾಂಶುಪಾಲೆ ನಿರ್ಮಲಾ ಮಾತನಾಡಿ , ರೋಟರಿ ವುಡ್ಸ್ ನ ಪ್ರತಿಯೊಂದು ಚಟುವಟಿಕೆಗಳ ಬಗ್ಗೆ…

Read More

ಕಾರ್ಕಳ ನ.5 NEWS DESK : ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಸ್ಫೂರ್ತಿ ಮಾತು ಸರಣಿ ಕಾರ್ಯಕ್ರಮ – 12ನ್ನು 3 ನವೆಂಬರ್ 2025 ರಂದು ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಖ್ಯಾತ ವಾಗ್ಮಿಗಳಾದ ಎನ್.ಆರ್. ದಾಮೋದರ ಶರ್ಮ ರವರು ‘ಬೆಳಕಾಗಲಿ ಬಾಳು’ ಶೀರ್ಷಿಕೆಯಡಿಯಲ್ಲಿ ಪ್ರೇರಣೆಯ ಮಾತುಗಳನ್ನಾಡುತ್ತಾ, “ಜೀವನವನ್ನು ಬೆಳಗಿಸಬೇಕೆಂದರೆ ಆತ್ಮವಿಶ್ವಾಸ ಮತ್ತು ದೃಢ ನಿಶ್ಚಯ ಮುಖ್ಯ. ಪ್ರತಿದಿನ ಹೊಸದಾಗಿ ಕಲಿಯುವ ಮನಸ್ಸು ಬೆಳೆಸಿಕೊಳ್ಳಿ. ಜೀವನದಲ್ಲಿ ಸಣ್ಣ ಪ್ರಯತ್ನವೂ ದೊಡ್ಡ ಬದಲಾವಣೆಗೆ ಕಾರಣವಾಗಬಹುದು. ಕ್ಷಣಿಕ ಸಂತೋಷಕ್ಕೆ ಹಾತೊರೆಯುವ ಮನಸ್ಸನ್ನು ನಿಯಂತ್ರಿಸಿ, ಜೀವನವನ್ನು ಯಶಸ್ಸಿನ ದಡಕ್ಕೆ ಕರೆದೊಯ್ಯಬೇಕು. ಇತರರ ಮಾತಿಗೆ ಕಿವಿಯಾಗುವ ಮೊದಲು ಆತ್ಮದ ಮಾತನ್ನು ಆಲಿಸೋಣ. ತಾಯಿಯ ತ್ಯಾಗಕ್ಕೆ ಸಮನಾದ ತ್ಯಾಗ, ಪ್ರೀತಿ ಬೇರೊಂದಿಲ್ಲ. ತಂದೆಯ ಪರಿಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಮ್ಮ ಭಾರತದ ಜ್ಞಾನ ಪರಂಪರೆ ನಮಗೆ ಹೇಳಿರುವ ಉಪದೇಶಗಳನ್ನು ಅರಿತುಕೊಳ್ಳೋಣ. ಮಾತೃಭೂಮಿಯ ಬಗೆಗಿನ ಪ್ರೀತಿ ಗೌರವ ನಮ್ಮ ವ್ಯಕ್ತಿತ್ವವನ್ನು ನಿರ್ಮಾಣ ಮಾಡುತ್ತವೆ ” ಎಂದು ಹೇಳಿದರು. ಕಾರ್ಯಕ್ರಮದಲ್ಲಿ…

Read More

ಪುತ್ತೂರು ನ.5 NEWS DESK : ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಪ್ರಥಮ ವರ್ಷದ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿ ನಿಕ್ಷೇಪ್‍ ಕೃಷ್ಣ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ರಾಜ್ಯಮಟ್ಟದ ಅಂತರ್ ಕಾಲೇಜು ಕರಾಟೆ ಸ್ಪರ್ಧೆಯಲ್ಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. ಬೆಂಗಳೂರಿನ ಆರ್.ವಿ.ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂಡ್ ಮೆನೇಜ್ಮೆಂಟ್ ಇದರ ಆಶ್ರಯದಲ್ಲಿ ನಡೆದ ಈ ಸ್ಪರ್ಧಾ ಕೂಟದಲ್ಲಿ 75 ಕೆಜಿ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದ ಇವರು ಚಿನ್ನದ ಪದಕದ ಸಾಧನೆಯನ್ನು ಮಾಡಿದ್ದಾರೆ. ಇವರಿಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ಅವರು ಮಾರ್ಗದರ್ಶನದಲ್ಲಿ ಮಾಡಿದ್ದಾರೆ ಎಂದು ಪ್ರಾಂಶುಪಾಲ ಡಾ.ಮಹೇಶ್‍ ಪ್ರಸನ್ನ.ಕೆ ತಿಳಿಸಿದ್ದಾರೆ.

Read More

ವಿರಾಜಪೇಟೆ ನ.5 NEWS DESK : ಕರ್ನಾಟಕ ಏಕೀಕರಣ ಚಳವಳಿ ಕನ್ನಡ ಭಾಷೆಯನ್ನು ಮಾತನಾಡುವ ಪ್ರದೇಶಗಳನ್ನು ಒಂದೇ ರಾಜ್ಯವನ್ನಾಗಿ ಒಗ್ಗೂಡಿಸಲು ನಡೆದ ಚಳವಳಿಯಾಗಿದೆ. ವಿದ್ಯಾರ್ಥಿಗಳಾದ ನೀವು ಕನ್ನಡ ಭಾಷೆ, ನೆಲ ಜಲದ ಬಗ್ಗೆ ಅಭಿಮಾನ ಹೊಂದಿರಬೇಕು ಎಂದು ನಿವೃತ್ತ ಶಿಕ್ಷಕರಾದ ಹೆಚ್.ಜಿ. ಸಾವಿತ್ರಿ ಹೇಳಿದರು. ಬಾಳುಗೋಡುವಿನ ಏಕಲವ್ಯ ಮಾದರಿ ವಸತಿ ಶಾಲೆಯ ಪ್ರಾರ್ಥನಾ ಮಂದಿರದಲ್ಲಿ ನಡೆದ 70ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ನಡೆದ ನುಡಿ ಮೃದಂಗ ಸಮಾರಂಭದಲ್ಲಿ ಭುವನೇಶ್ವರಿ ತಾಯಿಗೆ ಪುಷ್ಪಾರ್ಚನೆ ಮಾಡಿ, ಜ್ಯೋತಿ ಬೆಳಗಿಸುವ ಮೂಲಕ ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರದ್ದು, ಪ್ರತಿಯೊಂದು ರಾಜ್ಯಕ್ಕೂ ಅದರದ್ದೆ ಆದ ವೈಶಿಷ್ಟ್ಯಪೂರ್ಣ ಭಾಷೆ, ಸಂಸ್ಕೃತಿ ಮತ್ತು ಪರಂಪರೆ ಇದ್ದೆ ಇರುತ್ತದೆ. ಕರ್ನಾಟಕಕ್ಕೂ ಅಂತಹ ಸುವರ್ಣ ಐತಿಹ್ಯ, ಸಂಸ್ಕೃತಿಯ ಸೊಗಡಿದೆ. ಕನ್ನಡ ರಾಜ್ಯೋತ್ಸವವನ್ನು ನಮ್ಮ ರಾಜ್ಯದ ಐಕ್ಯತೆಯ, ಭಾಷಾ ಹೆಮ್ಮೆ ಮತ್ತು ಸಂಸ್ಕೃತಿಯ ಸ್ಮರಣೆಗಾಗಿ ಪ್ರತಿವರ್ಷ ನ.1 ರಂದು ಆಚರಿಸಲಾಗುತ್ತದೆ. ಈ ದಿನವು ಪ್ರತಿಯೊಬ್ಬ…

Read More

ವಿರಾಜಪೇಟೆ ನ.5 NEWS DESK : ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಅಚರಿಸುವುದು ಮತ್ತು ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ ಕಲೆ, ಭಾಷೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಮಂಡೇಪಂಡ ಸುಜಾ ಕುಶಾಲಪ್ಪ ಹೇಳಿದರು. ವಿರಾಜಪೇಟೆಯ ಕರ್ನಾಟಕ ಸಂಘದ ವತಿಯಿಂದ ಮಹಿಳಾ ಸಮಾಜ ಸಭಾಂಗಣದಲ್ಲಿ 70ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಸೋಮವಾರ ನಡೆದ ರಾಜ್ಯೋತ್ಸವ ಆಚರಣೆ ಹಾಗೂ ವಿವಿಧ ತಾಲೂಕು ಮಟ್ಟದ ಸ್ವರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಮಂಡೇಪಂಡ ಸುಜಾ ಕುಶಾಲಪ್ಪ ಅವರು, ನಾವು ಕನ್ನಡ ಬಳಕೆ ಮಾಡುವ ಮೂಲಕ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ವಿಸ್ತರಿಸಬೇಕು. ಕನ್ನಡ ನುಡಿ, ಸಂಸ್ಕೃತಿ, ಪರಂಪರೆ ಉಳಿಸಲು ಸದಾ ಕಟಿಬದ್ಧರಾಗಿರುತ್ತೇವೆ ಎಂದು ನಿಶ್ಚಯಿಸಬೇಕು ಎಂದರಲ್ಲದೆ ಗಡಿ ಭಾಗವಾದ ವಿರಾಜಪೇಟೆ ವ್ಯಾಪ್ತಿಯಲ್ಲಿ ಕನ್ನಡ ನಾಡು ನುಡಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡದ ನಾಮಫಲಕ ಕಡ್ಡಾಯವಾಗಿ ಎಲ್ಲ ಅಂಗಡಿಗಳಲ್ಲಿ ಅಳವಡಿಸಲು ಕ್ರಮ ತೆಗೆದುಕೊಳ್ಳಬೇಕು ಎಂದರು.…

Read More

ನಾಪೋಕ್ಲು ನ.5 NEWS DESK : ಮೂರ್ನಾಡಿನ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಕೊಡಗು ಜಿಲ್ಲಾ ಕುಲಾಲ (ಕುಂಬಾರ)ರ ಸಂಘದ ಯುವ ಘಟಕದ ಆಶ್ರಯದಲ್ಲಿ ನಡೆದ ಕೊಡಗು ಜಿಲ್ಲಾ ಕುಲಾಲ (ಕುಂಬಾರ) ಚಾಂಪಿಯನ್ಸ್ ಟ್ರೋಫಿ-2025 ಸೀಸನ್ 1 ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಡಿಕೆಬೀಡುವಿನ ಕುಲಾಲ ಕುಂಬಾರ ಬಳಗ ಚಾಂಪಿಯನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ವಿಜೇತ ತಂಡಕ್ಕೆ ರೂ 20,000 ನಗದು ಹಾಗೂ ಟ್ರೋಫಿಯನ್ನು ವಿತರಿಸಲಾಯಿತು. ದ್ವಿತೀಯ ಸ್ಥಾನವನ್ನು ಕುಂಬಾರ ರಾಕರ್ಸ್ ತಂಡ ಪಡೆದುಕೊಂಡಿತು. ಈ ತಂಡಕ್ಕೆ 15000 ನಗದು ಹಾಗೂ ಟ್ರೋಫಿಯನ್ನು ವಿತರಿಸಲಾಯಿತು. ಮಡಿಕೇರಿಯ ಕುಲಾಲ ಬ್ರದರ್ಸ್ 11 ತಂಡ ತೃತೀಯ ಸ್ಥಾನ ಪಡೆದು 5000 ನಗದು ಹಾಗೂ ಟ್ರೊಫಿಯನ್ನು , ಮೂರ್ನಾಡಿನ ಟೀಮ್ ಶ್ರೀದೇವಿ ತಂಡ ನಾಲ್ಕನೇ ಸ್ಥಾನ ತನ್ನದಾಗಿಸಿಕೊಂಡಿತು.. :: ವೈಯಕ್ತಿಕ ಪ್ರಶಸ್ತಿಗಳು :: ಮ್ಯಾನ್ ಆಫ್ ದಿ ಸೀರೀಸ್- ದುರ್ಗಾ ಪ್ರಸಾದ್, ಎಮರ್ಜಿಂಗ್ ಪ್ಲೇಯರ್- ಹೇಮಂತ್, ಬೆಸ್ಟ್ ಬೌಲರ್-ದಿಲೀಪ್ ಕುಲಾಲ್, ಮ್ಯಾನ್ ಆಫ್ ದಿ ಮ್ಯಾಚ್ -ಯಶಸ್, ಅತಿ ಹೆಚ್ಚು…

Read More

ಮಡಿಕೇರಿ ನ.5 NEWS DESK : ಬೆಂಗಳೂರಿನ ವಿಧಾನಸೌಧ  ಕಚೇರಿಯಲ್ಲಿ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಹಿಂದುಳಿದ ವರ್ಗಗಳ ಸಮಾವೇಶ ನಡೆಸುವ ಕುರಿತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರೊಂದಿಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತಿತೀರ ಧರ್ಮಜ ಉತ್ತಪ್ಪ, ಜಿಲ್ಲಾ ಒ ಬಿ ಸಿ ಘಟಕದ ಅಧ್ಯಕ್ಷ  ಬಾನಂಡ ಪ್ರತ್ಯು, ಪೊನ್ನಂಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾದ ಕೇಚಮಾಡ ಸಿದ್ದು ನಾಚಪ್ಪ  ಉಪಸ್ಥಿತರಿದ್ದರು.

Read More

ಮಡಿಕೇರಿ ನ.5 NEWS DESK : ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ  ಕರ್ನಾಟಕ ಅರಣ್ಯ ಶಾಸ್ತ್ರ ವಿದ್ಯಾರ್ಥಿಗಳ ಮತ್ತು ಪದವೀಧರರ ಸಂಘದ ಮುಷ್ಕರ ಸ್ಥಳಕ್ಕೆ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರು ಭೇಟಿ ನೀಡಿ ನೀಡಿದರು. ಅರಣ್ಯ ಮಹಾವಿದ್ಯಾಲಯ ಶಿರಿಸಿ, ಅರಣ್ಯ ಮಹಾವಿದ್ಯಾಲಯ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ  ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಯಾದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಸಂರಕ್ಷಣಾಧಿಕಾರಿ ಉಪ ವಲಯ ಅರಣ್ಯಾಧಿಕಾರಿ ಹುದ್ದೆಯ ನೇರ ನೇಮಕಾತಿಯಲ್ಲಿ ಬಿಎಸ್ಸಿ ಅರಣ್ಯಶಾಸ್ತ್ರ ಶಾಸ್ತ್ರ ಪದವಿಯನ್ನೇ ಕನಿಷ್ಠ ವಿದ್ಯಾರ್ಹತೆಯನ್ನಾಗಿ ಮಾಡುವ ಕುರಿತು ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು ಹಾಗೂಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್ ಪೊನ್ನಣ್ಣ ಅವರು ಬೇಡಿಕೆಗಳನ್ನು ಪರಿಶೀಲಿಸುವುದಾಗಿ ತಿಳಿಸಿದರು. ನಿಮ್ಮ ಬೇಡಿಕೆ ಬಗ್ಗೆ ಚರ್ಚಿಸಿದ್ದೇವೆ. ನಮ್ಮ ಸರ್ಕಾರ ಬಂದ ಮೇಲೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ನಿಮಗೆಲ್ಲ ಉಜ್ವಲ ಭವಿಷ್ಯವಿದೆ ನಿಮ್ಮ…

Read More

ಮಡಿಕೇರಿ ನ.5 NEWS DESK : ವಿರಾಜಪೇಟೆ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಪಿ.ವಿ.ಜಾನ್ಸನ್ ಹಾಗೂ ಸದಸ್ಯರುಗಳು ಬೆಂಗಳೂರಿನ ವಿಧಾನಸೌಧದ ಕಚೇರಿಯಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ವಿರಾಜಪೇಟೆ ತಾಲೂಕಿನಲ್ಲಿ ನಮ್ಮ ಸರಕಾರದ ಪಂಚ ಭಾಗ್ಯಗಳ ಫಲಾನುಭವಿಗಳ ಪಟ್ಟಿ ಹಾಗೂ ವಿವರಗಳನ್ನು  ಶಾಸಕರಿಗೆ ನೀಡಿ, ಮುಂದಿನ ದಿನಗಳಲ್ಲಿ ವಿರಾಜಪೇಟೆ ತಾಲೂಕು ಮಟ್ಟದ ಗ್ಯಾರಂಟಿ ಫಲಾನುಭವಿಗಳ ಸಮಾವೇಶವನ್ನು ನಡೆಸಲು ಅನುಮತಿ ಕೋರಿ ಮನವಿ ಸಲ್ಲಿಸಿದರು. ಮನವಿಯನ್ನು ಪರಿಶೀಲಿಸಿದ ಶಾಸಕರು ಇದೆ ತಿಂಗಳಲ್ಲಿ ತಾಲೂಕು ಮಟ್ಟದ ಸಮಾವೇಶ ಮಾಡಲು ದಿನಾಂಕ ಹಾಗೂ ಸಮಯ ನೀಡುವ ಭರವಸೆ ನೀಡಿದರು.

Read More

ಮಡಿಕೇರಿ NEWS DESK ನ.4 : ಸಮಾಜ ಸೇವಕರು, ರಾಜಕೀಯ ಮುಖಂಡರು ಮತ್ತು ಉದ್ಯಮಿಗಳಾದ ನಾಪಂಡ ಮುತ್ತಪ್ಪ ಹಾಗೂ ಮುದ್ದಪ್ಪ ಸಹೋದರರ ಜನ್ಮ ದಿನವನ್ನು ನಾಪಂಡ ಮುತ್ತಪ್ಪ, ಮುದ್ದಪ್ಪ ಅಭಿಮಾನಿ ಬಳಗ ಅರ್ಥಪೂರ್ಣವಾಗಿ ಆಚರಿಸಿತು. ಜನ್ಮ ದಿನದ ಪ್ರಯುಕ್ತ ಬಳಗದ ಪ್ರಮುಖರು ಇಂದು ಮಡಿಕೇರಿಯ ಜಿಲ್ಲಾಸ್ಪತ್ರೆಯ 400 ಕ್ಕೂ ಹೆಚ್ಚು ಒಳ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿ ಆರೋಗ್ಯ ವಿಚಾರಿಸಿದರು. ಅಭಿಮಾನಿ ಬಳಗದ ತೆಕ್ಕಡ ಸಂತೋಷ್ ಕಾರ್ಯಪ್ಪ, ಕುಟ್ಟಪ್ಪ, ಬೆಳ್ಯಪ್ಪ, ತಂಬುಕುತ್ತಿರ ಭೀಮಯ್ಯ, ಪೂಣಚ್ಚ, ಅನಿಲ್, ಜೀವನ್, ರಮೇಶ್ ಹಾಗೂ ಮಡಿಕೇರಿ ವಿಭಾಗದ ಯುವ ಮುಖಂಡ ನಾಪಂಡ ರವಿ ಮತ್ತಿತರರು ಈ ಸಂದರ್ಭ ಹಾಜರಿದ್ದರು.

Read More