ಲೇಖಕ: admin

ಮಡಿಕೇರಿ ಅ.24 NEWS DESK : ವಿಶ್ವ ಪೋಲಿಯೊ ನಿರ್ಮೂಲನಾ ದಿನದ ಅಂಗವಾಗಿ ರೋಟರಿ ಮಡಿಕೇರಿ ವುಡ್ಸ್ ನ ವತಿಯಿಂದ ನಗರದ ಹಲವಾರು ಕಡೆಗಳಲ್ಲಿ ಪೋಲಿಯೊ ನಿಮೂ೯ಲನ ಸಂದೇಶದ ಪೋಸ್ಟರಗಳನ್ನು ಅಳವಡಿಸಲಾಯಿತು. ನಗರಸಭಾಧ್ಯಕ್ಷೆ ಕಲಾವತಿ ಈ ಅಭಿಯಾನಕ್ಕೆ ನಗರಸಭೆ ಮುಂಬದಿ ಚಾಲನೆ ನೀಡಿದರು. ಪ್ರತೀ ಮನೆಯಲ್ಲಿಯೂ ಎರಡರಿಂದ ಆರು ವರ್ಷದ ಒಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೊ ಲಸಿಕೆ ಹಾಕಿಸಿಕೊಳ್ಳುವಂತೆ ಕಲಾವತಿ ಮನವಿ ಮಾಡಿದರು. ರೋಟರಿ ವುಡ್ಸ್ ವತಿಯಿಂದ ಸಾವ೯ಜನಿಕರಲ್ಲಿ ಜಾಗ್ರತಿ ಉಂಟು ಮಾಡುವ ಈ ವಿನೂತನ ಅಭಿಯಾನವನ್ನು ಅವರು ಶ್ಲಾಘಿಸಿದರು. ವಿಶ್ವದಾದ್ಯಂತ ಪೊಲಿಯೋ ನಿಮೂ೯ಲನೆಯಲ್ಲಿ ಅಂತರರಾಷ್ಟ್ರೀಯ ಸೇವಾ ಸಂಸ್ಥೆಯಾದ ರೋಟರಿ ಅತ್ಯಂತ ಮಹತ್ವದ ಪಾತ್ರ ವಹಿಸಿದ್ದು ಲಕ್ಷಾಂತರ ಮಕ್ಕಳು ವಿಶೇಷಚೇತನರಾಗುವುದನ್ನು ಪೊಲಿಯೋ ನಿರೋಧಕ ಲಸಿಕೆ ಮೂಲಕ ರೋಟರಿ ತಪ್ಪಿಸಿದೆ ಎಂದು ರೋಟರಿ ವುಡ್ಸ್ ಅಧ್ಯಕ್ಷ ಕಿರಣ್ ಕುಂದರ್ ಮಾಹಿತಿ ನೀಡಿದರು. ಜನರಲ್ಲಿ ಜಾಗ್ರತಿ ಉಂಟು ಮಾಡುವ ನಿಟ್ಟಿನಲ್ಲಿ ರೋಟರಿ ವುಡ್ಸ್ ವತಿಯಿಂದ ನಗರವ್ಯಾಪ್ತಿಯಲ್ಲಿ ಜಾಗೖತಿ ಸಂದೇಶದ ಪೋಸ್ಟರ್, ಬ್ಯಾನರ್ ಅಳವಡಿಸಲಾಗಿದೆ ಎಂದೂ…

Read More

ಮಡಿಕೇರಿ ಅ.23 NEWS DESK : ರಾಷ್ಟ್ರದ ಉದ್ದಗಲಕ್ಕೂ ನಿರಂತರವಾಗಿ ನಡೆಯುತ್ತಿರುವ ಅಪ್ರಾಪ್ತರು, ಯುವತಿಯರು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಅತ್ಯಾಚಾರಿಗಳಿಗೆ ಮರಣ ದಂಡನೆ ವಿಧಿಸಬೇಕೆಂದು ಆಗ್ರಹಿಸಿ ಮಹಿಳೋದಯ ಮಹಿಳಾ ಒಕ್ಕೂಟ(ಓಡಿಪಿ) ನಗರದಲ್ಲಿ ಪ್ರತಿಭಟನೆ ನಡೆಸಿತು. ಜಿಲ್ಲಾಧಿಕಾರಿಗಳ ಕಛೇರಿ ಎದುರು ಘೋಷಣೆಗಳೊಂದಿಗೆ ಪ್ರತಿಭಟನೆ ನಡೆಸಿದ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಕಠಿಣ ಕಾನೂನು ಜಾರಿಯ ಮೂಲಕ ಸ್ತ್ರೀಯರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು. ಒಕ್ಕೂಟದ ವಲಯ ಸಂಯೋಜಕರಾದ ಜಾಯ್ಸ್ ಮೆನೇಜಸ್ ಮಾತನಾಡಿ, ಹೆಣ್ಣು ಮಕ್ಕಳು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಾನೂನುಗಳನ್ನು ರೂಪಿಸಿದ್ದರು, ದೌರ್ಜನ್ಯ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಠಿಣ ಕಾನೂನು ಕ್ರಮಗಳನ್ನು ರೂಪಿಸಬೇಕೆಂದು ಒತ್ತಾಯಿಸಿದರು. *ಪಿಂಚಣಿ ಹೆಚ್ಚಿಸಿ* ಪ್ರಸ್ತುತ ರಾಜ್ಯ ಸರ್ಕಾರವು ವಿಧವಾ ಪಿಂಚಣಿ, ವೃದ್ಧಾಪ್ಯ ಪಿಂಚಣಿ ಮತ್ತು ವಿಶೇಷ ಚೇತನರಿಗೆ ಪಿಂಚಣಿಯಾಗಿ ಮಾಸಿಕ 800 ರೂ.ಗಳಿಂದ 1200 ರೂ.ಗಳನ್ನು ನೀಡುತ್ತಿದ್ದು, ಇದು…

Read More

ಮಡಿಕೇರಿ ಅ.23 NEWS DESK : ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಇವರ ಆಶ್ರಯದೊಂದಿಗೆ ಅಕ್ಟೋಬರ್ 31 ರಂದು ಬೆಳಗ್ಗೆ 9.30 ಗಂಟೆಗೆ ಗುಡ್ಡೆಮನೆ ಅಪ್ಪಯ್ಯ ಗೌಡರ ಸ್ಮಾರಕ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದ ಬಳಿ ಸ್ವಾತಂತ್ರ್ಯ ಹೋರಾಟಗಾರ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರ ಸಂಸ್ಮರಣಾ ದಿನಾಚರಣೆ ಹಾಗೂ ಕೋಟೆ ಆವರಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್ ಭೋಸರಾಜು, ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ, ವಿಶ್ರಾಂತ ಪ್ರಾಂಶುಪಾಲರು, ಇತಿಹಾಸ ಪ್ರಾಧ್ಯಾಪಕರಾದ ನಂಗಾರು ನಿಂಗರಾಜು, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಂಥರ್‍ಗೌಡ, ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ, ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ರಾಜ್ಯಸಭಾ ಸದಸ್ಯರಾದ ಅಜಯ್ ಮಾಕನ್,…

Read More

ಮಡಿಕೇರಿ ಅ.24 NEWS DESK : ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಧೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅವರು ಪ್ರತಿಯೊಬ್ಬರಿಗೂ ಮಾದರಿ ಎಂದು ಶಾಲಾ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕರಾದ ಕೆ.ಆರ್.ಬಿಂಧು ಅವರು ತಿಳಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಗುರುವಾರ ನಡೆದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬಾಲ್ಯದಲ್ಲಿಯೇ ಕತ್ತಿ ವರಸೆ, ಬಿಲ್ಲುಗಾರಿಕೆ, ಕುದುರೆ ಸವಾರಿ ಕಲಿತಿದ್ದ ಕಿತ್ತೂರು ರಾಣಿ ಚೆನ್ನಮ್ಮ ಅವರು 1857 ರ ಸ್ವಾತಂತ್ರ್ಯ ಹೋರಾಟಕ್ಕಿಂತ ಮೊದಲು ಬ್ರಿಟಿಷರ ವಿರುದ್ಧ ಹೋರಾಡಿದ್ದರು ಎಂದು ತಿಳಿಸಿದರು. ‘ಕಪ್ಪ ಕೊಡಬೇಕೆ ಕಪ್ಪ?  ನಿಮಗೇಕೆ ಕೊಡಬೇಕು ಕಪ್ಪ? ನೀವು ಏನು ಒಡಹುಟ್ಟಿದವರೆ, ನೆಂಟರೆ, ಬಂಧುಗಳೇ, ನೀವೇನು ಇಲ್ಲಿ ಉತ್ತಿರ, ಬಿತ್ತಿರ.. ರೈತರು ಕೃಷಿಕರು ಈ ಕೆಲಸ ಮಾಡುತ್ತಾರೆ. ಕಬ್ಬು ತಿನ್ನಲು ಬಿಟ್ಟ ತಪ್ಪಿಗೆ ಕೂಲಿ ಕೊಡಬೇಕಾ, ಕಿತ್ತೂರು ಕಟ್ಟಿ ಬೆಳೆಸಿದ ಆಸ್ತಿ ಏನು,…

Read More

ನಾಪೋಕ್ಲು ಅ.24 NEWS DESK : ಕೊಣಂಜಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಳ್ಳಡ, ಪೆಬ್ಬಾಟಂಡ ಕುಟುಂಬಸ್ಥರ ಮನೆಗಾಗಿ ತೆರವಳುವ ರಸ್ತೆಯನ್ನು ಗ್ರಾಮಸ್ಥರು ಶ್ರಮದಾನದ ಮೂಲಕ ದುರಸ್ತಿಗೊಳಿಸಿದರು. ಪಾರಾಣೆ ಬೇತ್ರಿ ಸಂಪರ್ಕ ರಸ್ತೆಯಿಂದ ಮಳ್ಳಡ, ಪೆಬ್ಬಾಟಂಡ ಕುಟುಂಬಸ್ಥರ ಮನೆಗಾಗಿ ಬಲಮುರಿಯ ನಾಲ್ಕು ರಸ್ತೆಗಳನ್ನು ಸಂಪರ್ಕಿಸುವ ರಸ್ತೆ ದುರಸ್ತಿ ಕಾಣದೆ ತೀವ್ರ ಹದಗೆಟ್ಟಿದ್ದು, ಇತ್ತ ಯಾರು ಗಮನ ಹರಿಸದ ಗ್ರಾಮಸ್ಥರೆ ಶ್ರಮದಾನದ ಮೂಲಕ ದುರಸ್ತಿ ಕೈಗೊಂಡರು. ರಸ್ತೆಗಳಲ್ಲಿ ದೊಡ್ಡ ಪ್ರಮಾಣದ ಗುಂಡಿಗಳಾಗಿದ್ದು ಸಂಚಾರ ಕಷ್ಟಕರವಾಗಿತ್ತು. ಗ್ರಾಮಸ್ಥರು ಸೇರಿ ರಸ್ತೆ ಬದಿಯಲ್ಲಿ ಆವರಿಸಿದ್ದ ಕಾಡು ಗಿಡ ಗಂಟಿಗಳನ್ನು ಕಡಿದು ಸ್ವಚ್ಚಗೊಳಿಸಿ, ಗುಂಡಿಮುಚ್ಚಿದರು. ಗ್ರಾಮಸ್ಥರಾದ ಬೈರಿಕುಂದಿರ ಅಯ್ಯಪ್ಪ, ಸೋಮಯ್ಯ, ಮನು, ವಿನು ಮಳ್ಳಡ ಚಿಣ್ಣಪ್ಪ, ಸುಬ್ಬಯ್ಯ, ತಿಮ್ಮಯ್ಯ, ಗಣೇಶ, ಪೊನ್ನಚ್ಚನ ಸೋಮಣ್ಣ, ಹರೀಶ್, ರೋಹನ್ ಇತರರು ಪಾಲ್ಗೊಂಡಿದ್ದರು. ವರದಿ : ದುಗ್ಗಳ ಸದಾನಂದ 

Read More

ನಾಪೋಕ್ಲುಅ.24 NEWS DESK : ಚೆಡಾವು ಆದರ್ಶ್ ಫ್ರೆಂಡ್ಸ್ ವತಿಯಿಂದ 13ನೇ ಗೋ ಪೂಜೆ ನಡೆಯಿತು. ಚೆಡಾವುನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾಗ್ಮಿ ವಿಕ್ರಂತ್ ದೇಲಂಪಡಿ ಧಾರ್ಮಿಕ ಉಪನ್ಯಾಸ ನೀಡಿದರು. ಈ ಸಂದರ್ಭ ಮಾತೆಯರು ಗೋವಿಗೆ ಪೂಜೆಯನ್ನು ಸಲ್ಲಿಸಿದರು. ಸಂಘದ ಅಧ್ಯಕ್ಷರಾದ ಸುನಿಲ್ ಸಂಪಾಜೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಮಾ ದೇವಿ ಬಾಲಚಂದ್ರ ಕಳಗಿ ಹಾಗೂ ಆದರ್ಶ್ ಫ್ರೆಂಡ್ಸ್ ನ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಹಾಗೂ ಮಹಿಳಾ ಪದಾಧಿಕಾರಿಗಳು ಗ್ರಾಮಸ್ಥರು ಪಾಲ್ಗೊಂಡಿದ್ದರು. ವರದಿ : ದುಗ್ಗಳ ಸದಾನಂದ. 

Read More

         ನಾಪೋಕ್ಲು ಅ.24 NEWS DESK : ಕಕ್ಕಬೆಯ ಪಾಡಿ ಶ್ರೀ ಇಗ್ಗುತ್ತಪ್ಪ  ದೇವಾಲಯದಲ್ಲಿ  ಪತ್ತಾಲೋಧಿ  ಆರಾಧನೆ ಕಾರ್ಯಕ್ರಮ ಅ.27 ರ0ದು  ಜರುಗಲಿದೆ. ಆದಿಮಾತೆ ಶ್ರೀ ಕಾವೇರಿಯ ತೀರ್ಥೋದ್ಭವ ಕಳೆದು ಸಂಪ್ರದಾಯಸ್ಥರ ಮನೆಗಳಲ್ಲಿ ಜರುಗುವ “ಕಣಿಪೂಜೆಯ” ದಿನದ ಸೂರ್ಯೋದಯದಿಂದ ಸರಿಯಾಗಿ  ಹತ್ತನೇ ಸೂರ್ಯೋದಯದ ದಿನದಂದು ಕೊಡಗಿನಾದ್ಯಂತ ಪತ್ತಾಲೋಧಿ ಅಂದರೆ ಹತ್ತನೇ ಪವಿತ್ರ ದಿನವು “ತೊಲೆಯಾರ್ ಪತ್ತ್” ಎಂಬ ಪ್ರತೀತಿ ಪಡೆದಿದೆ. ಶುಭ ಕಾರ್ಯಗಳಿಗೆ ಅತ್ಯಂತ ಪ್ರಶಸ್ತವಾದ ಈ ದಿನ ಕೊಡವ    ಸಂಪ್ರದಾಯದಂತೆ ಕೈಗೊಳ್ಳುವ ಯಾವುದೇ ಕಾರ್ಯವು ಕಾರ್ಯಗತವಾಗುವುದಲ್ಲದೇ, ದೇವಾ ನುಗ್ರಹದೊಂದಿಗೆ ಅಕ್ಷಯವಾಗುವುದೆಂಬ ನಂಬಿಕೆ. ಪಾಡಿಯಲ್ಲಿ ಪರದಂಡ ಕುಟುಂಬಸ್ಥರ ವತಿಯಿಂದ ಸಂಪ್ರದಾಯದಂತೆ ಆ ದಿವಸ ಅಂದರೆ ಸೋಮವಾರ ತಾರೀಕು 27ರಂದು “ತೊಲೆಯಾರ್ ಪತ್ತ್ ಆರಾಧನೆ ” ನಡೆಯಲಿದೆ. ಅಂದು ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿದ್ದು, ತುಲಾಭಾರ ಸೇವೆಗಳು ಮಹಾಪೂಜೆಗಳು ನಡೆಯಲಿದೆ ಎಂದು ಪರದಂಡ ಕುಟುಂಬಸ್ಥರು ತಿಳಿಸಿದ್ದಾರೆ. ಅಲ್ಲದೆ ಭಕ್ತಾದಿಗಳು ಆಗಮಿಸಿ ಪಾಡಿ ಶ್ರೀ ಇಗ್ಗುತ್ತಪ್ಪ ದೇವರ ದರ್ಶನ ಪಡೆದು ಕೃಪಾಶೀರ್ವಾದಗಳಿಗೆ ಪಾತ್ರರಾಗಲು ವಿನಂತಿಸಿದ್ದಾರೆ.…

Read More

ಮಡಿಕೇರಿ NEWS DESK ಅ.24 : 2024- 25ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ನ ವಿದ್ಯಾರ್ಥಿಗಳು ಹಾಗೂ ಪ್ರೊಫೆಸರ್ ಗಳಾಗಿ ಬಡ್ತಿ ಹೊಂದಿದ 10 ಮಂದಿ ಬೋಧಕರಿಗೆ ಸಿಬ್ಬಂದಿಗಳಿಗೆ ಅ.25ರಂದು ದಲಿತ ಸಂಘರ್ಷ ಸಮಿತಿಯ ವತಿಯಿಂದ ಸನ್ಮಾನ ಸಮಾರಂಭ ನಡೆಯಲಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ಅವರು ಶನಿವಾರ ಬೆಳಿಗ್ಗೆ 10.30 ಗಂಟೆಗೆ ಫೀ.ಮಾ.ಕಾರ್ಯಪ್ಪ ಕಾಲೇಜು ಸಭಾಂಗಣದಲ್ಲಿ ನಡೆಯುವ ಸಮಾರಂಭವನ್ನು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಅಶೋಕ ಸಂಗಪ್ಪ ಅಲೋರ ಅವರು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದ್ದಾರೆ. ದಲಿತ ಸಂಘರ್ಷ ಸಮಿತಿಯ ಮಡಿಕೇರಿ ತಾಲ್ಲೂಕು ಸಂಚಾಲಕ ದೀಪಕ್ ಪೊನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಕ್ಕಳ ತಜ್ಞ ಡಾ.ನವೀನ್ ಬಿ.ಸಿ ಅವರು ‘ಪದವಿಯ ನಂತರ ಉದ್ಯೋಗಾವಕಾಶಗಳು ಹಾಗೂ ಉನ್ನತ ವಿದ್ಯಾಭ್ಯಾಸ ಮಾಡಿದರೆ ಸಮಾಜದಲ್ಲಿ ಆಗುವ ಬದಲಾವಣೆಗಳು’ ವಿಷಯದ ಕುರಿತು ಮುಖ್ಯ ಭಾಷಣ ಮಾಡಲಿದ್ದಾರೆ. ಜಿಲ್ಲಾ ಪೊಲೀಸ್…

Read More

ಮಡಿಕೇರಿ NEWS DESK ಅ.24 : ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸುವ ಉದ್ದೇಶದದಿಂದ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ನ.1 ರಂದು ನವದೆಹಲಿ ಚಲೋ ಕೊಡವ ಸತ್ಯಾಗ್ರಹ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸಂವಿಧಾನದ 6 ನೇ ಶೆಡ್ಯೂಲ್ ಅಡಿಯಲ್ಲಿ ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆಯ ಮೂಲಕ ಸ್ವ-ನಿರ್ಣಯ ಮತ್ತು ಸ್ವ-ಆಡಳಿತದ ಹಕ್ಕೊತ್ತಾಯಗಳ ಪರ ಹೋರಾಟ ನಡೆಸುತ್ತಿರುವ ಸಿಎನ್‌ಸಿ ಸಂಘಟನೆ ನ.1ರಂದು ನವದೆಹಲಿಯ ಜಂತರ್ ಮಂತರ್ ನಲ್ಲಿ ಶಾಂತಿಯುತ ಸತ್ಯಾಗ್ರಹವನ್ನು ನಡೆಸಲಿದೆ. ರಾಜ್ಯ ಮರುಸಂಘಟನಾ ದಿನವನ್ನು “ಕೊಡವ ನೆಲದ ದುರಾಕ್ರಮಣದ ದಿನ” ಎಂದು ಆಚರಿಸುವುದಾಗಿ ಮಾಹಿತಿ ನೀಡಿದ್ದಾರೆ. 1956 ಏಕ-ಜನಾಂಗೀಯ ಆನಿಮಿಸ್ಟಿಕ್ ಕೊಡವರು ಪ್ರೀತಿಯ ತಾಯ್ನಾಡನ್ನು ಅಂದರೆ ಹಿಂದಿನ “ಸಿ” ಭಾಗವಾದ ಕೊಡವರ ರಾಜ್ಯವನ್ನು ಕಳೆದುಕೊಂಡ ದಿನ. ಇದು 20 ನೇ ಶತಮಾನದ ಅತ್ಯಂತ ದೊಡ್ಡ ಭೌಗೋಳಿಕ-ರಾಜಕೀಯ ಉತ್ಪಾತವಾಗಿದೆ. ರಾಜ್ಯ ಮರುಸಂಘಟನಾ ಕಾಯ್ದೆಯಡಿ ನಮ್ಮ ರಾಜ್ಯವನ್ನು ವಿಲೀನಗೊಳಿಸಿದ ನಂತರ ಕೊಡವರು ತಮ್ಮ ಸ್ವಂತ ತಾಯ್ನಾಡಿನಲ್ಲಿ…

Read More

ಮಡಿಕೇರಿ NEWS DESK ಅ.22 : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ಪ್ರತಿಷ್ಠಿತ “ಬಿ.ಎಸ್.ಗೋಪಾಲಕೃಷ್ಣ ದತ್ತಿ ಪ್ರಶಸ್ತಿ”ಗೆ ಕೊಡಗು ಜಿಲ್ಲೆಯ ಪುರುಷ ಲೇಖಕರು ಬರೆದು ಪ್ರಕಟಿಸಿದ ಕನ್ನಡ ಭಾಷೆಯ ಕೃತಿಗಳನ್ನು ಆಹ್ವಾನಿಸಲಾಗಿದೆ. ಶಕ್ತಿ ಪತ್ರಿಕೆಯ ಸ್ಥಾಪಕ ಸಂಪಾದಕರಾಗಿದ್ದ ದಿ. ಬಿ.ಎಸ್ ಗೋಪಾಲಕೃಷ್ಣರವರ ಜ್ಞಾಪಕಾರ್ಥ ಅವರ ಪುತ್ರ ಅನಂತಶಯನ ಮತ್ತು ಸಹೋದರರು ಪುರುಷ ಲೇಖಕರನ್ನು ಪ್ರೋತ್ಸಾಹಿಸುವ ಸಲುವಾಗಿ ಈ ದತ್ತಿ ಸ್ಥಾಪನೆ ಮಾಡಿರುತ್ತಾರೆ. 2025-26ನೇ ಸಾಲಿನ ಪ್ರಶಸ್ತಿ ಪುರಸ್ಕಾರ ಪಡೆಯಲು ಆಸಕ್ತ ಲೇಖಕರು ತಾವು ರಚಿಸಿದ ಪುಸ್ತಕದ ನಾಲ್ಕು  ಪ್ರತಿಗಳನ್ನು  ಅರ್ಜಿಯೊಂದಿಗೆ ಕಳುಹಿಸಿ ತಕ್ಕದ್ದು. 2020ರ ನಂತರ ಪ್ರಕಟಿತ  ಪುಸ್ತಕಗಳನ್ನು ಮಾತ್ರ ಕಳುಹಿಸಿತಕ್ಕದ್ದು. ಸ್ಪರ್ಧೆಗೆ ಪುಸ್ತಕ ಕಳುಹಿಸುವ ಲೇಖಕ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿರಬೇಕು. ಓರ್ವ ಲೇಖಕ ಒಂದು ಕೃತಿಯನ್ನು ಮಾತ್ರ ಕಳುಹಿಸತಕ್ಕದ್ದು. ಲಕೊಟೆಯ ಮೇಲೆ  *”ಬಿ.ಎಸ್.ಗೋಪಾಲಕೃಷ್ಣ ದತ್ತಿ ಪ್ರಶಸ್ತಿ”ಗೆ* ಎಂದು ಬರೆಯತಕ್ಕದ್ದು. ಕೊಡಗು ಜಿಲ್ಲೆಯ ಲೇಖಕರಿಗೆ ಮಾತ್ರ ಅವಕಾಶ. ಪುಸ್ತಕಗಳನ್ನು ಕಳುಹಿಸಲು ಕೊನೆಯ ದಿನಾಂಕ 05.11.2025. ಕಳುಹಿಸಬೇಕಾದ ವಿಳಾಸ : ಅಧ್ಯಕ್ಷರು, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅಂಬೇಡ್ಕರ್ ಭವನದ ಬಳಿ, ಸುದರ್ಶನ…

Read More