ಲೇಖಕ: admin

ಚೆಟ್ಟಳ್ಳಿ ಡಿ.10 NEWS DESK : ಮಡಿಕೇರಿ ಸಮೀಪದ ಕಡಗದಾಳುವಿನ ಕುರುಳಿ ಅಂಬಲ ಮಂದ್ ನಲ್ಲಿ ಪುತ್ತರಿ ಕೋಲಾಟ್ ಸಾಂಪ್ರದಾಯಿಕವಾಗಿ ನಡೆಯಿತು. ಊರಿನವರು ಮಂದ್ ನಲ್ಲಿ ಸೇರಿ ಊರ್ ತಕ್ಕರ‌ ಮನೆಗೆ ತೆರಳಿ ಫಲಹಾರ ಊಟೋಪಚಾರದ ನಂತರ ತಳಿಯಕ್ಕಿ ಬೊಳ್ ಚ ದುಡಿಕೊಟ್ಟ್ ಪಾಟ್ ಒಡ್ಡೋಲಗದೊಂದಿಗೆ ಊರ್ ತಕ್ಕರನ್ನು ಮಂದ್ ಗೆ ಕರೆತರಲಾಯಿತು. ನಂತರ ಊರ್ ಕೋಲ್ ನಡೆಯಿತು. ದೇಶ ತಕ್ಕರನ್ನು ಹಾಗೂ ನಾಡು ತಕ್ಕರಾದ ಪಾಂಡಿರ ಕುಟುಂಬಸ್ಥರನ್ನು ಮಂದ್ ಗೆ ಕರೆತಂದು ಸತ್ಕರಿಸಲಾಯಿತು. ಮೂಲ‌ನೆಲೆಯಲ್ಲಿ ದೇವರನ್ನು ಪ್ರಾರ್ಥಿಸಿ ನಾಡ್ ಕೋಲ್ , ಬಾಳೋಪಾಟ್, ಬೊಳಕಾಟ್ ಪರೆಯ ಕಳಿ, ವಾಲಗತಾಟ್ ನಡೆಯಿತು. ಫಲಹಾರದ ನಂತರ ದುಡಿಕೊಟ್ ಪಾಟ್, ಒಡ್ಡೋಲಗದೊಂದಿಗೆ ಊರುತಕ್ಕರನ್ನು ತಕ್ಕರ ಮನೆಗೆ ಬೀಳ್ಕೊಡಲಾಯಿತು. ಕಾರ್ಯಕ್ರಮದಲ್ಲಿ ಮಂದ್ ಸಮಿತಿಯ ಅಧ್ಯಕ್ಷರಾದ ಮಾದೇಟಿರ ಬೆಳ್ಯಪ್ಪ, ಊರಿನ ತಕ್ಕರಾದ ಕೊರವಂಡ ರಾಮು ಅಯ್ಯಪ್ಪ, ಏಳು ನಾಡಿನ ತಕ್ಕಮುಖ್ಯಸ್ಥರು ಸೇರಿದಂತೆ ಊರಿನ ಹಿರಿಯರು, ಪುರುಷರು, ಮಹಿಳೆಯರು ಹಾಗೂ ಮಕ್ಕಳು ಭಾಗವಹಿಸಿದರು. ಡಿ.10 (ಇಂದು) ಮಹಾ ವಿಷ್ಣು…

Read More

ನಾಪೋಕ್ಲು ಡಿ.10 NEWS DESK : ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಭಾರತೀಯ ಸಂಬಾರ ಮಂಡಳಿ ಮಡಿಕೇರಿ ಹಾಗೂ ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆ ಅಪ್ಪಂಗಳ ಇದರ ಜಂಟಿ ಆಶ್ರಯದಲ್ಲಿ ಕಾಳುಮೆಣಸು ಹಾಗೂ ಏಲಕ್ಕಿ ಬೆಳೆಗಳ ಬಗ್ಗೆ ತರಬೇತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿ, ಕೃಷಿಕರು ಆಗಿಂದಾಗ್ಗೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೃಷಿಯಲ್ಲಿ ಋಷಿಯಾಗಿ ಖುಷಿ ಕಂಡವರಿದ್ದಾರೆ. ಅಂದರೆ ಕೃಷಿಕರಿಗೆ ತಲ್ಲೀನತೆ ಅಗತ್ಯ ಎಂದರು. ಪಿಎಲ್‍ಡಿ ಬ್ಯಾಂಕ್ ನ ನಿರ್ದೇಶಕರಾದ ಭುವನೇಶ್ವರ ಎನ್ ವಿ ರವರು ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಕಲಾ ಬಾಲಚಂದ್ರ ಉಪಾಧ್ಯಕ್ಷರಾದ ನಂಜಪ್ಪ ನಿಟ್ಟಿಮಲೆ ಸಂಸ್ಥೆಯ ಉಪಾಧ್ಯಕ್ಷರಾದ ಅಶೋಕ ಪಿ.ಎಂ.ಸಂಬಾರ ಮಂಡಳಿ ಅಧಿಕಾರಿಗಳಾದ ರಶ್ಮಿ ಯವರು ಹಾಗೂ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ಲೋಕೇಶ್ ಹೊದ್ದೆಟ್ಟಿ ರವರು ಉಪಸ್ಥಿತರಿದ್ದರು. ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆ ಅಪ್ಪಂಗಳದ ಹಿರಿಯ…

Read More

*ಕೇಂದ್ರ ಪ್ರವಾಸೋದ್ಯಮ ಸಚಿವರನ್ನು ಭೇಟಿ ಮಾಡಿ ಮೈಸೂರಿನ ಪ್ರವಾಸೋದ್ಯಮ ಯೋಜನೆಗಳ ಬಗ್ಗೆ ಚರ್ಚಿಸಿದ ಯದುವೀರ್‌” ಸಂಸದರಿಂದ ನಿರಂತರ ಚರ್ಚೆ, ಮನವಿಗಳ ನಂತರ ಯೋಜನೆಗಳಿಗೆ ದೊರೆತ ಅಂತಿಮ ಅನುಮೋದನೆ* *ಕೇಂದ್ರ ಸರ್ಕಾರ, ಪ್ರವಾಸೋದ್ಯಮ ಸಚಿವಾಲಯ ಸ್ವದೇಶ ದರ್ಶನ 2.0 ಸಂಬಂಧ ಮೈಸೂರು ಅಭಿವೃದ್ಧಿ ಯೋಜನೆಗಳ ಶೀಘ್ರ ಅನುಷ್ಠಾನ* ನವದೆಹಲಿ NEWS DESK ಡಿ. 9: ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಸ್ವದೇಶ ದರ್ಶನ 2.0 ಯೋಜನೆಯಡಿ ಮೈಸೂರಿನಲ್ಲಿ ಎರಡು ಪ್ರಮುಖ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ದೊರೆತಿದೆ ಎಂದು *ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌* ತಿಳಿಸಿದ್ದಾರೆ. ಕೇಂದ್ರ ಪ್ರವಾಸೋದ್ಯಮ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಸಂಸದರು ಈ ಮಾಹಿತಿ ಹಂಚಿಕೊಂಡಿದ್ದಾರೆ. *ಎರಡು ಯೋಜನೆಗಳಿಗೆ ಭರಪೂರ ಅನುದಾನ* ಈ ಎರಡೂ ಯೋಜನೆಗಳನ್ನು ಕರ್ನಾಟಕ ಪ್ರವಾಸೋದ್ಯಮ ಮೂಲ ಸೌಲಭ್ಯ ನಿಗಮ (KTIL) ಇದನ್ನು ಅನುಷ್ಠಾನಕ್ಕೆ ತರಲಿದೆ ಎಂದು ತಿಳಿಸಿದರು. *ಇಕಾಲಜಿಕಲ್ ಎಕ್ಸ್‌ಪೀರಿಯನ್ಸ್ ಝೋನ್‌ (EEZ)* ಮೈಸೂರಿನಲ್ಲಿ ಇಕಾಲಜಿಕಲ್ ಎಕ್ಸ್‌ಪೀರಿಯನ್ಸ್ ಝೋನ್ ಅಭಿವೃದ್ಧಿಗೆ 18.47 ಕೋಟಿ…

Read More

ಮಡಿಕೇರಿ ಡಿ.9 NEWS DESK : ಆಧುನೀಕತೆಯ ಸ್ಪರ್ಶವಿಲ್ಲದೆ, ಬದುಕಿನ ಅನುಭವಗಳನ್ನು ಯಾವುದೇ ಅಡೆ ತಡೆಗಳಿಲ್ಲದೆ ಸಾಹಿತ್ಯದ ಮೂಲಕ ಹೊರಹೊಮ್ಮಿಸುತ್ತಿದ್ದ ಹಿರಿಯ ಸಾಹಿತಿಗಳು ಇಂದಿನ ಯುವ ಪೀಳಿಗೆಗೆ ಸಾಹಿತ್ಯ ರಚನೆಯ ಕುರಿತು ಪ್ರೇರಣೆಯನ್ನು ನೀಡಬೇಕು ಎಂದು ಕವಿ ಕಾಜೂರು ಸತೀಶ್ ತಿಳಿಸಿದ್ದಾರೆ. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಪತ್ರಿಕಾ ಭವನ ಸಭಾಂಗಣದಲ್ಲಿ ನಡೆದ ‘ಹಿರಿಯರ ಕವಿಗೋಷ್ಠಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಕಲ್ಪನೆಯೇ ಇಲ್ಲದ ದಿನಗಳಲ್ಲಿ ಕುಟುಂಬದ ಸದಸ್ಯರೊಂದಿಗೆ ಸಂತೋಷದಿಂದ ಬೆರೆತು, ತಮ್ಮ ಅನುಭವಗಳನನ್ನು ಹಿರಿಯರು ಬರಹಕ್ಕಿಳಿಸುತ್ತಿದ್ದರು. ಅಂತಹ ಪರಿಸ್ಥಿತಿಗಳಿಗೆ ತದ್ವಿರುದ್ಧವಾಗಿರುವ ಸ್ಥಿತಿಯನ್ನು ನಾವಿಂದು ಕಾಣುತ್ತಿದ್ದೇವೆ, ಮೊಬೈಲ್, ಸಾಮಾಜಿಕ ಜಾಲತಾಣಗಳ ಹಾವಳಿ ಮೆದುಳನ್ನು ಕಿತ್ತು ಬಗೆದು ತಿನ್ನುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ಪ್ರಶಾಂತವಾದ ಅಂದಿನ ದಿನಮಾನಗಳ ಪರಿಸ್ಥಿತಿ ಇಂದು ಬದಲಾಗಿದೆ. ಇಂತಹ ಕಾಲ ಘಟ್ಟದಲ್ಲಿ ಹಿಂದಿನ ಮತ್ತು ಇಂದಿನ ಪರಿಸ್ಥಿತಿಗಳನ್ನು ಮಿಳಿತಗೊಳಿಸಿ ಸೃಜನಾತ್ಮಕವಾದ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವುದೇ ಒಂದು ದೊಡ್ಡ ಸವಾಲೆಂದು ಅಭಿಪ್ರಾಯಿಸಿದ…

Read More

ಮಡಿಕೇರಿ ಡಿ.9 NEWS DESK : ಬಲಮುರಿ ಗ್ರಾಮದ ಪೊನ್ನಚ್ಚನ ಸುಬ್ಬಯ್ಯ (85) ಇಂದು ಮಧ್ಯಾಹ್ನ ನಿಧನರಾಗಿದ್ದಾರೆ.  ಮೃತರ ಅಂತ್ಯಕ್ರಿಯೆ ಡಿ.10 ರಂದು ಮಧ್ಯಾಹ್ನ 2 ಗಂಟೆಗೆ ಸ್ವಗೃಹದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮೃತರು ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಸೊಸೆ, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.

Read More

ಮಡಿಕೇರಿ ಡಿ.9 NEWS DESK : ಆದಿಮ ಸಂಜಾತ ಏಕ-ಜನಾಂಗೀಯ ಆನಿಮಿಸ್ಟಿಕ್ ಕೊಡವರು 2026-27ರಲ್ಲಿ ನಡೆಯಲಿರುವ 16ನೇ ರಾಷ್ಟ್ರೀಯ ಜನಗಣತಿ ಸಂದರ್ಭ ಪ್ರತ್ಯೇಕವಾಗಿ ‘ಕೊಡವ’ ಎಂದು ದಾಖಲೀಕರಣಗೊಳ್ಳುವಂತೆ ಜನಜಾಗೃತಿ ಮೂಡಿಸುವ ಸಲುವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ 22ನೇ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ಡಿ.15 ರಂದು ತಿತಿಮತಿಯಲ್ಲಿ ನಡೆಯಲಿದೆ ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಬೆಳಿಗ್ಗೆ 10.30 ಗಂಟೆಗೆ ತಿತಿಮತಿಯಲ್ಲಿ ಶಾಂತಿಯುತವಾಗಿ ಮಾನವ ಸರಪಳಿ ನಿರ್ಮಿಸಲಾಗುವುದು ಮತ್ತು ಕೊಡವರ ಪರವಾದ ಸಿಎನ್‍ಸಿಯ ವಿವಿಧ ಬೇಡಿಕೆಗಳ ಕುರಿತು ಸರಕಾರದ ಗಮನ ಸೆಳೆಯಲಾಗುವುದು ಎಂದು ಹೇಳಿದ್ದಾರೆ.  ಕೊಡವಲ್ಯಾಂಡ್ ಭೂ ರಾಜಕೀಯ ಸ್ವಯಂ ಆಡಳಿತ, ಕೊಡವರಿಗೆ ವಿಶ್ವರಾಷ್ಟ್ರ ಸಂಸ್ಥೆಯ ಇಂಡಿಜಿನಸ್ ಪಿಪಲ್ಸ್ ರೈಟ್ಸ್, ಎಸ್.ಟಿ.ಪಟ್ಟಿಯಲ್ಲಿ ವರ್ಗೀಕರಣ, ಸಿಕ್ಕಿಂನ “ಸಂಘ” ಮತಕ್ಷೇತ್ರದಂತೆ ಸಂಸತ್ ಮತ್ತು ವಿಧಾನಸಭೆಯಲ್ಲಿ ವಿಶೇಷ ಪ್ರಾತಿನಿಧ್ಯ ನೀಡಬೇಕು. ಕೊಡವರ ಪೂರ್ವಾರ್ಜಿತ ಭೂ ಹಕ್ಕು ಮತ್ತು ಧಾರ್ಮಿಕ ಸಂಸ್ಕಾರ  ತೋಕ್ ಹಕ್ಕು ಚಿರಸ್ಥಾಯಿಯಾಗಿ ಮುಂದುವರೆಯಬೇಕು ಸೇರಿದಂತೆ…

Read More

ಮಡಿಕೇರಿ ಡಿ.9 NEWS DESK : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಕೊಡಗು ಇವರ ವತಿಯಿಂದ 2025-26 ನೇ ಸಾಲಿಗೆ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್, ಪಾರ್ಸಿ ಜನಾಂಗದವರಿಗೆ ಅರಿವು (ರಿನಿವಲ್) ಯೋಜನೆಯಡಿ ಸಾಲ ಸೌಲಭ್ಯ ನೀಡಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಅರಿವು ವಿಧ್ಯಾಭ್ಯಾಸ ಯೋಜನೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕೆಇಎ/ಸಿಇಟಿ/ನೀಟ್ ಮುಖಾಂತರ ಎಂಬಿಬಿಎಸ್, ಬಿ.ಡಿ.ಎಸ್,ಬಿ.ಇ/ಬಿ.ಟೆಕ್, ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್, ಬಿ ಆಯುಷ್, ಫಾರ್ಮಸಿ, ಫಾರ್ಮಸಿ, ಕೃಷಿ ವಿಜ್ಞಾನ ಮತ್ತು ಪಶು ವೈದ್ಯಕೀಯ ವ್ಯಾಸಂಗಗಳಿಗೆ ಆಯ್ಕೆಯಾಗಿ 2/3 ಅಥವಾ ನಂತರದ ವರ್ಷಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸಾಲ ನೀಡಲಾಗುತ್ತದೆ. ಅರಿವು (ರಿನಿವಲ್) ಯೋಜನೆಯಡಿ ಶೈಕ್ಷಣಿಕ ಸಾಲವನ್ನು ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ನಿಗಮದ ವೆಬ್‍ಸೈಟ್ https://kmdconline.karnataka.gov.in/ ಮೂಲಕ ಆನ್‍ಲೈನ್ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಅರ್ಜಿಗಳನ್ನು ಕಂಪ್ಯೂಟರ್ ನಲ್ಲಿ ಭರ್ತಿ ಮಾಡಿದ ಕೂಡಲೇ ಅರ್ಜಿಗಳನ್ನು ಪ್ರಿಂಟೌಟ್ ಪಡೆದು…

Read More

ಮಡಿಕೇರಿ ಡಿ.9 NEWS DESK : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆಯ ತರಬೇತಿ ಭವನ ನಿರ್ಮಾಣಕ್ಕೆ 2 ಕೋಟಿ ರೂ. ಅನುದಾನ ಬಿಡುಗಡೆಯಾಗಲಿದೆ ಎಂದು ಸಂಸ್ಥೆಯ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ ತಿಳಿಸಿದ್ದಾರೆ. ನಗರದ ಪೊನ್ನಮ್ಮ ಕುಶಾಲಪ್ಪ ಸ್ಕೌಟ್ಸ್ ಮತ್ತು ಗೈಡ್ಸ್ ಭವನ ಸಭಾಂಗಣದಲ್ಲಿ ನಡೆದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ತರಬೇತಿ ಭವನ ನಿರ್ಮಿಸಲು ರಾಜ್ಯ ಸಂಸ್ಥೆ 2 ಕೋಟಿ ಅನುದಾನ ಬಿಡುಗಡೆ ಮಾಡಲಿದೆ. ಭವನ ನಿರ್ಮಾಣಕ್ಕೆ ಜಾಗದ ಈ ಖಾತೆ ಆಗಬೇಕಾಗಿದ್ದು, ಇದನ್ನು ಮಾಡಿಸಿ ಕೊಡುವಂತೆ ಉಪವಿಭಾಗಧಿಕಾರಿಗಳಲ್ಲಿ ಮನವಿ ಮಾಡಿದರು. ಕುಶಾಲನಗರ ಸ್ಥಳೀಯ ಸಂಸ್ಥೆಯವರು ಪ್ರಸ್ತುತ ಸಾಲಿನಲ್ಲಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, 2024-2025ನೇ ಸಾಲಿನ ಉತ್ತಮ ಸ್ಥಳೀಯ ಸಂಸ್ಥೆ ಎಂದು ಗುರುತಿಸಲ್ಪಟಿದೆ. ಮುಂದಿನ ದಿನಗಳಲ್ಲಿ ಅವರನ್ನು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಡಿಸೆಂಬರ್ 27 ರಿಂದ ಬೆಳಗಾವಿಯಲ್ಲಿ ನಡೆಯುವ ರಾಜ್ಯ ಜಾಂಬೂರಿಯ ಬಗ್ಗೆ ತಿಳಿಸಿದರು.…

Read More

ವಿರಾಜಪೇಟೆ ಡಿ.9 NEWS DESK : ವಿರಾಜಪೇಟೆಯಲ್ಲಿ ಹಬ್ಬ ಹರಿದಿನಗಳ ಸಂದರ್ಭದಲ್ಲಿ ರಾತ್ರಿ ವೇಳೆ ಅಂಗಡಿ ಮುಂಗಟ್ಟುಗಳು, ವ್ಯಾಪಾರ ಮಳಿಗೆಗಳನ್ನು ಶೀಘ್ರವಾಗಿ ಮುಚ್ಚುವುದರಿಂದ ಸಾರ್ವಜನಿಕರಿಗೆ ಹಾಗೂ ವ್ಯಾಪಾರಸ್ಥರಿಗೆ ಸಮಸ್ಯೆ ಉಂಟಾಗುತ್ತಿರುವುದರಿಂದ, ವರ್ತಕರುಗಳ ಹಿತದೃಷ್ಟಿಯಿಂದ ಕಾಲಾವಧಿಯನ್ನು ವಿಸ್ತರಿಸಿಕೊಡಬೇಕೆಂದು ವಿರಾಜಪೇಟೆ ನಗರ ವರ್ತಕರ ಸಂಘದ ವತಿಯಿಂದ ಸಂಘದ ಅಧ್ಯಕ್ಷ ಪಿ.ಎ.ಮಂಜುನಾಥ್ ಅವರ ನೇತೃತ್ವದಲ್ಲಿ ವಿರಾಜಪೇಟೆಯ ಡಿವೈಎಸ್‍ಪಿ ಮಹೇಶ್ ಕುಮಾರ್ ಹಾಗೂ ನಗರ ಠಾಣಾಧಿಕಾರಿ ಹೆಚ್.ಎಸ್. ಪ್ರಮೋದ್ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಮಾತನಾಡಿದ ಅಧ್ಯಕ್ಷ ಪಿ.ಎ..ಮಂಜುನಾಥ್ ಅವರು, ರಾತ್ರಿ ವೇಳೆ ಸಾಮಾನು ಸಗಟುಗಳನ್ನು ಲಾರಿ ಅಥವಾ ಇನ್ನಿತರ ವಾಹನಗಳಲ್ಲಿ ತಂದು ಇಳಿಸಿ ಅದರ ನಿರ್ವಹಣೆ ಮಾಡುವ ಸಂದರ್ಭ ಕಾಲಾವಕಾಶ ಹೆಚ್ಚು ಬೇಕಾಗುತ್ತದೆ. ಅಲ್ಲದೆ ದೋರದಿಂದ ಬಂದವರಿಗೆ ಎನಾದರೂ ವಸ್ತುಗಳನ್ನು ತೆಗೆದುಕೊಳ್ಳಬೇಕೆಂದರೂ ಅಂಗಡಿಗಳು ಇರುವುದಿಲ್ಲ. ಅಲ್ಲದೆ ಕನಿಷ್ಟ ಕಾಫಿಯಾದರೂ ಕುಡಿಬೇಕೆಂದರೆ ಅದಕ್ಕೂ ಇಲ್ಲಿ ಅವಕಾಶ ಇಲ್ಲ. ಎಲ್ಲವೂ ಮುಚ್ಚಿರುತ್ತದೆ. ಇದರಿಂದ ಸಾರ್ವಜನಿಕರಿಗೂ ಸಮಸ್ಯೆ, ವ್ಯಾಪಾರಸ್ಥರಿಗೂ ನಷ್ಟವಾಗುತ್ತದೆ ಎಂದರು. ಈ ಸಮಸ್ಯೆ ಕುರಿತು ವರ್ತಕರ ನಿರಂತರ…

Read More

ವಿರಾಜಪೇಟೆ ಡಿ.9 NEWS DESK : ಕಾನೂರು ವಲಯದ ಕೋತೂರು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಕಾರ್ಯಕ್ರಮದಡಿಯಲ್ಲಿ ಹೈನುಗಾರಿಕೆ ಮಾಹಿತಿ ಕಾರ್ಯಕ್ರಮವು ಸಮಗ್ರ ಕೃಷಿಕರಾದ ಕೃಷ್ಣ ಅವರ ಮನೆಯಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಪಶು ವೈದ್ಯಧಿಕಾರಿಗಳಾದ ಡಾ.ಚಂದ್ರಶೇಖರ್ ಉದ್ಘಾಟಿಸಿ, ಮಾತನಾಡಿ ಹೈನುಗಾರಿಕೆಯು ಲಾಭದಾಯಕವಾಗಿದ್ದು, ಹಟ್ಟಿ ರಚನೆ ವಿಧಾನಗಳು, ಹಸುಗಳ ಆಯ್ಕೆ, ಕರುಗಳ ಪಾಲನೆ ಹಸುಗಳಿಗೆ ಸಂಪೂರ್ಣ ಆಹಾರ ನೀಡುವ ಬಗ್ಗೆ, ಹಸುಗಳಿಗೆ ಬರುವ ಸಾಂಕ್ರಾಮಿಕ ಕಾಯಿಲೆಗಳು ಮತ್ತು ಸಿಗುವ ಲಸಿಕೆ ಗಳ ಬಗ್ಗೆ ಮತ್ತು ಪಶು ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿಯನ್ನು ನೀಡಿದರು. ಹೈನುಗಾರಿಕೆಯು ಸ್ವಯಂ ಉದ್ಯೋಗಕ್ಕೆ ಒಂದು ಉತ್ತಮ ಅವಕಾಶವಾಗಿದ್ದು, ಇದರಿಂದ ಜನರು ತಮ್ಮದೇ ಆದ ಉದ್ಯೋಗವನ್ನು ಸೃಷ್ಟಿಸಿಕೊಳ್ಳಬಹುದು ಎಂದು ಹೇಳಿದರು. ಕೃಷಿ ಮೇಲ್ವಿಚಾರಕರಾದ ವಸಂತ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ಹೈನುಗಾರಿಕೆಗೆ ಸಿಗುವ ತರಬೇತಿ, ಪ್ರಗತಿ ನಿಧಿ ಇನ್ನಿತರ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕಾನೂರು ಪಶು ಸಖಿಯಾದ ಮೋನಿಕಾ, ಸೇವಾಪ್ರತಿನಿಧಿಗಳು, ಕಾವೇರಿ…

Read More