ಕುಶಾಲನಗರ ಡಿ.10 NEWS DESK : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕುಶಾಲನಗರ ತಾಲ್ಲೂಕು ಘಟಕದ 2025-28ನೇ ಸಾಲಿನ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕುಶಾಲನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆಯಿತು. ಕುಶಾಲನಗರ ತಾಲ್ಲೂಕು ಘಟಕದ ಅಧ್ಯಕ್ಷರಾದ ಎಂ.ಎನ್.ಚಂದ್ರಮೋಹನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ನಿತ್ಯ ನಿರಂತರ ಸುದ್ದಿ ಮಾಡುವ ಪತ್ರಕರ್ತರಿಗೆ ಸಮಸ್ಯೆಗಳಿರುತ್ತವೆ. ನೈಜ ವರದಿಗಳ ಮೂಲಕ ಸಮಾಜಕ್ಕೆ ಬೆಳಕು ಚೆಲ್ಲುವ ಸಂದರ್ಭ ಹಲವರ ವಿರೋಧ ಕಟ್ಟಿಕೊಳ್ಳುವ ಸಾಧ್ಯತೆಯಿದೆ. ಸರಕಾರ ಸೇರಿದಂತೆ ಎಲ್ಲ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳಿಗೆ ಪತ್ರಕರ್ತರ ಸೇವೆ ಅನಿವಾರ್ಯವಾಗಿ ಅಗತ್ಯವಿದೆ. ದಿಟ್ಟ ವರದಿಗಳ ಮೂಲಕ ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವಲ್ಲಿ ಪತ್ರಕರ್ತರ ಸೇವೆ ಅನನ್ಯವಾದುದು ಎಂದರು. ಪತ್ರಿಕಾ ಪ್ರತಿನಿಧಿಗಳ ಬದುಕಿಗೆ ಭದ್ರತೆಯ ಅಗತ್ಯತೆ ಅನಿವಾರ್ಯವಾಗಿದೆ ಎಂದರು ಸಂಘಕ್ಕೆ ಕಟ್ಟಡ ನಿರ್ಮಿಸಲು ಅಗತ್ಯ ಸಹಕಾರ ಒದಗಿಸುವ ಭರವಸೆ ನೀಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ…
ಲೇಖಕ: admin
ಮಡಿಕೇರಿ ಡಿ.10 NEWS DESK : ಉದ್ಯೋಗ ಭದ್ರತೆ ಹಾಗೂ ಸಾಮಾಜಿಕ ಭದ್ರತೆ ಸೇರಿದಂತೆ ಹಮಾಲಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ಕೊಡಗು ಜಿಲ್ಲಾ ಸಮಿತಿ ಆಗ್ರಹಿಸಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ಸಮಿತಿಯ ಪ್ರಮುಖರು ಹಾಗೂ ಪದಾಧಿಕಾರಿಗಳು ಹಮಾಲಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು. ಈ ಸಂದರ್ಭ ಮಾತನಾಡಿದ ಸಮಿತಿಯ ಜಿಲ್ಲಾಧ್ಯಕ್ಷ ಪಿ.ಆರ್.ಭರತ್, ಬಿಪಿಎಂಸಿ, ಮಿಲ್ ಗೋಡೌನ್ ವೇರಹೌಸ್, ನಗರ ಗ್ರಾಮೀಣ ಬಜಾರ, ಬಸ್ ಸ್ಟ್ಯಾಂಡ್, ರೈಲ್ವೆ ಸ್ಟೇಷನ್, ಬಂದರುಗಳಲ್ಲಿ ಲೋಡಿಂಗ್ ಅನ್‍ಲೋಡಿಂಗ್ ಕೆಲಸ ನಿರ್ವಹಿಸುವವರು ಅಸಂಘಟಿತ ಕಾರ್ಮಿಕರಲ್ಲಿಯೇ ಅತ್ಯಂತ ಶ್ರಮದಾಯಕ ಕೆಲಸ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರ ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತಾ ಮಂಡಳಿಯಿಂದ ಅಂಬೇಡ್ಕರ್ ಸಹಾಯ ಹಸ್ತ ಸ್ಮಾರ್ಟ್ ಪಡೆದ ಹಮಾಲಿ ಕಾರ್ಮಿಕರು ಸೇರಿದಂತೆ 85ಕ್ಕೂ ಹೆಚ್ಚು ವಲಯದ ಅಸಂಘಟಿತ ಕಾರ್ಮಿಕರಿಗೆ ಕೇವಲ ಅಪಘಾತ ಸಂಬಂಧಿಸಿದ ಕೆಲ ಪರಿಹಾರ ನೀಡುವ ಯೋಜನೆಗಳನ್ನು…
ಬೆಂಗಳೂರು ಡಿ.10 NEWS DESK : ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಜನ್ಮ ದಿನದ ಅಂಗವಾಗಿ ಸುವರ್ಣಸೌಧದಲ್ಲಿರುವ ನಿಜಲಿಂಗಪ್ಪನವರ ಭಾವಚಿತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದರು.
ವಿರಾಜಪೇಟೆ ಡಿ.10 NEWS DESK : ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ.ಡಿ.ಪ್ರಭು ರಚಿಸಿದ ಚಂಪೂ ಸರೋವರದ ಭಕ್ತಿಯ ಅಲೆಗಳು ಮತ್ತು ಪರಿಶೋಧ ಎಂಬ ಎರಡು ಕೃತಿ ಬಿಡುಗಡೆಗೊಂಡಿತು. ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕರಾದ ಪ್ರೊ. ಪಿ.ಮಣಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಪ್ರಾಚೀನ ಸಾಹಿತ್ಯದಲ್ಲಿ ಆಗಮಿಕ ಕಾವ್ಯಗಳಲ್ಲಿ ಭಕ್ತಿಯ ಪ್ರಧಾನವಾದ ಅಂಶ. ಆದರೆ ಅಲೌಕಿಕ ಕಾವ್ಯಗಳಲ್ಲಿ ಭಕ್ತಿ ವಿಶೇಷವಾದುದು. ಈ ಕೃತಿಯಲ್ಲಿ ಭಕ್ತಿ ಪರಂಪರೆಯನ್ನು ಬೌದ್ಧ ಧರ್ಮದಿಂದ ಆರಂಭಿಸಿ ಹರಿದಾಸರವರೆಗೂ ಹಾದು ಬಂದ ಬಗೆಯನ್ನು ಅಮೂಲಾಗ್ರವಾಗಿ ತಿಳಿಸಲಾಗಿದೆ ಎಂದರು. ಪಂಪ, ಪೊನ್ನ, ರನ್ನರಂತಹ ಪ್ರಮುಖ ಕವಿಗಳ ಕಾವ್ಯಗಳನ್ನು ಉಲ್ಲೇಖಿಸಿ, ದಶವಿಧ ಭಕ್ತಿಯನ್ನು ವಿವರಿಸಿರುವುದು ಪರಿಣಾಮಕಾರಿಯಾದದ್ದು. ವಚನ ಮತ್ತು ಕೀರ್ತನ ಸಾಹಿತ್ಯವನ್ನು ಚಂಪೂ ಕಾವ್ಯದಲ್ಲಿ ಮೂಡಿದ ಭಕ್ತಿಯ ಪರಂಪರೆಯನ್ನು ತೌಲನಿಕವಾಗಿ ಚರ್ಚಿಸಿದ್ದು, ಚಂಪೂ ಸರೋವರದ ಭಕ್ತಿಯ ಅಲೆಗಳು ಕೃತಿಯ ಬಹು ಮುಖ್ಯ ಭಾಗವಾಗಿದೆ ಎಂದು ಹೇಳಿದರು. ಇವರ ಪರಿಶೋಧ…
ಮಡಿಕೇರಿ ಡಿ.10 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಡಗು ವ್ಯದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋದಕ ಆಸ್ಪತ್ರೆ ವತಿಯಿಂದ ಪಿ.ಹೆಚ್.ಸಿ ಕಾಕೋಟು ಪರಂಬು ವ್ಯಾಪ್ತಿಯಲ್ಲಿ ರಕ್ತದಾನ ಶಿಬಿರ, ಅಂಗಾಂಗದಾನ ನೋಂದಣಿ, ಸಂತಾನ ನಿರೋಧ ಶಸ್ತ್ರಚಿಕಿತ್ಸೆ ಹಾಗೂ ಪಲ್ಸ್ ಪೋಲಿಯೋ ಕಾರ್ಯಕ್ರಮದ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯಿತು. ವಿರಾಜಪೇಟೆಯ ಕ್ಲಬ್ ಮಹೀಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಕರುಂಬಯ್ಯ ಹಾಗೂ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಆರೋಗ್ಯ ಶಿಕ್ಷಣ ನೀಡಿದರು. ಕಾರ್ಯಕ್ರಮದಲ್ಲಿ ರಕ್ತ 42 ಯೂನಿಟ್ ಸಂಗ್ರಹವಾಗಿದ್ದು, 40 ಫಲಾನುಭವಿಗಳು ಅಂಗಾಂಗದಾನ ನೋಂದಣಿ ಮಾಡಿಕೊಂಡರು. ತಂಡದಲ್ಲಿ ಡಾ.ಆಕಾಶ್, ನರ್ಸಿಂಗ್ ಆಫೀಸರ್ ಕೀರ್ತಿ, ಕ್ಲಬ್ ಮಹೇಂದ್ರದ ಮುಖ್ಯಸ್ಥರಾದ ಶೈನ್ ಮೋಹನ್, ಕೋಸ್ ರಾಜ್ ಐಯ್ಯಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ದುಂಬಿತ, ಆಶಾ ಕಾರ್ಯಕರ್ತೆ ಭವ್ಯ, ಸವಿತ ಹಾಗೂ ರಕ್ತ ನಿಧಿ ಕೇಂದ್ರದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಮಡಿಕೇರಿ ಡಿ.10 NEWS DESK : ಬೆಂಗಳೂರು ಪದವಿ ಪೂರ್ವ ಶಿಕ್ಷಣ ಇಲಾಖೆ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಆಯೋಜಿಸಿದ್ದ ವಿಭಾಗ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಡಿಕೇರಿಯ ಸಂತ ಜೋಸೆಫರ ಕಾಲೇಜಿನ ವಿದ್ಯಾರ್ಥಿನಿ ಎ.ಇಂಚರ ಜಾನಪದ ನೃತ್ಯ ಸ್ಪರ್ಧೆಯಲ್ಲಿ ವಿಭಾಗ ಮಟ್ಟದಲ್ಲಿ ತೃತೀಯ ಸ್ಥಾನವನ್ನು ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕ ವೃಂದ ಮತ್ತು ಸಹಪಾಠಿಗಳು ಅಭಿನಂದಿಸಿ, ರಾಜ್ಯಮಟ್ಟದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.
ಮಡಿಕೇರಿ ಡಿ.10 NEWS DESK : ಮಡಿಕೇರಿ ಡೌನ್ಸ್ ಗಾಲ್ಫ್ ಕ್ಲಬ್ ನಲ್ಲಿ ಜರುಗಿದ 21 ನೇ ಆವೃತ್ತಿಯ ಸಾಖಮುರಿ ಕಪ್ ಗಾಲ್ಪ್ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಮಡಿಕೇರಿಯ ಕೆ.ಪಿ.ರಂಜಿತ್ ಚಾಂಪಿಯನ್ ಶಿಪ್ ತನ್ನದಾಗಿಸಿಕೊಂಡರೆ, ಮಾಲೀ ಶಶಿಕಿರಣ್ ದ್ವಿತೀಯ ಸ್ಥಾನ ಗಳಿಸಿದರು. ಎರಡು ದಿನಗಳ ಗಾಲ್ಫ್ ಪಂದ್ಯಾವಳಿಯಲ್ಲಿ 71 ಗಾಲ್ಫರ್ ಗಳು ಪಾಲ್ಗೊಂಡಿದ್ದರು. ವಿವಿಧ ವಿಭಾಗಗಳಲ್ಲಿ ಕೆ.ಯು. ವಿಕ್ರಾಂತ್, ಎಚ್.ಎಲ್. ಸಂಜಯ್, ಕೆ.ಎನ್. ಅಪ್ಪಣ್ಣ, ಎಂ.ಎನ್.ಸೋಮಯ್ಯ, ಕೆ.ಹರೀಶ್ ಅಪ್ಪಣ್ಣ, ಎಂ.ಎ.ಪೂಣಚ್ಚ, ಡಿ.ಜಿ.ಕಿಶೋರ್, ಟ್ರೋಪಿ ವಿಜೇತರಾದರೆ ಮಹಿಳೆಯರ ವಿಭಾಗದಲ್ಲಿ ಶ್ವೇತಾ ರಾಮು, ಪ್ರಥಮ, ಮೖಣಾಲಿನಿ ಚಿಣ್ಣಪ್ಪ ದ್ವಿತೀಯ ಸ್ಥಾನ ಪಡೆದರು. ಲಾಂಗೆಸ್ಟ್ ಡ್ರೈವ್ ವಿಭಾಗದಲ್ಲಿ ಅಖಿಲ್ ಮುತ್ತಣ್ಣ ಮತ್ತು ಕ್ಲೋಸೆಸ್ಟ್ ಟು ಪಿನ್ ವಿಭಾಗದಲ್ಲಿ ಕೆ.ಪಿ.ರಂಜಿತ್ ಬಹುಮಾನ ತನ್ನದಾಗಿಸಿಕೊಂಡರು. ಮಕೇ೯ರಾ ಡೌನ್ಸ್ ಗಾಲ್ಪ್ ಕ್ಲಬ್ ಅಧ್ಯಕ್ಷ ಮುತ್ತಣ್ಣ ಕಾಯ೯ಪ್ಪ, ಪಂದ್ಯಾವಳಿಯ ಪ್ರಾಯೋಜಕರಾದ ನಾಗಾಜು೯ನ್ ಸಾಖಮುರಿ, , ಪ್ರಶಾಂತ್ ಸಾಖಮುರಿ, ಗೀತಾ ಸಾಖಮುರಿ, ಪದ್ಮಜಸಾಖಮುರಿ ಬಹುಮಾನ ವಿತರಿಸಿದರು. ಮಕೇ೯ರಾ ಡೌನ್ಸ್ ಗಾಲ್ಪ್ ಕ್ಲಬ್ ನ…
ಮಡಿಕೇರಿ NEWS DESK ಡಿ.10 : ಪುರಾಣ ಪ್ರಸಿದ್ಧ ಸುಳ್ಯ ಸೀಮೆಯ ತೊಡಿಕಾನ ಶ್ರೀಮಲ್ಲಿಕಾರ್ಜುನ ದೇವಾಲಯದಲ್ಲಿ ಡಿ.16 ರಿಂದ ಜ.14ರ ವರೆಗೆ ಧನುಪೂಜೆ ನಡೆಯಲಿದೆ. ಡಿ.16 ರಿಂದ ಶ್ರೀ ದೇವಳದಲ್ಲಿ ಎಂದಿನಂತೆೆ ಎಲ್ಲಾ ಸೇವೆಗಳೂ ನಡೆಯುವುದಲ್ಲದೆ ಬೆಳಿಗ್ಗೆ 5 ಗಂಟೆಗೆ ಧನುಪೂಜೆ ಜರುಗಲಿದೆ. ಧನುಪೂಜೆಯ ಎಲ್ಲಾ ದಿನಗಳಲ್ಲಿ ಸೀಮೆಯ ಭಜನಾ ತಂಡಗಳಿಂದ ಮುಂಜಾನೆ 4 ಗಂಟೆಗೆ ಭಜನಾ ಸೇವೆ ನಡೆಯಲಿದೆ. ಧನುಪೂಜೆ ಮಾಡಿಸುವವರು ರೂ.500 ನೀಡಿ ತಮಗೆ ಬೇಕಾದ ದಿವಸವನ್ನು ಆಯ್ಕೆ ಮಾಡಿಕೊಂಡು ದೇವಳದ ಕಚೇರಿ ಸಮಯದಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಪೂಜೆಯಲ್ಲಿ ಪಾಲ್ಗೊಳ್ಳುವವವರು ಕುಟುಂಬ ಸಮೇತರಾಗಿ ಮುಂಜಾನೆ 4.45 ಗಂಟೆಗೆ ಮೊದಲೇ ದೇವಾಲಯದಲ್ಲಿ ಹಾಜರಿರಬೇಕು. ಜ.14 ರಂದು ಶ್ರೀ ದೇವಳದಲ್ಲಿ ಬೆಳಿಗ್ಗೆ 7 ಗಂಟೆಗೆ ಗಣಪತಿ ಹೋಮ, 9 ರಿಂದ ಆಯಿರಕೊಡ ಅಭಿಷೇಕ, ಸಿಯಾಳಾಭಿಷೇಕ, ಶತರುದ್ರಾಭಿಷೇಕ ಹಾಗೂ ರಾತ್ರಿ ರಂಗಪೂಜೆ ಜರುಗಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ಆಡಳಿತ ಮಂಡಳಿ ಮನವಿ ಮಾಡಿದೆ. ಹೆಚ್ಚಿನ ಮಾಹಿತಿಗೆ 9483140142 ನ್ನು ಸಂಪರ್ಕಿಸಬಹುದಾಗಿದೆ.
ಬೆಂಗಳೂರು ಡಿ.10 NEWS DESK : ಬಾಂಗ್ಲಾದೇಶದ ಢಾಕಾದಲ್ಲಿ ಪ್ರಸಕ್ತ ಸಾಲಿನ ನವೆಂಬರ್ ನಲ್ಲಿ ನಡೆದ ಎರಡನೆ ಅಂತರ್ ರಾಷ್ಟ್ರೀಯ ಮಹಿಳಾ ಕಬ್ಬಡಿ ಪಂದ್ಯಾವಳಿಯಲ್ಲಿ ವಿಜೇತರಾದ ಭಾರತ ತಂಡವನ್ನು ಪ್ರತಿನಿಧಿಸಿದ ಆಟಗಾರ್ತಿ ಧನಲಕ್ಷ್ಮಿ ಪೂಜಾರಿ ಹಾಗೂ ತರಬೇತುದಾರರಾದ ತೇಜಸ್ವಿನಿ ಬಾಯಿ ಅವರಿಗೆ ವಿಧಾನಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು. ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ಯು.ಟಿ.ಖಾದರ್ ಅವರು ಧನಲಕ್ಷ್ಮಿ ಪೂಜಾರಿ ಹಾಗೂ ತೇಜಸ್ವಿನಿ ಬಾಯಿ ವಿಧಾನಸಭೆ ಕಲಾಪ ವೀಕ್ಷಿಸಲು ಸಭಾಧ್ಯಕ್ಷರ ಗ್ಯಾಲರಿಯಲ್ಲಿ ಉಪಸ್ಥಿತರಿರುವ ಕುರಿತು ಪ್ರಕಟಿಸಿದರು. ಆಗ ಇಡೀ ಸದನ ಮೇಜು ತಟ್ಟಿ ಅವರಿಗೆ ಸ್ವಾಗತ ಕೋರಿತು. ಧನಲಕ್ಷ್ಮಿ ಪೂಜಾರಿ ಹಾಗೂ ತೇಜಸ್ವಿನಿ ಬಾಯಿ ಸಾಧನೆಯನ್ನು ಅಭಿನಂದಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ಸದಸ್ಯ ವಿ.ಸುನೀಲ್ ಕುಮಾರ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಧನಲಕ್ಷ್ಮಿ ಪೂಜಾರಿಗೆ ಸರಕಾರದ ವತಿಯಿಂದ 5 ಲಕ್ಷ ರೂ. ರೂ.ಬಹುಮಾನ ನೀಡಿರುವ ಕುರಿತು ಮುಖ್ಯಮಂತ್ರಿ ಪ್ರಕಟಿಸಿದರು.
ಚೆಟ್ಟಳ್ಳಿ ಡಿ.10 NEWS DESK : ಮಡಿಕೇರಿ ಸಮೀಪದ ಕಡಗದಾಳುವಿನ ಕುರುಳಿ ಅಂಬಲ ಮಂದ್ ನಲ್ಲಿ ಪುತ್ತರಿ ಕೋಲಾಟ್ ಸಾಂಪ್ರದಾಯಿಕವಾಗಿ ನಡೆಯಿತು. ಊರಿನವರು ಮಂದ್ ನಲ್ಲಿ ಸೇರಿ ಊರ್ ತಕ್ಕರ ಮನೆಗೆ ತೆರಳಿ ಫಲಹಾರ ಊಟೋಪಚಾರದ ನಂತರ ತಳಿಯಕ್ಕಿ ಬೊಳ್ ಚ ದುಡಿಕೊಟ್ಟ್ ಪಾಟ್ ಒಡ್ಡೋಲಗದೊಂದಿಗೆ ಊರ್ ತಕ್ಕರನ್ನು ಮಂದ್ ಗೆ ಕರೆತರಲಾಯಿತು. ನಂತರ ಊರ್ ಕೋಲ್ ನಡೆಯಿತು. ದೇಶ ತಕ್ಕರನ್ನು ಹಾಗೂ ನಾಡು ತಕ್ಕರಾದ ಪಾಂಡಿರ ಕುಟುಂಬಸ್ಥರನ್ನು ಮಂದ್ ಗೆ ಕರೆತಂದು ಸತ್ಕರಿಸಲಾಯಿತು. ಮೂಲನೆಲೆಯಲ್ಲಿ ದೇವರನ್ನು ಪ್ರಾರ್ಥಿಸಿ ನಾಡ್ ಕೋಲ್ , ಬಾಳೋಪಾಟ್, ಬೊಳಕಾಟ್ ಪರೆಯ ಕಳಿ, ವಾಲಗತಾಟ್ ನಡೆಯಿತು. ಫಲಹಾರದ ನಂತರ ದುಡಿಕೊಟ್ ಪಾಟ್, ಒಡ್ಡೋಲಗದೊಂದಿಗೆ ಊರುತಕ್ಕರನ್ನು ತಕ್ಕರ ಮನೆಗೆ ಬೀಳ್ಕೊಡಲಾಯಿತು. ಕಾರ್ಯಕ್ರಮದಲ್ಲಿ ಮಂದ್ ಸಮಿತಿಯ ಅಧ್ಯಕ್ಷರಾದ ಮಾದೇಟಿರ ಬೆಳ್ಯಪ್ಪ, ಊರಿನ ತಕ್ಕರಾದ ಕೊರವಂಡ ರಾಮು ಅಯ್ಯಪ್ಪ, ಏಳು ನಾಡಿನ ತಕ್ಕಮುಖ್ಯಸ್ಥರು ಸೇರಿದಂತೆ ಊರಿನ ಹಿರಿಯರು, ಪುರುಷರು, ಮಹಿಳೆಯರು ಹಾಗೂ ಮಕ್ಕಳು ಭಾಗವಹಿಸಿದರು. ಡಿ.10 (ಇಂದು) ಮಹಾ ವಿಷ್ಣು…






