ಲೇಖಕ: admin

ಮಡಿಕೇರಿ ನ.29 NEWS DESK : ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ಸಮಗ್ರ ಗ್ರಾಮೀಣ ಅಭಿವೃದ್ಧಿಯಲ್ಲಿ ಸಹಕಾರ ಚಳವಳಿಯ ಪಾತ್ರ’ ಎಂಬ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ‘ಸಹಕಾರಿ ವ್ಯವಸ್ಥೆಯ ಸಾಧನೆ, ವೈಫಲ್ಯಗಳ ಪರಾಮರ್ಶೆಯಿಂದ ಮಾತ್ರವೇ ಸಹಕಾರಾಭಿವೃದ್ಧಿ ಬಲಗೊಳ್ಳಲು ಸಾಧ್ಯ’ ಎಂಬ ವಿಷಯದ ಬಗ್ಗೆ ಚರ್ಚಾ ಸ್ಪರ್ಧೆಯನ್ನು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ನಡೆಯಿತು.  ಜಿಲ್ಲೆಯ ವಿವಿಧ ಶಾಲೆಗಳಿಂದ ಆಗಮಿಸಿದ ಶಾಲಾ ವಿದ್ಯಾರ್ಥಿಗಳು ಪ್ರಬಂಧವನ್ನು ಮಂಡಿಸಿದರು. ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ವಿಷಯದ ಕುರಿತಾಗಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಚರ್ಚಾ ಸ್ಪರ್ಧೆ ಕಾಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಿ.ಯು.ರಾಬಿನ್ ದೇವಯ್ಯ ಮಾತನಾಡಿ, ಸಹಕಾರ ಚಳುವಳಿಯಲ್ಲಿ ಕರ್ನಾಟಕದ ಕೊಡುಗೆ ಮಹತ್ತರವಾಗಿದೆ. 1905 ರಲ್ಲಿ ರಾಜ್ಯದ ಗದಗ ಜಿಲ್ಲೆಯ ಕಣಗಿನಹಾಳ ಗ್ರಾಮದಲ್ಲಿ ಪ್ರಾರಂಭವಾದ ಕೃಷಿ ಪತ್ತಿನ ಸಹಕಾರ ಸಂಘ ದೇಶದಲ್ಲಷ್ಟೇ ಅಲ್ಲ ಏಷ್ಯಾ ಖಂಡದಲ್ಲಿಯೇ ಪ್ರಥಮ ಸಂಘವಾಗಿದೆ. ಕೊಡಗು ಜಿಲ್ಲೆಯು ತನ್ನದೇ ಆದ…

Read More

ಬೇಕಾಗುವ ಸಾಮಾಗ್ರಿಗಳು ::  ದೋಸೆ ಅಕ್ಕಿ- 2 ಬಟ್ಟಲು, ಬೆಲ್ಲ- 1.5 ಬಟ್ಟಲು, ಕಪ್ಪು ಎಳ್ಳು- 2 ಚಮಚ,  ಏಲಕ್ಕಿ- ಚಿಟಿಕೆ, ಮೈದಾ- 3 ಟೀ ಚಮಚ, ತುಪ್ಪ- 3 ಚಮಚ, ತೆಂಗಿನತುರಿ- 2 ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಅಡುಗೆ ಸೋಡಾ- ಚಿಟಿಕೆ. ಮಾಡುವ ವಿಧಾನ ::  ಮೊದಲಿಗೆ ದೋಸೆ ಅಕ್ಕಿಯನ್ನು ಚೆನ್ನಾಗಿ ತೊಳೆದು, ನೀರು ಹಾಕಿ 5 ಗಂಟೆಗಳ ನೆನೆಯಲು ಬಿಡಿ. ನಂತರ ಮಿಕ್ಸಿ ಜಾರಿಗೆ ಅಕ್ಕಿ, ಸೋಸಿದ ಬೆಲ್ಲ, ಚಿಟಿಕೆ ಉಪ್ಪು ಹಾಗೂ ಏಲಕ್ಕಿ ಹಾಕಿ ರುಬ್ಬಿಕೊಳ್ಳಿ. ಬಳಿಕ ಈ ಹಿಟ್ಟಿಗೆ ಕಪ್ಪು ಎಳ್ಳು ಹಾಗೂ ಮೈದಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ತೆಂಗಿನತುರಿಯನ್ನು ತುಪ್ಪದಲ್ಲಿ ಹುರಿಯಿರಿ. ರುಬ್ಬಿದ ಹಿಟ್ಟಿಗೆ ತೆಂಗಿನ ತುರಿ ಹಾಕಿ ಮಿಶ್ರಣ ಮಡಿ, 7 ರಿಂದ 8 ಗಂಟೆ ಕಾಲ ಹಾಗೆ ಇಡಿ. ಹಿಟ್ಟು ದೋಸೆ ಹಿಟ್ಟಿನ ಹದಕ್ಕಿಂತ ಸ್ವಲ್ಪ ತೆಳ್ಳಗಿರಲಿ. ಒಂದು ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ ಈ ವೇಳೆ…

Read More

ಪಣಜಿ ನ.29 NEWS DESK : ಶ್ರೀ ಸಂಸ್ಥಾನ ಗೋಕರ್ಣ ಜೀವೋತ್ತಮ ಮಠದ 550ನೇ ವರ್ಷಾಚರಣೆಯ ಅಂಗವಾಗಿ, ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಗೋವಾದಲ್ಲಿ ವಿಶ್ವದ ಅತಿ ಎತ್ತರದ ಶ್ರೀರಾಮನ 77 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದರು. ದಕ್ಷಿಣ ಗೋವಾದ ಪರ್ತಗಲಿಯಲ್ಲಿರುವ ಮಠದ ದೇವಾಲಯಕ್ಕೂ ಪಧಾನಿ ಮೋದಿ ಭೇಟಿ ನೀಡಿದರು. ಈ ಮಠವು ಭಾರತದ ಅತ್ಯಂತ ಹಳೆಯ ಮಠಗಳಲ್ಲಿ ಒಂದಾಗಿದ್ದು, ಇದು ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕೊಡುಗೆಗಳಿಗೆ ಹೆಸರುವಾಸಿಯಾಗಿದೆ ಮತ್ತು ಸಾರಸ್ವತ ಸಮುದಾಯದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ಗುಜರಾತ್‌ನಲ್ಲಿ ಏಕತಾ ಪ್ರತಿಮೆ ವಿನ್ಯಾಸಗೊಳಿಸಿದ ಶಿಲ್ಪಿ ರಾಮ್ ಸುತಾರ್ ಅವರೇ ಈ ಶ್ರೀರಾಮನ ಪ್ರತಿಮೆಯನ್ನು ನಿರ್ಮಿಸಿದ್ದಾರೆ ಎಂದು ಗೋವಾ ಲೋಕೋಪಯೋಗಿ ಇಲಾಖೆ ಸಚಿವ ದಿಗಂಬರ ಕಾಮತ್ ಹೇಳಿದ್ದಾರೆ. ಇದು ಶ್ರೀರಾಮನ ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿದೆ. ಗೋವಾ ರಾಜ್ಯಪಾಲ ಅಶೋಕ್ ಗಜಪತಿ ರಾಜು ಮತ್ತು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಹ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Read More

ಹಾವೇರಿ ನ.29 NEWS DESK : ರಸ್ತೆ ದಾಟುತ್ತಿದ್ದ ವೇಳೆ ಚಿರತೆಗೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಚಿರತೆ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಕೋಣಕೆರೆ ಗ್ರಾಮದ ಬಳಿ ನಡೆದಿದೆ. ಮೂರು ವರ್ಷದ ಚಿರತೆ ಮರಿ ರಸ್ತೆ ದಾಟುತ್ತಿದ್ದ ವೇಳೆ ಡಿಕ್ಕಿ ಹೊಡೆದಿದ್ದರಿಂದ ಚಿರತೆ ಮುಖಕ್ಕೆ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದೆ. ಘಟನೆಯ ಬಳಿಕ ಅಪರಿಚಿತ ವಾಹನದ ಪತ್ತೆಗಾಗಿ ಇಲಾಖೆ ಸಿಬ್ಬಂದಿ, ಪೊಲೀಸರು ಶೋಧ ಮಾಡುತ್ತಿದ್ದಾರೆ. ಸ್ಥಳಕ್ಕೆ ಶಿಗ್ಗಾಂವಿ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ವಿರಾಜಪೇಟೆ ನ.29 NEWS DESK : ಮನುಷ್ಯನ ಅಂತರಾಳದಲ್ಲಿ ವಿಭಿನ್ನ ಭಾವನೆ ಗುಚ್ಛವಿದ್ದು, ಅದನ್ನು ಹೊರಗೆಡವಿ ಲೋಕ ಹಿತಕ್ಕೆ ಮುಡಿಸಿ ಮುಕ್ತಿ ಹೊಂದುವುದೇ ನಿಸ್ವಾರ್ಥ ಬದುಕು ಎಂದು ಕೂರ್ಗ್ ವ್ಯಾಲಿ ಶಾಲೆಯ ಪ್ರಾಂಶುಪಾಲರಾದ ಸುಮ ಚಿತ್ರಭಾನು ಹೇಳಿದರು. ವಿರಾಜಪೇಟೆಯ ಮೊಗರಗಲ್ಲಿಯಲ್ಲಿನ ಕಲಾ ಉತ್ಸವ ವೇದಿಕೆಯಲ್ಲಿ ನಡೆದ ವಿರಾಜಪೇಟೆಯ ಕೆದಮುಳ್ಳೂರು ಗ್ರಾಮದ ಯುವಕವಿ ಲವಿನ್ ಲೋಪೇಸ್ ಬರೆದಿರುವ ಮೌನದ ಮನಸ್ಸಿನಲ್ಲಿ ಚೊಚ್ಚಲ ಕೃತಿಯ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಲವಿನ್ ತಮ್ಮ ಕವನ ಸಂಕಲನದಲ್ಲಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಕವನಗಳು ಎಲ್ಲರಿಗೂ ಮನ ಮುಟ್ಟುವ ಹಾಗೆ ರಚಿಸಿದ್ದು, ನೆಲ, ಜಲ, ಪ್ರೀತಿ, ವ್ಯಾತ್ಸಲ್ಯ ಹಾಗೂ ರೈತರ ಬಗ್ಗೆ ಕವನಗಳನ್ನು ರಚಿಸಿದ್ದಾರೆ. ಕನ್ನಡ ಸಾಹಿತ್ಯದ ಲೋಕ ವಿಶಾಲವಾಗಿದ್ದು, ಈ ನೆಲ, ಕವಿಗಳ ಬೀಡು. ಇಂತಹ ನಾಡಿನೊಳಗೆ ಉದಯಿಸಿ ಕಾವ್ಯ ಲೋಕಕ್ಕೆ ತನ್ನ ಕೃತಿ ಕೊಟ್ಟಿದ್ದು ಶ್ರೇಷ್ಠ ಭಾವ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರಲ್ಲದೆ, ಮುಂದೆಯೂ ಕನ್ನಡದಲ್ಲೇ ಕವನ ರಚನೆ ಮಾಡುವಂತೆ ಹೇಳಿದರು. ಸಾಹಿತಿ ವಿ.ಎನ್.ರಜಿತ…

Read More

ಬೆಂಗಳೂರು ನ.29 NEWS DESK : ತೀವ್ರ ಕುತೂಹಲ ಕೆರಳಿಸಿದ ಇಂದಿನ ಬ್ರೇಕ್ ಫಾಸ್ಟ್ ಮೀಟಿಂಗ್ ನಂತರ ಸಿಎಂ ಸಿದ್ದರಾಮಯ್ಯ ನಿವಾಸ ಕಾವೇರಿಯಲ್ಲಿ ಸಿಎಂ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದರು. ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬ್ರೇಕ್ ಫಾಸ್ಟ್ ಚೆನ್ನಾಗಿತ್ತು, ನಾನು ಡಿ.ಕೆ.ಶಿವಕುಮಾರ್, ಪೊನ್ನಣ್ಣ ಬ್ರೇಕ್ ಫಾಸ್ಟ್ ಮಾಡಿದ್ವಿ. ಮೊನ್ನೆನೇ ಹೈಕಮಾಂಡ್ ಫೋನ್ ಮಾಡಿದ್ದರು. ಡಿ.ಕೆ.ಶಿವಕುಮಾರ್ ಇವತ್ತು ನಮ್ಮನೆಗೆ ಬಂದರು. ನಮ್ಮ ಮನೆಗೆ ಊಟಕ್ಕೆ ಬನ್ನಿ ಎಂದು ಕರೆದಿದ್ದೆ. ಅನಗತ್ಯವಾಗಿ ಕೆಲವು ಗೊಂದಲ ನಿರ್ಮಾಣವಾಯಿತು, ಅದನ್ನು ಬಗೆಹರಿಸಲು ಇಂದು ಕರೆದಿದ್ದೆ ಎಂದರು. ನಮ್ಮ ಉದ್ದೇಶ 2028ರ ವಿಧಾನಸಭೆ ಚುನಾವಣೆ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸುವುದು,ನನ್ನ ಮತ್ತು ಡಿ.ಕೆ.ಶಿವಕುಮಾರ್ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟ ಪಡಿಸಿದರು.

Read More

ಮಡಿಕೇರಿ ನ.29 NEWS DESK : ಸಮಸ್ತ ಉಲಮಾ ಸಂಘಟನೆಗೆ 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಫೆ.4 ರಿಂದ 8ರ ವರೆಗೆ ‘ಆದರ್ಶ ಪರಿಶುದ್ಧತೆ ಶತಮಾನಗಳಿಂದ’ ಎಂಬ ಘೋಷಣೆಯೊಂದಿಗೆ ಕೇರಳದ ಕಾಸರಗೋಡುವಿನ ಕುಣಿಯಲ್ಲಿ 100ನೇ ಅಂತರರಾಷ್ಟ್ರೀಯ ಮಹಾ ಸಮ್ಮೇಳನ ನಡೆಯಲಿದೆ. ಇದರ ಪ್ರಚಾರಕ್ಕಾಗಿ ಕೊಡಗು ಜಿಲ್ಲಾ ಜಂಇಯ್ಯತುಲ್ ಉಲಮಾ ಒಕ್ಕೂಟದಿಂದ ಮಡಿಕೇರಿಯಲ್ಲಿ ‘ಸಮಸ್ತ ಶತಮಾನೋತ್ಸವ ಪ್ರಚಾರ ಮಹಾ ಸಮ್ಮೇಳನ’ವನ್ನು ಆಯೋಜಿಸಲಾಗಿದೆ. ನಗರದ ಗಾಂಧಿ ಮೈದಾನದಲ್ಲಿ ಪಿ.ಬಿ.ಇಸ್ಮಾಯಿಲ್ ಮುಸ್ಲಿಯಾರ್ ಕಲ್ಲುಬಾಣೆ ಅವರ ನೇತೃತ್ವದಲ್ಲಿ ಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.  ಸಂಜೆ 4 ಗಂಟೆಗೆ ಕೊಡಗು ಜಿಲ್ಲಾ ಉಲಮಾ ಒಕ್ಕೂಟದ ಅಧ್ಯಕ್ಷÀ ಎಂ.ಎಂ.ಅಬ್ದುಲ್ಲಾ ಫೈಝಿ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಸಮಸ್ತ ಕೇಂದ್ರೀಯ ಜಂ-ಇಯ್ಯತುಲ್ ಉಲಮಾ ಅಧ್ಯಕ್ಷರೂ ಹಾಗೂ ಮುಸ್ಲಿಂ ಸಮುದಾಯದ ಆಧ್ಯಾತ್ಮಿಕ ನೇತಾರರಾದ ಸಯ್ಯಿದುಲ್ ಉಲಮಾ ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕ್ಕೋಯ ತಂಙಳ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

Read More

ಮಡಿಕೇರಿ ನ.29 NEWS DESK : ರಾಜ್ಯಾದ್ಯಂತ ಹಾಗೂ ಹೊರರಾಜ್ಯಗಳಲ್ಲಿ ಕ್ರಿಯಾತ್ಮಕ ಸಾಂಸ್ಕøತಿಕ ಚಟುವಟಿಕೆಗಳ ಮೂಲಕ ನಾಡಿನ ಭಾಷಾ ಸಂವರ್ಧನೆ, ಕಲೆ, ಸಾಹಿತ್ಯ, ಸಂಗೀತ, ಜಾನಪದ, ನೃತ್ಯ ಕಲಾಪ್ರಕಾರಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಕಾರ್ಯನಿರ್ವಹಿಸುತ್ತಿರುವ ನೋಂದಾಯಿತ ಸಂಘ-ಸಂಸ್ಥೆಗಳಿಗೆ ಧನಸಹಾಯ ನೀಡಲು ಹಾಗೂ ಕಲಾವಿದರಿಗೆ ವಾದ್ಯ ಪರಿಕರ ಮತ್ತು ವೇಷಭೂಷಣಗಳ ಖರೀದಿಗೆ ಸಹಾಯಧನ ಹಾಗೂ ಚಿತ್ರಕಲೆ/ ಶಿಲ್ಪಕಲಾಕೃತಿಗಳ ಪ್ರದರ್ಶನಕ್ಕೆ ಸಹಾಯಧನ ನೀಡಲು 2025-26ನೇ ಸಾಲಿನ ಸಾಮಾನ್ಯ/ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಉಪಯೋಜನೆಯಡಿ ಸೇವಾ ಸಿಂಧು Sevasindhu.karnataka.gov.in  ಮುಖಾಂತರ ದಿನಾಂಕ: 01-12-2025 ರಿಂದ ದಿನಾಂಕ: 30-12-2025 ರ ವರೆಗೆ ಕಾಲಾವಕಾಶ ನೀಡಿ ಅರ್ಜಿ ಆಹ್ವಾನಿಸಲಾಗಿದೆ. ಸರ್ಕಾರದ ಆದೇಶ ಸಂಖ್ಯೆ ಕಸಂವಾ 280 ಕಸಧ 2024 (ಭಾಗ-1) ದಿನಾಂಕ: 31-10-2025 ರಲ್ಲಿನ ಮಾರ್ಗಸೂಚಿಯನ್ನು ಸೇವಾಸಿಂಧು ಪೋರ್ಟಲ್ ಹಾಗೂ ಇಲಾಖೆಯ ವೆಬ್ ಸೈಟ್: www.kannadasiri. karnataka.gov.in ನಲ್ಲಿ ಅಳವಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ 08024410547, 8792662814, 8792662816, 08022213530, 9986837037, 9900337738, 9448436877, 9480197511, 9916600027, 08022241325 ಅನ್ನು ಹಾಗೂ…

Read More

ಮಡಿಕೇರಿ ನ.29 NEWS DESK : ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ನೃತ್ಯ, ಸುಗಮ ಸಂಗೀತ, ಕಥಾಕೀರ್ತನ ಮತ್ತು ಗಮಕ ಈ ಆರು ಕಲಾಕ್ಷೇತ್ರದಲ್ಲಿ ಅಭ್ಯಾಸ ಮಾಡುತ್ತಿರುವ 16 ರಿಂದ 24 ವರ್ಷ ವಯೋಮಾನದ ಒಳಗಿರುವ ಅಭ್ಯರ್ಥಿಗಳು ಶಿಷ್ಯವೇತನಕ್ಕಾಗಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. 2025-26ನೇ ಸಾಲಿನ ಶಿಷ್ಯವೇತನಕ್ಕೆ ಆಯ್ಕೆ ಪ್ರಕ್ರಿಯೆಯನ್ನು ಮೊಬೈಲ್/ ವಿಡಿಯೋ ಚಿತ್ರೀಕರಣದ ಮೂಲಕ ಈ ಕೆಳಕಂಡಂತೆ ಆಯ್ಕೆ ಮಾಡಲು ಅಕಾಡೆಮಿ ತೀರ್ಮಾನಿಸಿದೆ. ಶಿಷ್ಯವೇತನ ಅರ್ಜಿಗಳ ಬಗ್ಗೆ ಮಾಹಿತಿಯನ್ನು ಅಕಾಡೆಮಿ ಪೇಸ್ ಬುಕ್ (face book: com/ karnatakasangeetanrutyaacdemy) ಮೂಲಕ ಪಡೆದು ವೆಬ್ ಸೈಟ್ (sangeetanritya academy. karnataka.gov.in) ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಅರ್ಜಿಯನ್ನು ಆಯಾಯ ಜಿಲ್ಲೆಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೆಶಕರ ಕಚೇರಿಯಲ್ಲಿ ಪಡೆಯಬಹುದಾಗಿದೆ. ಸಂದರ್ಶನದ ಬದಲಿಗೆ ಅಭ್ಯರ್ಥಿಗಳು ಇನ್ನು ಮುಂದೆ ಅರ್ಜಿಯಲ್ಲಿ ನೀಡಿರುವ ಪಠ್ಯಕ್ರಮವನ್ನು ಮೊಬೈಲ್/ ವಿಡಿಯೋ ಚಿತ್ರೀಕರಿಸಿ, ಪೆನ್‍ಡ್ರೈವ್‍ನಲ್ಲಿ ಅಳವಡಿಸಿ, ಪೆನ್‍ಡ್ರೈವ್‍ನೊಂದಿಗೆ ಅರ್ಜಿಯನ್ನು ರಿಜಿಸ್ಟ್ರಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ…

Read More

ಮಡಿಕೇರಿ ನ.29 NEWS DESK : ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಅಥವಾ ಆರ್ಥಿಕತೆಯ ಯಾವುದೇ ವಿಭಾಗದಿಂದ ಮೂಡಿದ ಜನಸಾಮಾನ್ಯರ ಅದರಲ್ಲೂ ಗ್ರಾಮೀಣ ಪ್ರದೇಶದ ಜನಜೀವನವನ್ನು ಪರಿವರ್ತಿಸಲು ಸಹಾಯಕವಾದ ಅಥವಾ ಉದ್ಯಮಗಳು ಹಾಗೂ ಉದ್ಯೋಗ ಸೃಷ್ಟಿಗೆ ಕಾರಣವಾದ ಅನುಕರಣೀಯ ಆವಿಷ್ಕಾರಗಳು, ಪರಿಹಾರಗಳನ್ನು ಪ್ರತಿ ವರ್ಷ ಗುರುತಿಸಿ ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳ ಹಾಗೂ ಬೋಧಕರಿಗೆ ಮತ್ತು ಜನಸಾಮಾನ್ಯರಿಗೆ ಸ್ನಾತಕೋತ್ತರ ವಿದ್ಯಾರ್ಥಿಗಳ ಅತ್ಯುತ್ತಮ ಆವಿಷ್ಕಾರ/ ನಾವಿನ್ಯತೆಗೆ ಪ್ರೊ.ಯು.ಆರ್.ರಾವ್ ಪುರಸ್ಕಾರ, ಪದವಿ ವಿದ್ಯಾರ್ಥಿಗಳ ಅತ್ಯುತ್ತಮ ಆವಿಷ್ಕಾರ/ ನಾವಿನ್ಯತೆಗೆ ಡಾ.ಎಸ್.ಕೆ.ಶಿವಕುಮಾರ್ ಪುರಸ್ಕಾರ ಮತ್ತು ಬೋಧಕರು ಹಾಗೂ ಜನಸಾಮಾನ್ಯರ ಅತ್ಯುತ್ತಮ ಆವಿಷ್ಕಾರ/ನಾವಿನ್ಯತೆಗೆ ಪ್ರೊ.ಎಸ್.ಅಯ್ಯಪ್ಪನ್ ಪುರಸ್ಕಾರ ಈ ಆವಿಷ್ಕಾರ/ನಾವೀನ್ಯತೆಗೆ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಈ ಪುರಸ್ಕಾರಕ್ಕೆ ರೂ.10 ಸಾವಿಗಳ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ನೀಡಲಾಗುವುದು. ಆಸಕ್ತರು ಡಿಸೆಂಬರ್, 31 ರೊಳಗೆ ಅಕಾಡೆಮಿಯ ವೆಬ್‍ಸೈಟ್‍ನಲ್ಲಿ https://kstacademy.in ನೀಡಿರುವ ಮಾರ್ಗಸೂಚಿಯನ್ವಯ ಆನ್‍ಲೈನ್ ಮೂಲಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಶ್ರೀನಿವಾಸು…

Read More