ಲೇಖಕ: admin

ಮಡಿಕೇರಿ ನ.28 NEWS DESK :  ಕೊಡಗಿನ ವಿರಾಜಪೇಟೆಯ ಪೆರಂಬಾಡಿಯಲ್ಲಿರುವ ಶಂಸುಲ್ ಉಲಮಾ ಬಡ ಮತ್ತು ನಿರ್ಗತಿಕ ಹೆಣ್ಣು ಮಕ್ಕಳ ಅನಾಥಾಲಯದ ಬನಾತ್ ಯುಎಇ ಸಮಿತಿಯನ್ನು ಸಂಸ್ಥೆಯ ಮುಖ್ಯಸ್ಥರಾದ ಬಷೀರ್ ಹಾಜಿ ವಿರಾಜಪೇಟೆ ಅವರ ನೇತೃತ್ವದಲ್ಲಿ ರಚಿಸಲಾಯಿತು. ಅಧ್ಯಕ್ಷರಾಗಿ ಹುಸೈನ್ ಫೈಝಿ  ಸೋಮವಾರಪೇಟೆ ಹಾಗೂ ಮುಖ್ಯ ಕಾರ್ಯದರ್ಶಿಯಾಗಿ ರಫೀಕಲಿ ಕುಂಡಂಡ ಕುಂಜಿಲ ಅವರು ಆಯ್ಕೆಯಾದರು.  ಉಪಾಧ್ಯಕ್ಷರಾಗಿ ಹಾರಿಸ್ ಬಾಖವಿ ಎಡಪಾಲ, ಅಬ್ದುಲ್ ಸಲಾಂ ಕುಂಜಿಲ, ಸಹ ಕಾರ್ಯದರ್ಶಿಗಳಾಗಿ ಯಹ್ಯಾ – ಕೊಡ್ಲಿಪೇಟೆ, ನವಾಜ್ – ಎಡಪಾಲ ಆಯ್ಕೆಯಾದರು. ಖಜಾಂಚಿಯಾಗಿಅಶ್ರಫ್ ಇಅ ಎಮ್ಮೆಮಾಡು, ಸಲಹಾ ಸಮಿತಿಗೆ  ಸಯ್ಯಿದ್ ಅಷ್ಕರ್ ಅಲಿ ತಂಗಳ್  ಮಂಗಳೂರು, ಬಶೀರ್ ಹಾಜಿ ವಿರಾಜಪೇಟೆ, ಅಬೂಬಕ್ಕರ್ ಹಾಜಿ  ಕೊಟ್ಟಮುಡಿ,  ಬಶೀರ್ ಹಾಜಿ ಎಡಪಲ,  ಸಲೀಂ ಹಾಜಿ ಆರೆಕ್ಕಾಡು ನೇಮಕಗೊಂಡರು. ಸಮಿತಿ ಸದಸ್ಯರಾಗಿ ಜುನೈದ್ ಬಜೆಗುಂಡಿ, ಬಶೀರ್ ಚೇರಂಬಾಣೆ, ಸಫ್ವಾನ್ ಚಾಮಿಯಾಲ, ನಿಜಾಮ್ ಎಡಪಾಲ,  ನಿಶಾಬ್  ನೆಲ್ಲಿಹುದಿಕೇರಿ, ಉಸ್ಮಾನ್ ಕುಶಾಲನಗರ ಆಯ್ಕೆಯಾದರು.

Read More

ಮಡಿಕೇರಿ ನ.28 NEWS DESK : ಅಯ್ಯಂಗೇರಿ ಗ್ರಾಮ ಪಂಚಾಯಿತಿಯ ನೂತನ ಕಟ್ಟಡವನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಮತ್ತು ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಶಾಸಕರು, ಗ್ರಾಮ ಪಂಚಾಯತ್ ಜವಾಬ್ದಾರಿ ಸಂವಿಧಾನದ ಅಡಿಯಲ್ಲಿ ಅತ್ಯಂತ ಪ್ರಮುಖವಾಗಿದ್ದು. ಗ್ರಾಮದ ಜನರಿಗೆ ನೇರವಾಗಿ ಸಂಪರ್ಕಕ್ಕೆ ಸಿಗುವ ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳು ಸರ್ಕಾರದ ಪ್ರತಿನಿಧಿಗಳಂತೆ ಜನರ ಕಷ್ಟಗಳಿಗೆ ಸ್ಪಂದಿಸಲು ತುಂಬಾ ಅನುಕೂಲಕರವಾಗಿದೆ ಎಂದರು. ಗ್ರಾಮ ಪಂಚಾಯತ್ ಪ್ರತಿನಿಧಿಗಳು ಜನರ ಸಮಸ್ಯೆಗೆ ಸ್ಪಂದಿಸಬೇಕು ಮತ್ತು ಜನಸೇವೆಯ ಉದ್ದೇಶದಿಂದ ಚುನಾವಣೆಗೆ ನಿಲ್ಲಬೇಕೆ ಹೊರತು ಪ್ರತಿಷ್ಠೆಗೆ ಅಲ್ಲ ಎಂದು ಸಲಹೆ ನೀಡಿದರು. ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಗ್ರಾಮ ಪಂಚಾಯತ್ ಮೂಲಕ ಗ್ರಾಮೀಣ ಜನರಿಗೆ ಹೆಚ್ಚು ಕೆಲಸಗಳು ಆಗಲಿ, ಆ ನಿಟ್ಟಿನಲ್ಲಿ ಗ್ರಾಮದ ಮೂಲ ಸೌಲಭ್ಯಕ್ಕೆ ಒತ್ತು ನೀಡಬೇಕು ಎಂದು ತಿಳಿಸಿದರು. ಪಂಚಾಯಿತಿ ಅಧ್ಯಕ್ಷರಾದ ಪುಷ್ಪ ಮತ್ತು ಉಪಾಧ್ಯಕ್ಷರಾದ ಮಿಶ್ರಿಯ, ಪಂಚಾಯಿತಿ ಸದಸ್ಯರು…

Read More

ಮಡಿಕೇರಿ ನ.28 NEWS DESK : ನಗರಸಭೆ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ಪೌರಕಾರ್ಮಿಕರ ದಿನಾಚರಣೆ ನಡೆಯಿತು. ಕಾರ್ಯಕ್ರಮವನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಿ, ಪೌರ ಕಾರ್ಮಿಕರ ಕಾರ್ಯವೈಖರಿಯನ್ನು ಶ್ಲಾಘೀಸಿದರು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಪಿ.ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ,  ನಾಮನಿರ್ದೇಶಿತ ಸದಸ್ಯರಾದ ಮುದ್ದುರಾಜ್, ಮಾಜಿ ಅಧ್ಯಕ್ಷೆ ಅನಿತಾ ಪೂವಯ್ಯ,  ನಗರಸಭಾ ಸದಸ್ಯರುಗಳು  ಹಾಜರಿದ್ದರು.

Read More

ವಿರಾಜಪೇಟೆ ನ.28 NEWS DESK : ವಿರಾಜಪೇಟೆ ಮಾಜಿ ಸೈನಿಕರ ಸಂಘದ ವತಿಯಿಂದ ಮೇಜರ್ ಜನರಲ್ ಬಾಚಿಮಂಡ ಕಾರ್ಯಪ್ಪ ಅವರನ್ನು ಸನ್ಮಾನಿಸಲಾಯಿತು. ವಿರಾಜಪೇಟೆಯ ಮಾಜಿ ಸೈನಿಕರ ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಹಾಗೂ ಸದಾ ಸೈನಿಕರ ಬಗ್ಗೆ ಅಪಾರ ಕಾಳಜಿ ಹೊಂದಿ, ಅವರ ಅಭಿವೃದ್ಧಿಗೆ ಸಹಕರಿಸುವ ನಿಟ್ಟಿನಲ್ಲಿ ತೊಡಗಿಸಿಕೊಂಡಿರುವ ಮೇಜರ್ ಜನರಲ್ ಕಾರ್ಯಪ್ಪ ಅವರು, ಪ್ರಸಕ್ತ ಕಟ್ಟಡದ ಮೂರನೇ ಅಂತಸ್ತಿನ ನಿರ್ಮಾಣ ಕಾಮಗಾರಿಗೆ ರೂ. 1,00,000 ದೇಣಿಗೆ ಮತ್ತು 5,00,000 ಬಡ್ಡಿ ರಹಿತ ಸಾಲ ನೀಡಿರುವ ಹಿನ್ನಲೆಯಲ್ಲಿ ಅವರನ್ನು ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಮಾತನಾಡಿದ ಸಂಘದ ಅಧ್ಯಕ್ಷ ಚಪ್ಪಂಡ ಹರೀಶ್ ಅವರು, ಭಾರತೀಯ ಸೇನೆಯ ತವರೂರಾದ ಕೊಡಗು ಜಿಲ್ಲೆಯಲ್ಲಿ ಮಡಿಕೇರಿಯಲ್ಲಿ ಮಾತ್ರ ಒಂದು ಸಿಎಸ್‍ಡಿ ಕ್ಯಾಂಟೀನ್ ಚಾಲನೆಯಲ್ಲಿತ್ತು. ಗೋಣಿಕೊಪ್ಪ, ಬಿರುನಾಣಿ, ಬಿ.ಶೆಟ್ಟಿಗೇರಿ, ಶೆಟ್ಟಿಗೇರಿ, ಕುಟ್ಟ, ಹೀಗೆ ದೂರದ ಗ್ರಾಮದ ಮಾಜಿ ಸೈನಿಕರಿಗೆ ಮಡಿಕೇರಿಗೆ ಹೋಗಿ ಕ್ಯಾಂಟೀನ್ ಸೌಲಭ್ಯ ಪಡೆದುಕೊಳ್ಳುವುದು ತುಂಬಾ ಅನಾನುಕೂಲತೆಗಳನ್ನು ಎದುರಿಸಬೇಕಾಗಿತ್ತು. ಇದರ ಅರಿವನ್ನು ಮನಗಂಡ…

Read More

ಮಡಿಕೇರಿ ನ.28 NEWS DESK : ಶ್ರೀ ಕಾವೇರಮ್ಮ ಕೊಡವ ಹಿತ ರಕ್ಷಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಭಾಗಮಂಡಲದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕೊಡವ ಮತ್ತು ಅಮ್ಮ ಕೊಡವ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಮತ್ತು ಮೈಸೂರು- ಕೊಡಗು ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಅವರು ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭ  ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಶ್ರೀ ಕಾವೇರಮ್ಮ ಕೊಡವ ಹಿತ ರಕ್ಷಣಾ ಚಾರಿಟೇಬಲ್ ಟ್ರಸ್ ನಾ ಅಧ್ಯಕ್ಷರು ಮುದ್ದಂಡ ದೇವಯ್ಯ, ಸದಸ್ಯರು, ಪದಾಧಿಕಾರಿಗಳು, ಅಹ್ವಾನಿತ ಗಣ್ಯರು, ನಾಪೋಕು ಬ್ಲಾಕ್ ಅಧ್ಯಕ್ಷರು ಇಸ್ಮಾಯಿಲ್, ವಲಯ ಅಧ್ಯಕ್ಷರು ವೆಂಕಟೇಶ್ ಕೋಳಿಬೈಲು, ಕೊಡವ ಫೆಡರೇಷನ್ ಅಧ್ಯಕ್ಷರು ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಅಮ್ಮ ಕೊಡವ ಸಮಾಜದ ಅಧ್ಯಕ್ಷರು ಶ್ರೀ ಬಾನಂಡ ಪ್ರತ್ಯು, ಪಂಚಾಯಿತಿ ಅಧ್ಯಕ್ಷರು, ಹಾಗೂ ಪ್ರಮುಖರು ಉಪಸ್ಥಿತರಿದ್ದರು. ದಶಕಗಳಿಂದ ಕಾವೇರಮ್ಮ ಕೊಡವ ಚಾರಿಟೇಬಲ್ ಟ್ರಸ್ಟ್ ಅವರು ಈ ಭಾಗದಲ್ಲಿ…

Read More

ಗೋಣಿಕೊಪ್ಪ ನ.28 NEWS DESK  : ಬುಡಕಟ್ಟು ಸಮುದಾಯದ ಯುವಕರು ನಾಗರಹೊಳೆ ಅರಣ್ಯ ಪ್ರದೇಶದ ನಾಣಚ್ಚಿ ಗೇಟ್ ಬಳಿ ಕ್ರಿಕೆಟ್ ಪಂದ್ಯಾಟ ನಡೆಸಿರುವ ಬಗ್ಗೆ ಅರಣ್ಯ ಅಧಿಕಾರಿಗಳಲ್ಲಿ ಮಾಹಿತಿ ಕೇಳಿದ ಅರಣ್ಯ ಸಚಿವರ ನಡೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಕಾಡಿನ ಮಕ್ಕಳು, ಸಚಿವರು ಕೇಳಿದ ಮಾಹಿತಿಗೆ ಪ್ರತ್ಯುತ್ತರ ಪತ್ರವನ್ನು ಸಲ್ಲಿಸಿದ್ದಾರೆ. ನಾಗರಹೊಳೆ ಪ್ರವೇಶ ದ್ವಾರದಲ್ಲಿ ಬುಡಕಟ್ಟು ನಾಗರಹೊಳೆ ಆದಿವಾಸಿ ಜಮ್ಮಪಾಳೆ ಹಕ್ಕು ಸ್ಥಾಪನಾ ಸಮಿತಿ ಗ್ರಾಮಸಭೆ ಒಕ್ಕೂಟ, ಬಾಳೆಕೊವುಹಾಡಿ ತುಂಡುಮುಂಡಗೆ ಕೊಲ್ಲಿ, ಗದ್ದೆಹಾಡಿ, ಬೇಗೂರುಪಾರೆ ನಾಣಚ್ಚಿ ಗದ್ದೆ ಹಾಡಿ ಗ್ರಾಮಸಭೆ ಸದಸ್ಯರುಗಳ ವತಿಯಿಂದ ಪ್ರತಿಭಟನೆಗೆ ಮುಂದಾದ ಕಾಡಿನ ಮಕ್ಕಳು “ನಮಗೆ ಕ್ರಿಕೆಟ್ ಆಡುವ ಹಕ್ಕು ಇಲ್ಲವೇ” ಎಂದು ಪ್ರಶ್ನಿಸುವ ಮೂಲಕ ಬುಡಕಟ್ಟು ಸಮುದಾಯದವರು ನಮ್ಮ ಬದುಕಿನ ಹಕ್ಕಿಗಾಗಿ ಹೋರಾಡುತ್ತಿರುವ”, ಸ್ಥಿತಿಯ ಬಗ್ಗೆ ಪ್ರತಿಭಟನೆಯಲ್ಲಿ ಮನವರಿಕೆ ಮಾಡಿಕೊಡಲು ಮುಂದಾದರು. “ನಾಗರಹೊಳೆ ಗೇಟಿನಲ್ಲಿ ಕ್ರಿಕೆಟ್ ಆಡಲು ದೊಡ್ಡ ಪ್ರಮಾಣದ ಮರಗಳ ಹಾನನ ನಡೆದಿದೆ ಎಂದು ಡೋಂಗಿ ಪರಿಸರವಾದಿ ದೂರು ನೀಡಿದ್ದಾರೆ. ಇದನ್ನೇ ನಂಬಿಕೊಂಡ ಸಚಿವರು…

Read More

ಮಡಿಕೇರಿ ನ.28 NEWS DESK :  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಕರ್ನಾಟಕದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ “ಸುವರ್ಣ ಮಹೋತ್ಸವ”, ಮಕ್ಕಳ‌ ದಿನಾಚರಣೆ, ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಉದ್ಘಾಟಿಸಿ, ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಗಳು ಹಾಗೂ ಗೃಹಲಕ್ಷ್ಮಿ ಸಹಕಾರ ಆಪ್ ಅನ್ನು ಲೋಕಾರ್ಪಣೆಗೊಳಿಸಿದರು. ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಸಚಿವರುಗಳಾದ ಲಕ್ಷ್ಮೀ ಹೆಬ್ಬಾಳ್ಕರ್, ಹೆಚ್.ಸಿ.ಮಹದೇವಪ್ಪ, ಕೆ.ಎಚ್.ಮುನಿಯಪ್ಪ, ಈಶ್ವರ ಖಂಡ್ರೆ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Read More

ಮಡಿಕೇರಿ NEWS DESK  ನ.28 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ 21ನೇ ಮಾನವ ಸರಪಳಿ ಕಾರ್ಯಕ್ರಮ ನ.30ರಂದು ಪಾಲಿಬೆಟ್ಟದಲ್ಲಿ ನಡೆಯಲಿದೆ. 2026-27ರಲ್ಲಿ ನಡೆಯಲಿರುವ 16ನೇ ರಾಷ್ಟ್ರೀಯ ಜನಗಣತಿಯಲ್ಲಿ ಆದಿಮ ಸಂಜಾತ ಏಕ-ಜನಾಂಗೀಯ ಆನಿಮಿಸ್ಟಿಕ್ ಕೊಡವರು ಪ್ರತ್ಯೇಕವಾಗಿ ‘ಕೊಡವ’ ಎಂದು ದಾಖಲೀಕರಣಗೊಳ್ಳುವಂತೆ ಜನಜಾಗೃತಿ ಮೂಡಿಸಲಾಗುವುದು ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಭಾನುವಾರ ಬೆಳಿಗ್ಗೆ 10.30 ಗಂಟೆಗೆ ಪಾಲಿಬೆಟ್ಟದಲ್ಲಿ ಶಾಂತಿಯುತವಾಗಿ ಮಾನವ ಸರಪಳಿ ನಿರ್ಮಿಸಲಾಗುವುದು ಮತ್ತು ಕೊಡವರ ಪರವಾದ ವಿವಿಧ ಬೇಡಿಕೆಗಳ ಕುರಿತು ಸರಕಾರದ ಗಮನ ಸೆಳೆಯಲಾಗುವುದು ಎಂದು ಹೇಳಿದ್ದಾರೆ. ಕೊಡವಲ್ಯಾಂಡ್ ಭೂ ರಾಜಕೀಯ ಸ್ವಯಂ ಆಡಳಿತ, ಕೊಡವರಿಗೆ ವಿಶ್ವರಾಷ್ಟ್ರ ಸಂಸ್ಥೆಯ ಇಂಡಿಜಿನಸ್ ಪಿಪಲ್ಸ್ ರೈಟ್ಸ್, ಎಸ್.ಟಿ.ಪಟ್ಟಿಯಲ್ಲಿ ವರ್ಗೀಕರಣ, ಸಿಕ್ಕಿಂನ “ಸಂಘ” ಮತಕ್ಷೇತ್ರದಂತೆ ಸಂಸತ್ ಮತ್ತು ವಿಧಾನಸಭೆಯಲ್ಲಿ ವಿಶೇಷ ಪ್ರಾತಿನಿಧ್ಯ ನೀಡಬೇಕು. ಕೊಡವರ ಪೂರ್ವಾರ್ಜಿತ ಭೂ ಹಕ್ಕು ಮತ್ತು ಧಾರ್ಮಿಕ ಸಂಸ್ಕಾರ ತೋಕ್ ಹಕ್ಕು ಚಿರಸ್ಥಾಯಿಯಾಗಿ ಮುಂದುವರೆಯಬೇಕು ಸೇರಿದಂತೆ ಕೊಡವರ ಸಬಲೀಕರಣಕ್ಕೆ ಪೂರಕವಾಗಿರುವ ಸಂವಿಧಾನಬದ್ಧವಾದ…

Read More

ಪುತ್ತೂರು ನ.28 NEWS DESK : ಕಾಲೇಜಿನಲ್ಲಿ ಕಲಿಯುತ್ತಿರುವ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯನ್ನು ತಿಳಿದು ಕೊಳ್ಳುವುದಕ್ಕಾಗಿ ಹೆತ್ತವರು ಅಥವಾ ಪೋಷಕರು ನಿಯಮಿತವಾಗಿ ಕಾಲೇಜಿನ ಸಂಪರ್ಕದಲ್ಲಿರುವುದು ಅವಶ್ಯಕ ಎಂದು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಹೇಳಿದರು. ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೂಲವಿಜ್ಞಾನ ವಿಭಾಗ ಮತ್ತು ಪೇರೆಂಟ್ ರಿಲೇಶನ್ ಸೆಲ್ ಇದರ ಸಂಯುಕ್ತ ಆಶ್ರಯದಲ್ಲಿ ಸಾವರ್ಕರ್ ಸಭಾಭವನದಲ್ಲಿ ನಡೆದ ಪ್ರಸಕ್ತ ಶೈಕ್ಷಣಿಕ ವರ್ಷದ ಪ್ರಥಮ ವರ್ಷದ ವಿದ್ಯಾರ್ಥಿಗಳ ಹೆತ್ತವರ ಮತ್ತು ಪೋಷಕರ ಸಮಾಲೋಚನ ಸಭೆಯ ಅಧ್ಯಕ್ಷತೆ ವಹಿಸಿ ಮಾತಾಡಿದರು. ವಿದ್ಯಾರ್ಥಿಗಳು ಕಾಲೇಜಿನ ಚಟುವಟಿಕೆಗಳ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡದೇ ಗೊಂದಲಗಳು ಉಂಟಾದ ಹಲವಾರು ಉದಾಹರಣೆಗಳು ನಮ್ಮ ಮುಂದಿದ್ದು, ಉಪನ್ಯಾಸಕರು, ವಿಭಾಗ ಮುಖ್ಯಸ್ಥರು ಅಥವಾ ಪ್ರಾಂಶುಪಾಲರ ಜತೆಗೆ ಚರ್ಚಿಸಿಯೇ ನೀವು ಮುಂದಡಿ ಇಡಬೇಕು ಎಂದು ಹೇಳಿದರು. ಕಾಲೇಜಿನ ಬೆಳ್ಳಿಹಬ್ಬದ ಪ್ರಯುಕ್ತ ಪಂಚವಿಂಶತಿ ಸರಣಿ ಕಾರ್ಯಕ್ರಮಗಳು ನಡೆಯುತ್ತಿವೆ ಇದರಲ್ಲಿ ವಿದ್ಯಾರ್ಥಿಗಳು ಪೂರ್ಣ…

Read More

ಮಡಿಕೇರಿ ನ.28 NEWS DESK : ನೂರಾರು ವರ್ಷಗಳ ಕಾಲ ಪ್ರಾಣಿ ಪಕ್ಷಗಳ ಆವಾಸ ಸ್ಥಾನವಾಗಿ, ಬಿಸಿಲ ಬೇಗೆಗೆ ತಂಪಾದ ನೆರಳು ನೀಡಿ ಕಳೆದ ಮುಂಗಾರಿನ ಅವಧಿಯಲ್ಲಿ ಧರೆಗುರುಳಿ ಇತಿಹಾಸ ಸೇರಿದ ನಗರದ ಜಿಲ್ಲಾ ಕ್ರೀಡಾಂಗಣ ಬಳಿಯ ಕೊಡವ ಸಮಾಜದ ‘ಮಂದ್’ನ ಅತ್ತಿಮರವಿದ್ದ ಜಾಗದಲ್ಲಿ ‘ಅರಳಿ ಗಿಡ’ವನ್ನು ನೆಟ್ಟು, ಅದನ್ನು ಸಂರಕ್ಷಿಸುವ ನಿರ್ಧಾರ ತಳೆಯಲಾಯಿತು. ಮಡಿಕೇರಿ ಕೊಡವ ಸಮಾಜದ ಮಂದ್‍ನಲ್ಲಿ ಅರಳಿ ಗಿಡವನ್ನು ನೆಡಲು ಕೈಜೋಡಿಸಿದ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ಮಂದ್‍ನ ರಕ್ಷಣೆಯ ಜವಾಬ್ದಾರಿ ನಮ್ಮೆಲ್ಲರ ಹೊಣೆಯಾಗಿದೆಯೆಂದರು. ಸುಮಾರು ಎರಡೂವರೆ ಶತಮಾನಗಳ ಇತಿಹಾಸ ಹೊಂದಿರುವ ಮಂದ್‍ನಲ್ಲಿದ್ದ ಬೃಹತ್ ಅತ್ತಿ ಮರ ಮರಿದು ಬಿದ್ದ ಹಿನ್ನೆಲೆಯಲ್ಲಿ ನೂತನ ಕಟ್ಟೆ ನಿರ್ಮಿಸಿ ಅರಳಿ ಗಿಡವನ್ನು ನೆಡಲಾಗಿದೆಯೆಂದು ತಿಳಿಸಿದರು. ಮಡಿಕೇರಿ ಕ್ಷೇತ್ರರ ಶಾಸಕ ಮಂತರ್ ಗೌಡ ಮಾತನಾಡಿ, ಹಿಂದೂ ಸಂಪ್ರದಾಯದಲ್ಲಿ ಧಾರ್ಮಿಕ ಆಚರಣೆಯಂತೆ ಊರಿಗೆ ಒಂದು ಅರಳಿ ಮರ ಇರುತ್ತಿತ್ತು. ಅದರಂತೆ ಮಡಿಕೇರಿಯಲ್ಲಿರುವ ಮಂದ್‍ನಲ್ಲಿ ಕೊಡವ ಸಂಪ್ರದಾಯದಂತೆ ಅರಳಿ ಗಿಡವನ್ನು ನೆಟ್ಟಿರುವುದು ಹೆಮ್ಮೆಯ ವಿಷಯ.…

Read More