ಲೇಖಕ: admin

ವಿರಾಜಪೇಟೆ ನ.25 NEWS DESK : ಭೌವ್ಯ ಪರಂಪರೆಯ, ವಿವಿಧತೆಯಲ್ಲಿ ಏಕತೆ ಕಂಡ ಜಾನಪದ ಸೊಗಡು ಕಂಡ ಭಾಷೆ ಕನ್ನಡ. ಇತರ ಭಾಷೆಗಳನ್ನು ಗೌರವಿಸಿ ತಾಯಿ ಕನ್ನಡ ಭಾಷೆಯನ್ನು ಧೀಮಂತಗೊಳಿಸುವ ಪ್ರಯತ್ನ ನಿರಂತರವಾಗಿ ಸಾಗಬೇಕು ಎಂದು ಕೊಡಗು ವಿಶ್ವವಿದ್ಯಾಲಯ ಕುಲಪತಿಗಳಾದ ಡಾ. ಅಶೋಕ ಸಂಗಪ್ಪ ಆಲೂರ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಸೈಂಟ್ ಆನ್ಸ್ ಪದವಿ ಕಾಲೇಜು ಕನ್ನಡ ಭಾಷಾ ವಿಭಾಗ, ಕೊಡಗು ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತು, ಮತ್ತು ವಿರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತ ಆಶ್ರಯದಲ್ಲಿ  ಕಾಲೇಜು ಆವರಣದಲ್ಲಿ ಕನ್ನಡ ರಾಜ್ಯೋತ್ಸವ ದ ಅಂಗವಾಗಿ ನುಡಿ ನಡೆ ಯುವಜನರ ಕಡೆ ಶೀರ್ಷಿಕೆ ಅಡಿಯಲ್ಲಿ ನುಡಿ ಉತ್ಸವ ಅಂತರ್ ತರಗತಿ ಕನ್ನಡ ಗಾಯನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಕುಲಪತಿಗಳು ಧೀಮಂತ ಸಂಸ್ಕೃತಿ ಹೊಂದಿರುವ ಕನ್ನಡ ಭಾಷೆಯನ್ನು ಪೋಷಕರು ಮನೆಯಿಂದ, ಶಿಕ್ಷಕರು ವಿದ್ಯಾಲಯದಿಂದ ತಿಳಿಯಪಡಿಸುವಂತಾಗಬೇಕು. ನಾವೇ ಭಾಷೆಗೆ ಗೌರವವಿತ್ತು ಇತರರಿಗೆ ಧಾರೆಯೆರೆಯುವಂತಾಗಬೇಕು. ಕನ್ನಡ ಭಾಷೆಯಲ್ಲಿ ಪಾಂಡಿತ್ಯ ಪಡೆದ ಹಲವು ವಿದ್ವಾಂಸರು ಧೀಮಂತ ಸಾಹಿತ್ಯ…

Read More

ವಿರಾಜಪೇಟೆ ನ.25 NEWS DESK : ವಿರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್ ಎಸ್ ಎಸ್ ಘಟಕ ಹಾಗೂ ಡಾ. ಅಗರ್ವಾಲ್ಸ್ ಕ್ಲಿನಿಕ್ ನ ಸಹಯೋಗದಲ್ಲಿ ನ.29 ರಂದು ಸಾರ್ವಜನಿಕರಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಬೇಟೋಳಿ ಗ್ರಾಮ ಪಂಚಾಯಿತಿಯಲ್ಲಿ ಆಯೋಜಿಸಲಾಗಿದೆ. ಶಿಬಿರವು ಬೆಳಿಗ್ಗೆ 10 ಗಂಟೆಗೆ ಆರಂಭವಾಗಿ ಸಂಜೆ 4 ಗಂಟೆಗೆಯ ವರೆಗೆ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಬೇಟೋಳಿ ಪಂಚಾಯತ್ ಪ್ರಕಟಣೆಯಲ್ಲಿ ಕೋರಿದೆ.

Read More

ಸುಂಟಿಕೊಪ್ಪ ನ.25 NEWS DESK : ಸರಕಾರಿ ಪದವಿಪೂರ್ವ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದ್ದು, ವಿಜೇತ ಮಕ್ಕಳಿಗೆ ಸಮಾಜ ಸೇವಕ ಇಬ್ರಾಹಿಂ (ಬಾಪ್ಪು) ಬಹುಮಾನಗಳನ್ನು ವಿತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆ ಉಪಪ್ರಾಂಶುಪಾಲ ಬಾಲಕೃಷ್ಣ ಮಾತನಾಡಿ, ಸರಕಾರಿ ಶಾಲೆಗೆ ದಾನಿಗಳು ದೊರೆಯುವುದೇ ಅಪರೂಪ ಇಂತಹ ಸಂದರ್ಭದಲ್ಲಿ ಸ್ಥಳೀಯರಾದ ಇಬ್ರಾಹಿಂ ಬಾಪು ಅವರು ಸರಕಾರಿ ಶಾಲೆ ಮತ್ತು ಮಕ್ಕಳ ಮೇಲೆ ಅಭಿಮಾನವಿಟ್ಟು ಕ್ರೀಡಾಕೂಟದಲ್ಲಿ ಜಯಗಳಿಸಿದ ಮಕ್ಕಳಿಗೆ ಬಹುಮಾನಗಳನ್ನು ಪ್ರಯೋಜಿಸಿರುವುದು ಶ್ಲಾಘನೀಯ ಎಂದರು. ಶಾಲೆಯ ಅಭಿವೃದ್ಧಿಯ ದಿಸೆಯಲ್ಲಿ ಹಳೆಯ ವಿದ್ಯಾರ್ಥಿಗಳು ಶಾಲೆಯ ಕಟ್ಟಡಗಳನ್ನು ದುರಸ್ತಿಗೊಳಿಸುವ ಮೂಲಕ ರೂಪುಗೊಳಿಸಿರುವುದು ಮತ್ತು ಕೆನಾರಬ್ಯಾಂಕ್ ವತಿಯಿಂದ ಶಾಲೆಗೆ ಅಭಿವೃದ್ಧಿಗೆ 2 ಲಕ್ಷ ರೂ ದೇಣಿಗೆ ದೊರೆತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಸುಂಟಿಕೊಪ್ಪ ಹಿರಿಯ ಪತ್ರಕರ್ತರಾದ ಬಿ.ಡಿ.ರಾಜು ರೈ ಮಾತನಾಡಿ, ಸಮಾಜ ಸೇವೆಯಲ್ಲಿ ನಿರಂತವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಇಬ್ರಾಹಿಂ ಅವರ ಕೊಡುಗೆ ಒಂದು ಶಾಲೆಗೆ ಮಾತ್ರ ಸಿಮೀತವಾಗಿ ದೇಣಿಗೆ ನೀಡದೆ ಸರಕಾರಿ ಶಾಲೆಗಳನ್ನು ಗುರುತಿಸಿ ದೇಣಿಗೆ…

Read More

ಸೋಮವಾರಪೇಟೆ ನ.25 NEWS DESK : ಸೋಮವಾರಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಕುಂಬೂರು ಖಾಸಗಿ ಹೋಮ್ ಸ್ಟೇಯಲ್ಲಿ ನಡೆಯಿತು. ಸಿಗ್ಮಾ ನೆಟ್‍ವರ್ಕ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಶರಣ್ ಪೂಣಚ್ಚ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪತ್ರಕರ್ತನು ಕೇವಲ ಸುದ್ದಿಯನ್ನು ಬರೆಯುವ ವ್ಯಕ್ತಿ ಮಾತ್ರವಲ್ಲ, ಸಮಾಜದ ಕಣ್ಣಾಗಿಯೂ, ಕಿವಿಯಾಗಿಯೂ ಕೆಲಸ ಮಾಡುತ್ತಾರೆ. ಒತ್ತಡದ ಮಧ್ಯೆ ಕೆಲಸ ಮಾಡುವ ಪತ್ರಕರ್ತರಿಗೆ ಭದ್ರತೆಯ ಅವಶ್ಯಕತೆಯಿದೆ. ಸರ್ಕಾರ ಪತ್ರಕರ್ತರ ಬೇಡಿಕೆಗಳನ್ನು ಈಡೇರಿಸಬೇಕು. ಪತ್ರಿಕೋಧ್ಯಮದಲ್ಲಿ ಜಾತಿ, ಧರ್ಮ, ವರ್ಣ, ರಾಜಕೀಯ ಹೊರತುಪಡಿಸಿ ಉತ್ತಮ ಸಮಾಜದ ಹಿತದೃಷ್ಟಿಯಲ್ಲಿ ಕೆಲಸ ಮಾಡುವವ ನಿಜವಾದ ಪತ್ರಕರ್ತ ಎನಿಸಿಕೊಳ್ಳುತ್ತಾರೆ ಎಂದು ಅವರು ಹೇಳಿದರು. ಸಂಘದ ಜಿಲ್ಲಾಧ್ಯಕ್ಷೆ ಸವಿತಾ ರೈ ಮಾತನಾಡಿ, ಪತ್ರಿಕೋದ್ಯಮದ ನೈತಿಕತೆ, ಸಾರ್ವಜನಿಕರ ಧ್ವನಿಯನ್ನು ನಿರ್ಭೀತಿಯಾಗಿ ಸಮಾಜಕ್ಕೆ ತಿಳಿಸುವಲ್ಲಿ ಪತ್ರಕರ್ತರ ಪಾತ್ರ ಮತ್ತು ಸಮಾಜದ ಪರಿವರ್ತನೆಗೆ ಮಾಧ್ಯಮದ ಪ್ರಭಾವ  ಪಾತ್ರದ ಬಗ್ಗೆ ಮಾತನಾಡಿದರು. 90 ವರ್ಷಗಳ ಸುದೀರ್ಘ ಇತಿಹಾಸ…

Read More

ಸೋಮವಾರಪೇಟೆ ನ.25 NEWS DESK : ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಸೋಮವಾರಪೇಟೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಎಸ್.ಜೆ.ಎಂ.ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಪ್ರಾಥಮಿಕ ವಿಭಾಗದಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಗಳಿಸಿದ್ದಾರೆ.  ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಹೆಚ್.ಎಸ್.ನಿಹಾಲ್ ದೇಶಭಕ್ತಿ ಗೀತೆ ಪ್ರಥಮ, ಡಿ.ಕೃತಿಕಾ ಅಭಿನಯ ಗೀತೆ (ಪ್ರ), ವಿಂದ್ಯಾ ಶ್ರೀ ರಾಮ್ ಇಂಗ್ಲೀμï ಕಂಠಪಾಠ (ಪ್ರ), ಹೆಚ್.ಆರ್.ಚಂದನ್ ಛದ್ಮ ವೇಷ (ಪ್ರ),  ಎಸ್.ಎಂ. ಪ್ರಣಮ್ ಚಿತ್ರಕಲೆ (ದ್ವಿ), ಆರ್.ದರ್ಶನ್ ಕನ್ನಡ ಕಂಠಪಾಠ (ದ್ವಿ), ಆಶಿನಿ- ಭಕ್ತಿಗೀತೆ (ದ್ವಿ), ಮಹಮದ್ ಸುಹೈಲ್- ಕಥೆ ಹೇಳುವುದು (ತೃ) ಸ್ಥಾನ ಗಳಿಸಿದರು. ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಹೆಚ್.ಎಸ್. ಅಹಲ್ಯ ಇಂಗ್ಲಿಷ್ ಕಂಠಪಾಠ (ಪ್ರ), ಹೆಚ್.ಎಂ.ಹೇಮಾವತಿ ಪ್ರಬಂಧ (ಪ್ರ), ಬಿ.ಬಿ.ಹಾಜಿರಾ ಕನ್ನಡ ಕಂಠಪಾಠ (ಪ್ರ) ಹೆಚ್.ಆರ್.ಮೋಕ್ಷಿತ ಭಕ್ತಿ ಗೀತೆ (ಪ್ರ), ಎಸ್.ಎಂ.ಪ್ರಣವಿ ಕಥೆ ಹೇಳುವುದು (ಪ್ರ), ಕೆ.ಎಲ್.ಭಾರತಿ ಅಭಿನಯ ಗೀತೆ (ಪ್ರ) ಹಾಗೂ ಆರ್.ಅರ್ಜುನ್ ಮಿಮಿಕ್ರಿಯಲ್ಲಿ (ತೃ) ಸ್ಥಾನ ಗಳಿಸಿದರು.

Read More

ಸೋಮವಾರಪೇಟೆ ನ.25 NEWS DESK : ಕೊಡವ ಸಮಾಜಕ್ಕೆ ಸೇರಿದ ಚೌಡ್ಲು ಗ್ರಾಮದ ನಿವೇಶನದಲ್ಲಿ ನೂತನ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಪ್ರಸಕ್ತ ಸಾಲಿನಲ್ಲಿ ಚಾಲನೆ ನೀಡಲಾಗುವುದು ಎಂದು ಸಮಾಜದ ಅಧ್ಯಕ್ಷರಾದ ಮಾಳೇಟಿರ ಅಭಿಮನ್ಯುಕುಮಾರ್ ಹೇಳಿದರು. ಸಮಾಜದ ಸಭಾಂಗಣದಲ್ಲಿ ನಡೆದ ಕೊಡವ ಸಮಾಜದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಸಮುದಾಯ ಭವನದ ನಿರ್ಮಾಣ ಕಾಮಗಾರಿಗೆ ಶಾಸಕರು, ಸಂಸದರು, ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತಿತರ ಜನಪ್ರತಿನಿಧಿಗಳ ಮೂಲಕ ಸÀರ್ಕಾರದ ಅನುದಾನಕ್ಕೆ ಮನವಿ ಮಾಡಲಾಗಿದೆ. ಈಗಾಗಲೇ ಸಮಾಜದ ಶ್ರೇಯೋಭಿವೃದ್ಧಿಗಾಗಿ, ಜನಾಂಗದ ಆಚಾರ ವಿಚಾರ, ಭಾóಷೆ, ಸಂಸ್ಕøತಿ ಹಾಗೂ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಸಮಾಜದ ಸದಸ್ಯರ ಓದುತ್ತಿರುವ ಮಕ್ಕಳಿಗೆ ಸಹಾಯ ಮಾಡುವ ಉದ್ದೇಶದಿಂದ ಶಾಶ್ವತ ವಿದ್ಯಾನಿಧಿಯನ್ನು ಸ್ಥಾಪಿಸಲಾಗುವುದು ಎಂದರು. ವೇದಿಕೆಯಲ್ಲಿ ಸಮಾಜದ ಉಪಾಧ್ಯಕ್ಷರಾದ ಬೊಳಂದಂಡ ಕುಟ್ಟಪ್ಪ, ಕಾರ್ಯದರ್ಶಿ ಅನಿಲ್, ಖಜಾಂಚಿ ಪಾಡೆಯಂಡ ಮುತ್ತಣ್ಣ ಸೇರಿದಂತೆ ಎಲ್ಲಾ ನಿರ್ದೆಶಕರುಗಳು ಇದ್ದರು.

Read More

ಸೋಮವಾರಪೇಟೆ ನ.25 NEWS DESK : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರು ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಮತ್ತು ವಿವಿಧ ಸೇವಾಸಂಸ್ಥೆಗಳ ಆಶ್ರಯದಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ತಾಲ್ಲೂಕು ಮಟ್ಟದ ವಿಶೇಷಚೇತನರ ಕ್ರೀಡಾಕೂಟ ನಡೆಯಿತು.ಕಾರ್ಯಕ್ರಮವನ್ನು ಇನ್ನರ್ ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್‍ನ ಅಧ್ಯಕ್ಷೆ ತನ್ಮಯಿ ಪ್ರವೀಣ್ ಉದ್ಘಾಟಿಸಿ, ಮಾತನಾಡಿ ಅಂಗವೈಕಲ್ಯಗಳು ಶಾಪವಲ್ಲ. ವಿಶೇಷ ಚೇತನರು ಸಮಾಜದಲ್ಲಿ ಎಲ್ಲರಷ್ಟೇ ಹಕ್ಕುಗಳನ್ನು ಹೊಂದಿರುತ್ತಾರೆ. ಅವರ ಹಕ್ಕುಗಳು, ಅಗತ್ಯಗಳು ಹಾಗೂ ಕನಸುಗಳನ್ನು ಸಾಧ್ಯವಾಗಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಕ್ರೀಡಾಕೂಟಗಳು ಅವರ ಪ್ರತಿಭೆಯನ್ನು ಹೊರತರುವ ಮಹತ್ವದ ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಟರು. ಮೈದಾನದಲ್ಲಿ ಹಮ್ಮಿಕೊಳ್ಳಲಾದ ಓಟ, ಭಾರದ ಗುಂಡು ಎಸೆತ, ವೇಗದ ನಡಿಗೆ, ಗಾಯನ ಸೇರಿದಂತೆ ಸುಮಾರು ಹದಿನೇಳು ಕ್ರೀಡಾ ವಿಭಾಗಗಳಲ್ಲಿ ವಿಶೇಷ ಚೇತನರು ಉತ್ಸಾಹದಿಂದ ಭಾಗವಹಿಸಿ ಸಂಭ್ರಮಿಸಿದರು. ಮಕ್ಕಳ ಕ್ರೀಡಾಪ್ರತಭೆಯನ್ನು ವೀಕ್ಷಿಸಿದ ಪೋಷಕರು, ಅತಿಥಿಗಲು ಮತ್ತು ಸಾರ್ವಜನಿಕರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಶಾಸಕರಾದ ಡಾ.ಮಂತರ್‍ಗೌಡ ಕ್ರೀಡಾಕೂಟಕ್ಕೆ ಆಗಮಿಸಿ, ಕ್ರೀಡಾಪಟುಗಳಿಗೆ…

Read More

ಮಡಿಕೇರಿ NEWS DESK ನ.25 : ಹಾಕತ್ತೂರು- ಬಿಳಿಗೇರಿ ಫಖೀರ್ ಬಾವ ಷಾವಲಿ ಅವರ ಹೆಸರಿನಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಉರೂಸ್ ನೇರ್ಚೆಯನ್ನು 2026 ರ ಏಪ್ರಿಲ್ 26, 27 ಮತ್ತು 28 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಸಲಾಗುವುದು ಎಂದು ಬದರ್ ಜಮಾಅತ್ ಆಡಳಿತ ಸಮಿತಿ ತಿಳಿಸಿದೆ.

Read More

ನಾಪೋಕ್ಲು ನ.25 NEWS DESK : ಶೌರ್ಯ ವಿಪತ್ತು ನಿರ್ವಹಣಾ ಘಟಕ ವತಿಯಿಂದ ನಾಪೋಕ್ಲು ಸರ್ಕಾರಿ ಪದವಿ ಕಾಲೇಜಿನಲ್ಲಿ ಶ್ರಮದಾನ ಮಾಡಲಾಯಿತು. ಸದಾ ಸಾರ್ವಜನಿಕ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಒಟ್ಟು ಸೇರಿ ಕಾಲೇಜಿನ ಆವರಣದಲ್ಲಿ ಬೆಳೆದಿದ್ದ ಕಾಡುಗಿಡ ಗಂಟಿಗಳನ್ನು ಕಡಿದು, ಪ್ಲಾಸ್ಟಿಕ್ ತ್ಯಜ್ಯಗಳನ್ನು ಹೆಕ್ಕಿ ಸ್ವಚ್ಛಗೊಳಿಸಿದರು. ಈ ಸಂದರ್ಭ ನಾಪೋಕ್ಲು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಮಾಸ್ಟರ್ ಬಾಳೆಯಡ ದಿವ್ಯ ಮಂದಪ್ಪ, ಹಾಗೂ ಸದಸ್ಯರಾದ ಉಮಾಲಕ್ಷ್ಮಿ, ಸುನಿತಾ, ರಮ್ಯಾ, ಚಂದ್ರಕಲಾ, ರಶ್ಮಿ ಶಂಕರ, ದಿಲೀಶ್, ಶರವಣ ನಾರಾಯಣ, ಮೈಲಪ್ಪ ಹಾಗೆ ಕಾಲೇಜು ಪ್ರಿನ್ಸಿಪಾಲ್ ಹೆಚ್.ಸಿ.ಪಲ್ಲವಿ ಉಪನ್ಯಾಸಕರು ಹಾಜರಿದ್ದರು. ವರದಿ : ದುಗ್ಗಳ ಸದಾನಂದ. 

Read More

ವಿರಾಜಪೇಟೆ ನ.25 NEWS DESK : ಸುಳ್ಯ ತಾಲ್ಲೂಕಿನ ಕುರುಂಜಿ ಜಾನಕಿ ವೆಂಕಟರಮಣ ಗೌಡ ಸಭಾ ಭವನ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ವಿರಾಜಪೇಟೆಯ ಪೆರುಂಬಾಡಿ ಗ್ರಾಮದ ಜೆನ್ ಶಿಟೋರಿಯೋ ಸ್ಕೂಲ್ ಆಫ್ ಇಂಡಿಯಾದ 15 ವಿದ್ಯಾರ್ಥಿಗಳು ಪಾಲ್ಗೊಂಡು ಚಿನ್ನ, ಬೆಳ್ಳಿ, ಕಂಚಿನವನ್ನು ಗೆದ್ದಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ದೃತಿಕ್, ಪ್ರಜನ್, ಜೋಹಾನ್, ಕೃಶಾಂಕ್, ದಿಲನ್, ಗಾನವಿ, ಧನುಶ್ರೀ, ನಿರಂಜನ, ಆದಿ ದೇವು, ಪರಿಣಿತ್, ಡೇನಿಶ್, ಆದಮ್, ಸುಹಾನ್, ಬಿಂದ್ಯಾ, ಇವರುಗಳು ಕುಮಿತೆ ಮತ್ತು ಕಟ್ಟಾ ವಿಭಾಗದಲ್ಲಿ ತಮ್ಮ ಪ್ರದರ್ಶನ ನೀಡಿ ಬಾಲಕರ ವಿಭಾಗದ ಕುಮಿತೆಯಲ್ಲಿ 4 ಚಿನ್ನ 6 ಬೆಳ್ಳಿ, 1 ಕಂಚು, ಕಟ್ಟ ವಿಭಾಗದಲ್ಲಿ 3 ಚಿನ್ನ 6 ಬೆಳ್ಳಿ, 4 ಕಂಚು, ಬಾಲಕೀಯರ ವಿಭಾಗದ ಕುಮಿತೆಯಲ್ಲಿ 3 ಚಿನ್ನ, 1 ಬೆಳ್ಳಿ, ಕಟ್ಟ ವಿಭಾಗದಲ್ಲಿ 3 ಬೆಳ್ಳಿ, 1 ಕಂಚು, ಪದಕಗಳನ್ನು ಪಡೆದುಕೊಂಡು ತಮ್ಮ ಶಾಲೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇವರಿಗೆ ಸೆನ್ಸಾಯಿ ಪಿ.ಆರ್…

Read More